ಅಟಕಾಮಾ ಮರುಭೂಮಿ

ಅಟಕಾಮಾ ಮರುಭೂಮಿ ದಕ್ಷಿಣ ಅಮೇರಿಕಾ ಭೂಖಂಡದಲ್ಲಿರುವ ಒಂದು ವಿಶಾಲ ಪೂರ್ಣ ಒಣ ಪೀಠಭೂಮಿ.

ಈ ಪ್ರದೇಶವು ಮಳೆಯನ್ನು ಕಾಣದ ಪ್ರದೇಶವಾಗಿದೆ. ಅಟಕಾಮಾ ಮರುಭೂಮಿಯು ಆಂಡೆಸ್ ಪರ್ವತಗಳ ಪಶ್ಚಿಮ ಭಾಗದಲ್ಲಿ ಶಾಂತ ಮಹಾಸಾಗರದ ಕರಾವಳಿಗೆ ಹೊಂದಿಕೊಂಡಿರುವ ಸುಮಾರು ೬೦೦ ಮೈಲಿ (೯೬೬ ಕಿ.ಮೀ.) ಅಗಲದ ಪಟ್ಟಿ. ಅಧ್ಯಯನಗಳ ಪ್ರಕಾರ ಅಟಕಾಮಾ ಮರುಭೂಮಿಯು ಜಗತ್ತಿನ ಅತ್ಯಂತ ಒಣ ಮರುಭೂಮಿಯಾಗಿದೆ. ಒಂದು ಅಂದಾಜಿನ ಪ್ರಕಾರ ಇದು ಕ್ಯಾಲಿಫೋರ್ನಿಯಾದ ಸಾವಿನ ಕಣಿವೆಗಿಂತ ೫೦ ಪಟ್ಟು ಹೆಚ್ಚು ಶುಷ್ಕಪ್ರದೇಶ. ಅಟಕಾಮಾ ಮರುಭೂಮಿಯ ವಿಸ್ತೀರ್ಣ ಸುಮಾರು ೧೮೧,೩೦೦ ಚದರ ಕಿ.ಮೀ. ಚಿಲಿ ದೇಶದ ಉತ್ತರಭಾಗದಲ್ಲಿ ಹಬ್ಬಿರುವ ಅಟಕಾಮಾ ಮರುಭೂಮಿಯ ಹೆಚ್ಚಿನ ಭಾಗ ಉಪ್ಪಿನ ಗುಡ್ಡಗಳು, ಮರಳು ಮತ್ತು ಲಾವಾ ಹರಿವಿನಿಂದುಂಟಾಗಿರುವ ಗಟ್ಟಿ ಬೆಂಗಾಡು. ಪೂರ್ವದ ಆಂಡೆಸ್ ಪರ್ವತಗಳು ಮತ್ತು ಪಶ್ಚಿಮದ ಚಿಲಿಯ ಕರಾವಳಿ ಬೆಟ್ಟಸಾಲುಗಳ ನಡುವೆ ಸಿಲುಕಿರುವ ಅಟಕಾಮಾ ಮರುಭೂಮಿಗೆ ಮಳೆಯ ಹನಿ ಕೂಡ ಬೀಳದಂತೆ ಇವೆರಡು ಪರ್ವತಸಾಲುಗಳು ತಡೆಯೊಡ್ಡಿವೆ. ಹೀಗಾಗಿ ಅಟಕಾಮಾ ಮರುಭೂಮಿಯು ಪೂರ್ಣವಾಗಿ ಬಂಜರು ಪ್ರದೇಶವಾಗಿದ್ದು ಹೆಚ್ಚಿನ ಜೀವಸೆಲೆ ಇಲ್ಲಿಲ್ಲ. ಹೆಚ್ಚಿನ ಭಾಗದ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ ಕೇವಲ ಒಂದು ಮಿಲಿಮೀಟರ್ ಆಗಿದ್ದರೆ ಇಲ್ಲಿನ ಅನೇಕ ಹವಾಮಾನ ವೀಕ್ಷಣಾ ಕೇಂದ್ರಗಳಲ್ಲಿ ದಶಕಗಳ ಕಾಲ ಹನಿ ಮಳೆ ಸಹ ದಾಖಲಾಗಿಲ್ಲ. ೧೫೭೦ ರಿಂದ ೧೯೭೧ರವರೆಗೆ ಗಣನೀಯ ಮಳೆ ಅಟಕಾಮಾ ಮರುಭೂಮಿಯಲ್ಲಿ ಬಿದ್ದಿಲ್ಲವೆಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಇಂತಹ ಶುಷ್ಕ ವಾತಾವರಣದ ಕಾರಣದಿಂದಾಗಿ ಅಟಕಾಮಾ ಮರುಭೂಮಿಯ ಅತ್ಯುನ್ನತ ಪ್ರದೇಶ ೬೮೮೫ ಮೀ. ಗಳಷ್ಟು ಎತ್ತರದಲ್ಲಿದ್ದರೂ ಸಹ ಅಲ್ಲಿ ಯಾವುದೇ ಹಿಮನದಿಗಳಾಗಲಿ ಅಥವಾ ನೀರಿನ ಇನ್ನಾವುದೇ ಮೂಲವಾಗಲಿ ಇಲ್ಲ. ಸಾಗರಕ್ಕೆ ಸಮೀಪದಲ್ಲಿರುವ ಮರುಭೂಮಿಯ ಭಾಗಗಳು ಆಗೊಮ್ಮೆ ಈಗೊಮ್ಮೆ ಸಾಗರದ ಕಡೆಯಿಂದ ಗಾಳಿಯೊಡನೆ ತೇಲಿಬರುವ ನೀರಿನಂಶ (ಸಾಗರದ ಮಂಜು) ಪಡೆಯುತ್ತಿದ್ದು ಈ ಅಲ್ಪ ತೇವಾಂಶವು ಕೆಲತಳಿಯ ಕಳ್ಳಿ ಮತ್ತು ಆಲ್ಗೆಗಳಂತಹ ಸಸ್ಯಗಳಿಗೆ ಜೀವನಾಧಾರವಾಗಿದೆ. ಉಳಿದ ಭಾಗಗಳು ಮಂಗಳ ಗ್ರಹದ ಮೇಲ್ಮೈಯನ್ನು ಬಲುಮಟ್ಟಿಗೆ ಹೋಲುತ್ತವೆ. ಅಟಕಾಮಾ ಮರುಭೂಮಿಯಲ್ಲಿ ಜನವಸತಿ ಬಲು ವಿರಳ. ಕೆಲವೊಂದು ಓಯಸಿಸ್‌ಗಳಿದ್ದು ಅವುಗಳ ಆಸುಪಾಸಿನಲ್ಲಿ ಅಲ್ಪ ಜನವಸತಿಯಿದೆ. ತಾಮ್ರ, ಬೆಳ್ಳಿ ಮತ್ತು ನೈಟ್ರೇಟ್‌ ನಿಕ್ಷೇಪಗಳು ಇಲ್ಲಿ ಪತ್ತೆಯಾಗಿದ್ದು ಇವುಗಳ ಗಣಿಗಾರಿಕೆಯಲ್ಲಿ ತೊಡಗಿರುವ ಕೆಲ ಜನರು ಸಹ ಅಟಕಾಮಾ ಮರುಭೂಮಿಯಲ್ಲಿ ವಾಸಿಸುತ್ತಾರೆ.

ಅಟಕಾಮಾ ಮರುಭೂಮಿ
ನ್ಯಾಸಾ ಒದಗಿಸಿರುವ ಅಟಕಾಮಾ ಮರುಭೂಮಿಯ ಚಿತ್ರ.
ಅಟಕಾಮಾ ಮರುಭೂಮಿ
ಅಟಕಾಮಾ ಮರುಭೂಮಿ
ಅಟಕಾಮಾ ಮರುಭೂಮಿ
ಅಟಕಾಮಾ ಮರುಭೂಮಿಯ ಚಂದ್ರನ ಕಣಿವೆ ಪ್ರದೇಶ.

ಇವನ್ನೂ ನೋಡಿ

ಬಾಹ್ಯ ಸಂಪರ್ಕಕೊಂಡಿಗಳು

Tags:

ಆಂಡೆಸ್ ಪರ್ವತಗಳುಆಲ್ಗೆಓಯಸಿಸ್ಕ್ಯಾಲಿಫೋರ್ನಿಯಾಚಿಲಿತಾಮ್ರದಕ್ಷಿಣ ಅಮೇರಿಕಾನೀರುಬೆಳ್ಳಿಮಂಗಳ (ಗ್ರಹ)ಮಳೆಶಾಂತ ಮಹಾಸಾಗರಸಾವಿನ ಕಣಿವೆಹಿಮನದಿ

🔥 Trending searches on Wiki ಕನ್ನಡ:

ಭಾರತದ ಇತಿಹಾಸಪರಮಾತ್ಮ(ಚಲನಚಿತ್ರ)ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಾಸ ಸಾಹಿತ್ಯಗುಪ್ತ ಸಾಮ್ರಾಜ್ಯಗದಗಯಕೃತ್ತುಜಾಹೀರಾತುರಕ್ತಎಲೆಕ್ಟ್ರಾನಿಕ್ ಮತದಾನಹೊಯ್ಸಳ ವಿಷ್ಣುವರ್ಧನಕ್ರಿಯಾಪದಭಾರತದ ಉಪ ರಾಷ್ಟ್ರಪತಿಹಾಲುರಾಮೇಶ್ವರ ಕ್ಷೇತ್ರಸಾಗುವಾನಿಕರ್ನಾಟಕ ಆಡಳಿತ ಸೇವೆಪರಿಸರ ರಕ್ಷಣೆಮಹಾಲಕ್ಷ್ಮಿ (ನಟಿ)ಪಂಚತಂತ್ರದೇಶಗಳ ವಿಸ್ತೀರ್ಣ ಪಟ್ಟಿಸಾರ್ವಜನಿಕ ಹಣಕಾಸುವೃತ್ತಪತ್ರಿಕೆನರೇಂದ್ರ ಮೋದಿಕರ್ಣಕೊಲ್ಲೂರು ಮೂಕಾಂಬಿಕಾ ದೇವಸ್ಥಾನಪ್ರಾರ್ಥನಾ ಸಮಾಜಮಲೇರಿಯಾಮಾರುಕಟ್ಟೆಆಗಮ ಸಂಧಿಸ್ಟಾರ್‌ಬಕ್ಸ್‌‌ಶನಿವಿಚ್ಛೇದನಬೇಡಿಕೆಕಮ್ಯೂನಿಸಮ್ಕಬ್ಬಿಣಹೆಚ್.ಡಿ.ಕುಮಾರಸ್ವಾಮಿಗೋವಿನ ಹಾಡುಕನ್ನಡ ಕಾಗುಣಿತಬ್ಯಾಂಕ್ಕನ್ನಡ ಅಕ್ಷರಮಾಲೆಸಂಶೋಧನೆಕರ್ನಾಟಕ ಸಂಗೀತಫೇಸ್‌ಬುಕ್‌ಪಂಡಿತಶಿವರಾಮ ಕಾರಂತಮಡಿಕೇರಿರಾಮಾಯಣಕೆ ವಿ ನಾರಾಯಣಸಮಾಜ ವಿಜ್ಞಾನಈಡನ್ ಗಾರ್ಡನ್ಸ್ಅಭಿಮನ್ಯುಕಂಪ್ಯೂಟರ್ಆಹಾರ ಸರಪಳಿಮಲಬದ್ಧತೆಎಕರೆಎಳ್ಳೆಣ್ಣೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಮತದಾನಮೆಂತೆಯಕ್ಷಗಾನಶಿವಮೊಗ್ಗಋತುಚಕ್ರಭಾರತದಲ್ಲಿನ ಚುನಾವಣೆಗಳುತಂತಿವಾದ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅನಂತ್ ನಾಗ್ಟಿಪ್ಪು ಸುಲ್ತಾನ್ಒಂದನೆಯ ಮಹಾಯುದ್ಧದ.ರಾ.ಬೇಂದ್ರೆಚಕ್ರವ್ಯೂಹಸೂರ್ಯವ್ಯೂಹದ ಗ್ರಹಗಳುಯಣ್ ಸಂಧಿರನ್ನಡಿ.ವಿ.ಗುಂಡಪ್ಪಕಿತ್ತೂರು ಚೆನ್ನಮ್ಮತುಳುಯೂಕ್ಲಿಡ್🡆 More