ಅನುಶ್ರೀ

ಅನುಶ್ರೀ ಒಬ್ಬ ಭಾರತೀಯ ನಟಿ ಮತ್ತು ಕನ್ನಡ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕ್ರಮ ನಿರೂಪಕಿ ಆಗಿದ್ದಾರೆ .

ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ.

ಅನುಶ್ರೀ
ಅನುಶ್ರೀ
Born (1987-01-25) ೨೫ ಜನವರಿ ೧೯೮೭ (ವಯಸ್ಸು ೩೭)
Alma materಮಂಗಳೂರು ವಿಶ್ವವಿದ್ಯಾನಿಯ
Occupation(s)ನಿರೂಪಕಿ, ನಟಿ
Years active2006– ಪ್ರಸ್ತುತ
ಯುಟ್ಯೂಬ್ ಮಾಹಿತಿ
ಚಾನಲ್Anushree Anchor
ಸಕ್ರಿಯ ಅವಧಿ2019– ಪ್ರಸ್ತುತ
ಲೇಖನ
  • ಮನೋರಂಜನೆ
ಚಂದಾದಾರರು9 ಲಕ್ಷದ 58 ಸಾವಿರ
ಒಟ್ಟು ವೀಕ್ಷಿಸಿ120,635,430
ಚಂದಾದಾರರು ಮತ್ತು ಒಟ್ಟು ವೀಕ್ಷಣೆ ಎಣಿಕೆ 11ನೇ ಮಾರ್ಚ್ 2024ವರೆಗೆ ಟಿಲ್।


ಜನನ ಹಾಗೂ ಬಾಲ್ಯ

ಅನುಶ್ರೀ ಬೆಂಗಳೂರಿನಲ್ಲಿ ೨೫ ಜನವರಿ ೧೯೮೭ ರಲ್ಲಿ ತಂದೆ ಸಂಪತ್ ಮತ್ತು ತಾಯಿ ಶಶಿಕಲಾ ಇವರಿಗೆ ಜನಿಸಿದರು. ಇವರದು ತುಳು ಮಾತಾಡುವ ಕುಟುಂಬವಾಗಿತ್ತು. ಇವರ ತಮ್ಮ ಅಭಿಜಿತ್. ಬಾಲ್ಯದಲ್ಲೇ ಅನುಶ್ರೀ ಇವರ ತಂದೆ ತಾಯಿ ಬೇರೆಯಾಗಿದ್ದರು.

ಇವರು ೫ನೇ ತರಗತಿವರೆಗೆ ಬೆಂಗಳೂರಿನ ಸೈಂಟ್ ಥೋಮಸ್ [ಶಾಶ್ವತವಾಗಿ ಮಡಿದ ಕೊಂಡಿ] ಶಾಲೆಯಲ್ಲಿ ಕಲಿತಿದ್ದರು. ನಂತರ ಮಂಗಳೂರಿನ ನಾರಾಯಣ ಗುರು ಶಾಲೆಯಲ್ಲಿ ತಮ್ಮ ಶಾಲ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇವರಿಗೆ ಪದವಿ ಪೂರ್ವ ಶಿಕ್ಷಣ ಮುಗಿದ ತಕ್ಷಣ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.

ವೃತ್ತಿ

ಮಂಗಳೂರು ಮೂಲದ ಪ್ರಾದೇಶಿಕ ವಾಹಿನಿಯಾದ ನಮ್ಮ ಟಿವಿಯಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಫೋನ್-ಇನ್ ಮ್ಯೂಸಿಕ್ ಶೋನಲ್ಲಿ ನಿರೂಪಕಿಯಾಗಿ ಅನುಶ್ರೀ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ-ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡಿಮ್ಯಾಂಡಪ್ಪೊ ಡಿಮ್ಯಾಂಡು' ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಬಿಗ್ ಬಾಸ್ ಕನ್ನಡ- ಸೀಸನ್ 1' ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಅದರಲ್ಲಿ ಅವರು ೮೦ ದಿನಗಳ ಕಾಲ ಆ ಮನೆಯಲ್ಲಿದ್ದರು. ಇದಲ್ಲದೆ ಅವರು ಬೇರೆ ಕಾರ್ಯಕ್ರಮಗಳಾದ ಸುವರ್ಣ ಫಿಲ್ಮ್ ಅವಾರ್ಡ್ಸ್, ಫಿಲ್ಮ್ಫೇರ್ ಅವಾರ್ಡ್ಸ್, ಟಿವಿ 9 ಫಿಲ್ಮ್ ಅವಾರ್ಡ್ಸ್, ಜೀ ಮ್ಯೂಸಿಕ್ ಅವಾರ್ಡ್ಸ್, ಸೈಮಾ ಅವಾರ್ಡ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಕಾಮಿಡಿ ಕಿಲಾಡಿಗಳು ಮತ್ತು ಸರಿಗಮಪ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.

ಅವರು ಬೆಂಕಿಪಟ್ಟಣ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಮುರಳಿ ಮೀಟ್ಸ್ ಮೀರಾ ಎಂಬ ಚಲನಚಿತ್ರಕ್ಕೆ ತಮ್ಮ ಕಂಠದಾನ ಮಾಡಿದ್ದಾರೆ.

ಕೃಷಿ ಆಸಕ್ತಿ

ಅನುಶ್ರೀ ಅವರು ನಟ ದರ್ಶನ್ ತೂಗುದೀಪ ಅವರಂತೆ ಕೃಷಿ ಆಸಕ್ತಿ ಹೊಂದಿದ್ದಾರೆ. ಹಾಸನದ ಹತ್ತಿರ 30 ಎಕರೆ ಜಮೀನನ್ನು ಖರೀದಿಸಿದ್ದಾರೆ. ಆಧಿಕ ಲಾಭವಿರುವ ಅಡಿಕೆ ತೋಟ ಮಾಡಿದ್ದಾರೆ. 2020ರಲ್ಲಿ ಕ್ಯಾಸನೂರು ನಾಟಿ ಅಡಿಕೆ ತಳಿ ಸಸಿಗಳನ್ನು ತರಿಸಿ ತೋಟ ಕಟ್ಟಿದ್ದಾರೆ.

ದೂರದರ್ಶನ

ರಿಯಾಲಿಟೀ ಶೋಗಳು

ವರ್ಷ ಶೀರ್ಷಿಕೆ ಟಿಪ್ಪಣಿ ಚಾನೆಲ್
2005 ಟೆಲಿ ಅಂತ್ಯಾಕ್ಷರಿ ನಿರೂಪಕಿ ನಮ್ಮ ಟಿವಿ
2006 ಡಿಮಾಂಡ್‌ಪ್ಪೋ ಡಿಮಾಂಡು ನಿರೂಪಕಿ ಈ ಟಿವಿ ಕನ್ನಡ
2006 ಸ್ಟಾರ್ ಲೈವ್ ನಿರೂಪಕಿ ಸ್ಟಾರ್ ಸುವರ್ಣ
2007 ನಮಸ್ತೆ ಕಸ್ತೂರಿ ನಿರೂಪಕಿ ಕಸ್ತೂರಿ ಟಿವಿ
2007 ರೀಲ್ ಸುದ್ದಿ
2008 ಕುಣಿಯೋಣ ಬಾರಾ ಸ್ಪರ್ಧಿ ಝೀ ಕನ್ನಡ
2008 ಸಿನಿಮಾ ಪನೋರಮ
2011 ಸೂಪರ್ (ಸೀಸನ್ 1) ನಿರೂಪಕಿ ಈ ಟಿವಿ ಕನ್ನಡ
2012 ಸೂಪರ್ (ಸೀಸನ್ 2) ನಿರೂಪಕಿ ಈ ಟಿವಿ ಕನ್ನಡ
2013 ಬಿಗ್ ಬಾಸ್ ಕನ್ನಡ ಸೀಸನ್ 1 ಸ್ಪರ್ಧಿ ಈ ಟಿವಿ ಕನ್ನಡ
2014 ಚಿನ್ನದ ಬೇಟೆ ನಿರೂಪಕಿ ಕಸ್ತೂರಿ ಟಿವಿ
2015 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 10) ನಿರೂಪಕಿ ಝೀ ಕನ್ನಡ
2015 ಸ್ವಲ್ಪ ಆಡ್ಜೆಸ್ಟೆ ಮಾಡ್ಕೋಳ್ಳಿ ನಿರೂಪಕಿ ಸ್ಟಾರ್ ಸುವರ್ಣ
2016 ಸ ರಿ ಗ ಮ ಪ (ಸೀಸನ್ 11) ನಿರೂಪಕಿ ಝೀ ಕನ್ನಡ
2016 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 12) ನಿರೂಪಕಿ ಝೀ ಕನ್ನಡ
2016 ಡಾನ್ಸ್ ಕರ್ನಾಟಕ ಡಾನ್ಸ್ ನಿರೂಪಕಿ ಝೀ ಕನ್ನಡ
2017 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 13) ನಿರೂಪಕಿ ಝೀ ಕನ್ನಡ
2017 ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್ ನಿರೂಪಕಿ ಝೀ ಕನ್ನಡ
2017 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 14) ನಿರೂಪಕಿ ಝೀ ಕನ್ನಡ
2018 ಡಿಕೆಡಿ ಲಿಟ್ಲ್ ಮಾಸ್ಟರ್ ನಿರೂಪಕಿ ಝೀ ಕನ್ನಡ
2019 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 15) ನಿರೂಪಕಿ ಝೀ ಕನ್ನಡ
2019 ಡಾನ್ಸ್ ಕರ್ನಾಟಕ ಡಾನ್ಸ್ ಫ್ಯಾಮಿಲಿ ವಾರ್ (ಸೀಸನ್ 2) ನಿರೂಪಕಿ ಝೀ ಕನ್ನಡ
2020 ಸ ರಿ ಗ ಮ ಪ (ಸೀಸನ್ 17) ನಿರೂಪಕಿ ಝೀ ಕನ್ನಡ
2021 ಡಾನ್ಸ್ ಕರ್ನಾಟಕ ಡಾನ್ಸ್ ನಿರೂಪಕಿ ಝೀ ಕನ್ನಡ
2021 ಸ ರಿ ಗ ಮ ಪ ಲಿಟ್ಲ್ ಚಾಂಪಿಯನ್‌ಶಿಪ್ (ಸೀಸನ್ 18) ನಿರೂಪಕಿ ಝೀ ಕನ್ನಡ
2022 ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ನಿರೂಪಕಿ ಝೀ ಕನ್ನಡ
2022 ಸ ರಿ ಗ ಮ ಪ ಲಿಟ್ಲ್ ಚಾಂಪ್ಸ್ (ಸೀಸನ್ 19) ನಿರೂಪಕಿ ಝೀ ಕನ್ನಡ
2023 ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 7 ನಿರೂಪಕಿ ಝೀ ಕನ್ನಡ


ಚಲನಚಿತ್ರಗಳ ಪಟ್ಟಿ

ವರ್ಷ ಶಿರ್ಷಿಕೆ ಪಾತ್ರ ಟಿಪ್ಪಣಿ Ref.
2011 ಭೂಮಿತಾಯಿ ಗೌರಿ
2011 ಮುರಳೀ ಮೀಟ್ಸ್ ಮೀರಾ ಮೀರಾ ಕಂಠದಾನ
2012 ಬೆಳ್ಳಿ ಕಿರಣ ಅನನ್ಯ
2014 ಟ್ಯೂಬ್‌ಲೈಟ್ ಸಂಧ್ಯಾ
2015 ಬೆಂಕಿಪಟ್ನಾ ಪಾವನಿ
2015 ರಿಂಗ್ ಮಾಸ್ಟರ್(2015) ಮಧು
2015 ಉತ್ತಮ ವಿಲನ್ ತಮಿಳು ಸಿನಿಮಾ
ವಿಶೇಷ ಪಾತ್ರ
2016 ಮಾದ ಮತ್ತು ಮಾನಸಿ ಐಟಂ ಡಾನ್ಸರ್ ವಿಶೇಷ ಪಾತ್ರ
2017 ಉಪ್ಪು ಹುಳಿ ಖಾರ ಜಾಹ್ನವಿ

ಪ್ರಶಸ್ತಿಗಳು

ವರ್ಷ ಪ್ರಶಸ್ತಿಗಳು ವರ್ಗ ಫಲಿತಾಂಶ ಇತರೆ ಟಿಪ್ಪಣಿಗಳು
2011 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಉತ್ತಮ ಕಂಠದಾನ ಕಲಾವಿದೆ ಗೆಲುವು ಮುರಳಿ ಮೀಟ್ಸ್ ಮೀರಾ ಸಿನಿಮಾಕ್ಕಾಗಿ
2015 ಝೀ ಕುಟುಂಬ ಅವಾರ್ಡ್ಸ್ ಪ್ರಸಿದ್ದ ನಿರೂಪಕಿ ಗೆಲುವು
2015 NAK ಮೀಡಿಯಾ ಅಚೀವ್‌ಮೆಂಟ್ ಅವಾರ್ಡ್ ಉತ್ತಮ ಚೊಚ್ಚಲ ನಟಿ ಗೆಲುವು ಬೆಂಕಿ ಪಟ್ಟಣ ಸಿನಿಮಾಕ್ಕಾಗಿ
2016 ಝೀ ಕುಟುಂಬ ಅವಾರ್ಡ್ಸ್ 2016 ಉತ್ತಮ ನಿರೂಪಕಿ ಗೆಲುವು
2017 ಝೀ ಕುಟುಂಬ ಅವಾರ್ಡ್ಸ್ 2017 ಪ್ರಸಿದ್ದ ನಿರೂಪಕಿ ಗೆಲುವು
2018 ಕೆಂಪೆಗೌಡ ಪ್ರಶಸ್ತಿ ಗೆಲುವು
2018 ಝೀ ಕುಟುಂಬ ಅವಾರ್ಡ್ಸ್ (2018) ನೆಚ್ಚಿನ ನಿರೂಪಕಿ ಗೆಲುವು
2019 ಝೀ ಕುಟುಂಬ ಅವಾರ್ಡ್ಸ್ (2019) ನೆಚ್ಚಿನ ನಿರೂಪಕಿ ಗೆಲುವು
2020 ಝೀ ಕುಟುಂಬ ಅವಾರ್ಡ್ಸ್ (2020) ನೆಚ್ಚಿನ ನಿರೂಪಕಿ ಗೆಲುವು
2021 ಝೀ ಕುಟುಂಬ ಅವಾರ್ಡ್ಸ್ (2021) ನೆಚ್ಚಿನ ನಿರೂಪಕಿ ಗೆಲುವು
2022 ಝೀ ಕುಟುಂಬ ಅವಾರ್ಡ್ಸ್ (2022) ನೆಚ್ಚಿನ ನಿರೂಪಕಿ ಗೆಲುವು


ಉಲ್ಲೇಖಗಳು

Tags:

ಅನುಶ್ರೀ ಜನನ ಹಾಗೂ ಬಾಲ್ಯಅನುಶ್ರೀ ವೃತ್ತಿಅನುಶ್ರೀ ಕೃಷಿ ಆಸಕ್ತಿಅನುಶ್ರೀ ದೂರದರ್ಶನಅನುಶ್ರೀ ಚಲನಚಿತ್ರಗಳ ಪಟ್ಟಿಅನುಶ್ರೀ ಪ್ರಶಸ್ತಿಗಳುಅನುಶ್ರೀ ಉಲ್ಲೇಖಗಳುಅನುಶ್ರೀಕನ್ನಡಕರ್ನಾಟಕಚಲನಚಿತ್ರನಟಭಾರತೀಯ

🔥 Trending searches on Wiki ಕನ್ನಡ:

ಕರ್ನಾಟಕದ ಇತಿಹಾಸಸ್ನಾಯುಆಟಕೃಷ್ಣದೇವರಾಯಸವರ್ಣದೀರ್ಘ ಸಂಧಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಬಿಲ್ಹಣತೆರಿಗೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಏಡ್ಸ್ ರೋಗರುಕ್ಮಾಬಾಯಿವೇಗಕೃಷಿ ಸಸ್ಯಶಾಸ್ತ್ರವಚನ ಸಾಹಿತ್ಯಭಾರತದ ರಾಷ್ಟ್ರಪತಿಸಮಾಜಶಾಸ್ತ್ರಗಣರಾಜ್ಯಭಾರತೀಯ ರಿಸರ್ವ್ ಬ್ಯಾಂಕ್ರೈತಮೋಂಬತ್ತಿಭಾರತದ ರಾಷ್ಟ್ರಗೀತೆಮಲೈ ಮಹದೇಶ್ವರ ಬೆಟ್ಟರನ್ನವಡ್ಡಾರಾಧನೆಕುರುಬಹೆಚ್.ಡಿ.ಕುಮಾರಸ್ವಾಮಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪವಾಣಿಜ್ಯ ಪತ್ರತುಕಾರಾಮ್ಸಾಮಾಜಿಕ ಸಮಸ್ಯೆಗಳುತ್ಯಾಜ್ಯ ನಿರ್ವಹಣೆಭಾರತೀಯ ರೈಲ್ವೆಬಿಪಾಶಾ ಬಸುಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆವೇದನೈಸರ್ಗಿಕ ಸಂಪನ್ಮೂಲಭಾರತೀಯ ಸಂವಿಧಾನದ ತಿದ್ದುಪಡಿಮೂಲವ್ಯಾಧಿಬಿ. ಆರ್. ಅಂಬೇಡ್ಕರ್ಶನಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಬ್ರಿಟಿಷ್ ಆಡಳಿತದ ಇತಿಹಾಸಪಿತ್ತಕೋಶಉಪನಯನಶಬ್ದಮಣಿದರ್ಪಣವೇಗೋತ್ಕರ್ಷಮುಹಮ್ಮದ್ಕಂಪ್ಯೂಟರ್ಸಂತಾನೋತ್ಪತ್ತಿಯ ವ್ಯವಸ್ಥೆರಾಜಧಾನಿಗಳ ಪಟ್ಟಿಭಾರತೀಯ ಭಾಷೆಗಳುಬ್ಯಾಡ್ಮಿಂಟನ್‌ತತ್ಪುರುಷ ಸಮಾಸಮುಟ್ಟುಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮಾರುಕಟ್ಟೆಸಸ್ಯಇಸ್ಲಾಂ ಧರ್ಮಶಾಲಿವಾಹನ ಶಕೆರಾಷ್ಟ್ರೀಯ ಸೇವಾ ಯೋಜನೆಮೂಲಭೂತ ಕರ್ತವ್ಯಗಳುಯು.ಆರ್.ಅನಂತಮೂರ್ತಿಮಾನವ ಹಕ್ಕುಗಳುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಗುಪ್ತ ಸಾಮ್ರಾಜ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಶಾತವಾಹನರುಹಾಗಲಕಾಯಿಜೋಗಿ (ಚಲನಚಿತ್ರ)ವೃಕ್ಷಗಳ ಪಟ್ಟೆಮೈಸೂರುಧರ್ಮಸೊಳ್ಳೆಮಾನವನ ನರವ್ಯೂಹ🡆 More