ಹರಿಶ್ಚಂದ್ರ: ಭಾರತೀಯ ಐತಿಹಾಸಿಕ ರಾಜ

ಇಕ್ಷ್ವಾಕು ವಂಶದ ದೊರೆ ರಾಜ ಹರಿಶ್ಚಂದ್ರ ಸತ್ಯಪಾಲನೆಗಾಗಿ ಹೆಸರಾದವನು.

ತಂದೆ ಸೂರ್ಯ ವಂಶದ ದೊರೆ ತ್ರಿಶಂಕು,ತಾಯಿ ಸತ್ಯವ್ರತೆಯ ಮಗ ಮುಂದೆ ಸತ್ಯ ಹರಿಶ್ಚಂದ್ರನೆಂದು ಪ್ರಸಿದ್ಧಿ ಪಡೆದನು.

ಒಂದಾನೊಂದು ಕಾಲದಲ್ಲಿ ಹರಿಶ್ಚಂದ್ರನೆಂಬ ರಾಜನು ಆಯೋಧ್ಯ ಎಂಬ ರಾಜ್ಯವನು ಚಾಣಕ್ಷ್ಯತನದಿಂದ ರಾಜ್ಯವನು ಆಳುತ್ತಿದನು ಮತ್ತು ಅವನು ಸತ್ಯವನು ಬಿಟ್ಟು ಬೇರೆ ಏನನ್ನು ಹೇಳುತ್ತಿರಲಿಲ್ಲ ಯಾವಾಗಲು ಸಂತೋಷದಿಂದ ರಾಜ್ಯಭಾರ ಮಾಡುತ್ತಿದ್ದ. ಆ ಸಮಯದಲ್ಲಿ ದೇವರುಗಳು ಅವನಿಗೂಂದು ಸತ್ವಪರೀಕ್ಷೆಯನ್ನು ಕೊಡಲು ನಿರ್ಧರಿಸಿದರು. ಅದಕ್ಕಾಗಿ ವಿಶ್ವಮಿತ್ರನೆಂಬ ಮುನಿಯಿಂದ ಸಹಾಯ ಪಡೆದರು.

ಒಂದು ದಿನ ಹರಿಶ್ಚಂದ್ರ ಬೇಟೆಯಾಡಲು ಕಾಡಿಗೆ ಹೋಗಿದ್ದ. ಆ ಸಮಯದಲ್ಲಿ ಮಹಿಳೆಯ ಅಳುವಿನ ಶಬ್ದವು ಕೇಳಿಸಿತು. ಅವನು ಅದೇ ಶಬ್ದವನ್ನು ಹಿಂಬಾಲಿಸಿ ಹುಡುಕಿಕೊಂಡು ಹೋದಾಗ ವಿಶ್ವಾಮಿತ್ರನ ಆಶ್ರಮ ಸೇರಿದ. ಆ ಸಮಯದಲ್ಲಿ ವಿಶ್ವಾಮಿತ್ರನ ತಪಸ್ಸು ಭಂಗವಾಯಿತು. ವಿಶ್ವಾಮಿತ್ರ ಕೋಪಗೊಂಡ ತಕ್ಷಣ ಹರಿಶ್ಚಂದ್ರ ಅವನನ್ನು ಸಮಾಧಾನ ಮಾಡಲು ತನ್ನ ರಾಜ್ಯವನ್ನು ಬಿಟ್ಟುಕೊಡಲು ಪ್ರಮಾಣ ಮಾಡಿದ. ವಿಶ್ವಾಮಿತ್ರರು ರಾಜ್ಯದ ಜೊತೆಗೆ ದಕ್ಷಿಣೆ ಕೊಡಲು ಕೇಳಿದಾಗ, ಹರಿಶ್ಚಂದ್ರ ಒಪ್ಪಿದ. ಆದರೆ ಎಲ್ಲಾ ಕಳೆದು ಕೊಂಡಿರುವ ಕಾರಣ, ಅವನ ಬಳಿ ದಕ್ಷಿಣೆಯಾಗಿ ಕೊಡುವುದಕ್ಕೆ ಏನು ಇರಲಿಲ್ಲ.

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಅವನು ರಾಜ್ಯವನ್ನು ಬಿಟ್ಟು ತನ್ನ ಹೆಂಡತಿ ಶೈವ್ಯ ಹಾಗೂ ಮಗ ಲೋಹಿತಾಶ್ವನೊಂದಿಗೆ ಕಾಶಿಗೆ ಹೊರಟನು. ಒಂದು ತಿಂಗಳ ಅವಧಿ ಮುಗಿಯುತ್ತಾ ಬರುತ್ತಿದ್ದು, ಕಾಶಿಯಲ್ಲಿ ಉದ್ಯೋಗ ಸಿಗದಿದ್ದಾಗ ತನ್ನ ಹೆಂಡತಿಯನ್ನೇ ಹಣಕ್ಕಾಗಿ ಮಾರಾಟಕ್ಕಿಟ್ಟನು. ಶೈವ್ಯ ಹೋಗುವಾಗ, ಲೋಹಿತಾಶ್ವ ಗಳಗಳನೆ ಅಳುತ್ತಿದನು. ಇದನ್ನು ಕಂಡ ಹರಿಶ್ಚಂದ್ರ ತನ್ನನ್ನೇ ಖರೀದಿ ಮಾಡಿಬಿಡಿ ಎಂದು ಗ್ರಾಹಕನಲ್ಲಿ ವಿನಂತಿಸಿದ. ಹೀಗೆ ತನ್ನನ್ನು ಗುಲಾಮನಾಗಿ ಚಂಡಾಲ(ಸ್ಮಶಾನ ಕಾಯುವವ)ನಿಗೆ ಹರಿಶ್ಚಂದ್ರ ಮಾರಿಕೂಂಡ. ಈ ಹಣದಿಂದ ವಿಶ್ವಾಮಿತ್ರನಿಗೆ ಮಾತುಕೊಟ್ಟಂತೆ ದಕ್ಷಿಣೆ ಹಣವನ್ನು ಕೊಟ್ಟು ತನ್ನ ಸ್ಮಶಾನದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದನು.

ಶ್ವೆವ್ಯ ಬ್ರಾಹ್ಮಣನ ಮನೆಯಲ್ಲಿ ಕೆಲಸದಾಳಾಗಿ ಕೆಲಸ ಮಾಡುತ್ತಿದಳು. ಈ ಸಮಯದಲ್ಲಿ ಅವಳು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಶ್ರಾದ್ಧ ಇದ್ದಿತು. ಅದಕ್ಕಾಗಿ ದರ್ಭೆ ತರಲು ಹೋಗಿದ್ದ ಲೋಹಿತಾಶ್ವ ಹಾವಿನ ಹುತ್ತದ ಮೇಲೆ ಕಾಲನ್ನಿಟ್ಟ. ಆಗ ಅದರಲ್ಲಿದ್ದ ಹಾವೊಂದು ಅವನ ಕಾಲನ್ನು ಕಚ್ಚಿ ಬಿಟ್ಟು ಅವನು ಸತ್ತ. ತನ್ನ ಮಗನ ಶವವನ್ನು ಸ್ಮಶಾನಕ್ಕೆ ಶೈವ್ಯ ಒಯ್ದಳು. ಅಲ್ಲಿ ಸ್ಮಶಾನ ಕಾಯುತ್ತಿರುವ ಹರಿಶ್ಚಂದ್ರ ತನ್ನ ಒಬ್ಬನೇ ಮಗನನ್ನು ಕಳೆದುಕೊಂಡ ದೃಶ್ಯವನ್ನು ಕಂಡು ದುಃಖ ಪಡುತ್ತಾನೆ. ಶವವನ್ನು ಸುಡುವುದಕ್ಕೆ ಶ್ವೆವ್ಯಳ ಹತ್ತಿರ ಹಣ ಇರುವುದಿಲ್ಲ ಆದರೆ ಹರಿಶ್ಚಂದ್ರ ತನ್ನ ಕರ್ತವ್ಯ ಬಿಡದಂತೆ ಇಲ್ಲಿ ಹಣ ಇಲ್ಲದೆ ಶವಸಂಸ್ಕಾರ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳುತ್ತಾನೆ ಆಗ ಅವಳು ನಿನಗೆ ಕೊಡಲು ನನ್ನ ಹತ್ತಿರ ಏನೂ ಇಲ್ಲ ಎ೦ದು ಹೇಳುತ್ತಾಳೆ. ಆಗ ಹರಿಶ್ಛ್ಹಂದ್ರನು ನಿನ್ನ ಬಳಿ ಇರುವ ತಾಳಿಯನ್ನು ಕೊಡು ಎ೦ದು ಕೇಳುತ್ತಾನೆ. ಪತಿಯ ವಿನ: ಬೇರೆಯವರಿಗೆ ಅವಳ ಕೊರಳಲ್ಲಿರುವ ತಾಳಿ ಕಾಣಿಸುವುದುಲ್ಲ ಎಂಬ ವರದ ನೆನಪಾಗಿ ಅವಳು ತನ್ನ ಕತ್ತನ್ನು ಎತ್ತಿ ಪತಿಯನ್ನು ಗುರುತಿಸುತ್ತಾಳೆ. ಈ ಸಂದರ್ಭದಲ್ಲಿ ಬ್ರಹ್ಮ ದೇವರು ಪ್ರತ್ಯಕ್ಷವಾಗಿ ನಿಮ್ಮ ನಿಷ್ಟೆ ಸತ್ಯವನ್ನು ಒಪ್ಪಿದೆ ಎಂದು ರೋಹಿತಾಶ್ವನನ್ನು(ಮಗ) ಬದುಕಿಸಿ ಕೊಡುತ್ತಾನೆ.

ಹರಿಶ್ಚಂದ್ರನನ್ನ ಸತ್ಯ ಪ್ರಾಮಾಣಿಕತೆಗೆ ತನ್ನ ಪ್ರಾಣವನು ಬೀಡಲು ಸಿದ್ದನಾಗಿದ್ದ.

ಆಸಕ್ತಿಕರ ಮಾಹಿತಿ sathya harishchandra


  • ಭಾರತದ ಮೊದಲ ಮೂಕಿ ಚಲನಚಿತ್ರ ’ರಾಜಾ ಹರಿಶ್ಚಂದ್ರ’
  • ಗಾಂಧೀಜಿಯವರ ಮೇಲೆ ಅತ್ಯಂತ ಗಾಢ ಪರಿಣಾಮ ಮಾಡಿದ ನಾಟಕ - ಹರಿಶ್ಚಂದ್ರ ಮತ್ತು ಶ್ರವಣನ ಪಿತೃಭಕ್ತಿ
  • ’ಹರಿಶ್ಚಂದ್ರ ಮಹಾಕಾವ್ಯ’ ಹಳೆಗನ್ನಡದ ಒಂದು ಕೃತಿ


Tags:

🔥 Trending searches on Wiki ಕನ್ನಡ:

ಹೆಚ್.ಡಿ.ದೇವೇಗೌಡಶುಂಠಿನಾಗವರ್ಮ-೧ಬೆಟ್ಟದ ನೆಲ್ಲಿಕಾಯಿಪ್ಲಾಸ್ಟಿಕ್ಶಿಕ್ಷಕದೆಹಲಿ ಸುಲ್ತಾನರುಅಂತಿಮ ಸಂಸ್ಕಾರಭಾರತದ ಸರ್ವೋಚ್ಛ ನ್ಯಾಯಾಲಯಹರಕೆವಿಜಯನಗರ ಸಾಮ್ರಾಜ್ಯರಾಜ್‌ಕುಮಾರ್ಪಾರಿಜಾತಮತದಾನಏಳು ಪ್ರಾಣಾಂತಿಕ ಪಾಪಗಳುನುಡಿಗಟ್ಟುಕರ್ಕಾಟಕ ರಾಶಿಭ್ರಷ್ಟಾಚಾರಸಂಧಿರೋಸ್‌ಮರಿಬಾಬರ್ಕಾರ್ಮಿಕರ ದಿನಾಚರಣೆಲೋಪಸಂಧಿಸೂರತ್ಗಣೇಶ ಚತುರ್ಥಿಅಕ್ಬರ್ಕನ್ನಡದಲ್ಲಿ ಕಾವ್ಯ ಮಿಮಾಂಸೆಕರ್ನಾಟಕದ ಶಾಸನಗಳುಸಂವಹನಕಪ್ಪೆಚಿಪ್ಪುಪ್ರಾಚೀನ ಈಜಿಪ್ಟ್‌ರಾಜಕೀಯ ಪಕ್ಷಮಧುಮೇಹಸಂಭೋಗಸಿದ್ದಲಿಂಗಯ್ಯ (ಕವಿ)ಹೊಯ್ಸಳೇಶ್ವರ ದೇವಸ್ಥಾನಜಯಮಾಲಾಏಡ್ಸ್ ರೋಗಕೃತಕ ಬುದ್ಧಿಮತ್ತೆಪ್ಲಾಸಿ ಕದನಮೆಂತೆಭಾರತೀಯ ಅಂಚೆ ಸೇವೆರವಿಚಂದ್ರನ್ಮಹಾವೀರನಯಸೇನಗರ್ಭಪಾತಸರ್ವಜ್ಞಸಾನೆಟ್ಕೃಷ್ಣರಾಜಸಾಗರಹೂವುನಾರಾಯಣಿ ಸೇನಾಗುಪ್ತ ಸಾಮ್ರಾಜ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಕನ್ನಡದ ಉಪಭಾಷೆಗಳುಹಣ್ಣುಸತ್ಯ (ಕನ್ನಡ ಧಾರಾವಾಹಿ)ಕಾವೇರಿ ನದಿಪರೀಕ್ಷೆಕರ್ನಾಟಕದ ಇತಿಹಾಸಪ್ರೀತಿಸರ್ಕಾರೇತರ ಸಂಸ್ಥೆಮುತ್ತುಗಳುಕಲಿಕೆಬಿ. ಎಂ. ಶ್ರೀಕಂಠಯ್ಯಚನ್ನಬಸವೇಶ್ವರಕೆ. ಅಣ್ಣಾಮಲೈಕರಗಭಾರತದ ಸಂವಿಧಾನಭಾರತ ಬಿಟ್ಟು ತೊಲಗಿ ಚಳುವಳಿಸ್ವಾಮಿ ವಿವೇಕಾನಂದರವೀಂದ್ರನಾಥ ಠಾಗೋರ್ಮೊಹೆಂಜೊ-ದಾರೋರಾಗಿಚಿತ್ರದುರ್ಗ ಕೋಟೆವಿಶ್ವ ವ್ಯಾಪಾರ ಸಂಸ್ಥೆಗಾಂಧಿ ಜಯಂತಿಯಶ್(ನಟ)ಆವರ್ತ ಕೋಷ್ಟಕ🡆 More