ಕೆ ವಿ ನಾರಾಯಣ

ಡಾ.

ಕೆ.ವಿ. ನಾರಾಯಣ :- ಕನ್ನಡ ಭಾಷೆಯ ಭಾಷಾಶಾಸ್ತ್ರಜ್ಞರಾಗಿ, ವಿಮರ್ಶಕರಾಗಿ, ಸಂಸ್ಕೃತಿ ಚಿಂತಕರಾಗಿ ಕನ್ನಡ ಭಾಷೆ ಕಟ್ಟುವ ಕೆಲಸ ಮಾಡಿದರು. ಹುಟ್ಟಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ. ಅಮ್ಮ ಕೆಂಚಮ್ಮ. ಅಪ್ಪ ವೀರಣ್ಣ.

ಶಿಕ್ಷಣ

ಕೆ.ವಿ. ಆರ್. ಮೊದಲ ಹಂತದ ಓದು ಹುಟ್ಟೂರು ಮತ್ತು ತಾಲೋಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಇಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ. ಕೆ.ವಿ.ಎನ್ ಮತ್ತೆ ಮೈಸೂರಿನ ಯುವರಾಜಾಸ್ ಕಾಲೇಜಿನಲ್ಲಿ ವಿಜ್ಞಾನದ ಪದವಿ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿಎಡ್ ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು. ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಕೆ.ವಿ.ಎನ್ ಮುಂದಿನ ಓದಿಗೆ ಆರಿಸಿಕೊಂಡಿದ್ದು ಸಾಹಿತ್ಯವನ್ನು.

ಸಾಹಿತ್ಯ ವೃತ್ತಿ

ಅಧ್ಯಾಪನನನ ಕೆಲಸ ಆರಂಭಿಸಿದ್ದು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ಜಿ.ಎಸ್.ಎಸ್ ನೇತೃತ್ತ್ವದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರ್ಪಡೆ. ಜಿ.ಎಸ್.ಎಸ್ ಮಾರ್ಗದರ್ಶನದಲ್ಲಿ ಆನಂದವರ್ಧನನ ಧ್ವನ್ಯಾಲೋಕ -ಒಂದು ಅಧ್ಯಯನ ಮಾಡಿ ಪಿಎಚ್ ಡಿ ಪದವಿ ಪಡೆದರು. ಬೋಧಿಸಿದ್ದು ಸಾಹಿತ್ಯ, ಸಾಹಿತ್ಯ ಮೀಮಾಂಸೆ ಮತ್ತು ಭಾಷಾಶಾಸ್ತ್ರವನ್ನು. ವಿಜ್ಞಾನದ ತಾತ್ವಿಕತೆಯನ್ನಿರಿಸಿಕೊಂಡೇ ಕೆ.ವಿ.ಎನ್ ಬೆಳೆದಿದ್ದು ವಿಮರ್ಶಕರಾಗಿ, ಭಾಷಾಶಾಸ್ತ್ರಜ್ಞರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ. ಕೆ.ವಿ.ಎನ್ 1993ರಲ್ಲಿ ಕನ್ನಡಿಗರ ಕನಸಿನ ಸಂಸ್ಥೆಯಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದ ಶುರುವಿನಲ್ಲೇ ರಿಜಿಸ್ಟ್ರಾರ್ ಆಗಿ ಅಲ್ಲಿನ ಆಡಳಿತ ನಿರ್ವಹಣೆಯೊಳಗೂ ಪ್ರವೇಶ ಪಡೆದರು. ಅಲ್ಲಿಂದ ನಿವೃತ್ತಿಯಾಗಿ ಹೊರಗೆ ಬರುವವರೆಗೆ ಹಲವು ಜನ ಕುಲಪತಿಗಳ ಆವಧಿಯಲ್ಲಿ ಆಡಳಿತ ಮತ್ತು ಅಧ್ಯಯನಗಳ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ತಮ್ಮ ಅಧ್ಯಾಪನ ಸಂದರ್ಭದಲ್ಲೇ ಶುರುಮಾಡಿದ್ದ ಕನ್ನಡಭಾಷೆ ಮತ್ತು ಕನ್ನಡ ಸಂಸ್ಕೃತಿಯ ಚಿಂತನೆಗಳನ್ನು ಕನ್ನಡ ಸಮಾಜದ ಬೇರುಗಳ ಮೂಲಕ ಅರಸುವ ಕೆಲಸವನ್ನು ಮತ್ತಷ್ಟು ಸ್ಪಷ್ಟವಾಗಿ ಮಂಡಿಸುತ್ತಾ ಬಂದರು. ಈಗಲೂ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ ಮೊದಲಾಗಿ ಕನ್ನಡ ಸಮಾಜಕ್ಕೆ ಸಂಬಂಧಿಸಿದ ಯಾವುದರಲ್ಲೂ ಜರೂರಾಗಿ ನಡೆಯಬೇಕಿರುವ ಕೆಲಸ ಇದೆ ಎಂದು ತೊಡಗಿಸಿಕೊಂಡಿದ್ದಾರೆ.

ಪಿ.ಎಚ್.ಡಿ ಮಹಾಪ್ರಬಂಧ

  • ಧ್ವನ್ಯಾಲೋಕ -ಒಂದು ಅಧ್ಯಯನ. ‌

ಕೃತಿಗಳು

  1. ಕನ್ನಡ ಜಗತ್ತು:ಅರ್ಧ ಶತಮಾನ
  2. ನಮ್ಮೊಡನೆ ನಮ್ಮ ನುಡಿ.
  3. ಕನ್ನಡ ಶೈಲಿ ಕೈಪಿಡಿ
  4. ಶೈಲಿಶಾಸ್ತ್ರ
  5. ಭಾಷೆಯ ಸುತ್ತಮುತ್ತ
  6. ಬೇರು ಕಾಂಡ ಚಿಗುರು
  7. ಮತ್ತೆ ಭಾಷೆಯ ಸುತ್ತಮುತ್ತ
  8. ಕನ್ನಡ ನುಡಿಯ ಆಕರ ಕೋಶ
  9. ನುಡಿಗಳ ಅಳಿವು
  10. ಚಾಮ್ಸ್ಕಾಯೊಡನೆ ಎರಡು ಹೆಜ್ಜೆ
  11. ದ್ವಿಭಾಷಿಕತೆ
  12. ಸ್ಥಳ ನಾಮಗಳು : ಪರಿವರ್ತನೆ ಮತ್ತು ಪ್ರಭಾವ.
  13. ಭಾಷಾ ವಿಶ್ವಕೋಶ

ಸಾಹಿತ್ಯ ವಿಮರ್ಶೆ

  • ಸಾಹಿತ್ಯ ತತ್ವ: ಬೇಂದ್ರೆ ದೃಷ್ಟಿ.
  • ತೊಂಡುಮೇವು.

ನಾಟಕಗಳು

  • ಹುತ್ತವ ಬಡಿದರೆ (೧೯೮೬)

ಅನುವಾದಗಳು

  • ಅಂಕೆ ತಪ್ಪಿದ ಆರ್ಥುರೋ ಊಯಿ (ಬಟೋಲ್ಟ್ ಬ್ರೆಕ್ಟ್ ). ೨೦೦೯
  • ಜೆನ್ ಕಥೆಗಳು (೧೯೯೪)
  • ಪ್ರೀತಿಸುವುದೆಂದರೆ (ಆರ್ಟ್ ಆಫ್ ಲವಿಂಗ್ ಎರಿಕ್ ಫ್ರಾಂ) ೨೦೦೩

ಉಲ್ಲೇಖಗಳು

Tags:

ಕೆ ವಿ ನಾರಾಯಣ ಶಿಕ್ಷಣಕೆ ವಿ ನಾರಾಯಣ ಸಾಹಿತ್ಯ ವೃತ್ತಿಕೆ ವಿ ನಾರಾಯಣ ಪಿ.ಎಚ್.ಡಿ ಮಹಾಪ್ರಬಂಧಕೆ ವಿ ನಾರಾಯಣ ಕೃತಿಗಳುಕೆ ವಿ ನಾರಾಯಣ ಸಾಹಿತ್ಯ ವಿಮರ್ಶೆಕೆ ವಿ ನಾರಾಯಣ ನಾಟಕಗಳುಕೆ ವಿ ನಾರಾಯಣ ಅನುವಾದಗಳುಕೆ ವಿ ನಾರಾಯಣ ಉಲ್ಲೇಖಗಳುಕೆ ವಿ ನಾರಾಯಣಕನ್ನಡಮೈಸೂರು

🔥 Trending searches on Wiki ಕನ್ನಡ:

ಭಾರತದ ಸಂಸತ್ತುಕ್ಯಾನ್ಸರ್ಮಾರುಕಟ್ಟೆಆಸ್ಪತ್ರೆಓಂ ನಮಃ ಶಿವಾಯಕೇಂದ್ರ ಸಾಹಿತ್ಯ ಅಕಾಡೆಮಿಕರ್ನಾಟಕ ಸಂಗೀತಪೊನ್ನಮಲೆನಾಡುಸೂರ್ಯ (ದೇವ)ಬಸವೇಶ್ವರರೋಸ್‌ಮರಿನೀತಿ ಆಯೋಗಭ್ರಷ್ಟಾಚಾರಜನಪದ ಕ್ರೀಡೆಗಳುಉಪ್ಪಿನ ಸತ್ಯಾಗ್ರಹಅಮೇರಿಕ ಸಂಯುಕ್ತ ಸಂಸ್ಥಾನಯೋನಿಆರ್ಯಭಟ (ಗಣಿತಜ್ಞ)ಕಾಡ್ಗಿಚ್ಚುಭಾರತದ ರಾಷ್ಟ್ರಗೀತೆಚಿಕ್ಕಮಗಳೂರುಸಾರ್ವಜನಿಕ ಹಣಕಾಸುಫ್ರಾನ್ಸ್ಗಣೇಶದ್ರವ್ಯಇರುವುದೊಂದೇ ಭೂಮಿಸತಿ ಪದ್ಧತಿಭಾರತದ ರಾಷ್ಟ್ರಪತಿಕರ್ನಾಟಕದ ಜಾನಪದ ಕಲೆಗಳುಭಾರತದ ಮಾನವ ಹಕ್ಕುಗಳುದ.ರಾ.ಬೇಂದ್ರೆಸವದತ್ತಿಇಂದಿರಾ ಗಾಂಧಿರುಮಾಲುಕೋಶಯಣ್ ಸಂಧಿಮೊಘಲ್ ಸಾಮ್ರಾಜ್ಯತ್ಯಾಜ್ಯ ನಿರ್ವಹಣೆಕನ್ನಡ ಗುಣಿತಾಕ್ಷರಗಳುಸಂಪತ್ತಿನ ಸೋರಿಕೆಯ ಸಿದ್ಧಾಂತಶಂ.ಬಾ. ಜೋಷಿಗಣೇಶ್ (ನಟ)ಮಾಧ್ಯಮಕಂಠೀರವ ನರಸಿಂಹರಾಜ ಒಡೆಯರ್ಸಿಂಧೂತಟದ ನಾಗರೀಕತೆಜೋಳಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಹೆಣ್ಣು ಬ್ರೂಣ ಹತ್ಯೆಅವ್ಯಯಭಗವದ್ಗೀತೆಚಾಣಕ್ಯಶಾಂತಕವಿವಿಶ್ವ ಪರಿಸರ ದಿನಆಯ್ಕಕ್ಕಿ ಮಾರಯ್ಯಭಾರತದಲ್ಲಿನ ಜಾತಿ ಪದ್ದತಿಚಂಪೂಕೀರ್ತನೆಭಾರತದಲ್ಲಿನ ಚುನಾವಣೆಗಳುಬಂಡಾಯ ಸಾಹಿತ್ಯವಾಣಿಜ್ಯ ಪತ್ರಕರ್ನಾಟಕದ ಏಕೀಕರಣಪರಮಾಣುಉಡಶ್ರೀ ರಾಘವೇಂದ್ರ ಸ್ವಾಮಿಗಳುತ್ರಿಪದಿಬಾಹುಬಲಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಶಾಸಕಾಂಗದೀಪಾವಳಿಮಣ್ಣಿನ ಸಂರಕ್ಷಣೆಕಳಿಂಗ ಯುದ್ದ ಕ್ರಿ.ಪೂ.261ಪ್ಲಾಸಿ ಕದನಚನ್ನವೀರ ಕಣವಿಬಹುವ್ರೀಹಿ ಸಮಾಸಆಲೂರು ವೆಂಕಟರಾಯರು🡆 More