ಆರ್.ಟಿ.ಐ

ಆರ್ ಟಿಐ ಎಂಬ ಪದ ಜನಪ್ರಿಯತೆ ಗಳಿಸಿದ್ದರೂ, ಆರ್ ಟಿಐ(Right To Information) ಕಾಯಿದೆ ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲ.

ಮಾಹಿತಿ ಹಕ್ಕು ಕಾಯಿದೆ 2005 ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರೀಕರ ಮೂಲಭೂತ ಹಕ್ಕಾಗಿದೆ. ಕೇಂದ್ರ ಸರ್ಕಾರ ಅಕ್ಟೊಬರ್ 12,2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯಿದೆಯ ಮೂಲ ಉದ್ದೇಶ.

ಪರಿಚಯ

  • ದೇಶದ ಎಲ್ಲಾ ರಾಜ್ಯಗಳಲ್ಲಿ ಆರ್.ಟಿ.ಐ ಕಾಯಿದೆ ಅನ್ವಯವಾಗುತ್ತದೆಯಾದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ ಟಿಐ ಬಳಸಲಾಗುವುದಿಲ್ಲ. ಆರ್ ಟಿಐ ಮೂಲಕ ಯಾವ ಮಾಹಿತಿಯನ್ನು ಹೊರ ತೆಗೆಯಬಹುದು?
  1. ಸರ್ಕಾರದಿಂದ ಮಾಹಿತಿ ಹಾಗೂ ಕಾಮಗಾರಿಗಳಿಗೆ ಸಂಬಂಧಿತ ಪ್ರಶ್ನೆಗೆ ಉತ್ತರಗಳನ್ನು ಪಡೆಯಬಹುದು.
  2. ಸರ್ಕಾರ ಹೊರಡಿಸಿದ GO ಗಳ ನಕಲು ಪ್ರತಿಯನ್ನು ಕೇಳಿ ಪಡೆದುಕೊಳ್ಳಬಹುದು.
  3. ಸರ್ಕಾರಿ ದಾಖಲೆ, ಕಡತಗಳ ಪರಿಶೀಲನೆಗೂ ಅವಕಾಶ ಕಲ್ಪಿಸಲಾಗಿದೆ.
  4. ಯಾವುದೇ ಸರ್ಕಾರದ ಯಾವುದೇ ಕಾರ್ಯವಾದರೂ ಆರ್ ಟಿಐ ವ್ಯಾಪ್ತಿಗೆ ಒಳಪಡುತ್ತದೆ.
  5. ಒಂದು ಕಾಮಗಾರಿಯ ಪ್ರತಿ ಹಂತದ ಮಾಹಿತಿಯನ್ನು ಪಡೆಯಬಹುದು.
  6. ರಸ್ತೆ ಕಾಮಗಾರಿಯಾದರೆ, ಟೆಂಡರ್, ಗುತ್ತಿಗೆ ಪಡೆದವರು, ಜಲ್ಲಿ, ಡಾಂಬರು ಕೊಂಡುಕೊಂಡ ಸಂಸ್ಥೆ, ಕಾಮಗಾರಿ ಅವಧಿ ಈ ರೀತಿ ಪ್ರತಿ ಹಂತದಲ್ಲೂ ಪ್ರಶ್ನಿಸುವ ಹಕ್ಕು ನಾಗರಿಕರಿಗೆ ನೀಡಲಾಗಿದೆ.

ನಿಮಗೆ ಮಾಹಿತಿಯನ್ನು ಯಾರು ಒದಗಿಸುತ್ತಾರೆ?

  • ಪ್ರತಿಯೊಂದು ಸರ್ಕಾರದಲ್ಲಿ ಸಾರ್ವಜನಿಕ ಮಾಹಿತಿ ನೀಡಲು ಸಂಪರ್ಕಾಧಿಕಾರಿ(PIO)ಯಾಗಿ ಕೆಲ ಅಧಿಕಾರಿಗಳನ್ನು ನೇಮಿಸಿರಲಾಗಿರುತ್ತದೆ. ಈ ಅಧಿಕಾರಿಗಳು ಆರ್.ಟಿ.ಐ ಅರ್ಜಿಗಳನ್ನು ಸ್ವೀಕರಿಸಿ ವಿವಿಧ ಇಲಾಖೆಗಳಿಗೆ ತಲುಪಿಸಿ ನಂತರ ಅಲ್ಲಿಂದ ಮಾಹಿತಿ ಪಡೆದು ಅರ್ಜಿದಾರರಿಗೆ ಒದಗಿಸುತ್ತಾರೆ. ಈ ಮಾಹಿತಿಯನ್ನು ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಉತ್ತರಿಸಬೇಕಾಗುತ್ತದೆ.
  • ಒಂದು ವೇಳೆ ಉತ್ತರ ನೀಡಲು ತಡವಾದರೆ ಅಥವಾ ನೀಡಿದ ಉತ್ತರ ತಪ್ಪು ಎಂದು ಅರ್ಜಿದಾರರಿಗೆ ಮನವರಿಕೆಯಾದರೆ ಉತ್ತರ ನೀಡಿದ ಅಧಿಕಾರಿಯೇ ಹೊಣೆ ಹೊರಬೇಕಾಗುತ್ತದೆ. ಉತ್ತರ ನೀಡುವುದು ತಡವಾದರೆ ದಂಡವನ್ನು ಕಟ್ಟಬೇಕಾಗುತ್ತದೆ. ಅಧಿಕಾರಿ ನೀಡಿದ ಮಾಹಿತಿ ಸರಿ ಇಲ್ಲ ಎಂದು ಅನ್ನಿಸಿದರೆ ಅರ್ಜಿದಾರರು ಮಾಹಿತಿ ಆಯೋಗಕ್ಕೆ ದೂರು ಅರ್ಜಿ ನೀಡಬಹುದು.

RTI ಅರ್ಜಿ ಸಲ್ಲಿಸುವುದು ಹೇಗೆ?

  1. ಇದಕ್ಕೆ ಸೂಕ್ತವಾದ ವಿಧಾನವಿಲ್ಲವಾದರೂ, RTI ಅರ್ಜಿ ಸಲ್ಲಿಸುವುದು ತುಂಬಾ ಕಷ್ಟವೇನಲ್ಲ. ಒಂದು ಬಿಳಿ ಹಾಳೆಯಲ್ಲಿ ನಿಮ್ಮ ಹೆಸರು, ವಿಳಾಸ ಸರಿಯಾಗಿ ಬರೆದು ನಿಮ್ಮ ಸಮಸ್ಯೆಯನ್ನು ಅಥವಾ ನೀವು ಪಡೆಯಬಯಸುವ ಮಾಹಿತಿಯನ್ನು ಕೇಳಿ ಅರ್ಜಿ ಸಲ್ಲಿಸಬಹುದು. 10 ಶುಲ್ಕ ನೀಡಿ ಆರ್ ಟಿಐ ಅರ್ಜಿ ದಾಖಲಿಸಬಹುದು. ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಬೇಕಾದರೆ ಪ್ರತಿ ಅರ್ಜಿಗೂ 10 ರು ಶುಲ್ಕ ಪಾವತಿಸಬೇಕು.
  2. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾಹಿತಿಯನ್ನು ಪಡೆಯಲು ಪ್ರತಿ ಪುಟಕ್ಕೆ 2 ರು ನಂತೆ ಪ್ರತ್ಯೇಕ ಶುಲ್ಕ ನೀಡಬೇಕು. ಕೆಲ ರಾಜ್ಯಗಳಲ್ಲಿ ಶುಲ್ಕದಲ್ಲಿ ವ್ಯತ್ಯಾಸ ಕಾಣಬಹುದು.ಮೊದಲ ಅವಧಿಯ ಪರಿಶೀಲನೆ ಉಚಿತವಾಗಿದ್ದು, ನಂತರ ಪ್ರತಿ ಅವಧಿಗೂ ರು 5 ನಂತೆ ಹಣ ಪಡೆಯಲಾಗುತ್ತದೆ. ಅರ್ಜಿಯನ್ನು ಅಂಚೆ ಕಚೇರಿ, ಆರ್ ಟಿಐ ಕೌಂಟರ್ ಗಳಲ್ಲಿ ನೀಡಬಹುದು. ಅಥವಾ ಅನ್ ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
  1. ಡ್ರೈವಿಂಗ್ ಲೈಸನ್ಸ್, ರಸ್ತೆ ಕಾಮಗಾರಿ, ಮೂಲ ಸೌಕರ್ಯ ಅಭಿವೃದ್ಧಿ, EPF ವರ್ಗಾವಣೆ, ಪೊಲೀಸ್ ತಪಾಸಣೆ, ಆದಾಯ ತೆರಿಗೆ ಹಿಂಪಡೆಯುವುದು ಹಾಗೂ ಭ್ರಷ್ಟಾಚಾರ ಸಂಬಂಧಿತ ಎಲ್ಲಾ ದೂರುಗಳು RTI ನಿಂದ ಪಡೆಯಬಹುದಾಗಿದೆ.

ಉಲ್ಲೇಖ

Tags:

ಆರ್.ಟಿ.ಐ ಪರಿಚಯಆರ್.ಟಿ.ಐ ನಿಮಗೆ ಮಾಹಿತಿಯನ್ನು ಯಾರು ಒದಗಿಸುತ್ತಾರೆ?ಆರ್.ಟಿ.ಐ RTI ಅರ್ಜಿ ಸಲ್ಲಿಸುವುದು ಹೇಗೆ?ಆರ್.ಟಿ.ಐ ಉಲ್ಲೇಖಆರ್.ಟಿ.ಐ

🔥 Trending searches on Wiki ಕನ್ನಡ:

ದೇವರ/ಜೇಡರ ದಾಸಿಮಯ್ಯದ್ವಂದ್ವ ಸಮಾಸಪಟ್ಟದಕಲ್ಲುಮಣ್ಣುಬಿ. ಎಂ. ಶ್ರೀಕಂಠಯ್ಯಭಾರತದಲ್ಲಿನ ಜಾತಿ ಪದ್ದತಿಪ್ರೀತಿರೋಮನ್ ಸಾಮ್ರಾಜ್ಯರಾಜಕೀಯ ಪಕ್ಷಪ್ರಬಂಧ ರಚನೆವಿರಾಟಭಗತ್ ಸಿಂಗ್ಭಾರತದ ರಾಜಕೀಯ ಪಕ್ಷಗಳುಭಾರತದಲ್ಲಿ ಪಂಚಾಯತ್ ರಾಜ್ಗಾಂಧಿ- ಇರ್ವಿನ್ ಒಪ್ಪಂದಶಕ್ತಿಉಪ್ಪಿನ ಸತ್ಯಾಗ್ರಹಶೈಕ್ಷಣಿಕ ಸಂಶೋಧನೆಅಧಿಕ ವರ್ಷಕನ್ನಡ ಛಂದಸ್ಸುನಿರ್ವಹಣೆ ಪರಿಚಯಕನ್ನಡ ಸಾಹಿತ್ಯ ಸಮ್ಮೇಳನಮೈಗ್ರೇನ್‌ (ಅರೆತಲೆ ನೋವು)ಗೌತಮ ಬುದ್ಧಭಾರತದ ಸಂವಿಧಾನದಿಕ್ಕುಪು. ತಿ. ನರಸಿಂಹಾಚಾರ್ಭಾರತದ ಪ್ರಧಾನ ಮಂತ್ರಿತ. ರಾ. ಸುಬ್ಬರಾಯಸಾದರ ಲಿಂಗಾಯತಕ್ರಿಯಾಪದಯಕ್ಷಗಾನಕನ್ನಡ ಅಕ್ಷರಮಾಲೆಗುರುರಾಜ ಕರಜಗಿಸಂವಹನಡಿ.ಕೆ ಶಿವಕುಮಾರ್ಹೈದರಾಬಾದ್‌, ತೆಲಂಗಾಣಇಂಡೋನೇಷ್ಯಾಬೆಳಗಾವಿಖ್ಯಾತ ಕರ್ನಾಟಕ ವೃತ್ತಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದ ರಾಷ್ಟ್ರೀಯ ಉದ್ಯಾನಗಳುಮುಪ್ಪಿನ ಷಡಕ್ಷರಿಗೋತ್ರ ಮತ್ತು ಪ್ರವರಶ್ರೀ ರಾಮಾಯಣ ದರ್ಶನಂಕರ್ನಾಟಕ ಜನಪದ ನೃತ್ಯವಿಷ್ಣುಇತಿಹಾಸಸಮುದ್ರಗುಪ್ತಬೆಂಗಳೂರುರಂಗಭೂಮಿಸಾರ್ವಜನಿಕ ಆಡಳಿತರೈತ ಚಳುವಳಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ವಿಜಯಪುರಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕೃತಕ ಬುದ್ಧಿಮತ್ತೆಸೀತಾ ರಾಮಲಗೋರಿರಾಷ್ಟ್ರಕವಿಕರ್ನಾಟಕ ಐತಿಹಾಸಿಕ ಸ್ಥಳಗಳುಸಾಲ್ಮನ್‌ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಅಳಿಲುಬಿ.ಎಸ್. ಯಡಿಯೂರಪ್ಪಕರ್ನಾಟಕದ ಹಬ್ಬಗಳುಕರ್ಮಧಾರಯ ಸಮಾಸದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಉಪಯುಕ್ತತಾವಾದಸೈಯ್ಯದ್ ಅಹಮದ್ ಖಾನ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಹಣ್ಣುಕಲ್ಪನಾಸೌರಮಂಡಲನಗರಹರಪ್ಪತೆಂಗಿನಕಾಯಿ ಮರಮಂಕುತಿಮ್ಮನ ಕಗ್ಗ🡆 More