ಕುರುಬ

ಧರ್ಮ  : ಹಿಂದೂಧರ್ಮ

ಭಾಷೆಗಳು  : ಕನ್ನಡ ಮರಾಠಿ ತಮಿಳು

ಕೂಂಕಣಿ ತೆಲಗು

ಪೋಷಕರು  : ಕನಕದಾಸರು,

ಕಾಳಿದಾಸರು, ಸಂಗೋಳಿರಾಯನ.

ಅನೇಕರು

ಕುರುಬ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳು

೧ ಕರ್ನಾಟಕ

೨ ಆಂದ್ರ ಪ್ರದೇಶ

೩ ತೆಲಂಗಾಣ

೪ ತಮಿಳುನಾಡು

೫ ಮಹಾರಾಷ್ಟ್ರ ಅನೇಕ ಕಡೆ..

ಕುರುಬ ಜನಾಂಗ ಪುರಾತನವಾದ ಜನಾಂಗ. ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿಯೂ ಸಹ ಕುರು ವಂಶ ಮತ್ತು ಯದುವಂಶಗಳ ಪ್ರಸ್ಥ್ತಾವನೆಯಾಗಿದೆ.

ಹಾಲುಮತದ ಮುದ್ದುಗೊಂಡ ಮತ್ತು ಮುದ್ದವ್ವ ದಂಪತಿಗಳ ಏಳು ಜನ ಮಕ್ಕಳಲ್ಲಿ ಕೊನೆಯವನು ಉಂಡಾಡು ಪದ್ಮಗೊಂಡ. ಇವನು ಕುರುಬರ ಮೂಲಪುರುಷ. ಇವನ ಮೊದಲ ಹೆಂಡತಿ ಜಿಂಕಾದೇವಿಯಲ್ಲಿ ಜಗ್ಗಲಿ ಮುತ್ತಯ್ಯ ಸಹಾಯ ಮುತ್ತಯ್ಯ, ಸೋಹ ಮುತ್ತಯ್ಯ, ಶಾಂತಿಮಯ ಮುತ್ತಯ್ಯ ಮತ್ತು ದೇವರಾಜ ಎಂಬ ಐದು ಮಕ್ಕಳು ಜನಿಸುತ್ತಾರೆ. ಇವರಲ್ಲಿ ನಾಲ್ಕನೇ ಮಗನಾದ ಶಾಂತಿಮಯ ಮುತ್ತಯ್ಯನ ಮಗನೇ ರೇವಣಸಿದ್ಧ.

1. ಇವನು ಪ್ರಾಚೀನ ಕಾಲದಿಂದಲೂ ಕುರುಬ ಜನಾಂಗದಲ್ಲಿ ಬೆಳೆದು ಬಂದಿರುವುದರಿಂದ ಕೊಲ್ಲಿಪಾಕಿ ಕ್ರಿ.ಶ.1110 ರಲ್ಲಿ ಜನಿಸಿ ಕ್ರಿ.ಶ.1217ರಲ್ಲಿ ನಿಧನರಾದರೆಂದು ತಿಳಿದುಬರುತ್ತದೆ.

2. ಈತನನ್ನು ಕುರಿತು ಮೊಟ್ಟಮೊದಲ ಬಾರಿಗೆ ಕಾವ್ಯವನ್ನು ಬರೆದಂತವನು ಮಹಾಕವಿ ಹರಿಹರ. ಈತನು ತನ್ನ ರೇವಣಸಿದ್ಧೇಶ್ವರ ರಗಳೆಯಲ್ಲಿ ರೇವಣಸಿದ್ಧರ ಜನಪದ ಪ್ರಸಂಗವನ್ನು ಪೌರಾಣಿಕ ಹಿನ್ನೆಲೆಯಲ್ಲಿಟ್ಟುಕೊಂಡು ಅಭಿವ್ಯಕ್ತಪಡಿಸಿದ್ದಾನೆ.


ಪೂರ್ವ ಇತಿಹಾಸ

ಕುರುಬಗೌಡ/ಹಾಲುಮತ ಗೌಡ ಜನಾಂಗ ತುಂಬಾ ಪುರಾತನವಾದ ಜನಾಂಗ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲ್ಲಿದ್ದ ಗೆಡ್ಡೆ, ಗೆಣಸು ತಿನ್ನುತಿದ್ದ. ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವುದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ಒಕ್ಕಲುತನ ಮಾಡುವನು ಒಕ್ಕಲಿಗನಾದ, ಬೇಟೆಯಾಡುವವನು ಬೇಡನಾದ, ಮಡಿಕೆ ಮಾಡುವವನು ಕುಂಬಾರನಾದ, ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನ್ನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು.

ಕುರುಬರಿಗೆ ಅತ್ಯಂತ ಪ್ರಾಚೀನವಾದ ಚರಿತ್ರೆಯಿದೆ.

ಸುದೀರ್ಘ ಚರಿತ್ರೆಯಲ್ಲಿ ಕುರುಬ ಮಹಿಳೆ ಕಾಣದಿರುವುದು ವಿಷಾದದ ಸಂಗತಿ. ಭಾರತದ ದಕ್ಷಿಣಾಪಥದಲ್ಲಿ ದೊರೆತ ಗೋರಿ ಹಾಗೂ ಇತರೆ ಅವಶೇಷಗಳ ಆಧಾರದ ಮೇಲೆ ವಂಶಶಾಸ್ತ್ರಜ್ಞರಾದ ಹ್ಯಾಡೋನ್ ಅವರು ಕುರುಬರ ಚರಿತ್ರೆಯನ್ನು ಕ್ರಿ.ಪೂ. 4000-5000 ದಷ್ಟು ಹಿಂದಕ್ಕೆ ಒಯ್ತುತ್ತಾರೆ. ಮಧ್ಯ ಏಶಿಯಾದಿಂದ ಹೊರಟು ತಮ್ಮ ಬದುಕಿಗೆ ನೆಲೆಗಳನ್ನು ಹುಡುಕುತ್ತ ಇವರು ಬೋಲನ್ ಕಣಿವೆ ಮೂಲಕ ಭಾರತವನ್ನು ಪ್ರವೇಶಿಸಿ ಇಲ್ಲಿ ತಮ್ಮ ಸಂಸ್ಕೃತಿಯನ್ನು ರೂಪಿಸಿಕೊಂಡಿದ್ದಾರೆ.

ಕುರುಬರನ್ನು ಹಟ್ಟಿಕಾರರೆಂದೂ ಕರೆಯುತ್ತಾರೆ. ಈ ಹಟ್ಟಿಕಾರರ ಉಲ್ಲೇಖ ರುದ್ರಾಧ್ಯಾಯದಲ್ಲಿ ಬರುತ್ತದೆಯಾದ್ದರಿಂದ ಕ್ರಿ.ಶ.ಪೂ 1200-2000 ವೇಳೆಗೆ ಕುರುಬ ಸಮಾಜ ಸುವಿಖ್ಯಾತವಾಗಿತ್ತೆಂದು ಸಂಬಾ ಜೋಶೀ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕ್ರಿ.ಶ. ಮೂರನೆಯ ತಮಾನದಷ್ಟೊತ್ತಿಗೆ ಕುರುಬರು ಪ್ರಭುಗಳಾಗಿ ಅಧಿಕಾರದ ಗದ್ದುಗೆ ಏರಿದ್ದರು ಎಂದು ಸರ್ ಡಬ್ಲೂ ಇಲಿಯಟ್ ಅಭಿಪ್ರಾಯಪಡುತ್ತಾರೆ. ದಕ್ಷಿಣ ಭಾರತದಲ್ಲಿ ದೊರೆಯುವ ಅತೀ ಪ್ರಾಚೀನ ನಾಣ್ಯಗಳೆಂದರೆ ಕುರುಬರದೇ ಎನ್ನುತ್ತಾರೆ ಇಲಿಯಟ್.

ಕುರುಬರು ಮೊದಲು ಸ್ಥಾಪನೆ ಮಾಡಿದ ಪಟ್ಟಣದ ಹೆಸರು ಪುಲಾಲ. ಈ ರಾಜ್ಯಕ್ಕೆ ಕುರುಂಬರ ನಾಡು ಎಂದು ಕರೆಯುತ್ತಿದ್ದರು. ಕೇರಳದ ಮಲಬಾರ ಜಿಲ್ಲೆಯಲ್ಲಿ ಈ ಹೆಸರಿನ ಪ್ರದೇಶ ಇಂದಿಗೂ ದೊರೆಯುತ್ತದೆ. ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಹಕ್ಕಬುಕ್ಕರು, ಕದಂಬರು, ಪಲ್ಲವರು, ದೇವಗಿರಿಯ ಯಾದವರು, ಇಂದೂರಿನ ಹೋಳ್ಕರ್, ಬಡೋದೆಯ ಗಾಯಕವಾಡರು, ರಾಷ್ಟ್ರಕೂಟ ದೊರೆಗಳು ಇವರೆಲ್ಲ ಕುರುಬರೇ ಎಂದು ಚರಿತ್ರೆಕಾರರು ನಿರ್ಣಯಿಸಿದ್ದಾರೆ. ಹೀಗೆ ಕುರುಬರ ಚರಿತ್ರೆಯೇನೋ ಬಹು ಪ್ರಾಚೀನವಾಗಿದೆ.

ಇತಿಹಾಸ

ಕುರಿ ಹಿಕ್ಕೆಯಲ್ಲಿಯೇ ಲಿಂಗವನ್ನು ಕಂಡು ಭಗವಂತನನ್ನು ಮರುಳು ಮಾಡಿ ಕುರಿ ಹಟ್ಟಿಯಲ್ಲಿ ಬೀರಪ್ಪ, ಮಾಳಿಂಗರಾಯನನ್ನು ಸಾಕ್ಷತ್ಕಾರ ಮಾಡಿಕೊಂಡು ಮುಗ್ಧ ಭಕ್ತಿ ಪರಂಪರೆಗೆ ಕುರುಬರು ಸಾಕ್ಷಿಯಾಗಿದ್ದಾರೆ.

ಪರಿಶ್ರಮಿಕರಾದ ಕುರಿ ಕಾಯುವ ಕುರುಬರು ಸದಾ ನಿಸರ್ಗದಲ್ಲಿದ್ದು ಮಳೆ ನಕ್ಷತ್ರ, ಮಳೆ-ಬೆಳೆ, ಬರಗಾಲ, ರಾಜನೀತಿ ಮಹತ್ವದ ದಿನಮಾನಗಳನ್ನು ತಮ್ಮ ರಟ್ಟುಮತ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ

ವಿಜಯನಗರ ಸಾಮ್ರಾಜ್ಯದ ಸ್ಥಾಪನೆ:

ಹಕ್ಕ ಬುಕ್ಕರಾಯರು ಕುರುಬಜನಾಂಗದವರು ಮೊದಲಿಗೆ ಹಕ್ಕ ಬುಕ್ಕರಾಯರು ವಾರಂಗಲ್ ರಾಜರ ಸೇನಾದಿಪತಿಯಾಗಿದ್ದು ಮಲ್ಲಿಕಾಪ್ರ್ನುವಾರಂಗಲ್ ಮೇಲೆದಂಡೆತ್ತಿ(ಯುದ್ದಕ್ಕೆ) ಬಂದಾಗ ಯುದ್ದದಲ್ಲಿ ಸೋತು ಸೆರೆಯಾಳಾಗಿ (ರಾಜಾಧಾನಿ ದೆಹಲಿ) ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರೆ ಪ್ರಾಣ ಭಿಕ್ಷೆ ದೊರೆಯುತ್ತದೆ ಎಂಬ ಬೆದರಿಕೆಗೆ ಮಣಿಯದೆ ಮಲ್ಲಿಕಾಪ್ರ್ನ ಸಾಮ್ರಾಜ್ಯದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರುಗಿದ ಹಕ್ಕರಾಯರು ದೆಹಲಿಯಿಂದ ತಪ್ಪ್ಪಿಸಿಕೊಂಡು ಬಂದು ತಮ್ಮ ಅಳಿದುಳಿದ ಸೈನ್ಯವನ್ನು ಅಪಾರ ಸಂಖ್ಯೆಯಲ್ಲಿದ್ದ ಕುರುಬಜನಾಂಗವನ್ನು ಒಟ್ಟುಗೂಡಿಸಿ ವಿದ್ಯಾರಣ್ಯರೆಂಬ ಸಾದು ಮಹಾತ್ಮರ ಮಾರ್ಗದರ್ಶನದಂತೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದರು. ಈ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಕರ್ನಾಟಕದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾಗಿದೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕುರುಬಜನಾಂಗದವರು ಕಡೆಗಣಿಸಲ್ಪಟ್ಟರು ಆಲ್ಲದೆ ತುಂಬಾ ಹಿಂದುಳಿದರು, ಹೊಸ ರಾಜಕೀಯ ಬೆಳವಣಿಗೆಗಳು ಅವರ ಅರಿವಿಗೆ ಬರುವುದು ನಿಧಾನವಾಯಿತು, ತದ ನಂತರ ಬ್ರಿಟಿಷರ ವಿರುದ್ದ ಹೋರಾಡಿದ ಹೋಳ್ಕರ್ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣನಂತಹ ದೇಶಪ್ರೇಮಿಗಳ ಹೋರಾಟ ಜನರನ್ನು ಸಂಘಟಿಸುವ ಶಕ್ತಿ ಮತ್ತು ಯುಕ್ತಿ ಯನ್ನು ಕಂಡ ಬ್ರಿಟಿಷ್ ಸರ್ಕಾರ ಕುರುಬರನ್ನು ರಾಜ್ಯಾಡಳಿತದಿಂದ ದೂರವಿಟ್ಟಿತು. ಉತ್ತರ ಕರ್ನಾಟಕದ ಮುಸಲ್ಮಾನ್ ದೊರೆಗಳು ತಮ್ಮ ವಿಜಯನಗರ ಸಾಮ್ರಾಜ್ಯದ ಮೇಲಿನ ದ್ವೇಷದಿಂದ ಕುರುಬರನ್ನು ಹಿಂಸಿಸಲು ಪ್ರಾರಂಭಿಸಿದರು ಇದರ ಪರಿಣಾಮ ನೂರರು ವರ್ಷಗಳಿಂದ ನೆಲೆಸಿದ ನಾಡನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದಕ್ಕಿಂತ ಹೆಚ್ಚಾಗಿ ತಮ್ಮ ಪ್ರಾಮಾಣಿಕತೆ ಪರಾಕ್ರಮ ಆಡಳಿತ ನೈಪುಣ್ಯತೆಗಳಿಂದ ಇತಿಹಾಸದಲ್ಲಿ ದೊಡ್ಡ ದೊಡ್ಡ ರಾಜ್ಯಗಳನ್ನೇ ಸ್ಥಾಪಿಸಿ ಮೆರೆದ ಈ ನಮ್ಮ ಜನಾಂಗದ ರಾಜರು, ಚಕ್ರವರ್ತಿಗಳು ಸಹ ತಮ್ಮ ಕೀರ್ತಿ ವೈಭವಗಳ ಪ್ರಚಾರ ಪ್ರಸಿದ್ದಿಗಳಿಗಾಗಿ ಮೇಲು ವರ್ಗದ ಜನರಿಗೆ ತಮ್ಮ ಆಸ್ಥಾನದಲ್ಲಿ ಮಹತ್ತರವಾದ ಸ್ಥಾನಮಾನಗಳನ್ನು ನೀಡಿ ಗೌರವಿಸಿದರೇ ವಿನಃ ತಮ್ಮ ಸಮೂದಾಯದ ಅಭಿವೃದ್ದಿಗಾಗಿ, ವಿಕಾಸಕ್ಕಾಗಿ ಯಾವುದೇ ಮುಖ್ಯ ಯೋಜನೆಗಳನ್ನು ರೂಪಿಸಲಿಲ್ಲ. ತಾವು ದೈವಸಂಜಾತರೆಂದು, ವೀರಪುತ್ರರೆಂದು, ದಾನಚಿಂತಾಮಣಿಗಳೆಂದು ಹೆಸರುಗಳಿಸುವ ನಿರಂತರ ಪ್ರಯತ್ನದಲ್ಲಿಯೇ ಅವರ ಆಯುಷ್ಯ ಮುಗಿದು ಹೋಯಿತು. ಅವರ ಆಸ್ಥಾನಗಳಲ್ಲಿದ್ದ ವಿದ್ವಾಂಸರು ಆ ರಾಜರ, ಚಕ್ರವರ್ತಿಗಳ ಮೂಲವನ್ನು, ವೈಷಮ್ಯವನ್ನು, ವೈವಿಧ್ಯತೆಯನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಜನಾಂಗದ ಜ್ಞಾನ, ಸಮಾಜ ವಿಜ್ಞಾನಗಳ ದೃಷ್ಠಿಯಿಂದಲಾದರೂ ಅದರೆಡೆಗೆ ಗಮನ ಹರಿಸದೆ ಈ ಜನಾಂಗದ ಪುರಾಣ, ಇತಿಹಾಸ, ಜ್ಞಾನ, ವಿಜ್ಞಾನಗಳಲ್ಲಿಯೂ ಅರಿವಿಗೆಬಾರದಂತೆ ಮರೆವಿನ ಅವಜ್ಞೆಯ ಅನಾದರದ ಕಮರಿಗಳಲ್ಲಿ ಹೂತು ಹೋದರು. ಕರುಬ ಜನಾಂಗದವರು ತಮ್ಮ

ಸಂಸ್ಕ್ರತಿ ಹಾಗೂ ಸಂಪ್ರದಾಯಗಳಿಗೆ ಪರಕೀಯರಿಂದ ದಕ್ಕೆಯಾದಾಗ ತಮ್ಮ ಕ ುಲ,ಗೋತ್ರ, ಮತ, ಬಿಟ್ಟುಕೊಡದೆ ತಾವು ನೂರಾರು ವರ್ಷಗಳಿಂದ ನೆಲೆಸಿದ್ದ ನಾಡನ್ನು ತೊರೆದು ಬಂದವರು ಇಂತಹ ಸ್ವಾಭಿಮಾನಿ “ಕುರುಬ” ಜನಾಂಗವು ಇಂದು ಭಾರತದ ಹಲವಾರು ಕಡೆ ಹರಿದು ಹಂಚಿಹೋಗಿದೆ.

ಹೆಸರುಗಳು

ಕುರುಬ, ಕುರುಬ ಗೌಡ, ಹೆಗ್ಗಡೆಗಳು

ಸಂಪ್ರದಾಯ

  • ಕೆರೆಸಂತೆ ಶ್ರೀ ಲಕ್ಕಮ್ಮ ದೇವಿ ದೊಡ್ಡ ಜಾತ್ರೆ. ಕೆರೆಸಂತೆ ಕಡೂರ್(ತಾ)
  • ಶ್ರೀರೇವಣ ಸಿದ್ಡೇಶ್ವರ ಜಾತ್ರೆ ಹೊಳೆ ಸೇವೆ
  • ಶ್ರೀ ಮದ್ ಶಾಂತ ಸಿಂಹಾಸನ ಅಣತಿ ಮಠದ ರೇಣುಕ ಜಯಂತಿ, ಚನ್ನರಾಯಪಟ್ಟಣ ತಾ ಹಾಸನ ಜಿಲ್ಲೆ
  • ಮೈಲಾರ ಜಾತ್ರೆ
  • ಮಾದೇಶ್ವರ ಜಾತ್ರೆ
  • ಬೀರೆದೇವರ ಜಾತ್ರೆ
  • ಕನಕದಾಸ ಜಯಂತಿ
  • ಕಾರ್ಣಿಕೋತ್ಸವ
  • ಮಾರಿ ಹಬ್ಬ
  • ಬಿಳಿಗಿರಿ ರಂಗನಾಥ ಸ್ವಾಮಿ ಜಾತ್ರೆ
  • ದೊಡ್ಡ ದ್ಯವರ ಜಾತ್ರೆ
  • ತೆಂಗಿನಕಾಯಿ ಪವಾಡ

ಕುರುಬ ಉಪ ಜಾತಿಗಳು

ಕುರುಬ ಇತಿಹಾಸ ಕತೆಗಳು

  • ಹಾಲುಮತ ಕುರುಬ ಪುರಾಣ
  • ಮಾದೇಶ್ವರ ಪುರಾಣ
  • ಕಾಟಮರಾಜುವಿನ ಕಥೆ

ಕುರುಬ ಜನಪದ ಕಲೆಗಳು

ಕುರುಬ ಧರ್ಮಕ್ಷೇತ್ರಗಳು

  • ಶ್ರೀ ರೇಣುಕಾಚಾರ್ಯರ ಮಹಾ ಸಂಸ್ಥಾನ, ಸರವೂರು, ಬಿಜಾಪುರ ಜಿಲ್ಲೆ.
  • ಮಾಳಿಂಗರಾಯನ ಮುಂಡಾಸ (ಶೀವ ಪಾರ್ವತಿಯಿಂದ) ಮಹೋತ್ಸವ ಹುಲಿಜಂತಿ, ಮಹಾರಾಷ್ಟ್ರ.
  • ಶ್ರೀ ಗುರು ಗೌರಿ ಸೋಮಲಿಂಗೇಶ್ವರ ಮಾಯಿ ಮಖಣಾಪುರ.
  • ಶ್ರೀ ಯೋಗಿ ಅಮೋಘಸಿದ್ಧೇಶ್ವರ, ಮಮ್ಮೇಟ ಗುಡ್ಡ, ಜಾಲಗೇರಿ, ವಿಜಯಪುರ ಜಿಲ್ಲಾ. apur.

ಶ್ರೀ ಹಾಲ ಮರಡಿಸಿದ್ದೇಶ್ವರ ದೇವಸ್ಥಾನ ಹೊನವಾಡ

  • ಶ್ರೀ ರೇಣುಕಾಚಾರ್ಯರ ಮಹಾ ಸಂಸ್ಥಾನ, ಅಣತಿ, ಹಾಸನ ಜಿಲ್ಲೆ
  • ಶ್ರೀ ಬೀರಲಿಂಗೇಶ್ವರ ಸ್ವಾಮಿ {ಮಜ್ಜಗೆ ಹಳದ ಅಯ್ಯ}ಕಕ್ಕೆಹಳ್ಳಿ, ಚನ್ನರಾಯಪಟ್ಟಣ ತಾ ಹಾಸನ ಜಿಲ್ಲೆ.
  • ಶ್ರೀ ಲಕ್ಷೀದೇವಿ ದೇವಸ್ಥಾನ ಕೆರೆಸಂತೆ ಕಡೂರು ತಾ ಚಿಕ್ಕಮಗಳೂರು ಜಿ
  • ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟ
  • ಬಿಳಿಗಿರಿ ರಂಗನಾಥ ಸ್ವಾಮಿ ಬೆಳಕು ಮಾ ದಶಮಿಯ ಬೆಟ್ಟ
  • ಮೈಲಾರ
  • ಕಾಗಿನೆಲೆ
  • ಹಂಪಿ
  • ಶ್ರೀ ಹಿರೇಬೀರಲಿಂಗೇಶ್ವರ ಸ್ವಾಮಿ ದೇವಾಲಯ, ದೇವರ ಆದಿಹಳ್ಳಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ,
  • ಶ್ರಿ ರಂಗನಾಥ
  • [[ಗುಡ್ಡದ ಮಲ್ಲಯ್ಯ, ಹಲ್ಹಹಾರ್ವಿ ಗ್ರಾಮ ಮತ್ತು ಮಂಡಲೆ, ಆಲೂರು ತಾಲುಕು, ಕರ್ನುಲ್ ಜಿಲ್ಲೆ, ಆಂದ್ರಾಪ್ರದೇಶ್ (ಗಡಿನಾಡು)]]
  • ಬಲ್ಲೂರಪ್ಪ, ಹಲ್ಹಹಾರ್ವಿ ಗ್ರಾಮ ಮತ್ತು ಮಂಡಲೆ, ಆಲೂರು ತಾಲುಕು, ಕರ್ನುಲ್ ಜಿಲ್ಲೆ, ಆಂದ್ರಾಪ್ರದೇಶ್ (ಗಡಿನಾಡು)
  • ಶ್ರೀ ಸೋಮೇಶ್ವರ ದೇವಸ್ಥಾನ ಕಡೂರು
  • ಚಿಂಚಲ್ಲಿ ಮಾಯವ್ವ
  • ಶ್ರೀ ಹಳ್ಳದ ಬೀರಲೀಂಗೇಶ್ವರ ದೇವಾಸ್ಥನ, ಶಂಕರನಹಳ್ಳಿ, ಜಾವಗಲ್
  • ಶ್ರೀ ಬೀರಲಿಂಗೇಶ್ವರ, ಲಕ್ಕಿಹಳ್ಳಿ, ಮುಗಲಿಕಟ್ಟೆ, ಕಡೂರು.
  • ಬೂದಿ ಮುಚ್ಚಿದ ಕೆಂಡ ಶ್ರೀ ಬೀರಲಿಂಗೇಶ್ವರ ಸ್ವಾಮಿ ಬಂದೂರು , ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು,ಹಾಸನ ಜಿಲ್ಲೆ.

ಕುರುಬ ಇತಿಹಾಸ ಪುರುಷರು

ಶ್ರೀ ಗುರು ರೇವಣಸಿದ್ದೇಶ್ವರರು

  • ಜಗದ್ಗುರು ಶಾಂತ ಮುತ್ತಯ್ಯ (ಶಾಂತಿಮಯ್ಯ)ಒಡೆಯರ್
  • ಮಹಾಕವಿ ಕಾಳಿದಾಸ
  • ದಾಸ ಶ್ರೇಷ್ಟ ಕನಕದಾಸ
  • ಕ್ರಾಂತಿ ವೀರಸಂಗೊಳ್ಳಿ ರಾಯಣ್ಣ
  • ಮಹಾತ್ಮಾ ಬೋಮ್ಮಗೊಂಡೇಶ್ವರ
  • ವೀರಮಾತೆ ಅಹಿಲ್ಯಾಬಾಯಿ
  • ಮಾಳಿಂಗರಾಯ
  • ಯಲ್ಲಲಿಂಗ ಮಹಾರಾಜ
  • ಇಟಗಿ ಭೀಮಾಂಬಿಕ
  • ಅಮೋಘ
  • ಕುರುಬ ಗೊಲ್ಲಾಳ
  • ಸಜ್ಜಲಗುಡ್ಡ ಶರಣಮ್ಮ
  • ಲಡ್ಡುಮುತ
  • ಳುಮಾಮ
  • ಜೇ ಗೌಡ

ಬಾಹ್ಯ ಸಂಪರ್ಕಗಳು

Tags:

ಕುರುಬ ಪೂರ್ವ ಇತಿಹಾಸಕುರುಬ ಇತಿಹಾಸಕುರುಬ ಹೆಸರುಗಳುಕುರುಬ ಸಂಪ್ರದಾಯಕುರುಬ ಉಪ ಜಾತಿಗಳುಕುರುಬ ಇತಿಹಾಸ ಕತೆಗಳುಕುರುಬ ಜನಪದ ಕಲೆಗಳುಕುರುಬ ಧರ್ಮಕ್ಷೇತ್ರಗಳುಕುರುಬ ಇತಿಹಾಸ ಪುರುಷರುಕುರುಬ ಬಾಹ್ಯ ಸಂಪರ್ಕಗಳುಕುರುಬ

🔥 Trending searches on Wiki ಕನ್ನಡ:

ಛತ್ರಪತಿ ಶಿವಾಜಿಋತುರೋಸ್‌ಮರಿಕ್ಯಾನ್ಸರ್ಮೈಸೂರು ದಸರಾಸಂಸ್ಕಾರಮಹಾಕವಿ ರನ್ನನ ಗದಾಯುದ್ಧತಿಂಗಳುಹಿಂದೂ ಮಾಸಗಳುಭಾರತದ ರಾಷ್ಟ್ರಗೀತೆಪ್ರಬಂಧ ರಚನೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಚನ್ನವೀರ ಕಣವಿಮಂಕುತಿಮ್ಮನ ಕಗ್ಗವಿಜಯದಾಸರುಬ್ರಿಕ್ಸ್ ಸಂಘಟನೆಜಾನಪದಟಿ.ಪಿ.ಕೈಲಾಸಂಅನುಶ್ರೀವಿಧಾನಸೌಧಕೆ. ಅಣ್ಣಾಮಲೈಯುಗಾದಿಡಾ ಬ್ರೋಚಿತ್ರದುರ್ಗಹೊಯ್ಸಳ ವಿಷ್ಣುವರ್ಧನಮೌರ್ಯ ಸಾಮ್ರಾಜ್ಯಆಲೂರು ವೆಂಕಟರಾಯರುಸೂರ್ಯವ್ಯೂಹದ ಗ್ರಹಗಳುಅರಿಸ್ಟಾಟಲ್‌ನಾಮಪದಬೆಟ್ಟದ ನೆಲ್ಲಿಕಾಯಿಸಂಸದೀಯ ವ್ಯವಸ್ಥೆಗೋತ್ರ ಮತ್ತು ಪ್ರವರಆಂಧ್ರ ಪ್ರದೇಶಬೇಬಿ ಶಾಮಿಲಿಸಂಶೋಧನೆಭಾರತ ಸಂವಿಧಾನದ ಪೀಠಿಕೆಮಳೆಶ್ರೀ ರಾಮಾಯಣ ದರ್ಶನಂಕೃತಕ ಬುದ್ಧಿಮತ್ತೆಜೀವಸತ್ವಗಳುಭರತೇಶ ವೈಭವಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಬೆಸಗರಹಳ್ಳಿ ರಾಮಣ್ಣಗರ್ಭಧಾರಣೆಯೋಗಸಾರ್ವಜನಿಕ ಹಣಕಾಸುಶ್ರೀವಿಜಯದೇವನೂರು ಮಹಾದೇವಕ್ಯಾರಿಕೇಚರುಗಳು, ಕಾರ್ಟೂನುಗಳುಬಾವಲಿಚಿಲ್ಲರೆ ವ್ಯಾಪಾರಗ್ರಾಮ ಪಂಚಾಯತಿಮೆಕ್ಕೆ ಜೋಳಸಂವತ್ಸರಗಳುಅಮ್ಮದೂರದರ್ಶನಸುಧಾ ಚಂದ್ರನ್ಕೆಂಪುಚಿತ್ರದುರ್ಗ ಕೋಟೆಲೋಕಸಭೆಮಹಾಲಕ್ಷ್ಮಿ (ನಟಿ)ಕೆ. ಎಸ್. ನರಸಿಂಹಸ್ವಾಮಿಚೋಳ ವಂಶತಮಿಳುನಾಡುಕನ್ನಡ ಸಾಹಿತ್ಯ ಸಮ್ಮೇಳನಗ್ರಂಥಾಲಯಗಳುಜ್ಯೋತಿಬಾ ಫುಲೆಕನ್ನಡ ಕಾವ್ಯಭಾರತೀಯ ಜನತಾ ಪಕ್ಷಸಹೃದಯರಾಶಿಮೆಂತೆಧಾನ್ಯಕುಂಬಳಕಾಯಿ🡆 More