ಜಾರ್ಜಿಯನ್ ಭಾಷೆ

ಜಾರ್ಜಿಯನ್ ಭಾಷೆ ಒಂದು ದಶಲಕ್ಷಕ್ಕೂ ಹೆಚ್ಚು ಜನರ ವ್ಯವಹಾರದ ಭಾಷೆಯಾಗಿರುವ ಜಾರ್ಜಿಯನ್ ನೈಋತ್ಯ ಕಾಕೇಷನ್ ಭಾಷಾವರ್ಗಕ್ಕೆ ಸೇರಿದ ಭಾಷೆಗಳಲ್ಲಿ ಒಂದು ಎಂದು ಹೇಳಲಾಗಿದೆ.

ಕಾರ್ತ್‍ವೆಲ್‍ನಿ ಅಥವಾ ಕಾರ್ತಿಲಿ ಎಂಬುದು ಈ ಭಾಷೆಯನ್ನು ಸೂಚಿಸಲು ಬಳಸಲಾಗುತ್ತಿರುವ ದೇಶೀಯ ಹೆಸರು.

ಜಾರ್ಜಿಯನ್ ಭಾಷೆ
ქართული
ಜಾರ್ಜಿಯನ್ ಭಾಷೆ 
ಉಚ್ಛಾರಣೆ: IPA: IPA-ka
ಬಳಕೆಯಲ್ಲಿರುವ 
ಪ್ರದೇಶಗಳು:
ಜಾರ್ಜಿಯ (Including ಅಬ್ಖಾಜಿಯ and ದಕ್ಷಿಣ ಒಸ್ಸೆಟಿಯಾ)
ರಷ್ಯಾ, ಯುನೈಟೆಡ್ ಸ್ಟೇಟ್ಸ್, ಇಸ್ರೇಲ್, ಉಕ್ರೇನ್, ಟರ್ಕಿ, ಇರಾನ್, ಅಜೆರ್ಬೈಜಾನ್
ಒಟ್ಟು 
ಮಾತನಾಡುವವರು:
೩.೭ ಮಿಲಿಯನ್
ಭಾಷಾ ಕುಟುಂಬ: ಕಾರ್ಟ್ವೆಲಿಯನ್ ಭಾಷೆಗಳು
 ಕಾರ್ಟೋ-ಝಾನ್ ಭಾಷೆಗಳು
  ಜಾರ್ಜಿಯನ್ ಭಾಷೆ 
ಬರವಣಿಗೆ: ಜಾರ್ಜಿಯನ್ ಲಿಪಿಗಳು 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಜಾರ್ಜಿಯನ್ ಭಾಷೆ ಜಾರ್ಜಿಯ (ದೇಶ)
ನಿಯಂತ್ರಿಸುವ
ಪ್ರಾಧಿಕಾರ:
ಭಾಷೆಯ ಸಂಕೇತಗಳು
ISO 639-1: ka
ISO 639-2: geo (B)ಟೆಂಪ್ಲೇಟು:Infobox ಭಾಷೆ/terminological
ISO/FDIS 639-3: kat 
Kartvelian_languages.svg

ಜಾರ್ಜಿಯನ್ ಭಾಷಾ ಹಿನ್ನೆಲೆ

ಕೆಲವು ಭಾಷಾವಿಜ್ಞಾನಿಗಳು ಜಾರ್ಜಿಯನ್ ಹಾಗೂ ಅದರ ನೆರೆಹೊರೆಯ ವಲಯಗಳ ಭಾಷೆಗಳಾಗಿರುವ ಸ್ಪ್ಯಾನಿಯನ್ ಮತ್ತು ಮಿಂಗ್ರೇಲಿಯನ್ ಭಾಷೆಗಳನ್ನು ಕಾಕೇಷನ್ ಭಾಷಾಪರಿವಾರದ ಕಾರ್ತ್‍ವೆಲಿಯನ್ ವರ್ಗಕ್ಕೆ ಸೇರಿದ ಭಾಷೆಗಳೆಂದು ಅಭಿಪ್ರಾಯಪಟ್ಟಿದ್ದಾರೆ.

  1. ಜಾರ್ಜಿಯನ್ ಭಾಷೆಯನ್ನು ರಷ್ಯನ್ನರು ಗುರ್ಜಿಯಾ ಎಂದೂ ಪರ್ಷಿಯನ್ನರು ಹಾಗೂ ತುರ್ಕೀಯರು ಗುರ್ಜಿಯಾ ಎಂದೂ ಕರೆಯುತ್ತಾರೆ. ಈ ಸಾದೃಶ್ಯದ ಆಧಾರದ ಮೇಲೆಯೇ ಜಾರ್ಜಿಯನ್ ಎಂಬ ಪಾಶ್ಚಾತ್ಯ ಹೆಸರು ರೂಪು ತಳೆದಿದೆ.
  2. ಈ ಭಾಷೆಗೆ ಕಾರ್ತ್‍ವೆಲ್‍ನಿ ಅಥವಾ ಕಾರ್ತಿಲಿ ಎಂಬ ಹೆಸರು ಬರುವುದಕ್ಕೆ ಕಾರಣವಾದ ಒಂದು ಐತಿಹ್ಯ ಈ ಜನಾಂಗದ ಆದಿಪುರುಷ ಕಾರ್ತ್‍ಲೋಸ್ ಎಂದೂ ಈತ ನೋವಾನಿಂದ ಆರನೆಯ ತಲೆಮಾರಿನ ಪ್ರಸಿದ್ಧ ಪುರುಷನೆಂದೂ ಹೇಳುತ್ತದೆ. ಕಾರ್ತ್‍ಲೋಸನ ಮಗನಾದ ಮತ್ಸ್‍ಖೆತೂೀಸ್ ಎಂಬಾತ ಕಟ್ಟಿದ್ದ ಹಳೆಯ ರಾಜಧಾನಿಗೆ ಮತ್ಸ್‍ಖೆತ್ ಎಂದೇ ಹೆಸರಿಡಲಾಗುತ್ತೆಂದೂ ಹೇಳಲಾಗಿದೆ. # ಕೋಲಚಿಸ್ ಅಥವಾ ಐಬೀರಿಯಾ ಎಂಬ ಹೆಸರಿನಲ್ಲಿ ಏಳನೆಯ ಶತಮಾನದಿಂದ ಆಚೆಗೆ ಇದು ಗ್ರೀಕರಿಗೆ ಪರಿಚಿತವಾಗಿತ್ತೆಂಬುದಕ್ಕೂ ಅಲೆಕ್ಸಾಂಡರ್ ಮಹಾಶಯನ ಕಾಲದಲ್ಲಿ ಈ ನಾಡು ತುಂಬಾ ಪ್ರಧಾನಪಾತ್ರ ವಹಿಸಿತ್ತೆಂಬುದಕ್ಕೂ ಐತಿಹಾಸಿಕ ದಾಖಲೆಗಳಿವೆ.

ಪ್ರಾಚೀನತೆ

ನಾಲ್ಕು ಅಥವಾ ಐದನೆಯ ಶತಮಾನದ ಹೊತ್ತಿಗೆ ಜಾರ್ಜಿಯನ್ ಸಾಹಿತ್ಯಿಕ ಭಾಷೆಯಾಗಿ ರೂಪುಗೊಳ್ಳತೊಡಗಿದಂತೆ ಕಾಣುತ್ತದೆ. ಅತ್ಯಂತ ಪ್ರಾಚೀನವೆನ್ನಬಹುದಾಗಿರುವಂಥ ಶಾಸನಗಳು ಐದನೆಯ ಶತಮಾನಕ್ಕೆ ಸೇರಿದವಾಗಿವೆ. ವಾಸ್ತವವಾಗಿ, ಜಾರ್ಜಿಯದಲ್ಲಿ ಕ್ರೈಸ್ತಧರ್ಮದ ಪ್ರಚಾರದ ಆರಂಭದೊಡನೆ ಜಾರ್ಜಿಯನ್ ಸಾಹಿತ್ಯವೂ ರೂಪದಳೆಯತೊಡಗಿತು. ಆರ್.ಪಿ.ಬ್ಲೇಕ್, ಪಿ.ಸಿ.ಕೋನಿಬೇರ್ ಮೊದಲಾದ ಆಧುನಿಕ ವಿದ್ವಾಂಸರು ಬೈಬಲ್ಲಿನ ಜಾರ್ಜಿಯನ್ ಆವೃತ್ತಿ ಕ್ರಿ.ಶ. ಐದನೆಯ ಶತಮಾನದಲ್ಲಿ ಸಿದ್ಧವಾಗಿರಬೇಕೆಂದು ಆಭಿಪ್ರಾಯಪಟ್ಟಿದ್ದಾರೆ. ಈ ಅವಧಿಯಲ್ಲಿ ಸಿದ್ಧಪಡಿಸಲಾದ ಬೈಬಲ್ಲಿನ ಭಾಗಗಳ ಜಾರ್ಜಿಯನ್ ಆವೃತ್ತಿಗೆ ಬೈಬಲ್ಲಿನ ಆರ್ಮೇನಿಯನ್ ಆವೃತ್ತಿಯೇ ಆಧಾರವಾಗಿತ್ತು. ಅಂದಿನಿದಲೇ ಭಾರೋಪೀಯ ಅಥವಾ ಇಂಡೋ-ಯೂರೋಪಿಯನ್ ಭಾಷಾಪರಿವಾರದ, ಅದರಲ್ಲಿಯೂ ಆರ್ಮೇನಿಯನ್ ಮತ್ತು ಇರಾನಿಯನ್ ಭಾಷೆಗಳ-ಪ್ರಭಾವ ಜಾರ್ಜಿಯನ್ ಭಾಷೆಯ ಮೇಲೆ ಆಗತೊಡಗಿತು. ಸಂರಕ್ಷಿಸಿ ಇಡಲಾಗಿರುವ ಅತ್ಯಂತ ಪ್ರಾಚೀನ ಹಸ್ತಪ್ರತಿ ಎಂಟನೆಯ ಶತಮಾನಕ್ಕೆ ಸೇರಿದ್ದಾಗಿದೆ. ಇಂದಿಗೂ ಧಾರ್ಮಿಕ ವಲಯಗಳಲ್ಲಿ ಬಳಕೆಯಲ್ಲಿರುವ, ಹಳೆಯ ಜಾರ್ಜಿಯನ್ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟತರವಾಗಿದೆಯಾದರೂ ಅದು ದುಜ್ರ್ಞೇಯವೇನೂ ಆಗಿಲ್ಲವೆಂಬುದು ಸಮಾಧಾನ ತರುವ ಸಂಗತಿಯಾಗಿದೆ. ಆರ್ಮೇನಿಯನ್ ಇರಾನಿಯನ್ ಹಾಗೂ ಗ್ರೀಕ್ ಭಾಷೆಗಳಿಂದ ಹಳೆಯ ಜಾರ್ಜಿಯನ್ ಭಾಷೆ ಶಬ್ದಗಳನ್ನು ಧಾರಾಳವಾಗಿ ಎರವಲು ಪಡೆಯಿತು. ಗ್ರೀಕ್ ಭಾಷೆಯಿಂದ ಎರವಲು ಪಡೆದ ಶಬ್ದಗಳು ಜಾರ್ಜಿಯನ್ ಭಾಷೆಯಲ್ಲಿ ದಾರ್ಶನಿಕ ಪರಿಭಾಷೆ ರೂಪಗೊಳ್ಳಲು ತುಂಬ ನೆರವು ನೀಡಿದವು. ಮುಂದೆ, ಮಧ್ಯಕಾಲದ ಹೊತ್ತಿಗೆ ಇದು ಪರ್ಷಿಯನ್ ಭಾಷೆಯ ತೀವ್ರ ಪ್ರಭಾವಕ್ಕೆ ಒಳಗಾಯಿತು. ಈ ಕಾಲದ ಭಾಷೆಯ ಸ್ವರೂಪ ಸಮಕಾಲೀನ ಭಾಷೆಯ ಸ್ವರೂಪಕ್ಕೆ ತುಂಬ ಹತ್ತಿರಕ್ಕೆ ಬರುತ್ತದೆ. ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ವ್ಯವಹಾರದ ಬಹುಪಾಲು ಕ್ಷೇತ್ರಗಳನ್ನು ಆವರಿಸಿಕೊಂಡ ಈ ಭಾಷೆ ನಿಜವಾಗಿಯೂ ಜನತೆಯ ಜೀವಂತ ಭಾಷೆಯಾಗಿ ಪರಿಣಮಿಸಿತು. ಸಾಹಿತ್ಯ ಕಾಯಕದಲ್ಲಿ ತೊಡಗಿದ ಲೇಖಕರು ತಂತಮ್ಮ ಮಾತೃಭಾಷೆಗಳಿಂದಲೂ ಇತರ ಭಾಷೆಗಳಿಂದಲೂ ಶಬ್ದಗಳನ್ನು ಧಾರಾಳವಾಗಿ ಎರವಲು ಪಡೆದು ಬಳಸಿದ್ದರಿಂದಲೂ ಹೊಸ ಅಗತ್ಯಗಳಿಗನುಗುಣವಾಗಿ ಹೊಸ ಹೊಸ ಶಬ್ದಗಳನ್ನು ಸೃಷ್ಟಿಸಿದ್ದರಿಂದಲೂ ಆಧುನಿಕ ಜಾರ್ಜಿಯನ್ ಭಾಷೆಯ ಶಬ್ದಕೋಶ ಅತ್ಯಂತ ಸಮೃದ್ಧವೂ ಆಗಿ ಪರಿಣಮಿಸಿತು. ಜಾರ್ಜಿಯನ್ನಿನ ಕೆಲವೊಂದು ಉಪಭಾಷೆಗಳ ನಡುವೆ ಅಂಥ ಗಮನಾರ್ಹ ವ್ಯತ್ಯಾಸ ಕಾಣಬರುವುದಿಲ್ಲವಾದರೂ ಭೌಗೋಳಿಕವಾಗಿ ತುಂಬ ಪ್ರತ್ಯೇಕಿಸವಾಗಿರುವ ಈಶಾನ್ಯ ಭಾಗದಲ್ಲಿರುವ ಗುಡ್ಡಗಾಡಿನ ಜನರ ಉಪಭಾಷೆಗಳು ಗಮನಾರ್ಹ ವ್ಯತ್ಯಾಸವನ್ನು ತೋರುತ್ತವೆ.

ಜಾರ್ಜಿಯನ್ ಭಾಷೆಯ ಲಿಪಿ ವ್ಯವಸ್ಥೆ

ಜಾರ್ಜಿಯನ್ ಲಿಪಿಯ ಉಗಮಕ್ಕೂ ಜಾರ್ಜಿಯದಲ್ಲಿ ಕ್ರೈಸ್ತಧರ್ಮದ ಪ್ರವೇಶವಾದುದಕ್ಕೂ ಸಂಬಂಧವಿರುವಂತೆ ತೋರುತ್ತದೆ. ಅಂದರೆ, ಕ್ರೈಸ್ತ ಧರ್ಮದ ಪ್ರಚಾರದ ಅಗತ್ಯವನ್ನು ಪೂರೈಸುವ ಸಲುವಾಗಿ ರೂಪಿಸಲಾಗಿರುವ ಲಿಪಿ ಇದಾಗಿರಬೇಕೆಂದು ಭಾಷಾವಿಜ್ಞಾನಿಗಳು ಭಾವಿಸಿದ್ದಾರೆ. ಮೆಸರೋಪ್ ಅಥವಾ ಮಶ್ತೋಜ್ó ಎಂಬ ಹೆಸರಿನ ಆರ್ಮೇನಿಯನ್ ಪಾದ್ರಿ ಈ ಲಿಪಿಯನ್ನು ರೂಪಿಸಿದನೆಂದು ಹೇಳಲಾಗಿದೆ. ಕ್ರಿ.ಶ.400ರ ಹೊತ್ತಿಗೆ, ಆರ್ಮೇನಿಯನ್ ಲಿಪಿಯನ್ನೂ ರೂಪಿಸಿದವನೆಂದು ಈತ ಪ್ರಖ್ಯಾತನಾಗಿದ್ದಾನೆ. ಆರ್ಮೇನಿಯನ್ ವರ್ಣಮಾಲೆಯಂತೆಯೇ ಜಾರ್ಜಿಯನ್ ವರ್ಣಮಾಲೆಯಲ್ಲಿಯೂ ಒಂದೊಂದು ಅಕ್ಷರ ಒಂದೊಂದು ಧ್ವನಿಯನ್ನು ಸ್ಪಷ್ಟವಾಗಿ, ನಿರ್ದಿಷ್ಟವಾಗಿ ಪ್ರತಿನಿಧಿಸುತ್ತದೆ. ಗ್ರೀಕ್ ವರ್ಣಮಾಲೆಯ ಪ್ರಭಾವ ಇದರಲ್ಲಿ ಗೋಚರಿಸುತ್ತದೆ. ಕೆಲವೊಂದು ಸಂಕೇತಗಳನ್ನು ಅಲ್ಲಿಂದ ಎರವಲು ಪಡೆಯಲಾಗಿದೆಯೆಂದೂ ಹೇಳಲಾಗಿದೆ. ಜಾರ್ಜಿಯದ ಪ್ರಾಚೀನ ರಾಜಧಾನಿಯಾಗಿದ್ದ ಅರ್ಮಾಜಿóಯಲ್ಲಿ ದೊರೆತಿರುವ, ಕ್ರಿ.ಶ.7ನೆಯ ಶತಮಾನದಿಂದ ಮುಂದಿನ ಶಾಸನಗಳಲ್ಲಿ ದೊರೆತಿರುವ ಆರಮೈಕ್ ಲಿಪಿಯಿಂದ ಬಹುಪಾಲು ಸಂಕೇತಗಳನ್ನು ಸ್ವೀಕರಿಸಲಾಗಿದೆಯೆಂದು ವಿದ್ವಾಂಸರು ಭಾವಿಸಿದ್ದಾರೆ. ಜಾರ್ಜಿಯನ್ನರು ಮೊದಲಿಗೆ ಎರಡು ಲಿಪಿಗಳನ್ನು ಬಳಸುತ್ತಿದ್ದರು : 1 ಖುತ್ಸುರಿ, 2 ಆಮ್ಖೆದ್ರುಲಿ. ಖುತ್ಸುರಿ ಎಂಬುದು ಪುರೋಹಿತ ಎಂಬ ಅರ್ಥವನ್ನುಳ್ಳ ಖುತ್ಸಿ ಎಂಬ ಶಬ್ದದಿಂದ ವ್ಯುತ್ಪನ್ನವಾಗಿದೆ. ಇದರ ಅರ್ಥ ಧಾರ್ಮಿಕ ಬರಹ ಎಂದು. ಈ ಲಿಪಿಯಲ್ಲಿ ಕೋನಾಕಾರದ ಎರಡು ಬಗೆಯ ಅಕ್ಷರಗಳಿವೆ (ದೊಡ್ಡ ಅಕ್ಷರಗಳು ಮತ್ತು ಸಣ್ಣ ಅಕ್ಷರಗಳು). ಒಟ್ಟು ವರ್ಣಗಳ ಸಂಖ್ಯೆ 38. ಆಮ್‍ಖೆದ್ರುಲಿ ಅಂದರೆ ಸೈನಿಕರ ಲಿಪಿ ಎಂದು ಅರ್ಥ. ಆಮ್‍ಖೆದರಿ ಅಂದರೆ ವೀರ ಯೋಧ ಎಂದು. ಇದರಿಂದ ಆಮ್‍ಖೆದ್ರುಲಿ ಶಬ್ದ ವ್ಯುತ್ಪನ್ನವಾಗಿದೆ. ಇದರಲ್ಲಿ 40 ವರ್ಣ ಅಥವಾ ಅಕ್ಷರಗಳಿವೆ. ಇವುಗಳಲ್ಲಿ ಏಳು ಅಕ್ಷರಗಳು ಇಂದು ಪ್ರಚಾರದಲ್ಲಿಲ್ಲ. ಮುದ್ರಣ ಕಾರ್ಯಕ್ಕೆ ಇಂದು ಬಳಸುತ್ತಿರುವುದು ಈ ಲಿಪಿಯನ್ನೆ. ಹತ್ತನೆಯ ಶತಮಾನದ ಹೊತ್ತಿಗೆ ಕೋನಾಕಾರಕ್ಕೆ ಬದಲಾಗಿ ವೃತ್ತಾಕಾರ ಬಳಕೆಗೆ ಬರತೊಡಗಿತೆಂದು ಹೇಳಲಾಗಿದೆ. ಕೈಬರೆಹದಲ್ಲಿ ಕೆಲವೊಂದು ವ್ಯತ್ಯಾಸಗಳು-ಅಂದರೆ ಸಂಯುಕ್ತ ವರ್ಣಗಳನ್ನು ಬಳಸುವುದು ಇತ್ಯಾದಿ ಕಾಣದೊರೆಯುತ್ತವೆ.

ವ್ಯಾಕರಣ ವ್ಯವಸ್ಥೆ

ಧ್ವನಿಮಾ ವ್ಯವಸ್ಥೆ

ಜಾರ್ಜಿಯನ್ ಭಾಷೆಯಲ್ಲಿ ಮೊದಲಿಗೆ 40 ಧ್ವನಿಮಾಗಳಿದ್ದುವಾದರೂ 7 ಧ್ವನಿಮಾಗಳು ಇಂದು ಬಳಕೆಯಲ್ಲಿ ಇಲ್ಲದೆ ಇರುವುದರಿಂದ ಒಟ್ಟಿನಲ್ಲಿ ಅದರ ಧ್ವನಿಮಾವ್ಯವಸ್ಥೆಯಲ್ಲಿ 5 ಪ್ರಧಾನ ಸ್ವರಗಳು ಹಾಗೂ 28 ವ್ಯಂಜನಗಳು ಮಾತ್ರ ಸಕ್ರಿಯವಾಗಿವೆ. ಉತ್ತರ ಕಾಕೇಷನ್ ಭಾಷೆಗಳ ಧ್ವನಿಮಾ ವ್ಯವಸ್ಥೆಗಿಂತ ಜಾರ್ಜಿಯನ್ನಿನ ಧ್ವನಿಮಾವ್ಯವಸ್ಥೆ ಸರಳವಾಗಿದೆಯಾದರೂ ಕೆಲವು ಸಮಾನ ಲಕ್ಷಣಗಳು ಇಲ್ಲಿಯೂ ಗೋಚರಿಸುತ್ತವೆ. ಉದಾಹರಣೆಗೆ ಇಲ್ಲಿಯೂ ಘೋಷ (ಬ,ದ,ಗ,ದ್ಜó, ಜ) ಮಹಾಪ್ರಾಣೋಚ್ಚಾರವುಳ್ಳ ಅಘೋಷ (ಪ್,ತ್,ಕ್,ತ್ಸ,ಛ) ಮತ್ತು ಕಾಕಲ್ಯೀಕೃತ ಅಘೋಷ (ಪ,ತ,ಕ, ಅಥವಾ ಕó,ದ್ಸ,ತ್ಛ) ಗಳಾಗಿ ಸ್ಪರ್ಶ ಮತ್ತು ಘರ್ಷಗಳನ್ನು ವರ್ಗೀಕರಿಸಬಹುದಾಗಿದೆ. ಪ್ರಾಚೀನ ಜಾರ್ಜಿಯನ್ನಿನಲ್ಲಿ ಸಂಯುಕ್ತ ಸ್ವರಗಳು ಇದ್ದುವಾದರೂ ಇಂದು ಅವು ಏಕ ಸ್ವರಗಳ ರೂಪದಲ್ಲಿ ಉಳಿದುಕೊಂಡಿವೆ. ಜಾರ್ಜಿಯನ್‍ನಲ್ಲಿ ದೀರ್ಘಸ್ವರಗಳಿಗೆ ಧ್ವನಿಮಾ ಅಸ್ತಿತ್ವವಿಲ್ಲ. ಶಬ್ದದ ಮೊದಲ ಅಕ್ಷರದ ಮೇಲೆ ಅವಧಾರಣೆ ಅಷ್ಟಾಗಿ ಇರುವುದಿಲ್ಲ. ದೀರ್ಘ ಆಥವಾ ಅತಿಲಂಬಿತ ಶಬ್ದಗಳ ಸಂದರ್ಭದಲ್ಲಿ ಅಂತಿಮಪೂರ್ವ ಉಚ್ಚಾರಣೆಯ ಹಿಂದಿನ ಧ್ವನಿಮಾವನನ್ನು ಸಾಮಾನ್ಯವಾಗಿ ಒತ್ತಿ ಉಚ್ಚರಿಸುವುದಿಲ್ಲ.

ಶಬ್ದ ವ್ಯವಸ್ಥೆ

ಶಬ್ದವರ್ಗಗಳ (ಪಾಟ್ರ್ಸ್ ಆಫ್ ಸ್ಪೀಚ್) ವಿಭಜನೆಯ ದೃಷ್ಟಿಯಿಂದ ನೋಡಿದರೆ ಜಾರ್ಜಿಯನ್ ಸ್ಥೂಲವಾಗಿ ಭಾರೋಪೀಯ ಪರಿವಾರದ ಭಾಷೆಗಳನ್ನೇ ಹೋಲುತ್ತದೆಂದು ಹೇಳಬಹುದು.

  1. ನಾಮಪದ ಹಾಗೂ ಕ್ರಿಯಾಪದ : ನಾಮಪದ ಹಾಗೂ ಕ್ರಿಯಾಪದಗಳ ನಡುವಣ ಪ್ರತಿಯೋಗದಲ್ಲಿ ಸ್ಪಷ್ಟವಾಗಿ ಇದರ ವೈಶಿಷ್ಟ್ಯ ಎದ್ದು ಕಾಣುತ್ತದೆ. ನಾಮಪದ ಏಳು ಕಾರಕಗಳನ್ನು ಹೊಂದಿರುವುದು ಇಲ್ಲಿಯೂ ಕಾಣಬರುತ್ತದೆಯಾದರೂ ಅವುಗಳಲ್ಲಿ ಕೆಲವು ಭಿನ್ನವೂ ವಿಶಿಷ್ಟವೂ ಆಗಿರುವುದನ್ನು ಕಾಣಬಹುದು.
  2. ಪ್ರತ್ಯಯ : ಕರ್ತಾ, ಕರ್ಮ ಕರಣ-ಅಪಾದಾನ, ಸಂಪ್ರದಾನ ಹಾಗೂ ಸಂಬಂಧಕಾರಕಗಳ ದೃಷ್ಟಿಯಿಂದ ಸಾಮ್ಯಗೋಚರಿಸುತ್ತದೆ. ಆದರೆ, ಪದಾಂತ್ಯ-ಕ್ರಿಯಾವಿಶೇಣಾತ್ಮಕ ಹಾಗೂ ಅಪ್ರತ್ಯಕ್ಷ ಕರ್ತೃಕಾರಕಗಳು ಜಾರ್ಜಿಯನ್‍ಗೆ ವಿಶಿಷ್ಟವಾದುವು. ಪರ-ಸ್ಥಾನೀಯಗಳು ಶಬ್ದಗಳೊಂದಿಗೆ, ಬಹುಮಟ್ಟಿಗೆ ಬೆಸೆದುಕೊಂಡೇ ಇರುತ್ತವೆ. ಇದರಿಂದಾಗಿ ಕೆಲವೊಂದು ದ್ವಿತೀಯಕ ಕಾರಕಗಳೂ ಹುಟ್ಟಿಕೊಂಡಿದ್ದು, ಆಧುನಿಕ ಜಾರ್ಜಿಯನ್‍ನಲ್ಲಿ ಅವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಪ್ರಾಚೀನ ಜಾರ್ಜಿಯನ್‍ನಲ್ಲಿ -ನಿ, -ನೊ, -ತ್ ಅ ಮೊದಲಾದ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಬಹುವಚನ ಶಬ್ದರೂಪಗಳನ್ನು ಸಾಧಿಸಲಾಗುತ್ತಿತ್ತು. ಆದರೆ, ಆಧುನಿಕ ಜಾರ್ಜಿಯನ್‍ನಲ್ಲಿ-ಎಬ್ ಪ್ರತ್ಯಯವನ್ನೂ ಸಂಬಂಧಪಟ್ಟ ಕಾರಕದ ಪ್ರತ್ಯಯವನ್ನೂ-ಅಂದರೆ ವಿಭಕ್ತಿ ಪ್ರತ್ಯಯವನ್ನೂ ಸೇರಿಸುವುದರ ಮೂಲಕ ಬಹುವಚನರೂಪಗಳನ್ನು ಸಾಧಿಸಲಾಗುತ್ತದೆ. ನಿರ್ದೇಶಕ ವಾಚಿಗಳಾಗಲೀ (ಆರ್ಟಿಕಲ್ಸ್) ಲಿಂಗ-ವಿವಿಕ್ಷೆಯ ವ್ಯವಸ್ಥೆಯಾಗಲೀ ಈ ಭಾಷೆಯಲ್ಲಿ ಇಲ್ಲ. ವಿಶೇಷಣ ನಾಮಪದದ ವಿಭಕ್ತಿಯೊಂದಿಗೆ ಹೊಂದಿಕೊಳ್ಳುತ್ತದೆಯೇ ಹೊರತು, ವಚನದೊಂದಿಗಲ್ಲ.

ಜಾರ್ಜಿಯನ್ ಭಾಷೆಯ ವೈಶಿಷ್ಟ್ಯ

ಜಾರ್ಜಿಯನ್ನಿನ ವೈಶಿಷ್ಟ್ಯ ಹಾಗೂ ವಿಭಿನ್ನತೆ ಕ್ರಿಯಾಪದದ ಕಾರ್ಯನಿರ್ವಹಣೆಯ ವಿಧಾನದಲ್ಲಿ ಗೋಚರಿಸುವುದು.

  1. ಎಲ್ಲ ಪುರುಷಗಳಲ್ಲಿಯೂ ಕ್ರಿಯಾಪದ ಒಂದೇ ರೂಪದಲ್ಲಿ ಬಳಕೆಗೆ ಬರುತ್ತದೆ; ಕರ್ತೃಪದ ಯಾವ ಪುರುಷಕ್ಕೆ ಸೇರಿದ್ದೆಂಬುದನ್ನು ಸೂಚಿಸಲು ಉತ್ತಮ ಮತ್ತು ಮಧ್ಯಮ ಪುರುಷಗಳಲ್ಲಿ ಪೂರ್ವ ಪ್ರತ್ಯಯಗಳನ್ನೂ ಪ್ರಥಮ ಪುರುಷದಲ್ಲಿ ಪದಾಂತ್ಯಗಳನ್ನೂ (ಎಂಡಿಂಗ್ಸ್) ಸೇರಿಸಲಾಗುತ್ತದೆ. ಉದಾಹರಣೆಗೆ, ಮೆವ್-ದ್ಸೆರ್=ನಾನು ಬರೆಯುತ್ತೇನೆ. ನೀನು ಬರೆಯುತ್ತೀಯೆ=ಶೆನ್-ದ್ಸೆರ್. ಅವನು ಬರೆಯುತ್ತಾನೆ=ಇಗಿ-ದ್ಸೆರ್. ಈ ಉದಾಹರಣೆಗಳು ಪುರುಷವಾಚಕ ಸರ್ವನಾಮಗಳಿಗೂ ಪೂರ್ವಪ್ರತ್ಯಯಗಳಿಗೂ ಯಾವುದೇ ಬಗೆಯ ವ್ಯುತ್ಪತ್ತಿ ಸಂಬಂಧವಿಲ್ಲವೆಂಬುದನ್ನು ಸ್ಪಷ್ಟಪಡಿಸುತ್ತದೆ. ಕರ್ಮಪದ ಮತ್ತು ಕರ್ತೃಪದಗಳ ನಡುವಣ ಸಂಬಂಧವನ್ನು ಸ್ಪಷ್ಟಪಡಿಸಲೂ ಕೆಲವು ಪೂರ್ವಪ್ರತ್ಯಯಗಳನ್ನು ಬಳಸಲಾಗುತ್ತದೆ. ನೀನು ನನಗೆ ಬರೆಯುತ್ತೀಯೆ=ಮ್-ದ್ಸೆರ್, ಅವನು ನಿನಗೆ ಬರೆಯುತ್ತಾನೆ=ಗ್-ದ್ಸೆರ್.
  2. ಧಾತು ಮತ್ತು ಪುರುಷವಾಚಕ ಪ್ರತ್ಯಗಳ ನಡುವೆ ಆಗಮವಾಗುವ ಸ್ವರ ಕರ್ತೃ ಮತ್ತು ಕರ್ಮಗಳ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ. ಉದಾಹರಣೆಗೆ ವಿ-ದ್ಸೆರ್=ನಾನು ನನಗಾಗಿ ಬರೆಯುತ್ತೇನೆ. ವು-ದ್ಸೆರ್=ನಾನು ಅವನಿಗಾಗಿ ಬರೆಯುತ್ತೇನೆ. ವರ್ತಮಾನ ಸಾಮಾನ್ಯ ಭೂತ ಮತ್ತು ಪೂರ್ಣಭೂತ ಎಂಬುದಾಗಿ ಕಾಲಗಳನ್ನು ವರ್ಗೀಕರಿಸಲಾಗಿದೆ.
  3. ವರ್ತಮಾನ ಕಾಲದಲ್ಲಿ ಕರ್ತೃಪದವನ್ನು ಪ್ರಥಮಾ ವಿಭಕ್ತಿಯಲ್ಲಿಯೂ ಕರ್ಮಪದವನ್ನೂ ಚತುರ್ಥಿ ವಿಭಕ್ತಿಯಲ್ಲಿಯೂ ಇರಿಸಲಾಗುತ್ತದೆ. ಸಾಮಾನ್ಯ ಭೂತಕಾಲದಲ್ಲಿ ಕರ್ಮಪದವನ್ನು ಪ್ರಥಮಾ ವಿಭಕ್ತಿಯಲ್ಲಿರಿಸಿ ಕರ್ತೃಪದವನ್ನು ಅಪ್ರತ್ಯಕ್ಷಕಾರಕವಾಗಿ ಇರಿಸಲಾಗುತ್ತದೆ.
  4. ಇತರ ಭಾಷೆಗಳಲ್ಲಿನ ಕರ್ಮಣಿ ಪ್ರಯೋಗದಂತೆ ವ್ಯವಹೃತವಾಗುವ ಈ ವಾಕ್ಯರಚನಾವಿಧಾನ ಕಾಕೇಷನ್ ಭಾಷೆಗಳ ವಿಶಿಷ್ಟ್ಯ ಲಕ್ಷಣವೂ ಹೌದು. ಪೂರ್ಣಭೂತಕಾಲದಲ್ಲಿ ಕರ್ಮಪದವನ್ನು ಪ್ರಥಮ ವಿಭಕ್ತಿಯಲ್ಲಿಯೂ ಕರ್ತೃಪದವನ್ನು ಚತುರ್ಥಿ ವಿಭಕ್ತಿಯಲ್ಲಿಯೂ ಇರಿಸಲಾಗುತ್ತದೆ.

ಸಾಹಿತ್ಯಕ ಹಿನ್ನೆಲೆ

ಕಾಕೇಷನ್ ಪರಿವಾರದ ಭಾಷೆಗಳ ನಡುವಣ ಸಂಬಂಧ ಇಂದಿಗೂ ಅಸ್ಪಷ್ಟವೂ ಅನಿರ್ದಿಷ್ಟವೂ ಆಗಿಯೇ ಉಳಿದಿದೆ. ಕಾಕಸಸ್ ಪರ್ವತವಲಯದಲ್ಲಿನ ಭಾಷಾ ವೈವಿಧ್ಯ ಹಾಗೂ ಸಂಕೀರ್ಣತೆ ಬೆರಗನ್ನುಂಟು ಮಾಡುತ್ತವೆ. ಪರ್ವತವಲಯದ ವಿಭಿನ್ನ ಭಾಗಗಳಲ್ಲಿ ಬೀಡುಬಿಟ್ಟಿರುವ ಕಿರಿಯ ಸಮುದಾಯಗಳ ಭಾಷೆಗಳು ಒಟ್ಟಿನಲ್ಲಿ ನೆರೆಹೊರೆಯ ಭಾಷೆಗಳಾಗಿದ್ದರೂ ಒಂದು ಸಮುದಾಯದ ಭಾಷೆ ಅರ್ಥವಾಗದಷ್ಟು ಮಟ್ಟಿಗೆ, ಅವುಗಳ ಸ್ವರೂಪ ಭಿನ್ನವಾಗಿದೆ. ರಚನೆಯ ದೃಷ್ಟಿಯಿಂದ ಇವು ಅಂಟುಭಾಷೆಗಳು ಮತ್ತು ಪ್ರಾತ್ಯಯಿಕ ಭಾಷೆಗಳ ನಡುವಣ ಹಂತವನ್ನು ಇವು ಪ್ರತಿನಿಧಿಸುತ್ತವೆ. ಕಾಕೇಷನ್ ಪರಿವಾರದ ಭಾಷೆಗಳಲ್ಲೆಲ್ಲ ಪ್ರಾಚೀನ ಸಾಹಿತ್ಯಿಕ ಪರಂಪರೆಯನ್ನು ಹೊಂದಿರುವ ಭಾಷೆಯೆಂದರೆ ಜಾರ್ಜಿಯನ್ ಮಾತ್ರವೆ. ಹೀಗಾಗಿ ಸ್ಪ್ಯಾನಿಯನ್, ಮಿಂಗ್ರೇಲಿಯನ್ ಮೊದಲಾದ ಭಾಷೆಗಳನ್ನಾಡುವ ಸಮುದಾಯಗಳಿಗೂ ಜಾರ್ಜಿಯನ್ ಭಾಷೆಯೇ ಸಾಹಿತ್ಯ ಹಾಗೂ ಶಿಕ್ಷಣದ ಮಾಧ್ಯಮವಾಗಿ ಪರಿಣಮಿಸಿದೆ.

ಉಲ್ಲೇಖ

ಜಾರ್ಜಿಯನ್ ಭಾಷೆ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಜಾರ್ಜಿಯನ್ ಭಾಷೆ ಜಾರ್ಜಿಯನ್ ಭಾಷಾ ಹಿನ್ನೆಲೆಜಾರ್ಜಿಯನ್ ಭಾಷೆ ಪ್ರಾಚೀನತೆಜಾರ್ಜಿಯನ್ ಭಾಷೆ ಯ ಲಿಪಿ ವ್ಯವಸ್ಥೆಜಾರ್ಜಿಯನ್ ಭಾಷೆ ವ್ಯಾಕರಣ ವ್ಯವಸ್ಥೆಜಾರ್ಜಿಯನ್ ಭಾಷೆ ಸಾಹಿತ್ಯಕ ಹಿನ್ನೆಲೆಜಾರ್ಜಿಯನ್ ಭಾಷೆ ಉಲ್ಲೇಖಜಾರ್ಜಿಯನ್ ಭಾಷೆen:Georgian language

🔥 Trending searches on Wiki ಕನ್ನಡ:

ಬ್ರಾಹ್ಮಣಯಜಮಾನ (ಚಲನಚಿತ್ರ)ತಾಳೀಕೋಟೆಯ ಯುದ್ಧಸೂರ್ಯರಾಷ್ಟ್ರೀಯ ಸ್ವಯಂಸೇವಕ ಸಂಘಪುರಂದರದಾಸಮಲಪ್ರಭಾ ನದಿಕರ್ನಾಟಕದಲ್ಲಿ ವನ್ಯಜೀವಿಧಾಮಗಳುಮತದಾನಭಾರತದ ಸಂವಿಧಾನ ರಚನಾ ಸಭೆಕನ್ನಡ ಗುಣಿತಾಕ್ಷರಗಳುಪ್ಯಾರಾಸಿಟಮಾಲ್ವ್ಯಂಜನಮೌರ್ಯ (ಚಲನಚಿತ್ರ)ಪು. ತಿ. ನರಸಿಂಹಾಚಾರ್ವೀರಗಾಸೆಕರ್ನಾಟಕದ ಕಲೆ ಮತ್ತು ಸಂಸ್ಕೃತಿಮಲಬದ್ಧತೆವಿಕ್ರಮಾದಿತ್ಯ ೬ತುಂಗಭದ್ರಾ ಅಣೆಕಟ್ಟುಹನುಮಾನ್ ಚಾಲೀಸಮೂಲಧಾತುಗಳ ಪಟ್ಟಿಗುಜರಾತಿನ ಇತಿಹಾಸಸಾಲ್ಮನ್‌ಸಂವಹನಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಜ್ಜರಿಕ್ರಿಕೆಟ್ದಶರಥರಕ್ಷಿತಾಭಾರತದ ನದಿಗಳುಶ್ರೀ ರಾಘವೇಂದ್ರ ಸ್ವಾಮಿಗಳುಸೇಬುಸಂಚಿ ಹೊನ್ನಮ್ಮಧರ್ಮಸ್ಥಳಭಾರತದ ರಾಷ್ಟ್ರೀಯ ಚಿಹ್ನೆಕರ್ನಾಟಕದ ಹೋಬಳಿಗಳುಕೇಂದ್ರ ಲೋಕ ಸೇವಾ ಆಯೋಗಕನ್ನಡದಲ್ಲಿ ಸಣ್ಣ ಕಥೆಗಳುರಾಮ್ ಮೋಹನ್ ರಾಯ್ಪರಶುರಾಮಕಡಲೇಕಾಯಿಮೂಕಜ್ಜಿಯ ಕನಸುಗಳು (ಕಾದಂಬರಿ)ಪಂಚ ವಾರ್ಷಿಕ ಯೋಜನೆಗಳುಪೆರಿಯಾರ್ ರಾಮಸ್ವಾಮಿಗಾಳಿಪಟ (ಚಲನಚಿತ್ರ)ಅಣ್ಣಯ್ಯ (ಚಲನಚಿತ್ರ)ಟೇಬಲ್ ಟೆನ್ನಿಸ್ಭಾರತದ ರಾಷ್ಟ್ರಗೀತೆಕರ್ನಾಟಕದ ಸಂಸ್ಕೃತಿಗ್ರಹವಿರೂಪಾಕ್ಷ ದೇವಾಲಯರಾವಣಜಾಗತಿಕ ತಾಪಮಾನ ಏರಿಕೆಎಚ್ ೧.ಎನ್ ೧. ಜ್ವರಅಮೇರಿಕ ಸಂಯುಕ್ತ ಸಂಸ್ಥಾನಮಾನವನ ಪಚನ ವ್ಯವಸ್ಥೆಸಂಘಟನೆಕರ್ನಾಟಕ ಐತಿಹಾಸಿಕ ಸ್ಥಳಗಳುಕರ್ನಾಟಕದ ಶಾಸನಗಳುಭಾರತದ ರಾಷ್ಟ್ರಪತಿಗಳ ಪಟ್ಟಿಅಜವಾನಮಸೂರ ಅವರೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಶಾತವಾಹನರುಕರ್ನಾಟಕದ ಇತಿಹಾಸಪಕ್ಷಿವಸಿಷ್ಠಲೆವ್ ಸೆಮೆನೊವಿಚ್ ವೈಗೋಟ್ಸ್ಕಿಗಳಗನಾಥಹೊಯ್ಸಳೇಶ್ವರ ದೇವಸ್ಥಾನಯೂಟ್ಯೂಬ್‌ದೆಹಲಿಒಗಟುವಿಜ್ಞಾನರಾಜ್‌ಕುಮಾರ್ನೈಸರ್ಗಿಕ ಸಂಪನ್ಮೂಲ🡆 More