ಅಂಬಿಗರ ಚೌಡಯ್ಯ

ಅಂಬಿಗರ ಚೌಡಯ್ಯ ೧೨ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು.

ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವ. ತನ್ನ ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳ ಅಂಕಿತವಾಗಿದೆ.

ಚಿತ್ರ:Shree Nija Sharana Ambigara chouwdayya jayanti procession mp suresh angadi.jpg
Ambigara Chouwdayya Jayanti procession Mp Suresh Angadi
ಅಂಬಿಗರ ಚೌಡಯ್ಯ
ಜನನಚೌಡೇಶ (ಮೂಲ ಹೆಸರು)

ತಾಯಿ:ಪಂಪಾದೇವಿ

ತಂದೆ: ವಿರೂಪಾಕ್ಷ

1120 (೧೨ನೆ ಶತಮಾನ)
ಚೌಡದಾನಪುರ, ರಾಣಿಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ, ಕರ್ನಾಟಕ
ಮರಣರಾಣಿಬೆನ್ನೂರು, ಹಾವೇರಿ ಜಿಲ್ಲೆ, ಕರ್ನಾಟಕ
ಅಂಕಿತನಾಮಅಂಬಿಗರ ಚೌಡಯ್ಯ
ವೃತ್ತಿಅಂಬಿಗ
ಇದಕ್ಕೆ ಪ್ರಸಿದ್ಧವಚನ ಸಾಹಿತ್ಯ

ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲವುಳ್ಳವ ಎಂದು ಹೇಳಿಕೊಳ್ಳುವುದರಲ್ಲಿ ತನ್ನ ಅನುಭಾವದೃಷ್ಟಿಯನ್ನು ಪ್ರಕಟಿಸಿದ್ದಾನೆ.

ವಚನಗಳ ಶೈಲಿ, ದೃಷ್ಟಿ

ಉಳಿದ ವಚನಕಾರರ ವಚನಗಳಲ್ಲಿರುವಂತೆ ಇವರಲ್ಲಿಯೂ ಶಿವಾನುಭವಪರವಾದ ವಚನಗಳಿದ್ದರೂ ಅವುಗಳಲ್ಲಿ ಕಂಡುಬರುವ ಸಮಕಾಲೀನ ಸಮಾಜ ವಿಡಂಬನೆಯ ವ್ಯಗ್ರದೃಷ್ಟಿ ಬೇರೆಯವರಲ್ಲಿ ವಿರಳವೆಂದೇ ಹೇಳಬೇಕು.

ಅವನ ವಚನಗಳ ವಸ್ತು, ಭಾಷೆ, ಶೈಲಿ ಗಮನಿಸಿದರೆ ಅವನೊಬ್ಬ ಕೆಚ್ಚೆದೆಯ, ನಿಷ್ಠುರ ಪ್ರಕೃತಿಯ, ಗ್ರಾಮ್ಯ ಮನೋಧರ್ಮದ ಒರಟು ವಚನಕಾರ ಎಂಬುದು ಸ್ಪಷ್ಟವಾಗುತ್ತದೆ. ಅವನು ನ್ಯಾಯನಿಷ್ಠುರ, ದಯಾದಾಕ್ಷಿಣ್ಯಪರನಲ್ಲ. ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಅವನು ಟೀಕಿಸದೆ ಬಿಡುವುದಿಲ್ಲ. ಅವನು ಮೃದುವಾಗಿ ಮಾತನಾಡುವುದು ಅಪೂರ್ವ; ಮಾತಿನ ಬಹುಭಾಗ ಹರಿತವಾದದ್ದು, ಸಂಸ್ಕಾರದೂರವಾದದ್ದು. ‘ಕೇಳಿರಯ್ಯ ಮಾನವರೇ’, ‘ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೋ’, ‘ನನಗೊಬ್ಬರೆಂಜಲು ಸೇರದೆಂದು ಶುಚಿತನದಲ್ಲಿ ಬದುಕುವ ಬರಿಯ ಮಾತಿನ ಭುಂಜಕರು ನೀವು ಕೇಳಿರೋ’, ‘ಪರಪುರುಷಾರ್ಥವನರಿಯದೆ ಕೆಟ್ಟನರ ಕುರಿಗಳು ನೀವು ಕೇಳಿರೋ’ ಎಂದು ಆರಂಭವಾಗಿ ‘ಮೆಟ್ಟಿದ್ದ ದೊಡ್ಡ ಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆಯೆಂದ’, ‘ಪಡಿಹಾರ ಉತ್ತಣ್ಣನ ಎಡಪಾದರಕ್ಷೆಯಿಂದ ಪಟಪಟನೆ ಹೊಡೆಯೆಂದ’, ‘ಮೂಗ ಕೊಯ್ದು ಇಟ್ಟಂಗಿಯ ಕಲ್ಲಿಲೆ ಸಾಸಿವೆಯ ತಿಕ್ಕಿ ಹಿಟ್ಟಿನ ತಳಿದು ಮೇಲೆ ನಿಂಬೆಯ ಹುಳಿಯನೆ ಹಿಂಡಿ ಪಡುವಲ ಗಾಳಿಗೆ ಹಿಡಿ’-ಹೀಗೆ ಮುಕ್ತಾಯವಾಗುತ್ತದೆ, ಇವನ ವಚನಗಳ ಶೈಲಿ.

ಹಳೆಯ ಮತ್ತು ಹೊಸ ನಂಬಿಕೆಗಳ ಅವಸ್ಥಾಂತರದ ಅವ್ಯವಸ್ಥೆಯಲ್ಲಿದ್ದ ಅಂದಿನ ವೀರಶೈವ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ಅಂಬಿಗರ ಚೌಡಯ್ಯನ ಈ ವಚನಗಳು ಬಹುಶಃ ಅಂದಿನ ಸಾಮಾಜಿಕ ಆವಶ್ಯಕತೆಯ ಪರಿಣಾಮಗಳೆಂದು ನಾವು ಭಾವಿಸಬಹುದು. ಅಂಬಿಗರ ಚೌಡಯ್ಯನ ವಚನಗಳಿಂದ ನಮಗೆ ಕಂಡುಬರುವ ಸಮಾಜದ ಅವ್ಯವಸ್ಥೆಯ ಚಿತ್ರ, ಬೇರೆಯವರಲ್ಲಿ ನಮಗೆ ಇಷ್ಟರಮಟ್ಟಿಗೆ ಕಾಣದು. ಅವನ ವಚನಗಳಲ್ಲಿ ನಿಜಶರಣನ ಮೊರೆತದ ಜೊತೆಗೆ ಸುಧಾರಕನ ಕಟುಟೀಕೆಯೂ ಕೇಳಿಬರುತ್ತದೆ. ಅವನ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊಮ್ಮಿದುವಲ್ಲ; ಸದರ್ಥಸಾಧಕವಾದ ಸತ್ಕೋಪದಿಂದ ಹೊಮ್ಮಿರುವುವು. ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಬಹುಶಃ ಇಬ್ಬರಲ್ಲೇ ಎಂದು ತೋರುತ್ತದೆ. ಒಬ್ಬ ಸಿಡಿಲು ನುಡಿಯ ಸರ್ವಜ್ಞ; ಇನ್ನೊಬ್ಬ ಕೆಚ್ಚೆದೆಯ ವಚನಕಾರ ಅಂಬಿಗರ ಚೌಡಯ್ಯ.

ಉಲ್ಲೇಖಗಳು

ಅಂಬಿಗರ ಚೌಡಯ್ಯ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಬಸವೇಶ್ವರವಚನ ಸಾಹಿತ್ಯಶತಮಾನ

🔥 Trending searches on Wiki ಕನ್ನಡ:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕನ್ನಡ ಅಕ್ಷರಮಾಲೆಭಾರತದ ಸಂಸತ್ತುಹಲ್ಮಿಡಿಭಾರತದಲ್ಲಿನ ಶಿಕ್ಷಣಜಿ.ಪಿ.ರಾಜರತ್ನಂಶಬ್ದ ಮಾಲಿನ್ಯಸಂಪತ್ತಿನ ಸೋರಿಕೆಯ ಸಿದ್ಧಾಂತಗ್ರಹಒಂದನೆಯ ಮಹಾಯುದ್ಧಮೌರ್ಯ ಸಾಮ್ರಾಜ್ಯಜಾತ್ರೆಕುಬೇರಗೋವಿಂದ ಪೈಮೂಲವ್ಯಾಧಿಶಬ್ದಭಾರತದ ರಾಷ್ಟ್ರೀಯ ಚಿನ್ಹೆಗಳುರನ್ನವ್ಯವಸಾಯಪ್ರಬಂಧ ರಚನೆಶಿಕ್ಷಣರಂಜಾನ್ಪ್ರಚ್ಛನ್ನ ಶಕ್ತಿತತ್ಸಮ-ತದ್ಭವಭಗತ್ ಸಿಂಗ್ಪ್ರಜಾವಾಣಿನವೆಂಬರ್ ೧೪ಹಣಆದೇಶ ಸಂಧಿಬಾಬು ಜಗಜೀವನ ರಾಮ್ಕ್ರಿಸ್ಟಿಯಾನೋ ರೊನಾಲ್ಡೊಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಪಂಚಾಂಗಕಾಜೊಲ್ಭಾರತದ ರಾಷ್ಟ್ರೀಯ ಉದ್ಯಾನಗಳುಸಿದ್ದರಾಮಯ್ಯಕಿತ್ತೂರು ಚೆನ್ನಮ್ಮದಿಕ್ಕುಸುಭಾಷ್ ಚಂದ್ರ ಬೋಸ್ಸಂಧಿಆಟಕನ್ನಡ ವ್ಯಾಕರಣಕರ್ನಾಟಕ ಸಂಗೀತಪಂಚತಂತ್ರಹರಿಹರ (ಕವಿ)ರಿಕಾಪುಬಡತನ೨೦೧೬ ಬೇಸಿಗೆ ಒಲಿಂಪಿಕ್ಸ್ಬುಡಕಟ್ಟುಸಹಕಾರಿ ಸಂಘಗಳುಸಿಂಧೂತಟದ ನಾಗರೀಕತೆಋಗ್ವೇದಉತ್ತರ ಕನ್ನಡಚಿಕ್ಕ ದೇವರಾಜದಶಾವತಾರಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹಸಿವುಸದಾನಂದ ಮಾವಜಿಸಂವಹನಗುಬ್ಬಚ್ಚಿರೋಮನ್ ಸಾಮ್ರಾಜ್ಯಈರುಳ್ಳಿಹಿಂದೂ ಮಾಸಗಳುಪರ್ಯಾಯ ದ್ವೀಪಭಾರತದ ಭೌಗೋಳಿಕತೆಚೋಳ ವಂಶಮಲ್ಲಿಕಾರ್ಜುನ ಜ್ಯೋತಿರ್ಲಿಂಗಭರತ-ಬಾಹುಬಲಿರತ್ನಾಕರ ವರ್ಣಿಕವಿರಾಜಮಾರ್ಗಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಪುಸ್ತಕಜೀವಕೋಶಏರೋಬಿಕ್ ವ್ಯಾಯಾಮಜೀನುಕಂಪ್ಯೂಟರ್ಭಾರತದ ರಾಷ್ಟ್ರಪತಿಗಳ ಪಟ್ಟಿ🡆 More