ಶ್ಯಾಮಲಾ ಪ್ರಕಾಶ್

ಮುಂಬಯಿ ನಗರದಲ್ಲಿ ’ವಿದುಷಿ ಶ್ಯಾಮಲಾ ಪ್ರಕಾಶ್,’ ಯೆಂದೇ ಕರ್ನಾಟಕ-ಸಂಗೀತ ಪ್ರೇಮಿಗಳಿಗೆ ಪರಿಚಿತವಾಗಿರುವ ಶ್ಯಾಮಲಾ ಪ್ರಕಾಶ್ ಅವರು, ಕನ್ನಡ ಸಾಹಿತ್ಯ, ಹಾಗೂ ನಾಟಕಗಳಲ್ಲಿ ಸದಭಿರುಚಿಯನ್ನು ಹೊಂದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತವಲ್ಲದೆ, ಅವರು ಅನೇಕ ಕನ್ನಡ ಹಾಗೂ ತುಳು ಭಾಷೆಯ ನಾಟಕಗಳಿಗೆ ಸಂಗೀತ ನಿರ್ದೇಶಿಸುವ ಕೈಕಂರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೪ನೇ ವಯಸ್ಸಿನಲ್ಲೇ ಸಂಗೀತದ ಬಗ್ಗೆ ವಿಶೇಷ ಒಲವು ಅವರ ಸುಪ್ತ-ಮನಸ್ಸಿನಲ್ಲಿ ಜಾಗೃತ ವಾಯಿತು. ಶ್ಯಾಮಲಾ ಪ್ರಕಾಶ್,ಮೈಸೂರ್ ಅಸೋಸಿಯೇಷನ್, ಮುಂಬಯಿ,ಕರ್ನಾಟಕ ಸಂಘ, ಮುಂಬಯಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಡಾ.ಶ್ಯಾಮಲಾ ಪ್ರಕಾಶ್
ಶ್ಯಾಮಲಾ ಪ್ರಕಾಶ್
ಸಿತಾರ್ ವಾದಕ ಅಬ್ದುಲ್ ಹಲೀಂ ಜಾಫರ್ ಖಾನ್ ಅವರೊಂದಿಗೆ ಶ್ಯಾಮಲಾ
Born
ಶ್ಯಾಮಲ

Occupationಗಾಯಕಿ
Parent(s)ಜಿ.ಕೆ. ಮಂಜುನಾಥ್ಸೀತಾಲಕ್ಷ್ಮಿ

ವಿದುಷಿ, ಶ್ಯಾಮಲಾ ಪ್ರಕಾಶ್ ರ ಸ್ಥೂಲ ಪರಿಚಯ

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ, ಅರಕಲಗೂಡಿನಲ್ಲಿ ಶ್ಯಾಮಲಾ ಅವರು, ಜಿ.ಕೆ. ಮಂಜುನಾಥ್ ಮತ್ತು ಸೀತಾಲಕ್ಷ್ಮಿ ದಂಪತಿಗಳ ಪುತ್ರಿಯಾಗಿ ಜನಿಸಿದರು. ಅಂದಿನ ಕಾಲದ ಸುಪ್ರಸಿದ್ಧ ಗುಬ್ಬಿವೀರಣ್ಣನವರ ನಾಟಕ-ಕಂಪೆನಿಯಲ್ಲಿ ಶ್ಯಾಮಲಾರ ಅಜ್ಜ, ಕೃಷ್ಣಪ್ಪ ನವರು ಸ್ವತಃ ನಟರಲ್ಲದೆ ಹಾಡುಗಾರರೂ ಆಗಿದ್ದರು. ಮನೆಯಲ್ಲಿ ಸಂಗೀತದ ವಾತಾವರಣವಿದ್ದುದರಿಂದ, ಸಹಜವಾಗಿ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ಶ್ಯಾಮಲರವರು, ಶ್ರೀ ಎಂ. ಆರ್. ರಾಮಮೂರ್ತಿಯೆಂಬ ಗುರುಗಳಿಂದ ಸಂಗೀತಪಾಠವನ್ನು ಅಭ್ಯಸಿಸಿದರು. ಮೈಸೂರಿನ ಗಾನ ಕಲಾಶ್ರೀ ಡಾ.ಸುಕನ್ಯಾ ಪ್ರಭಾಕರ್ , ಮುಂಬಯಿಯ ಪಲ್ಲವಿ ವಿಜಯನಾಥನ್, ಟಿ. ಆರ್. ಬಾಲಾಮಣಿಯವರಲ್ಲಿ ಉನ್ನತ ಸಂಗೀತಾಭ್ಯಾಸ ಪಡೆದು, ಶ್ಯಾಮಲಾ ಅನೇಕ ಪ್ರೌಢ ಸಂಗೀತ ಕಮ್ಮಟಗಳಲ್ಲಿ ಪ್ರಸಿದ್ಧ ಗಾನ ಕಲಾಕಾರರಾದ, ಸಂಗೀತ ಕಲಾನಿಧಿ, ’ಆರ್. ಕೆ.ಶ್ರೀಕಂಠನ್’, ಗಾನಕಲಾಶ್ರೀ ಡಾ. ’ಟಿ.ಎಸ್. ಸತ್ಯವತಿ’, ’ಎಂ.ಎಸ್. ಶೀಲಾ’, ಗಾನಕಲಾಭೂಷಣ,’ಆರ್. ಕೆ. ಪದ್ಮನಾಭ ,’ ಮೊದಲಾದ ವಿದ್ವಾಂಸರಿಂದ ಶಿಕ್ಷಣ ಪಡೆದಿರುತ್ತಾರೆ. ಜೂನಿಯರ್-ಸೀನಿಯರ್ ಸಂಗೀತ ಪರೀಕ್ಷೆಗಳಲ್ಲಿ ,ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ ಶ್ಯಾಮಲಾ ಅವರು, ೨೦೦೫ ರಲ್ಲಿ ’ಸಂಗೀತ-ವಿದುಷಿ,’ ಪದವಿಗೆ ಅರ್ಹರಾದರು. ದಾಸಸಾಹಿತ್ಯದಲ್ಲಿ ಹೆಚ್ಚಿನ ಒಲವಿದ್ದ, ಶ್ಯಾಮಲಾ ರವರು, 'ಸೀನಿಯರ್ ಗ್ರೇಡ್ ,'ನಲ್ಲಿ ಅತ್ಯಂತ ಹೆಚ್ಚು ಅಂಕಗಳಿಂದ ಉತ್ತೀರ್ಣರಾದರು. ರಾಜ್ಯಕ್ಕೇ 'ಎರಡನೆಯ ರ್ರ್ಯಾಂಕ್ ಗಳಿಸಿ,’ಸಂಸ್ಕೃತ ಭಾಷೆಯಲ್ಲಿ ಕಾವ್ಯಸಾಹಿತ್ಯ ಪದವಿ ',ಯನ್ನು ಗಳಿಸಿದರು. 'ಗಮಕ ಕಲಾಪರಿಷತ್ತಿನ,' ’ಕಾಜಾಣ-ಪಾರೀಣ,’ ಪದವಿಯ ಹೆಗ್ಗಳಿಕೆ ಇವರದು. ಶ್ಯಾಮಲಾ ಪ್ರಕಾಶ್,ಅವರು ಪ್ರಸಕ್ತ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಅಧ್ಯಯನದಲ್ಲಿ ನಿರತರಾಗಿದ್ದಾರೆ.

’ದ ಕೆಮ್ತೂರು ಸ್ಮಾರಕ ತುಳು ನಾಟಕ ಸ್ಪರ್ಧೆ,’ ಯಲ್ಲಿ ಸಂಗೀತ ಸಂಯೋಜನೆ

ಉಡುಪಿಯಲ್ಲಿ, ೨೦೦೭ ರಲ್ಲಿ ಆಯೋಜಿಸಿದ ’ದ ಕೆಮ್ತೂರು ಸ್ಮಾರಕ ತುಳು ನಾಟಕ ಸ್ಪರ್ಧೆ,’ ಯಲ್ಲಿ ಮುಂಬಯಿಯ ಕನ್ನಡ ರಂಗಭೂಮಿಯ ಪ್ರಖ್ಯಾತ ನಿರ್ದೇಶಕರಾದ ಭರತ್ ಕುಮಾರ್ ಪೊಲಿಪು ಅವರ ನಿರ್ದೇಶನದ ತುಳು ನಾಟಕ ’ಮಣ್ಣದ ಲೆಪ್ಪು’ವಿಗೆ ಅವರು ನೀಡಿದ ಅತ್ಯುತ್ತಮ ಸಂಗೀತವನ್ನು ಮೆಚ್ಚಿ ’ಪ್ರಥಮ ಬಹುಮಾನ ,’ ವನ್ನು ಪಡೆದಿರುತ್ತಾರೆ. ಶ್ಯಾಮಲಾ ನಂತರ, 'ಉಡುಪಿ, ಬೆಂಗಳೂರು, ಕಾಸರಗೋಡು, ದೆಹಲಿ, ಹಾಗೂ ಮುಂಬಯಿನಗರ 'ಗಳಿಂದ ಬಂದ ಆಮಂತ್ರಣವನ್ನು ಸ್ವೀಕರಿಸಿ, ತಮ್ಮ ವಿದ್ವತ್ಪೂರ್ಣ ಕಚೇರಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಸಂಗೀತವಲ್ಲದೆ, ಯಾವುದೇ ವಿಷಯಗಳ ಬಗ್ಗೆ ಅತ್ಯಂತ ಆಳವಾಗಿ ಅಭ್ಯಾಸಮಾಡಿ, ನಿಖರವಾಗಿ, ಮಾಹಿತಿಗಳನ್ನು ಒದಗಿಸಿ ಬರೆಯುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಸ್ನೇಹ ಸಂಬಂಧ,’ ಮಾಸಿಕ ಪತ್ರಿಕೆಯಲ್ಲಿನ ’ನಾದೋಪಾಸನ’ ಅಂಕಣ

ಮುಂಬಯಿ -ಕರ್ನಾಟಕ ಸಂಘ ಹೊರ ತರುತ್ತಿರುವ, ಮಾಸಿಕ ಪತ್ರಿಕೆ, ’ಸ್ನೇಹ ಸಂಬಂಧ,’ ದಲ್ಲಿ, ಇಂದಿನ ಸಂಗೀತ -ದಿಗ್ಗಜರಾಗಿರುವ ಹಲವಾರು ಶ್ರೇಷ್ಠ ಕಲಾವಿದರನ್ನು ಪರಿಚಯಿಸುವ ಮತ್ತು ಅವರ ಶೈಲಿಗಳನ್ನು ಸುಲಲಿತವಾಗಿ ವಿಶ್ಲೇಷಿಸುವ ಮಾಹಿತಿ ದರ್ಶನ, ’ನಾದೋಪಾಸನ,’ಎಂಬ ಶೀರ್ಷಿಕೆಯ ಅಡಿಯಲ್ಲಿ ಅತ್ಯಂತ ಸುಂದರವಾಗಿ ಹೊರ ಹೊಮ್ಮಿಸುತ್ತಿದ್ದಾರೆ. ಆಗಸ್ಟ್, ೨೦೦೯ ರ 'ಸ್ನೇಹಸಂಬಂಧ,' ಮಾಸಿಕದಲ್ಲಿ ಬರೆದಿರುವ ಲೇಖನ, "ಇನ್ನಿಲ್ಲದ ಗಾನಗಂಗೆ ಗಂಗೂಬಾಯಿ ಹಾನಗಲ್,'ಒಂದು ಅತ್ಯಂತ ಸುಂದರ ಹಾಗೂ ನೈಜ-ವ್ಯಕ್ತಿಚಿತ್ರದ ದರ್ಶನವಾಗಿದೆ. ಇದು ಶ್ಯಾಮಲಾ ಪ್ರಕಾಶ್ ಅವರು, 'ಗಂಗಜ್ಜಿ,' ಗೆ ಸಲ್ಲಿಸಿದ 'ಅದ್ಭುತ ಶ್ರದ್ಧಾಂಜಲಿ,' ಯೂ ಹೌದು. ಅದೇ ಸಂಚಿಕೆಯಲ್ಲಿ ಬರೆದ, ಮತ್ತೊಂದು ಶ್ರಾವಣ ಮಾಸದ ಪ್ರಯುಕ್ತ ಬರೆದ ವಿಶೇಷ ಲೇಖನ, 'ಶ್ರಾವಣ ಬಂತು ಶ್ರಾವಣ ,' ಓದುಗರಿಗೆ ರಸಗವಳವಾಗಿದೆ. ಹೀಗೆ ಶ್ಯಾಮಲಾ ಪ್ರಕಾಶ್ ಅವರು ನಿಧಾನವಾಗಿ ಮೆಟ್ಟಿಲು ಮೆಟ್ಟಿಲು ಮೇಲೇರುತ್ತ, ತಮ್ಮ ವ್ಯಕ್ತಿತ್ವದ ಮತ್ತು ಕರ್ನಾಟಕ ಸಂಗೀತ, ಹಾಗೂ ಅದನ್ನು ಅಭಿವ್ಯಕ್ತಿಸುವ ತಮ್ಮ ಪ್ರತಿಭೆಯ ಹಲವು ವಿಧಾನಗಳನ್ನು ಮನೋಜ್ಞವಾಗಿ ನೀಡುತ್ತಾ ಬಂದಿದ್ದಾರೆ.

ಕೃಷ್ಣಂ ವಂದೇ ಹಾಡುಗಾರಿಕೆಯ ಅಡಕಮುದ್ರಿಕೆ

ಶ್ಯಾಮಲಾಪ್ರಕಾಶ್, 'ಕೃಷ್ಣಂ ವಂದೇ ಎಂಬ ಧ್ವನಿಮುದ್ರಿಕೆ' ಯನ್ನು ಬಿಡುಗಡೆ ಮಾಡಿದ್ದಾರೆ. ೨೦೦೯ ರ, ಆಗಸ್ಟ್ ೨೬, ರಂದು ’ಕೃಷ್ಣಂ ವಂದೇ ಸಿ.ಡಿ ,’ಬಿಡುಗಡೆಯ ಸಮಾರಂಭವು, ಕರ್ನಾಟಕ ಸಂಘದ, ’ಡಾ. ವಿಶ್ವೇಶ್ವರಯ್ಯ ಸಭಾಂಗಣ,’ ದಲ್ಲಿ ಜರುಗಿದ ಸಮಯದಲ್ಲಿ, ಸುಪ್ರಸಿದ್ಧ ಸಿತಾರ್ ವಾದಕ, ಪದ್ಮಭೂಷಣ ’ಅಬ್ದುಲ್ ಹಲೀಂ ಜಾಫರ್ ಖಾಂ,’ ಅವರ ಹಸ್ತದಿಂದ, ಸಿ.ಡಿ.ವಿಮೋಚನಾ ಕಾರ್ಯಕ್ರಮ ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನು ಮಹಾರಾಷ್ಟ್ರ ಸರಕಾರದ ಸಂಸ್ಕೃತಿ ಇಲಾಖೆಯ ನಿರ್ದೇಶಕ, ’ಶ್ರೀ. ಅಜಯ್ ಅಂಬೇಕರ್,'ಅವರು ವಹಿಸಿದ್ದರು. ಅತಿಥಿಯಾಗಿ, ’ಅಬುದಾಬಿ ಕರ್ನಾಟಕ ಸಂಘದ ಸಂಚಾಲಕ’, ’ಮನೋಹರ ತೊನ್ಸೆ’ ಉಪಸ್ಥಿತರಿದ್ದರು.

'ವಚನ ಸಂಗೀತ ಕಾರ್ಯಕ್ರಮ' ಬೆಂಗಳೂರಿನಲ್ಲಿ

'ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ'ದಲ್ಲಿ 'ಬೆಂಗಳೂರಿನ ಬಸವ ವೇದಿಕೆ'ಯವರು, ೭, ಜುಲೈ, ೨೦೧೦ ರಂದು ಆಯೋಜಿಸಿದ್ದ 'ಬಸವ ಜಯಂತಿ'ಯ ಸಮಾರಂಭದಲ್ಲಿ ಮುಂಬಯಿನ ಸುಪ್ರಸಿದ್ಧ ವಿದುಷಿ, ಶ್ರೀಮತಿ, ಶ್ಯಾಮಲಾ ಪ್ರಕಾಶ್ ರವರು, ಸುಮಾರು ಒಂದೂವರೆ ತಾಸು 'ವಿವಿಧ ವಚನ'ಗಳನ್ನು ಪ್ರಸ್ತುತ ಪಡಿಸಿದರು. ಈ ಸಮಾರಂಭದ ಅತಿಥಿಯಾಗಿ 'ಇನ್ ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ, 'ಡಾ.ಸುಧಾ ಮೂರ್ತಿ'ಯವರು ಉಪಸ್ಥಿತರಿದ್ದು 'ಶ್ಯಾಮಲಾ 'ರವರನ್ನು ಶ್ಲಾಘಿಸಿ ಅಭಿನಂದಿಸಿದರು. ಸಮಾರಂಭದಲ್ಲಿ ಹಾಜರಿದ್ದ ವರಲ್ಲಿ ರಂಗ-ತಜ್ಞೆ 'ಬಿ.ಜಯಶ್ರೀ',ಸಾಹಿತಿ. 'ಜಿ.ಎಸ್.ಸಿದ್ಧಲಿಂಗಯ್ಯ', ಸಚಿವರಾದ 'ಆರ್.ಅಶೋಕ್', 'ಬಸವರಾಜ ಬೊಮ್ಮಾಯಿ' ಪ್ರಮುಖರು. ಅಧ್ಯಕ್ಷತೆಯನ್ನು 'ಡಾ.ಸಿ.ಸೋಮಶೇಖರ್' ವಹಿಸಿದ್ದರು. 'ಕೋಡಿಮಠ ಮಹಾಸಂಸ್ಥಾನ ಅರಸೀಕೆರೆ ಮಠಾಧೀಶ' 'ಶ್ರೀ.ಶಿವಾನಂದ ಶಿವಯೋಗಿರಾಜೇಂದ್ರ ಮಹಾಸ್ವಾಮಿ'ಗಳ ದಿವ್ಯಸನ್ನಿಧಿಯಲ್ಲಿ ಸಂಗೀತ ಕಾರ್ಯಕ್ರಮ ಕೊನೆಗೊಂಡಿತು.

ಸನ್,೨೦೧೧ ರಲ್ಲಿ

೨೦೧೧ ರಲ್ಲಿ ಬೆಂಗಳೂರಿನಲ್ಲಿ ಮೂರು ಸಂಗೀತ ಕಚೇರಿಗಳನ್ನು ಕೊಟ್ಟರು.

  1. ಮೊದಲನೆಯ ಸಂಗೀತ ಕಚೇರಿ, ತಾ:೮-೫-೨೦೧೧ ರಂದು, 'ಶ್ರೀ.ಶಂಕರ ಜಯಂತೀ ಮಹೋತ್ಸ'ವದ ಅಂಗವಾಗಿ 'ರಾಜಾಜಿನಗರದ ಬಾಲಮೋಹನ ವಿದ್ಯಾಮಂದಿರ' ದಲ್ಲಿ, 'ಬೆಂಗಳೂರಿನ ಬೊಬ್ಬೂರು ಕಮ್ಮೆ ಸೇವಾ ಸಮಿತಿಯ ಆಶ್ರಯ'ದಲ್ಲಿ ನಡೆಯಿತು.
  2. ಎರಡನೆಯ ಸಂಗೀತ ಕಚೇರಿ, ತಾ: ೨೦.೫.೨೦೧೧ ರಂದು ,ಬೆಂಗಳೂರಿನ ಉಪನಗರ, 'ಜಾಲಹಳ್ಳಿ ಬೆಲ್ ಕಾಲೋನಿಯ ಗಣಪತಿ ದೇವಸ್ಥಾನ'ದಲ್ಲಿ; ಇದನ್ನು ಪ್ರಸಿದ್ಧ 'ರಾಗ ಸುಧಾಲಯ ಚಾರಿಟಬಲ್ ಟ್ರಸ್ಟ್' ಪ್ರಾಯೋಜಿಸಿದ್ದರು.
  3. ಮೂರನೆಯ ಸಂಗೀತ ಕಚೇರಿ : ತಾ: ೨೬.೫.೨೦೧೧ ರಂದು, ಬೆಂಗಳೂರು ಉಪನಗರದ 'ಮಾಗಡಿ ರಸ್ತೆಯ, ಶ್ರೀ ರಾಘವೇಂದ್ರ ಸ್ವಾಮಿ ಮಠ'ದಲ್ಲಿ ಜರುಗಿತು.

'ನಾದೋಪಾಸನ ಕೃತಿಯ ಬಿಡುಗಡೆ'

'ಮುಂಬಯಿನ ವಿದೂಷಿ, ಶ್ಯಾಮಲಾ ಪ್ರಕಾಶ್', ದೇಶದ ಶ್ರೇಷ್ಠ ಸಂಗೀತ ಶಾಸ್ತ್ರಜ್ಞರ ಬಗ್ಗೆ, ಹಾಗೂ ಸಂಗೀತ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಹಲವಾರು ಕೃತಿಗಳ ಬಗ್ಗೆ, ಆಳವಾದ ಅಭ್ಯಾಸ ಮಾಡಿ, 'ಮುಂಬಯಿ ಕರ್ನಾಟಕ ಸಂಘ'ದವರು ಪ್ರಕಟಿಸುತ್ತಿರುವ ಸ್ನೇಹಸಂಬಂಧ ಪತ್ರಿಕೆಯಲ್ಲಿ 'ನಾದೋಪಾಸನ' ವೆಂಬ ಅಂಕಣದಲ್ಲಿ ಬರೆಯುತ್ತಾ ಬಂದಿದ್ದಾರೆ. ಇವುಗಳಿಂದ ಆಯ್ದ ಕೃತಿಗಳನ್ನು ಒಳಗೊಂಡ ಚೊಚ್ಚಲ ಪುಸ್ತಕವನ್ನು ಅವರು ರಚಿಸಿದ್ದಾರೆ. ಆ ಕೃತಿಯನ್ನು ಡಾ.ಎ.ವಿ ಪ್ರಸನ್ನ,ಅವರು ೨೦೧೧ ರ, ನವೆಂಬರ್, ೧೨, ಶನಿವಾರದಂದು 'ಸಮರಸ ಭವನ'ದಲ್ಲಿ ಆಯೋಜಿಸಲ್ಪಟ್ಟ ಸಮಾರಂಭದಲ್ಲಿ ಆಹ್ವಾನಿತರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

  • ಬಾಲ್ಯದಲ್ಲೇ ಸಂಗೀತಮಯವಾದ ಸುಸಂಸ್ಕೃತವಾದ ಮನೆಯ ಪರಿಸರದಲ್ಲಿ ಬೆಳೆದ 'ಶ್ಯಾಮಲಾ ಪ್ರಕಾಶ್, ಒಬ್ಬ 'ಪ್ರಬುದ್ಧ ಗಾಯಕಿ'ಯಾಗಿ ಮುಂಬಯಿನ ಜನರಿಗೆ ಚಿರಪರಿಚಿತರಾಗಿದ್ದಾರೆ.
  • ಎಲ್ಲಾ ಪ್ರಕಾರದ ಸಂಗೀತಜ್ಞರ ಬಗ್ಗೆ ತಿಳಿಯುವ ಅಸ್ಥೆಯನ್ನು ಮೈಗೂಡಿಸಿಕೊಂಡಿರುವ 'ಶ್ಯಾಮಲಾ', ಆಳವಾದ ಅಧ್ಯಯನ, ಚಿಂತನೆ, ಪೂರ್ವಸಿದ್ಧತೆಗಳಿಂದ 'ಇಂತಹ ಮೌಲಿಕ ಕೃತಿ'ಯೊಂದನ್ನು ಹೊರತರಲು ಸಾಧ್ಯವಾಗಿದೆ.
  • ಮುಂಬಯಿನ ಹಿರಿಯ ಸಂಘಟಕ ಮತ್ತು ಗೌರವ ಅತಿಥಿ, ಎಚ್. ಬಿ,ಎಲ್.ರಾವ್, ಮತ್ತೊಬ್ಬ ಪ್ರಭಾವೀ ಸಂಘಟಕ, ಕೆ.ಮಂಜುನಾಥಯ್ಯ, ಓಂದಾಸ ಕಣ್ಣಂಗಾರ್, ಡಾ.ಭರತ್ ಕುಮಾರ್ ಪೊಲಿಪು, ವಿದುಷಿ ಶ್ಯಾಮಲಾ ರಾಧೇಶ್, ಮುಂತಾದವರು, ಆಹ್ವಾನಿತ ಗಣ್ಯರಲ್ಲಿ ಪ್ರಮುಖರು.
  • ಬಿ.ಜಿ.ನಾಯಕ್ ಅಧ್ಯಕ್ಷತೆಯಲ್ಲಿ ಸಾಧ್ಯವಾದ ಸಮಾರಂಭದಲ್ಲಿ, ಸಂಗೀತಾಸಕ್ತರನ್ ಸಮ್ಮುಖದಲ್ಲಿ.

ಮುಂಬಯಿನ ಪ್ರಥಮ ಅನುಭಾವ ಸಾಹಿತ್ಯ ಸಮ್ಮೇಳನ ಹಾಗೂ ವಿಚಾರ ಗೋಷ್ಠಿ

'ಕನ್ನಡ ಸಾಹಿತ್ಯ ಪರಿಷತ್ತು', ಮತ್ತು 'ಮಹಾರಾಷ್ಟ್ರ ಘಟಕ'ದ ಆಶ್ರಯದಲ್ಲಿ ಸನ್, ೨೦೧೨ ರ, ಸೆಪ್ಟೆಂಬರ್, ೧೫, ೧೬ ರಂದು, ಪ್ರಪ್ರಥಮ ಬಾರಿ, 'ಮುಂಬಯಿನ ಬಿಲ್ಲವರ ಅಸೋಸಿಯೇಷನ್ ಸಭಾಗೃಹ'ದಲ್ಲಿ ಜರುಗಿದ ಸಮ್ಮೇಳನದ ಮೊದಲನೆಯ ದಿನದ ಕಡೆಯ ಗೋಷ್ಠಿಯಲ್ಲಿ ಪ್ರಾತ್ಯಕ್ಷಿಕೆಯ ನೆರವಿನಿಂದ ಬಹಳ ಮಾಹಿತಿಪೂರ್ಣ ಹಾಗೂ ಮಹತ್ವದ ಉಪನ್ಯಾಸವನ್ನು ವಿದೂಷಿ 'ಶ್ಯಾಮಲಾ ಪ್ರಕಾಶ್' ಬಹಳ ಪರಿಣಾಮಕಾರಿಯಾಗಿ, ಮಂಡಿಸಿದರು. 'ಬಿಲ್ಲವರ ಅಸೋಸಿಯೇಷನ್,' 'ಮುಂಬಯಿ ಕರ್ನಾಟಕ ಸಂಘ', 'ಮುಂಬಯಿ ವಿಶ್ವವಿದ್ಯಾಲಯ'ದ ವಿಭಾಗ ಜೊತೆಗೂಡಿ ನಿರ್ವಹಿಸಿದ 'ಅನುಭಾವ ಸಾಹಿತ್ಯ ಸಮ್ಮೇಳನ', ಹಲವು ಹೊಸ ಆಯಾಮಗಳನ್ನು ಹೊರ ತರುವಲ್ಲಿ ಯಶಸ್ವಿಯಾಯಿತು. ದಾಸ ಸಾಹಿತ್ಯದಲ್ಲಿ ಕೇವಲ ಕೀರ್ತನೆಗಳಲ್ಲದೆ, ಇನ್ನುಳಿದ 'ಸುಳಾದಿ', 'ಮುಂಡಿಗೆ ', 'ಉಗಾಭೋಗ'ಗಳ ಮಹತ್ವವನ್ನು ಸಭೆಯ ಗಮನಕ್ಕೆ ತರುವುದು ಅತಿ ಮುಖ್ಯವಾಗಿತ್ತು. 'ಗೇಯ ರೂಪದ ಒಗಟೆಂದೇ ಪ್ರಸಿದ್ಧವಾದ 'ಮುಂಡಿಗೆ', ಪಾರಂಪಾರಿಕ, ಅನುಭಾವಿ ಹಾಗೂ ಒಂದೇ ಮುಂಡಿಗೆ, ಲೌಕಿಕ, ಅಲೌಕಿಕ, ದ್ವಂದ್ವಾರ್ಥಗಳನ್ನು ನೀಡಬಲ್ಲದು. ಪ್ರಬುದ್ಧ ಗಾಯಕಿ, ಶ್ಯಾಮಲಾ ಪ್ರಕಾಶ್ ರವರು, ಇವುಗಳ ಬಗ್ಗೆ ತಮ್ಮ ಸುಶ್ಯಾವ್ರ ಕಂಠಶ್ರೀಯಿಂದ ಪ್ರೇಕ್ಷಕರಿಗೆ ಮನದಟ್ಟಾಗುವಂತೆ ವಿವರಿಸಿದರು. ಅವುಗಳ ವಿಭಿನ್ನ ಅರ್ಥಸಾಧ್ಯತೆಗಳನ್ನು ಹಾಡಿತೋರಿಸಿ, ವಿಶ್ಲೇಶಿಸಿದರು. 'ಉಗಾಭೋಗ'ಗಳ ಪ್ರಮುಖ ಲಕ್ಷಣಗಳೆಂದರೆ, ಅವು ತಾಳ ರಹಿತವಾಗಿರುವ ದೃಷ್ಟಿಯಿಂದ. ವಿಶೇಷ ಸಂಗೀತ ಜ್ಞಾನವಿಲ್ಲದೆ ಅವು ಅಷ್ಟು ಪರಿಣಾಮಕಾರಿ ಯಾಗುವುದಿಲ್ಲ. ದೊರೆತ ಸೀಮಿತ ಅವಧಿಯಲ್ಲಿ ಅತ್ಯಂತ ಪರಿಣಾಮಕಾರಿ ಯಾದ ಪ್ರಯೋಗವೆಂದು ಸಂಗೀತಜ್ಞರಿಂದ ದಾಖಲಾದ, ಈ ವಿಚಾರಗೋಷ್ಟಿ, ಸಂಗೀತ ಪ್ರೇಮಿಗಳಿಗೆ, ಗಾಯಕರಿಗೆ, ಬಹಳ ಮಹತ್ವದ ಸಂಗತಿಯಾಗಿದೆ.

೨೦೧೨ ರ,'ನಾದೋಪಾಸನ ಕೃತಿಗೆ ಪುರಸ್ಕಾರ'

  1. ೨೦೧೨ ರ ಸಾಲಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರ, ಮತ್ತು ೧೦ ಸಾವಿರ ರೂಪಾಯಿ ಲಭಿಸಿದೆ.

ಗಮಕ ವಾಚನ(೨೦೧೩)

'ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು(ರಿ)',ವತಿಯಿಂದ ಅಖಿಲ ಭಾರತ ೯ ನೆಯ ಗಮಕ ಸಮ್ಮೇಳನ 'ವಿದುಷಿ ಗಂಗಮ್ಮ ಕೇಶವಮೂರ್ತಿ ' ಅವರ ಘನ-ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನೆರವೇರಿತು. ಇದರ ಅಂಗವಾಗಿ ನಡೆದ ೩ನೆಯ ಗಮಕ ಗೋಷ್ಠಿ ಕಾರ್ಯಕ್ರಮದಲ್ಲಿ, ಡಾ.ಶತಾವಧಾನಿ ಆರ್.ಗಣೇಶ್ ರವರ ಅಧ್ಯಕ್ಷತೆಯಲ್ಲಿ, ಮುಂಬಯಿನ ವಿದುಷಿ'ಶ್ಯಾಮಲಾ ಪ್ರಕಾಶ್,' 'ರನ್ನನ ಗದಾಯುದ್ಧ'ದ ಕೆಲವು ಆಯ್ದಭಾಗಗಳನ್ನು ವಾಚಿಸಿದರು.

ಮುಂಡಿಗೆ ಹಾಗೂ ಉಗಾಭೋಗ ಪ್ರಾತ್ಯಕ್ಷಿಕೆ

'ಮುಂಬಯಿನ ಹವ್ಯಕ ವೆಲ್ಫೇರ್ ಟ್ರಸ್ಟ್-೨೦೧3 ರ ಸಾಲಿನ,ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ ಪ್ರದಾನ ಸಮಾರಂಭ' ಮಾರ್ಚ್ ೩೧ ರಂದು, ಮಧ್ಯಾನ್ಹ ಮುಂಬಯಿ ಮಹಾನಗರದ ಮಾಹಿಮ್ ಉಪನಗರದಲ್ಲಿರುವ, ಕರ್ನಾಟಕ ಸಂಘದ 'ಡಾ.ವಿಶ್ವೇಶ್ವರಯ್ಯ ಸಭಾಗೃಹ'ದಲ್ಲಿ ನೆರವೇರಿತು.

ಮುಂಡಿಗೆ ಮತ್ತು ಉಗಾಭೋಗ ಪ್ರಾತ್ಯಕ್ಷಿಕೆ ಬೆಂಗಳೂರಿನಲ್ಲಿ

ಈ ಸಮಾರಂಭದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, 'ವಿದುಷಿ ಶ್ಯಾಮಲಾ ಪ್ರಕಾಶ್' ರಿಂದ, 'ಮುಂಡಿಗೆ ಮತ್ತು ಉಗಾಭೋಗ ಪ್ರಾತ್ಯಕ್ಷಿಕೆ,', ಹಾಗೂ 'ಬೆಂಗಳೂರಿನ ದ ಸ್ಟಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಕಲಾವಿದ'ರಿಂದ 'ಸಾಂಖ್ಯರ ಸಂಸಾರ ನಾಟಕ' ಪ್ರದರ್ಶನಗೊಂಡಿತು. ಈ ನಾಟಕದ ನಿರ್ದೇಶನವನ್ನು 'ಸುಬ್ರಾಯ್ ಭಟ್' ನಡೆಸಿ ಕೊಟ್ಟರು. ಸಭಾಗೃಹದಲ್ಲಿ, 'ಚಂದ್ರಶೇಖರ ಪಾಲೆತ್ತಾಡಿ,' 'ಡಾ.ಜಿ.ಡಿ.ಜೋಶಿ', 'ಹವ್ಯಕ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಎನ್.ಆರ್ ಹೆಗಡೆ', 'ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ', ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಮುಂಬಯಿ ವಿಶ್ವವಿದ್ಯಾಲಯದ ಘಟಿಕೋತ್ಸವ (೨೦೧೭)

'ನವದೆಹಲಿಯ ಕೇಂದ್ರ ಸಾಹಿತ್ಯ ಅಕೇಡಮಿ', ಹಾಗೂ 'ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ' ಜಂಟಿಯಾಗಿ ಆಯೋಜಿಸಿದ "ಮಧ್ಯಕಾಲೀನ ಸಾಹಿತ್ಯ ಸಂವಾದ ಕಾರ್ಯಕ್ರಮ",ದಲ್ಲಿ ಮುಂಬಯಿನಗರದ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ವಿದುಷಿ.ಎನ್.ಜಿ.ಶ್ಯಾಮಲ ಪ್ರಕಾಶ್ ರ "ಕನ್ನಡ ಸಾಹಿತ್ಯದಲ್ಲಿನ ಸಂಗೀತಾತ್ಮಕ ಅಧ್ಯಯನ" ವೆಂಬ ೯೦೦ ಪುಟಗಳ ಮಹಾಪ್ರಬಂಧಕ್ಕೆ 'ಪಿ.ಎಚ್.ಡಿ.ಪದವಿಯ ಸನದ'ನ್ನು ಪ್ರದಾನಮಾಡಲಾಯಿತು. ಮೈಸೂರಿನ ಸುಪ್ರಸಿದ್ಧ ವಿದ್ವಾಂಸ,ಚಿಂತಕ, ಶ್ರೇಷ್ಠ ಸಂಶೋಧಕ, ಡಾ.ಕೃಷ್ಣಮೂರ್ತಿ ಹನೂರ್ ರವರ ಮಾರ್ಗದರ್ಶನದಲ್ಲಿ ಈ ಅಧ್ಯಯನ ಜರುಗಿತು.

೨೦೨೦ ರಲ್ಲಿ ಡಾ.ಜಿ.ಎಸ್.ಎಸ್.ಪ್ರತಿಷ್ಠಾನದ ಕಾರ್ಯಕ್ರಮ,ಮುಂಬಯಿ

ಶ್ಯಾಮಲಾ ಪ್ರಕಾಶ್ 
ಸಂಗೀತ ವಿದುಷಿ.ಡಾ.ಶ್ಯಾಮಲಾ ಪ್ರಕಾಶ್ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ

ಪ್ರಜಾವಾಣಿ ಫೇಸ್ಬುಕ್ ಲೈವ್ ಕಾರ್ಯಕ್ರಮಗಳು

೨೦೨೦ ರಲ್ಲಿ ಕರೋನ ಪಿಡಿಗಿನಿಂದ ಸಂಗೀತ ರಸಿಕರಿಗೆ, ಮತ್ತು ಕಲಾವಿದರಿಗೆ ಮನೆಯಿಂದ ಹೊರಗೆ ಬರುವುದು ದುಸ್ತರವಾದಾಗ 'ಪ್ರಜಾವಾಣಿ ಪತ್ರಿಕೆ' ಮತ್ತು 'ಫೇಸ್ಬುಕ್ ಜಾಲತಾಣ' ಜೊತೆಗೂಡಿ 'ಆನ್ಲೈನ್ ಕಾರ್ಯಕ್ರಮ'ಗಳನ್ನು ಆಯೋಜಿಸುತ್ತಾ ಬಂದಿದೆ. ಆ ಮಾಲಿಕೆಯಲ್ಲಿ 'ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ'ಮುಂಬೈ ನಿಂದ ಲೈವ್ ಕಾರ್ಯಕ್ರಮ, ಮುಂಬೈ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿ, ಮತ್ತು ಸಂಗೀತ ವಿದುಷಿ, ಡಾ.ಶ್ಯಾಮಲಾ ಪ್ರಕಾಶ್ ರವರ ಕಾರ್ಯಕ್ರಮ,

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಶ್ಯಾಮಲಾ ಪ್ರಕಾಶ್ ವಿದುಷಿ, ರ ಸ್ಥೂಲ ಪರಿಚಯಶ್ಯಾಮಲಾ ಪ್ರಕಾಶ್ ’ದ ಕೆಮ್ತೂರು ಸ್ಮಾರಕ ತುಳು ನಾಟಕ ಸ್ಪರ್ಧೆ,’ ಯಲ್ಲಿ ಸಂಗೀತ ಸಂಯೋಜನೆಶ್ಯಾಮಲಾ ಪ್ರಕಾಶ್ ’ಸ್ನೇಹ ಸಂಬಂಧ,’ ಮಾಸಿಕ ಪತ್ರಿಕೆಯಲ್ಲಿನ ’ನಾದೋಪಾಸನ’ ಅಂಕಣಶ್ಯಾಮಲಾ ಪ್ರಕಾಶ್ ಕೃಷ್ಣಂ ವಂದೇ ಹಾಡುಗಾರಿಕೆಯ ಅಡಕಮುದ್ರಿಕೆಶ್ಯಾಮಲಾ ಪ್ರಕಾಶ್ ವಚನ ಸಂಗೀತ ಕಾರ್ಯಕ್ರಮ ಬೆಂಗಳೂರಿನಲ್ಲಿಶ್ಯಾಮಲಾ ಪ್ರಕಾಶ್ ಮುಂಬಯಿ ವಿಶ್ವವಿದ್ಯಾಲಯದ ಘಟಿಕೋತ್ಸವ (೨೦೧೭)ಶ್ಯಾಮಲಾ ಪ್ರಕಾಶ್ ೨೦೨೦ ರಲ್ಲಿ ಡಾ.ಜಿ.ಎಸ್.ಎಸ್.ಪ್ರತಿಷ್ಠಾನದ ಕಾರ್ಯಕ್ರಮ,ಮುಂಬಯಿಶ್ಯಾಮಲಾ ಪ್ರಕಾಶ್ ಪ್ರಜಾವಾಣಿ ಫೇಸ್ಬುಕ್ ಲೈವ್ ಕಾರ್ಯಕ್ರಮಗಳುಶ್ಯಾಮಲಾ ಪ್ರಕಾಶ್ ಬಾಹ್ಯ ಕೊಂಡಿಗಳುಶ್ಯಾಮಲಾ ಪ್ರಕಾಶ್

🔥 Trending searches on Wiki ಕನ್ನಡ:

ಭಾರತದ ಆರ್ಥಿಕ ವ್ಯವಸ್ಥೆಹಸಿರು ಕ್ರಾಂತಿವಾಯು ಮಾಲಿನ್ಯಕನ್ನಡ ಅಕ್ಷರಮಾಲೆತೇಜಸ್ವಿನಿ ಗೌಡಕಂಪ್ಯೂಟರ್ಭಾರತದಲ್ಲಿನ ಜಾತಿ ಪದ್ದತಿವಿಕಿಪೀಡಿಯರಾಷ್ಟ್ರೀಯ ಸೇವಾ ಯೋಜನೆಋಗ್ವೇದಮಂಕುತಿಮ್ಮನ ಕಗ್ಗರನ್ನರೇಣುಕಪಿ.ಲಂಕೇಶ್ನೈಟ್ರೋಜನ್ ಚಕ್ರಖಂಡಕಾವ್ಯಆದಿ ಶಂಕರಪಂಚ ವಾರ್ಷಿಕ ಯೋಜನೆಗಳುಕೃಷಿ ಸಸ್ಯಶಾಸ್ತ್ರಆರ್ಯಭಟ (ಗಣಿತಜ್ಞ)ಭಾರತೀಯ ನದಿಗಳ ಪಟ್ಟಿಸಾರ್ವಜನಿಕ ಹಣಕಾಸುಗಂಗ (ರಾಜಮನೆತನ)ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರೇಯಾನ್ಜಾತಿಮೈಸೂರು ಸಂಸ್ಥಾನದ ದಿವಾನರುಗಳುಋತುಲಿಂಗಾಯತ ಧರ್ಮಕಾನೂನುಗೋವಿಂದ III (ರಾಷ್ಟ್ರಕೂಟ)ಎಸ್.ಎಲ್. ಭೈರಪ್ಪಬ್ರಾಟಿಸ್ಲಾವಾಪ್ರತಿಧ್ವನಿಗೌತಮಿಪುತ್ರ ಶಾತಕರ್ಣಿಸಾರಾ ಅಬೂಬಕ್ಕರ್ಪ್ರಜಾಪ್ರಭುತ್ವಪಿತ್ತಕೋಶವಿಷಮಶೀತ ಜ್ವರಎಸ್.ಜಿ.ಸಿದ್ದರಾಮಯ್ಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಪ್ರಾಣಿತತ್ಪುರುಷ ಸಮಾಸಸೂರ್ಯೋದಯಬಿಳಿ ರಕ್ತ ಕಣಗಳುಕರ್ನಾಟಕ ಸಂಗೀತಸಾವಯವ ಬೇಸಾಯಭಾರತದಲ್ಲಿ ಬಡತನಸಂಸ್ಕೃತಿವರ್ಣಾಶ್ರಮ ಪದ್ಧತಿವೃಕ್ಷಗಳ ಪಟ್ಟೆಕರ್ನಾಟಕದಲ್ಲಿ ಪಂಚಾಯತ್ ರಾಜ್ಚೋಮನ ದುಡಿಭಾರತದ ಇತಿಹಾಸಉದ್ಯಮಿ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಆರ್.ಟಿ.ಐಮೊಘಲ್ ಸಾಮ್ರಾಜ್ಯಮೂಕಜ್ಜಿಯ ಕನಸುಗಳು (ಕಾದಂಬರಿ)ಶ್ರವಣಬೆಳಗೊಳಸಸ್ಯಉಪ್ಪಿನ ಸತ್ಯಾಗ್ರಹಬ್ರಿಟಿಷ್ ಆಡಳಿತದ ಇತಿಹಾಸಸ್ವರ್ಣಯುಗಗುಪ್ತಗಾಮಿನಿ (ಧಾರಾವಾಹಿ)ರಾಮ ಮಂದಿರ, ಅಯೋಧ್ಯೆಕನ್ನಡ ಛಂದಸ್ಸುಭಗವದ್ಗೀತೆತೆಲುಗುಕ್ರಿಯಾಪದಕೋಲಾರ ಚಿನ್ನದ ಗಣಿ (ಪ್ರದೇಶ)ಭಾರತೀಯ ನೌಕಾಪಡೆಪ್ರೀತಿಮೋಂಬತ್ತಿಪರಿಸರ ವ್ಯವಸ್ಥೆಜನಪದ ಕಲೆಗಳು🡆 More