ಪೊನ್ನ


ಪೊನ್ನನು ಹಳೆಗನ್ನಡದ ಮೂವರು ರತ್ನತ್ರಯರಲ್ಲಿ ಒಬ್ಬನು. (ಇತರ ಇಬ್ಬರೆಂದರೆ ಪಂಪ ಹಾಗು ರನ್ನ). ಈತನ ಕಾಲ ಕ್ರಿ.ಶ.೯೫೦. ರಾಷ್ಟ್ರಕೂಟ ಚಕ್ರವರ್ತಿ ೩ನೆಯ ಕೃಷ್ಣನ ಆಸ್ಥಾನದಲ್ಲಿ(೯೩೯-೯೬೫) ಪೊನ್ನನು ಆಸ್ಥಾನ ಕವಿಯಾಗಿದ್ದನು. ಕನ್ನಡ ಹಾಗು ಸಂಸ್ಕೃತ ಗಳಲ್ಲಿ ಇವನಿಗೆ ಅಪಾರ ಪಾಂಡಿತ್ಯವಿದ್ದುದರಿಂದ ಈತನಿಗೆ ‘ಉಭಯ ಕವಿಚಕ್ರವರ್ತಿ’ ಎಂದು ಕರೆಯಲಾಗುತ್ತಿತ್ತು. ಈತನು ತನ್ನನ್ನು ‘ಕುರುಳ್ಗಳ ಸವಣ’ ಎಂದು ಕರೆದುಕೊಂಡಿದ್ದಾನೆ. ಆದುದರಿಂದ ಈತನು ಜೈನ ಸನ್ಯಾಸಿಯಂತೆ ಇದ್ದನೆಂದು ಭಾವಿಸಬಹುದು.

ಕೃತಿಗಳು

ಪೊನ್ನನು ೪ ಕಾವ್ಯಗಳನ್ನು ರಚಿಸಿದ್ದಾನೆಂದು ಹೇಳಲಾಗುತ್ತಿದೆ. ಲಭ್ಯವಿರುವ ಕಾವ್ಯಗಳು ಎರಡು:

  • ಶಾಂತಿಪುರಾಣ
  • ಜಿನಾಕ್ಷರಮಾಲೆ
  • ಭುವನೈಕ ರಾಮಾಭ್ಯುದಯ. .
  • ಗತಪ್ರತ್ಯಾಗತ .


೧.ಶಾಂತಿ ಪುರಾಣ -ಇದಕ್ಕೆ 'ಪುರಾಣ ನಾಮ ಚೂಡಾಮಣಿ'ಎಂಬ ಪರ್ಯಾಯನಾಮವಿದೆ.೧೨ ಆಶ್ವಾಸಗಳಲ್ಲಿ ರಚನೆಯಾಗಿರುವ ಈ ಚಂಪೂ ಕಾವ್ಯ ೧೬ನೆಯ ತೀರ್ಥಂಕರನಾದ ಶಾಂತಿನಾಥನನ್ನು ಕುರಿತದ್ದು.ಈ ಕಾವ್ಯದಲ್ಲಿ ಪೊನ್ನನ ವಿದ್ವತ್ತು,ಪ್ರೌಢಿಮೆ,ಭಾಷೆ,ಛಂದಸ್ಸುಗಳ ಮೇಲೆ ಇರುವ ಹಿಡಿತ ಎದ್ದು ಕಾಣುತ್ತದೆ.ತೀರ್ಥಂಕರನಾಗಲಿರುವವನು ೬ನೆಯ ಜನ್ಮದಲ್ಲಿ 'ಅಪರಾಜಿತ'ನಾಗಿ ಹುಟ್ಟಿದಂದಿನಿಂದ ಕಥೆ ಆರಂಭವಾಗಿ,ಕೊನೆಯ ೩(೧೦-೧೨) ಆಶ್ವಾಸಗಳಲ್ಲಿ ಶಾಂತಿನಾಥನ ಸ್ವಂತ ಜೀವನವೂ,ಸಿದ್ಧಿಯೂ ವರ್ಣಿಸಲ್ಪಟ್ಟಿದೆ.ಜೈನಧರ್ಮದ ತತ್ವಗಳನ್ನು ಕವಿ ಕಾವ್ಯದುದ್ದಕ್ಕೂ ಪ್ರತಿಪಾದಿಸಿದ್ದಾನೆ.


೨.ಜಿನಾಕ್ಷರಮಾಲೆ-೩೯ ಕಂದಪದ್ಯಗಳಿರುವ ಕೃತಿ.'ಕ'ಕಾರದಿಂದ ಹಿಡಿದು 'ಳ'ಕಾರದವರೆಗೂ ಕ್ರಮವಾಗಿ ಒಂದೊಂದು ಪದ್ಯಾಕ್ಷರ ಆರಂಭವಾಗುತ್ತದೆ.

೩.ಭುವನೈಕ ರಾಮಾಭ್ಯುದಯ-ಇದು ೧೪ ಆಶ್ವಾಸಗಳ ಚಂಪೂ ಕಾವ್ಯ.ಈ ಗ್ರಂಥವು ಲಭ್ಯವಿಲ್ಲವಾದ್ದರಿಂದ ಇದರ ಕಥಾವಸ್ತು ಚಕ್ರವರ್ತಿ ಕೃಷ್ಣನ ಸಾಮಂತರಾಜ ಶಂಕರಗಂಡನ ಕುರಿತುದೊ,ಅಥವಾ ರಾಮಕಥೆಯನ್ನು ಕುರಿತುದೊ,ಇಲ್ಲವೇ ತನ್ನನ್ನು 'ಕೋದಂಡರಾಮ'ನೆಂದು ಕರೆದುಕೊಳ್ಳುತ್ತಿದ್ದ ಚೋಳರಾಜ ರಾಜಾದಿತ್ಯನ ಮೇಲೆ ಮುಮ್ಮಡಿಕೃಷ್ನ ತಕ್ಕೋಲದಲ್ಲಿ ವಿಜಯ ಸಾಧಿಸಿದ ಕಥೆಯೋ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.ಮಲ್ಲಪನ ಮಗಳಾದ ''ದಾನಚಿಂತಾಮಣಿ'ಅತ್ತಿಮಬ್ಬೆಯು ಈ ಕೃತಿಯ ಸಾವಿರ ಪ್ರತಿಗಳನ್ನು ಮಾಡಿಸಿ,ಧರ್ಮಶ್ರದ್ಧೆಯುಳ್ಳವರಿಗೆ ಹಂಚಿದಳಂತೆ.

Tags:

🔥 Trending searches on Wiki ಕನ್ನಡ:

ಹೈನುಗಾರಿಕೆಸೂಫಿಪಂಥಕುಬೇರಆಂಡಯ್ಯಹಾವುಎಸ್. ಜಾನಕಿತೆಲುಗುಭರತ-ಬಾಹುಬಲಿಆದಿ ಶಂಕರಜ್ಞಾನಪೀಠ ಪ್ರಶಸ್ತಿಭಾರತೀಯ ಸಮರ ಕಲೆಗಳುಗುರುರಾಜ ಕರಜಗಿಗೋಲಗೇರಿನಾಯಿಯೇಸು ಕ್ರಿಸ್ತಕವಿಜೋಗಿ (ಚಲನಚಿತ್ರ)ಶಿಂಶಾ ನದಿಪರಿಸರ ಕಾನೂನುನಾಥೂರಾಮ್ ಗೋಡ್ಸೆವೈದಿಕ ಯುಗತ. ರಾ. ಸುಬ್ಬರಾಯಭಾರತದ ಸ್ವಾತಂತ್ರ್ಯ ದಿನಾಚರಣೆಹಸ್ತ ಮೈಥುನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಇದ್ದಿಲುಬೇಲೂರುರವಿಚಂದ್ರನ್ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಅರಹಿಂದುಸ್ತಾನಿ ಶಾಸ್ತ್ರೀಯ ಸಂಗೀತರಾಷ್ಟ್ರೀಯ ಶಿಕ್ಷಣ ನೀತಿಶಿವಪ್ಪ ನಾಯಕಮೂಲಭೂತ ಕರ್ತವ್ಯಗಳುಚುನಾವಣೆಮತದಾನಶಿಶುನಾಳ ಶರೀಫರುಡಿ.ಕೆ ಶಿವಕುಮಾರ್ಮೊಘಲ್ ಸಾಮ್ರಾಜ್ಯಈರುಳ್ಳಿಸುರಪುರದ ವೆಂಕಟಪ್ಪನಾಯಕಮಾಧ್ಯಮಕವಿಗಳ ಕಾವ್ಯನಾಮಪ್ರಾಚೀನ ಈಜಿಪ್ಟ್‌ತಂತ್ರಜ್ಞಾನಭಾರತೀಯ ಸ್ಟೇಟ್ ಬ್ಯಾಂಕ್ಮೈಸೂರುಮುಹಮ್ಮದ್ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸಂಖ್ಯೆದಶರಥನಾಟಕಮಾನವ ಸಂಪನ್ಮೂಲ ನಿರ್ವಹಣೆಸಹಕಾರಿ ಸಂಘಗಳುಮಧ್ವಾಚಾರ್ಯಸೆಸ್ (ಮೇಲ್ತೆರಿಗೆ)ಹಲ್ಮಿಡಿಕೇಶಿರಾಜಕಲಿಕೆಭೀಷ್ಮಹರಿಶ್ಚಂದ್ರಚಿಕ್ಕಬಳ್ಳಾಪುರಪ್ರಾಥಮಿಕ ಶಾಲೆಒಲಂಪಿಕ್ ಕ್ರೀಡಾಕೂಟರಕ್ತ ದಾನಭೂಮಿ ದಿನಮುರುಡೇಶ್ವರಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಕಲ್ಯಾಣಿಬೆಂಗಳೂರು ಗ್ರಾಮಾಂತರ ಜಿಲ್ಲೆದಕ್ಷಿಣ ಕನ್ನಡಕನ್ನಡ ಜಾನಪದಕಾರ್ಮಿಕರ ದಿನಾಚರಣೆಚದುರಂಗಹೊಯ್ಸಳ ವಾಸ್ತುಶಿಲ್ಪಐಹೊಳೆ🡆 More