ಆಂಡೆಸ್ ಪರ್ವತಗಳು

ಆಂಡೆಸ್ ಪರ್ವತಗಳು ಭೂಮಿಯ ನೆಲದ ಮೇಲಿನ ಅತಿ ಉದ್ದದ ಪರ್ವತಶ್ರೇಣಿ.ಭೂಮಿಯ ಅತಿ ಉದ್ದನೆಯ ಪರ್ವತಶ್ರೇಣಿಗಳು ಸಾಗರದಾಳದಲ್ಲಿವೆ.

ಆಂಡೆಸ್ ಪರ್ವತಗಳು ದಕ್ಷಿಣ ಅಮೇರಿಕಾ ಖಂಡದ ಪಶ್ಚಿಮ ಕರಾವಳಿಯುದ್ದಕ್ಕೂ ಸುಮಾರು ೭೦೦೦ ಕಿ.ಮೀ. ವರೆಗೆ ಹಬ್ಬಿವೆ. ಈ ಶ್ರೇಣಿಯ ಅಗಲ ೨೦೦ ರಿಂದ ೭೦೦ ಕಿ.ಮೀ. ಮತ್ತು ಸರಾಸರಿ ಎತ್ತರ ೪೦೦೦ ಮೀ. (೧೩೦೦೦ ಅಡಿ). ಆಂಡೆಸ್ ಪರ್ವತಶ್ರೇಣಿಯು ಮುಖ್ಯವಾಗಿ ಎರಡೂ ಮಹಾ ಪರ್ವತಶ್ರೇಣಿಗಳನ್ನೊಳಗೊಂಡಿದೆ. ಕಾರ್ಡಿಲ್ಲೇರಾ ಓರಿಯೆಂಟಲ್ ಮತ್ತು ಕಾರ್ಡಿಲ್ಲೇರಾ ಆಸ್ಸಿಡೆಂಟಲ್ ಎಂದು ಈ ಎರಡು ಶ್ರೇಣಿಗಳ ಹೆಸರು. ಆಂಡೆಸ್ ಪರ್ವತಗಳು ದಕ್ಷಿಣ ಅಮೇರಿಕಾದ ಏಳು ರಾಷ್ಟ್ರಗಳನ್ನು ಹಾದು ಹೋಗಿವೆ. ಅರ್ಜೆಂಟೀನಾ, ಚಿಲಿ, ಪೆರು, ಬೊಲಿವಿಯ, ಕೊಲೊಂಬಿಯ, ಇಕ್ವೆಡೋರ್ ಮತ್ತು ಟ್ರಿನಿಡಾಡ್ ಈ ಏಳು ದೇಶಗಳು. ಆಂಡೆಸ್ ಪರ್ವತಗಳು ಏಷ್ಯಾದ ಹೊರಗೆ ಜಗತ್ತಿನ ಅತಿ ಎತ್ತರದ ಪರ್ವತಗಳಾಗಿವೆ. ಈ ಶ್ರೇಣಿಯ ಅತ್ಯುನ್ನತ ಶಿಖರವಾದ ಅಕೊನ್‌ಕಾಗುವಾ ೬೯೬೨ ಮೀ. ( ೨೨,೮೪೧ ಅಡಿ) ಎತ್ತರವಾಗಿದೆ. ಎಕ್ವೆಡಾರ್‌ನ ಚಿಂಬೊರಾಜೋ ಜ್ವಾಲಾಮುಖಿಯ ಶಿಖರವು ಭೂಮಿಯ ಕೇಂದ್ರದಿಂದ ಅತಿ ಹೆಚ್ಚು ದೂರದಲ್ಲಿರುವ ನೆಲದ ಮೇಲಿನ ಸ್ಥಾನವಾಗಿದೆ.

ಆಂಡೆಸ್ ಪರ್ವತಗಳು (ಕ್ವೆಚುವಾ)
ಪರ್ವತಶ್ರೇಣಿ
[[Image:| 256px|none
]]
Ceeties ಬೊಗೊಟಾ, ಲಾ ಪಾಜ್, ಸ್ಯಾಂಟಿಯಾಗೋ, ಕ್ವಿಟೋ
Heichest pynt ಅಕೊನ್‌ಕಾಗುವಾ
 - location ಅರ್ಜೆಂಟೀನಾ
 - elevation ೬,೯೬೨ m (೨೨,೮೪೧ ft)
Lenth ೭,೦೦೦ km (೪,೩೫೦ mi)
Width ೫೦೦ km (೩೧೧ mi)
ಆಂಡೆಸ್ ಪರ್ವತಗಳು
Andean culture history (1964) (18168891506)
ಆಂಡೆಸ್ ಪರ್ವತಗಳು

ಭೂಮೇಲ್ಮೈ ಲಕ್ಷಣಗಳು

ಆಂಡೆಸ್ ಪರ್ವತಗಳನ್ನು ಚಿಲಿ ಮತ್ತು ಅರ್ಜೆಂಟಿನಾಗಳಲ್ಲಿ ಹಬ್ಬಿರುವ ದಕ್ಷಿಣ ಆಂಡೆಸ್, ಚಿಲಿ, ಪೆರು ಮತ್ತು ಬೊಲಿವಿಯ ಗಳಲ್ಲಿ ಹರಡಿರುವ ಮಧ್ಯ ಆಂಡೆಸ್ ಹಾಗೂ ವೆನೆಜುವೇಲಾ ಮತ್ತು ಕೊಲೊಂಬಿಯಗಳಲ್ಲಿ ಹಬ್ಬಿರುವ ಉತ್ತರ ಆಂಡೆಸ್ ಎಂದು ಮೂರು ಭಾಗವಾಗಿ ಭೌಗೋಳಿಕವಾಗಿ ವಿಭಾಗಿಸಲಾಗಿದೆ. ಕೆರಿಬ್ಬಿಯನ್ ಸಮುದ್ರದಲ್ಲಿರುವ ಅರೂಬಾ, ಬೊನೈರ್ ಮತ್ತು ಕುರಕಾವ್ ದ್ವೀಪಗಳು ವಾಸ್ತವವಾಗಿ ಸಮುದ್ರದಲ್ಲಿ ಮುಳುಗಿರುವ ಆಂಡೆಸ್ ಪರ್ವತಗಳ ಉತ್ತರದಂಚಿನ ಶಿಖರಗಳಾಗಿವೆ. ಭೂಮಿಯ ಟೆಕ್ಟಾನಿಕ್ ತಟ್ಟೆಗಳ ಸರಿಯುವಿಕೆಯಿಂದ ರೂಪುಗೊಂಡಿರುವ ಆಂಡೆಸ್ ಪರ್ವತಗಳು ಹಲವಾರು ಸಕ್ರಿಯ ಜ್ವಾಲಾಮುಖಿಗಳನ್ನು ಒಳಗೊಂಡಿವೆ.

ಆಂಡೆಸ್ ಪರ್ವತಗಳು 
ಆಂಡೆಸ್ ಪರ್ವತಗಳು 
ಮಧ್ಯ ಆಂಡೆಸ್

ವಾತಾವರಣ

ಆಂಡೆಸ್ ಪರ್ವತಗಳಲ್ಲಿನ ವಾತಾವರಣವು ಸ್ಥಾನ, ಎತ್ತರ ಮತ್ತು ಸಾಗರದಿಂದ ಇರುವ ದೂರದ ಮೇಲೆ ಅವಲಂಬಿತವಾಗಿವೆ. ದಕ್ಷಿಣ ಆಂಡೆಸ್ ಪ್ರಾಂತ್ಯದಲ್ಲಿ ತಂಪಾದ ಹವಾಮಾನವಿದ್ದು ಮಳೆ ಸಾಕಷ್ಟಿದ್ದರೆ ಮಧ್ಯ ಪ್ರಾಂತ್ಯವು ಸಾಮಾನ್ಯವಾಗಿ ಒಣ ಪ್ರದೇಶವಾಗಿದೆ. ಉತ್ತರ ಭಾಗದಲ್ಲಿ ಬಿಸಿ ಹೆಚ್ಚಾಗಿದ್ದು ಮಳೆ ಸಹ ಬಲು ಅಧಿಕವಾಗಿರುತ್ತದೆ. ಈ ಶ್ರೇಣಿಯಲ್ಲಿ ಅತಿ ಕಡಿಮೆ ಅಂತರದಲ್ಲಿಯೇ ಪರಿಸರ ಮತ್ತು ಹವಾಮಾನದಲ್ಲಿ ಭಾರೀ ಬದಲಾವಣೆಯನ್ನು ಕಾಣಬಹುದು. ಉದಾಹರಣೆಗೆ ಹಿಮಾವೃತ ಕೊಟೊಪಾಕ್ಸಿ ಶಿಖರದ ಕೆಲ ಮೈಲಿಗಳ ಅಂತರದಲ್ಲಿಯೇ ಮಳೆಕಾಡುಗಳಿವೆ. ಆಂಡೆಸ್ ಪರ್ವತಗಳ ದಕ್ಷಿಣ ಭಾಗದಲ್ಲಿ ದೊಡ್ಡ ಸಂಖ್ಯೆಯ ಹಿಮನದಿಗಳಿವೆ. ಜೊತೆಗೆ ಈ ಪರ್ವತಪ್ರಾಂತ್ಯದಲ್ಲಿ ಅಟಕಾಮಾ ಮರುಭೂಮಿ ಸಹ ಹುದುಗಿದೆ.

ಸಸ್ಯ ವೈವಿಧ್ಯ

ಆಂಡೆಸ್ ಪರ್ವತಗಳು ಬಲು ವಿಸ್ತಾರವಾದ ಸಸ್ಯ ವೈವಿಧ್ಯವನ್ನು ಹೊಂದಿವೆ. ಸುಮಾರು ೩೦೦೦೦ ಬಗೆಯ ಸಸ್ಯಗಳು ಈ ಪ್ರದೇಶದಲ್ಲಿ ಜೀವಿಸಿವೆ. ಇವುಗಳ ಪೈಕಿ ಸುಮಾರು ೧೫೦೦೦ ತಳಿಗಳು ವಿಶ್ವದ ಬೇರೆಡೆ ಕಾಣವು. ಈ ನಿಟ್ಟಿನಲ್ಲಿ ಆಂಡೆಸ್ ಪರ್ವತಗಳ ಜೀವ ವೈವಿಧ್ಯವು ಜಗತ್ತಿನ ಇನ್ನಾವುದೇ ಸ್ಥಳದಲ್ಲಿರುವುದಕ್ಕಿಂತ ಗಣನೀಯವಾಗಿ ಅಧಿಕವಾಗಿದೆ. ಹಿಂದೆ ಆಂಡೆಸ್ ಪರ್ವತಗಳ ಸಂಪೂರ್ಣ ಉತ್ತರಭಾಗವನ್ನು ಆವರಿಸಿದ್ದ ಮಳೆಕಾಡುಗಳು ಇಂದು ಗಣನೀಯವಾಗಿ ಕುಗ್ಗಿವೆ. ಕೊಲೊಂಬಿಯದಲ್ಲಿ ಅವ್ಯಾಹತವಾಗಿ ನಡೆದಿರುವ ಅರಣ್ಯನಾಶ ಇದಕ್ಕೆ ಕಾರಣ. ಮಲೇರಿಯಾ ರೋಗಕ್ಕೆ ಶಮನವಾದ ಕ್ವಿನೈನ್‌ ಔಷಧಿಯ ಮೂಲವಾದ ಸಿಂಖೋನಾ ಮರಗಳು ಆಂಡೆಸ್ ಪರ್ವತಗಳ ಕೊಡುಗೆ. ಇದಲ್ಲದೆ ತಂಬಾಕು ಗಿಡ ಮತ್ತು ಆಲೂಗಡ್ಡೆ ಸಹ ಆಂಡೆಸ್ ಪರ್ವತಗಳಿಂದ ಜಗತ್ತಿನ ಬೇರೆ ಸ್ಥಳಗಳಿಗೆ ರವಾನೆಯಾದವು.

ಪ್ರಾಣಿ ಸಂಕುಲ

320|right|thumb|ಆಂಡೀಸ್ ಪರ್ವತಶ್ರೇಣಿ

ಆಂಡೆಸ್ ಪರ್ವತಗಳು 
ಆಂಡೆಸ್‌ನ ಕಾಡುಗಳಲ್ಲಿ ಕಾಣಬರುವ ಕಾಕ್-ಆಫ್-ದ-ರಾಕ್ ಹಕ್ಕಿ

ಆಂಡೆಸ್ ಪರ್ವತ ಪ್ರದೇಶದಲ್ಲಿ ಅಪಾರ ಪ್ರಾಣಿ ವೈವಿಧ್ಯ ಕಾಣಬರುತ್ತದೆ. ಸುಮಾರು ೬೦೦ ತಳಿಗಳ ಸಸ್ತನಿಗಳು, ೧೭೦೦ ಜಾತಿಯ ಹಕ್ಕಿಗಳು ಮತ್ತು ೬೦೦ ಬಗೆಯ ಉರಗಗಳು ಇಲ್ಲಿ ನೆಲೆಸಿವೆ. ಜೊತೆಗೆ ೪೦೦ ತಳಿಗಳ ಮೀನುಗಳಿಗೆ ಸಹ ಆಂಡೆಸ್ ಪರ್ವತಗಳು ಆಶ್ರಯ ಒದಗಿಸಿವೆ. ಲಾಮಾಗಳು ಆಂಡೆಸ್ ಪರ್ವತ ಪ್ರಾಂತ್ಯದಲ್ಲಿ ಮಾತ್ರ ಕಾಣುವ ಪ್ರಾಣಿ. ಇವನ್ನು ಇಲ್ಲಿನ ಜನರು ಪಳಗಿಸಿ ಭಾರ ಹೊರಲು ಬಳಸುತ್ತಾರೆ. ಜೊತೆಗೆ ಇವುಗಳ ತುಪ್ಪಳ ಮತ್ತು ಮಾಂಸ ಸಹ ಮಾನವನಿಗೆ ವಾಣಿಜ್ಯವಾಗಿ ಲಾಭದಾಯಕವಾಗಿವೆ. ಭೂಮಿಯ ಪಶ್ಚಿಮ ಗೋಲಾರ್ಧದ ಅತಿ ದೊಡ್ಡ ಪಕ್ಷಿಯಾದ ಆಂಡೀಯನ್ ಕಾಂಡರ್ ಆಂಡೆಸ್ ಪರ್ವತಗಳಲ್ಲಿ ವ್ಯಾಪಕವಾಗಿ ಕಾಣಬರುತ್ತವೆ.

ಬಾಹ್ಯ ಸಂಪರ್ಕಕೊಂಡಿಗಳು

Tags:

ಆಂಡೆಸ್ ಪರ್ವತಗಳು ಭೂಮೇಲ್ಮೈ ಲಕ್ಷಣಗಳುಆಂಡೆಸ್ ಪರ್ವತಗಳು ವಾತಾವರಣಆಂಡೆಸ್ ಪರ್ವತಗಳು ಸಸ್ಯ ವೈವಿಧ್ಯಆಂಡೆಸ್ ಪರ್ವತಗಳು ಪ್ರಾಣಿ ಸಂಕುಲಆಂಡೆಸ್ ಪರ್ವತಗಳು ಬಾಹ್ಯ ಸಂಪರ್ಕಕೊಂಡಿಗಳುಆಂಡೆಸ್ ಪರ್ವತಗಳುಅರ್ಜೆಂಟೀನಾಇಕ್ವೆಡೋರ್ಏಷ್ಯಾಕೊಲೊಂಬಿಯಚಿಲಿಜ್ವಾಲಾಮುಖಿಟ್ರಿನಿಡಾಡ್ ಮತ್ತು ಟೊಬೆಗೊದಕ್ಷಿಣ ಅಮೇರಿಕಾ ಖಂಡಪೆರುಬೊಲಿವಿಯಭೂಮಿ

🔥 Trending searches on Wiki ಕನ್ನಡ:

ಬಾಬರ್ಝಾನ್ಸಿಕೊಳಲುಜಿ.ಎಸ್.ಶಿವರುದ್ರಪ್ಪತೆರಿಗೆಸುಮಲತಾಬಾದಾಮಿಸಾರ್ವಜನಿಕ ಆಡಳಿತಬೇಡಿಕೆದುಂಡು ಮೇಜಿನ ಸಭೆ(ಭಾರತ)ದೇವರ/ಜೇಡರ ದಾಸಿಮಯ್ಯಮೆಕ್ಕೆ ಜೋಳರಾಷ್ತ್ರೀಯ ಐಕ್ಯತೆಕಮ್ಯೂನಿಸಮ್ನಾಮಪದಎಚ್ ೧.ಎನ್ ೧. ಜ್ವರವಿಚ್ಛೇದನಕಾಲಾಯ ತಸ್ಮೈ ನಮಃ (ಚಲನಚಿತ್ರ)೧೬೦೮ಕರ್ನಾಟಕ ಲೋಕಸಭಾ ಚುನಾವಣೆ, 2019ಕನ್ನಡ ವ್ಯಾಕರಣದೇವಸ್ಥಾನಪ್ರಾಥಮಿಕ ಶಾಲೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬಾರ್ಲಿಅದ್ವೈತಪ್ಯಾರಾಸಿಟಮಾಲ್ಅಕ್ಬರ್ಭೂಕಂಪಪ್ರಬಂಧ ರಚನೆಆವಕಾಡೊಆಯ್ಕಕ್ಕಿ ಮಾರಯ್ಯಛಂದಸ್ಸುಅನುಭವ ಮಂಟಪಪಂಪಎಚ್.ಎಸ್.ಶಿವಪ್ರಕಾಶ್ಮೈಸೂರು ಸಂಸ್ಥಾನಪಂಚಾಂಗಗುರುಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಸಬಿಹಾ ಭೂಮಿಗೌಡದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಪ್ರವಾಸೋದ್ಯಮಕೈಗಾರಿಕೆಗಳುಕ್ರೀಡೆಗಳುಅಷ್ಟ ಮಠಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಅಂಬಿಗರ ಚೌಡಯ್ಯಭಾರತದಲ್ಲಿನ ಚುನಾವಣೆಗಳುರೋಮನ್ ಸಾಮ್ರಾಜ್ಯಸ್ವಾಮಿ ವಿವೇಕಾನಂದಭಗತ್ ಸಿಂಗ್ಭಾರತದ ಸಂವಿಧಾನದ ೩೭೦ನೇ ವಿಧಿಎಳ್ಳೆಣ್ಣೆಶಿಕ್ಷಣಭಾರತೀಯ ಆಡಳಿತಾತ್ಮಕ ಸೇವೆಗಳುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆನೀನಾದೆ ನಾ (ಕನ್ನಡ ಧಾರಾವಾಹಿ)ಯಣ್ ಸಂಧಿಉತ್ತರ ಕರ್ನಾಟಕನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡರಾಜಕೀಯ ವಿಜ್ಞಾನಕಾಲ್ಪನಿಕ ಕಥೆಹನಿ ನೀರಾವರಿಪ್ರಜಾಪ್ರಭುತ್ವಅಮ್ಮಮಾಹಿತಿ ತಂತ್ರಜ್ಞಾನರತ್ನಾಕರ ವರ್ಣಿಭಾರತದ ಬುಡಕಟ್ಟು ಜನಾಂಗಗಳುಯಕ್ಷಗಾನವೇದಏಕರೂಪ ನಾಗರಿಕ ನೀತಿಸಂಹಿತೆದಂತಿದುರ್ಗರಜಪೂತಹಲಸಿನ ಹಣ್ಣುಗೋವಿನ ಹಾಡುಕರ್ನಾಟಕದ ಜಲಪಾತಗಳು🡆 More