ಮಗು: ಹುಟ್ಟು ಮತ್ತು ಯವ್ವನದ ನಡುವಿನ ಮನುಷ್ಯ

ಜೀವವಿಜ್ಞಾನ ರೀತ್ಯಾ, ಮಗುವು ಜನನ ಮತ್ತು ಪ್ರೌಢಾವಸ್ಥೆಯ ಹಂತಗಳ ನಡುವಿನ ಮಾನವ ಜೀವಿ.

ಮಗುವಿನ ಕಾನೂನಾತ್ಮಕ ವ್ಯಾಖ್ಯಾನವು ಅಪ್ರಾಪ್ತವಯಸ್ಕನನ್ನು ನಿರ್ದೇಶಿಸುತ್ತದೆ, ಇನ್ನೊಂದು ರೀತಿ ಹೇಳಬೇಕೆಂದರೆ ಪ್ರಾಪ್ತ ವಯಸ್ಸಿಗಿಂತ ಚಿಕ್ಕವನಿರುವ ವ್ಯಕ್ತಿ. ಅನೇಕ ಸಾಮಾಜಿಕ ಸಮಸ್ಯೆಗಳು ಮಕ್ಕಳನ್ನು ಬಾಧಿಸುತ್ತವೆ, ಉದಾಹರಣೆಗೆ ಬಾಲ್ಯದ ಶಿಕ್ಷಣ, ಪೀಡನೆ, ಬಾಲ್ಯದ ಬಡತನ, ಅಪಸಾಮಾನ್ಯ ಕುಟುಂಬಗಳು, ಬಾಲಕಾರ್ಮಿಕತೆ, ಹಸಿವು, ಮತ್ತು ಬಾಲ್ಯ ನಿರಾಶ್ರಿತತೆ. ಮಕ್ಕಳನ್ನು ತಂದೆತಾಯಿಗಳು, ಸಾಕು ತಂದೆತಾಯಿಗಳು, ಪೋಷಕರು ಬೆಳೆಸಬಹುದು ಅಥವಾ ದಿವಾಪಾಲನಾ ಕೇಂದ್ರದಲ್ಲಿ ಭಾಗಶಃ ಬೆಳೆಸಬಹುದು.

ಮಗು: ಹುಟ್ಟು ಮತ್ತು ಯವ್ವನದ ನಡುವಿನ ಮನುಷ್ಯ
3 ವರ್ಷದ ಮಗು

ಸಾಮಾನ್ಯವಾಗಿ ವಯಸ್ಕರಿಗಿಂತ ಮಕ್ಕಳು ಕಡಿಮೆ ಹಕ್ಕುಗಳನ್ನು ಹೊಂದಿರುತ್ತಾರೆ ಮತ್ತು ಅವರನ್ನು ಗಂಭೀರ ತೀರ್ಮಾನಗಳನ್ನು ಮಾಡುವಲ್ಲಿ ಅಸಮರ್ಥರೆಂದು ವರ್ಗೀಕರಿಸಲಾಗುತ್ತದೆ. ಕಾನೂನಾತ್ಮಕವಾಗಿ ಮಕ್ಕಳು ಯಾವಾಗಲೂ ಒಬ್ಬ ಜವಾಬ್ದಾರಿಯುತ ವಯಸ್ಕ ಅಥವಾ ಮಕ್ಕಳ ಸುಪರ್ದಿಯ ಆರೈಕೆಯಲ್ಲಿ ಇರಬೇಕು, ಅವರುಗಳ ತಂದೆತಾಯಿಯರು ವಿಚ್ಛೇದನ ಪಡೆದರೂ ಅಥವಾ ಪಡೆದಿದ್ದರೂ. ವಯಸ್ಕತೆಯಿಂದ ಭಿನ್ನವಾಗಿರುವ ಸ್ಥಿತಿಯಾಗಿ ಬಾಲ್ಯವನ್ನು ಗುರುತಿಸುವುದು ೧೬ನೇ ಮತ್ತು ೧೭ನೇ ಶತಮಾನಗಳಲ್ಲಿ ಉದಯಿಸಲು ಪ್ರಾರಂಭವಾಯಿತು. ಸಮಾಜವು ಮಗುವಿನೊಂದಿಗೆ ಕಿರು ವಯಸ್ಕನಾಗಿ ಅಲ್ಲದೇ ವಯಸ್ಕರ ರಕ್ಷಣೆ, ಪ್ರೀತಿ ಮತ್ತು ಪಾಲನೆಯ ಅಗತ್ಯವಿರುವ ಕಡಿಮೆ ಪರಿಪಕ್ವತಾ ಮಟ್ಟದ ವ್ಯಕ್ತಿಯೆಂದು ಸಂಬಂಧ ಕಲ್ಪಿಸಲು ಆರಂಭಿಸಿತು. ಈ ಬದಲಾವಣೆಯನ್ನು ವರ್ಣಚಿತ್ರಗಳಲ್ಲಿ ಪತ್ತೆಹಚ್ಚಬಹುದು: ಮಧ್ಯಯುಗದಲ್ಲಿ, ಕಲೆಯಲ್ಲಿ ಮಕ್ಕಳನ್ನು ಯಾವುದೇ ಮಗುವಿನಂಥ ಗುಣಲಕ್ಷಣಗಳಿಲ್ಲದ ಕಿರು ವಯಸ್ಕರಾಗಿ ಬಿಂಬಿಸಲಾಗಿತ್ತು. ೧೬ನೇ ಶತಮಾನದಲ್ಲಿ, ಮಕ್ಕಳ ಚಿತ್ರಗಳು ವಿಶಿಷ್ಟ ಮಗುವಿನಂಥ ನೋಟವನ್ನು ಪಡೆಯಲು ಪ್ರಾರಂಭವಾಯಿತು. ೧೭ನೇ ಶತಮಾನದ ಕೊನೆಯಿಂದ ಮುಂದಕ್ಕೆ, ಆಟಿಕೆಗಳೊಂದಿಗೆ ಆಡುತ್ತಿರುವಂತೆ ಮಕ್ಕಳನ್ನು ತೋರಿಸಲಾಯಿತು ಮತ್ತು ನಂತರ ಈ ಸಮಯದಲ್ಲಿ ಮಕ್ಕಳ ಸಾಹಿತ್ಯವು ಬೆಳೆಯಲು ಆರಂಭವಾಯಿತು.

ಮಗು: ಹುಟ್ಟು ಮತ್ತು ಯವ್ವನದ ನಡುವಿನ ಮನುಷ್ಯ
ಒಂದು ವರ್ಷದ ಮಗು- Toddler

ಪ್ರತಿಯೊಂದು ಮಗುವು ಸಾಮಾಜಿಕ ಬೆಳವಣಿಗೆಯ ಅನೇಕ ಹಂತಗಳ ಮೂಲಕ ಸಾಗುತ್ತದೆ. ಒಂದು ಶಿಶು ಅಥವಾ ಬಹಳ ಚಿಕ್ಕ ಮಗುವು ಒಂಟಿಯಾಗಿ ಖುಶಿಯಿಂದ ಆಡುತ್ತದೆ. ಆ ಪರಿಸ್ಥಿತಿಯಲ್ಲಿ ಮತ್ತೊಂದು ಮಗುವು ಬಂದರೆ, ಆ ಮಗುವನ್ನು ಇತರ ಮಗುವು ದೈಹಿಕವಾಗಿ ದಾಳಿ ಮಾಡಬಹುದು ಅಥವಾ ದಾರಿಯಿಂದ ಹೊರಗೆ ಸರಿಸಬಹುದು. ನಂತರ, ಮಗುವು ಮತ್ತೊಂದು ಮಗುವಿನ ಜೊತೆ ಆಡಬಹುದು, ಮತ್ತು ಕ್ರಮೇಣವಾಗಿ ಹಂಚಿಕೊಳ್ಳುವುದು ಮತ್ತು ಸರದಿಗಾಗಿ ಕಾಯುವುದನ್ನು ಕಲಿಯಬಹುದು. ಅಂತಿಮವಾಗಿ, ಗುಂಪು ದೊಡ್ಡದಾಗುತ್ತದೆ, ಮತ್ತು ಮೂರು ಅಥವಾ ನಾಲ್ಕು ಮಕ್ಕಳು ಇರಬಹುದು. ಒಂದು ಮಗುವು ಶಿಶುವಿಹಾರವನ್ನು ಪ್ರವೇಶಿಸುವ ವೇಳೆಗೆ, ಅದು ಸಾಮಾನ್ಯವಾಗಿ ಗುಂಪುಗಳಲ್ಲಿ ಸೇರಿಕೊಂಡು ಗುಂಪು ಅನುಭವಗಳನ್ನು ಆನಂದಿಸಬಲ್ಲದು. ಮಗುವಿನ ಬೆಳವಣಿಗೆಯಲ್ಲಿ ಮಗುವಿನ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಸರ ಪ್ರಮುಖ ಪಾತ್ರ ವಹಿಸುತ್ತವೆ.ಮಗುವಿನ ಎಲ್ಲಾ ತರಹ ಬೆಳವಣಿಗೆಗಳಲ್ಲಿ ಪೋಷಕರ ಪಾತ್ರ ಪ್ರಮುಖವಾಗುತ್ತದೆ.ಪೋಷಕರು ಮಗುವಿನ ನಡವಳಿಕೆಗಳನ್ನು ಬದಲಾಯಿಸಲು ಬಯಸಿ ಮಗುವನ್ನು ದಂಡಿಸುವ ಮೊದಲು ತಮ್ಮ ನಡೆ ನುಡಿಗಳನ್ನು ಮಗುವಿಗೆ ಮಾದರಿಯಾಗುವಂತೆ ಬದಲಾಯಿಸಿಕೊಂಡರೆ ಮಾತ್ರವೇ ಮಗುವನ್ನು ದಂಡಿಸುವ ಪ್ರಮೇಯವೆ ಬರದು.

ಹೊರ ಸಂಪರ್ಕ

ಉಲ್ಲೇಖಗಳು

Tags:

ಜನನಬಾಲಕಾರ್ಮಿಕಹಸಿವು

🔥 Trending searches on Wiki ಕನ್ನಡ:

ಭಾರತದಲ್ಲಿನ ಜಾತಿ ಪದ್ದತಿಜಾಹೀರಾತುದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕನ್ನಡ ಸಾಹಿತ್ಯ ಪರಿಷತ್ತುಉಪೇಂದ್ರ (ಚಲನಚಿತ್ರ)ವ್ಯಾಪಾರಸಂವತ್ಸರಗಳುಶಾಂತರಸ ಹೆಂಬೆರಳುಸ್ವರಗೋವಿಂದ ಪೈಗ್ರಹಸಿಂಧನೂರುಮೈಸೂರು ಸಂಸ್ಥಾನಸಮುಚ್ಚಯ ಪದಗಳುಹೈದರಾಲಿಎಚ್.ಎಸ್.ಶಿವಪ್ರಕಾಶ್ಸರ್ಕಾರೇತರ ಸಂಸ್ಥೆತತ್ತ್ವಶಾಸ್ತ್ರಚಿಲ್ಲರೆ ವ್ಯಾಪಾರಕೃಷ್ಣಾ ನದಿಕವಿಗಳ ಕಾವ್ಯನಾಮಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುರಾಮಾಯಣಭಾರತದ ಸ್ವಾತಂತ್ರ್ಯ ಚಳುವಳಿವಿಧಾನ ಸಭೆವಿಷ್ಣುವ್ಯವಸಾಯಕನ್ನಡ ಗುಣಿತಾಕ್ಷರಗಳುಓಂ (ಚಲನಚಿತ್ರ)ದಿಕ್ಸೂಚಿವಿಜಯದಾಸರುಸವದತ್ತಿಜಾತ್ರೆಕಾಳಿದಾಸಮೈಗ್ರೇನ್‌ (ಅರೆತಲೆ ನೋವು)ದಾಳಿಂಬೆಕರ್ನಾಟಕ ಲೋಕಾಯುಕ್ತಚಂಡಮಾರುತರೋಸ್‌ಮರಿಪ್ರೀತಿನವರತ್ನಗಳುಭೂಮಿರಾಷ್ಟ್ರೀಯ ಸೇವಾ ಯೋಜನೆಜಿಡ್ಡು ಕೃಷ್ಣಮೂರ್ತಿಶ್ಚುತ್ವ ಸಂಧಿತುಂಗಭದ್ರ ನದಿಮಹಾವೀರಅತ್ತಿಮಬ್ಬೆಸಾಮ್ರಾಟ್ ಅಶೋಕಅಡಿಕೆಪಠ್ಯಪುಸ್ತಕನವಿಲುಸರ್ವಜ್ಞಸಂಚಿ ಹೊನ್ನಮ್ಮನಾಯಕ (ಜಾತಿ) ವಾಲ್ಮೀಕಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಬಾದಾಮಿಬಿ. ಎಂ. ಶ್ರೀಕಂಠಯ್ಯಕೃಷ್ಣದೇವರಾಯರವೀಂದ್ರನಾಥ ಠಾಗೋರ್ಗೂಬೆಕರಗಭಕ್ತಿ ಚಳುವಳಿಪ್ರಜಾಪ್ರಭುತ್ವಖ್ಯಾತ ಕರ್ನಾಟಕ ವೃತ್ತವಿಜಯವಾಣಿಕನ್ನಡದಲ್ಲಿ ಮಹಿಳಾ ಸಾಹಿತ್ಯಚಾಮರಾಜನಗರವೀರೇಂದ್ರ ಪಾಟೀಲ್ಕಾಂತಾರ (ಚಲನಚಿತ್ರ)ವಾಸ್ತುಶಾಸ್ತ್ರಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು೧೮೬೨ಅಕ್ಕಮಹಾದೇವಿಹಣಕಾಸುಕರ್ನಾಟಕದ ಹಬ್ಬಗಳುರಾಘವಾಂಕ🡆 More