ಭಾರತದ ರಾಷ್ಟ್ರೀಯ ಚಿಹ್ನೆ

ಭಾರತ ಸರ್ಕಾರವು ೧೯೫೦ ಜನವರಿ ೨೬ ರಂದು ಅಧಿಕೃತವಾಗಿ ಸಾರನಾಥದ, ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹವನ್ನು ತನ್ನ ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿತು.

ಚಿಹ್ನೆಯಲ್ಲಿ ಮೂರೆ ಮುಖ ಕಾಣಿಸಿದರು, ಲಾಂಛನವು ನಾಲ್ಕು ಸಿಂಹದ ಮುಖಗಳನ್ನು ಹೊಂದಿದ್ದು, ನಾಲ್ಕನೆಯ ಮುಖವು ಹಿಂಬದಿಯಲ್ಲಿರುವುದು.

ಭಾರತದ ರಾಷ್ಟ್ರೀಯ ಚಿಹ್ನೆ
ಭಾರತದ ರಾಷ್ಟ್ರೀಯ ಚಿಹ್ನೆ
Armigerಭಾರತ ಗಣರಾಜ್ಯ
ಸ್ವೀಕಾರ೨೬ ಜನವರಿ ೧೯೫೦
ಧ್ಯೇಯ"ಸತ್ಯಮೇವ ಜಯತೆ" (ಸಂಸ್ಕೃತ)
"ಸತ್ಯವೇ ಜಯಿಸುತ್ತದೆ"

("ಮುಂಡಕೋಪನಿಷತ್" ನಿಂದ ಬಂದಿದೆ, ಇದು ಹಿಂದೂ ವೇದದ ಒಂದು ಭಾಗವಾಗಿದೆ)

ಈ ಲಾಂಛನವು ಒಂದು ವೃತ್ತಾಕಾರದ ಹಾಸುಗಲ್ಲಿನ ಮೇಲೆ ಅಲಂಕರಿಸಿದ್ದು, ಓಡುತ್ತಿರುವ ಕುದುರೆ, ಏತ್ತು, ಆನೆ ಮತ್ತು ಸಿಂಹದ ಅಕೃತಿಗಳು ಧರ್ಮ ಚಕ್ರದ ಜೊತೆಯಲ್ಲಿ ಪರ್ಯಾಯವಾಗಿ ಹಾಸುಗಲ್ಲಿನ ಮೇಲೆ ಕೆತ್ತಲ್ಪಟ್ಟಿದೆ. ಇವುಗಳ ಜೊತೆಗೆ ಮುಂಡಕೋಪನಿಷತ್ ನಲ್ಲಿ ಉಲ್ಲೇಖಿಸಿರುವ "ಸತ್ಯಮೇವ ಜಯತೇ" ಪದವನ್ನು ದೇವನಾಗರಿ ಲಿಪಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಅಶೋಕ ಸ್ತಂಭ ಚಿತ್ರದ ಅಂಚೆ ಚೀಟಿಯ ಕಥೆ

೧೯೪೭ರ ಆಗಸ್ಟ ೧೫ರಂದು ಭಾರತ ಸ್ವತಂತ್ರವಾದಾಗ ಆ ಸಂತಸವನ್ನು ಅಂಚೆಚೀಟಿಗಳ ಮೂಲಕ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಆಗ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡುವ ಸಂವಿಧಾನಿಕ ಸಂಸ್ಥೆ ಇನ್ನೂ ಅಸ್ತಿತ್ವದಲ್ಲಿ ಬಂದಿರಲಿಲ್ಲ. ಹೀಗಾಗಿ ಸ್ವತಂತ್ರ ಭಾರತದ ಮೊದಲ ಅಂಚೆಚೀಟಿ ಬಿಡುಗಡೆಯಾಗಲು ಸುಮಾರು ೯೯ ದಿನಗಳ ಕಾಲ ಕಾಯಬೇಕಾಯಿತು! ಹೀಗೆ ಮೊದಲ ಅಂಚೆಚೀಟಿಯು ತ್ರಿವರ್ಣ ಧ್ವಜವನ್ನು ಹೊತ್ತು ೧೯೪೭ರ ನವಂಬರ ೨೧ರಂದು ಬಿಡುಗಡೆಯಾಯಿತು. ಅದಾಗಿ ೨೪ ದಿನಗಳ ಬಳಿಕ ಡಿಸೆಂಬರ ೧೫ರಂದು ಭಾರತದ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭದ ಮೇಲಿರುವ ಚತುರ್ಮುಖ ಸಿಂಹಗಳ ಚಿತ್ರವನ್ನು ಹೊತ್ತು ಎರಡನೆಯ ಅಂಚೆಚೀಟಿ ಹೊರಬಂದಿತು.

ಈ ಅಂಚೆಚೀಟಿಗಳಲ್ಲಿ ಬಳಸಿದ ಚಿತ್ರವು ಭಾರತದ ಭಾರತದ ರಾಷ್ಟ್ರೀಯ ಚಿಹ್ನೆಯದ್ದಾಗಿದೆ. ಮೌರ್ಯ ವಂಶದ ಚಕ್ರವರ್ತಿ ಸಾಮ್ರಾಟ ಅಶೋಕನು ವಾರಣಾಸಿಯ ಬಳಿಯ ಸಾರಾನಾಥದಲ್ಲಿ ಸ್ಥಾಪಿಸಿದ ಕಂಬದ ತುದಿಯಲ್ಲಿನ ನಾಲ್ಕು ಮುಖದ ಸಿಂಹದ ಚಿತ್ರವನ್ನು ನಮ್ಮ ರಾಷ್ಟ್ರಚಿಹ್ನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಮೌರ್ಯ ಸಾಮ್ರಾಟ ಚಂದ್ರಗುಪ್ತನ ಮೊಮ್ಮಗನೂ, ಬಿಂದುಸಾರನ ಮಗನೂ ಆಗಿದ್ದ ಅಶೋಕನು ಕಳಿಂಗ ರಾಜ್ಯದ ಮೇಲೆ ದಂಡೆತ್ತಿಹೋದಾಗ ನಡೆದ ಲಕ್ಷಾಂತರ ಸೈನಿಕರ ಮಾರಣಹೋಮ, ಹರಿದ ನೆತ್ತರಿನ ಕೋಡಿಯನ್ನು ಕಂಡು ಜಿಗುಪ್ಸೆಗೊಂಡು ಬೌದ್ಧಮತವನ್ನು ಸ್ವೀಕರಿಸುತ್ತಾನೆ. ತಾನು ನಂಬಿದ ತತ್ವಗಳನ್ನು ಪ್ರಸಾರಮಾಡಲು ಅನೇಕ ಶಿಲಾಶಾಸನಗಳನ್ನೂ, ಸ್ಥೂಪಗಳನ್ನೂ, ಕಂಬಗಳನ್ನೂ ಸ್ಥಾಪಿಸುತ್ತಾನೆ.

ನೋಡಿ

ಉಲ್ಲೇಖಗಳು

Tags:

ಜನವರಿ ೨೬ಭಾರತ ಸರ್ಕಾರ೧೯೫೦

🔥 Trending searches on Wiki ಕನ್ನಡ:

ರಾಮ್ ಮೋಹನ್ ರಾಯ್ಮಹಾವೀರದಕ್ಷಿಣ ಕನ್ನಡಬೀಚಿದೆಹಲಿಹನುಮಂತಭಾರತದ ರಾಷ್ಟ್ರಪತಿಗಳ ಪಟ್ಟಿಸಮಾಜ ವಿಜ್ಞಾನಕೊಡಗಿನ ಗೌರಮ್ಮಧಾನ್ಯಏಷ್ಯಾಮಂಕುತಿಮ್ಮನ ಕಗ್ಗಆರ್ಯಭಟ (ಗಣಿತಜ್ಞ)ಚೆನ್ನಕೇಶವ ದೇವಾಲಯ, ಬೇಲೂರುಯೋಗಶತಮಾನಜಿ.ಎಸ್.ಶಿವರುದ್ರಪ್ಪಶೂದ್ರ ತಪಸ್ವಿಬಂಡಾಯ ಸಾಹಿತ್ಯಸಂಪತ್ತಿಗೆ ಸವಾಲ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಚಂದ್ರಗುಪ್ತ ಮೌರ್ಯಕನ್ನಡದಲ್ಲಿ ವಚನ ಸಾಹಿತ್ಯಬಾದಾಮಿ ಗುಹಾಲಯಗಳುಬಾಬರ್ವೃದ್ಧಿ ಸಂಧಿಹವಾಮಾನಅಶೋಕನ ಶಾಸನಗಳುತ್ರಿಶೂಲಸಿಂಧನೂರುಪ್ರಜಾವಾಣಿಪೊನ್ನಒಂದನೆಯ ಮಹಾಯುದ್ಧಮೈಸೂರು ದಸರಾಅರಸೀಕೆರೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಪ್ರಾಥಮಿಕ ಶಿಕ್ಷಣರಕ್ತಪಿಶಾಚಿಬೆಟ್ಟದ ನೆಲ್ಲಿಕಾಯಿಕರ್ನಾಟಕ ವಿಧಾನ ಪರಿಷತ್ಚಂದ್ರಯಾನ-೩ಮೆಕ್ಕೆ ಜೋಳದಶಾವತಾರಚಿಕ್ಕಮಗಳೂರುಜನಪದ ಕ್ರೀಡೆಗಳುವಿಜಯನಗರಭರತನಾಟ್ಯಶ್ರೀ ರಾಮ ನವಮಿಮೋಕ್ಷಗುಂಡಂ ವಿಶ್ವೇಶ್ವರಯ್ಯಅಸಹಕಾರ ಚಳುವಳಿಚನ್ನವೀರ ಕಣವಿಗಾಂಧಿ ಜಯಂತಿಕನ್ನಡಭಾರತದ ಸಂವಿಧಾನ ರಚನಾ ಸಭೆಗೋಕಾಕ್ ಚಳುವಳಿಜಶ್ತ್ವ ಸಂಧಿದಿವ್ಯಾಂಕಾ ತ್ರಿಪಾಠಿಸುಧಾ ಚಂದ್ರನ್ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಗುಡುಗುಜೋಳಶ್ರೀ ರಾಮಾಯಣ ದರ್ಶನಂಮಹಾತ್ಮ ಗಾಂಧಿಗಾದೆಕರ್ನಾಟಕಭಾರತದ ಬುಡಕಟ್ಟು ಜನಾಂಗಗಳುಗರ್ಭಧಾರಣೆಮದುವೆಕೃಷ್ಣಛತ್ರಪತಿ ಶಿವಾಜಿಬಹಮನಿ ಸುಲ್ತಾನರುಮಂಜಮ್ಮ ಜೋಗತಿಚಿತ್ರದುರ್ಗಪರಿಸರ ಕಾನೂನುಭಾರತದಲ್ಲಿ ಬಡತನಚಂಪೂನರೇಂದ್ರ ಮೋದಿ🡆 More