ಸತ್ಯವತಿ

ಸತ್ಯವತಿ ಮಹಾಭಾರತದಲ್ಲಿ ಸತ್ಯವತಿಯು ಮೀನುಗಾರನ ಮಗಳು .

ಶಂತನುವಿನ ಪತ್ನಿ. ಭೀಷ್ಮನ ಮಲತಾಯಿ. ಶಂತನು ಮತ್ತು ಸತ್ಯವತಿಗೆ ಇಬ್ಬರು ಗಂಡು ಮಕ್ಕಳಾದರು, ಇವರು ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಶಂತನು ಮಹಾರಾಜನ ನಂತರ ಸತ್ಯವತಿ ಹಸ್ತಿನಾಪುರದ ಮಹಾರಾಣಿಯಾಗಿ ರಾಜ್ಯಭಾರ ಮಾಡುತ್ತಾಳೆ. ಮಹಾಭಾರತದಲ್ಲಿ, ಚಿತ್ರಾಂಗದನು ಶಂತನು ಮತ್ತು ಸತ್ಯವತಿಯ ಹಿರಿಯ ಮಗ. ಅವನ ತಂದೆಯ ಮರಣದ ನಂತರ, ಆತನು ಹಸ್ತಿನಾಪುರದ ಸಿಂಹಾಸನವನ್ನು ಏರಿದನು, ಆದರೆ ಇದೇ ಹೆಸರಿನ ಗಂಧರ್ವನಿಂದ ಕೊಲ್ಲಲ್ಪಟ್ಟನು. ಚಿತ್ರಾಂಗದನು ಒಬ್ಬ ಮಹಾನ್ ಯೋದ್ಧನಾಗಿದ್ದನು ಮತ್ತು ಎಲ್ಲ ರಾಜರನ್ನು ಸೋಲಿಸಿದನು. ಸತ್ಯವತಿ ಮೀನಿನ ಮಗಳಾದುದ್ದರಿಂದ ಮತ್ಸ್ಯಗಂಧಿ ಎಂದೂ ನಂತರ ಯೋಜನಾಗಂಧಿ ಎಂದೂ ಕರೆಯಲಾಗಿದೆ.

ಸತ್ಯವತಿ
ವ್ಯಾಸ, ಸತ್ಯವತಿಯ ಮಗ , ಮಹಾಭಾರತದ ಕರ್ತೃ
ಸತ್ಯವತಿ
Painting of Satyavati, standing with her back turned to King Shantanu
ಸತ್ಯವತಿಯನ್ನು ಸಂತೈಸುತ್ತಿರುವ ಶಂತನು.ಚಿತ್ರ:ರಾಜಾ ರವಿವರ್ಮ
Information
ಕುಟುಂಬಉಪರಿಚರ ವಾಸು (ತಂದೆ)
ಗಂಡ/ಹೆಂಡತಿಶಂತನು
ಮಕ್ಕಳುಪರಾಶರ ಅವರೊಂದಿಗೆ ಕೃಷ್ಣದ್ವೈಪಾಯನ
ಮತ್ತು ಶಂತನು ಅವರೊಂದಿಗೆ ಚಿತ್ರಾಂಗದ ಮತ್ತು ವಿಚಿತ್ರವೀರ್ಯ

ಆರಂಭಿಕ ಜೀವನ

ಮಹಾಭಾರತದಲ್ಲಿ ಬರುವ ದಾಶರಾಜನಿಗೆ ಉಚ್ಚೈಶ್ರವಸ್ಸು ಎಂದೂ ಹೆಸರಿದೆ. ಇವನು ಬೆಸ್ತರ ರಾಜ. ಒಮ್ಮೆ ಬೆಸ್ತರು ಮೀನು ಹಿಡಿಯುವಾಗ ಒಂದು ಹೆಣ್ಣು ಮಗು ಸಿಕ್ಕಿತು. ಅದನ್ನು ಅವರು ಈತನಿಗೆ ಒಪ್ಪಿಸಿದರು. ಮುಂದೆ ಆ ಹೆಣ್ಣು ಮಗು ಮತ್ಸ್ಯಗಂಧಿನಿ, ಸತ್ಯವತಿ, ಯೋಜನಗಂಧಿ ಎಂಬ ಹೆಸರುಗಳಿಂದ ಪ್ರಸಿದ್ಧಳಾದಳು. ಪರಾಶರ ಮುನಿಯಿಂದ ಅವಳಿಗೆ ತೇಜಸ್ವಿನಿಯಾದ ಕೃಷ್ಣದ್ವೈಪಾಯನ ಎಂಬ ಮಗ ಹುಟ್ಟಿದ. ಮುಂದೆ ಆಕೆ ಶಂತನು ಚಕ್ರವರ್ತಿಯನ್ನು ಮದುವೆಯಾದಳು.

ವಿವಾಹದ ಪ್ರಸ್ತಾವ

ಒಂದು ದಿನ ಶಂತನು ದಾಶರಾಜನ ಪುತ್ರಿ ಸತ್ಯವತಿಯನ್ನು ನೋಡಿ ಮೋಹಗೊಂಡು ಆಕೆಯನ್ನು ವಿವಾಹವಾಗುವುದಾಗಿ ದಾಶರಾಜನಿಗೆ ತಿಳಿಸಿದ. ಆದರೆ ದಾಶರಾಜ ಮುಂದೆ ಸತ್ಯವತಿಯ ಗರ್ಭದಲ್ಲಿ ಜನಿಸಿದ ಪುತ್ರನನ್ನು ಉತ್ತರಾಧಿಕಾರಿಯಾಗಿ ಮಾಡುವುದಾಗಿ ಮಾತುಕೊಟ್ಟರೆ ಮಗಳನ್ನು ಕೊಡವುದಾಗಿ ಕರಾರು ಹಾಕಿದ. ಶಂತನುವಿಗೆ ಇದು ಸಮ್ಮತವಾಗದಿದ್ದರೂ ಅವನ ಮನಸ್ಸಲ್ಲೆಲ್ಲ ಸತ್ಯವತಿ ತುಂಬಿಕೊಂಡಿದ್ದಳು. ಇದರಿಂದಾಗಿ ಶಂತನು ವ್ಯಾಕುಲನಾಗಿದ್ದ. ಈ ವಿಷಯ ಮಂತ್ರಿಯ ಮೂಲಕ ತಿಳಿದುಕೊಂಡ ಭೀಷ್ಮ ದಾಶರಾಜನಲ್ಲಿಗೆ ಹೋಗಿ ಸಂಧಾನ ನಡೆಸಿ, ತಾನು ಮದುವೆಮಾಡಿಕೊಳ್ಳದೆ ಬ್ರಹ್ಮಚಾರಿಯಾಗಿಯೇ ಉಳಿಯುವುದಾಗಿ ಪ್ರತಿಜ್ಞೆಮಾಡಿ ಸತ್ಯವತಿಯೊಂದಿಗೆ ತನ್ನ ತಂದೆಯ ವಿವಾಹ ನೆರವೇರಿಸಿದ. ಸಂತೋಷಗೊಂಡ ತಂದೆ ಮಗನಿಗೆ ಇಚ್ಛಾಮರಣಿಯಾಗೆಂದು ವರವಿತ್ತ. ಮುಂದೆ ಭೀಷ್ಮ ಸತ್ಯವತಿಯ ಮಗ ವಿಚಿತ್ರವೀರ್ಯನಿಗಾಗಿ ಕಾಶೀರಾಜನ ಪುತ್ರಿಯಾದ ಅಂಬೆ, ಅಂಬಿಕೆ, ಅಂಬಾಲಿಕೆಯರನನ್ನು ಅಪಹರಿಸಿಕೊಂಡು ಬಂದ. ಆದರೆ ಅಂಬೆ ವಿಚಿತ್ರ ವೀರ್ಯವನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆಯನ್ನು ಸಾಲ್ವರಾಜನಲ್ಲಿಗೆ ಕಳುಹಿಸಿಕೊಟ್ಟ. ವಿಚಿತ್ರವೀರ್ಯನಿಗೆ ಸಂತಾನ ಇರಲಿಲ್ಲ. ಅವನ ಸಾವಿನ ಅನಂತರ ವಂಶ ನಿಂತುಹೋಗುವ ಸ್ಥಿತಿಗೆ ಬಂತು. ಆಗ ಸತ್ಯವತಿ ಅಂಬಿಕೆ, ಅಂಬಾಲಿಕೆಯವರೊಂದಿಗೆ ಸಂತಾನಕ್ಕಾಗಿ ಕೂಡಲು ಭೀಷ್ಮನನ್ನು ಪ್ರೇರಿಸಿದರೂ ಅದಕ್ಕೆ ಭೀಷ್ಮ ಒಪ್ಪಲಿಲ್ಲ. ಬಳಿಕ ಸತ್ಯವತಿ ಭೀಷ್ಮನ ಸೂಚನೆ ಮೇರೆಗೆ ವ್ಯಾಸನನ್ನು ಬರಮಾಡಿಕೊಂಡು ಅಂಬಿಕೆ, ಅಂಬಾಲಿಕೆಯರಲ್ಲಿ ಸಂತಾನವನ್ನು ಅನುಗ್ರಹಿಸಲು ಕೇಳಿ ಕೊಂಡಳು.

Tags:

ಮಹಾಭಾರತಶಂತನುಹಸ್ತಿನಾಪುರ

🔥 Trending searches on Wiki ಕನ್ನಡ:

ಉತ್ಪಾದನೆಯ ವೆಚ್ಚಬಿ.ಎಲ್.ರೈಸ್ಧಾನ್ಯತಾಜ್ ಮಹಲ್ತ್ರಿವೇಣಿಸ್ವಾಮಿ ವಿವೇಕಾನಂದನಾಡ ಗೀತೆವ್ಯಾಪಾರವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕರ್ನಾಟಕದ ಇತಿಹಾಸಕ್ಯಾರಿಕೇಚರುಗಳು, ಕಾರ್ಟೂನುಗಳುವಡ್ಡಾರಾಧನೆಚಿಕ್ಕಮಗಳೂರುತ್ರಿಶೂಲಕೊಪ್ಪಳಭಾರತದ ಸರ್ವೋಚ್ಛ ನ್ಯಾಯಾಲಯಪಂಚ ವಾರ್ಷಿಕ ಯೋಜನೆಗಳುಸಂಭೋಗಬಾಹುಬಲಿಹಲ್ಮಿಡಿ ಶಾಸನಅರಸೀಕೆರೆಬೇಬಿ ಶಾಮಿಲಿಹರ್ಡೇಕರ ಮಂಜಪ್ಪಬಹುವ್ರೀಹಿ ಸಮಾಸಹರಪ್ಪವಿಧಾನಸೌಧಮೈಸೂರು ಸಂಸ್ಥಾನಮೊದಲನೇ ಅಮೋಘವರ್ಷಜಿಪುಣಸಂಪತ್ತಿಗೆ ಸವಾಲ್ಭೂತಾರಾಧನೆಎ.ಪಿ.ಜೆ.ಅಬ್ದುಲ್ ಕಲಾಂಗಣೇಶಜೀವಕೋಶ೧೮೬೨ಊಟಆತ್ಮರತಿ (ನಾರ್ಸಿಸಿಸಮ್‌)ಊಳಿಗಮಾನ ಪದ್ಧತಿಮಸೂದೆಭದ್ರಾವತಿಜನ್ನಮಾವುಕರಗ (ಹಬ್ಬ)ಹೆಚ್.ಡಿ.ಕುಮಾರಸ್ವಾಮಿಸಿದ್ಧಯ್ಯ ಪುರಾಣಿಕಹಂಸಲೇಖಮುಹಮ್ಮದ್ಚ.ಸರ್ವಮಂಗಳವಿಕ್ರಮಾರ್ಜುನ ವಿಜಯನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕವಲುಮಯೂರಶರ್ಮಕಂಸಾಳೆಬಾಬರ್ಭಾರತೀಯ ಭೂಸೇನೆಕೃಷ್ಣದೇವರಾಯಸಮುದ್ರವಲ್ಲಭ್‌ಭಾಯಿ ಪಟೇಲ್ಕನ್ನಡ ಅಕ್ಷರಮಾಲೆಕಲಿಯುಗಜಪಾನ್ಬೆಟ್ಟದ ನೆಲ್ಲಿಕಾಯಿಹಾಸನ ಜಿಲ್ಲೆಸುಧಾ ಚಂದ್ರನ್ಆಯುರ್ವೇದಯೇಸು ಕ್ರಿಸ್ತವಾಲ್ಮೀಕಿತಮ್ಮಟಕಲ್ಲು ಶಾಸನಸಾಮ್ರಾಟ್ ಅಶೋಕಲೋಪಸಂಧಿಭಾರತದ ರೂಪಾಯಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾರತದ ಬಂದರುಗಳುಅಷ್ಟ ಮಠಗಳು🡆 More