ಮಣ್ಣು

ಮಣ್ಣು ಒಂದು ಸ್ವಾಭಾವಿಕ ವಸ್ತು.

ಇದರಲ್ಲಿ ಖನಿಜಾಂಶವುಳ್ಳ ವಿವಿಧ ಗಾತ್ರದ ಅನೇಕ ಪದರುಗಳಿವೆ(ಸಾಯಿಲ್ ಹಾರಿಜಾನ್ಸ್), ಇದು ತನ್ನ ಮೂಲ ವಸ್ತುವಿಗಿಂತ ಮೇಲ್ಮೈಯಲ್ಲಿ ಭೌತಿಕವಾಗಿ, ರಾಸಾಯನಿಕವಾಗಿ, ಮತ್ತು ಖನಿಜಾಂಶಗಳ ಇರುವಿಕೆಯಲ್ಲಿ ವ್ಯತ್ಯಾಸ ತೋರುತ್ತದೆ. ಇದು ರಾಸಾಯನಿಕವಾಗಿ ಹಾಗು ಪರಿಸರದ ಕ್ರಿಯೆಗಳಿಂದಾಗಿ ಮುರಿದ ಬಂಡೆಗಳಿಂದ ಅಥವಾ ಕೊಚ್ಚಿಹೋದ ಅನೇಕ ಮಾರ್ಪಾಡುಗಳನ್ನೊಳಗೊಂಡ, ಹವಾ ಪರಿಣಾಮಗಳಿಂದ ,ಮತ್ತು ಭೂಸವೆತಗಳಿಂದ ರೂಪುಗೊಂಡಿದೆ . ಮಣ್ಣು ತನ್ನ ಮೂಲ ಶಿಲೆಗಳಿಗಿಂತ ಭಿನ್ನವಾಗಿರುತ್ತದೆ ಇದಕ್ಕೆ ಕಾರಣ ಅದು ಭೂಗೋಳ ಜಲಗೋಳ, ವಾಯುಗೋಳ, ಮತ್ತು ಜೀವಗೋಳಗಳ, ಜೊತೆ ಕಲೆತು ಬದಲಾವಣೆ ಗೊಂಡಿರುತ್ತದೆ. ಇದು ಘನ, ಅನಿಲ ಹಾಗು ದ್ರವ ರೂಪಗಳಲ್ಲಿರುವಂತಹ ಖನಿಜ ಹಾಗು ಇಂಗಾಲದ ಮಿಶ್ರಣಗಳಿಂದಾಗಿರುವುದು. ಮಣ್ಣಿನ ಕಣಗಳು ಪರಸ್ಪರ ಸಡಿಲವಾಗಿ ಸೇರಿಕೊಂಡಿದ್ದು, ಖಾಲಿ ರಂದ್ರಗಳಿಂದ ಕೂಡಿವೆ. ಈ ರಂದ್ರಗಳು ಮಣ್ಣಿನದ್ರಾವಣ (ದ್ರವರೂಪ) ಮತ್ತು ಗಾಳಿ (ಅನಿಲ)ರೂಪದಲ್ಲಿರುತ್ತವೆ. ಆದ್ದರಿಂದಾಗಿ ಮಣ್ಣನ್ನು ಹಲವು ಬಾರಿ ಮೂರು ಸ್ಥಿತಿಗಳಲ್ಲಿ ಸಂಸ್ಕರಿಸುತ್ತಾರೆ. ಸಮಾನ್ಯವಾಗಿ ಮಣ್ಣಿನಸಾಂದ್ರತೆ 1 ರಿಂದ 2 g/cm³ ಇರುತ್ತದೆ. ಮಣ್ಣನ್ನು ಭೂಮಿ ಎಂದೂ ಕರೆಯುತ್ತಾರೆ : ಈ ವಸ್ತುವಿನಿಂದಲೇ ನಮ್ಮ ಗ್ರಹವು ಈ ಹೆಸರನ್ನು ಪಡೆದಿದೆ ಭೂಮಿ ಗ್ರಹದ ಸ್ವಲ್ಪ ಭಾಗ ಮಣ್ಣಿನ ರಚನೆ ತೃತೀಯ ಭೂರಚನಾ ಅವಧಿಗಿಂತ ಹಳೆಯದಾಗಿದೆ ಮತ್ತು ಇನ್ನು ಹೆಚ್ಚಿನದು Pleistocene ಗಿಂತ ಹಳೆಯದಾಗಿಲ್ಲ. ಇಂಜಿನಿಯರಿಂಗ್ನಲ್ಲಿ, ಮಣ್ಣು ಯಾವುದೇ ಗ್ರಹವನ್ನು ಆಚ್ಚಾದಿಸಿರುವ ಆಧಾರಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥವೆಂದು ಹೇಳಲಾಗಿದೆ, ಅಥವಾ ಬಂಡೆಯ ಸಡಿಲವಾದ ಮೂಲ ವಸ್ತು.

ಮಣ್ಣು
ಜರ್ಮನಿಯ ಲಾಸ್ ಫೀಲ್ಡ್
ಮಣ್ಣು
ಇಲ್ಲಿಯವರೆಗೆ ಹಿಮಗಡ್ಡೆಯಲ್ಲಿ ವಿಕಾಸವಾದ ಮೇಲ್ಮೈ-ನೀರು-ಜಲಜನಕ ಯುಕ್ತ ಮಣ್ಣು, ಉತ್ತರ ಐರ್ಲೆಂಡ್
ಮಣ್ಣು
ಕಪ್ಪಾದ ಮೇಲ್ಮಣ್ಣು ಮತ್ತು ಕೆಂಪಾದ ಉಪ ಮಣ್ಣಿನ ಪದರಗಳು ಕೆಲವು ಪ್ರದೇಶಗಳಲ್ಲಿ ವೈಶಿಷ್ಟ್ಯಪೂರ್ಣವಾಗಿರುತ್ತವೆ.

ಮಣ್ಣು ನಿರ್ಮಾಣದ ಅಂಶಗಳು

ಮಣ್ಣು ನಿರ್ಮಾಣ ಅಥವಾ ಪೆಡೊಜೆನೆಸಿಸ್ ಎನ್ನುವುದು, ಮೂಲ ಬಂಡೆಗಳ ಮೇಲೆ ಉಂಟಾಗುವ,ಭೌತಿಕ , ರಾಸಾಯನಿಕ, ಜೈವಿಕ ಮತ್ತು ಮಾನವಸಂಬಂಧ ಕ್ರಿಯೆಗಳಿಂದಾದ ಪರಿಣಾಮ. ಮಣ್ಣು ನಿರ್ಮಾಣವು ವಿವಿಧ ಪದರಗಳ ರಚನೆ ಅಥವಾ ಮಣ್ಣಿನ ಪಾರ್ಶ್ವ ರೂಪ ಹೊರಹೊಮ್ಮುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಈ ಕ್ರಿಯೆಯು ಮಣ್ಣಿನ ಸಂಯುಕ್ತಗಳ ಸೇರುವಿಕೆ, ತಿಳಿಗೊಳಿಸುವಿಕೆ, ಬದಲಾವಣೆ ಹಾಗು ಸ್ಥಳಾಂತರ ಗೊಳ್ಳುವಿಕೆಯನ್ನು ಒಳಗೊಂಡಿರುತ್ತದೆ. ಮೂಲ ಬಂಡೆಗಳಿಂದ ಉದುರಿದ ಖನಿಜಗಳು ರೂಪಾಂತರಗೊಳ್ಳುತ್ತವೆ, ಇದರಿಂದ ರೂಪಾಂತರಗೊಂಡ ಖನಿಜಗಳು ಹಾಗು ನಿಧಾನಗತಿಯಲ್ಲಿ ನೀರಿನಲ್ಲಿ ಕರಗುವ ಇತರ ಸಂಯುಕ್ತಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನೀರಿನಿಂದಲೋ ಅಥವಾ ಪ್ರಾಣಿಗಳ ಕ್ರಿಯೆಯಿಂದಲೋ ಸ್ಥಳಾಂತರಗೊಳ್ಳುತ್ತವೆ. ಮಣ್ಣಿನಲ್ಲಿ ಉಂಟಾಗುವ ಈ ಬದಲಾವಣೆ ಹಾಗು ಕಣಗಳ ಸ್ಥಳಾಂತರಗೊಳ್ಳುವಿಕೆಯು ಮಣ್ಣಿನ ನಿರ್ದಿಷ್ಟ ಪಾರ್ಶ್ವ ರೂಪಕ್ಕೆ ನಾಂದಿಯಾಗುತ್ತದೆ. ಮೂಲ ಬಂಡೆಯಿಂದ ಉದುರಿದ ವಸ್ತುವೇ ಮಣ್ಣು ರಚನೆಯ ಮೂಲ ಸಾಮಾಗ್ರಿ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಉಷ್ಣಪ್ರದೇಶದಲ್ಲಿ ಬಂಡೆಯ ಮೇಲೆ ಲಾವಾರಸವು ಹರಿದು ಹೋಗಿ ನಂತರ ಎಡೆಬಿಡದೆ ಭಾರೀ ಮಳೆಯಾಗುವುದು. ಈ ಹವಾಗುಣದಲ್ಲಿ ತಂಪಾದ ಖನಿಜಯುಕ್ತ ಲಾವಾದ ಮೇಲೆ ಸಾವಯವ ಅಂಶಗಳು ಕಡಿಮೆ ಇದ್ದರೂ ಸಸ್ಯಗಳು ಚೆನ್ನಾಗಿ ಬೆಳೆಯುತ್ತವೆ. ಪೋಷಕಾಂಶಯುಕ್ತ ನೀರು ಇರುವ ಕಲ್ಲು ರಂದ್ರಗಳಲ್ಲಿ, ಉದಾಹರಣೆಗೆ ನೀರಿನಲ್ಲಿ ಕರಗಿರುವ ಖನಿಜಗಳು ಮತ್ತು ಪಕ್ಷಿಗಳ ಮಲದಿಂದಾದ ಗೊಬ್ಬರಸಸ್ಯಗಳು ಹುಲುಸಾಗಿ ಬೆಳೆಯುತ್ತವೆ. ಬೆಳೆಯುತ್ತಿರುವ ಸಸ್ಯಗಳ ಬೇರಿನಲ್ಲಿ ಶಿಲೀಂದ್ರ ಅಣಬೆಗಳು, ಇರುತ್ತವೆ, ಇವು ಲಾವರಸದ ಕಣಗಳನ್ನು ಸಡಿಲಗೊಳಿಸುತ್ತವೆ, ಇದರಿಂದ ಸಾವಯವ ಪದಾರ್ಥಗಳು ಬೇಗ ಕೂಡಿಕೊಳ್ಳುತ್ತವೆ. ಈ ಪ್ರಕ್ರಿಯೆಗೂ ಮುನ್ನ ಲಾವರಸದ ಕಣಗಳಿಂದ ಬೆಳೆಯುವ ಸಸ್ಯಗಳಿಂದ, ಲಾವಾರಸದ ಕಣಗಳನ್ನು ಮಣ್ಣು ಎಂದೇ ಸೂಚಿಸಬಹುದು. ಈ ರೀತಿಯಾಗಿ ಮಣ್ಣಿನ ’ಜೀವನ’ ವೃತ್ತಾಂತವು ಮುಂದುವರಿಯಲು ಬದಲಾವಣೆಗೊಳ್ಳುವ ಹಾಗು ಒಂದಕ್ಕೊಂದು ಹೊಂದಿಕೊಂಡಿರುವ ಐದು ಪ್ರಮುಖ ಅಂಶಗಳು ಕಾರಣವಾಗುತ್ತವೆ ಅವುಗಳೆಂದರೆ, ಮೂಲವಸ್ತುಗಳು, ಸ್ಥಳೀಯ ಹವಾಗುಣ, ಮೇಲ್ಮೈ ಲಕ್ಷಣ, ಜೈವಿಕ ಸಾಮರ್ಥ್ಯ ಮತ್ತು ಸಮಯದ ಒಂದು ಭಾಗ.

ಮೂಲ ವಸ್ತು

ಯಾವ ವಸ್ತುವಿನಿಂದ ಮಣ್ಣು ಮಾರ್ಪಾಡುಗೊಳ್ಳುತ್ತದೋ ಅದೇ ಮೂಲ ವಸ್ತು.

ಇದು ಪ್ರಥಮವಾಗಿ ಮೂಲ ಬಂಡೆಯಿಂದ ಉದುರುವಿಕೆ, ದ್ವಿತೀಯವಾಗಿ ಬೇರೆ ಸ್ಥಳಗಳಿಂದ ಕಣಗಳ ಸಾಗಾಣಿಕೆ, ಉದಾಹರಣೆಗೆ ಮೆಕ್ಕಲು ಮಣ್ಣು ಮತ್ತು ನೆರೆಮಣ್ಣು;ಮಣ್ಣು ಈಗಾಗಲೇ ಇದ್ದು, ಯಾವುದೂ ಕಾರಣಗಳಿಂದ ರೂಪಾಂತರ ಗೊಂಡಿರುವುದು, ಎಂದರೆ - ಹಳೆಯ ಮಣ್ಣು ಬದಲಾವಣೆಗೊಳ್ಳುವಿಕೆ, ಸಾವಯಾಂಶಗಳನ್ನೊಳಗೊಂಡ -ಭೂಮಿಯಲ್ಲಿ ಕೊಳೆತ ಸಸ್ಯ ಮೂಲ ಇಂಧನ ಅಥವಾ ಅಲ್ಪಿನ್ ಮರದ ಎಲೆಗಳು ಕೊಳೆತು ಮಣ್ಣಿಗೆ ಸೇರಿರುವ ಗೊಬ್ಬರ; ಮತ್ತು ಮಾನವನಿಂದ ರೂಪುಗೊಂಡ ಪದಾರ್ಥಗಳಾದಂತಹನೆಲತುಂಬುವಿಕೆಅಥವಾ ಗಣಿತ್ಯಾಜ್ಯಗಳು. ಕೆಲವು ಮಣ್ಣುಗಳು ನೇರವಾಗಿ ಶಿಲೆಯ ಒಡೆಯುವಿಕೆಯಿಂದ ರೂಪುಗೊಳ್ಳುತ್ತವೆ. ಈ ರೀತಿಯ ಮಣ್ಣಿಗೆ "ಉಳಿದಿರುವ ಮಣ್ಣು" ಎನ್ನುವರು. ಇದರಲ್ಲಿರುವ ರಾಸಾಯನಿಕ ಹಾಗೂ ಮೂಲ ಬಂಡೆಯೂ ಒಂದೇ ಆಗಿರುತ್ತದೆ. ಬಹಳ ರೀತಿಯ ಮಣ್ಣು ಗಾಳಿಯಲ್ಲಿ, ನೀರಿನ ಮೂಲಕ ಅಥವಾ ಗುರುತ್ವಾಕರ್ಷಣೆಗಳಿಂದ ಪರಸ್ಥಳಗಳಿಂದ ಆಮದಾಗಿರುತ್ತದೆ . ಕೆಲವು ಸಾರಿ ಈ ರೀತಿಯ ಚಲನೆಯು ಅನೇಕ ಮೈಲುಗಳದ್ದಾಗಿರುತ್ತದೆ ಅಥವಾ ಕೆಲವೇ ಅಡಿಗಳು. ಗಾಳಿಗೆ ತೂರುವ ಮಣ್ಣಿನ ಕಣಗಳನ್ನುಹಳದಿ ಮೆಕ್ಕಲು ಮಣ್ಣು ಎನ್ನುವರು, ಇದು ಸಾಮಾನ್ಯವಾಗಿ ಉತ್ತರ ಅಮೆರಿಕಾದ ಮದ್ಯ ಪಶ್ಚಿಮ ಭಾಗಗಳಲ್ಲಿ ಹಾಗು ಮದ್ಯ ಏಷಿಯಾಗಳಲ್ಲಿ ಕಾಣಬಹುದು. ಹಿಮಶಿಲೆಗಳ ಕಣಗಳನ್ನು ಈಗಲೂ ಉತ್ತರ ಹಾಗು ದಕ್ಷಿಣ ಅಕ್ಷಾಂಶಗಳ ಮಣ್ಣಿನಲ್ಲಿ ಕಾಣಬಹುದು. ದೊಡ್ಡ ಬಂಡೆಗಳ, ಬೆಟ್ಟಗಳ ಹತ್ತಿರದಲ್ಲಿ ಈ ರೀತಿಯ ಹಿಮಶಿಲೆಗಳ ಜಾರುವಿಕೆಯನ್ನು ಕಾಣಬಹುದು. ಹಿಮಶಿಲೆಗಳು ಒಡೆದು ಸಣ್ಣ ಕಣಗಳಾಗುವುದು.ಈ ಕಣಗಳು ಬೇರೆ ಬೇರೆ ಅಳತೆಯ ಮಣ್ಣಾಗುವುದು. ಹಿಮಶಿಲೆಗಳು ಕರಗಿ ನೀರಾಗಿ ಹರಿದಾಗ, ನೀರಿನಲ್ಲಿರುವ ಕಣಗಳು ಎಲ್ಲೆಡೆಯೂ ಪಸರಿಸುವುದು. ಭೂಮಿಯ ಆಳ ಪದರುಗಳಲ್ಲಿ ಸಿಗುವ ಮಣ್ಣಿನ ಕಣಗಳಲ್ಲಿ, ಅವು ನೀರಿನಿಂದ ಅಥವಾ ಗಾಳಿಯಿಂದ ಶೇಖರಣೆಯಾದಾಗಿನಿಂದ ಯಾವುದೇ ಬದಲಾವಣೆಯನ್ನು ತೋರುವುದಿಲ್ಲ.

ಮೂಲ ಬಂಡೆಗಳಿಂದ ಮಣ್ಣಾಗುವ ಪ್ರಕ್ರಿಯೆಯಲ್ಲಿ ಹವಾಗುಣವು ಮೊದಲನೆ ಪಾತ್ರವಹಿಸುತ್ತದೆ. ಮೂಲ ಬಂಡೆಗಳಿಂದ ಮೊದಲು ಸ್ಯಾಪ್ರೊಲೈಟ್ ಎನ್ನುವ ದಪ್ಪ ಪದರು ಉದುರುವುದು. ಹವಾಮಾನ ಬದಲಾವಣೆಯಿಂದ ಸ್ಯಾಪ್ರೊಲೈಟ್ ಉಂಟಾಗುತ್ತದೆ, ಇದರಲ್ಲಿ ಪ್ರಮುಖವಾದವುಗಳು : ಜಲವಿಚ್ಚೇದನ ಪ್ರಕ್ರಿಯೆ ( ಖನಿಜಗಳ ಧನ ಅಯಾನ್‌ಗಳು ಬದಲಾವಣೆಯಾಗಿ ಜಲಜನಕದ ಅಯಾನ್‌ಗಳು ಸೇರುತ್ತವೆ) , ಸಾವಯವ ಸಂಯುಕ್ತಗಳಿಂದಾಗುವ ಚೆಲೇಷನ್ಪ್ರಕ್ರಿಯೆ , ಜಲಸಂಚಯನ (ಖನಿಜಾಂಶಗಳು ನೀರನ್ನು ಹೀರುವಿಕೆ), ಖನಿಜಾಂಶಗಳು ಕರಗಿದ ದ್ರಾವಣ, ಮತ್ತು ಶೀತಲೀಕರಣ ಮತ್ತು ಕರಗಿ ನೀರಾಗುವ ಅಥವಾ ಒದ್ದೆಯಾಗುವ ಮತ್ತು ಒಣಗುವಂತಹ ಭೌತಿಕ ಪ್ರಕ್ರಿಯೆಗಳು. ಖನಿಜಾಂಶ ಹಾಗು ರಾಸಾಯನಿಕ ಸಂಘಟನೆಗಳಿಂದಾದ ಮೂಲ ಬಂಡೆಯು ಬದಲಾವಣೆಗೊಂಡು ಉದುರುವ ರೀತಿ, ಉದುರುವ ವೇಗ, ಕಣಗಳ ಅಳತೆ, ಕಣಗಳ ಒಟ್ಟು ಸೇರುವ ಸಾಮರ್ಥ್ಯ ಮುಂತಾದ ಗುಣಗಳಿಂದ ಕೂಡಿದ ವಿವಿಧ ಪ್ರಕಾರದ ಮಣ್ಣು ಹೊರಹೊಮ್ಮುತ್ತದೆ.

ಹವಾಗುಣ

ಮಣ್ಣು ನಿರ್ಮಾಣವು ಹೆಚ್ಚಾಗಿ ಹವಾಗುಣವನ್ನು ಆವಲಂಭಿಸಿದೆ, ಬಗೆ ಬಗೆಯ ಹವಾಗುಣ ಪ್ರದೇಶಗಳಲ್ಲಿನ ಮಣ್ಣುಗಳು ನಿರ್ದಿಷ್ಟ ಲಕ್ಷಣಗಳನ್ನು ತೋರುತ್ತವೆ. ಮಣ್ಣಿನ ಉದುರುವಿಕೆ ಹಾಗು ಒಸರುವಿಕೆಗೆ ಮುಖ್ಯ ಕಾರಣ ಉಷ್ಣತೆ ಹಾಗು ತೇವಾಂಶ. ಗಾಳಿಯು ಮಣ್ಣಿನ ಹಾಗು ಇತರ ಹಗುರ ಕಣಗಳನ್ನು ಚಲಿಸುವಂತೆ ಮಾಡುತ್ತದೆ, ಪ್ರಮುಖವಾಗಿ ಗಿಡಗಳ ದಟ್ಟಣೆಯು ಹೆಚ್ಚಾಗಿಲ್ಲದ ಜಾಗಗಳಲ್ಲಿ. ಮಣ್ಣು ತಳಸೇರುವಿಕೆಯ ವಿಧ ಮತ್ತು ಅದರ ಮೊತ್ತವು, ಮಣ್ಣಿನ ರಚನೆಯಲ್ಲಿ ಪ್ರಮುಖಪಾತ್ರವಹಿಸುತ್ತದೆ. ಅಯಾನ್‌ಗಳ ಮತ್ತು ಮಣ್ಣಿನ ಕಣಗಳ ಚಲನೆಯು ವಿವಿಧ ರೀತಿಯ ಮಣ್ಣುಗಳು ಅಭಿವೃದ್ಧಿಯಾಗುವುದಕ್ಕೆ ಆಧಾರವಾಗುತ್ತದೆ. ಋತುವಿನ ಹಾಗೂ ದಿನಗಳ ಉಷ್ಣಾಂಶದ ಏರಿಳಿತಗಳು, ಮೂಲ ಬಂಡೆಯ ವಸ್ತುಗಳಲ್ಲಿರುವ ನೀರಿನ ಹಾಗೂ ಹವಾಮಾನದ ಪರಿಣಾಮಗಳಿಗೆ ಕಾರಣವಾಗುತ್ತವೆ ಮತ್ತು ಮಣ್ಣಿನ ಚಲನಶಾಸ್ತ್ರದ ಮೇಲೆ ಪ್ರಭಾವ ಬೀರುತ್ತದೆ. ಉಷ್ಣತೆ ಮತ್ತು ತಳಸೇರುವಿಕೆಯು ಜೈವಿಕ ಚಟುವಟಿಕೆಗಳ ವೇಗ, ರಾಸಾಯನಿಕ ಕ್ರಿಯೆಗಳ ವೇಗ, ಹಾಗೂ ಸಸ್ಯಗಳ ಬೆಳವಣಿಗೆಯ ಹೊದಿಕೆಯ ವಿಧಗಳ ಮೇಲೆ ಪ್ರಭಾವ ಬೀರುತ್ತವೆ,

ಜೈವಿಕ ಸ್ಥಿತಿಗಳು

ಸಸ್ಯಗಳು, ಪ್ರಾಣಿಗಳು, ಶಿಲೀಂಧ್ರಗಳು, ಬ್ಯಾಕ್ಟಿರಿಯಾಗಳು ಮತ್ತು ಮಣ್ಣಿನ ಮೇಲಿರುವ ಕಸ ಕಡ್ಡಿಗಳು ಮಣ್ಣು ನಿರ್ಮಾಣದ ಕಾರ್ಯಕರ್ತರು ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳು ಮಣ್ಣುಗಳನ್ನು ಬೆರೆಸುತ್ತವೆ ಮತ್ತು ರಂಧ್ರಗಳನ್ನು ಮಾಡುತ್ತವೆ, ಇದರಿಂದ ಮಣ್ಣಿನಲ್ಲಿರುವ ತೇವಾಂಶ ಹಾಗು ಅನಿಲಗಳು ಕೆಳಪದರಗಳಿಗೆ ಸೇರುತ್ತವೆ. ಇದೇ ರೀತಿ ಸಸ್ಯಗಳ ಬೇರುಗಳೂ ಸಹ ಮಣ್ಣನ್ನು ಕೊರೆಯುತ್ತವೆ, ಅದರಲ್ಲೂ ಕೆಲವು ಸಸ್ಯಗಳ ತಾಯಿ ಬೇರುಗಳು ಮಣ್ಣಿನ ಪದರಗಳಲ್ಲಿ ಹಲವು ಮೀಟರ್‌ಗಳವರೆಗೂ ಸಾಗಿ ಅಲ್ಲಿ ಸಿಗುವ ಪೋಷಕಾಂಶಗಳನ್ನು ತೆಗೆದುಕೊಳ್ಳುತ್ತವೆ. ತಂತುರು ಬೇರುವುಳ್ಳ ಗಿಡಗಳು ಮಣ್ಣಿನ ಹೊರ ಪದರದಲ್ಲೇ ಬೇರುಗಳನ್ನು ಹಬ್ಬಿಸುತ್ತವೆ ಹಾಗು ನಂತರ ಈ ಬೇರುಗಳು ಬಹಳ ಸುಲಭವಾಗಿ ಮಣ್ಣಿನಲ್ಲಿ ಕರಗುವುದರಿಂದ ಮಣ್ಣಿಗೆ ಸಾವಯವ ವಸ್ತುಗಳು ದೊರೆಯುತ್ತವೆ. ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳನ್ನೊಳಗೊಂಡ ಸೂಕ್ಷ್ಮ-ಜೀವಿಗಳು, ಬೇರುಗಳ ಹಾಗು ಮಣ್ಣಿನ ನಡುವೆ ರಾಸಾಯನಿಕ ಬದಲಾವಣೆಗೆ ಸಹಕರಿಸುತ್ತವೆ ಮತ್ತು ಪೋಷಕಾಂಶಗಳನ್ನು ಕಾದಿರಿಸುತ್ತವೆ. ಭೂಸವೆತಕ್ಕೆ ಕಾರಣವಾಗುವ, ಸಸ್ಯಗಳ ಬೆಳವಣಿಗೆಯಿಂದುಂಟಾದ ಹೊದಿಕೆಯನ್ನು ತೆಗೆದುಹಾಕಿ, ಮಾನವನು ಮಣ್ಣನ್ನು ಪುನಃರೂಪಿಸುವುದಕ್ಕೆ ಸಹಾಯ ಮಾಡಬಹುದು. ಇವುಗಳ ಚಲನೆಯಿಂದ ಬೇರೆ ಬೇರೆ ರೀತಿಯ ಮಣ್ಣುಗಳು ಜೊತೆಗೂಡಲು ಸಹಾಯವಾಗುತ್ತದೆ, ಇದರಿಂದ ಮೂಲ ಬಂಡೆಯಿಂದ ಉದುರಿದ ಮಣ್ಣಿನ ಜೊತೆಗೆ (ಪೋಷಕಾಂಶ ರಹಿತ ಮಣ್ಣು) ಪೋಷಕಾಂಶ ಯುಕ್ತ ಕಸಕಡ್ಡಿಗಳು ಸೇರಿ ಹೊಸ ಮಣ್ಣು ರೂಪುಗೊಳ್ಳುತ್ತದೆ.

ಗಿಡಮರಗಳ ಬೆಳವಣಿಗೆ ಮಣ್ಣಿನ ಮೇಲೆ ಬಹಳ ಪರಿಣಾಮ ಬೀರುತ್ತದೆ ಇದು ಮಳೆನೀರಿನಿಂದ ಆಗುವ ಮಣ್ಣುಕೊಚ್ಚಣೆ ಅಥವಾ ಮಣ್ಣಿನ ಮೇಲ್ಪದರಿನ ಸವೆತವನ್ನು ತಡೆಯುತ್ತದೆ. ಇದು ಮಣ್ಣಿಗೆ ನೆರಳನ್ನು ನೀಡಿ, ಮಣ್ಣಿನಲ್ಲಿರುವ ತೇವಾಂಶ ಆವಿಯಾಗದಂತೆ ತಡೆದು ಮಣ್ಣನ್ನು ತಂಪಾಗಿಡುತ್ತದೆ. ಅಥವಾ ಮಣ್ಣಿನ ತೇವಾಂಶ ಆವಿಯಾಗಿ ಒಣಗುವಂತೆ ಮಾಡುತ್ತದೆ. ಸಸ್ಯಗಳು ಹೊರಹಾಕುವ ಅನೇಕ ಹೊಸ ರಾಸಾಯನಿಕಗಳು ಮಣ್ಣಿನ ಕಣಗಳ ಅಭಿವೃಧ್ಧಿ ಅಥವಾ ವಿಭಜನೆ ಮಾಡುತ್ತವೆ. ಸಸ್ಯವರ್ಗಗಳು ಬೆಳೆಯಲು ಹವಾಗುಣ, ಭೂಗುಣ, ಮಣ್ಣಿನ ಮೇಲ್ಮೈ ರಚನೆ ಹಾಗು ಜೈವಿಕ ಸ್ಥಿತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದೇರೀತಿ ಮಣ್ಣಿನ ಗುಣಗಳಾದ ಸಾಂದ್ರತೆ, ಆಳ, ರಾಸಾಯನಿಕ ಸಂಯುಕ್ತಗಳು, pH , ಉಷ್ಣತೆ, ಆರ್ದ್ರತೆಗಳು ಪರಿಣಾಮ ಬೀರುತ್ತವೆ. ಸತ್ತ ಗಿಡಗಳು ಮತ್ತು ಉದುರಿದ ಎಲೆ ಹಾಗು ಕಾಂಡಗಳು ಮಣ್ಣಿನಲ್ಲಿ ಬಿದ್ದು ಕೊಳೆಯುತ್ತವೆ. ಸೂಕ್ಷ್ಮ ಜೀವಿಗಳು ಅವುಗಳನ್ನು ಕೊಳೆಸುತ್ತವೆ ಮತ್ತು ಸಾವಯವವನ್ನು ಮಣ್ಣಿಗೆ ಸೇರಿಸುತ್ತವೆ, ಇಂಗಾಲದ ಸಂಯುಕ್ತಗಳು ಮಣ್ಣಿನ ಭಾಗವಾಗಿಬಿಡುತ್ತವೆ, ಈ ರೀತಿ ಸಸ್ಯಗಳು ಮಣ್ಣಿನ ಗುಣವನ್ನು ಬದಲಾಯಿಸುತ್ತವೆ.

ಟೈಮ್

ಕಾಲವು ಮೇಲಿನ ಎಲ್ಲಾ ಪ್ರಕಾರಗಳಿಗಿಂತ ಮಣ್ಣು ರೂಪುಗೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ. ಸಮಯಕ್ಕೆ ಸರಿಯಾಗಿ ಮಣ್ಣು ರೂಪುಗೊಳ್ಳಲು ಕಾರಣವಾಗುವ ಇತರ ವಸ್ತುಗಳ ಪರಸ್ಪರ ಹೊಂದಾಣಿಕೆ ಅಗತ್ಯ. ಮಣ್ಣು ಯಾವಾಗಲು ರೂಪಾಂತರ ಗೊಳ್ಳುತ್ತಿರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಪ್ರವಾಹದ ನಂತರ ಮಣ್ಣಿನ ರೂಪ ಕಾಣುವುದಿಲ್ಲ, ಯಾಕೆಂದರೆ ಅಲ್ಲಿ ಮಣ್ಣು ರೂಪುಗೊಳ್ಳಲು ಬೇಕಾದ ಸಮಯ ಇರುವುದಿಲ್ಲ. ಇಲ್ಲಿ ಮಣ್ಣಿನ ಹೊರಮೈ ಹೂತುಕೊಂಡಿರುತ್ತದೆ ಮತ್ತು ರೂಪಗೊಳ್ಳವ ಕಾರ್ಯವು ನಂತರ ಶುರುವಾಗುತ್ತದೆ. ಬಹಳ ವರ್ಷಗಳ ನಂತರವೇ ಬದಲಾವಣೆ ಸಾಧ್ಯ, ಇದರಿಂದ ಏನಿದ್ದರೂ ಸರಳ ಮಣ್ಣಿನ ಪದರವು ಕಷ್ಟ ಸಾಧ್ಯ, ಇದು ಮಣ್ಣಿನ ಹಲವು ಪದರುಗಳ ರೂಪಕ್ಕೆ ನಾಂದಿಯಾಗುತ್ತವೆ. ಮಣ್ಣು ತನ್ನ ಗುಣಲಕ್ಷಣಗಳ ನಿರ್ದಿಷ್ಟತೆಯನ್ನು ಬಹಳ ಕಾಲದವರೆಗೂ ತೋರುತ್ತದೆ. ಮಣ್ಣಿನ ಜೀವನಚಕ್ರವು ಅದು ಶಿಥಿಲಗೊಳ್ಳುವುದರಲ್ಲಿ ಕೊನೆಗೊಳ್ಳುತ್ತದೆ. ಮಣ್ಣಿನ ಗುಣ ಕ್ಷೀಣಿಸಿದರೂ ಹಾಗು ಶಿಥಿಲಗೊಂಡರೂ , ಇದರ ಜೀವನಚಕ್ರವು ಬಹಳ ದೊಡ್ಡದು ಹಾಗು ಫಲವತ್ತಾದುದು.

ಮಣ್ಣು ತನ್ನ ಉತ್ಪಾದನೆಗೆ ಕಾರಣವಾಗುವ ವಸ್ತುಗಳು, ಮೈದಾನದ ಪ್ರದೇಶ, ನಿರ್ದಿಷ್ಟ ಹಾಗು ಬಹಳ ವರ್ಷಗಳ ತನಕ ಬದಲಾವಣೆ ಆಗದ "ಸ್ಥಿರ" ಪ್ರದೇಶಗಳ ಮಣ್ಣಿನ ಜೊತೆಗೆ ತಮ್ಮ ಹೊಂದಾಣಿಕೆಯನ್ನು ತೋರುತ್ತವೆ. ಹಲವು ವಸ್ತುಗಳು ಮಣ್ಣಿನ ಮೇಲ್ಪದರದ ಮೇಲಿರುತ್ತವೆ, ಇವು ಗಾಳಿಗೆ ಅಥವಾ ಮಳೆನೀರಿನೊಂದಿಗೆ ಕೊಚ್ಚಿ ಹೋಗುತ್ತವೆ. ಹೀಗೆ ವಸ್ತುಗಳ ಕೂಡುವಿಕೆ, ಕಳೆಯುವಿಕೆ, ಹಾಗು ಇತರ ಬದಲಾವಣೆಗಳಿಂದ ಮಣ್ಣು ಯಾವಾಗಲೂ ವಿವಿಧ ಪರಿಸ್ಥಿತಿಗಳಿಗೆ ತೆರೆದುಕೊಂಡಿರುತ್ತದೆ. ಈ ರೀತಿಯ ಬದಲಾವಣೆಗಳ ವೇಗ ಹಾಗು ನಿಧಾನಗತಿಯು ಆ ಪ್ರದೇಶದ ಹವಾಗುಣ, ಭೂಮಿಯ ಲಕ್ಷಣ, ಜಾಗ ಹಾಗು ಜೈವಿಕ ಕ್ರಿಯೆಗಳ ಮೇಲೆ ಅವಲಂಭಿತವಾಗಿರುತ್ತವೆ.

ಲಕ್ಷಣಗಳು

ಮಣ್ಣು 
ಮಣ್ಣಿನ ವಿಧಗಳು ಜೇಡಿಮಣ್ಣು, ಜಿಗುಟು ಮಣ್ಣು ಮತ್ತು ಮರಳಿನ ಕೂಡುವಿಕೆಯಿಂದಾಗುತ್ತವೆ.
ಮಣ್ಣು 
ಕೂಟೆನೆ ನ್ಯಾಷನಲ್ ಪಾರ್ಕ್ ನ ಪೇಯಿಂಟ್ ಪಾಟ್ಸ್ ಬಳಿ ಕಬ್ಬಿಣ ಭರಿತ ಮಣ್ಣು ಇದೆ.

ಮಣ್ಣಿನ ಬಣ್ಣ ವೇ ಅದನ್ನು ನೋಡುವವರಿಗೆ ಮೊದಲ ಆಕರ್ಷಣೆ. ಇದರ ಆಕರ್ಷಕ ಬಣ್ಣ ಹಾಗು ಬಣ್ಣದ ಪ್ರಭೇದಗಳು ಮನಸ್ಸಿಗೆ ನಾಟುವಂತವು. ಕೆಂಪು ನದಿಯು (ಮಿಸಿಸ್ಸಿಪ್ಪಿ ಜಲಾನಯನ ಪ್ರದೇಶ) ಓಕ್ಲಹೊಮಾದಿಂದ ಕೆಂಪು ಗೋಡು ಮಣ್ಣನ್ನು ತರುವುದರಿಂದ ಇದರ ತಳದಲ್ಲಿ ಕೆಂಪು ಮಣ್ಣು ಶೇಖರಣೆಯಾಗಿರುತ್ತದೆ. ಚೈನಾದ ಹಳದಿ ನದಿಯು ಲಾಸೆಲ್‌ ನಿಂದ ಮಣ್ಣನ್ನು ತರುವುದರಿಂದ ಇದರ ತಳದಲ್ಲಿ ಹಳದಿ ಮಣ್ಣು ಶೇಖರಣೆಯಾಗಿರುತ್ತದೆ. ಮೈದಾನ ಪ್ರದೇಶವಾದ ಮೊಲ್ಲಿಸಾಲ್‌ನಲ್ಲಿ ಮಣ್ಣು ಕಂದು ಬಣ್ಣದ್ದಾಗಿದೆ ಏಕೆಂದರೆ ಇದರಲ್ಲಿ ಸಾವಯವ ಪದಾರ್ಥಗಳು ಹೆಚ್ಚಾಗಿವೆ. ಬೊರಿಲ್ ಕಾಡುಗಳಲ್ಲಿರುವ ಪೊಡೊಸಾಲ್ ಮಣ್ಣಿನಲ್ಲಿ ಆಮ್ಲ ಹೆಚ್ಚಾಗಿದ್ದು ಮತ್ತು ಮಣ್ಣು ಒಸರುವುದರಿಂದ ವಿವಿಧ ಮಣ್ಣಿನ ಪ್ರಭೇಧಗಳನ್ನು ಕಾಣಬಹುದು. ಮಣ್ಣಿನ ಬಣ್ಣವು ಮುಖ್ಯವಾಗಿ ಅದರಲ್ಲಿ ಹುದುಗಿರುವ ಖನಿಜಗಳ ಮೇಲೆ ಅವಲಂಭಿಸಿದೆ. ಬಹಳಷ್ಟು ಮಣ್ಣಿನ ಬಣ್ಣವು ಅದರಲ್ಲಿರುವ ಕಬ್ಬಿಣದ ಅದಿರಿನ ಮೇಲೆ ಆಧರಿಸಿದೆ. ಮಣ್ಣಿನ ಬಣ್ಣದ ಬದಲಾವಣೆ ಹಾಗು ವಿಸ್ತರಣೆಯು ಅಲ್ಲಿನ ಮಣ್ಣಿನಲ್ಲಾಗುವ ರಸಾಯನಿಕ ಹಾಗು ಜೈವಿಕ ಹವಾಪರಿಣಾಮಗಳಿಂದಾಗುತ್ತದೆ, ಪ್ರಮುಖವಾಗಿಆಕ್ಸಿಡೀಕರಣ ಮತ್ತು ಅಪಕರ್ಷಣಗಳಿಗೆ ಸಂಬಂಧಿಸಿದ ಕ್ರಿಯೆಗಳಿಂದ ಮೂಲ ಬಂಡೆಯಿಂದ ಉದುರಿದ ಮಣ್ಣಿನಲ್ಲಿರುವ ಮೂಲ ಖನಿಜಗಳು ಬೇರೆ ಮೂಲ ವಸ್ತುಗಳ ಜೊತೆ ಬೆರೆತು ಬಣ್ಣ ಬಣ್ಣದ ಸಂಯುಕ್ತಗಳಾಗಿ ಮಾರ್ಪಾಡಾಗುತ್ತದೆ. ಕಬ್ಬಿಣವು ಹಳದಿ ಅಥವಾ ಕೆಂಪು ಬಣ್ಣಗಳ ಜೊತೆ ಬೆರೆತು ದ್ವಿತೀಯ ಖನಿಜಗಳಾಗುತ್ತವೆ. ಸಾವಯವಗಳು ಕರಗಿ ಕಪ್ಪು ಮತ್ತು ಕಂದು ಬಣ್ಣದ ಸಂಯುಕ್ತಗಳಾಗುತ್ತವೆ ಹಾಗು ಮ್ಯಾಂಗನೀಸ್, ಗಂಧಕ ಮತ್ತು ನೈಟ್ರೊಜನ್‌ಗಳು ಕಪ್ಪು ಖನಿಜಗಳಾಗಿ ಭೂಮಿ ಸೇರುತ್ತದೆ. ಈ ಬಣ್ಣಕಾರಕಗಳು ವಿವಿಧ ಬಣ್ಣಗಳ ಮಾದರಿಗಳನ್ನು ಮಣ್ಣು ರೂಪುಗೊಳ್ಳುವಾಗ ಸೃಷ್ಟಿಸುತ್ತವೆ. ರೂಪುಗೊಳ್ಳುವ ಹಂತದಲ್ಲಿ ಗಾಳಿಯಿಂದ ಸಮವಾದ ಅಥವಾ ಸಮಾನಗತಿಯ ಬಣ್ಣ ಬದಲಾವಣೆಯಾಗುತ್ತದೆ, ಆದರೆ ಕ್ಷೀಣಗತಿಯ ಹವಾಗುಣದಲ್ಲಿ ಬಣ್ಣವು ಚದುರಿ,ಕ್ಲಿಷ್ಟವಾದ,ಬಣ್ಣ ಬಣ್ಣದ ಮಚ್ಚೆಗಳಂತೆ ಮತ್ತು ವಿವಿಧ ಬಣ್ಣದ ಚುಕ್ಕೆಗಳ ಗುಂಪುಗಳಂತೆ ತೋರುತ್ತವೆ.

ಮಣ್ಣಿನ ರಚನೆ ಎಂದರೆ ಮಣ್ಣಿನ ಕಣಗಳ ಒಟ್ಟುಗೂಡುವಿಕೆ. ಇವು ಯಾವ ಆಕಾರದಲ್ಲೂ, ಅಳತೆಯಲ್ಲೂ, ಬೆಳವಣಿಗೆಯ ಹಂತದಲ್ಲೂ ಅಥವಾ ತೋರುವಿಕೆಯ ರೀತಿಯಲ್ಲಾದರೂ ಇರಬಹುದು. ಮಣ್ಣಿನ ಕಣಗಳ ರಚನೆಯು ಮಣ್ಣಿನಲ್ಲಿ ಗಾಳಿಯಾಡುವಿಕೆ, ನೀರಿನ ಸಂಚಾರ, ಮಣ್ಣಿನ ಸವೆತ ತಡೆಯುವುದು, ಹಾಗು ಸಸ್ಯಗಳ ಬೇರುಗಳ ಬೆಳವಣಿಗೆಯಲ್ಲಿ ಸಹಕರಿಸುತ್ತವೆ ರಚನೆಯಿಂದ ವಿನ್ಯಾಸ,ಸಾವಯವಗಳ ಇರುವಿಕೆ, ಜೈವಿಕ ಕ್ರಿಯೆ, ಹಿಂದಿನ ಮಣ್ಣಿನ ಬದಲಾವಣೆಗಳು,ಮಾನವ ಉಪಯೋಗ, ರಾಸಾಯನಿಕ ಮತ್ತು ಯಾವ ಖನಿಜಾಂಶಗಳ ಸ್ಥಿತಿಗತಿಯಿಂದ ಮಣ್ಣು ಮಾರ್ಪಾಡುಗೊಂಡಿದೆ ಎಂಬ ಸೂಕ್ಷ್ಮ ವಿಷಯಗಳು ತಿಳಿದು ಬರುತ್ತದೆ.

ಮಣ್ಣಿನ ವಿನ್ಯಾಸವು ಮರಳು, ಗೋಡು ಮತ್ತು ಜೇಡಿನ ಸೇರುವಿಕೆಯಿಂದಾಗಿದೆ. ಮಣ್ಣಿನಲ್ಲಿರುವ ವಿವಿಧ ಅಂಶಗಳು ಮಣ್ಣಿನ ನಡವಳಿಕೆ, ಅಂದರೆ ಪೋಷಕಾಂಶಗಳನ್ನು ಮತ್ತು ನೀರನ್ನು ಹಿಡಿದಿಡುವ ಸಾಮರ್ಥ್ಯ. ಮರಳು ಹಾಗು ಗೋಡು ಮಣ್ಣು, ಭೌತಿಕವಾಗಿ ಮೂಲ ಬಂಡೆಯಿಂದ ಉದುರಿ ಆಗಿರುವ ಸಂಯುಕ್ತಗಳು, ಜೇಡಿ ರಾಸಾಯನಿಕಗಳಿಂದ ಉದುರುವ ವಸ್ತುಗಳಿಂದಾದುದು. ಜೇಡಿಯು ಮಣ್ಣಿನಲ್ಲಿ ಪೋಷಕಾಂಶ ಮತ್ತು ನೀರನ್ನು ಹಿಡಿದಿಡಲು ಸಹಕರಿಸುತ್ತದೆ. ಜೇಡಿಯು ಗಾಳಿಯಿಂದ ಮತ್ತು ನೀರಿನಿಂದಾಗುವ ಮಣ್ಣಿನ ಸವೆತವನ್ನು ತಡೆಯುವಲ್ಲಿ ಮರಳು ಹಾಗು ಗೋಡುಗಳಿಗಿಂತ ಉತ್ಕೃಷ್ಟವಾದುದು, ಏಕೆಂದರೆ ಇದರಲ್ಲಿ ಕಣಗಳು ಒತ್ತೊತ್ತಾಗಿ ಕೂಡಿರುತ್ತವೆ. ಮಧ್ಯಮ ರೀತಿಯ ಮಣ್ಣಿನಲ್ಲಿ ಜೇಡಿಯು ಮಣ್ಣಿನ ಪದರುಗಳ ಮೂಲಕ ಕೆಳಹರಿದು ತಳಭಾಗದ ಮಣ್ಣಿನಲ್ಲಿ ಸೇರಿಕೊಂಡಿರುತ್ತದೆ. ಮಣ್ಣಿನ ವಿದ್ಯುತ್ ನಿರ್ಬಂಧಕ ಗುಣವು ಅದರಲ್ಲಿರುವ ವಿದ್ಯುತ್‌ ಪ್ರವಹಿಸುವ ಲೋಹದ ವಸ್ತುಗಳ ತುಕ್ಕು ಹಿಡಿಯುವಿಕೆ ಯ ವೇಗದ ಮೇಲೆ ನಿಯಂತ್ರಣವಾಗಿದೆ. ಹೆಚ್ಚಿನ ತೇವಾಂಶ ಅಥವಾ ವಿದ್ಯುತ್‌ ಪ್ರವಾಹಕ ಗಳ ಸಾಂದ್ರತೆಯು ವಿದ್ಯುತ್ ನಿರ್ಬಂಧ ಗುಣವನ್ನು ತಗ್ಗಿಸುತ್ತದೆ ಮತ್ತು ತುಕ್ಕುಹಿಡಿಸುವ ಗುಣಗಳನ್ನು ಹೆಚ್ಚಿಸುತ್ತದೆ. . ಮಣ್ಣಿನ ವಿದ್ಯುತ್ ನಿರ್ಬಂಧಕ ಮೌಲ್ಯಗಳು 2 ರಿಂದ 1000 Ω·mಗಳ ಅಂತರದಲ್ಲಿವೆ. ಆದರೆ ಅತಿ ಹೆಚ್ಚು ಮೌಲ್ಯವು ಅಸಾಮಾನ್ಯವಾದುದು

ಮಣ್ಣಿನ ಪದರುಗಳು

ಮಣ್ಣಿನ ಪದರುಗಳ ಹೆಸರು ಅದರಲ್ಲಿರುವ ವಸ್ತುಗಳ ಮೇಲೆ ಅವಲಂಬಿತವಾಗಿವೆ, ಈ ವಸ್ತುಗಳು ಮಣ್ಣಿನ ಮಾರ್ಪಾಡಿನಲ್ಲಿ ಉಂಟಾದ ಒತ್ತಡವನ್ನು ಪ್ರದರ್ಶಿಸುತ್ತವೆ. ಅವುಗಳ ಹೆಸರುಗಳ ಪಟ್ಟಿ ಮಾಡುವಾಗ ಅಕ್ಷರಗಳ ಮತ್ತು ಸಂಖ್ಯೆಗಳ ಸಂಕ್ಷಿಪ್ತಗಳನ್ನು ಬಳಸುವರು. ಅವುಗಳನ್ನು ವಿವರಿಸುವಾಗ ಮತ್ತು ವರ್ಗೀಕರಣ ಮಾಡುವಾಗ ಅವುಗಳ ಬಣ್ಣ, ಅಳತೆ, ರೂಪ, ರಚನೆ, ಸ್ನಿಗ್ಧತೆ, ಬೇರುಗಳ ಪ್ರಮಾಣ, pH , ಖಾಲಿ ಜಾಗಗಳು, ನಿಯಂತ್ರಿತಗುಣಲಕ್ಷಣಗಳು ಮತ್ತು ಅದರಲ್ಲಿ ನಾಡ್ಯೂಲ್‌ಗಳಿದ್ದರೆ ಅಥವಾ ಸಾರತೆಗಳಿದ್ದರೆ ಪರಿಗಣಿಸಲಾಗುವುದು. ಮಣ್ಣಿನ ಯಾವುದೇ ಒಂದು ಪಾರ್ಶ್ವದಲ್ಲಿ ಕೆಳಗೆಕೊಟ್ಟಿರುವ ಎಲ್ಲಾ ಪ್ರಮುಖ ಪದರುಗಳು ಇರುವುದಿಲ್ಲ.ಮಣ್ಣು ಕೆಲವು ಅಥವಾ ಬಹಳ ಪದರುಗಳನ್ನು ಹೊಂದಿರಬಹುದು.

ಮೂಲ ವಸ್ತುಗಳು ಅನುಕೂಲಕರ ವಾತಾವರಣಕ್ಕೆ ತೆರೆದುಕೊಂಡಿದ್ದರೆ ಅದರಿಂದ ಸಸ್ಯಗಳು ಬೆಳೆಯಲು ಸೂಕ್ತವಾದ ಮಣ್ಣು ಸಿಗುತ್ತದೆ. ಸಸ್ಯಗಳು ಬೆಳೆಯುವುದರಿಂದ ಅಲ್ಲಿ ಸಾವಯವಾಂಶಗಳು ಸೇರಿಕೊಳ್ಳುತ್ತವೆ, ಈ ರೀತಿಯ ಸಾವಯವ ಸೇರ್ಪಡೆಯಿಂದ ಓ ಹಾರಿಜಾನ್ ನಿರ್ಮಾಣವಾಗುತ್ತದೆ. ಜೀವಿಗಳೆಲ್ಲಾ ಒಟ್ಟಾಗಿ ಸಾವಯವ ವಸ್ತುಗಳನ್ನು ವಿಭಜಿಸುತ್ತವೆ. ಸಸ್ಯಗಳು ಹಾಗು ಪ್ರಾಣಿಗಳು ಇದರಿಂದ ಸಿಗುವ ಪೋಷಕಾಂಶಗಳನ್ನು ಅವಲಂಭಿಸುತ್ತವೆ, ಬಹು ಸಮಯಾನಂತರ ಸಾವಯವ ಪದರು ಮತ್ತು ಕಸಕಡ್ಡಿಗಳ ಜೊತೆ ಹೊಸ ಪದರನ್ನು ಸೃಷ್ಟಿಸುತ್ತದೆ.

ವರ್ಗೀಕರಣ

ವಿವಿಧ ರೀತಿಯ ಮಣ್ಣುಗಳ ನಡುವಿನ ಸಂಬಂಧ ಹಾಗು ಅವುಗಳ ನಿರ್ದಿಷ್ಟ ಉಪಯೋಗಗಳಿಗಾಗಿ ಮಣ್ಣನ್ನು ಅನೇಕ ಪ್ರಭೇಧಗಳಾಗಿ ವಿಂಗಡಿಸಲಾಗಿದೆ. ರಷ್ಯಾದ ವಿಜ್ಞಾನಿ ಡೊಕುಚೆವ್ಎಂಬುವವರು 1880 ರಲ್ಲಿ ಮೊದಲ ಬಾರಿಗೆ ಸಮರ್ಪಕವಾಗಿ ವರ್ಗೀಕರಣವನ್ನು ಮಾಡಿದರು. ಅಮೇರಿಕ ಹಾಗು ಯೂರೋಪಿನ ಸಂಶೋಧಕರು ಇದನ್ನು ಅನೇಕ ಬಾರಿ ರೂಪಾಂತರಿಸಿ, 1960ರ ತನಕ ಸಾಮಾನ್ಯವಾಗಿ ಉಪಯೋಗಿಸುತ್ತಿದ್ದ ಪದ್ದತಿಯನ್ನು ಅಭಿವೃದ್ಧಿ ಪಡಿಸಿದರು. ಇದು ಮಣ್ಣಿನ ನಿರ್ದಿಷ್ಟ ಮೇಲ್ಮೈ ನಲ್ಲಿರುವ ವಸ್ತುಗಳು ಹಾಗು ಕಾರಣಿಕೆಗಳನ್ನು ಆಧರಿಸಿದೆ. 1960 ರಲ್ಲಿ ವಿಭಿನ್ನ ರೀತಿಯ ವರ್ಗೀಕರಣ ಪ್ರಕ್ರಿಯೆಯು ಆರಂಭಗೊಂಡಿತು, ಮೂಲ ವಸ್ತುಗಳು ಮತ್ತು ಮಣ್ಣುಕಾರಕ ವಸ್ತುಗಳ ಬದಲಾಗಿ ಮಣ್ಣಿನ ಹೊರಮೈಲಕ್ಷಣ ಗಳ ಮೇಲೆ ಕೇಂದ್ರೀಕೃತ ವಾಗಿತ್ತು. ಅಲ್ಲಿಂದ ಇದು ಬಹಳವಾಗಿ ಅನೇಕ ಬದಲಾವಣೆಗಳನ್ನು ಕಂಡಿದೆ. ದ ವರ್ಲ್ಡ್ ರೆಫರೆನ್ಸ್‌ ಬೇಸ್‌ ಫಾರ್‌ ಸಾಯಿಲ್‌ ರಿಸೋರ್ಸಸ್(WRB)ನ ಗುರಿ ಎಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಣ್ಣಿನ ವರ್ಗೀಕರಣದ ಆಧಾರ ಉಲ್ಲೇಖವನ್ನು ಸ್ಥಾಪಿಸುವುದು.

ವರ್ಗಗಳು

ಮಣ್ಣು ವರ್ಗೀಕರಣದ ಮುಖ್ಯ ಪ್ರಭೇದವೆಂದರೆ ವರ್ಗಗಳು. ಸಾಲ್‌ ಅಕ್ಷರಗಳಲ್ಲಿ ವರ್ಗವು ಕೊನೆಗೊಳ್ಳುತ್ತದೆ. ಸಂಯುಕ್ತ ಸಂಸ್ಥಾನದ ವರ್ಗೀಕರಣ ನಿಯಮದಲ್ಲಿ 10 ವರ್ಗಗಳಿವೆ:

  • ಎಂಟಿಸಾಲ್‌ ಎನ್ನುವುದು ಇತ್ತೀಚೆಗೆ ರೂಪುಗೊಂಡ ಯಾವುದೇ ಅಭಿವೃದ್ಧಿಯಾಗದ ಪದರಿನ ಮಣ್ಣು. ಇವು ಸಾಮಾನ್ಯವಾಗಿ ಗುಂಪುಗೂಡದ ಮರಳಿನಲ್ಲಿ, ಕೆಲವೆಡೆ ಮೂಲಬಂಡೆಗಳ ಮೇಲೆ A ಪದರು ಇರುವಲ್ಲಿ ಇರುತ್ತವೆ.
  • ವರ್ಟಿಸಾಲ್ ವರ್‌ಟಿಸಾಲ್‌ಎನ್ನುವುದು ಮಣ್ಣಿನ ತಲೆಕೆಳಗಾದ ರೂಪ. ಅವುಗಳು ತೇವಗೊಂಡಾಗ ದಪ್ಪವಾಗುತ್ತವೆ ಮತ್ತು ಒಣಗಿದಾಗ ಸಂಕುಚಿಸುತ್ತವೆ, ಆಳವಾದ ಬಿರುಕುಗಳಾಗಿ ಮೇಲಿನ ಪದರವು ಒಳಸೇರುತ್ತವೆ.
  • ಇನ್‌ಸೆಪ್ಟಿಸಾಲ್ - ಎನ್ನುವುದು ಮಣ್ಣಿನ ಬಾಲ್ಯಾವಸ್ಥೆ. ಅವು ಪದರುರೂಪಗೊಳ್ಳುವ ಪಾರ್ಶ್ವ ರೂಪ ತೋರುತ್ತವೆಯಾದರೂ ಅಲ್ಪ ಪ್ರಮಾಣದಲ್ಲಿ ಪೂರ್ಣ ಕರಗಿರುವ ಅಥವಾ ಅಲ್ಪಸ್ವಲ್ಪ ಪ್ರಮಾಣದ ವಸ್ತುಗಳು ಮಣ್ಣಿನ ಕೆಳಭಾಗಕ್ಕೆ ಸರಿಯುತ್ತಿರುವುದು ಕಾಣಬಹುದು ಮತ್ತು ವಸ್ತುಗಳು ಮಣ್ಣಿನ ಒಂದು ಪದರಿನಿಂದ ಮತ್ತೊಂದು ಪದರಿನ ಮೇಲೆ ಶೇಖರಣೆಯಾಗುವುದನ್ನು ಕಾಣಬಹುದು.
  • ಅರಿಡಿಸಾಲ್‌ - ಶುಷ್ಕ ಮಣ್ಣು ಮರುಭೂಮಿಯಂತ ವಾತಾವರಣದಲ್ಲಿ ತಯಾರಾಗುವುದು. ಭೂಮಿಯಲ್ಲಿರುವ ಶೇಕಡಾ 20ರಷ್ಟು ಮಣ್ಣನ್ನು ಇದು ಒಳಗೊಂಡಿರುತ್ತದೆ. ಮಣ್ಣಾಗುವಿಕೆಯು ಬಹಳ ನಿಧಾನ ಮತ್ತು ಒಟ್ಟು ಸಾವಯವ ವಸ್ತುಗಳು ವಿರಳ. ಅವು ಪಾರ್ಶ್ವದೃಶ್ಯ ಲಕ್ಷಣಗಳನ್ನೊಳಗೊಂಡಿರುತ್ತವೆ (ಕ್ಯಾಲ್ಸಿಕ್‌ಪದರು), ನೀರಿನ ಹರಿವಿನಿಂದ ಕ್ಯಾಲ್ಸಿಯಂ ಕಾರ್ಬೊನೇಟ್‌ ಶೇಖರಣೆಗೊಂಡಿರುತ್ತವೆ. ಬಹಳಷ್ಟು ಅರಿಡಿಸೊ ಮಣ್ಣುಗಳು ಚೆನ್ನಾಗಿ-ಅಭಿವೃದ್ಧಿ ಹೊಂದಿದ ಪದರುಗಳು, ಅತಿ ತೇವಾಂಶವುಳ್ಳ ಜೇಡಿಯ ಸಾಗಾಣಿಕೆಯನ್ನು ತೋರುತ್ತವೆ.
  • ಮೊಲ್ಲಿಸಾಲ್‌-ದಪ್ಪದಾದ ಪದರುಗಳಿಂದ ಕೂಡಿದ ಮೃದು ಮಣ್ಣುಗಳು.
  • ಸ್ಪೊಡೊಸಾಲ್‌ - ಪಾಡ್‌ಜಲೀಕರಣದಿಂದಾದ ಮಣ್ಣು ಎಂದರೆ ವರ್ಷಪೂರ್ತಿ ಹಿಮದಿಂದ ಘನೀಭೂತವಾದ ಪ್ರದೇಶದಲ್ಲಿ ಉಂಟಾದ ಮಣ್ಣು. ಇವು ತಂಪಾದ ವಾತಾವರಣವಿರುವ ಕೊನಿಫೆರಸ್ ಮತ್ತು ಎಲೆಯುದುರುವ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಣ್ಣುಗಳು.
  • ಅಲ್ಫಿಸಾಲ್- ಅಲ್ಯುಮಿನಿಯಂ ಮತ್ತು ಕಬ್ಬಿಣದಿಂದ ಕೂಡಿದ ಮಣ್ಣುಗಳು. ಅವುಗಳಲ್ಲಿ ಜೇಡಿಮಣ್ಣಿನ ಅಂಶಗಳುಳ್ಳ ಪದರುಗಳಿರುತ್ತವೆ ಮತ್ತು ಮೂರು ತಿಂಗಳು ಸಸ್ಯಗಳು ಬೆಳೆಯಲು ಬೇಕಾದಷ್ಟು ಪ್ರಮಾಣದ ತೇವಾಂಶ ಹಾಗು ಉಷ್ಣತೆ ಇರುತ್ತದೆ
  • ಅಲ್ಟಿಸಾಲ್ - ಹೆಚ್ಚಾಗಿ ಸವೆದ ಮಣ್ಣುಗಳು.
  • ಆಕ್ಸಿಸಾಲ್ - ಹೆಚ್ಚಿನ ಆಕ್ಸೈಡ್ ಅಂಶವಿರುವ ಮಣ್ಣು.
  • ಹಿಸ್ಟೊಸಾಲ್ - ಸಾವಯವಯುಕ್ತ ಮಣ್ಣು.

ಇನ್ನೂ ಇತರ ವರ್ಗಗಳನ್ನು ಸೇರಿಸಬಹುದು:

  • ಆಂಡಿಸಾಲ್‌ಗಳು - ಅಗ್ನಿಪರ್ವತದಿಂದಾದ ಹೆಚ್ಚು ಗಾಜಿನ ಅಂಶವಿರುವ ಮಣ್ಣು.
  • ಜೆಲಿಸಾಲ್ಸ್ - ಧ್ರುವಪ್ರದೇಶಗಳಲ್ಲಿ ಸದಾ ಘನೀಭವನ ಬಿಂದುವಿಗಿಂತ ಕಡಿಮೆ ತಾಪದಲ್ಲಿರುವ ಕೆಳಮಣ್ಣಿನ ಸ್ತರ.

ಸಾವಯವ ಅಂಶ

ಮಣ್ಣಿನಲ್ಲಿರುವ ಬಹಳಷ್ಟು ಸಜೀವಿಗಳಾದ ಸಸ್ಯಗಳು, ಕೀಟಗಳು, ಬ್ಯಾಕ್ಟಿರಿಯಾಗಳು, ಶಿಲೀಂಧ್ರಗಳು ತಮ್ಮ ಪೋಷಕಾಂಶ ಹಾಗು ಶಕ್ತಿಗಾಗಿ ಸಾವಯವ ವಸ್ತುಗಳ ಮೇಲೆ ಅವಲಂಭಿತವಾಗಿವೆ. ಸಾಮಾನ್ಯವಾಗಿ ಮಣ್ಣಿನಲ್ಲಿ ಅನೇಕ ರೀತಿಯ, ವಿವಿಧ ಹಂತಗಳಲ್ಲಿ ಮಣ್ಣಿನಲ್ಲಿ ಕರಗುತ್ತಿರುವ ವಸ್ತುಗಳನ್ನು ಕಾಣಬಹುದು. ಮರುಭೂಮಿಯ ಮಣ್ಣು ಮತ್ತು ಬಂಡೆಯಿಂದ ಉದುರಿದ ಪುಡಿಯಲ್ಲಿ ಸಾವಯವ ಅಂಶವು ಸ್ವಲ್ಪವೂ ಇರುವುದಿಲ್ಲ. ಮಣ್ಣಿನಲ್ಲಿರುವ, ಕೇವಲ ಸಸ್ಯಗಳು ಕೊಳೆತು ಅದರಿಂದಾದ ಪೀಟ್ (ಹಿಸ್ಟೊಸೋಲ್)ಗಳು ಫಲವತ್ತತೆಯನ್ನು ಹೊಂದಿರುವುದಿಲ್ಲ.

ಹ್ಯೂಮಸ್

ಹ್ಯೂಮಸ್ ಎಂದರೆ ಎಲೆ,ಕಸ,ಕಡ್ಡಿ ಮುಂತಾದ ಜೈವಿಕ ವಸ್ತುಗಳು, ಇವು ಒಂದು ಹಂತದವರೆಗೆ ಕೊಳೆತು ಮುಂದೆ ಕೊಳೆಯುವ ಅಥವ ಬದಲಾವಣೆಯ ನಿರ್ಬಂಧತೆಯನ್ನು ಪ್ರದರ್ಶಿಸುತ್ತವೆ. ಹ್ಯೂಮಸ್‌ನಲ್ಲಿರುವ ಎರಡು ಪ್ರಮುಖ ವಸ್ತುಗಳೆಂದರೆ ಹ್ಯೂಮಿಕ್‌ ಆಸಿಡ್‌ ಮತ್ತು ಫಲ್ವಿಕ್ ಆಸಿಡ್, ಇವುಗಳು ಸಾಮಾನ್ಯವಾಗಿ ಒಣಗಿದ ಎಲೆಗಳಿಂದ, ಕಾಂಡ ಭಾಗ ಹಾಗು ಬೇರುಗಳಿಂದಾದವುಗಳು. ಸಸ್ಯಗಳು ಸತ್ತನಂತರ ಅದರ ಅಂಶವು ಕೊಳೆಯಲು ಶುರುವಾಗುತ್ತವೆ, ಇದು ಹ್ಯೂಮಸ್ ತಯಾರಾಗುವ ಮೊದಲನೆ ಹಂತ. ಹ್ಯೂಮಸ್ ತಯಾರಾಗುವಾಗ ಮಣ್ಣಿನಲ್ಲಿ ಹಾಗು ಸಸ್ಯಭಾಗಗಳಲ್ಲಿ ಅನೇಕ ಬದಲಾವಣೆಗಳಾಗುತ್ತವೆ, ಸೆಲ್ಯುಲೋಸ್ ಮತ್ತು ಅರೆಸೆಲ್ಯುಲೋಸ್‌ಗಳು ಹಾಗು ಇತರ ನೀರಿನಲ್ಲಿ ಕರಗುವ ವಸ್ತುಗಳು ಕ್ಷೀಣಿಸುತ್ತವೆ. ಈ ರೀತಿ ಸಸ್ಯಾಂಶಗಳು ಮಣ್ಣಿನಲ್ಲಿ ಬೆರೆತು ವಿಭಜನೆಗೊಳ್ಳುವುದರಿಂದ ಹ್ಯೂಮಿನ್, ಲಿಗ್ನಿನ್ ಮತ್ತು ಲಿಗ್ನಿನ್‌ ಸಂಯುಕ್ತಗಳು ಮಣ್ಣಿನಲ್ಲಿ ಕ್ರೋಢೀಕರಿಣವಾಗುತ್ತವೆ. ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಸಸ್ಯಾಂಶಗಳನ್ನು ತಿನ್ನುವುದರಿಂದ ಹಾಗು ಕರಗಿಸುವುದರಿಂದ, ಸಸಾರಜನಕಗಳು ಅಭಿವೃದ್ಧಿ ಹೊಂದುತ್ತವೆ.

ಲಿಗ್ನಿನ್‌ಗಳು ವಿಭಜನೆಗೊಳ್ಳದೆ ಮಣ್ಣಿನೊಳಗೆ ಸೇರಿಕೊಳ್ಳುತ್ತದೆ, ಅಮೈನೊ ಆಸಿಡ್‌ಗಳ ಜೊತೆ ರಾಸಾಯನಿಕ ಪ್ರಕ್ರಿಯೆಗೊಳಪಟ್ಟರೂ ಸಹ ಮಣ್ಣಿನಲ್ಲಿ ಕರಗುವುದಿಲ್ಲ, ಸೂಕ್ಷ್ಮಾಣುಗಳ ಕಿಣ್ವಗಳ ಜೊತೆ ಬೆರೆತರೂ ಸಹ ಅವು ಕರಗುವುದಿಲ್ಲ. ಸಸ್ಯಮೂಲಗಳ ಜಿಡ್ಡು ಹಾಗು ಮೇಣದ ಪದಾರ್ಥಗಳು ಮಣ್ಣಿನಲ್ಲಿ ಕರಗಲು ನಿರ್ಬಂಧತೆಯನ್ನು ತೋರುತ್ತವೆ ಮತ್ತು ಸ್ವಲ್ಪ ಕಾಲ ಮಣ್ಣಿನಲ್ಲೇ ಇರುತ್ತವೆ. ಜೇಡಿ ಮಣ್ಣಿನಲ್ಲಿರುವ ಸಾವಯವಗಳು ಇತರ ಜೇಡಿಮಣ್ಣು ಇರದ ಮಣ್ಣುಗಳಿಗಿಂತ ಹೆಚ್ಚುಕಾಲ ಇರುತ್ತವೆ. ಸಸಾರಜನಕವು ಸಾಮಾನ್ಯವಾಗಿ ಮಣ್ಣಿನಲ್ಲಿ ಕರಗುತ್ತದೆ, ಆದರೆ ಅದು ಜೇಡಿ ಕಣಗಳ ಜೊತೆಗೆ ಬೆರೆತರೆ ಕರಗಲು ನಿರ್ಬಂಧತೆಯನ್ನು ತೋರುತ್ತವೆ. ಜೇಡಿಕಣಗಳು ಸಸಾರಜನಕವನ್ನು ಕರಗಿಸುವಂತ ಕಿಣ್ವಗಳನ್ನೂ ಹೀರಿಕೊಳ್ಳುತ್ತದೆ. ಜೇಡಿಮಣ್ಣಿಗೆ ಸಾವಯವಗಳನ್ನು ಸೇರಿಸಿದರೆ, ಅದರಲ್ಲಿರುವ ಇಂಗಾಲದ ಸಂಯುಕ್ತಗಳು ಮತ್ತು ಪೋಷಕಾಂಶಗಳು ಸಸ್ಯಗಳಿಗೆ ಹಾಗು ಸೂಕ್ಷ್ಮಾಣುಗಳಿಗೆ ಬಹಳ ವರ್ಷಗಳ ಕಾಲ ದೊರೆಯದೆ ಹೋಗುತ್ತವೆ, ಏಕೆಂದರೆ ಅವು ಬಹಳ ಗಟ್ಟಿಯಾಗಿ ಜೇಡಿಮಣ್ಣಿನೊಂದಿಗೆ ಸೇರಿಕೊಂಡಿರುತ್ತದೆ. ಸಸ್ಯಗಳ ಟ್ಯಾನಿನ್‌, ಪಾಲಿಫೀನಾಲ್ ಅಂಶವು ಮಣ್ಣಿನಲ್ಲಿ ಅತಿ ಹೆಚ್ಚಾದಲ್ಲಿ ಸಸಾರಜನಕದಲ್ಲಿರುವ ನೈಟ್ರೋಜನ್ ಹಾಗೆಯೇ ಇರುತ್ತದೆ, ಅಥವಾ ನೈಟ್ರೋಜನ್‌ನ ಚಲನೆ ಇರುವುದಿಲ್ಲ ಹಾಗು ಸಸ್ಯಗಳಿಗೂ ನೈಟ್ರೋಜನ್ ದೊರೆಯುವುದಿಲ್ಲ.

ಹ್ಯೂಮಸ್ ತಯಾರಾಗುವುದು ಒಂದು ವಿಧಾನ, ಪ್ರತಿವರ್ಷ ಭೂಮಿಸೇರುವ ಸಸ್ಯಭಾಗಗಳು, ತಳಭಾಗದ ಮಣ್ಣಿನ ವಿಧ ಈ ಎರಡೂ ಹವಾಗುಣ ಮತ್ತು ಅಲ್ಲಿರುವ ಸೂಕ್ಷಾಣುಗಳ ಮೇಲೆ ಪ್ರಭಾವ ಹೊಂದಿವೆ. ಹ್ಯೂಮಸ್‌ಯುಕ್ತ ಮಣ್ಣಿನಲ್ಲಿ ನೈಟ್ರೊಜನ್ ಪ್ರಮಾಣ ಏರುಪೇರಾಗಿರುತ್ತದೆ, ಆದರೆ ಸಾಮಾನ್ಯವಾಗಿ 3 ರಿಂದ 6 ಪ್ರತಿಶತ ನೈಟ್ರೊಜನ್ ಇರುತ್ತದೆ, ಹ್ಯೂಮಸ್‌ನಲ್ಲಿ ನೈಟ್ರೊಜನ್‌ ಮತ್ತು ಗಂಧಕವು ಯತೇಚ್ಚವಾಗಿರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಲು ಸಹಕಾರಿ. ಹ್ಯೂಮಸ್ ನೀರನ್ನೂ ಹಿಡಿದಿಟ್ಟುಕೊಳ್ಳುವುದರಿಂದ ಇದು ತೇವಾಂಶ ಕಾಪಾಡುತ್ತದೆ, ಇದನ್ನು ಸಸ್ಯಗಳು ಉಪಯೋಗಿಸಿಕೊಳ್ಳುತ್ತವೆ, ಇವು ಒಣಗಿದಾಗ ಮತ್ತು ಹಸಿಇದ್ದಾಗ, ವಿಸ್ತಾರವಾಗುತ್ತವೆ ಮತ್ತು ಕುಗ್ಗುತ್ತವೆ ಇದರಿಂದ ರಂಧ್ರಗಳು ಉಂಟಾಗುತ್ತವೆ. ಬೇರೆ ಮಣ್ಣಿನಲ್ಲಿರುವ ಪದಾರ್ಥಗಳಂತೆ ಹ್ಯೂಮಸ್ ಸ್ಥಿರವಾಗಿರುವುದಿಲ್ಲ, ಕಾರಣ ಸೂಕ್ಷ್ಮಾಣುಗಳು ಇವನ್ನು ಕರಗಿಸುತ್ತವೆ ಮತ್ತು ಹೊಸ ಸಾವಯವಗಳ ಕೂಡುವಿಕೆ ಇಲ್ಲದಿದ್ದರೆ ಕಾಲಾನಂತರ ಇದು ಕಡಿಮೆಯಾಗುತ್ತಾ ಹೊಗುತ್ತದೆ. ಆದರೆ, ಕೆಲವು ರೀತಿಯ ಹ್ಯೂಮಸ್‌ಗಳು ಬಹಳ ಸ್ಥಿರವಾಗಿರುತ್ತವೆ ಮತ್ತು ಶತಮಾನದವರೆಗೂ ಇರುತ್ತವೆ, ಕಲ್ಲಿದ್ದಲ ಆಮ್ಲಜನೀಕರಣವನ್ನು ಕಪ್ಪು ಇಂಗಾಲ ಅಂತಲೂ, ಅಮೆಜೊನಿಯನ್ ಟೆರ್ರಾ ಪ್ರೆಟಾ ಅಥವಾ ಕಪ್ಪು ಭೂಮಿ ಅಥವಾ ಖನಿಜಗಳ ಪದರಾದ ಪೊಡ್ಝಾಲ್‌ ಗಳ‍ಲ್ಲಾದಂತಹ ಹ್ಯೂಮಿಕ್ ಆಸಿಡ್ ಸಂಯುಕ್ತಗಳ ಬದಲಾವಣೆ.

ಹವಾಮಾನ ಮತ್ತು ಸಾವಯವ ಪದಾರ್ಥಗಳು

ಸಾವಯವ ಪದಾರ್ಥಗಳು ಮತ್ತು ಹ್ಯೂಮಸ್ ಗಳು ಮಣ್ಣಿನಲ್ಲಿ ವೃದ್ಧಿಸಲು, ಸೇರಲು ಅಥವಾ ಕರಗಲು ಹವಾಮಾನದ ಪಾತ್ರವು ಬಹಳ ಮುಖ್ಯವಾದುದು. ಸಾವಯವ ಪದಾರ್ಥಗಳು ವೃದ್ಧಿಗೊಳ್ಳಲು ಅಥವಾ ಕರಗಲು ಉಷ್ಣತೆ ಮತ್ತು ತೇವಾಂಶಗಳು ಪ್ರಮುಖ ಪಾತ್ರವಹಿಸುತ್ತವೆ, ಇದರ ಜೊತೆ ಮೇಲ್ಮೈಲಕ್ಷಣಗಳು ಸಾವಯವ ಮಣ್ಣುಉತ್ಪಾದನೆಯಾಗಲು ಪ್ರಮುಖ ಪಾತ್ರವಹಿಸುತ್ತವೆ. .ಮಣ್ಣಿನಲ್ಲಿ ಅತಿಹೆಚ್ಚು ಸಾವಯವ ವಸ್ತುಗಳು ಇದ್ದರೆ ತೇವ ಅಥವಾ ಶೀತ ಹವಾಗುಣದಲ್ಲಿ ಕಡಿಮೆ ಉಷ್ಣತೆ ಇದ್ದರೆ ಅವು ಮಣ್ಣು ವಿಭಜನೆಯಾಗುವುದಕ್ಕೆ ನಿರ್ಬಂಧತೆ ತೋರುತ್ತವೆ.

ಮಣ್ಣಿನ ದ್ರಾವಣಗಳು

ಬೇರೆ ಬೇರೆ ರೀತಿಯ ಮಣ್ಣು, ವಿವಿಧ ಪರಿಸ್ಥಿತಿಗಳಲ್ಲಿ ಅನೇಕ ರೀತಿಯ ಮಣ್ಣಿನ ದ್ರಾವಣಗಳನ್ನು ತೋರುತ್ತವೆ. ಈ ದ್ರಾವಣಗಳು ಮಣ್ಣಿನ ಹವಾಗುಣದಲ್ಲಿ ಅನಿಲಗಳ ಜೊತೆ ಬದಲಾವಣೆ ತೋರುತ್ತವೆ. ಈ ದ್ರಾವಣಗಳಲ್ಲಿ ಕರಗಿದ ಶರ್ಕರಗಳು, ಫಲ್ವಿಕ್ ಆಸಿಡ್‌ಗಳು ಮತ್ತು ಇತರ ಇಂಗಾಲದ ಆಮ್ಲಗಳು, ಸಸ್ಯಗಳ ಕಿರು ಪೋಷಕಾಂಶಗಳಾದ ಝಿಂಕ್‌, ಕಬ್ಬಿಣ ಮತ್ತು ತಾಮ್ರ ಹಾಗು ಇತರ ಲೋಹಗಳು, ಅಮೊನಿಯಂ ಗಳಿರುತ್ತವೆ. ಕೆಲವು ಮಣ್ಣುಗಳಲ್ಲಿ ಸೋಡಿಯಂ ದ್ರಾವಣಗಳಿದ್ದು ಸಸ್ಯಗಳ ಬೆಳವಣಿಗೆಯಲ್ಲಿ ಹೆಚ್ಚು ಪರಿಣಾಮ ಬೀರುತ್ತವೆ, ಸುಣ್ಣವು ಕಾಡಿನ ಮಣ್ಣಿನಲ್ಲಿ ಸಾಮಾನ್ಯವಾಗಿ ಇರುತ್ತವೆ. ಮಣ್ಣಿನ pH ಅದರಲ್ಲಿರುವ ಮಣ್ಣಿನ ದ್ರಾವಣದ ಋಣ ಅಯಾನ್‌ ಮತ್ತು ಧನ ಅಯಾನ್ ಗಳ ಮೇಲೆ ಅವಲಂಭಿತವಾಗಿವೆ ಹಾಗು ಅವು ಹೇಗೆ ಮಣ್ಣಿನ ವಾತಾವರಣ ಹಾಗು ಜೀವಿಗಳ ಮೇಲೆ ಅವಲಂಭನೆ ಹೊಂದಿವೆ ಎನ್ನುವುದನ್ನು ಆಧರಿಸಿವೆ.

ಪರಿಸರದಲ್ಲಿ

ಜೀವಭೂಗೋಳಶಾಸ್ತ್ರವು ಜೀವಿಗಳ ಸಮೂಹದಲ್ಲಾಗುವ ಬದಲಾವಣೆಗಳ ಅಧ್ಯಯನ. ಮಣ್ಣು ಯಾವ ಸಸ್ಯಗಳು ಯಾವ ಪರಿಸರದಲ್ಲಿ ಬೆಳೆಯುತ್ತವೆ ಎಂಬುದನ್ನು ನಿರ್ದೇಶಿಸುತ್ತವೆ. ಮಣ್ಣು ವಿಜ್ಞಾನಿಗಳು ಯಾವ ಸಸ್ಯವರ್ಗಗಳು ಯಾವ ಪ್ರದೇಶದಲ್ಲಿ ಬೆಳೆಯುತ್ತವೆ ಎಂಬುದರ ಬಗ್ಗೆ ಅಧ್ಯಯನ ನಡೆಸುತ್ತಾರೆ. ಭೂಗೋಳ ಶಾಸ್ತ್ರಜ್ಞರು ಭೂಮಿಯ ಮೇಲಿರುವ ಮಣ್ಣಿನಲ್ಲಿ ಯಾವ ಯಾವ ವಿಧಗಳಿವೆ ಎಂಬುದರ ಬಗ್ಗೆ ಆಸಕ್ತಿವಹಿಸುತ್ತಾರೆ. ಮಣ್ಣಿನ ರಚನೆ, ಬಣ್ಣ ಮತ್ತು ರಸಾಯನ ಶಾಸ್ತ್ರವು ಭೂಗರ್ಭದಲ್ಲಿರುವ ಮೂಲ ವಸ್ತುಗಳ ಮೇಲೆ ಕನ್ನಡಿ ಹಿಡಿಯುತ್ತವೆ, ಮತ್ತು ಮಣ್ಣಿನ ವಿಧಗಳು ಸಾಮಾನ್ಯವಾಗಿ ಒಂದು ಭೂಭಾಗ ಮತ್ತು ಭೂಮಿತಿಗೆ ಬದಲಾವಣೆ ತೋರುತ್ತವೆ. ಭೂಗರ್ಭದಲ್ಲಿರುವ ರೂಪಾಂತರಗೊಳ್ಳುವ ಮಣ್ಣಿನ ಗುರುತು ಹಿಂದಿದ್ದ ಮಣ್ಣಿನ ಮೇಲ್ಮೈ ಹಾಗು ಹಿಂದಿನ ಶಕದಿಂದ ಹವಾಮಾನ ಬದಲಾವಣೆಗಳನ್ನು ದಾಖಲಿಸುತ್ತ ಬಂದಿದೆ. ಭೂಗರ್ಭಶಾಸ್ತ್ರಜ್ಞರು ಮಣ್ಣುಅಧ್ಯಯನದ ದಾಖಲೆಗಳನ್ನು ಕಳೆದ ಪರಿಸರ ವ್ಯವಸ್ಥೆಯ, ಪರಿಸರವಿಜ್ಞಾನದ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಉಪಯೋಗಿಸುತ್ತಾರೆ. ಬಯೊರ್‌ಹೆಕ್ಸಿಸ್ತಾಸಿ ಯ ಸಿದ್ಧಾಂತದಂತೆ, ಆಳದ ಮಣ್ಣು ಕೊಚ್ಚಣೆಯಿಂದ ಸಮುದ್ರದಲ್ಲಿ ಉಪ್ಪುಹೆಚ್ಚಿ, ಅದರಿಂದ ಸುಣ್ಣದ ಕಲ್ಲುಗಳ ಉತ್ಪತ್ತಿಯಾಗುತ್ತದೆ.

ಮೇಲ್ಮೈ ಪದರಿನ ಸ್ಥಿರತೆಯ ಸೂಚಿಯನ್ನು ತಿಳಿಯಲು ಭೂಗರ್ಭಶಾಸ್ತ್ರಜ್ಞರು ಭೂಗರ್ಭದ ಒಡಕುಗಳು ಅಥವಾ ಇಳುಕಲ ಸ್ಥಿರತೆಯ ಹಿನ್ನಲೆಯಲ್ಲಿ ಮಣ್ಣಿನ ಪದರುಗಳ ಗುಣಲಕ್ಷಣಗಳನ್ನು ಅಧ್ಯಯನ ನಡೆಸುತ್ತಾರೆ. ಮಣ್ಣು ಉಗಮದ ಹಂತವನ್ನು ಕೆಳ ಪದರದ ಮಣ್ಣಿನ ತಿರುವಿನಿಂದ ಗುರುತಿಸಬಹುದು ಮತ್ತು ಬಿರುಕುಗಳು ಉಂಟಾದ ಕಾಲಾನಂತರದಿಂದ ಇತರ ಕೆಳಪದರಗಳಾಗುವುದನ್ನು ಅವಲಂಭಿಸಿದೆ.

ಮಣ್ಣು 
ಒಬ್ಬ ಮನೆಯಜಮಾನ ಉಪಯೋಗಿಸಲು ಬೇಕಾಗಿರುವ ಪೌಷ್ಟಿಕತೆಗಳನ್ನು ಮಾತ್ರ ಮಣ್ಣಿನಲ್ಲಿ ಪರೀಕ್ಷಿಸುತ್ತಾನೆ.
ಮಣ್ಣು 
ಗಟ್ಟಿಯಾದ ಭೂಮಿಯ ಗೋಡೆಗಳು, ಅವುಗಳ ಉಷ್ಣತೆಯಿಂದ ಪರಿಸರದಲ್ಲಿ ಆಧಾರವಾಗಿ ನಿಲ್ಲುವ ಹೆಬ್ಬಯಕೆ ಹೊಂದಿವೆ.
ಮಣ್ಣು 
ಒಬ್ಬ ಮನೆಯಜಮಾನ ತನ್ನ ಮನೆ ಹಿಂಬದಿಯ ಮಿಶ್ರ ಗೊಬ್ಬರವನ್ನು ಜರಡಿ ಹಿಡಿಯುತ್ತಾನೆ ಮನೆಯಲ್ಲಿ ಉಳಿದ ಪದಾರ್ಥಗಳು ಮತ್ತು ತೋಟದಲ್ಲಿನ ಅನುಪಯುಕ್ತ ವಸ್ತುಗಳಿಂದ ಮಿಶ್ರಗೊಬ್ಬರವನ್ನು ತಯಾರಿಸುವುದು ಒಂದು ಅತ್ಯುತ್ತಮ ವಿಧಾನವಾಗಿದೆ.
ಮಣ್ಣು 
ಹಳದಿ ನದಿಯಲ್ಲಿರುವ ಕೆಸರು

ಮಣ್ಣನ್ನು ಸಲಿಕೆಯಿಂದ ಗುಂಡಿಯಿಂದ ಅಗೆದು ಪರೀಕ್ಷೆ ಮಾಡಿದ್ದನ್ನು ಪುರಾತತ್ವಶಾಸ್ತ್ರಜ್ಞರು ತೌಲನಿಕ ಕಾಲಗಣನೆಗಾಗಿ ಬಳಸುವರು ಇದು ಸ್ತರಶಾಸ್ತ್ರವನ್ನು ಆಧರಿಸಿವೆ( ಇದು ನಿಗದಿತ ಕಾಲ ಗಣನೆಗೆ ವಿರುದ್ದವಾದುದು). ಪುರಾತತ್ವ ಸಾಕ್ಷಾಧಾರಗಳನ್ನು ಪರೀಕ್ಷಿಸಲು, ಗರಿಷ್ಟ ಪ್ರಶ್ನಾತೀತ ಗುಂಡಿಗಳಿಗಿಂತ ಆಳವಾಗಿ ಮಣ್ಣು ಪದರು ಲಕ್ಷಣಗಳನ್ನು ಸಾಂಸ್ಕೃತಿಕ ಸಂಪನ್ಮೂಲ ನಿರ್ವಹಣೆಗಾಗಿ ಗಮನವಿರಿಸಲಾಗುವುದು. ಮಾನವ ಬಳಸಿದ ಮಣ್ಣು ಪುರಾತತ್ವಶಾಸ್ತ್ರಜ್ಞರಿಗೆ ಪ್ರಮುಖವಾಗಿರುತ್ತದೆ. (ಮಾನವ ಮೂಲ ಮತ್ತು ಮಾನವಜನ್ಯ) ಉದಾಹರಣೆಗೆ ಟೆರ್ರಾಪ್ರೆಟಾ ಮಣ್ಣುಗಳು.

ಬಳಕೆಗಳು

ಕೃಷಿಯಲ್ಲಿ ಮಣ್ಣು ಬಳಕೆಯಾಗುತ್ತದೆ, ಇದು ಸಸ್ಯಗಳಿಗೆ ಪ್ರಾಥಮಿಕ ಪೌಷ್ಟಿಕ ಪ್ರತ್ಯಾಮ್ಲವಾಗಿ ಉಪಯೋಗಿಸಲ್ಪಡುತ್ತದೆ,ಜಲಕೃಷಿಯಲ್ಲಿ ಹೇಳಿರುವಂತೆ , ಈ ಮಣ್ಣಿನ ಪೌಷ್ಟಿಕಾಂಶಗಳನ್ನು ಕರಗಿಸಿ ಮಾಡಿದಂಥಹ ಮಿಶ್ರಣವು ಸಸ್ಯಗಳ ಬೆಳವಣಿಗೆಗೆ ಸಹಕಾರಿಯಲ್ಲ. ಮಣ್ಣು ವಿಧಕ್ಕೆ ಅನುಗುಣವಾಗಿ ವಿವಿಧ ಸಸ್ಯಗಳನ್ನು ಬೆಳೆಯಬಹುದು, ( ಹಲವು ವೈವಿಧ್ಯತೆಗಳಲ್ಲಿ ಮಣ್ಣಿನ ತೇವಾಂಶ ಹಿಡಿದಿಡುವ ಪ್ರಮಾಣವು ಒಂದು)

ಹಲವಾರು ಗಣಿಗಾರಿಕೆಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಮಣ್ಣು ತಳಪಾಯವಾಗಿರುತ್ತದೆ. ಗಣಿ ಮತ್ತು ಕಟ್ಟಡ ಉದ್ಯಮಗಳಲ್ಲಿ ಮಣ್ಣು ಅತಿ ನಿರ್ಣಾಯಕವಾಗಿದೆ. ಮೇಲ್ಮೈ ಗಣಿಗಾರಿಕೆ, ರಸ್ತೆ ನಿರ್ಮಾಣ ಮತ್ತು ಜಲಾಶಯನಿರ್ಮಾಣಗಳಲ್ಲಿ ಅಗಾದ ಪ್ರಮಾಣದ ಮಣ್ಣು ಬಳಕೆಯಾಗುತ್ತದೆ. ಮಣ್ಣಿನ ಮನೆಯ ಕಟ್ಟಡ ವಿನ್ಯಾಸದಲ್ಲಿ ಬಿಸಿ ತಡೆಗಟ್ಟುವ ವಸ್ತುವಾಗಿ ಮಣ್ಣನ್ನು ಕಟ್ಟಡದಗೋಡೆಗಳಿಗೆ ಬಳಸುತ್ತಾರೆ.

ಪರಿಸರ, ಆಹಾರ ಮತ್ತು ಬಟ್ಟೆಗೆ ಮಣ್ಣಿನ ಸಂಪನ್ಮೂಲ ಅತ್ಯಾವಶ್ಯಕ. ಮಣ್ಣು ಸಸ್ಯಗಳಿಗೆ ಖನಿಜ ಮತ್ತು ನೀರನ್ನು ಒದಗಿಸುತ್ತದೆ. ಮಣ್ಣು ಮಳೆನೀರನ್ನು ತನ್ನ ಒಡಲಲ್ಲಿ ಬಸಿದು ನಂತರದ ಲಭ್ಯತೆಗೆ ಬಿಡುಗಡೆಮಾಡಿ ಪ್ರವಾಹವನ್ನು ಮತ್ತು ಬರ ನಿಯಂತ್ರಿಸುತ್ತದೆ. ನೀರು ಬಸಿದಂತೆ ಮಣ್ಣು ನೀರನ್ನು ಶುದ್ಧಿಮಾಡುತ್ತದೆ. ಮಣ್ಣು ಹಲವು ಜೀವಿಗಳ ಆಶ್ರಯತಾಣ: ಬಹುಪಾಲು ಗೊತ್ತಿರುವ ಮತ್ತು ಗೊತ್ತಿರದ ಜೀವವೈವಿಧ್ಯ ಮಣ್ಣಿನಲ್ಲಿದೆ, ಉದಾಹರಣೆಗೆಅಕಶೇರುಕಗಳು (ಎರೆಹುಳುಗಳು, ಕುಟ್ಟೆಗಳು, ಸಹಸ್ರಪದಿಗಳು, ಶತಪದಿಗಳು, ಮೃದ್ವಂಗಿಗಳು, ಗೊಂಡೆಹುಳುಗಳು, ಹೇನುಗಳು, ಕುಟುಕುಹುಳಗಳು, ಎನ್‌ಖೈಡ್ರೈಡ್ಸ್ ನೆಮಟೊಡ್‌ಗಳು, ಪ್ರೊಟಿಸ್ಟಗಳು), ಬ್ಯಾಕ್ಟೀರಿಯಾಗಳು, ಆರ್ಕಿಯಾ, ಶಿಲೀಂಧ್ರಗಳು ಮತ್ತು ಪಾಚಿಗಳು, ಹಾಗು ನೆಲದ ಮೇಲೆ ವಾಸಿಸುವ ಬಹಳಷ್ಟು ಜೀವಿಗಳು ಅಥವಾ ಅದರ ಭಾಗಗಳು ಉದಾಹರಣೆಗೆ(ಸಸ್ಯಗಳು) ಅಥವಾ ಬಹಳಷ್ಟು (ಕೀಟಗಳ) ಜೀವನ ಚಕ್ರದಪ್ರಮುಖ ಭಾಗವು ನೆಲದ ಒಳಗಡೆ ಕಳೆಯುತ್ತವೆ .

ಯಾವುದೇ ಪುನರ್ ಸ್ಥಾಪಿಸುವ ಅಥವಾ ಸಂರಕ್ಷಣಾ ಯೋಜನೆಗೆ ಭೂಮಿಮೇಲೆ ಮತ್ತು ಅಂತರಾಳದಲ್ಲಿನ ಜೀವವೈವಿದ್ಯಗಳ ಒಂದಕ್ಕೊಂದು ನಿಕಟ ಸಂಬಂಧ, ವಿರುತ್ತದೆಯಾದ್ದರಿಂದ ಮಣ್ಣು ಸಂರಕ್ಷಣೆ ಅತಿ ಪ್ರಮುಖವಾಗಿರುತ್ತದೆ.

ತ್ಯಾಜ್ಯ ನಿರ್ವಹಣೆ ಮಣ್ಣಿನ ಭಾಗವನ್ನು ಒಳಗೊಂಡಿರುತ್ತದೆ. ಮಣ್ಣಿನಲ್ಲಿ ಗಾಳಿಯಾಡುವ ಪ್ರಕ್ರಿಯೆಯನ್ನು ಬಳಸಿ ರೊಚ್ಚು ಕಾಲುವೆ ಕ್ಷೇತ್ರಗಳ ರೊಚ್ಚು ತೊಟ್ಟಿ ಯಿಂದ ಹೊರಹೊಮ್ಮುವ ರೊಚ್ಚು ಪರಿಷ್ಕರಿಸಲಾಗುವುದು. ಭೂಮುಚ್ಚುವಿಕೆ ಗಳಲ್ಲಿ ಮಣ್ಣನ್ನು ನಿತ್ಯ ಹೊದಿಕೆಯಾಗಿ ಬಳಸುವರು. ಸಾವಯವ ಮಣ್ಣು ಪೀಟ್ ಅನ್ನು ವಿಶೇಷವಾಗಿ ಶಕ್ತಿ ಸಂಪನ್ಮೂಲ, ಆದರೆ ಪೀಟ್ ಉತ್ಪಾದನೆಯನ್ನು ವಿಶಾಲ ಪ್ರದೇಶಗಳಲ್ಲಿ ಮಾಡುತ್ತಾರೆ ಉದಾಹರಣೆಗೆ ಸ್ಪ್ಯಾಗ್ನಮ್, ಬಾಗ್ಸ್ ಈಗ ಇವುಗಳನ್ನು ಪೀಳಿಗಳಿಗೆ ಸಂರಕ್ಷಿಸುವುದು ಅಗತ್ಯ

ಬಹಳಷ್ಟು ಸಂಸ್ಕೃತಿಗಳಲ್ಲಿ ಮಾನವರು ಹಾಗು ಪ್ರಾಣಿಗಳು ಯಾವಾಗಲಾದರೊಮ್ಮೆ ಮಣ್ಣನ್ನು ತಿನ್ನುವರು. ಕೆಲವು ಆಧಾರಗಳಂತೆ ಕೆಲವು ಕೋತಿಗಳು ತಮ್ಮ ಇಚ್ಚೆಯ ಆಹಾರ (ಮರದ ಎಲೆಗಳು ಮತ್ತು ಹಣ್ಣುಗಳ) ಜೊತೆಗೆ ಟ್ಯಾನಿನ್ ವಿಷವನ್ನು ತೊಲಗಿಸಲು ಮಣ್ಣನ್ನು ತಿನ್ನುತ್ತವೆ.[೧][ಶಾಶ್ವತವಾಗಿ ಮಡಿದ ಕೊಂಡಿ]

ಮಣ್ಣು ನೀರನ್ನು ಬಸಿದುಕೊಳ್ಳುತ್ತದೆ ಮತ್ತು ಶುದ್ಧೀಕರಿಸಿ ಅದರ ರಸಾಯನ ಶಾಸ್ತ್ರದ ಮೇಲೆ ಪರಿಣಾಮ ಬೀರುತ್ತವೆ. ಮಳೆನೀರು ಮತ್ತು ಕೆರೆ, ಕೊಳ ಮತ್ತು ನದಿಯ ನೀರು ಮಣ್ಣಿನ ಪದರುಗಳ ಮೂಲಕ ಬಸಿಯುತ್ತದೆ ಮತ್ತು ಕಲ್ಲಿನ ಮೇಲ್ಪದರದಲ್ಲಿ ನಿಂತು ಅಂತರ್ ಜಲವಾಗುತ್ತದೆ. ಪೀಡೆಗಳು (ವೈರಾಣುಗಳು) ಮತ್ತು ಮಲಿನಕಾರಕಗಳು ನಿರಂತರ ಸಾವಯವ ಮಲಿನಕಾರಕಗಳು (ಕ್ಲೊರಿನೀಕರಣದ ಪೀಡೆನಾಶಕಗಳು, ಪಿಸಿಬಿಗಳು), ಎಣ್ಣೆ (ಹೈಡ್ರೋಕಾರ್ಬನ್ಗಳು), ಭಾರ ಲೋಹಗಳು(ಸೀಸ, ಝಿಂಕ್, ಕ್ಯಾಡ್ಮಿಯಮ್), ಮತ್ತು ಅತಿ ಪೋಷಕಾಂಶಗಳು(ನೈಟ್ರೇಟ್ಗಳು, ಸಲ್ಫೇಟ್‌ಗಳು, ಫಾಸ್ಫೇಟ್ಗಳು) ಇವುಗಳನ್ನು ಮಣ್ಣು ಸೋಸುತ್ತವೆ ಮತ್ತು ಮಣ್ಣಿನಲ್ಲಿರುವ ಜೀವಿಗಳುಜೀರ್ಣಿಸಿಕೊಳ್ಳುತ್ತವೆ ಅಥವಾ ಮೇಲ್ಪದರಿನ ಜೀವರಾಶಿಗಳಲ್ಲಿ ಮತ್ತು ಕೆಳಪದರಿನ ಜೀವಿಗಳಲ್ಲಿ ನಿಶ್ಚಲವಾಗುತ್ತವೆ, ಇದರಿಂದ ಇವುಗಳು ನಿರ್ದಿಷ್ಟ ವಾಗಿ ಹ್ಯೂಮಸ್‌ಗಳಜೊತೆ ಬೆರೆಯುತ್ತವೆ. ಮಣ್ಣಿನ ಭೌತಿಕ ಗುಣಧರ್ಮವನ್ನು ಪೂರ್ವಾಪೇಕ್ಷಿತವಾಗಿ ತಿಳಿಯುವುದರಿಂದ ಮೇಲ್ಮೈ ಉಬ್ಬುತಗ್ಗು ಭೂ ಪ್ರದೇಶದ ಭೂ ಕುಸಿತವನ್ನು ತಡೆಯಬಹುದು.

ಅವನತಿ

ಭೂ ಪ್ರದೇಶದ ಅವನತಿಯು ಮಾನವ-ಪ್ರೇರೇಪಿತ ಅಥವಾ ಸ್ವಾಭಾವಿಕವಾದ ಒಂದು ವಿಧಾನ ಇದು ಭೂಪ್ರದೇಶದ ಕಾರ್ಯನಿರ್ವಹಣೆಯ ಸಾಮರ್ಥ್ಯಕ್ಕೆ ಧಕ್ಕೆ ತರುತ್ತದೆ. ಮಣ್ಣಿನ ಆಮ್ಲೀಕರಣ, ಕಶ್ಮಲೀಕರಣ, ಮರಳಿನಿಂದಾವೃತವಾಗುವುದು, ಭೂಸವೆತ ಅಥವಾ ಲವಣಯುಕ್ತವಾಗುವುದರಿಂದ, ಭೂಪ್ರದೇಶದ ಅವನತಿಯಲ್ಲಿ ಮಣ್ಣುಗಳು ಆಪತ್ತುಂಟುಮಾಡುವ ಅಂಶಗಳಾಗಿವೆ.

ಕ್ಷಾರೀಯ ಮಣ್ಣುಗಳು ಆಮ್ಲೀಕರಣಗೊಳ್ಳುವುದು ಪ್ರಯೋಜನಕಾರಿಯಾಗಿದೆ, ಇದು ಭೂಪ್ರದೇಶವನ್ನು ಅವನತಿಗೊಳ್ಳುವಂತೆ ಮಾಡುತ್ತದೆ.ಯಾವಾಗ ಮಣ್ಣಿನ ಆಮ್ಲೀಕರಣ ಬೆಳೆಯ ಇಳುವರಿಯನ್ನು ಕಡಿಮೆ ಮಾಡುತ್ತದೆಯೋ ಮತ್ತು ಮಣ್ಣಿನ ಕಶ್ಮಲೀಕರಣ ಮತ್ತು ಭೂಸವೆತದಿಂದ ಭೇಧ್ಯತೆಯನ್ನು ಹೆಚ್ಚಿಸುವುದು. ಮಣ್ಣುಗಳು ಮೂಲತಃ ಆಮ್ಲೀಯವಾಗಿರುತ್ತವೆ, ಏಕೆಂದರೆ ಅವುಗಳಮೂಲ ವಸ್ತುಗಳು ಆಮ್ಲೀಯವಾಗಿರುತ್ತವೆ ಮತ್ತು ಮೊದಲಿಗೆ ಕ್ಷಾರೀಯ ಲವಣಗಳಾದ (ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಷಿಯಂ, ಮತ್ತು ಸೋಡಿಯಂ )ಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತವೆ. ಈ ಮೇಲಿನ ಅಂಶಗಳು ಸಾಮಾನ್ಯ ಮಳೆಯಿಂದ,ಕಾಡು ಅಥವಾ ವ್ಯವಸಾಯದ ಬೆಳೆಗಳ ಕಟಾವಿನಿಂದ ಮಣ್ಣಿನಲ್ಲಿ ಕಡಿಮೆ ಆದಾಗ ಮಣ್ಣಿನ ಆಮ್ಲೀಕರಣವಾಗುತ್ತದೆ. ಮಣ್ಣಿನ ಆಮ್ಲೀಕರಣದ ತೀವ್ರತೆ ಹೆಚ್ಚಾಗಲು ಆಮ್ಲ ಉತ್ಪತ್ತಿ ಮಾಡುವ ಸಾರಜನಕಯುಕ್ತ ಗೊಬ್ಬರಗಳು ಮತ್ತು ಆಮ್ಲ ಮಳೆಯ ಪರಿಣಾಮಗಳು ಕಾರಣವಾಗಿವೆ.

ಕೆಳಮಟ್ಟದಮಣ್ಣು ಕಶ್ಮಲೀಕರಣವು ಯಾವಾಗಲೂ ಸಂಸ್ಕರಣೆ ಮತ್ತು ಸಮೀಕರಣವು ಬೇಕಾಗುವ ಮಣ್ಣಿನ ಪ್ರಮಾಣದ ಒಳಗಿರುತ್ತದೆ. ಬಹಳಷ್ಟು ನಿರುಪಯುಕ್ತ ವಸ್ತುಗಳ ಉಪಚಾರ ಪ್ರಕ್ರಿಯೆಗಳು, ಈ ಉಪಚಾರದ ಪ್ರಮಾಣದ ಮೇಲೆ ನಂಬಿಕೆ ಇಡುತ್ತವೆ. ಮಣ್ಣಿನ ಅತಿಯಾದ ಉಪಚಾರದ ಪ್ರಮಾಣವು ಅದರ ಜೀವಾವಧಿಯನ್ನು ಕಡಿಮೆ ಮಾಡುತ್ತದೆ, ಮತ್ತು ಮಣ್ಣಿನ ಕಾರ್ಯಶೀಲತೆಯನ್ನು ಕಡಿಮೆ ಮಾಡುತ್ತದೆ. ಕಾರ್ಖಾನೆಗಳಿಂದ ಉಂಟಾದ ಕಶ್ಮಲಗಳಿಂದ ಹಾಗೂ ಇತರ ಚಟುವಟಿಕೆಗಳಿಂದ ಡೆರಿಲಿಕ್ಟ್ ಮಣ್ಣು ಉತ್ಪತ್ತಿಯಾಗಿ, ಅದು ಮಣ್ಣು ಸುರಕ್ಷಿತ ವ್ಯವಸಾಯಕ್ಕೆ ಬಳಸದೆ ಇರುವಷ್ಟು ಮಟ್ಟಿಗೆ ಹಾನಿಯನ್ನುಂಟು ಮಾಡುತ್ತದೆ. ಡೆರಿಲಿಕ್ಟ್ ಮಣ್ಣಿನ ರೆಮಿಡಿಯೇಷನ್ ಕೆಳದರ್ಜೆಗಿಳಿಯಲು, ಕೃಶಗೊಳ್ಳಲು, ಪ್ರತ್ಯೇಕವಾಗಲು, ಅಥವಾ ಮಣ್ಣಿನ ಕೊಳೆಗಳನ್ನು ತೊಡೆದು ಹಾಕಲು ಮತ್ತು ಮಣ್ಣಿನ ಕಾರ್ಯಗಳನ್ನು ಪುನಃಸ್ಥಾಪಿಸಲು ಭೂಗರ್ಭ ಶಾಸ್ತ್ರ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಮತ್ತು ಜೀವಶಾಸ್ತ್ರದ ತತ್ವಗಳನ್ನು ಬಳಸಿಕೊಳ್ಳುತ್ತದೆ. ತಂತ್ರಗಳು- ಪ್ರತ್ಯೇಕಿಸುವುದು, ಗಾಳಿ ಸಿಂಪಡಣೆ , ರಾಸಾಯನಿಕ ಸುಧಾರಣೆಗಳು, ಫೈಟೊರೆಮಿಡಿಯೇಶನ್,ಬಯೋರೆಮಿಡಿಯೇಶನ್, ಮತ್ತು ಸ್ವಾಭಾವಿಕವಾಗಿ ಕೃಶಗೊಳ್ಳುವಿಕೆಗಳನ್ನು ಒಳಗೊಂಡಿವೆ.

ಒಣಗಿದ ಮತ್ತು ಅರೆ-ಒಣಗಿದ ಪ್ರದೇಶಗಳಲ್ಲಿನ ಪರಿಸರದ ಅವನತಿಗೆ ಮನುಷ್ಯರ ಚಟುವಟಿಕೆಗಳಿಂದಾಗುವ ಒಂದು ವಿಧಾನವೇ ಮರಳೀಕರಣ. ಮರಳೀಕರಣಕ್ಕೆ ನಿಸ್ಸಾರತೆಯೇ ಕಾರಣವೆಂಬುದು ಸಾಮನ್ಯವಾದ ಒಂದು ತಪ್ಪು ತಿಳುವಳಿಕೆಯಾಗಿದೆ. ಒಣಗಿದ ಮತ್ತು ಅರೆ-ಒಣಗಿದ ಪ್ರದೇಶಗಳಲ್ಲಿ ನಿಸ್ಸಾರತೆ ಸಾಮಾನ್ಯವಾಗಿರುತ್ತದೆ. ಉತ್ತಮವಾಗಿ-ನಿರ್ವಹಿಸಿರುವ ಭೂಪ್ರದೇಶಗಳು ಮಳೆ ಬಂದ ತಕ್ಷಣ ಪುನ: ನಿಸ್ಸಾರತೆಯಿಂದ ಮುಕ್ತವಾಗುತ್ತವೆ. ಮಣ್ಣಿನ ನಿರ್ವಹಣೆಯ ಸಾಧನಗಳೆಂದರೆ ಮಣ್ಣಿನಲ್ಲಿರುವ ಪೋಷಕಾಂಶಗಳ ನಿರ್ವಹಣೆ ಮತ್ತು ಸಾವಯವ ಅಂಶಗಳ ಮಟ್ಟ, ತಗ್ಗಿದ ಉಳುಮೆ ಮತ್ತು ದೊಡ್ಡದಾದ ಹೊದಿಕೆ. ಈ ಅಭ್ಯಾಸಗಳು ಭೂಸವೆತವನ್ನು ತಡೆಯುವಲ್ಲಿ ಸಹಕಾರಿಯಾಗುತ್ತವೆ ಮತ್ತು ತೇವಾಂಶ ಲಭ್ಯವಿರುವ ಅವಧಿಯಲ್ಲಿ ಉತ್ಪಾದನೆಯ ನಿರ್ವಹಣೆ ಕೂಡಾ ಸಹಕಾರಿಯಾಗಬಲ್ಲದು ನಿಸ್ಸಾರತೆಯಿಂದ ಕೂಡಿದ ಭೂಮಿಯ ಹೆಚ್ಚಾದ ಉಪಯೋಗ ಮತ್ತು ಕಲ್ಮಶವಾಗುದು ಹಾಗೇ ಮುಂದುವರೆಸಿಕೊಂಡು ಹೋದರೆ , ಅದು ಭೂಮಿಯ ಅವನತಿಗೆ ಕಾರಣವಾಗುತ್ತದೆ. ಹೆಚ್ಚಾಗಿರುವ ಜನಸಂಖ್ಯೆ ಮತ್ತು ಜಾನುವಾರುಗಳ ಒತ್ತಡದಿಂದ ಭೂಮಿಯ ಅಂಚಿನಲ್ಲಿ ಮರಳೀಕರಣ ತ್ವರಿತವಾಗುತ್ತದೆ.

ಗುರುತ್ವಾಕರ್ಷಣೆಯಿಂದ ಉಂಟಾಗುವ ಗಾಳಿ, ನೀರು, ಮಂಜುಗಡ್ಡೆಗಳು ಮಣ್ಣಿನ ಸವೆತಕ್ಕೆ ಕಾರಣವಾಗುತ್ತವೆ. ಈ ವಿಧಾನಗಳು ಏಕಕಾಲಿಕವಾದರೂ, ಹವಾಪರಿಣಾಮಗಳಿಂದ ಭೂಸವೆತವನ್ನು ಬೇರೆ ಮಾಡಲಾಗಿದೆ. ಭೂಸವೆತವು ಒಂದು ಸ್ವಾಭಾವಿಕವಾದ ಪ್ರಕ್ರಿಯೆಯಾಗಿದೆ, ಆದರೆ ಬಹಳಷ್ಟು ಜಾಗಗಳಲ್ಲಿ ಮಾನವನು ಮಾಡುವಭೂಮಿಯ ಬಳಕೆಯಿಂದ ಹೆಚ್ಚಾಗಿದೆ. ಅರಣ್ಯ ನಾಶ, ಅತಿಯಾಗಿ ಮೇಯಿಸುವಿಕೆ, ಮತ್ತು ತಪ್ಪಾದ ರೀತಿಯಲ್ಲಿ ಕಟ್ಟಡಗಳನ್ನು ಕಟ್ಟುವುದು ಇಂತಹ ಅಭ್ಯಾಸಗಳಿಂದ ಭೂಮಿ ಸಾರವಿಲ್ಲದಾಗುತ್ತಿದೆ. ಕಟ್ಟಡಗಳನ್ನು ಕಟ್ಟುವಾಗ ಉಂಟಾಗುವ ತೊಂದರೆಗಳನ್ನು ಮಿತಿಗೊಳಿಸುವುದು, ನಿರ್ಮಾಣಕಾರ್ಯಗಳನ್ನು ತಡೆಯುವುದು, ಕೊಚ್ಚಿಹೋಗುವುದನ್ನು ತಡೆಗಟ್ಟುವುದು,ತಾರಸಿ-ಕಟ್ಟಡ, ಇತರ ತಂತ್ರಗಳನ್ನುಪಯೋಗಿಸಿದ ಅಭಿವೃದ್ಧಿ ಹೊಂದಿದಂತಹ ನಿರ್ವಹಣೆಯಿಂದ ಭೂಸವೆತವನ್ನು ಮಿತಿಗೊಳಿಸಬಹುದು.

ಹಳದಿ ನದಿಯ ಮಧ್ಯಭಾಗದಲ್ಲಿ ಮತ್ತು ಯಾಂಗ್ಟ್‌ಸೆ ನದಿಯ ಮೇಲ್ಭಾಗವು ತಲುಪುವಲ್ಲಿ ಒಂದು ಗಂಭೀರವಾದ ಮತ್ತು ದೀರ್ಘಕಾಲದ ನೀರಿನ ಭೂಸವೆತವು ಚೈನಾದಲ್ಲಿ ಉಂಟಾಗುತ್ತದೆ. ಹಳದಿ ನದಿಯಿಂದ , ಸುಮಾರು 1.6 ಬಿಲಿಯನ್ ಟನ್‌ಗಳಷ್ಟು ಕೆಸರು ಪ್ರತಿವರ್ಷ ಸಾಗರಕ್ಕೆ ಸೇರುತ್ತದೆ. ಪಶ್ಚಿಮೋತ್ತರ ಚೈನಾದ ಲಾಸ್ ಮೈದಾನದ ಪ್ರದೇಶದಲ್ಲಿ ಪ್ರಾಥಮಿಕವಾಗಿ ನೀರಿನಿಂದಾದ ಭೂಸವೆತ(ಗಟಾರದ ಭೂಸವೆತ)ದಿಂದ ಕೆಸರು ಉತ್ಪತ್ತಿಯಾಗುತ್ತದೆ .

ಮಣ್ಣಿನ ಹೊರಮೈನ ಕೆಳಭಾಗದಲ್ಲಿ ಉಂಟಾಗುವ ಸವೆತವು ಭೂಮಿಯಲ್ಲಿ ಪೈಪುಗಳನ್ನು ಹಾಕುವುದರಿಂದಾಗುವ ನಿರ್ಧಿಷ್ಟವಾದ ಒಂದು ಬಗೆ. ಇದು ಒಡ್ಡು ಮತ್ತು ಆಣೆಕಟ್ಟುಗಳ ಕುಸಿತ ಅಷ್ಟೇ ಅಲ್ಲದೆ ಬತ್ತುಕುಳಿ ನಿರ್ಮಾಣವಾಗುವುದರ ಜೊತೆಗೆ ಕೂಡಾ ಇದು ಸಂಬಂಧಿಸಿದೆ. ರಭಸದ ಪ್ರವಾಹವು ಆರಂಭದಲ್ಲಿ ಜಿನುಗುವ ಸ್ಥಳದಿಂದ ಸಹಮಣ್ಣು ಸವಕಳಿಯೊಂದಿಗೆ ಮುಂದುವರಿದು ಮಣ್ಣನ್ನು ತೆಗೆದುಹಾಕುತ್ತದೆ.

ಮಣ್ಣಿನ ಪೈಪುಗಳ ಹೊರಭಾಗದ ಕೊನೆಯಲ್ಲಿ ಕಾಣಿಸುವುದನ್ನು ಕುದಿಯುವ ಮರಳು ಎಂದು ವರ್ಣಿಸುತ್ತಾರೆ. 

ಮುಕ್ತ ಲವಣಗಳ ಸೇರುವಿಕೆಯಿಂದ ಲವಣಯುಕ್ತ ಮಣ್ಣು ಉಂಟಾಗುತ್ತದೆ, ಅದು ಮಣ್ಣಿನ ಅವನತಿಗೆ ಮತ್ತು ಸಸ್ಯಗಳ ಬೆಳೆಯುವಿಕೆಗೆ ಕಾರಣವಾಗುತ್ತದೆ. ಇದರ ಪರಿಣಾಮಗಳೆಂದರೆ ಸವಕಳಿಯಿಂದಾಗುವ ಹಾನಿ, ಸಸ್ಯಗಳ ಬೆಳವಣಿಗೆ ಕುಂಠಿತವಾಗುವುದು, ಸಸ್ಯಗಳ ಕವಚ ಮತ್ತು ಮಣ್ಣಿನ ರಚನೆಯಿಂದಾಗುವ ಭೂಸವೆತ, ಮತ್ತು ಶೇಖರಣೆ ಮಾಡುವುದರಿಂದುಟಾಗುವ ನೀರಿನ ಗುಣಮಟ್ಟದ ಕುಸಿತ. ಸ್ವಾಭಾವಿಕವಾಗಿ ಮತ್ತು ಮನುಷ್ಯನು ಮಾಡುವಂತಹ ಕೆಲವು ವಿಧಾನಗಳ ಸಂಯೋಗದಿಂದ ಮಣ್ಣು ಲವಣಯುಕ್ತವಾಗುವುದು. ಮಣ್ಣಿನಲ್ಲಿ ನೀರು ಬತ್ತಿಹೋಗುವುದರಿಂದ ಲವಣಗಳು ಒಟ್ಟುಗೂಡುತ್ತವೆ. ಮಣ್ಣಿನ ಮೂಲವಸ್ತು ಲವಣಯುಕ್ತವಾದಾಗ ಇದು ವಿಶೇಷವಾಗಿ ಆಗುತ್ತದೆ. ಮುಖ್ಯವಾಗಿ ಶುಷ್ಕಭೂಮಿಯಲ್ಲಿ ನೀರಾವರಿಯ ವಿಧಾನ ಸಮಸ್ಯಾತ್ಮಕವಾಗುತ್ತದೆ ಎಲ್ಲಾ ನೀರಾವರಿ ವಿಧಾನಗಳ ನೀರಿನಲ್ಲೂ ಕೆಲ ಪ್ರಮಾಣದ ಲವಣಗಳು ಇರುತ್ತವೆ. ವಿಶೇಷವಾಗಿ ಕಾಲುವೆಗಳಲ್ಲಿ ಸೋರಿಕೆ ಉಂಟಾದಾಗ, ತಳಮಟ್ಟದಲ್ಲಿರುವ ನೀರಿನ ಕೋಷ್ಟಕ ಅನೇಕವೇಳೆಯಲ್ಲಿ ಹೆಚ್ಚಾಗುತ್ತದೆ. ಭೂಮಿಯ ಮೇಲ್ಮೈಯಲ್ಲಿ ತಳಮಟ್ಟದ ನೀರಿನಲ್ಲಿರುವಷ್ಟು ಲವಣಗಳು ಕೆಪಿಲರಿ ಫ್ರಿಂಜ್‌ನ ಒಳಗೆ ಇದ್ದರೆ ಅಲ್ಲಿ ಶೀಘ್ರವಾಗಿ ಮಣ್ಣು ಲವಣಯುಕ್ತವಾಗುತ್ತದೆ. ನೆಲಹಾಸುಗಳಿಂದ ನಿರ್ಮಿಸಿದ ಮೋರಿಗಳಲ್ಲಿಯೇ ಅನ್ವಯಿಕ ನೀರನ್ನು ಹರಿಸುವುದರಿಂದ ಮಣ್ಣು ಲವಣಯುಕ್ತವಾಗುವುದನ್ನು ತಡೆಯುವುದುಸಾಧ್ಯ .

ಇದನ್ನೂ ನೋಡಿರಿ

  • ಆಗ್ರೊಫಿಸಿಕ್ಸ್
  • ಜಿಯೋಪೋನಿಕ್
  • ಹೈಡ್ರೊಪೋನಿಕ್ಸ್
  • ಮಣ್ಣಿಗೆ ಸಂಬಂಧಿಸಿದ ಲೇಖನಗಳ ಸೂಚಿ
  • ನೈಸರ್ಗಿಕ ಗೊಬ್ಬರ
  • ಸಾರಜನಕ ಚಕ್ರ
  • ಕೆಂಪು ಮೆಡಿಟರೇನಿಯನ್ ಮಣ್ಣು
  • ಕುಗ್ಗುವ-ಹಿಗ್ಗುವ ಸಾಮರ್ಥ್ಯ

ಉಲ್ಲೇಖಗಳು

ಹೆಚ್ಚಿನ ಓದಿಗಾಗಿ

  • ಅಡಮ್ಸ್, J.A. 1986. Dirt . ಕಾಲೇಜು ಕೇಂದ್ರ, ಟೆಕ್ಸಾಸ್ : ಟೆಕ್ಸಾಸ್ A&M ಯೂನಿವರ್ಸಿಟಿ ಪ್ರೆಸ್ ISBN 0-89096-301-0
  • ಮಣ್ಣು ಅಧ್ಯಯನದ ನೌಕರವರ್ಗ. (1975)ಸಾಯಿಲ್ ಟೆಕ್ಸೊನಮಿ: ಮಣ್ಣನ್ನು ವರ್ಗೀಕರಿಸಲು ಮತ್ತು ಅದರ ಅರ್ಥ ವಿವರಿಸಲು ಮಾಡುವ ಒಂದು ಮೂಲ ವ್ಯವಸ್ಥೆ. USDA-SCS Agric. Handb. 436. ಯುನೈಟೆಡ್ ಸ್ಟೇಟ್ ನ ಗವರ್ನಮೆಂಟ್ ಪ್ರಿಂಟಿಂಗ್ ಆಫೀಸ್, ವಾಷಿಂಗ್ಟನ್, DC.
  • ಮಣ್ಣು ಅವಲೋಕನ ವಿಭಾಗದ ನೌಕರವರ್ಗ. (1999) ಮಣ್ಣು ಅವಲೋಕನದ ಕೈಪಿಡಿ . ಮಣ್ಣು ಸಂರಕ್ಷ್ಣಣಾ ಸೇವೆ. U.S. ಬೇಸಾಯ ವಿಭಾಗದ ಕೈಪಿಡಿ 18.
  • ಲೋಗನ್, W. B., Dirt: The ecstatic skin of the earth. 1995 ISBN 1-57322-004-3
  • ಫಾಲ್ಕ್ ನರ್, ವಿಲಿಯಮ್. Plowman's Folly. New York, Grosset & Dunlap. 1943. ISBN 0-933280-51-3
  • ಜೆನ್ನಿ, ಹನ್ಸ್, Factors of Soil Formation: A System of Quantitative Pedology 1941
  • Why Study Soils? Archived 2018-02-09 ವೇಬ್ಯಾಕ್ ಮೆಷಿನ್ ನಲ್ಲಿ.
  • Soil notes
  • "97 Flood". USGS. Archived from the original on 2008-06-24. Retrieved 2008-07-08. ಮರಳು ಕುದಿಯುವ ಚಿತ್ರಗಳು.
  • Soils Archived 2006-08-28 ವೇಬ್ಯಾಕ್ ಮೆಷಿನ್ ನಲ್ಲಿ., ಓರೆಗಾನ್ ಸ್ಟೇಟ್ ಯೂನಿವರ್ಸಿಟಿ
  • Soil-Net.com A free schools-age educational site teaching about soil and its importance.
  • LandIS Soils Data for England and Wales a pay source for GIS data on the soils of England and Wales and soils data source; they charge a handling fee to researchers.
  • LandIS Free Soilscapes Viewer Free interactive viewer for the Soils of England and Wales
  • Geo-technological Research Paper, IIT ಕಾನ್‌ಪುರ, Dr P P ವಿಟ್ಕರ್ - Strip footing on weak clay stabilized with a granular pile ನ್ಯಾಷನಲ್ ರೀಸರ್ಚ್ ಕೌನ್ಸಿಲ್ ಕೆನಡಾ: From Discovery to Innovation / Conseil national de recherches Canada : de la découverte à l'innovation[ಶಾಶ್ವತವಾಗಿ ಮಡಿದ ಕೊಂಡಿ] (English), (French)
  • Mann, Charles C.: " Our good earth" National Geographic Magazine September 2008

ಬಾಹ್ಯ ಲಿಂಕ್‌ಗಳು

Tags:

ಮಣ್ಣು ನಿರ್ಮಾಣದ ಅಂಶಗಳುಮಣ್ಣು ಲಕ್ಷಣಗಳುಮಣ್ಣು ಮಣ್ಣಿನ ಪದರುಗಳುಮಣ್ಣು ವರ್ಗೀಕರಣಮಣ್ಣು ಸಾವಯವ ಅಂಶಮಣ್ಣು ಮಣ್ಣಿನ ದ್ರಾವಣಗಳುಮಣ್ಣು ಬಳಕೆಗಳುಮಣ್ಣು ಅವನತಿಮಣ್ಣು ಇದನ್ನೂ ನೋಡಿರಿಮಣ್ಣು ಉಲ್ಲೇಖಗಳುಮಣ್ಣು ಹೆಚ್ಚಿನ ಓದಿಗಾಗಿಮಣ್ಣು ಬಾಹ್ಯ ಲಿಂಕ್‌ಗಳುಮಣ್ಣುಬಂಡೆವಾಯುಗೋಳಸಾಂದ್ರತೆ

🔥 Trending searches on Wiki ಕನ್ನಡ:

ಜಾಗತಿಕ ತಾಪಮಾನ ಏರಿಕೆಲಾರ್ಡ್ ಕಾರ್ನ್‍ವಾಲಿಸ್ಚಂದ್ರಯಾನ-೩ಸ್ವಚ್ಛ ಭಾರತ ಅಭಿಯಾನಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕಾನೂನುಕರ್ನಾಟಕದ ಶಾಸನಗಳುಆದಿಲ್ ಶಾಹಿ ವಂಶಕಾಳಿದಾಸಇಮ್ಮಡಿ ಪುಲಕೇಶಿದಾಸವಾಳಚರ್ಚೆಜಲ ಮೂಲಗಳುವಡ್ಡಾರಾಧನೆಶ್ರವಣಬೆಳಗೊಳಜಾಹೀರಾತುದಿಕ್ಕುಸಾಹಿತ್ಯದಾಸ ಸಾಹಿತ್ಯಭಾರತದ ರಾಷ್ಟ್ರಪತಿಮಧುಮೇಹಪ್ರೀತಿಸೌದೆಮಹಾಭಾರತಭಾರತ ಬಿಟ್ಟು ತೊಲಗಿ ಚಳುವಳಿಭಾರತೀಯ ಅಂಚೆ ಸೇವೆಅವಲೋಕನಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿವೃತ್ತಪತ್ರಿಕೆಅಳತೆ, ತೂಕ, ಎಣಿಕೆಹೂವುಅಂತರರಾಷ್ಟ್ರೀಯ ವ್ಯಾಪಾರದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಅವರ್ಗೀಯ ವ್ಯಂಜನಅಂತರ್ಜಾಲ ಹುಡುಕಾಟ ಯಂತ್ರಅಡಿಕೆಕರ್ನಾಟಕ ಜನಪದ ನೃತ್ಯಭಾರತ ಸಂವಿಧಾನದ ಪೀಠಿಕೆತುಂಗಭದ್ರ ನದಿಶಿವರಾಮ ಕಾರಂತಕಲಿಕೆರಾಜೇಶ್ ಕುಮಾರ್ (ಏರ್ ಮಾರ್ಷಲ್)ಪಾಲಕ್ರಾಜಕುಮಾರ (ಚಲನಚಿತ್ರ)ಕನ್ನಡದಲ್ಲಿ ವಚನ ಸಾಹಿತ್ಯಶ್ರೀ ರಾಮಾಯಣ ದರ್ಶನಂಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗೂಗಲ್ಹೊಯ್ಸಳಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿವಿಧಿಕಪ್ಪೆ ಅರಭಟ್ಟಭಾರತದಲ್ಲಿ ಮೀಸಲಾತಿಬೌದ್ಧ ಧರ್ಮತಾಪಮಾನಅಲಾವುದ್ದೀನ್ ಖಿಲ್ಜಿದರ್ಶನ್ ತೂಗುದೀಪ್ಸ್ತ್ರೀದೆಹಲಿ ಸುಲ್ತಾನರುಭಾಷಾ ವಿಜ್ಞಾನಭಾರತದ ರಾಷ್ಟ್ರೀಯ ಉದ್ಯಾನಗಳುಭಾರತದ ಸ್ವಾತಂತ್ರ್ಯ ದಿನಾಚರಣೆಸಿದ್ದರಾಮಯ್ಯಶಾಂತಲಾ ದೇವಿಮಹಾವೀರಜಾಗತಿಕ ತಾಪಮಾನಮಹೇಂದ್ರ ಸಿಂಗ್ ಧೋನಿದುರ್ಗಸಿಂಹಕನ್ನಡ ಅಕ್ಷರಮಾಲೆಜೇನು ಹುಳುದಿನೇಶ್ ಕಾರ್ತಿಕ್ಸಂಖ್ಯಾಶಾಸ್ತ್ರಮಂಗಳೂರುಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ವಚನಕಾರರ ಅಂಕಿತ ನಾಮಗಳು🡆 More