ಗಣಿತಜ್ಞ ಆರ್ಯಭಟ

ಆರ್ಯಭಟ ಭಾರತದ ಪ್ರಸಿದ್ಧ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ.

ಆರ್ಯಭಟ
ಗಣಿತಜ್ಞ ಆರ್ಯಭಟ
Statue of Aryabhata on the grounds of IUCAA, Pune. As there is no known information regarding his appearance, any image of Aryabhata originates from an artist's conception.
ಜನನ476 CE
ಬಹುಶಃ ಅಶ್ಮಕ
ಮರಣ550 CE
ಕಾಲಮಾನಗುಪ್ತ ಕಾಲ
ಪ್ರದೇಶಭಾರತ
ಮುಖ್ಯ ಹವ್ಯಾಸಗಳುಗಣಿತ, ಖಗೋಳಶಾಸ್ತ್ರ
ಗಮನಾರ್ಹ ಚಿಂತನೆಗಳುExplanation of Lunar eclipse and Solar eclipse, Rotation of earth on its axis, Reflection of light by moon, Sinusoidal functions, Solution of single variable quadratic equation, Value of π correct to 4 decimal places, Circumference of Earth to 99.8% accuracy, Calculation of the length of Sidereal year
ಪ್ರಮುಖ ಕಾರ್ಯಗಳುಆರ್ಯಭಟೀಯ, ಆರ್ಯ-ಸಿದ್ಧಾಂತ
Influenced
ಆರ್ಯಭಟ
ಆರ್ಯಭಟ

ಆರ್ಯಭಟ ಕ್ರಿ.ಶ. ೪೭೬ ರಲ್ಲಿ ಅಷ್ಮಕದಲ್ಲಿ ಜನಿಸಿದ್ದು. ನಂತರ ಜೀವಿಸಿದ್ದು ಕುಸುಮಪುರದಲ್ಲಿ. ಆರ್ಯಭಟನ ವ್ಯಾಖ್ಯಾನಕಾರ ಒ೦ದನೆಯ ಭಾಸ್ಕರನ (ಸು. ಕ್ರಿ.ಶ. ೬೨೯) ಅಭಿಪ್ರಾಯದಲ್ಲಿ ಈ ಕುಸುಮಪುರ ಇ೦ದಿನ ಪಾಟ್ನಾ (ಪಾಟಲಿಪುತ್ರ). ಆರ್ಯಭಟ ತನ್ನ ಮುಖ್ಯ ಕೃತಿಯಾದ "ಆರ್ಯಭಟೀಯ"ದಲ್ಲಿ

ಭೂಮಿ ತನ್ನ ಅಕ್ಷದ ಸುತ್ತಲೂ ಸುತ್ತುವ ಬಗೆಯ ಬಗ್ಗೆ ಗಣಿತದ ಮತ್ತು ಖಗೋಳಶಾಸ್ತ್ರದ ಬಗ್ಗೆ ತನ್ನ ಸಿದ್ಧಾ೦ತಗಳನ್ನು ಮ೦ಡಿಸಿದ. ಹಾಗೆಯೇ ಎಲ್ಲ ಗ್ರಹಗಳೂ ಸೂರ್ಯನ ಸುತ್ತಲೂ ಸುತ್ತುವ ಕಕ್ಷೆಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸಿದ. ಹಾಗಾಗಿ ಆರ್ಯಭಟನ ಸೌರವ್ಯೂಹ ಸಿದ್ಧಾ೦ತ ಸೂರ್ಯಕೇ೦ದ್ರೀಯವಾದದ್ದು (heliocentric). ಈ ಪುಸ್ತಕ ನಾಲ್ಕು ಭಾಗಗಳಾಗಿ ವಿ೦ಗಡಿತವಾಗಿದೆ: 
  • ಖಗೋಳಶಾಸ್ತ್ರದ ಸ್ಥಿರ ಸ೦ಖ್ಯೆಗಳು (astronomical constants) ಮತ್ತು ತ್ರಿಕೋನಮಿತಿಯ ಬಗ್ಗೆ ಆರ್ಯಭಟನ ಫಲಿತಾ೦ಶಗಳು
  • ಖಗೋಳಶಾಸ್ತ್ರದ ಲೆಕ್ಕಾಚಾರಕ್ಕೆ ಅಗತ್ಯವಾದ ಗಣಿತ
  • ಕಾಲದ ವಿ೦ಗಡಣೆ ಮತ್ತು ಗ್ರಹಗಳ ರೇಖಾ೦ಶಗಳನ್ನು ಲೆಕ್ಕ ಹಾಕಲು ಬೇಕಾದ ಸಿದ್ಧಾ೦ತಗಳು
  • ತ್ರಿಕೋನಮಿತಿ ಮತ್ತು ಗ್ರಹಣಗಳನ್ನು ಲೆಕ್ಕ ಹಾಕಲು ಬೇಕಾದ ಫಲಿತಾ೦ಶಗಳು

ಈ ಕೃತಿಯಲ್ಲಿ ಆರ್ಯಭಟ ಒಂದು ದಿನವನ್ನು ಸೂರ್ಯೋದಯದಿ೦ದ ಆರ೦ಭವಾಗುವುದೆ೦ದು ಲೆಕ್ಕಕ್ಕೆ ತೆಗೆದುಕೊ೦ಡರೆ, ತನ್ನ ಇನ್ನೊ೦ದು ಕೃತಿಯಾದ "ಆರ್ಯಭಟ-ಸಿದ್ಧಾ೦ತ"ದಲ್ಲಿ ದಿನದ ಆರ೦ಭವನ್ನು ಮಧ್ಯರಾತ್ರಿಯಾಗಿ ಪರಿಗಣಿಸಿದ್ದಾನೆ. ಆರ್ಯಭಟನ ಲೆಕ್ಕಾಚಾರದ೦ತೆ, ಭೂಮಿ ೧೫೮,೨೨,೩೭,೫೦೦ ಬಾರಿ ತಿರುಗಲು ತೆಗೆದುಕೊಳ್ಳುವ ಸಮಯ ಚ೦ದ್ರ ೫,೭೭,೫೩,೩೩೬ ಬಾರಿ ತಿರುಗುವ ಸಮಯಕ್ಕೆ ಸಮ. ಇದು ಖಗೋಳಶಾಸ್ತ್ರದ ಒಂದು ಮೂಲಭೂತ ಸ೦ಖ್ಯೆಯನ್ನು ಅಳೆಯಲು ದಾರಿ ಮಾಡಿಕೊಟ್ಟಿತು: ೧೫೮,೨೨,೩೭,೫೦೦/೫,೭೭,೫೩,೩೩೬ = ೨೭.೩೯೬೪೬೯೩೫೭೨. ಇದು ಆಧುನಿಕ ಗಣಿತದ ಸಹಾಯದಿ೦ದ ಲೆಕ್ಕ ಹಾಕಿದ ಮೌಲ್ಯಕ್ಕೆ ಬಹಳ ಹತ್ತಿರವಿದೆ. ಗಣಿತದ ಇನ್ನೊ೦ದು ಮೂಲಭೂತ ಸ್ಥಿರಸ೦ಖ್ಯೆಯಾದ π (ಪೈ) ನ ಲೆಕ್ಕಾಚಾರಕ್ಕೆ ಆರ್ಯಭಟ ಇದನ್ನು ತಿಳಿಸುತ್ತಾನೆ: "ನೂರಕ್ಕೆ ನಾಲ್ಕನ್ನು ಸೇರಿಸಿ, ಎ೦ಟರಿ೦ದ ಗುಣಿಸಿ, ೬೨,೦೦೦ ಸೇರಿಸಿ, ಬ೦ದದ್ದನ್ನು ೨೦,೦೦೦ ದಿ೦ದ ಭಾಗಿಸಿ." ಇದರಿ೦ದ ಗಣಿಸಬಹುದಾದ π ನ ಮೌಲ್ಯ ೬೨೮೩೨/೨೦,೦೦೦ = ೩.೧೪೧೬. ಮೊದಲ ನಾಲ್ಕು ದಶಮಾ೦ಶ ಸ್ಥಾನಗಳಿಗೆ ಈ ಮೌಲ್ಯ ಸರಿಯಾದುದು. ಸೂರ್ಯ ಸಿದ್ಧಾಂತವು ಆರ್ಯಭಟನ ಒಂದು ಪ್ರಮುಖ ಕೃತಿಯಾಗಿದೆ ಇದರಲ್ಲಿ ಸೂರ್ಯನ ಚಲನೆ ಮತ್ತು ಗ್ರಹಗಳ ಸುತ್ತುವ ಪರಿಧಿ ಕಕ್ಷೆಗಳು ಬಗೆಗಿನ ಸಂಪೂರ್ಣ ಜ್ಞಾನವನ್ನು ತಿಳಿಸಿದ್ದಾರೆ

ಇವನ್ನೂ ನೋಡಿ

  • [[ಭಾರತೀಯ ಗಣಿತಜ್ಞ

ರು]]ಟಿಪ್ಪಣಿಗಳುl

ಬಾಹ್ಯ ಸ೦ಪರ್ಕಗಳು

Tags:

🔥 Trending searches on Wiki ಕನ್ನಡ:

ಲೋಕಸಭೆಹಸ್ತ ಮೈಥುನಮಾನವ ಸಂಪನ್ಮೂಲ ನಿರ್ವಹಣೆನೇಮಿಚಂದ್ರ (ಲೇಖಕಿ)ಮೈಸೂರು ಸಂಸ್ಥಾನಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಂಯುಕ್ತ ರಾಷ್ಟ್ರ ಸಂಸ್ಥೆಹುರುಳಿಪ್ರಾಥಮಿಕ ಶಿಕ್ಷಣಆಂಗ್ಲ ಭಾಷೆಭೂತಾರಾಧನೆಮಹಾವೀರ ಜಯಂತಿಕನಕದಾಸರುಜಾತ್ರೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪೆರಿಯಾರ್ ರಾಮಸ್ವಾಮಿಗ್ರಂಥಾಲಯಗಳುಭಾರತದಲ್ಲಿನ ಶಿಕ್ಷಣವಿಧಾನ ಪರಿಷತ್ತುಕರ್ನಾಟಕ ಸಂಗೀತತಿರುಪತಿಯು.ಆರ್.ಅನಂತಮೂರ್ತಿಕನ್ನಡದಲ್ಲಿ ವಚನ ಸಾಹಿತ್ಯನಾಗರೀಕತೆಶ್ರೀಕಾಳಹಸ್ತಿಶೇಷಾದ್ರಿ ಅಯ್ಯರ್ಸಿದ್ಧಯ್ಯ ಪುರಾಣಿಕಹಿಂದೂ ಮದುವೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕೆರೆಗೆ ಹಾರ ಕಥನಗೀತೆಉಪನಯನಮಂತ್ರಾಲಯಕುಮಾರವ್ಯಾಸಅಮ್ಮಹಣ್ಣುಭೂಮಿಜಾಗತಿಕ ತಾಪಮಾನ ಏರಿಕೆಕೋಲಾರಮ್ಮ ದೇವಸ್ಥಾನಪರಿಣಾಮಸೂರ್ಯವ್ಯೂಹದ ಗ್ರಹಗಳುಭರತ-ಬಾಹುಬಲಿಸೂಳೆಕೆರೆ (ಶಾಂತಿ ಸಾಗರ)ಕರ್ನಾಟಕದ ವಾಸ್ತುಶಿಲ್ಪಭಾಷೆವಾಲಿಬಾಲ್ಕದಂಬ ರಾಜವಂಶಚಾಮುಂಡೇಶ್ವರಿ ದೇವಸ್ಥಾನ, ಮೈಸೂರುವಿಶ್ವ ಮಾನವ ಸಂದೇಶಗುಡುಗುಗೋಕರ್ಣಭಾರತೀಯ ಸ್ಟೇಟ್ ಬ್ಯಾಂಕ್ಕಾಲಾಯ ತಸ್ಮೈ ನಮಃ (ಚಲನಚಿತ್ರ)ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕರ್ನಾಟಕದ ಮಹಾನಗರಪಾಲಿಕೆಗಳುಮಾನವನ ಚರ್ಮಹಳೇಬೀಡುಹಂಪೆಕರ್ನಾಟಕದ ಏಕೀಕರಣದಿನಕರ ದೇಸಾಯಿದುಗ್ಧರಸ ಗ್ರಂಥಿ (Lymph Node)ಸಿದ್ದರಾಮಯ್ಯಸಂಸದೀಯ ವ್ಯವಸ್ಥೆಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಅಶ್ವತ್ಥಮರರಾಜಸ್ಥಾನಪಶ್ಚಿಮ ಘಟ್ಟಗಳುಹಿಂದೂ ಧರ್ಮಮಾಸಕಾಮಸೂತ್ರವಿಕ್ರಮಾರ್ಜುನ ವಿಜಯಕ್ರೀಡೆಗಳುಕನ್ನಡ ಗುಣಿತಾಕ್ಷರಗಳುಓಂ ನಮಃ ಶಿವಾಯರಾಮಾಯಣಲಿಂಗ ವಿವಕ್ಷೆಸರ್ವೆಪಲ್ಲಿ ರಾಧಾಕೃಷ್ಣನ್ದಿಕ್ಕುಪಾಲಕ್ಸಮಾಜ ವಿಜ್ಞಾನ🡆 More