ಬಾಲಕಾರ್ಮಿಕ: Child labour

ಮಕ್ಕಳ ದಿನನಿತ್ಯದ ಹಾಗು ದೀರ್ಘಾವಧಿ ದುಡಿಮೆಯ ಉದ್ಯೋಗವನ್ನು ಬಾಲ ಕಾರ್ಮಿಕ (ಯು.

ಯಸ್ ಬಾಲ ಕಾರ್ಮಿಕ) ಎಂದು ಕರೆಯಲಾಗುತ್ತದೆ. ಈ ಅಭ್ಯಾಸವನ್ನು ಹಲವು ಅಂತರರಾಷ್ಟ್ರೀಯ ಸಂಘಗಳು ಶೋಷಣೀಯ ಎಂದು ಪರಿಗಣಿಸಿವೆ ಮತ್ತು ಹಲವಾರು ದೇಶಗಳಲ್ಲಿ ಈ ಪದ್ಧತಿ ಕಾಯಿದೆಗೆ ವಿರೋಧವಾದದ್ದು. ಇತಿಹಾಸದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿವಿಧ ಅರ್ಥಗಳಲ್ಲಿ ಉಪಯೋಗಿಸಲ್ಪಟ್ಟಿದೆ .

ಬಾಲಕಾರ್ಮಿಕ: ಬಾಲ ಕಾರ್ಮಿಕ ಪದ್ಧತಿ, ಐತಿಹಾಸಿಕ, ಇತ್ತೀಚಿನ ದಿನ
19 ಶತಮಾನದ ಪೂರ್ವಾರ್ಧದಲ್ಲಿ ಬ್ರಿಟನ್ನ ಲ್ಲಿ ಬಾಲಕಾರ್ಮಿಕರ ವಿರುದ್ಧದ ಮೊದಲನೆಯ ಸಾಮಾನ್ಯ ಕಾಯಿದೆ ಮತ್ತು ಕಾರ್ಖಾನೆಗಳ ಕಾಯಿದೆಯನ್ನು ಜಾರಿಗೊಳಿಸಲಾಯಿತು.9 ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಕೆಲಸ ಮಾಡಲು ಬಿಡುತ್ತಿರಲ್ಲಿಲ್ಲ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ದಿನವೊಂದಕ್ಕೆ ದುಡಿಮೆಯನ್ನು 12 ಘಂಟೆಗಳಿಗೆ ಮಿತಿಗೊಳಿಸಲಾಯಿತು.

ಬಾಲ ಕಾರ್ಮಿಕ ಪದ್ಧತಿ

  • ಕೆಲವು ಮುಂದುವರಿದ ದೇಶಗಳಲ್ಲಿ, ನಿಗದಿತ ವಯಸ್ಸಿಗಿಂತ ಕೆಳ ವಯಸ್ಸಿನ ಮಕ್ಕಳನ್ನು ನಾವು ದುಡಿಸಿಕೊಳ್ಳುವುದು ಶೋಷಣೀಯ ಅಥವಾ ಸಮಂಜಸವಲ್ಲ ಎಂದು ಪರಿಗಣಿಸಿವೆ.(ಮನೆಗೆಲಸ ಅಥವಾ ಶಾಲೆಗೆ ಸಂಭಂಧಿಸಿದ ಕೆಲಸಗಳನ್ನು ಹೊರತುಪಡಿಸಿ). ಉದ್ಯೋಗಿಯೊಬ್ಬನು ನಿಗದಿತ ಕೆಳವಯಸ್ಸಿನ ಮಕ್ಕಳನ್ನು ಬಾಡಿಗೆಗೆ ತೆಗೆದುಕೊಳ್ಳುವುದನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗುವುದಿಲ್ಲ.
  • ಈ ನಿಗದಿತ ಕಿರಿ ವಯಸ್ಸು ದೇಶ ಮತ್ತು ಕೆಲಸದ ವಿವಿಧ ಮಾದರಿಯ ಮೇಲೆ ಅವಲಂಬಿತವಾಗಿದೆ. 1973ರ ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕಿರಿ ವಯಸ್ಸಿನ ಪದ್ಧತಿಯನ್ನು, ಅಂದರೆ ಸುಮಾರು 14ರಿಂದ 16ರ ವಯಸ್ಸಿನ ಒಳಗಿನ ಮಕ್ಕಳನ್ನು ಸ್ವಾಧೀನಕ್ಕೆ ಒಳಪಡಿಸಿಕೊಳ್ಳಬಹುದೆಂಬ ನೀತಿಯನ್ನು ಅಮೆರಿಕಾವು ಅಳವಡಿಸಿಕೊಂಡಿದೆ. ಅಮೆರಿಕಾದ ಬಾಲ ಕಾರ್ಮಿಕ ಕಾಯಿದೆಗಳು, ಪೋಷಕರ ಸಹಕಾರವಿಲ್ಲದೆ ಮತ್ತು ಯಾವುದೇ ನಿರ್ಬಂಧವಿಲ್ಲದೆ ಉದ್ಯಮದಲ್ಲಿ ದುಡಿಯುವ ಕಿರಿ ನಿಗದಿತ ವಯಸ್ಸನ್ನು 16ಎಂದು ಪರಿಗಣಿಸಿವೆ.
  • ವಿಶ್ವ ಬ್ಯಾಂಕ್ ವರದಿಯ ಪ್ರಕಾರ, ಪ್ರಪಂಚದಲ್ಲಿ 1960ರಿಂದ 2003ರ ಮಧ್ಯದಲ್ಲಿ ಬಾಲ ಕಾರ್ಮಿಕ ಘಟನೆಗಳು ಶೇಕಡಾ 25ರಿಂದ 10ಕ್ಕೆ ಇಳಿದಿವೆ.

ಐತಿಹಾಸಿಕ

ಬಾಲಕಾರ್ಮಿಕ: ಬಾಲ ಕಾರ್ಮಿಕ ಪದ್ಧತಿ, ಐತಿಹಾಸಿಕ, ಇತ್ತೀಚಿನ ದಿನ 
ಬಾಲ ಕಾರ್ಮಿಕ, ನ್ಯೂ ಜರ್ಸಿ, 1910
  • ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಮಕ್ಕಳನ್ನು, ಅತ್ಯಂತ ಕಿರಿ ವಯಸ್ಸಾದ 4 ವರ್ಷದವರನ್ನೂ, ಕಾರ್ಖಾನೆಗಳ ಅಪಾಯಕಾರಿ ಹಾಗು ಮಾರಕ ದುಡಿಮೆಯ ಸ್ಥಿತಿಗಳಲ್ಲಿ ದುಡಿಸಿಕೊಳ್ಳಲಾಗಿತ್ತು. ಈ ತಿಳುವಳಿಕೆಯ ಆಧಾರದಮೇಲೆ ಮಕ್ಕಳನ್ನು ಕಾರ್ಮಿಕರನ್ನಾಗಿ ಉಪಯೋಗಿಸಿಕೊಳ್ಳುವುದನ್ನು, ಕೆಲವು ಶ್ರೀಮಂತ ರಾಷ್ಟ್ರಗಳು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿ ಬಹಿಷ್ಕರಿಸಿವೆ. *ಹಾಗಿದ್ದಾಗ್ಯೂ ಕೆಲವು ಬಡ ರಾಷ್ಟ್ರಗಳು ಬಾಲ ಕಾರ್ಮಿಕ ಪದ್ದತಿಯನ್ನು ಸಹಿಸಿದೆ ಮತ್ತು ಒಪ್ಪಿಕೊಂಡಿಗಿಸಿದ್ದದೆ.ಒಳಗಾಯಿತು. *ಕೈಗಾರಿಕಾ ಕ್ರಾಂತಿಯ ಕಾಲದಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಬಾಲ ಕಾರ್ಮಿಕ ಪದ್ದತಿಯು ಪ್ರಮುಖ ಪಾತ್ರವನ್ನು ವಹಿಸಿತು,
ಬಾಲಕಾರ್ಮಿಕ: ಬಾಲ ಕಾರ್ಮಿಕ ಪದ್ಧತಿ, ಐತಿಹಾಸಿಕ, ಇತ್ತೀಚಿನ ದಿನ 
1909 ರಲ್ಲಿ ನ್ಯೂ ಯಾರ್ಕ್ ಸಿಟಿಯ ಲೇಬರ್ ಡೇ ಪರೇಡ್ ನಲ್ಲಿ ಇಬ್ಬರು ಹುಡುಗಿಯರು ಬಾಲಕಾರ್ಮಿಕ ಪದ್ದತಿಯನ್ನು ವಿರೋಧಿಸಿದರು (ಅದನ್ನು ಮಕ್ಕಳ ಗುಲಾಮಗಿರಿ ಎಂದು ಕರೆದು).
  • ಚಿಮಣಿಯನ್ನು ಶುದ್ದೀಕರಿಸಲು ಚುರುಕಾದ ಹುಡುಗರನ್ನು; ಯಂತ್ರಗಳ ಕೆಳಗಿನಿಂದ ಹತ್ತಿಯ ಉಂಡೆಗಳನ್ನು ತರಲು ಚಿಕ್ಕ ಮಕ್ಕಳನ್ನು; ಮತ್ತು ಕಲ್ಲಿದ್ದಲು ಗಣಿಗಳಲ್ಲಿ ವಯಸ್ಕರಿಗೆ ತೆವಳಿ ಹೋಗಲು ಸಾಧ್ಯವಾಗದ, ಕಿರಿದಾದ ಸುರಂಗ ಮಾರ್ಗಗಳಲ್ಲಿ ತೆವಳಿ ಕೆಲಸ ಮಾಡಲು ಮಕ್ಕಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಮಕ್ಕಳು ಸಂದೇಶವಾಹಕರಾಗಿ, ಗುಡಿಸುವವರಾಗಿ, ಬೂಟ್ ಪಾಲಿಶ್ ಮಾಡುವವರಾಗಿ, ಅಥವಾ ಹೂವು, ಕಡ್ಡಿ ಪೆಟ್ಟಿಗೆ ಮತ್ತು ಇತರೆ ಚಿಲ್ಲರೆ ಸರಕುಗಳನ್ನು ಮಾರುವ ಕೆಲಸವನ್ನು ಮಾಡುತ್ತಿದ್ದರು.
  • ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ವೇಶ್ಯಾ ವೃತ್ತಿಯಲ್ಲೂ ದುಡಿಯುತ್ತಿದ್ಧರು. ಮಕ್ಕಳು 3ನೇ ವಯಸ್ಸಿನಲ್ಲಿರುವಾಗಲೇ ಅವರನ್ನು ಕೆಲಸಕ್ಕೆ ಹಾಕಲಾಗುತ್ತಿತ್ತು. ಕಲ್ಲಿದ್ದಲು ಗಣಿಗಳಲ್ಲಿ ಮಕ್ಕಳು ತಮ್ಮ 5ನೇ ವಯಸ್ಸಿಗೆ ದುಡಿಯಲು ಪ್ರಾರಂಭಿಸಿ,.
  • ಕೆಲವು ಮಕ್ಕಳು (ಮತ್ತು ವಯಸ್ಕರು) ದಿನಕ್ಕೆ 16 ಗಂಟೆಗಳಕಾಲಸಾಮಾನ್ಯವಾಗಿ ತಮ್ಮ 25ನೇ ವ ದುಡಿಯುತ್ತಿದ್ದರು. 1802 ಮತ್ತ್ತು1819ರ ಅವಧಿಯ ವೇಳೆಗಾಗಲೇ ಕಾರ್ಖಾನೆ ಕಾಯಿದೆಗಳು ಕಾರ್ಖಾನೆಗಳಲ್ಲಿ ಮತ್ತು ಹತ್ತಿಗಿರಣಿಗಳಲ್ಲಿ ದಬ್ಬಾಳಿಕೆಗೊಳಗಾದ ಬಡಮಕ್ಕಳ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗಳಿಗೆ ಮಿತಿಗೊಳಿಸುವುದನ್ನು ಜಾರಿಗೆ ತಂದಿತು. ಈ ಕಾಯಿದೆಗಳು ಹೆಚ್ಚಾಗಿ ಪರಿಣಾಮಕಾರಿಯಾಗಲಿಲ್ಲ.
  • ಆಮೂಲಾಗ್ರ ಪ್ರತಿರೋಧದಿಂದಾಗಿ, ಉದಾಹರಣೆಗೆ 1831 ರ "ಶಾರ್ಟ್ ಟೈಮ್ ಕಮಿಟಿ", 1833ರಲ್ಲಿ ರಾಯಲ್ ಕಮಿಷನ್ ನ ಶಿಫಾರಸ್ಸಿನ ಮೇರೆಗೆ, 11-18ರ ಒಳಗಿನ ಮಕ್ಕಳು ದಿನಕ್ಕೆ ಗರಿಷ್ಟ 12 ತಾಸುಗಳ ಕಾಲ ಕೆಲಸ ಮಾಡಬೇಕು, 9-11ರ ಒಳಗಿನ ಮಕ್ಕಳು ಗರಿಷ್ಟ 8 ಘಂಟೆಗಳ ಕಾಲ ದುಡಿಯಬೇಕು ಮತ್ತು 9 ವರ್ಷದ ಒಳಗಿನ ಮಕ್ಕಳು ಕೆಲಸವನ್ನೇ ಮಾಡಬಾರದೆಂಬ ಕಾಯಿದೆಯನ್ನು ಜಾರಿಗೊಳಿಸಿತು.
  • ಈ ಕಾಯಿದೆಯು ಕೇವಲ ಬಟ್ಟೆ ಕಾರ್ಖಾನೆಗಳಿಗೆ ಮಾತ್ರ ಅನ್ವಯವಾಗಿದ್ದು, ಮುಂದೆ ಮತ್ತೆ ಪ್ರತಿರೋಧದಿಂದಾಗಿ, 1847ರ ಮತ್ತೊಂದು ಕಾಯಿದೆಯ ಪ್ರಕಾರ ಮಕ್ಕಳು ಮತ್ತು ವಯಸ್ಕರಿಗೆ ದಿನಕ್ಕೆ 10 ಘಂಟೆಗಳ ಕಾಲ ದುಡಿಯುವುದನ್ನು ಮಿತಿಗೊಳಿಸಲಾಯಿತು. 1900ರ ವೇಳೆಗೆ, 1.7 ಮಿಲಿಯನ್ ಬಾಲಕಾರ್ಮಿಕರುಗಳು ತಮ್ಮ 15ನೇ ವಯಸ್ಸಿಗಿಂತ ಮುಂಚೆಯೇ ಅಮೆರಿಕಾದ ಕಾರ್ಖಾನೆಗಳಲ್ಲಿ ಇದ್ದರೆಂದು ವರದಿಯಾಗಿದೆ. *1910ರಲ್ಲಿ 15 ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು ಕಾರ್ಖಾನೆಗಳಲ್ಲಿ ಕೂಲಿಗಾಗಿ ದುಡಿಯುವವರ ಸಂಖ್ಯೆಯು 2 ಮಿಲಿಯನ್ ಗೆ ಏರಿತು.

ಇತ್ತೀಚಿನ ದಿನ

ಬಾಲಕಾರ್ಮಿಕ: ಬಾಲ ಕಾರ್ಮಿಕ ಪದ್ಧತಿ, ಐತಿಹಾಸಿಕ, ಇತ್ತೀಚಿನ ದಿನ 
2006ರಲ್ಲಿ ವಿಯಟ್ನಾಂ ನ ಹೋ ಚಿ ಮಿನ್ಹ್ ಸಿಟಿಯಲ್ಲಿ ಚಿಕ್ಕ ಹುಡುಗನೊಬ್ಬ ಕಸಗಳನ್ನು ಪುನರಾವರ್ತಿಸುತ್ತಿದ್ದನು.
  • ಬಾಲ ಕಾರ್ಮಿಕ ಪದ್ಧತಿಯು ಪ್ರಪಂಚದ ಕೆಲವು ಭಾಗಗಳಲ್ಲಿ ಇಂದಿಗೂ ಸಾಮಾನ್ಯವಾಗಿದೆ, ಅವುಗಳಲ್ಲಿ ಕಾರ್ಖಾನೆ ಕೆಲಸ, ಗಣಿಗಾರಿಕೆ, ವೇಶ್ಯಾವೃತ್ತಿ, ಕಲ್ಲು ಒಡೆಯುವ ಕೆಲಸ, ಕೃಷಿ-ಬೇಸಾಯ, ವ್ಯವಹಾರಗಳಲ್ಲಿ ಪೋಷಕರಿಗೆ ಸಹಾಯ ಮಾಡುವುದು, ತಮ್ಮದೇ ಸ್ವಂತ ಸಣ್ಣ ವ್ಯವಹಾರವನ್ನು ಹೊಂದಿರುವುದು (ಉದಾಹರಣೆಗಾಗಿ ಆಹಾರ ಪದಾರ್ಥಗಳನ್ನು ಮಾರುವುದು), ಅಥವಾ ವಿಲಕ್ಷಣ ಕೆಲಸಗಳನ್ನು ಮಾಡುವುದೂ ಸಹ ಸೇರಿದೆ.
  • ಎಲ್ಲಾ ಕೆಲಸಗಳನ್ನು ಅವರು ಎಲ್ಲಾ ಋತುಗಳಲ್ಲಿಯೂ ಮಾಡುತ್ತಿದ್ದರು; ಮತ್ತು ಅವರು ಕನಿಷ್ಠ ವೇತನಕ್ಕಾಗಿ ದುಡಿಯುತ್ತಿದ್ದರು. ಎಲ್ಲಿಯವರೆಗೆ ಕುಟುಂಬದಲ್ಲಿ ಬಡತನವಿರುತ್ತದೋ ಅಲ್ಲಿಯವರೆಗೂ ಬಾಲಕಾರ್ಮಿಕ ಪದ್ದತಿಯು ಇರುತ್ತದೆ. ಯೂನಿಸೆಫ್ನ ಪ್ರಕಾರ, ಪ್ರಪಂಚದಾದ್ಯಂತ 5 ರಿಂದ 14 ವಯಸ್ಸಿನ ಒಳಗಿನ ಬಾಲಕಾರ್ಮಿಕರು ಸುಮಾರು 158 ಮಿಲಿಯನ್ ಗಳಷ್ಟು ಇದ್ದಾರೆಂದು ಅಂದಾಜು ಮಾಡಲಾಗಿದೆ, ಮನೆಗೆಲಸದ ಸೇವಕರನ್ನು ಹೊರತುಪಡಿಸಿ. ಯುನೈಟೆಡ್ ನೇಷನ್ಸ್ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘ ಬಾಲಕಾರ್ಮಿಕ ಪದ್ದತಿಯನ್ನು ಶೋಷಣೀಯ ಎಂದು ಪರಿಗಣಿಸಿ, ಯುಏನ್ ನ ಕರಾರಿನಂತೆ ಮಕ್ಕಳ ಹಕ್ಕುಗಳ ಒಪ್ಪಂದದ 32ನೇ ನಿಬಂಧನೆಯಲ್ಲಿ:

    ... ಅರ್ಥಿಕ ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವುದು ಮತ್ತು ಅವರು ನಿರ್ವಹಿಸುವ ಯಾವುದೇ ಕೆಲಸ ಅಪಾಯಕಾರಿಯಾಗಿದ್ದಲ್ಲಿ ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾದಲ್ಲಿ, ಮಕ್ಕಳ ಆರೋಗ್ಯಕ್ಕೆ ತೊಂದರೆಯಾದಲ್ಲಿ,ಅಥವಾ ಮಕ್ಕಳ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ನೈತಿಕ ಅಥವಾ ಸಾಮಾಜಿಕ ಬೆಳವಣಿಗೆಯು ಮಕ್ಕಳ ಹಕ್ಕುಗಳೆಂದು ರಾಷ್ಟ್ರಗಳು ಗುರುತಿಸಿವೆ. ಹಾಗಿದ್ದಾಗ್ಯೂ ಪ್ರಪಂಚದಾದ್ಯಂತ ಸುಮಾರು 250 ಮಿಲಿಯನ್ ಮಕ್ಕಳು ದುಡಿಯುತ್ತಿದ್ದಾರೆಂದು ಅಂದಾಜು ಮಾಡಲಾಗಿದೆ.

ಬಾಲಕಾರ್ಮಿಕ: ಬಾಲ ಕಾರ್ಮಿಕ ಪದ್ಧತಿ, ಐತಿಹಾಸಿಕ, ಇತ್ತೀಚಿನ ದಿನ 
ಗಾಂಬಿಯಾದ ಹುಡುಗನೊಬ್ಬ ಟೈರನ್ನು ರಿಪೇರಿ ಮಾಡುತ್ತಿದ್ದನು.

.

  • ಸಿಎಸಿಎಲ್ ನ ಅಂದಾಜಿನಂತೆ ಸುಮಾರು 70 ರಿಂದ 80 ಮಿಲಿಯನ್ ಬಾಲಕಾರ್ಮಿಕರುಗಳು ಭಾರತದಲ್ಲಿ ಇದ್ದಾರೆ. ಬಾಲಕಾರ್ಮಿಕ ಪದ್ದತಿಯು ಲೆಕ್ಕಾಚಾರದ ಪ್ರಕಾರ ಏಷ್ಯಾ ಖಂಡದಲ್ಲಿ ಶೇಕಡಾ 22 ರಷ್ಟು, ಆಫ್ರಿಕಾದಲ್ಲಿ ಶೇಕಡಾ 32 ರಷ್ಟು, ಲ್ಯಾಟಿನ್ ಅಮೆರಿಕಾದಲ್ಲಿ ಶೇಕಡಾ 17 ರಷ್ಟು, ಅಮೇರಿಕಾ, ಕೆನಡಾ, ಯುರೋಪ್ ಮತ್ತು ಇತರ ಶ್ರೀಮಂತ ರಾಷ್ಟ್ರಗಳಲ್ಲಿ ಶೇಕಡಾ 1 ರಷ್ಟು ಇದೆ. ಬಾಲಕಾರ್ಮಿಕರ ಪ್ರಮಾಣಗಳು ರಾಷ್ಟ್ರಗಳಲ್ಲಿ ಮತ್ತು ಅ ರಾಷ್ಟ್ರಗಳ ಒಳಗಿನ ಪ್ರಾಂತ್ಯಗಳಲ್ಲಿ ವ್ಯತ್ಯಾಸವಾಗುತ್ತಾ ಹೋಗುತ್ತದೆ.

ಬಾಲಕಾರ್ಮಿಕರ ಇತ್ತೀಚಿನ ಘಟನೆಗಳು

ಬಾಲಕಾರ್ಮಿಕ: ಬಾಲ ಕಾರ್ಮಿಕ ಪದ್ಧತಿ, ಐತಿಹಾಸಿಕ, ಇತ್ತೀಚಿನ ದಿನ 
ಮೇ 2008ರ ಮೊರ್ರೋಕ್ಕೋದ ಐತ್ ಬೆನ್ಹಾದ್ದೌನಲ್ಲಿ ಮಗ್ಗದಲ್ಲಿ ಯುವ ಹುಡುಗಿಯು ಕೆಲಸ ಮಾಡುತ್ತಿದ್ದಳು.
  • ಇಂಡಿಯಾನದ ಇಂಡಿಯಾನಾಪೊಲಿಸ್ ನಲ್ಲಿ 2007ರ ಜೂನ್ 26ರಂದು, ಈ ದಾವೆಯ ನ್ಯಾಯಾಧಿಪತಿಯು ಫೈರ್ಸ್ಟೋನ್ ನ ದಾವೆಯನ್ನು ವಜಾ ಮಾಡುವ ಬೇಡಿಕೆಯನ್ನು ನಿಷ್ಕ್ರಿಯಗೊಳಿಸಿ ಮತ್ತು ಬಾಲಕಾರ್ಮಿಕರ ಹಕ್ಕುಬಾಧ್ಯತೆಗಳಿಗಾಗಿ ದಾವೆಯನ್ನು ಮುಂದೂಡಿಸಿದರು. 2005 ರ ನವಂಬರ್ 21 ರಲ್ಲಿ, ಭಾರತೀಯ ಎನ್ ಜಿ ಓ ದ ಚುರುಕು ಪ್ರತಿಪಾದಕನಾದ ಜುನ್ನೆದ್ ಖಾನ್, ಕಾರ್ಮಿಕ ಸಂಘದ ಮತ್ತು ಏನ್ ಜಿ ಓ ಪ್ರಥಮದ ಸಹಾಯದಿಂದ ರಾಷ್ಟ್ರದಲ್ಲೇ ಅತಿ ದೊಡ್ಡ ಧಾಳಿಯನ್ನು ಭಾರತದ ರಾಜಧಾನಿಯಾದ ನವದೆಹಲಿಯ ಪೂರ್ವ ಭಾಗದಲ್ಲಿ ನಡೆಸಿ ಬಾಲಕಾರ್ಮಿಕಾರನ್ನು ಕಾಪಾಡಿದನು.
  • ಈ ಧಾಳಿಯ ಫಲಿತಾಂಶವಾಗಿ, ಸಿಲಾಂಪುರ್ ನ ಜನಸಂದಣಿಯಿರುವ ಹೊಲಗೇರಿಯ ಜಾಗದಲ್ಲಿ ಕಾನೂನುಬಾಹಿರವಾಗಿ ನಡೆಸುತ್ತಿದ್ದ ಸುಮಾರು 100 ಕಸೂತಿ ಕಾರ್ಖಾನೆಗಳಲ್ಲಿನ 480 ಮಕ್ಕಳನ್ನು ಕಾಪಾಡಲಾಯಿತು. ಮುಂದಿನ ಕೆಲವು ವಾರಗಳಲ್ಲಿ, ಸರ್ಕಾರ, ಮಾಧ್ಯಮ ಮತ್ತು ಏನ್ ಜಿ ಓ ಗಳು ಆವೇಶಕ್ಕೊಳಗಾಗಿ, ವಿಫುಲ ಸಂಖ್ಯೆಯಲ್ಲಿ ಸಣ್ಣ ಹುಡುಗರಲ್ಲಿ ಅತಿ ಸಣ್ಣ ವಯಸ್ಸಿನ 5-6 ವರ್ಷದವರನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡಿದರು.
  • ಈ ರಕ್ಷಣಾ ಕಾರ್ಯಕ್ರಿಯೆ, ವಿಶ್ವದ ಕಣ್ಣನ್ನು ತೆರೆಸಿ ಪ್ರಪಂಚದಾದ್ಯಂತ ಅತಿ ದೊಡ್ಡ ಪ್ರಜಾಪ್ರಭುತ್ವದ ಕೆಳಗೇ ಬಾಲಕಾರ್ಮಿಕ ಪದ್ದತಿಯು ನಡೆಯುತ್ತಿದ್ದುದ್ದನ್ನು ತೋರಿಸಿತು. ಕಸೂತಿ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಬಾಲಕಾರ್ಮಿಕರ ಸುದ್ದಿಯನ್ನು, 2007 ಅಕ್ಟೋಬರ್ 28 ರ ಸಂಡೆ ಅಬ್ಸರ್ವರ್ ನಲ್ಲಿ ಬಹಿರಂಗಗೊಳಿಸಿದ ನಂತರ, ಬಿಬಿಎನ ಪ್ರತಿಪಾದಕರು ಕಾರ್ಯಾರಂಭ ಮಾಡಿದರು.
  • 1997 ರಲ್ಲಿ ಸಂಶೋಧನೆಯು ಸೂಚಿಸಿದಂತೆ, ಭಾರತದಲ್ಲಿನ ಕಾಂಚಿಪುರಂ ಜಿಲ್ಲೆಯ ರೇಷ್ಮೆ ನೇಯುವ/ಮಗ್ಗದ ಕಾರ್ಖಾನೆಯಲ್ಲಿ ಬಾಲಕಾರ್ಮಿಕರುಗಳು 40,000 ಸಂಖ್ಯೆಯನ್ನು ಮೀರಿದ್ದಾರೆ. ಈ ಸಂಖ್ಯೆಯು, ಮಗ್ಗದ ಮಾಲೀಕರಿಗಾಗಿ ದಾಸ್ಯತನದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನೂ ಒಳಗೊಂಡಿದೆ. ಶೈಕ್ಷಣಿಕ ಬೆಳವಣಿಗೆಗಾಗಿ ಹಳ್ಳಿಗಾಡಿನ ಸಂಸ್ಥೆಯು ಬಾಲಕಾರ್ಮಿಕರ ಸ್ಥಿತಿಯನ್ನು ಉತ್ತಮಪಡಿಸಲು ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿತು.
  • ಸಹಕಾರಿಯಾಗಿ ಕೆಲಸ ಮಾಡುತ್ತಾ, 2007 ರ ವೇಳೆಗೆ ರೈಡ್ ಬಾಲಕಾರ್ಮಿಕರನ್ನು 4000 ಕ್ಕಿಂತ ಕಡಿಮೆಗೊಳಿಸಿತು. ಚಾಕೋಲೆಟ್ ತಯಾರಿಕೆಯಲ್ಲಿ ಉಪಯೋಗಿಸುವ ಕೋಕೋ ಪೌಡರ್ ಉತ್ಪಾದನೆಯಲ್ಲೂ ಬಾಲಕಾರ್ಮಿಕರನ್ನು ಉಪಯೋಗಿಸಿಕೊಳ್ಳಲಾಗುತ್ತಿತ್ತು. ಕೋಕೋನ ಅರ್ಥಶಾಸ್ತ್ರವನ್ನು ನೋಡಿ. ಡಿಸೆಂಬರ್ 2009ರಂದು ಯುಕೆ ನಲ್ಲಿಯ ಚಳುವಳಿಗಾರರು, ಎರಡು ಅತ್ಯುತ್ತಮ ಅಗ್ರ ಚಿಲ್ಲರೆ ವ್ಯಾಪಾರಿಗಳನ್ನು, ಮಕ್ಕಳು ಕೀಳಲ್ಪಟ್ಟ ಹತ್ತಿಯಿಂದ ತಯಾರಿಸಿದ ಬಟ್ಟೆಗಳ ಮಾರಾಟವನ್ನು ನಿಲ್ಲಿಸುವಂತೆ ಹೇಳಿದರು.
  • ಬಾಂಗ್ಲಾದೇಶದಲ್ಲಿ ಹಚ್ & ಎಂ ಮತ್ತು ಜಾರ ಹತ್ತಿ ಒದಗಿಸುವವರನ್ನು ಉಪಯೋಗಿಸಿವೆ ಎಂದು ಆಂಟಿ-ಸ್ಲೇವರಿ ಇಂಟರ್ನ್ಯಾಷನಲ್ ಮತ್ತು ಎನ್ವಿರೋನ್ಮೆಂಟಲ್ ಜಸ್ಟೀಸ್ ಫೌಂಡೇಶನ್ (ಇಜೆಎಫ್) ಆರೋಪಿಸಿದೆ. ಅವರ ಹಲವಾರು ಕಚ್ಚಾ ವಸ್ತು ಮೂಲತಃ ಉಜ್ಬೇಕಿಸ್ಥಾನದಿಂದ ಬಂದಿರಬಹುದೆಂದು ಸಂದೇಹಪಟ್ಟಿದೆ, ಅಲ್ಲಿನ ಹೊಲಗಳಲ್ಲಿ 10 ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳಲು ಬಲಾತ್ಕರಿಸಲಾಗುತ್ತದೆ.

ಬಾಲಕಾರ್ಮಿಕರ ರಕ್ಷಣೆ

ಬಾಲಕಾರ್ಮಿಕ: ಬಾಲ ಕಾರ್ಮಿಕ ಪದ್ಧತಿ, ಐತಿಹಾಸಿಕ, ಇತ್ತೀಚಿನ ದಿನ 
1940ರ ಅಕ್ಟೋಬರ್ ನಲ್ಲಿ ಮೇನ್ ನ ಜಮೀನಿನಲ್ಲಿ ಮಕ್ಕಳು ಕೆಲಸ ಮಾಡುತ್ತಿದ್ದರು.
  • ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಬಾಲ ಕಾರ್ಮಿಕರಿಂದ ತಯಾರಿಸಲ್ಪಟ್ಟ ಅಥವಾ ಜೋಡಿಸಲ್ಪಟ್ಟ ಉತ್ಪಾದನೆಗಳನ್ನು ಕೊಂಡುಕೊಳ್ಳುವ ಸಾರ್ವಜನಿಕರ ನೈತಿಕತೆಯನ್ನು ಪ್ರಶ್ನಿಸುವಂತಿದೆ. ಆದಾಗ್ಯೂ, ಬೇರೆಯವರು ಬಾಲಕಾರ್ಮಿಕರಿಂದ ತಯಾರಿಸಲ್ಪಟ್ಟ ಉತ್ಪಾದನೆಗಳನ್ನು ಬಹಿಷ್ಕರಿಸುವುದರಿಂದ ಮಕ್ಕಳುನ್ನು ಮತ್ತಷ್ಟು ಅಪಾಯಕರವಾದ ವೇಶ್ಯಾವಾಟಿಕೆ ಅಥವಾ ಶ್ರಮದಾಯಕವಾದ ಬೇಸಾಯ ವೃತ್ತಿಗಳಿಗೆ ಬಲವಂತವಾಗಿ ತಳ್ಳಿದಂತಾಗುತ್ತದೆ ಎಂದು ಕಾಳಜಿ ಪಟ್ಟಿದ್ದಾರೆ.
  • ಉದಾಹರಣೆಗಾಗಿ, ಯುನಿಸೆಫ್ ಅಧ್ಯಯನ ಕಂಡುಕೊಂಡಂತೆ ಯುಎಸ್ ನಲ್ಲಿ ಚೈಲ್ಡ್ ಲೇಬರ್ ಡಿಟರೆನ್ಸ್ ಆಕ್ಟ್ ಅನ್ನು ಜಾರಿಗೆ ತಂದ ನಂತರ, ಬಾಂಗ್ಲಾದೇಶದ ಸಿದ್ಧ ಉಡುಪುಗಳ ಕೈಗಾರಿಕೆಯಲ್ಲಿ ಕೆಲಸದಲ್ಲಿ ತೊಡಗಿರುವ ಸುಮಾರು 50,000 ಮಕ್ಕಳನ್ನು ಕೆಲಸ ದಿಂದ ತೆಗೆದು ಹಾಕಲಾಯಿತು..
  • ಮಿಲ್ಟನ್ ಫ್ರೈಡ್-ಮ್ಯಾನ್ನ ಪ್ರಕಾರ ಕೈಗಾರಿಕಾ ಕ್ರಾಂತಿಗೆ ಮೊದಲು ವಾಸ್ತವವಾಗಿ ಎಲ್ಲ ಮಕ್ಕಳು ಬೇಸಾಯದಲ್ಲಿ ದುಡಿಯುತ್ತಿದ್ದರು. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಹಲವು ಮಕ್ಕಳು ಹೊಲದ ಕೆಲಸದಿಂದ ಕಾರ್ಖಾನೆ ಕೆಲಸಕ್ಕೆ ಬಂದರು. ಮುಂದೆ ಅವರ ವೇತನದ ಹೆಚ್ಚಳದಿಂದ ಪೋಷಕರು ಅವರ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಬದಲು ಶಾಲೆಗಳಿಗೆ ಕಳುಹಿಸುವುದು ಸಾಧ್ಯವಾಯಿತು.
  • ಆದ ಥಾಮಸ್ ಡಿಗ್ರೆಗೊರಿ ಎಂಬುವವರ ಪ್ರಕಾರ, ಕ್ಯಾಟೋ ಸಂಸ್ಥೆಯು ಪ್ರಕಟಿಸಿದ ಲೇಖನವೊಂದರಲ್ಲಿ, ವಾಷಿಂಗ್ಟನ್ ಡಿ.ಸಿ ಯಲ್ಲಿರುವ ಒಂದು ಲಿಬರ್ಟೇರಿಯನ್ ಸಂಶೋಧನಾ ಸಂಸ್ಥೆಯು ಸ್ಪಷ್ಟ ಪಡಿಸು ವುದೇನೆಂದರೆ, "ತಾಂತ್ರಿಕವಾದ ಮತ್ತು ಆರ್ಥಿಕವಾದ ಬದಲಾವಣೆಗಳ ಸಲಕರಣೆಗಳನ್ನು ಜಾರಿಗೊಳಿಸುವುದರಿಂದ ಮಕ್ಕಳನ್ನು ಕೆಲಸದ ಸ್ಥಳದಿಂದ ಹೊರಗೆ ತರುವುದು ಮತ್ತು ಅವರನ್ನು ಶಾಲೆಗೆ ಕಳುಹಿಸುವುದು.
  • ಆಗ ಅವರು ಜವಾಬ್ದಾರಿಯುತ ವಯಸ್ಕರಾಗಿ ಬೆಳೆಯಬಹುದು ಮತ್ತು ಹೆಚ್ಚು ದಿನ ಆರೋಗ್ಯವಾಗಿ ಬದುಕಬಹುದು. ಹೀಗಿದ್ದಾಗ್ಯೂ, 19ನೇ ಶತಮಾನದ ಕೊನೆಯವರೆಗೆ ಬಾಲಕಾರ್ಮಿಕ ಪದ್ದತಿಯು ಹೇಗೆ ನಮ್ಮಲ್ಲಿ ಪಾರಂಪರಿಕವಾಗಿತ್ತೋ, ಹಾಗೆಯೇ ಬಾಂಗ್ಲಾದೇಶ ಮುಂತಾದ ಬಡ ರಾಷ್ಟ್ರಗಳಲ್ಲಿ, ದುಡಿಯುವ ಮಕ್ಕಳು ಹಲವಾರು ಕುಟುಂಬಗಳ ಉಳಿವಿಗಾಗಿ ಮುಖ್ಯವಾಗಿರುತ್ತಾರೆ.
  • ಆದುದರಿಂದ, ಬಾಲ ಕಾರ್ಮಿಕ ಪದ್ದತಿಯನ್ನು ಕೊನೆಗೊಳಿಸಲು ಹೋರಾಡುವುದು ಹೇಗೆ ಅವಶ್ಯಕವಾಗಿದೆಯೋ, ಇದನ್ನು ಸಾಧಿಸಲು ವಿವಿಧ ಮಾರ್ಗಗಳ ಅವಶ್ಯಕತೆ ಇದೆ, ಮತ್ತು ದುಃಖದ ಸಂಗತಿಯೆಂದರೆ ಇದನ್ನು ಸಾಧಿಸಲು ಹಲವಾರು ರಾಜಕೀಯ ಅಡ್ಡಿಗಳಿವೆ..
  • is this any of them have been implemented ????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಬಾಲಕಾರ್ಮಿಕ ಪದ್ದತಿಯ ವಿರುದ್ದದ ಪ್ರಯತ್ನಗಳು

  • ಬಾಲಕಾರ್ಮಿಕ ಪದ್ಧತಿಯ ತೊಡೆದುಹಾಕುವಿಕೆಯ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು, 1992ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ಸಂಘವು ಇಂಟರ್ನಾಷನಲ್ ಪ್ರೋಗ್ರಾಮ್ ಆನ್ ದಿ ಎಲಿಮಿನೇಶನ್ ಆಫ್ ಚೈಲ್ಡ್ ಲೇಬರ್(ಐಪಿಇಸಿ) ಎಂಬ ಕಾರ್ಯಕ್ರಮವನ್ನು ಹುಟ್ಟುಹಾಕಿದ್ದು, ಈ ನಿಷೇಧದ ಬೆಳವಣಿಗೆಯು ರಾಷ್ಟ್ರಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಬಲಪಡಿಸುವುದರಿಂದ ಮತ್ತು ಬಾಲಕಾರ್ಮಿಕ ಪದ್ದತಿಯ ವಿರುದ್ದ ವಿಶ್ವಾದ್ಯಂತ ಆಂದೋಲನವನ್ನು ಪ್ರೋತ್ಸಾಹಿಸುವುದರಿಂದ ಸಾಧಿಸುವುದಾಗಿತ್ತು.
  • ಐಪಿಇಸಿ ಸಧ್ಯದಲ್ಲಿ 88 ರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 2008ರಲ್ಲಿ ತಾಂತ್ರಿಕ ಸಹಕಾರ ಯೋಜನೆಯ ವಾರ್ಷಿಕ ಖರ್ಚು ವೆಚ್ಚ 61 ಮಿಲಿಯನ್ ಯು.ಎಸ್ ಡಾಲರ್ಸ್ ಅನ್ನು ಮೀರಿದೆ. ಇದು ವಿಶ್ವಮಟ್ಟದ ಬೃಹತ್ ಕಾರ್ಯಕ್ರಮವಾಗಿದ್ದು, ಐಎಲ್ಓ ನ ದೊಡ್ಡದಾದ ಏಕ ಮಾತ್ರ ಆರ್ಥಿಕ ವ್ಯವಹಾರಗಳ ಕಾರ್ಯಕ್ರಮವಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ, ಐಪಿಇಸಿ ನ ಜೊತೆಗಾರರು ಸಂಖ್ಯೆ ಮತ್ತು ಶ್ರೇಣಿಗಳಲ್ಲಿ ವಿಸ್ತಾರಗೊಂಡಿದ್ದು, ಈಗ ಅವರೊಂದಿಗೆ ಕೆಲಸಗಾರರು ಮತ್ತು ಒಡೆಯರ ಸಂಸ್ಥೆಯು, ಇತರ ಅಂತರರಾಷ್ಟ್ರೀಯ ಮತ್ತು ಸರ್ಕಾರಿ ಪ್ರತಿನಿಧಿಗಳು, ಖಾಸಗಿ ವ್ಯವಹಾರಗಳು, ಸಾಮಾಜಿಕ ಆಧಾರದ ಸಂಘ ಸಂಸ್ಥೆಗಳು, ಏನ್ ಜಿ ಓ ಗಳು, ಮಾಧ್ಯಮದವರು, ರಾಜ್ಯ ಕಾರ್ಯಾಚರಣೆಯ ಜನರು, ನ್ಯಾಯಾಧೀಶರ ಸಮೂಹ, ವಿಶ್ವವಿದ್ಯಾನಿಲಯಗಳು, ಧಾರ್ಮಿಕ ಗುಂಪುಗಳು ಮತ್ತು ಮಕ್ಕಳು ಹಾಗು ಅವರ ಕುಟುಂಬಗಳು. ಐಪಿಇಸಿಯಾ ಬಾಲಕಾರ್ಮಿಕ ಪದ್ದತಿಯ ತೊಡೆದುಹಾಕುವಿಕೆಯ ಕೆಲಸವು, ಐಎಲ್ಓ ನ ಯೋಗ್ಯ ಕಾರ್ಯಕ್ರಮದ ಮುಖ್ಯ ರೂಪವಾಗಿದೆ.
  • ಬಾಲಕಾರ್ಮಿಕ ಪದ್ದತಿಯು ಮಕ್ಕಳ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಬೇಕಾಗಿರುವ ಕೌಶಲ್ಯ ಮತ್ತು ವಿಧ್ಯಾಭ್ಯಾಸಕ್ಕೆ ಅಡ್ಡಿಯನ್ನುಂಟು ಮಾಡುವುದರ ಜೊತೆಗೆ, ನಿರಂತರ ದಾರಿದ್ರ್ಯ ಹಾಗು ಸ್ಪರ್ಧಾತ್ಮಕತೆ, ಉತ್ಪಾದಕತೆ ಮತ್ತು ಆದಾಯದ ಸಂಭವನೀಯತೆಯ ನಷ್ಟವು ರಾಷ್ಟ್ರದ ಆರ್ಥಿಕ ಪ್ರಗತಿಗೆ ಅಡ್ಡಿಯುಂಟು ಮಾಡುತ್ತದೆ. ಬಾಲಕಾರ್ಮಿಕ ಪದ್ದತಿಯಿಂದ ಮಕ್ಕಳನ್ನು ತೆಗೆದು ಹಾಕುವುದು, ಅವರಿಗೆ ವಿಧ್ಯಾಭ್ಯಾಸ ಒದಗಿಸುವುದು ಮತ್ತು ಅವರ ಕುಟುಂಬಗಳಿಗೆ ನೆರವಾಗುತ್ತಾ, ತರಬೇತಿ ಮತ್ತು ಉದ್ಯೋಗದ ಅವಕಾಶಗಳನ್ನು ನೇರವಾಗಿ ಕೊಡುವುದರಿಂದ, ವಯಸ್ಕರಿಗೆ ಯೋಗ್ಯವಾದ ಕೆಲಸ ಕೊಡುವುದನ್ನು ರಚಿಸಿದಂತಾಗುತ್ತದೆ..

ಹೊರಗಿನ ಕೊಂಡಿಗಳು

Tags:

ಬಾಲಕಾರ್ಮಿಕ ಬಾಲ ಕಾರ್ಮಿಕ ಪದ್ಧತಿಬಾಲಕಾರ್ಮಿಕ ಐತಿಹಾಸಿಕಬಾಲಕಾರ್ಮಿಕ ಇತ್ತೀಚಿನ ದಿನಬಾಲಕಾರ್ಮಿಕ ರ ಇತ್ತೀಚಿನ ಘಟನೆಗಳುಬಾಲಕಾರ್ಮಿಕ ರ ರಕ್ಷಣೆಬಾಲಕಾರ್ಮಿಕ ಪದ್ದತಿಯ ವಿರುದ್ದದ ಪ್ರಯತ್ನಗಳುಬಾಲಕಾರ್ಮಿಕ ಹೊರಗಿನ ಕೊಂಡಿಗಳುಬಾಲಕಾರ್ಮಿಕ

🔥 Trending searches on Wiki ಕನ್ನಡ:

ರಗಳೆಬ್ಲಾಗ್ಎರಡನೇ ಮಹಾಯುದ್ಧತತ್ಪುರುಷ ಸಮಾಸಸ್ವದೇಶಿ ಚಳುವಳಿರಾಜ್ಯಗಳ ಪುನರ್ ವಿಂಗಡಣಾ ಆಯೋಗಚರಕಅಮರೇಶ ನುಗಡೋಣಿಜಯಚಾಮರಾಜ ಒಡೆಯರ್ಸಮುದ್ರಶಾಸ್ತ್ರಉತ್ತರ ಕನ್ನಡಭರತ-ಬಾಹುಬಲಿಅಲ್ಲಮ ಪ್ರಭುಚದುರಂಗದ ನಿಯಮಗಳುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಸೂರ್ಯ (ದೇವ)ಮುಹಮ್ಮದ್ಜಿ.ಪಿ.ರಾಜರತ್ನಂಯೋಗಕರ್ನಾಟಕದ ಜಿಲ್ಲೆಗಳುಯೋಗವಾಹಮಲೈ ಮಹದೇಶ್ವರ ಬೆಟ್ಟಪರಿಸರ ರಕ್ಷಣೆಭಾರತದ ಇತಿಹಾಸಆಸ್ಟ್ರೇಲಿಯಾ ಕ್ರಿಕೆಟ್ ತಂಡಶಿಕ್ಷಣಭಾರತೀಯ ಸ್ಟೇಟ್ ಬ್ಯಾಂಕ್ಕೈವಾರ ತಾತಯ್ಯ ಯೋಗಿನಾರೇಯಣರುಗೋಕಾಕ್ ಚಳುವಳಿಭಾರತದ ಸಂವಿಧಾನಮೊಘಲ್ ಸಾಮ್ರಾಜ್ಯರಾಜಕುಮಾರ (ಚಲನಚಿತ್ರ)ಕನ್ನಡಕರ್ನಾಟಕ ಜನಪದ ನೃತ್ಯವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಬೆಂಗಳೂರು ಗ್ರಾಮಾಂತರ ಜಿಲ್ಲೆದ್ವಿರುಕ್ತಿತಿರುಪತಿಭಾರತದ ಸಂವಿಧಾನ ರಚನಾ ಸಭೆರಾಷ್ಟ್ರಕೂಟವಿರಾಟ್ ಕೊಹ್ಲಿಷಟ್ಪದಿಮಣ್ಣುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕದ ಇತಿಹಾಸಶ್ಯೆಕ್ಷಣಿಕ ತಂತ್ರಜ್ಞಾನದೂರದರ್ಶನಕರ್ನಾಟಕದ ಅಣೆಕಟ್ಟುಗಳುಚಾಣಕ್ಯಧರ್ಮರಾಯ ಸ್ವಾಮಿ ದೇವಸ್ಥಾನಬಯಲಾಟನೊಬೆಲ್ ಪ್ರಶಸ್ತಿಬಾಲಕಾರ್ಮಿಕಸಾಲುಮರದ ತಿಮ್ಮಕ್ಕಎಸ್.ಎಲ್. ಭೈರಪ್ಪಪರಿಣಾಮಜೈನ ಧರ್ಮಪಾಲಕ್ಭಾರತೀಯ ಶಾಸ್ತ್ರೀಯ ಸಂಗೀತಆಮ್ಲನುಡಿ (ತಂತ್ರಾಂಶ)ಶಿವಮೊಗ್ಗಖಾಸಗೀಕರಣಸೌರಮಂಡಲಚಾಮರಸಗಾದೆಸಂಭೋಗಕೈಗಾರಿಕೆಗಳುಬಹಮನಿ ಸುಲ್ತಾನರುವಿಜಯನಗರನಗರೀಕರಣಕಾಲೆರಾಕರ್ನಾಟಕದ ಹೋಬಳಿಗಳುಭಾರತದಲ್ಲಿನ ಜಾತಿ ಪದ್ದತಿಲೋಪಸಂಧಿಅರ್ಥಶಾಸ್ತ್ರಧರ್ಮಸ್ಥಳ🡆 More