ಭಾರತದಲ್ಲಿ ಪ್ರವಾಸೋದ್ಯಮ

ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ.

ಇದು ರಾಷ್ಟ್ರೀಯ GDPಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆ ನೀಡುತ್ತದೆ. ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶೀ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಅಂತೆಯೇ, 562 ದಶಲಕ್ಷ ದೇಶೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಭಾರತದ ಪ್ರವಾಸೋದ್ಯಮ ಸೇವಾ ವಲಯವು 2008ರಲ್ಲಿ ಸುಮಾರು US$100 ಶತಕೋಟಿ ಆದಾಯ ಗಳಿಸಿತು. ವಾರ್ಷಿಕ 9.4% ಅಭಿವೃದ್ಧಿ ದರದಲ್ಲಿ, 2018ರೊಳಗೆ US$275.5 ಶತಕೋಟಿ ಆದಾಯ ತರುವ ಸಾಧ್ಯತೆಯಿದೆ. ಭಾರತದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಪ್ರವಾಸೋದ್ಯಮ ಸಚಿವಾಲಯವು ಪ್ರಮುಖ ಸಂಪರ್ಕ ಸೇತುವಾಗಿದೆ. ಇದು 'ಅದ್ಭುತ ಭಾರತ' ಅಭಿಯಾನ ಹಮ್ಮಿಕೊಂಡಿದೆ.

ಭಾರತದಲ್ಲಿ ಪ್ರವಾಸೋದ್ಯಮ
ಪ್ರತಿ ವರ್ಷ 3 ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗ್ರಾದಲ್ಲಿನ ತಾಜ್‌ ಮಹಲ್‌ಗೆ ಭೇಟಿ ನೀಡುತ್ತಾರೆ.

ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿ ಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ಸಾಮರ್ಥ್ಯ ಹೊಂದಿರುವ ಭಾರತ ಉಪಖಂಡ ಕ್ಕೆ ಮುಂದಿನ ಹತ್ತು ವರ್ಷಗಳ ವರೆಗೆ ಪ್ರವಾಸೋದ್ಯಮಕ್ಕೆ ಪೂರಕವಾದ ಅಗತ್ಯ ಸಾಮರ್ಥ್ಯವಿದೆ. ವಿಶ್ವದಲ್ಲೇ ಅತಿ ಜನಪ್ರಿಯ ಪ್ರವಾಸೀ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ. 2007ರಲ್ಲಿ ಬಿಡುಗಡೆಯಾದ ಪರ್ಯಟನ ಮತ್ತು ಪ್ರವಾಸೋದ್ಯಮ ಪೈಪೋಟಿಯ ವರದಿ ಯ ಪ್ರಕಾರ, ಭಾರತ ದರಗಳ ಸ್ಫರ್ಧೆಯಲ್ಲಿ ಆರನೆಯ ಸ್ಥಾನ ಹಾಗೂ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ 39ನೆಯ ಸ್ಥಾನದಲ್ಲಿದೆ. ಹೊಟೆಲ್‌ ಕೊಠಡಿಗಳ ಕೊರತೆ ಸೇರಿದಂತೆ ಅಲ್ಪ ಮತ್ತು ಮಧ್ಯಮಾವಧಿಯ ಹಿನ್ನಡೆಯುಂಟಾದರೂ, ಪ್ರವಾಸೋದ್ಯದ ಆದಾಯವು 2007ರಿಂದ 2017ರ ವರೆಗಿನ ಅವಧಿಯಲ್ಲಿ 42%ರಷ್ಟು ವೃದ್ಧಿ ಕಾಣಲಿದೆ.

ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರವು ಗಮನಾರ್ಹ ಅಭಿವೃದ್ಧಿ ಹೊಂದುತ್ತಿದೆ. 2010ರಲ್ಲಿ ದೆಹಲಿಯಲ್ಲಿ ನಡೆಯಲಿರುವ ಕಾಮನ್ವೆಲ್ತ್‌ ಕ್ರೀಡಾಕೂಟವು ಭಾರತದ ಪ್ರವಾಸೋದ್ಯಮಕ್ಕೆ ಗಮನಾರ್ಹ ಪ್ರೋತ್ಸಾಹ ನೀಡುವ ನೀರಿಕ್ಷೆ ಇದೆ.

ರಾಜ್ಯವಾರು ಪ್ರವಾಸೋದ್ಯಮ

ಆಂಧ್ರ ಪ್ರದೇಶ

ಚಿತ್ರ:Hyderabad india .jpg
ಹೈದರಾಬಾದ್‌ನ ಚಾರ್ಮಿನಾರ್‌

ಆಂಧ್ರ ಪ್ರದೇಶವು ಸಮೃದ್ಧ ಸಾಂಸ್ಕೃತಿಕ ಪರಂಪರೆ ಹಾಗೂ ವಿವಿಧ ಆಕರ್ಷಣೀಯ ಪ್ರವಾಸೀ ತಾಣಗಳನ್ನು ಹೊಂದಿದೆ. ಆಂಧ್ರ ಪ್ರದೇಶ ರಾಜ್ಯವು ರಮಣೀಯವಾದ ಬೆಟ್ಟ-ಗುಡ್ಡಗಳು, ಕಾಡುಗಳು, ಕಡಲತೀರಗಳು ಮತ್ತು ದೇವಸ್ಥಾನಗಳನ್ನು ಹೊಂದಿದೆ.

ನಿಜಾಮ್‌ರುಗಳ ನಗರ ಮತ್ತು ಮುತ್ತಿನ ನಗರ (ಸಿಟಿ ಆಫ್‌ ಪರ್ಲ್ಸ್‌) ಎಂದು ಪ್ರಖ್ಯಾತವಾದ ಹೈದರಾಬಾದ್‌, ಇಂದು ಭಾರತದ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ನಗರಗಳಲ್ಲೊಂದು. ಆಧುನಿಕ ಮಾಹಿತಿ ತಂತ್ರಜ್ಞಾನ, ITES ಮತ್ತು ಜೈವಿಕತಂತ್ರಜ್ಞಾನ ಕ್ಷೇತ್ರಗಳ ಕೇಂದ್ರವಾಗಿದೆ. ಹೈದರಾಬಾದ್ ತನ್ನ ಸಮೃದ್ಧ ಇತಿಹಾಸ, ಸಂಸ್ಕೃತಿ ಹಾಗೂ, ಉತ್ತರ ಹಾಗೂ ದಕ್ಷಿಣ ಭಾರತೀಯ ಸಂಸ್ಕೃತಿಗಳ ಸಮ್ಮಿಲನ ನಿರೂಪಿಸುವ ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದೆ. ಇದಲ್ಲದೆ, ಭೌಗೋಳಿಕವಾಗಿ ಬಹುಭಾಷಾ, ಬಹುಧರ್ಮಗಳ ಸಂಸ್ಕೃತಿ ಹೊಂದಿದೆ.

ಆಂಧ್ರ ಪ್ರದೇಶ ಹಲವು ಧಾರ್ಮಿಕ ಪುಣ್ಯಕ್ಷೇತ್ರಗಳಿಗೆ ತವರುಮನೆಯಾಗಿದೆ.

ಶ್ರೀ ವೆಂಕಟೇಶ್ವರ ನೆಲೆಸಿರುವತಿರುಪತಿಯು ವಿಶ್ವದಲ್ಲೇ (ಯಾವುದೇ ಧರ್ಮದ) ಅತಿ ಶ್ರೀಮಂತ ಹಾಗೂ ಅತಿ ಹೆಚ್ಚು ಸಂದರ್ಶಿತ ಧಾರ್ಮಿಕ ಕ್ಷೇತ್ರವಾಗಿದೆ.  ಶ್ರೀ ಮಲ್ಲಿಕಾರ್ಜುನನ ದೇವಾಲಯವಿರುವ ಶ್ರೀಶೈಲಂ, ಭಾರತದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿದೆ. ಜೊತೆಗೆ, ಪಂಚರಾಮಮ್‌ಗಳಲ್ಲಿ ಒಂದಾಗಿರುವ ಅಮರಾವತಿಯ ಶಿವಮಂದಿರ ಹಾಗೂ ವಿಷ್ಣು ಅವತಾರದ ಶ್ರೀ ಲಕ್ಷ್ಮಿನರಸಿಂಹ ದೇವಾಲಯವು ಯಾದಗಿರಿ ಗುಡ್ಡದಲ್ಲಿದೆ.  ವರಂಗಲ್‌ನಲ್ಲಿರುವ ರಾಮಪ್ಪ ದೇವಾಲಯ ಮತ್ತು ಸಾವಿರ ಕಂಬಗಳ ದೇವಾಲಯವು ಸುಂದರ ಕೆತ್ತನೆಗಳಿಗೆ ಪ್ರಖ್ಯಾತವಾಗಿವೆ.  ರಾಜ್ಯದ ಅಮರಾವತಿ, ನಾಗಾರ್ಜುನ ಕೊಂಡ, ಭಟ್ಟಿಪ್ರೊಲು, ಘಂಟಸಾಲ, ನೆಲಕೊಂಡಪಲ್ಲಿ, ಧೂಳಿಕಟ್ಟ, ಬಾವಿಕೊಂಡ, ತೋಟ್ಲಕೊಂಡ, ಶಾಲಿಹುಂಡಂ, ಪವುರಾಲಕೊಂಡ, ಶಂಕರಂ, ಫಣಿಗಿರಿ ಮತ್ತು ಕೊಲನಪಕ ಸ್ಥಳಗಳಲ್ಲಿ ಹಲವು ಬೌದ್ಧ ಧರ್ಮದ ಕೇಂದ್ರಗಳಿವೆ. 

ವಿಶಾಖಪಟ್ಟಣಂನಲ್ಲಿರುವ 'ಗೋಲ್ಡನ್‌ ಬೀಚ್‌‌', ಒಂದು ದಶಲಕ್ಷ ವರ್ಷಗಳ ಹಿಂದಿನ ಬೊರ್ರ ಸುಣ್ಣದಕಲ್ಲಿನ ಗುಹೆಗಳು, ಚಿತ್ರಾಕರ್ಷಕ ಅರಕು ಕಣಿವೆ, ಹಾರ್‌ಸ್ಲೆ ಗಿರಿಧಾಮಗಳು, ಗೋದಾವರಿ ನದಿ ಕಿರಿದಾದ ಕಣಿವೆಯ ಮೂಲಕ ಹರಿಯುವ ಪಾಪಿ ಕೊಂಡಾಲು, ಎತ್ತಿಪೋಟಲ ಜಲಪಾತ, ಕುಂಟಲ ಮತ್ತು ಸಮೃದ್ಧ ಜೀವ ವೈವಿಧ್ಯವಿರುವ ತಲಕೋಣ, ಮುಂತಾದವು ರಾಜ್ಯದ ಕೆಲವು ಪ್ರಾಕೃತಿಕ ಆಕರ್ಷಣೆಯಿರುವ ಸ್ಥಳಗಳಾಗಿವೆ. INS ಕರಸುರ ಜಲಾಂತರ್ಗಾಮಿ (ಸಬ್ಮೆರೈನ್‌) ವಸ್ತುಸಂಗ್ರಹಾಲಯ (ಈ ರೀತಿಯ ವಸ್ತುಸಂಗ್ರಹಾಲಯವಿರುವುದು ಇಡೀ ದೇಶದಲ್ಲಿ ಇಲ್ಲಿ ಮಾತ್ರ), ಯಾರಾದಾ ಬೀಚ್‌, ಅರಕು ಕಣಿವೆ, VUDA ಉದ್ಯಾನ, ಇಂದಿರಾ ಗಾಂಧಿ ಮೃಗಾಲಯ ಸೇರಿದಂತೆ ಹಲವು ಪ್ರವಾಸೀ ಸ್ಥಳಗಳು ವಿಶಾಖಪಟ್ಟಣಂನಲ್ಲಿವೆ.

ಆಂಧ್ರ ಪ್ರದೇಶವು ಬಹುಮಟ್ಟಿಗೆ ಉಷ್ಣವಲಯದ ಹವಾಮಾನ ಹೊಂದಿದೆ. ಭೇಟಿ ನೀಡಲು ನವೆಂಬರ್‌ನಿಂದ ಫೆಬ್ರವರಿ ತಿಂಗಳ ವರೆಗೆ ಸೂಕ್ತ ಸಮಯ. ಮಳೆಗಾಲವು ಜೂನ್‌ ತಿಂಗಳಲ್ಲಿ ಆರಂಭಗೊಂಡು ಸೆಪ್ಟೆಂಬರ್‌ ತಿಂಗಳಲ್ಲಿ ಅಂತ್ಯಗೊಳ್ಳುತ್ತದೆ. ಹಾಗಾಗಿ ಈ ಸಮಯದಲ್ಲಿ ಪ್ರವಾಸ ಸೂಕ್ತವಲ್ಲ.

ಇದನ್ನೂ ನೋಡಿ: ಆಂಧ್ರ ಪ್ರದೇಶದ ಅಧಿಕೃತ ಪ್ರವಾಸೋದ್ಯಮ ಜಾಲತಾಣ

ಅಸ್ಸಾಂ

ಭಾರತದಲ್ಲಿ ಪ್ರವಾಸೋದ್ಯಮ 
ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿರುವ ಒಂಟಿ ಕೊಂಬಿನ ಘೇಂಡಾಮೃಗ.

ಅಸ್ಸಾಂ ರಾಜ್ಯವು ಭಾರತದ ಈಶಾನ್ಯ ವಲಯದ ಮಧ್ಯಭಾಗದಲ್ಲಿದೆ. ಇತರೆ ಏಳು ಸೋದರಿ ರಾಜ್ಯಗಳಿಗೆ ಇದು ಪ್ರವೇಶದ್ವಾರದಂತಿದೆ. ಪ್ರಖ್ಯಾತ ವನ್ಯಧಾಮಗಳು ಅಸ್ಸಾಂ ರಾಜ್ಯದಲ್ಲಿವೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ (ಚಿತ್ರಿತ ) ಮತ್ತು ಮಾನಸ ರಾಷ್ಟ್ರೀಯ ಉದ್ಯಾನವನ, ಅತಿದೊಡ್ಡ ನದಿ ದ್ವೀಪ ಮಜುಲಿ ಮತ್ತು ಬ್ರಿಟಿಷ್‌ ಆಳ್ವಿಕೆಯ ಕಾಲಕ್ಕೆ ಸೇರಿದ ಚಹಾ ತೋಟಗಳೂ ಸೇರಿವೆ. ಈ ರಾಜ್ಯದಲ್ಲಿ ಬಹುಮಟ್ಟಿಗೆ ಉಪ-ಉಷ್ಣವಲಯದ ಹವಾಮಾನವಿರುತ್ತದೆ. ಭಾರತದ ಇತರೆಡೆಯಂತೆ ಅಸ್ಸಾಂ ಕೂಡಾ ಮಳೆಗಾಲವನ್ನು ಅನುಭವಿಸುತ್ತದೆ. ಭಾರತದಲ್ಲಿನ ಅತಿ ಹೆಚ್ಚು ದಟ್ಟಕಾಡು ವಲಯ ಅಸ್ಸಾಂನಲ್ಲಿದೆ. ಅಸ್ಸಾಂ ಪ್ರವಾಸ ಕೈಗೊಳ್ಳಲು ಚಳಿಗಾಲದಂದು (ಅಕ್ಟೋಬರ್‌ನಿಂದ ಏಪ್ರಿಲ್‌) ಸೂಕ್ತ ಸಮಯ.

ಅಸ್ಸಾಂ ಸಮೃದ್ಧ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಬ್ರಿಟಿಷ್‌ ಆಳ್ವಿಕೆಗೆ ಮುಂಚೆ ಶತಮಾನಗಳ ಕಾಲ ಈ ವಲಯವನ್ನಾಳಿದ ಅಹೊಮ್‌ ಸಾಮ್ರಾಜ್ಯದ ಐತಿಹಾಸಿಕ ಪರಂಪರೆ ಹೊಂದಿದೆ. ಇತರೆ ಗಮನಾರ್ಹ ಲಕ್ಷಣಗಳಲ್ಲಿ ಬ್ರಹ್ಮಪುತ್ರ ನದಿ, ಜಟಿಂಗಾದಲ್ಲಿ ಹಕ್ಕಿಗಳ ಆತ್ಮಹತ್ಯೆಯ ರಹಸ್ಯ, ಕಾಮಾಕ್ಯ ಸೇರಿದಂತೆ ತಾಂತ್ರಿಕ್‌ ಪಂಥದ ಹಲವು ದೇವಾಲಯಗಳು, ಅರಮನೆಗಳ ಅವಶೇಷಗಳು ಸೇರಿವೆ. ಅಸ್ಸಾಂನ ರಾಜಧಾನಿ ಗುವಾಹಾಟಿಯಲ್ಲಿ ಹಲವು ಪೇಟೆಗಳು, ದೇವಾಲಯಗಳು ಮತ್ತು ವನ್ಯಜೀವಿ ಅಭಯಾರಣ್ಯಗಳನ್ನು ಹೊಂದಿದೆ.

ಇದನ್ನೂ ನೋಡಿ: ಅಸ್ಸಾಂ ಪ್ರವಾಸೋದ್ಯಮದ ಅಧಿಕೃತ ಜಾಲತಾಣ

ಬಿಹಾರ

ಭಾರತದಲ್ಲಿ ಪ್ರವಾಸೋದ್ಯಮ 
ಮಹಾಬೋಧಿ ದೇವಾಲಯವು UNESCO ವಿಶ್ವ ಪರಂಪರೆಯ ತಾಣವಾಗಿದೆ.

ಬಿಹಾರ ರಾಜ್ಯವು, ಜನವಸತಿಯ ಮೂಲಸ್ಥಳವೆನಿಸಿದೆ, ಪ್ರಪಂಚದಲ್ಲೇ ಅತ್ಯಂತ ಪ್ರಾಚೀನ ಸ್ಥಳಗಳಲ್ಲಿ ಒಂದು. ಇದು ಸುಮಾರು 3000 ವರ್ಷಗಳ ಇತಿಹಾಸ ಹೊಂದಿದೆ. ಪೂರ್ವ ಭಾರತದ ಈ ರಾಜ್ಯದ ಹಲವು ಪುರಾತನ ಸ್ಮಾರಕಗಳ ರೂಪದಲ್ಲಿ ಬಿಹಾರ್‌ನ ಸಮೃದ್ಧ ಸಂಸ್ಕೃತಿ ಹಾಗೂ ಪರಂಪರೆಯ ಸಾಕ್ಷ್ಯಾಧಾರಗಳು ದೊರೆಯುತ್ತದೆ. ಆರ್ಯಭಟ್ಟ, ಮಹಾ ಚಕ್ರವರ್ತಿ ಅಶೋಕ, ಚಾಣಕ್ಯ ಮತ್ತು ಇತರೆ ಮಹಾನ್‌ ವ್ಯಕ್ತಿಗಳ ಜನ್ಮಭೂಮಿ ಈ ರಾಜ್ಯ.

ಹಿಂದೂ, ಬೌದ್ಧ, ಜೈನ, ಸಿಖ್‌ ಮತ್ತು ಇಸ್ಲಾಂನಂತಹ ವಿವಿಧ ಧರ್ಮಗಳ ಪವಿತ್ರ ಸ್ಥಳಗಳು ಬಿಹಾರದಲ್ಲಿವೆ. ಪ್ರೇಕ್ಷಣೀಯ ಸ್ಥಳಗಳ ಪೈಕಿ ಮಹಾಬೋಧಿ ದೇವಾಲಯವು ಬೌದ್ಧ ಪುಣ್ಯಕ್ಷೇತ್ರ ಹಾಗೂ UNESCO ವಿಶ್ವ ಪರಂಪರಾ ಕ್ಷೇತ್ರವು ಬಿಹಾರದಲ್ಲಿದೆ. ಬರಾಬರ್‌ ಕೇವ್ಸ್‌ ಭಾರತದಲ್ಲೇ ಅತ್ಯಂತ ಪುರಾತನ ಬಂಡೆ-ಗುಹೆಗಳಲ್ಲೊಂದು. ಖುದಾ ಬಕ್ಷ್‌ ವೌರಸ್ತ್ಯ ಗ್ರಂಥಾಲಯವು ಭಾರತದ ಅತ್ಯಂತ ಪ್ರಾಚೀನ ಗ್ರಂಥಾಲಯವಾಗಿದೆ.

ಇದನ್ನೂ ನೋಡಿ: ಬಿಹಾರಿನ ಅಧಿಕೃತ ಪ್ರವಾಸೋದ್ಯಮ ಜಾಲತಾಣ Archived 2010-01-27 ವೇಬ್ಯಾಕ್ ಮೆಷಿನ್ ನಲ್ಲಿ.

ದೆಹಲಿ

ಭಾರತದಲ್ಲಿ ಪ್ರವಾಸೋದ್ಯಮ 
ತಾವರೆ ದೇವಾಲಯ

ದೆಹಲಿ ಭಾರತದ ರಾಜಧಾನಿ. ಹಳೆಯ ಮತ್ತು ಹೊಸ, ಪ್ರಾಚೀನ ಮತ್ತು ಆಧುನಿಕತೆಗಳ ಸುಲಲಿತ ಮಿಶ್ರಣವಾಗಿರುವ ದೆಹಲಿಯು ಸಂಸ್ಕೃತಿ ಮತ್ತು ಧಾರ್ಮಿಕತೆಗಳ ತುಂಬಿದ ಕೊಡವಾಗಿದೆ. ದೆಹಲಿ ಭಾರತವನ್ನಾಳಿದ ಹಲವು ಸಾಮ್ರಾಜ್ಯಗಳ ರಾಜಧಾನಿಯಾಗಿದೆ. ಇದರಿಂದಾಗಿ ಅದು ಐತಿಹಾಸಿಕ ಸಮೃದ್ಧತೆಯ ಪ್ರತೀಕವಾಗಿದೆ. ಆಳಿದವರು ತಮ್ಮ ವಿಶಿಷ್ಟ ವಾಸ್ತುಶಿಲ್ಪಕಲೆ ಶೈಲಿಗಳ ಮೂಲಕ ತಮ್ಮ ಛಾಪು ಒತ್ತಿ ಹೋದರು. ಪ್ರಸ್ತುತ ದೆಹಲಿಯು ಹಲವು ಖ್ಯಾತ ಐತಿಹಾಸಿಕ ಸ್ಮಾರಕಗಳು ಮತ್ತು ಹೆಗ್ಗುರುತುಗಳನ್ನು ಹೊಂದಿವೆ. ಉದಾಹರಣೆಗೆ ತೊಗಲಕಾಬಾದ್‌ ಕೋಟೆ, ಕುತ್ಬ್‌ ಮಿನಾರ್‌, ಪುರಾನಾ ಕಿಲಾ, ಲೋಧಿ ಗಾರ್ಡನ್ಸ್‌, ಜಮಾ ಮಸಜೀದ್‌, ಹುಮಾಯೂನ್‌ ಗೋರಿ, ಕೆಂಪು ಕೋಟೆ ಮತ್ತು ಸಫ್ದರ್‌ಜಂಗ್‌ ಗೋರಿ. ಆಧುನಿಕ ಸ್ಮಾರಕಗಳ ಪೈಕಿ ಜಂತರ್‌ಮಂತರ್‌, ಇಂಡಿಯಾ ಗೇಟ್‌, ರಾಷ್ಟ್ರಪತಿ ಭವನ್‌, ಲಕ್ಷ್ಮಿನಾರಾಯಣ್‌ ಮಂದಿರ, ಕಮಲ ಮಂದಿರ ಮತ್ತು ಅಕ್ಷರಧಾಮ ದೇವಾಲಯ ಖ್ಯಾತವಾಗಿವೆ.

ಹೊಸ ದೆಹಲಿಯು ಬ್ರಿಟಿಷ್‌ ವಸಾಹತುಕಾಲದ ವಾಸ್ತುಶಿಲ್ಪಗಳು, ಅಗಲ ಮಾರ್ಗಗಳು ಮತ್ತು ಸಾಲುಮರ ಮತ್ತು ವಿಶಾಲ ಬೀದಿಗಳನ್ನು ಹೊಂದಿದೆ. ಹಲವು ರಾಜಕೀಯ ಹೆಗ್ಗುರುತುಗಳು, ರಾಷ್ಟ್ರೀಯ ವಸ್ತುಸಂಗ್ರಹಾಲಯಗಳು, ಇಸ್ಲಾಮಿಕ್‌ ಪುಣ್ಯಕ್ಷೇತ್ರಗಳು, ಹಿಂದೂ ದೇವಾಲಯಗಳು, ಹಸಿರು ಉದ್ಯಾನಗಳು ಮತ್ತು ಅತ್ಯಾಧುನಿಕ ಅಲಂಕಾರಿಕ ವಾಣಿಜ್ಯ ಮಾಲ್‌ಗಳನ್ನು ಹೊಂದಿದೆ.

ಇದನ್ನೂ ನೋಡಿ: ದೆಹಲಿ ಪ್ರವಾಸೋದ್ಯಮದ ಅಧಿಕೃತ ಜಾಲತಾಣ

ಗೋವಾ

ಭಾರತದಲ್ಲಿ ಪ್ರವಾಸೋದ್ಯಮ 
ಗೋವಾ ತನ್ನ ರಿಸಾರ್ಟ್‌ ಮತ್ತು ಕಡಲತೀರಗಳಿಗೆ ಖ್ಯಾತವಾಗಿದೆ.

ಗೋವಾ ಭಾರತದಲ್ಲಿ ಅತಿ ಪ್ರಖ್ಯಾತ ಪ್ರವಾಸಿ ಸ್ಥಳಗಳಲ್ಲೊಂದು. ಇದು ಮುಂಚೆ ಪೋರ್ಚುಗಲ್‌ ದೇಶದ ವಸಾಹತು ಆಗಿತ್ತು. ಉತ್ಕೃಷ್ಟ ಕಡಲತೀರಗಳು, ಪೋರ್ಚುಗೀಸ್‌ ಚರ್ಚ್‌ಗಳು, ಹಿಂದೂ ದೇವಾಲಯಗಳು ಮತ್ತು ಅಭಯಾರಣ್ಯಗಳಿಗೆ ಗೋವಾ ಖ್ಯಾತವಾಗಿದೆ. ಬೊಮ್ ಜೀಸಸ್‌ ಬೆಸಿಲಿಕಾ, ಮಂಗುವೆಷಿ ದೇವಾಲಯ, ದೂಧ್‌ಸಾಗರ್‌ ಜಲಪಾತ ಮತ್ತು ಶಾಂತಾದುರ್ಗಾ ಗೋವಾದ ಪ್ರೇಕ್ಷಣೀಯ ಸ್ಥಳಗಳಾಗಿವೆ. ಇತ್ತೀಚೆಗೆ, ವ್ಯಾಕ್ಸ್‌ ವರ್ಲ್ಡ್‌ ಎಂಬ ಒಂದು ಮೇಣದ ವಸ್ತುಸಂಗ್ರಹಾಲಯವನ್ನು ಹಳೆ ಗೋವಾದಲ್ಲಿ ತೆರೆಯಲಾಯಿತು. ಇದು ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಹಲವು ಖ್ಯಾತನಾಮರ ಮೇಣ ಪ್ರತಿಕೃತಿಗಳನ್ನು ಹೊಂದಿದೆ.

ಗೋವಾ ಕಾರ್ನಿವಾಲ್‌ (ಜಾತ್ರೆ, ಉತ್ಸವ ಸಮಾರಂಭಗಳು) ವಿಶ್ವವಿಖ್ಯಾತವಾದುದು. ಬಣ್ಣ-ಬಣ್ಣದ ವೇಷಭೂಷಣಗಳು, ತೇಲಾಡುವ ಅಲಂಕಾರಿಕ ಬಂಡಿಗಳು ಮತ್ತು ಎಲ್ಲೆಡೆ ಮೊಳಗುವ ಸಂಗೀತ, ಸಂಭ್ರಮ ಹಾಗೂ ನೃತ್ಯ ಪ್ರದರ್ಶನಗಳನ್ನು ಈ ಜಾತ್ರೆ ಒಳಗೊಂಡಿರುತ್ತದೆ. ಮೂರು ದಿನ ನಡೆಯುವ ಈ ಉತ್ಸವ ಮೂರನೆ ದಿನವಾದ ಮಂಗಳವಾರದಂದು ಕಾರ್ನಿವಾಲ್‌ ಪೆರೇಡ್‌ (ಪಥಸಂಚಲನ), ಮೆರವಣಿಗೆಯೊಂದಿಗೆ ಅಂತ್ಯಗೊಳ್ಳುತ್ತದೆ.

ಇದನ್ನೂ ನೋಡಿ: ಗೋವಾ ಪ್ರವಾಸೋದ್ಯಮದ ಅಧಿಕೃತ ಜಾಲತಾಣ

ಹಿಮಾಚಲ ಪ್ರದೇಶ

ಭಾರತದಲ್ಲಿ ಪ್ರವಾಸೋದ್ಯಮ 
ಹಿಮಾಚಲ ಪ್ರದೇಶದ ಹಿಮಾಲಯ ಭೂಪ್ರದೇಶವು ಸ್ಕೀಯಿಂಗ್‌ನಂತಹ ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ.

ಹಿಮಾಚಲ ಪ್ರದೇಶ ಹಿಮಾಲಯದ ಭೂಚಿತ್ರಣಗಳು ಮತ್ತು ಜನಪ್ರಿಯ ಗಿರಿಧಾಮಗಳಿಗೆ ಖ್ಯಾತವಾಗಿದೆ. ಬಂಡೆ ಹತ್ತುವುದು, ಪರ್ವತದ ಮೇಲೆ ಸೈಕಲ್‌ ಸವಾರಿ, ಪ್ಯಾರಾಗ್ಲೈಡಿಂಗ್‌, ಐಸ್‌ ಸ್ಕೇಟಿಂಗ್‌ (ಹಿಮ ಸ್ಕೇಟಿಂಗ್) ಮತ್ತು ಹೆಲಿ-ಸ್ಕೀಯಿಂಗ್‌ ಸೇರಿದಂತೆ ಹಲವು ಹೊರಾಂಗಣ ಚಟುವಟಿಕೆಗಳು ಹಿಮಾಚಲ ಪ್ರದೇಶದಲ್ಲಿ ಜನಪ್ರಿಯವಾಗಿವೆ.

ರಾಜ್ಯದ ರಾಜಧಾನಿ ಶಿಮ್ಲಾ ಜನಪ್ರಿಯ ಪ್ರವಾಸಿ ತಾಣವಾಗಿದೆ. ಕಾಲ್ಕಾ-ಶಿಮ್ಲಾ ರೇಲ್ವೆ ಒಂದು ಪರ್ವತ ಸುರಂಗ ಮಾರ್ಗ ರೇಲ್ವೆ. ಇದು UNESCO ವಿಶ್ವ ಪರಂಪರೆಯ ತಾಣವಾಗಿದೆ. ಶಿಮ್ಲಾ ಭಾರತದಲ್ಲಿ ಜನಪ್ರಿಯ ಸ್ಕೀಯಿಂಗ್‌(ಹಿಮಜಾರು ಬಂಡೆಯ ಆಟದ) ತಾಣವಾಗಿದೆ. ಇತರೆ ಗಿರಿಧಾಮಗಳಲ್ಲಿ ಮನಾಲಿ ಮತ್ತು ಕಸೌಲಿಯೂ ಸಹ ಸೇರಿವೆ.

ದಲೈ ಲಾಮಾ ವಾಸಿಸುವ ನಗರ ಧರಮ್‌ಶಾಲಾ ಟಿಬೆಟನ್‌ ವಿಹಾರಗಳು ಮತ್ತು ಬೌದ್ಧ ದೇವಾಲಯಗಳಿಗೆ ಪ್ರಖ್ಯಾತವಾಗಿದೆ.

ಹಲವು ಟ್ರೆಕಿಂಗ್‌ ಕಾರ್ಯಕ್ರಮಗಳಿಗೆ ಇಲ್ಲಿಂದಲೇ ಆರಂಭ. 

ಇದನ್ನೂ ನೋಡಿ ಹಿಮಾಚಲ ಪ್ರದೇಶದ ಅಧಿಕೃತ ಜಾಲತಾಣ Archived 2010-03-25 ವೇಬ್ಯಾಕ್ ಮೆಷಿನ್ ನಲ್ಲಿ.

ಜಮ್ಮು ಮತ್ತು ಕಾಶ್ಮೀರ

ಭಾರತದಲ್ಲಿ ಪ್ರವಾಸೋದ್ಯಮ 
ತನ್ನ ಆಕರ್ಷಕ ಭೂಚಿತ್ರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಹೆಸರಾಗಿದೆ.

ಜಮ್ಮು ಮತ್ತು ಕಾಶ್ಮೀರ ಭಾರತದ ಉತ್ತರ ತುದಿಯದಲ್ಲಿರುವ ರಾಜ್ಯ. ಜಮ್ಮು ತನ್ನ ನೈಸರ್ಗಿಕ ಭೂರಮಣೀಯತೆಯ ಚಿತ್ರಣ, ಪುರಾತನ ದೇವಾಲಯಗಳು, ಹಿಂದೂ ಪುಣ್ಯಕ್ಷೇತ್ರಗಳು, ಕೊತ್ತಲ, ಸುಂದರ ತೋಟಗಳು ಮತ್ತು ಕೋಟೆಗಳನ್ನು ಹೊಂದಿದೆ. ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರಗಳಾದ ಅಮರನಾಥ್‌ ಮತ್ತು ವೈಷ್ಣೋದೇವಿಗೆ ಪ್ರತಿವರ್ಷವೂ ಸಾವಿರಾರು ದೈವ ಶೃದ್ಧಾಳುಗಳು, ಭಕ್ತರು ಆಗಮಿಸುತ್ತಾರೆ. ನೈಸರ್ಗಿಕ ರಮಣೀಯ ಭೂಚಿತ್ರಣವನ್ನು ಹೊಂದಿರುವ ಕಾರಣ, ಜಮ್ಮು ದಕ್ಷಿಣ ಏಷ್ಯಾದ ಜನಪ್ರಿಯ ಸಾಹಸೀ ಪ್ರವಾಸ ತಾಣಗಳಲ್ಲಿ ಒಂದಾಗಿದೆ. ಜಮ್ಮುವಿನ ಐತಿಹಾಸಿಕ ಸ್ಮಾರಕಗಳು ಇಸ್ಲಾಮಿಕ್‌ ಹಾಗೂ ಹಿಂದೂ ವಾಸ್ತುಶಿಲ್ಪಗಳ ಶೈಲಿಯ ಅಪೂರ್ವ ಮಿಶ್ರಣವನ್ನು ನಿರೂಪಿಸುತ್ತವೆ.

ಕಾಶ್ಮೀರಿ ಆರ್ಥಿಕತೆಯ ಬಲವರ್ಧನೆಗೆ ಪ್ರವಾಸೋದ್ಯಮವು ರಾಜ್ಯದ ಅವಿಭಾಜ್ಯ ಅಂಗವಾಗಿದೆ. 'ಪ್ಯಾರಡೈಸ್‌ ಆನ್‌ ಅರ್ತ್‌'(ಭೂಮಿ ಮೇಲಣ ಸ್ವರ್ಗ) ಎಂದು ಕರೆಯಲಾದ ಕಾಶ್ಮೀರದ ಭೂಪ್ರದೇಶ ಆವರಿಸಿರುವ ಗುಡ್ಡ-ಬೆಟ್ಟ ಪರ್ವತಮಯ ಭೂಚಿತ್ರಣವು ಶತಮಾನಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸಿದೆ. ಕಾಶ್ಮೀರದಲ್ಲಿ ಡಲ್‌ ಕೆರೆ, ಶ್ರೀನಗರ, ಪಹಲಗಾಮ್‌, ಗುಲ್ಮಾರ್ಗ್‌, ಯೂಸ್ಮಾರಗ್‌, ಮೊಗಲ್‌ ಗಾರ್ಡನ್ಸ್‌ ಮುಂತಾದ ಪ್ರಸಿದ್ಧ ಸ್ಥಳಗಳಿವೆ. ಆದರೆ, ಭಯೋತ್ಪಾದಕರ ದಾಳಿಯ ಭೀತಿಹಿನ್ನಲೆ ಇಲ್ಲಿನ ಪ್ರವಾಸೋದ್ಯಮವು ತೀವ್ರ ಆತಂಕ, ತೊಂದರೆಗೊಳಗಾಗಿದೆ.

ಇತ್ತೀಚಿಗಿನ ವರ್ಷಗಳಲ್ಲಿ ಲಢಾಖ್‌ ಸಾಹಸೀ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಬೃಹತ್ ಹಿಮಾಲಯದ ಅಂಗವಾಗಿರುವ ಇದನ್ನು 'ಮೂನ್‌ ಆನ್‌ ಅರ್ತ್‌'(ಭೂಮಿ ಮೇಲಿನ ಚಂದ್ರ) ಎನ್ನಲಾಗಿದೆ. ಇದು ಬಯಲು ಶಿಖರಗಳು ಹಾಗೂ ಆಳದ ಕಂದಕಗಳನ್ನು ಹೊಂದಿವೆ. ಹಿಂದೊಮ್ಮೆ, ಇದು ಉಪಖಂಡದಿಂದ ಮಧ್ಯ ಏಷ್ಯಾ ಕಡೆಗೆ ಹೋಗುವ 'ಸಿಲ್ಕ್‌ ರೂಟ್‌' ಆಗಿತ್ತು. ಲೆಹ್‌ ಸಹ ಒಂದು ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತಿದೆ.

ಇದನ್ನೂ ನೋಡಿ: ಜಮ್ಮು ಮತ್ತು ಕಾಶ್ಮೀರದ ಅಧಿಕೃತ ಪ್ರವಾಸೋದ್ಯಮ ಜಾಲತಾಣ Archived 2010-02-17 ವೇಬ್ಯಾಕ್ ಮೆಷಿನ್ ನಲ್ಲಿ.

ಕರ್ನಾಟಕ

ಭಾರತದಲ್ಲಿ ಪ್ರವಾಸೋದ್ಯಮ 
ಬೈಜಾನ್ಟೀನ್‌ ಹಜಿಯಾ ಸೊಫಿಯಾ ಗುಮ್ಮಟದ ನಂತರ, ಬಿಜಾಪುರದಲ್ಲಿರುವ ಗೋಲ ಗುಮ್ಮಟವು ವಿಶ್ವದಲ್ಲೇ ಎರಡನೆಯ ಅತಿ ದೊಡ್ದ ಗುಮ್ಮಟವಾಗಿದೆ.

ಕರ್ನಾಟಕವು ಭಾರತದಲ್ಲಿ ನಾಲ್ಕನೆಯ ಜನಪ್ರಿಯ ಪ್ರವಾಸೋದ್ಯಮ ತಾಣವಾಗಿದೆ. ಭಾರತದಲ್ಲಿರುವ ರಕ್ಷಿತ ಸ್ಮಾರಕಗಳ ಪೈಕಿ, 507 ಸ್ಮಾರಕಗಳನ್ನು ಹೊಂದಿದ ಕರ್ನಾಟಕವು ಎರಡನೆಯ ಸ್ಥಾನದಲ್ಲಿದೆ.

ಕದಂಬ, ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರದ ಸಾಮ್ರಾಜ್ಯ, ಹೊಯ್ಸಳ, ಪಶ್ಚಿಮ ಗಂಗ, ರಟ್ಟ ಎಂಬ ಕನ್ನಡ ರಾಜವಂಶಗಳು ಕರ್ನಾಟಕವನ್ನು, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕಭಾಗವನ್ನಾಳಿದರು.. ಈ ರಾಜವಂಶಗಳು ಬೌದ್ಧ, ಜೈನ ಹಾಗೂ ಶೈವ ಧರ್ಮಗಳ ಮಹಾನ್‌ ಸ್ಮಾರಕಗಳನ್ನು ನಿರ್ಮಿಸಿದವು. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ, ಲಕ್ಷ್ಮೇಶ್ವರ, ಸೂಡಿ, ಹೂಲಿ, ಮಹದೇವ ದೇವಾಲಯ (ಇಟಗಿ), ಡಂಬಳ, ಲಕ್ಕುಂಡಿ, ಗದಗ, ಹಾನಗಲ್‌, ಹಲಸಿ, ಗಳಗನಾಥ, ಚೌಡಯ್ಯನಪುರ, ಬನವಾಸಿ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಸನ್ನತಿ ಹಾಗೂ ಇನ್ನೂ ಹಲವು ಸ್ಥಳಗಳಲ್ಲಿ ಸ್ಮಾರಕಗಳು ಇಂದಿಗೂ ಇವೆ. ಪ್ರಮುಖ ಇಸ್ಲಾಮಿಕ್‌ ಸ್ಮಾರಕಗಳು ಬಿಜಾಪುರ, ಬೀದರ್‌, ಗುಲ್ಬರ್ಗಾ (ಕಲಬುರ್ಗಿ), ರಾಯಚೂರು ಮತ್ತು ರಾಜ್ಯದ ಇತರೆ ಭಾಗಗಳಲ್ಲಿವೆ. ಬೈಜಾನ್ಟೀನ್‌ ಹಜಿಯಾ ಸೊಫಿಯಾ ಗುಮ್ಮಟದ ನಂತರ, ಬಿಜಾಪುರದಲ್ಲಿರುವ ಗೋಲ ಗುಮ್ಮಟವು ವಿಶ್ವದಲ್ಲೇ ಎರಡನೆಯ ಅತಿ ದೊಡ್ದ ಗುಮ್ಮಟವಾಗಿದೆ. ಎರಡು ವಿಶ್ವ ಪರಂಪರೆಯ ತಾಣಗಳಾದ ಹಂಪಿ ಮತ್ತು ಪಟ್ಟದಕಲ್ಲು ಕರ್ನಾಟಕದಲ್ಲಿವೆ. ಇವೆರಡೂ ಸಹ ಉತ್ತರ ಕರ್ನಾಟಕದಲ್ಲಿವೆ.

ಕರ್ನಾಟಕವು ಜಲಪಾತಗಳಿಗೆ ಪ್ರಸಿದ್ಧವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತವು ಏಷ್ಯಾದ ಅತಿ ಎತ್ತರದ ಜಲಪಾತಗಳಲ್ಲಿ ಒಂದು. ಈ ರಾಜ್ಯದಲ್ಲಿ 21 ವನ್ಯಜೀವಿ ಅಭಯಾರಣ್ಯಗಳು ಮತ್ತು ಐದು ರಾಷ್ಟ್ರೀಯ ಉದ್ಯಾನಗಳಿವೆ. 500ಕ್ಕೂ ಹೆಚ್ಚು ಜಾತಿಗಳ ಹಕ್ಕಿಗಳಿಗೂ ಇದು ಆಶ್ರಯತಾಣವಾಗಿದೆ. ಕರ್ನಾಟಕ ರಾಜ್ಯದ ಕಾರವಾರ, ಗೋಕರ್ಣ, ಮುರುಡೇಶ್ವರ, ಸುರತ್ಕಲ್‌ಗಳಲ್ಲಿ ಆಕರ್ಷಕ ಕಡಲತೀರಗಳಿವೆ. ರಾಕ್‌ ಕ್ಲೈಂಬರ್ಸ್‌ಗಾಗಿ (ಬಂಡೆ ಹತ್ತುವ ಸಾಹಸಿಗಳಿಗಾಗಿ) ಕರ್ನಾಟಕವು ಜನಪ್ರಿಯ ರಾಜ್ಯವಾಗಿದೆ. ಉತ್ತರ ಕನ್ನಡದ ಯಾಣ, ಚಿತ್ರದುರ್ಗದ ಕೋಟೆ, ಬೆಂಗಳೂರು ಜಿಲ್ಲೆಯ ಬಳಿ ರಾಮನಗರ, ತುಮಕೂರು ಜಿಲ್ಲೆಯ ಶಿವಗಂಗೆ ಹಾಗೂ ಕೋಲಾರ ಜಿಲ್ಲೆಯ ಟೇಕಲ್‌, ಬಂಡೆ ಹತ್ತುವವರ ನೆಚ್ಚಿನ ಸ್ವರ್ಗಸದೃಶ್ಯ ತಾಣಗಳಾಗಿವೆ.[ಸೂಕ್ತ ಉಲ್ಲೇಖನ ಬೇಕು]

ಇದನ್ನೂ ನೋಡಿ: ಕರ್ನಾಟಕದ ಅಧಿಕೃತ ಪ್ರವಾಸೋದ್ಯಮ ಜಾಲತಾಣ

ಕೇರಳ

ಭಾರತದಲ್ಲಿ ಪ್ರವಾಸೋದ್ಯಮ 
'ಗಾಡ್ಸ್‌ ಓನ್‌ ಕಂಟ್ರಿ' ಎಂದು ಕರೆಯಲಾದ ಕೇರಳ ರಾಜ್ಯವು ತನ್ನ ದೋಣಿಮನೆಗಳಿಗೆ ಖ್ಯಾತವಾಗಿದೆ

ಕೇರಳ ನೈಋತ್ಯ ಭಾರತದ ಉಷ್ಣವಲಯದ ಮಲಬಾರ್‌ ಕರಾವಳಿಯಲ್ಲಿರುವ ರಾಜ್ಯ. ವಿಶ್ವವಿಖ್ಯಾತ ನ್ಯಾಷನಲ್‌ ಜಿಯೊಗ್ರಾಫಿಕ್‌ ಪತ್ರಿಕೆಯು ಕೇರಳವನ್ನು 'ವಿಶ್ವದ 10 ಸ್ವರ್ಗಸ್ಥಾನಗಳ ಲ್ಲಿ' ಒಂದು ಎಂದು ಬಣ್ಣಿಸಿದೆ. ಕೇರಳ ರಾಜ್ಯವು ಪರಿಸರೀಯ ಪ್ರವಾಸೋದ್ಯಮಕ್ಕಾಗಿ ಹೆಸರುವಾಸಿಯಾಗಿದೆ. ಅಪೂರ್ವ ಸಂಸ್ಕೃತಿ ಮತ್ತು ಪರಂಪರೆಗಳ ಜೊತೆಗೆ ವಿಭಿನ್ನ ಜನಸಂಸ್ಕೃತಿಗಳ ಸಂಗಮವಾಗಿರುವ ಕಾರಣ, ಕೇರಳ ರಾಜ್ಯವು ಭಾರತದ ಜನಪ್ರಿಯ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ. 13.31% ದರದಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮ ಕ್ಷೇತ್ರವು ರಾಜ್ಯದ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತದೆ.

ಕೇರಳವು ಹಿನ್ನೀರು ಮತ್ತು ಕೊವಲಂನಂತಹ ಆಕರ್ಷಕ ಕಡಲತೀರಗಳಿಗಾಗಿ ಪ್ರಖ್ಯಾತವಾಗಿದೆ.

ಇದನ್ನೂ ನೋಡಿ: ಕೇರಳ ಪ್ರವಾಸೋದ್ಯಮದ ಅಧಿಕೃತ ಜಾಲತಾಣ

ಮಧ್ಯ ಪ್ರದೇಶ

ಭಾರತದಲ್ಲಿ ಪ್ರವಾಸೋದ್ಯಮ 
ಖಜುರಾಹೊ ದೇವಾಲಯಗಳು ತನ್ನ ಲೈಂಗಿಕ ಶಿಲಾಕೃತಿಗಳಿಗೆ ಖ್ಯಾತವಾಗಿವೆ.ಖಜುರಾಹೊ ಸ್ಮಾರಕಗಳ ಸಮೂಹವು UNESCO ವಿಶ್ವ ಪಾರಂಪರಿಕ ತಾಣವಾಗಿದೆ.

ಭಾರತ ದೇಶದ ಮಧ್ಯಭಾಗದಲ್ಲಿರುವ ಕಾರಣ, ಮಧ್ಯ ಪ್ರದೇಶವನ್ನು 'ಭಾರತದ ಹೃದಯ ' ಎನ್ನಲಾಗಿದೆ. ಹಿಂದೂ , ಇಸ್ಲಾಮ್‌, ಬೌದ್ಧ, ಸಿಖ್‌, ಜೈನ ಧರ್ಮಗಳ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬಿಸುವ ತಾಣವಾಗಿದೆ. ಅಸಂಖ್ಯಾತ ಸ್ಮಾರಕಗಳು, ನಯನ ಮನೋಹರ ಶಿಲ್ಪಕಲಾ ಕೆತ್ತನೆಗಳುಳ್ಳ ದೇವಾಲಯಗಳು, ಸ್ತೂಪಗಳು, ಕೋಟೆಗಳು ಮತ್ತು ಅರಮನೆಗಳು ರಾಜ್ಯದ ಹಲವೆಡೆ ಇವೆ.

ಶೃಂಗಾರ ಕಾವ್ಯ ಸ್ಫುರಿಸುವ ಶಿಲ್ಪಕೃತಿಗಳಿಗಾಗಿ ಖಜುರಾಹೊ ದೇವಾಲಯಗಳು ವಿಶ್ವವಿಖ್ಯಾತವಾಗಿವೆ. ಅವು UNESCO ವಿಶ್ವ ಪರಂಪರೆಯ ತಾಣಗಳಲ್ಲಿಯೂ ಸೇರಿವೆ. ಕೋಟೆಗಳು, ರಾಣಿ ಲಕ್ಷ್ಮಿಬಾಯಿಯ ಗೋರಿ ಮತ್ತು ತಾನ್ಸೇನ್‌ ಅರಮನೆಗಾಗಿ ಗ್ವಾಲಿಯರ್‌ ಖ್ಯಾತವಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳನ್ನು ಹೊಂದಿರುವ ಕಾರಣ ಮಧ್ಯ ಪ್ರದೇಶವನ್ನು ಹುಲಿಗಳ ರಾಜ್ಯ ಎಂದು ಕರೆಯಲಾಗಿದೆ. ಪ್ರಸಿದ್ಧ ರಾಷ್ಟ್ರೀಯ ಉದ್ಯಾನಗಳಾದ ಕನ್ಹಾ, ಬಾಂದವ್‌ಗಢ್‌, ಶಿವಪುರಿ, ಸಂಜಯ್‌ ಮತ್ತು ಪೆಂಚ್‌ MP (ಮಧ್ಯ ಪ್ರದೇಶ)ನಲ್ಲಿವೆ. ರಮಣೀಯ ಪರ್ವತ ಶ್ರೇಣಿಗಳು, ಸುತ್ತಿಬಳಸಿ ಹರಿಯುವ ನದಿಗಳು, ಹಾಗೂ, ಸ್ವಾಭಾವಿಕ ಕಾಡು ಮರಗಿಡಗಳಿಂದ ಕೂಡಿದ ಪರಿಸರದಲ್ಲಿ ವನ್ಯಜೀವಿಗಳ ಅಪೂರ್ವ ಚಿತ್ರಾವಳಿಯನ್ನು ನೀಡುವ ಮೈಲುಗಟ್ಟಲೆ ದಟ್ಟ ಕಾಡುಗಳ ಸಾಲೇ ಈ ರಾಜ್ಯದಲ್ಲಿವೆ.

ಇದನ್ನೂ ನೋಡಿ: ಮಧ್ಯ ಪ್ರದೇಶದ ಅಧಿಕೃತ ಪ್ರವಾಸೋದ್ಯಮ ಜಾಲತಾಣ

ಮಹಾರಾಷ್ಟ್ರ

ಭಾರತದಲ್ಲಿ ಪ್ರವಾಸೋದ್ಯಮ 
ಮುಂಬಯಿ ರಾಷ್ಟ್ರೀಯ ಪ್ರತಿಬಂಧಕವಿಲ್ಲದ ಭಾರತೀಯ ನಗರವಾಗಿದೆ. ಇದು ತನ್ನ ವಾಸ್ತುಶಿಲ್ಪ, ವ್ಯಾಪಾರ ಮಳಿಗೆಗಳು, ಭೋಜನ ಕಲೆ - ಶಾಸ್ತ್ರ ಮತ್ತು ಬಾಲಿವುಡ್‌ಗಾಗಿ ಪ್ರಖ್ಯಾತವಾಗಿದೆ. ಭಾರತಕ್ಕೆ ಆಗಮಿಸುವ ಎಲ್ಲಾ ವಿದೇಶೀ ಪ್ರವಾಸಿಗರ ಪೈಕಿ 40%ರಷ್ಟು ಮುಂಬಯಿಗೆ ಬರುವರು.

ಅತಿ ಹೆಚ್ಚು ವಿದೇಶೀ ಪ್ರವಾಸಿಗರು ಭೇಟಿ ನೀಡುವ ರಾಜ್ಯ ಮಹಾರಾಷ್ಟ್ರ. ವಾರ್ಷಿಕ 2 ದಶಲಕ್ಷ ವಿದೇಶೀ ಪ್ರವಾಸಿಗರು ಈ ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಜನಪ್ರಿಯ ಮತ್ತು ದೈವಸನ್ನಿಧಿಯ, ಪವಿತ್ರ ಧಾರ್ಮಿಕ ಕ್ಷೇತ್ರಗಳು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಸ್ಥಳೀಯರು ಮತ್ತು ಬೇರೆ ರಾಜ್ಯಗಳಿಂದ ಬರುವ ಬಹಳಷ್ಟು ಪ್ರವಾಸಿಗರು ಈ ರಾಜ್ಯಕ್ಕೆ ಭೇಟಿಕೊಡುತ್ತಾರೆ.

ಮುಂಬಯಿ ರಾಷ್ಟ್ರೀಯ ಪ್ರತಿಬಂಧಕವಿಲ್ಲದ (ಸರ್ವರಿಗೂ ಆಹ್ವಾನಿಸಿ ಆಶ್ರಯ ನೀಡುವ) (ಕಾಸ್ಮೊಪೊಲಿಟನ್‌ ಆಗಿರುವ) ಭಾರತದ ಮಹಾ ನಗರವಾಗಿದೆ. ಆಧುನಿಕ ಭಾರತೀಯ ಸಂಸ್ಕೃತಿಯ ಅನುಭವದ ರುಚಿ ಸವಿಯಲು ಮುಂಬಯಿ ಒಳ್ಳೆಯ ಕೇಂದ್ರವಾಗಿದೆ.

ವಿಶ್ವದ ಅತಿ ದೊಡ್ಡ ಚಲನಚಿತ್ರೋದ್ಯಮ ಬಾಲಿವುಡ್‌ ಮುಂಬಯಿಯಲ್ಲಿದೆ.  ಇದರ ಜೊತೆಗೆ, ಮುಂಬಯಿನ ಕ್ಲಬ್‌ಗಳು, ವ್ಯಾಪಾರ ಮಳಿಗೆಗಳು, ಸಿರಿವಂತರು ಸಂದರ್ಶಿಸುವ ಸ್ಥಳಗಳು, ಹಾಗೂ ಭೋಜನದ ರಸಿಕತೆ, ಆಸ್ವಾದನೆಯ ಕಲೆ ಮತ್ತು ಪಾಕ ಶಾಸ್ತ್ರಗಳಿಗೆ ಖ್ಯಾತಿಯಾಗಿದೆ.  ಪುರಾತನ ಅಜಂತಾ ಗುಹೆಗಳು, ಇಸ್ಲಾಮಿಕ್‌ ಹಜಿ ಅಲಿ ಮಸೀದಿ, ಮುಂಬಯಿ ಉಚ್ಚ ನ್ಯಾಯಾಲಯ ಮತ್ತು ವಿಕ್ಟೊರಿಯಾ ಟರ್ಮಿನಸ್‌ (ಇಂದಿನ CST) ವಸಾಹತುಕಾಲದ ವಾಸ್ತುಶಿಲ್ಪ ಸೇರಿದಂತೆ ವಿವಿಧ ರೀತಿಯ ವಾಸ್ತುಶಿಲ್ಪಗಳಿಗೆ ಪ್ರಸಿದ್ಧಿ ಪಡೆದಿದೆ. 

ಪ್ಯಾರಾಗ್ಲೈಡಿಂಗ್‌, ಬಂಡೆ ಹತ್ತುವುದು, ಕೆನೊಯಿಂಗ್‌, ಕಯಾಕಿಂಗ್‌, ಸ್ನೊರ್ಕೆಲಿಂಗ್‌ ಮತ್ತು ಸ್ಕೂಬಾ ಡೈವಿಂಗ್‌ ಸೇರಿದಂತೆ ಹಲವು ಸಾಹಸೀ ಪ್ರವಾಸ ತಾಣಗಳು ಮಹಾರಾಷ್ಟ್ರದಲ್ಲಿವೆ. ಹಲವು ಸುಂದರ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅರಣ್ಯಧಾಮಗಳು ಮಹಾರಾಷ್ಟ್ರದಲ್ಲಿವೆ. ಔರಂಗಬಾದ್‌ನಲ್ಲಿರುವ ಬೀಬೀ ಕಾ ಮಕ್ಬಾರಾ, ಕೊಲ್ಹಾಪುರದಲ್ಲಿರುವ ಮಹಾಲಕ್ಷ್ಮಿ ದೇವಾಲಯ, ಮರಾಠಾ ಸಾಮ್ರಾಜ್ಯದ ಆಡಳಿತ ನಗರವಾದ ಪುಣೆ, ಹಾಗೂ ಅದ್ಧೂರಿಯಾಗಿ ನಡೆಯುವ ಗಣೇಶ ಚತುರ್ಥಿ ಉತ್ಸವವು ಮಹಾರಾಷ್ಟ್ರದ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಲಾಂಛನಗಳಾಗಿವೆ.

ಇದನ್ನೂ ನೋಡಿ: ಮಹಾರಾಷ್ಟ್ರ ಪ್ರವಾಸೋದ್ಯಮದ ಅಧಿಕೃತ ಜಾಲತಾಣ

ಒಡಿಶಾ

ಭಾರತದಲ್ಲಿ ಪ್ರವಾಸೋದ್ಯಮ 
ಪೂರ್ವ ಗಂಗಾ ಸಾಮ್ರಾಜ್ಯವು ನಿರ್ಮಿಸಿದ ಕೊನಾರ್ಕ್‌ ಸೂರ್ಯ ದೇವಾಲಯವು UNESCO ವಿಶ್ವ ಪರಂಪರೆಯ ತಾಣವಾಗಿದೆ.

ಪುರಾತನ ಕಾಲದಿಂದಲೂ ಒಡಿಶಾ ರಾಜ್ಯವು ಆಧ್ಯಾತ್ಮಿಕತೆ, ಧಾರ್ಮಿಕತೆ, ಪಾರಮಾರ್ಥಿಕತೆ, ಸಂಸ್ಕೃತಿ, ಕಲೆ ಮತ್ತು ಪ್ರಕೃತಿಯ ಸೌಂದರ್ಯದಲ್ಲಿ ಆಸಕ್ತಿಯುಳ್ಳವರಿಗೆ ಇಷ್ಟವಾದ ತಾಣವಾಗಿದೆ.

ಪುರಾತನ ಮತ್ತು ಮಧ್ಯಯುಗದ ವಾಸ್ತುಶಿಲ್ಪ, ಸುಂದರ ಕಡಲ ತೀರಗಳು, ಶಾಸ್ತ್ರೀಯ ಮತ್ತು ಜನಾಂಗೀಯ ನೃತ್ಯ ರೂಪಗಳು ಹಾಗೂ ವಿವಿಧ ಉತ್ಸವಗಳು-ಹಬ್ಬಗಳು ಸೇರಿದಂತೆ ಒಡಿಶಾಕ್ಕೆ ತನ್ನದೇ ಆದ ಹಲವು ಪ್ರಮುಖ ಲಕ್ಷಣಗಳಿವೆ.  ಒಡಿಶಾ ಬೌದ್ಧ ಧರ್ಮವನ್ನು ಉಳಿಸಿ, ಬೆಳೆಸಿಕೊಂಡಿದೆ.  ಹಲವು ಶತಮಾನಗಳಿಂದಲೂ ಉಳಿದುಕೊಂಡು ಬಂದಿರುವ ಬೃಹದಾಕಾರದ ರಾಜಶಾಸನ, ಶಿಲಾಶಾಸನ ಬಂಡೆಗಳು, ದಯಾ ನದಿಯ ತೀರದಲ್ಲಿ ತಲೆ ಎತ್ತಿನಿಂತಿವೆ.  ಬಿರೂಪಾ ನದಿಯ ದಂಡೆಯಲ್ಲಿರುವ ಉದಯಗಿರಿ ಮತ್ತು ಖಂಡಗಿರಿ ಗುಹೆಗಳಲ್ಲಿ 

ಬೌದ್ಧ ಧರ್ಮದ ಪಂಜಿನ ಜ್ವಾಲೆಯು ಈಗಲೂ ಉರಿಯುತ್ತಿದೆ. ಹೆಸರಾಂತ ಇತಿಹಾಸದ ಅಮೂಲ್ಯ ತುಣುಕುಗಳನ್ನು ಇಲ್ಲಿ ನೋಡಬಹುದಾಗಿದೆ: ಸ್ತೂಪಗಳು, ಬಂಡೆಯಿಂದ ನಿರ್ಮಿತ ಗುಹೆಗಳು, ಬಂಡೆಯ ಮೇಲಿನ ಶಿಲಾಶಾಸನಗಳು, ಅಗೆದು ಹೊರತೆಗೆಯಲಾದ ಮಠಗಳು,ವಿರಕ್ತ, ವೈರಾಗ್ಯದ ಕೇಂದ್ರಗಳು, ವಿಹಾರಗಳು, ಚೈತ್ಯಗಳು ಮತ್ತು ಪವಿತ್ರವಾದ ಅವಶೇಷಗಳನ್ನು ಕಾಯ್ದಿರಿಸಿದ ಸಣ್ಣ ಪೆಟ್ಟಿಗೆಗಳು, ಹಾಗೂ ಅಶೋಕ ಚಕ್ರವರ್ತಿಯ ಶಿಲಾಶಾಸಗಳು ಒಡಿಶಾದಲ್ಲಿವೆ. ಸಮರ್ಪಕವಾಗಿ ರಕ್ಷಿಸಲಾದ ಹಿಂದೂ ದೇವಾಲಯಗಳು, ಅದರಲ್ಲೂ ವಿಶಿಷ್ಟವಾಗಿ ಕೊನಾರ್ಕ್‌ ಸೂರ್ಯ ದೇವಾಲಯಕ್ಕೆ ಒಡಿಶಾ ಪ್ರಸಿದ್ಧವಾಗಿದೆ.

ರಾಜ್ಯದ ಬಹುಸಂಸ್ಕೃತೀಯ ಮತ್ತು ಬಹುಭಾಷೀಯ ಲಕ್ಷಣಕ್ಕೆ ಕೊಡುಗೆ ನೀಡಿದ ವಿವಿಧ ಬುಡಕಟ್ಟು ಜನಾಂಗಗಳಿಗೆ ಒಡಿಶಾ ಮೂಲವಾಸಸ್ಥಾನವಾಗಿದೆ. ಅವರ ಕರಕುಶಲ ಕಲೆಗಳು, ಕೈಕಸಬುದಾರಿಕೆ ವಿವಿಧ ನೃತ್ಯರೂಪಗಳು, ಅರಣ್ಯ ಉತ್ಪನ್ನಗಳು ಮತ್ತು ಅಪೂರ್ವ ಜೀವನಶೈಲಿ, ಜೊತೆಗೆ ಗಿಡಮೂಲಿಕೆಗಳ ಮೂಲಕ ಅಸ್ವಸ್ಥತೆ ಗುಣಪಡಿಸುವ ಅವರ ಪದ್ಧತಿಗಳು ವಿಶ್ವದ ಗಮನ ಸೆಳೆದಿವೆ.

ಇದನ್ನೂ ನೋಡಿ: ಒರಿಸ್ಸಾದ ಅಧಿಕೃತ ಪ್ರವಾಸೋದ್ಯಮ ಜಾಲತಾಣ Archived 2009-04-10 ವೇಬ್ಯಾಕ್ ಮೆಷಿನ್ ನಲ್ಲಿ.

ಪುದುಚೆರಿ

ಭಾರತದಲ್ಲಿ ಪ್ರವಾಸೋದ್ಯಮ 
ಪುದುಚೇರಿಯ ಆರೊವಿಲ್‌ನಲ್ಲಿರುವ ಮಾತ್ರಿಮಂದಿರ್‌ ಎಂಬ ಲೋಹದ ಗೋಲಾಕೃತಿ.

ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯು ನಾಲ್ಕು ಕಡಲತೀರ ವಲಯಗಳನ್ನು ಹೊಂದಿದೆ - ಪುದುಚೆರಿ, ಕರೈಕಲ್‌, ಮಾಹೆ ಮತ್ತು ಯಾನಂ.

ಈ ಕೇಂದ್ರಾಡಳಿತ ಪ್ರದೇಶಕ್ಕೆ ಪುದುಚೆರಿ ರಾಜಧಾನಿಯಾಗಿದೆ. ಇದು ದಕ್ಷಿಣ ಭಾರತದ ಅತಿ ಜನಪ್ರಿಯ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ.  'ಪುದುಚೆರಿಯು ಉಪಖಂಡ ಭಾರತದ ಪ್ರವಾಸದ ರಮಣೀಯತೆಗಳಲ್ಲಿ ಪ್ರಮುಖಾಂಶ' ಎಂದು ನ್ಯಾಷನಲ್‌ ಜಿಯೊಗ್ರಾಫಿಕ್‌ ಪತ್ರಿಕೆ ಬಣ್ಣಿಸಿದೆ.  ಈ ನಗರ ವಸಾಹತುಶಾಹಿ ಕಾಲದ ಹಲವು ಸುಂದರ ಕಟ್ಟಡ, ಚರ್ಚ್‌, ದೇವಾಲಯ,ಅಪರೂಪದ ಪ್ರತಿಮೆಗಳನ್ನು ಹೊಂದಿದೆ. ಜೊತೆಗೆ ವ್ಯವಸ್ಥಿತ ನಗರ ಯೋಜನೆ ಮತ್ತು ಸಮರ್ಪಕ ಯೋಜಿತ ಫ್ರೆಂಚ್‌-ಶೈಲಿ ಸಾಲುಮರದ ಬೀದಿಗಳು ವಸಾಹತುಕಾಲದ ರಮಣೀಯ ಪರಿಸರವನ್ನು ನೆನಪಲ್ಲಿ ಉಳಿಸಿಕೊಂದಿವೆ. 

ಇದನ್ನೂ ನೋಡಿ: ಪುದುಚೆರಿಯ ಅಧಿಕೃತ ಪ್ರವಾಸೋದ್ಯಮ ಜಾಲತಾಣ Archived 2010-03-10 ವೇಬ್ಯಾಕ್ ಮೆಷಿನ್ ನಲ್ಲಿ.

ಪಂಜಾಬ್‌

ಭಾರತದಲ್ಲಿ ಪ್ರವಾಸೋದ್ಯಮ 
ಹರ್‌ಮಂದಿರ್‌ ಸಾಹಿಬ್‌, ಅಥವಾ 'ಸ್ವರ್ಣ ಮಂದಿರ'.

ಪಂಜಾಬ್ ಭಾರತದ ಅತಿ ಸುಂದರ ರಾಜ್ಯಗಳಲ್ಲಿ ಒಂದು. ದರ್ಬಾರ್ ಸಾಹೀಬ ಅಥವಾ "ಸ್ವರ್ಣ ಮಂದಿರ "ಎಂದೂ ಕರೆಯಲಾಗುವ ಶ್ರೀ ಹರ್ಮಂದಿರ್ ಸಾಹೀಬ ವಿಶ್ವ ವಿಖ್ಯಾತ. ತನ್ನ ಸ್ವರ್ಣ ಲೇಪನ ಮತ್ತು ಸೌಂದರ್ಯಭರಿತ ನೋಟದಿಂದಲೇ ಅದು ಗಮನ ಸೆಳೆಯುತ್ತದೆ 'ಸ್ವರ್ಣ ಮಂದಿರ'ನಿರ್ಮಿಸಲು ಚಕ್ರವರ್ತಿ ಅಕ್ಬರನು ಜಾಗವನ್ನು ದಾನವಾಗಿ ನೀಡಿದನು. ತನ್ನ ವಿಶಿಷ್ಟ ಅಡುಗೆ, ಪಾಕಶಾಸ್ತ್ರ ಪದ್ಧತಿ, ಸಂಸ್ಕೃತಿ ಮತ್ತು ಇತಿಹಾಸಕ್ಕಾಗಿ ಪಂಜಾಬ್‌ ರಾಜ್ಯವು ಪ್ರಸಿದ್ಧವಾಗಿದೆ. ಪಂಜಾಬ್‌ ವಿಶಾಲವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಸಂಪರ್ಕ ಮತ್ತು ಸಮರ್ಥ ಸಂವಹನ ಜಾಲ ಹೊಂದಿದೆ. ಅಮೃತಸರ್‌, ಚಂಡೀಗಢ್‌ ಮತ್ತು ಲುಧಿಯಾನ ಪಂಜಾಬಿನ ಪ್ರಮುಖ ನಗರಗಳಲ್ಲಿ ಕೆಲವು.

ಪಂಜಾಬ್‌ ಸಿಖ್‌ ಮತ್ತು ಹಿಂದೂ ಧರ್ಮಗಳ ಭಾವೈಕ್ಯದ ಸಂಗಮ ಎನಿಸಿ, ಏಕೀಕರಿಸಿದ ಸಮೃದ್ಧ ಧಾರ್ಮಿಕ ಇತಿಹಾಸ ಹೊಂದಿದೆ.  ಸಂಸ್ಕೃತಿ, ಪುರಾತನ ನಾಗರಿಕತೆ, ಆಧ್ಯಾತ್ಮಿಕತೆ ಮತ್ತು ಮಹಾಕಾವ್ಯದ ಇತಿಹಾಸದಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗಳಿಗೆ ಪಂಜಾಬಿನ ಪ್ರವಾಸೋದ್ಯಮ ಪ್ರಮುಖವಾಗಿ ಆಕರ್ಷಿಸುತ್ತದೆ.  ನೈಜ ಪಂಜಾಬಿನ ಜೀವನವನ್ನು ಕಾಣಲು ಇಚ್ಛಿಸುವವರು ಪಂಜಾಬಿನ ಹಳ್ಳಿಗಳಿಗೆ ಭೇಟಿ ನೀಡಲೇಬೇಕಿದೆ. ಪಂಜಾಬಿನ ಸಾಂಪ್ರದಾಯಿಕ ಭಾರತೀಯ ಗೃಹಗಳು, ಗದ್ದೆಗಳು ಮತ್ತು ದೇವಾಲಯಗಳನ್ನು ನೋಡಬಯಸುವ ಯಾವುದೇ ವ್ಯಕ್ತಿಯು ಪಂಜಾಬಿನ ಗ್ರಾಮ ಜೀವನವನ್ನು ವೀಕ್ಷಿಸಲೇಬೇಕಿದೆ. 

ಇದನ್ನೂ ನೋಡಿ: ಪಂಜಾಬಿನ ಅಧಿಕೃತ ಪ್ರವಾಸೋದ್ಯಮ ಜಾಲತಾಣ Archived 2010-02-13 ವೇಬ್ಯಾಕ್ ಮೆಷಿನ್ ನಲ್ಲಿ.

ರಾಜಸ್ಥಾನ

ಚಿತ್ರ:UmaidBhawan Exterior 1.jpg
ಉಮೇದ್ ಭವನ್‌ ಅರಮನೆ

ರಾಜಸ್ಥಾನ ಎಂದರೆ 'ರಾಜರ ತಾಣ '. ಇದು ಉತ್ತರ ಭಾರತದಲ್ಲಿ ಅತ್ಯಾಕರ್ಷಕ ಪ್ರವಾಸೀ ತಾಣಗಳಲ್ಲಿ ಒಂದು. ಥಾರ್‌ ಮರುಭೂಮಿಯ ವಿಶಾಲ ಮರಳಿನ ದಿಬ್ಬಗಳು ಪ್ರತಿವರ್ಷವೂ ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಆಕರ್ಷಣೆಗಳು :

  • ಜೈಪುರ - ರಾಜಸ್ಥಾನದ ರಾಜಧಾನಿ; ಸಮೃದ್ಧ ಇತಿಹಾಸ ಮತ್ತು ರಾಜವೈಭವದ ವಾಸ್ತುಶಿಲ್ಪಗಳಿಗೆ ಪ್ರಸಿದ್ಧವಾಗಿದೆ.
  • ಜೋಧ್‌ಪುರ್‌ - ಥಾರ್‌ ಮರುಭೂಮಿಯ ಗಡಿಯಲ್ಲಿರುವ ಕೋಟೆ-ಕೊತ್ತಲ-ನಗರ; ನೀಲಿ ಛಾಯೆಯನ್ನು ಪ್ರತಿಬಿಂಬಿಸುವ ಮನೆಗಳು ಮತ್ತು ವಾಸ್ತುಶಿಲ್ಪಕ್ಕಾಗಿ ಪ್ರಸಿದ್ಧವಾಗಿದೆ.
  • ಉದಯ್‌ಪುರ್‌ - ಭಾರತದ 'ವೆನೀಸ್‌' ಎಂದು ಪ್ರಸಿದ್ಧವಾಗಿದೆ.
  • ಜೈಸಲ್ಮೆರ್‌ - ಚಿನ್ನದ ಕೊತ್ತಲಕ್ಕಾಗಿ ಪ್ರಸಿದ್ಧವಾಗಿದೆ.
  • ಬಾರ್ಮರ್‌ - ಬಾರ್ಮರ್‌ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು ರಾಜಸ್ಥಾನಿ ಗ್ರಾಮಗಳ ನಿಖರ ಚಿತ್ರಣ ನೀಡುತ್ತವೆ.
  • ಬಿಕಾನೆರ್‌ - ಮಧ್ಯಯುಗೀಯ ಇತಿಹಾಸದಲ್ಲಿ ಇದು ವಹಿವಾಟು ಮಾರ್ಗದ ಪ್ರಮುಖ ತಾಣವಾಗಿತ್ತು.
  • ಮೌಂಟ್‌ ಆಬು ರಾಜಸ್ಥಾನದ ಅರಾವಳಿ ಪರ್ವತಶ್ರೇಣಿಯಲ್ಲಿ ಅತಿ ಎತ್ತರದ ಶಿಖರ.
  • ಪುಷ್ಕರ್‌ - ವಿಶ್ವದಲ್ಲಿಯೇ ಪ್ರಪ್ರಥಮ ಬ್ರಹ್ಮ ಮಂದಿರವು ಇಲ್ಲಿದೆ.
  • ನಾಥ್‌ದ್ವಾರ - ಉದಯ್‌ಪುರದ ಬಳಿಯಿರುವ ಈ ಪಟ್ಟಣದಲ್ಲಿ ವಿಶ್ವವಿಖ್ಯಾತ ಶ್ರೀನಾಥ್‌ಜಿ ದೇವಾಲಯವಿದೆ.
  • ರಣತಂಬೋರ್‌ - ಈ ಪಟ್ಟಣ ಸವಾಯಿ ಮಾಧೋಪುರದ ಬಳಿಯಿದೆ. ಭಾರತದ ಪ್ರಸಿದ್ಧ ಮತ್ತು ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನಗಳಲ್ಲೊಂದಾದ ಇದು ಈ ಪಟ್ಟಣದಲ್ಲಿದೆ.

ಇದನ್ನೂ ನೋಡಿ: ರಾಜಸ್ಥಾನದ ಅಧಿಕೃತ ಪ್ರವಾಸೋದ್ಯಮ ಜಾಲತಾಣ Archived 2015-06-08 ವೇಬ್ಯಾಕ್ ಮೆಷಿನ್ ನಲ್ಲಿ.

ಸಿಕ್ಕಿಂ

ಭಾರತದಲ್ಲಿ ಪ್ರವಾಸೋದ್ಯಮ 
ಸಿಕ್ಕಿಂನಲ್ಲಿರುವ ಕಾಂಗ್ಚೆನ್‌ಜುಂಗಾ ವಿಶ್ವದಲ್ಲಿ ಮೂರನೆಯ ಅತಿ ಎತ್ರದ ಪರ್ವತವಾಗಿದೆ.

ಮೂಲತಃ ಸುಕ್-ಹೀಂ (ಸ್ಥಳೀಯ ಭಾಷೆಯಲ್ಲಿ 'ಶಾಂತಿಯುತ ನಿವಾಸ') ಎನ್ನಲಾದ ಸಿಕ್ಕಿಂ, 1974ರಲ್ಲಿ ಭಾರತ ದೇಶದೊಂದಿಗೆ ಏಕೀಕೃತಗೊಳ್ಳುವ ತನಕ ಒಂದು ಸ್ವತಂತ್ರ ಸಾಮ್ರಾಜ್ಯವಾಗಿತ್ತು. ಸಿಕ್ಕಿಂನ ರಾಜಧಾನಿ ಗಂಗ್ಟೊಕ್‌. ಸಿಕ್ಕಿಂಗೆ ಆಗಮಿಸಲು ಅತಿ ಹತ್ತಿರದ ರೇಲ್ವೆ ನಿಲ್ದಾಣ ನ್ಯೂ ಜಲ್ಪೈಗುಡಿಯಿಂದ 185 ಕಿಲೋಮೀಟರ್‌ ದೂರವಿದೆ. ಪೂರ್ವ ಸಿಕ್ಕಿಂನ ಡೆಕಿಲಿಂಗ್‌ನಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿದ್ದರೂ, ಸಿಕ್ಕಿಂಗೆ ಆಗಮಿಸಲು ಅತಿ ಹತ್ತಿರದ ವಿಮಾನ ನಿಲ್ದಾಣ ಬಗ್ಡೊಗ್ರಾದಲ್ಲಿದೆ. ವಿವಿಧ ಹೂವಿನ ಗಿಡಗಳು, ಅಧ್ಯಾತ್ಮಿಕತೆಗೆ ಸ್ಫೂರ್ತಿಯಾದ ಸಂಸ್ಕೃತಿ ಮತ್ತು ವಿವಿಧ-ವರ್ಣ-ವರ್ಗ-ಸಮುದಾಯದ ಸಾಮಾಜಿಕ ಸಂಪ್ರದಾಯಗಳಿಗೆ ಸಿಕ್ಕಿಂ ಪ್ರಸಿದ್ಧವಾಗಿದೆ. ಟ್ರೆಕಿಂಗ್‌ ಹೋಗುವವರಿಗೆ ಸಿಕ್ಕಿಂ ಚಿರಪರಿಚಿತ ತಾಣವಾಗಿದೆ. ಅದರಲ್ಲೂ ಪಶ್ಚಿಮ ಸಿಕ್ಕಿಂ ಪರ್ವತಾರೋಹಿಗಳಿಗೆ, ಸಾಹಸಿಗಳಿಗೆ ನೆಚ್ಚಿನ ತಾಣ ಮತ್ತು ತಕ್ಕ ಅವಕಾಶ ಒದಗಿಸುತ್ತದೆ.

ಸಿಕ್ಕಿಂ ಸಮೀಪದ ಸ್ಥಳಗಳಲ್ಲಿ ಡಾರ್ಜೀಲಿಂಗ್‌ ('ಬೆಟ್ಟಗಳ ರಾಣಿ' (ಕ್ವೀನ್‌ ಆಫ್‌ ಹಿಲ್ಸ್‌) ಎನ್ನಲಾಗಿದೆ) ಮತ್ತು ಕಲಿಂಪಾಂಗ್‌ವೂ ಸೇರಿವೆ.

ಡಾರ್ಜೀಲಿಂಗ್‌ ವಿಶ್ವವಿಖ್ಯಾತ 'ಡಾರ್ಜೀಲಿಂಗ್‌ ಚಹಾ'ಕ್ಕೆ ಹೆಸರುವಾಸಿಯಾಗಿದೆ. ಇದಲ್ಲದೆ, ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಸ್ಥಾಪಿಸಲಾದ ಸುಸಂಸ್ಕೃತ 'ಪ್ರೆಪ್‌ ಶಾಲೆ'ಗಳಿಗೂ ಖ್ಯಾತವಾಗಿದೆ.  ಜೊತೆಗೆ, ಕಲಿಂಪಾಂಗ್‌ ಸಸ್ಯ ಕೃಷಿ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಸಸ್ಯೋದ್ಯಾನಗಳಿಗೆ ಪ್ರಸಿದ್ಧವಾಗಿದೆ. 

ಇದನ್ನೂ ನೋಡಿ: ಸಿಕ್ಕಿಂನ ಅಧಿಕೃತ ಪ್ರವಾಸೋದ್ಯಮ ಜಾಲತಾಣ Archived 2010-01-27 ವೇಬ್ಯಾಕ್ ಮೆಷಿನ್ ನಲ್ಲಿ.

ತಮಿಳುನಾಡು

ಭಾರತದಲ್ಲಿ ಪ್ರವಾಸೋದ್ಯಮ 
ಮಹಾಬಲಿಪುರದಲ್ಲಿರುವ ಕಡಲತೀರದ ದೇವಾಲಯವು ಭಾರತೀಯ ಸಾಗರದಲ್ಲಿರುವ ಪುರಾತನ ದೇಗುಲ ಹಾಗೂ UNESCO ವಿಶ್ವ ಪರಂಪರೆಯ ತಾಣವಾಗಿದೆ.

ತಮಿಳುನಾಡು ದಕ್ಷಿಣ ಭಾರತೀಯ ಪರ್ಯಾಯ ದ್ವೀಪದಲ್ಲಿ, ಬಂಗಾಳ ಕೊಲ್ಲಿಯ ತೀರದಲ್ಲಿದೆ. ಚೋಳರು, ಪಲ್ಲವರು, ಪಾಂಡ್ಯರು ಹಾಗೂ ವಿಜಯನಗರ ಸೇರಿ, ಹಲವು ಮಹಾನ್‌ ಸಾಮ್ರಾಜ್ಯಗಳು ತಮಿಳುನಾಡಿನ ಭಾಗಗಳನ್ನು ಆಳಿದವು. ರಾಜ್ಯವು ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ದೇವಾಲಯಗಳ ವಾಸ್ತುಶಿಲ್ಪಗಳಿಗೆ ಹೆಸರುವಾಸಿಯಾಗಿದೆ.

ಕಡಲತೀರದ ದೇವಾಲಯಗಳಿಗೆ ಪ್ರಸಿದ್ಧವಾಗಿರುವ ಮಹಾಬಲಿಪುರಂ, ಭಾರತದ ದಕ್ಷಿಣ ಭಾಗದ ತುಟ್ಟ ತುದಿಯ ಸ್ಥಳ ಕನ್ಯಾಕುಮಾರಿ, ಅಂತಾರಾಷ್ಟ್ರೀಯ ಆಕರ್ಷಣೀಯ ನಗರ ಆರೋವಿಲ್‌, ಮುಡುಮಲೈ ಅಭಯಾರಣ್ಯ, ಹಾಗೂ, ಎರಡು ಗಿರಿಧಾಮಗಳಾದ ಊಟಿ (ಉದಕಮಂಡಲಂ) ಮತ್ತು ಕೊಡೈಕನಲ್‌ - ಇವೆಲ್ಲವೂ ರಾಜ್ಯದ ಪ್ರಮುಖ ಆಕರ್ಷಕ ಪ್ರವಾಸೀ ತಾಣಗಳಾಗಿವೆ. ಅಪರೂಪದ ನೀಲಗಿರಿ ಪರ್ವತದ ಸಾಲು ರೇಲ್ವೆ UNESCO ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿದೆ.

ಇದನ್ನೂ ನೋಡಿ: ತಮಿಳುನಾಡು ಪ್ರವಾಸೋದ್ಯಮದ ಅಧಿಕೃತ ಜಾಲತಾಣ

ಉತ್ತರಾಖಂಡ್

ಭಾರತದಲ್ಲಿ ಪ್ರವಾಸೋದ್ಯಮ 
'ವ್ಯಾಲಿ ಆಫ್‌ ಫ್ಲಾವರ್ಸ್‌' ಮತ್ತು ನಂದಾದೇವಿ ರಾಷ್ಟ್ರೀಯ ಉದ್ಯಾನಗಳು UNESCO ವಿಶ್ವ ಪರಂಪರೆಯ ತಾಣಗಳಾಗಿವೆ.

ಉತ್ತರಾಂಚಲ್‌ (ಇಂದು: ಉತ್ತರಾಖಂಡ್‌) ಭಾರತ ದೇಶದ 27ನೆಯ ರಾಜ್ಯವಾಗಿದೆ. ಈ ರಾಜ್ಯವು ನೈಸರ್ಗಿಕ ಸೌಂದರ್ಯದ ಬೀಡಾಗಿದೆ. ಘನ ಗಾಂಭೀರ್ಯದ ಹಿಮನದಿಗಳು, ವೈಭವಯುಕ್ತ ಹಿಮಾಚ್ಛಾದಿತ ಪರ್ವತಗಳು, ಬೃಹದಾಕಾರದ ಶಿಖರಗಳು, ಪುಷ್ಪಸಸ್ಯ ಕಣಿವೆಗಳು, ಸ್ಕೀಯಿಂಗ್‌ ಮಾಡಬಹುದಾದ ಇಳಿಜಾರುಗಳು ಮತ್ತು ದಟ್ಟಡವಿಗಳು ಉತ್ತರಾಖಂಡ್‌ನಲ್ಲಿವೆ. 'ದೇವತೆಗಳ ಬೀಡು' ಎನ್ನಲಾದ ಈ ರಾಜ್ಯದಲ್ಲಿ ಹಲವು ಪುಣ್ಯಕ್ಷೇತ್ರಗಳು ಮತ್ತು ತೀರ್ಥಯಾತ್ರಾಸ್ಥಳಗಳಿವೆ. ನಾಲ್ಕು ಪವಿತ್ರ ಹಾಗೂ ಭಯಭಕ್ತಿಗೆ ಪೂಜನೀಯ ಹಿಂದೂ ದೇವಾಲಯಗಳು, ಚಾರ್‌-ಧಾಮ್‌ಗಳೆನ್ನಲಾಗಿದೆ ಬದರಿನಾಥ್‌, ಕೇದಾರ್‌ನಾಥ್‌, ಗಂಗೋತ್ರಿ ಮತ್ತು ಯಮುನೋತ್ರಿ ಬೃಹದಾಕಾರದ ಹಿಮಾಲಯ ಪರ್ವತಶ್ರೇಣಿಯಲ್ಲಿವೆ. ಹರಿದ್ವಾರ್‌ (ಅರ್ಥಾತ್‌ ದೇವರಿಗೆ ದ್ವಾರ ) ಬಯಲುಸೀಮೆಯಲ್ಲಿರುವ ಏಕೈಕ ಪುಣ್ಯಕ್ಷೇತ್ರ.

ಆಕರ್ಷಕ ಭೂಚಿತ್ರಣವುಳ್ಳ ಉತ್ತರಾಖಂಡ್‌, ಹಿಮಾಲಯದ ಸುಂದರ ದೃಶ್ಯಾವಳಿಯನ್ನು ನೀಡುತ್ತದೆ. ಉತ್ತರಾಖಂಡ್‌ಗೆ ಆಗಮಿಸುವ ಪ್ರವಾಸಿಗರು ಮನರಂಜನೀಯ ಹಾಗೂ ಅವಿಸ್ಮರಣೀಯ ಕ್ಷಣಗಳನ್ನು ಸವಿಯುವುದು ನಿಶ್ಚಿತ. ಹಿಮಾಲಯ ಪರ್ವತಗಳ ರಮಣೀಯ ಮತ್ತು ಅತ್ಯಾಕರ್ಷಕ ನೋಟವನ್ನು ಉತ್ತರಾಖಂಡ್‌ನಲ್ಲಿ ಕಾಣಬಹುದು. ಜೊತೆಗೆ, ಪಶ್ಚಿಮದಲ್ಲಿರುವ ಸತ್ಲಜ್‌ನಿಂದ ಪೂರ್ವದಲ್ಲಿರುವ ಕಾಲಿ ನದಿಯ ವರೆಗೆ, 300 ಕಿ.ಮೀ. ಉದ್ದವಿರುವ ಗಂಗಾನದಿ ವ್ಯವಸ್ಥೆಗಾಗಿ ಇದು ಜಲಾನಯನ ಪ್ರದೇಶವಾಗಿದೆ. 28160 ಅಡಿ ಎತ್ತರದ ಕಾಂಚೆನ್‌ಜುಂಗಾ ಶಿಖರದ ನಂತರ, 25640 ಅಡಿ ಎತ್ತರವಿರುವ ನಂದಾದೇವಿ ಪರ್ವತವು ಭಾರತದಲ್ಲಿ ಎರಡನೆಯ ಅತಿ ಎತ್ತರದ ಶಿಖರವಾಗಿದೆ. ದುನಗಿರಿ, ನೀಲಕಂಠ್‌, ಚುಖಂಬಾ, ಪಂಚಚೂಲಿ ಮತ್ತು ತ್ರಿಶೂಲ್‌ 23000 ಅಡಿಗಳಿಗಿಂತಲೂ ಎತ್ತರವಿರುವ ಇತರೆ ಶಿಖರಗಳಾಗಿವೆ. ಇವುಗಳು ದೇವತೆಗಳು, ಯಕ್ಷರು , ಕಿನ್ನರ ರು, ಕಿನ್ನರಿಯರು ಮತ್ತು ಋಷಿಮುನಿಗಳ ಬೀಡು ಎನ್ನಲಾಗಿದೆ. ಹೊಳಪಿನ ಕಣ್ಣು ಕುಕ್ಕುವ ಶಿಖರಗಳು, ಭೋರ್ಗೆರೆಯುವ ನದಿಗಳು, ಬೆಟ್ಟಗಳ ಸುಂದರ ಇಳಿಜಾರುಗಳು ಮತ್ತು ಕಣಿವೆಗಳಲ್ಲಿ ಒಂದಲ್ಲ ಒಂದು ರೂಪದಲ್ಲಿ ಉಪಸ್ಥಿತರಿದ್ದಾರೆ. ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿ ಅಭಿವೃದ್ಧಿಗೊಳಿಸಲಾದ ಮಸ್ಸೂರಿ, ಅಲ್ಮೊರಾ ಮತ್ತು ನೈನಿತಾಲ್‌ ಗಿರಿಧಾಮಗಳೂ ಉತ್ತರಾಖಂಡ್‌ನಲ್ಲಿವೆ. ದೂನಗಿರಿಯಂತಹ ಆಕರ್ಷಕ ನೈಸರ್ಗಿಕ ಧಾಮಗಳಲ್ಲಿ ಪ್ರಶಾಂತತೆ, ದಿವ್ಯತೆ ಮತ್ತು ಶಾಶ್ವತತೆ ಮೆರೆಯುತ್ತವೆ.

style="padding-left: 1em; text-align: center; width: 25%; " ಹಿಮನದಿಗಳು
ಪಿಂಡಾರಿ ಹಿಮನದಿ, ಮಿಲಾಮ್‌ ಹಿಮನದಿ, ಗಂಗೋತ್ರಿ ಹಿಮನದಿ, ಬಂದರ್‌ ಪಂಚ್‌ ಹಿಮನದಿ, ಖಾಟ್ಲಿ ಹಿಮನದಿ, ದೂನಗಿರಿ ಹಿಮನದಿ, ಡೊಕ್ಕ್ರಾನಿ ಹಿಮನದಿ, ಕಫಿನಿ ಹಿಮನದಿ, ರಾಲಂ ಹಿಮನದಿ
style="padding-right: 1em; text-align: center; width: 25%; " ವನ್ಯಧಾಮಗಳು
ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನ, ರಾಜಾಜಿ ರಾಷ್ಟ್ರೀಯ ಉದ್ಯಾನವನ, ಆಸನ್‌ ಸಂರಕ್ಷಣಾ ಧಾಮ, ನಂದಾ ದೇವಿ ರಾಷ್ಟ್ರೀಯ ಉದ್ಯಾನವನ, ಗೋವಿಂದ್‌ ಅಭಯಾರಣ್ಯ, ಆಸ್ಕಾಟ್‌ ಕಸ್ತೂರಿ ಮೃಗ ಧಾಮ (ಆಸ್ಕಾಟ್‌), ವ್ಯಾಲಿ ಆಫ್‌ ಫ್ಲಾವರ್ಸ್‌
style="padding-left: 1em; text-align: center; width: 25%; " ಸಾಹಸೀ ಕ್ರೀಡೆಗಳು
ಮುಂಡಲಿ, ಔಲಿ, ದಾಯರಾ ಬಗ್ಯಾಲ್‌ ಮತ್ತು ಮುನ್ಸಿಯಾರಿಯಲ್ಲಿ ಸ್ಕೀಯಿಂಗ್‌. ಮಸ್ಸೂರಿ, ಉತ್ತರಕಾಶಿ, ಜೋಶಿಮಠ್‌, ಮುನ್ಸಿಯಾರಿ, ಚೌಕೊರಿ, ಪಾವರಿ, ಅಲ್ಮೊರಾ, ನೈನಿತಾಲ್‌ ಸ್ಥಳಗಳಲ್ಲಿ ಟ್ರೆಕಿಂಗ್‌.
style="padding-left: 1em; text-align: center; width: 25%; "

ಇದನ್ನೂ ನೋಡಿ: ಉತ್ತರಾಖಂಡ್‌ನ ಅಧಿಕೃತ ಪ್ರವಾಸೋದ್ಯಮ ಜಾಲತಾಣ

ಉತ್ತರ ಪ್ರದೇಶ

ಮುಖ್ಯ ಲೇಖನ: ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮ

ಭಾರತದಲ್ಲಿ ಪ್ರವಾಸೋದ್ಯಮ 
ಫತೇಪುರ್‌ ಸಿಕ್ರಿಯಲ್ಲಿರುವ ದೀವಾನ್‌-ಎ-ಖಾಸ್‌ - ಮುಖ್ಯ ಜನರನ್ನು ಚಕ್ರವರ್ತಿ ಬರಮಾಡಿಕೊಳ್ಳುತ್ತಿದ್ದ ಕಟ್ಟಡ

ಉತ್ತರ ಪ್ರದೇಶವು ಭಾರತದ ಉತ್ತರ ಭಾಗದಲ್ಲಿದೆ. ಸ್ಮಾರಕಗಳ ಸಂಪತ್ತು ಮತ್ತು ಭಾವತೀವ್ರತೆಯನ್ನು ಉಕ್ಕಿಸುವ ಧಾರ್ಮಿಕ ಪ್ರತೀಕಗಳನ್ನು ಹೊಂದಿರುವ ಈ ರಾಜ್ಯವು ಪ್ರವಾಸಿಗಳ ಪ್ರಮುಖ ಆಯ್ಕೆಯ ಪಟ್ಟಿಯ ಸ್ಥಾನದಲ್ಲಿದೆ. ಭೌಗೋಳಿಕವಾಗಿ, ಉತ್ತರ ಪ್ರದೇಶವು ಬಹಳ ವೈವಿಧ್ಯಮಯವಾಗಿದೆ. ಈ ರಾಜ್ಯದ ಅತಿ ಉತ್ತರದಲ್ಲಿ ಹಿಮಾಲಯ ಪರ್ವತ ಬುಡಗಳು, ಮಧ್ಯದಲ್ಲಿ ಗಂಗಾನದಿಯ ಬಯಲುಸೀಮೆ ಪ್ರದೇಶ, ದಕ್ಷಿಣದಲ್ಲಿ ವಿಂಧ್ಯಾ ಪರ್ವತಶ್ರೇಣಿಯಿದೆ. ಅತಿ ಹೆಚ್ಚು ಜನರು ಭೇಟಿ ನೀಡುವ ಸ್ಮಾರಕ ತಾಜ್‌ ಮಹಲ್‌ ಹಾಗೂ ಹಿಂದೂಧರ್ಮದ ಅತಿ ಪವಿತ್ರ ನಗರವಾದ ವಾರಾಣಸಿ ಉತ್ತರ ಪ್ರದೇಶದಲ್ಲಿದೆ. ಭಾರತದ ಅತ್ಯಂತ ಜನನಿಬಿಡ ರಾಜ್ಯ ಉತ್ತರ ಪ್ರದೇಶವು ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಉತ್ತರ ಭಾರತದ ಹೃದಯದಂತಿರುವ ಉತ್ತರ ಪ್ರದೇಶವು ಪ್ರವಾಸಿಗರಲ್ಲಿ ಸಾಕಷ್ಟು ಆಸಕ್ತಿಯನ್ನು ಮೂಡಿಸಿದೆ. ಪ್ರಮುಖ ಪ್ರವಾಸೀ ತಾಣಗಳಲ್ಲಿ ವಾರಾಣಸಿ, ಆಗ್ರಾ, ಮಥುರಾ, ಝಾನ್ಸಿ, ಪ್ರಯಾಗ್‌, ಸಾರನಾಥ್‌, ಅಯೋಧ್ಯಾ, ದುಧ್ವಾ ರಾಷ್ಟ್ರೀಯ ಉದ್ಯಾನವನ ಮತ್ತು ಫತೇಪುರ್‌ ಸಿಕ್ರಿ ಸೇರಿವೆ.

ಇದನ್ನೂ ನೋಡಿ: ಉತ್ತರ ಪ್ರದೇಶದ ಅಧಿಕೃತ ಪ್ರವಾಸೋದ್ಯಮ ಜಾಲತಾಣ Archived 2019-08-18 ವೇಬ್ಯಾಕ್ ಮೆಷಿನ್ ನಲ್ಲಿ.

ಪಶ್ಚಿಮ ಬಂಗಾಳ

ಭಾರತದಲ್ಲಿ ಪ್ರವಾಸೋದ್ಯಮ 
ಕೋಲ್ಕಾತಾದಲ್ಲಿರುವ ವಿಕ್ಟೊರಿಯಾ ಸ್ಮಾರಕ

ಪಶ್ಚಿಮ ಬಂಗಾಳದಲ್ಲಿರುವ ಹಲವು ನಗರಗಳ ಪೈಕಿ ಕೋಲ್ಕಾತಾ 'ಅರಮನೆಗಳ ನಗರ' ಎಂಬ ಅಡ್ಡ ಹೆಸರನ್ನು ಹೊಂದಿದೆ. ನಗರದಲ್ಲಿ ಹಲವೆಡೆ ಅರಮನೆಯಂತಹ ಬೃಹತ್‌ ಭವನಗಳು ನಿರ್ಮಿತವಾಗಿರುವ ಕಾರಣ ಈ ಅಡ್ಡಹೆಸರು ಲಭಿಸಿದೆ. ಉತ್ತರ ಭಾರತದ ಹಲವು ನಗರಗಳಲ್ಲಿನ ನಿರ್ಮಾಣಗಳು ಸರಳತೆಗೆ ಒತ್ತು ನೀಡಿವೆ. ಆದರೆ, ಕೋಲ್ಕಾತಾ ಕಟ್ಟಡಗಳ ವಾಸ್ತುಶಿಲ್ಪ ವೈವಿಧ್ಯವು ಬ್ರಿಟಿಷರು ಆಮದು ಮಾಡಿಕೊಂಡ ಯೂರೊಪೀಯನ್ ಶೈಲಿ ಮತ್ತು ಅಲ್ಪ ಮಟ್ಟಿಗೆ ಪೋರ್ಚುಗೀಸ್‌ ಹಾಗೂ ಫ್ರೆಂಚ್‌ ಶೈಲಿಯನ್ನು ಆಧರಿಸಿದೆ. ಇಂಗ್ಲಿಷ್‌ ನಾಗರಿಕತೆ ಮತ್ತು (ಇಂಗ್ಲಿಷರಂತೆ ನಡೆ-ನುಡಿಗಳನ್ನು ಕರಗತ ಮಾಡಿಕೊಂಡು ಬ್ರಿಟಿಷರ ಕೃಪಾಕಟಾಕ್ಷಕ್ಕೆ ಪಾತ್ರರಾಗುವ) ನವಶ್ರೀಮಂತ ಬಂಗಾಳಿ ಬಾಬುಗಳ ಅಭಿರುಚಿಯ ಮೇರೆಗೆ ಕಟ್ಟಡಗಳನ್ನು ವಿನ್ಯಾಸ ಮಾಡಲಾಗುತ್ತಿತ್ತು. ಇಂತಹ ಕಟ್ಟಡಗಳಲ್ಲಿ ಹಲವು, ಇಂದು ವಿವಿಧ ತೆರನಾಗಿ ದುಃಸ್ಥಿತಿಯಲ್ಲಿವೆ. ಈ ಕಾಲದ ಕೆಲವು ಪ್ರಮುಖ ಕಟ್ಟಡಗಳನ್ನು ಚೆನ್ನಾಗಿ ನಿರ್ಮಿಸಲಾಗಿವೆ. ಜೊತೆಗೆ ಹಲವನ್ನು ಪರಂಪರೆಯ ಕಟ್ಟಡಗಳನ್ನಾಗಿ ಘೋಷಿಸಲಾಗಿದೆ.

ಐತಿಹಾಸಿಕ ದೃಷ್ಟಿಕೋನದಿಂದ, ಇಂದಿನ ಮಾಲ್ಡಾ ಜಿಲ್ಲೆಯ ಬಳಿಯಿರುವ ಗೌಡ್‌ ಮತ್ತು ಪಾಂಡುವಾದಿಂದ ಪಶ್ಚಿಮ ಬಂಗಾಳದ ಇತಿಹಾಸವು ಆರಂಭವಾಗುತ್ತದೆ. 15ನೆಯ ಶತಮಾನದಲ್ಲಿ, ಆಡಳಿತ ಸಾಮ್ರಾಜ್ಯಗಳು ಬದಲಾದಾಗೆಲ್ಲವೂ ಈ ಮಧ್ಯಯುಗೀಯ ಅವಳಿ ನಗರಗಳು ಕನಿಷ್ಠಪಕ್ಷ ಒಮ್ಮೆಯಾದರೂ ರಾಜಧಾನಿ ಸ್ಥಾನವನ್ನು ಕಳೆದುಕೊಂಡಿದ್ದವು. ಆದರೆ ಆ ಕಾಲದ ಅವಶೇಷಗಳು ಇನ್ನೂ ಉಳಿದಿವೆ. ಹಲವು ವಾಸ್ತುಶಿಲ್ಪದ ಮಾದರಿಗಳು ಆಗಿನ ಕಾಲದ ವೈಭವ ಮತ್ತು ಹೊಳಪನ್ನು ಉಳಿಸಿಕೊಂಡಿವೆ. ಬಿಷ್ಣುಪುರದಲ್ಲಿ ಟೆರಾಕೊಟಾ ಮತ್ತು ಲ್ಯಾಟರೈಟ್‌ ಮರಳಶಿಲೆಗಳಿಂದ ನಿರ್ಮಿಸಲಾದ ಹಿಂದೂ ವಾಸ್ತುಶಿಲ್ಪವು ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಬ್ರಿಟಿಷ್ ವಸಾಹತುಕಾಲವು ಸಮೀಪಿಸುತ್ತಿದ್ದಾಗ ಮುರ್ಷಿದಾಬಾದ್‌ ಹಾಗೂ ಕೂಚ್‌ಬೆಹಾರ್‌ ವಾಸ್ತುಶಿಲ್ಪದ ಪರಿಚಯವಾಯಿತು.

style="padding-left: 1em; text-align: center; width: 25%; " ಪಶ್ಚಿಮ ಬಂಗಾಳದಲ್ಲಿನ ಗಮನಾರ್ಹ ಸ್ಥಳಗಳು
ಕೂಚ್‌ ಬೆಹಾರ್‌ · ಕೂಚ್‌ ಬೆಹಾರ್‌ · ಡಾರ್ಜೀಲಿಂಗ್‌ · ಕಲಿಂಪಾಂಗ್‌ · ಕರ್ಸಿಯಾಂಗ್‌ · ಡೂವಾರ್ಸ್‌ · ದೀಘಾ · ಬಿಷ್ಣುಪುರ್‌ · ಮಾಲ್ಡಾ · ಮುಕುಟ್‌ಮಣಿಪುರ್‌ · ಅಯೋಧ್ಯಾ ಹಿಲ್ಸ್‌ · ಮುರ್ಷಿದಾಬಾದ್‌ · ಕೋಲ್ಕಾತಾ.
style="padding-right: 1em; text-align: center; width: 25%; " ಪೂಜಾ ಸ್ಥಳಗಳು
ದಕ್ಷಿಣೇಶ್ವರ್‌ ಕಾಲಿ ದೇವಾಲಯ · ಕಾಲಿಘಾಟ್‌ ದೇವಾಲಯ · ಬಿರ್ಲಾ ಮಂದಿರ · ಬೇಲೂರು ಮಠ · ಭೂತ್‌ನಾಥ್‌ · ಟಿಪ್ಪು ಸುಲ್ತಾನ್‌ ಮಸೀದಿ · ನಾಖೋಡಾ ಮಸೀದಿ · ಸೇಂಟ್‌ ಪಾಲ್ಸ್‌ ಕ್ಯಾತೆಡ್ರಲ್‌ · ಸೇಂಟ್‌ ಜಾನ್ಸ್‌ ಚರ್ಚ್‌ · ಪಾರ್ಸಿ ಅಗ್ನಿ ದೇವಾಲಯಗಳು · ಜಪಾನೀ ಬೌದ್ಧರ ದೇವಾಲಯ · ಪರೇಶ್‌ನಾಥ್‌ ಜೈನ್‌ ದೇವಾಲಯ.

ಇದನ್ನೂ ನೋಡಿ: ಪಶ್ಚಿಮ ಬಂಗಾಳದ ಅಧಿಕೃತ ಪ್ರವಾಸೋದ್ಯಮ ಜಾಲತಾಣ Archived 2009-10-10 ವೇಬ್ಯಾಕ್ ಮೆಷಿನ್ ನಲ್ಲಿ.

ಐತಿಹಾಸಿಕ ಸ್ಮಾರಕಗಳು

ಭಾರತದ ಸುಪ್ರಸಿದ್ಧ ತಾಣಗಳು ಮತ್ತು ಅತ್ಯುತ್ತಮ ವಾಸ್ತುಶಿಲ್ಪದ ಅದ್ಭುತ ಸಾಧನೆಗಳಲ್ಲಿ ತಾಜ್‌ ಮಹಲ್ ಸಹ ಒಂದು. 1631ರಿಂದ 1653ರವರೆಗೆ ಮೊಗಲ್‌ ಚಕ್ರವರ್ತಿ ಷಾ ಜಹಾನ್‌ ನಿರ್ಮಿಸಿದ ತಾಜ್‌ ಮಹಲ್‌ ಆಗ್ರಾದಲ್ಲಿದೆ. ಮುಮ್ತಾಜ್‌ ಮಹಲ್‌ ಎಂದು ಚಿರಪರಿಚಿತಳಾಗಿದ್ದ ತನ್ನ ಮಡದಿ ಅರ್ಜುಮಂಡ್‌ ಬಾನು ಸ್ಮರಣಾರ್ಥವಾಗಿ ಈ ಸುಂದರ ಸ್ಮಾರಕ ನಿರ್ಮಿಸಿದ. ತಾಜ್‌ ಮಹಲ್‌ ಮುಮ್ತಾಜ್‌ ಮಹಲ್‌ಳ ಗೋರಿಯೂ ಹೌದು.

ಸ್ವರ್ಣ ಮಂದಿರ ವು ಭಾರತದ ಅತಿ ಪೂಜ್ಯ ದೇವಾಲಯಗಳಲ್ಲೊಂದು, ಹಾಗೂ ಸಿಖ್ಖರಿಗೆ ಅತಿ ಪವಿತ್ರ ಸ್ಥಳವಾಗಿದೆ. ಸ್ವರ್ಣ ಮಂದಿರವು ಭಾರತದ ಪಂಜಾಬ್‌ ರಾಜ್ಯದ ಅಮೃತ್‌ಸರ್‌ ನಗರದಲ್ಲಿದೆ.

ದೆಹಲಿಯಲ್ಲಿರುವ ಬಹಾಯಿ ಮಂದಿರ ವನ್ನು 1986ರಲ್ಲಿ ಪೂರ್ಣಗೊಳಿಸಲಾಯಿತು. ಇದು ಭಾರತೀಯ ಉಪಖಂಡದಲ್ಲಿ ಮಾತೃದೇವಾಲಯವೆಂದು ಪರಿಗಣಿಸಲಾಗಿದೆ. ವಾಸ್ತುಶಿಲ್ಪ ಕಲೆಗಾಗಿ ಹಲವು ಪ್ರಶಸ್ತಿಗಳು ಅದಕ್ಕೆ ಸಂದಿವೆ. ನೂರಾರು ದೈನಿಕ ಹಾಗೂ ಪತ್ರಿಕಾ ಲೇಖನಗಳಲ್ಲಿ ಈ ದೇವಾಲಯ ಉಲ್ಲೇಖಿತವಾಗಿದೆ.

(ಇದನ್ನು ತಾವರೆಯ ದೇವಾಲಯ ವೆಂದು ಕರೆಯಲಾಗಿದೆ .) 

ಮುಂಬಯಿಯಲ್ಲಿರುವ ವಿಕ್ಟೊರಿಯಾ ಟರ್ಮಿನಸ್‌ (ಇಂದು: ಛತ್ರಪತಿ ಶಿವಾಜಿ ಟರ್ಮಿನಸ್‌) ಬ್ರಿಟಿಷರಿಂದ ನಿರ್ಮಿತವಾಗಿತ್ತು. ಇದು UNESCO ವಿಶ್ವ ಪರಂಪರೆಯ ತಾಣವಾಗಿದೆ.

ತಾಜ್‌ ಮಹಲ್‌ ಪ್ಯಾಲೆಸ್ ಮುಂಬಯಿಯ ಒಂದು ಲಾಂಛನವಾಗಿದೆ.

ಪ್ರಕೃತಿ ಪ್ರವಾಸೋದ್ಯಮ

ಭಾರತದಲ್ಲಿ ಭೌಗೋಳಿಕ ವೈವಿಧ್ಯತೆ ಇದೆ. ಇದರಿಂದಾಗಿ ವಿವಿಧ ರೀತಿಯ ಪ್ರಕೃತಿ ಪ್ರವಾಸೋದ್ಯಮಗಳು ಹುಟ್ಟಿಕೊಂಡಿವೆ.

ಭಾರತದಲ್ಲಿ ವನ್ಯಜೀವಿಗಳು

ಭಾರತದಲ್ಲಿ ಪ್ರವಾಸೋದ್ಯಮ 
ಸುಂದರ್ಬನ್ಸ್‌ನಲ್ಲಿರುವ ರಾಯಲ್‌ ಬಂಗಾಳ ಹುಲಿ ವಿಶ್ವದ ಅತಿದೊಡ್ಡ ಮ್ಯಾನ್‌ಗ್ರೂವ್‌ ಕಾಡು, ಜೊತೆಗೆ UNESCO ವಿಶ್ವ ಪರಂಪರೆಯ ತಾಣ.

ಏಷ್ಯದ ಆನೆ, ಬಂಗಾಳಿ ಹುಲಿ, ಏಷ್ಯಾಟಿಕ್‌ ಸಿಂಹ, ಚಿರತೆ ಮತ್ತು ಭಾರತೀಯ ಘೇಂಡಾಮೃಗವೂ ಸೇರಿದಂತೆ, ಹಲವು ದೊಡ್ಡ ಗಾತ್ರದ ಸಸ್ತನಿಗಳು ಭಾರತದ ಕಾಡುಗಳಲ್ಲಿವೆ. ಇವುಗಳು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ದೇವತೆಗಳೊಂದಿಗೆ ಸಂಬಂಧಿತವಾಗಿವೆ. ಭಾರತದಲ್ಲಿ ಕಾಣಸಿಗುವ ಇತರೆ ದೊಡ್ಡ ಸಸ್ತನಿಗಳಲ್ಲಿ ಡಮೆಸ್ಟಿಕ್‌ ಏಷ್ಯನ್‌ ವಾಟರ್‌ ಬಫೆಲೊ, ಕಾಡಿನ ಏಷ್ಯನ್‌ ವಾಟರ್‌ ಬಫೆಲೊ, ನೀಲ್‌ಗಾಯ್‌, ಗೌರ್‌ ಹಾಗೂ, ಜಿಂಕೆ ಮತ್ತು ಸಾರಂಗಗಳ ಹಲವು ಜಾತಿಗಳು ಕಾಣಸಿಗುತ್ತವೆ. ನಾಯಿಯ ಜಾತಿಗೆ ಸೇರಿದ ಕೆಲವು ಪ್ರಾಣಿಗಳಾದ ಇಂಡಿಯನ್‌ ವುಲ್ಫ್‌, ಬಂಗಾಳಿ ನರಿ, ಗೊಲ್ಡನ್‌ ಜಕಾಲ್‌ (ಶೃಗಾಲ), ಧೋಳೆ ಅಥವಾ ಕಾಡುನಾಯಿಗಳೂ ಸಹ ವಿಶಾಲ ವ್ಯಾಪ್ತಿಯಲ್ಲಿ ಕಾಣಸಿಗುತ್ತವೆ. ಪಟ್ಟೆಯುಳ್ಳ ಕತ್ತೆಕಿರುಬಗಳು, ಮಕ್ಯಾಕ್‌ಗಳು, ಲಂಗೂರ್‌ಗಳು ಮತ್ತು ಮುಂಗುಸಿಗಳು ಇಲ್ಲಿ ಕಾಣಸಿಗುತ್ತವೆ. ರಕ್ಷಿತ ವನ್ಯಜೀವಿಗಳ ಹಲವು ಪ್ರಭೇದಗಳೂ ಭಾರತದಲ್ಲಿವೆ. ಭಾರತದ ರಕ್ಷಿತ ಕಾಡುಪ್ರದೇಶಗಳಲ್ಲಿ, 75 ಭಾರತೀಯ ರಾಷ್ಟ್ರೀಯ ಉದ್ಯಾನವನಗಳು ಮತ್ತು 421 ಅಭಯಾರಣ್ಯಗಳಿವೆ. ಇವುಗಳಲ್ಲಿ 19 ಪ್ರಾಜೆಕ್ಟ್‌ ಟೈಗರ್‌ ಯೋಜನೆಯ ವ್ಯಾಪ್ತಿಯಲ್ಲಿವೆ. ದೇಶದ ಹವಾಮಾನ ಮತ್ತು ಭೌಗೋಳಿಕ ವೈವಿಧ್ಯದ ಫಲವಾಗಿ, ಸುಮಾರು 350 ಸಸ್ತನಿಗಳು ಹಾಗೂ 1200 ಹಕ್ಕಿಗಳ ಪ್ರಭೇದಗಳಿಗೆ ಸೂರಾಗಿದೆ. ಉಪಖಂಡದಲ್ಲೇ ಇವು ಅಪರೂಪದ್ದಾಗಿವೆ.

ಪ್ರಸಿದ್ಧ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಭರತ್‌ಪುರ, ಕಾರ್ಬೆಟ್‌, ಕನ್ಹಾ, ಕಾಜಿರಂಗಾ, ಪೆರಿಯಾರ್‌, ರಣಥಂಬೊರ್‌ ಮತ್ತು ಸಾರಿಸ್ಕಾ ಸೇರಿವೆ. ವಿಶ್ವದ ಅತಿ ದೊಡ್ಡ ಮ್ಯಾನ್‌ಗ್ರೂವ್‌ ಕಾಡು ಸುಂದರಬನ್ಸ್‌ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿದೆ. ಸುಂದರ್‌ಬನ್ಸ್‌ UNESCO ವಿಶ್ವ ಪರಂಪರೆಯ ತಾಣವಾಗಿದೆ.

ಗಿರಿಧಾಮಗಳು

ಭಾರತದಲ್ಲಿ ಪ್ರವಾಸೋದ್ಯಮ 
ಹಿಮಾಚಲ ಪ್ರದೇಶದಲ್ಲಿರುವ ಖಜ್ಜಿಯಾರ್‌ ಗಿರಿಧಾಮದ ಬೇಸಿಗೆಕಾಲ ದೃಶ್ಯ

ಬ್ರಿಟಿಷ್‌ ಆಳ್ವಿಕೆಯ ಇಡೀ ಭಾರತದ ಬೇಸಿಗೆ ರಾಜಧಾನಿ ಶಿಮ್ಲಾದಂತೆ, ಹಲವು ಗಿರಿಧಾಮಗಳು ಭಾರತೀಯ ಪ್ರಾಂತ್ಯಗಳ ಅಥವಾ ರಾಜಾಳಿತದ ಪ್ರಾಂತ್ಯಗಳ ಬೇಸಿಗೆ ಕಾಲದ ರಾಜಧಾನಿಗಳಾಗಿದ್ದವು. ಭಾರತ ಸ್ವಾತಂತ್ರ್ಯ ಹೊಂದಿದಾಗಿನಿಂದಲೂ, ಬಹುಶಃ ಈ ಗಿರಿಧಾಮಗಳು ಬೇಸಿಗೆ ಕಾಲದ ರಾಜಧಾನಿಗಳಾಗಿಲ್ಲ. ಆದರೆ ಹಲವು ಗಿರಿಧಾಮಗಳು ಇಂದಿಗೂ ಬೇಸಿಗೆಯ ರೆಸಾರ್ಟ್‌ಗಳಾಗಿ ಜನಪ್ರಿಯವಾಗಿವೆ. ಪ್ರಸಿದ್ಧ ಗಿರಿಧಾಮಗಳು ಕೆಳಕಂಡಂತಿವೆ:

ಹಿಂದಿನ ಕಾಲದ ನೈಸರ್ಗಿಕ ಗಿರಿಧಾಮಗಳು ಮತ್ತು ಬೇಸಿಗೆ ಕಾಲದ ರಾಜಧಾನಿಗಳಲ್ಲದೆ, ನಿಸರ್ಗಪ್ರೇಮಿಗಳು ಭೇಟಿ ನೀಡಬಹುದಾದ ಇನ್ನೂ ಹಲವು (ನಾಗರಿಕ ಚಟುವಟಿಕೆಗಳಿಂದ ದೂರವಿರುವ) ಪ್ರಶಾಂತ ನಿಸರ್ಗ ಏಕಾಂತಸ್ಥ ಳಗಳು ಮತ್ತು ಇದೇ ರೀತಿಯ ಹಲವು ತಾಣಗಳಿವೆ. ಇವುಗಳಲ್ಲಿ ಅದ್ಭುತ ಚಂದ್ರನಚಿತ್ರಣವನ್ನು ನೆನಪಿಸುವ ಮತ್ತು ಹೋಲುವ ಲೆಹ್‌ ಮತ್ತು ಲದ್ದಾಖ್‌; ಹಿಮಾಲಯದಲ್ಲಿರುವ ಪುಟ್ಟ ನೈಸರ್ಗಿಕ ಏಕಾಂತ ಸ್ಥಳಗಳಾದ ದೂನಾಗಿರಿ, ಬೀನ್‌ಸಾರ್‌, ಮುಕ್ತೇಶ್ವರ್‌; ಹಾಗೂ, ನೈಸರ್ಗಿಕ ಸೌಂದರ್ಯ ಹೊಂದಿದ ಪಶ್ಚಿಮ ಘಟ್ಟ ಹಾಗೂ ಕೇರಳದ ಬೆಟ್ಟಗಳಲ್ಲಿರುವ ಹಲವಾರು ಖಾಸಗಿ ಏಕಾಂತಸ್ಥಳಗಳು ಸೇರಿವೆ.

ಕಡಲತೀರಗಳು

ಭಾರತದಲ್ಲಿ ಪ್ರವಾಸೋದ್ಯಮ 
ಭಾರತೀಯ ಕಡಲತೀರಗಳಲ್ಲಿ ಆನೆ ಮತ್ತು ಒಂಟೆ ಸವಾರಿಗಳು ಸಾಮಾನ್ಯ ದೃಶ್ಯ.ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳ ಭಾಗವಾಗಿರುವ ಹ್ಯಾವ್‌ಲಾಕ್‌ ದ್ವೀಪವನ್ನು ಇಲ್ಲಿ ತೋರಿಸಲಾಗಿದೆ.

ರಜತ/ಸ್ವರ್ಣ ವರ್ಣದ ಮರಳಿನ ಕಡಲತೀರಗಳಿಂದ ಹಿಡಿದು ಲಕ್ಷದ್ವೀಪ್‌ನ ಹವಳ ತೀರಗಳವರೆಗೆ ವೈವಿಧ್ಯಮಯ ಕಡಲತೀರಗಳು ಭಾರತದಲ್ಲಿವೆ. ಕೇರಳ ಮತ್ತು ಗೋವಾ ರಾಜ್ಯಗಳು ಕಡಲತೀರ ಪ್ರವಾಸೋದ್ಯಮದ ಲಾಭ ಸಂಭಾವ್ಯತೆಯನ್ನು ಚೆನ್ನಾಗಿ ಬಳಸಿಕೊಂಡಿವೆ. ಆದರೆ ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್‌, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಇನ್ನೂ ಸರಿಯಾಗಿ ಪ್ರವಾಸೋದ್ಯಮಕ್ಕಾಗಿ ಸರಿಯಾಗಿ ಬಳಸಿಕೊಂಡಿಲ್ಲದ ಹಲವು ಕಡಲತೀರಗಳಿವೆ. ಈ ರಾಜ್ಯಗಳ ಕಡಲತೀರಗಳು ಭವಿಷ್ಯದಲ್ಲಿ ಪ್ರವಾಸಿಗಳನ್ನು ಆಕರ್ಷಿಸಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿವೆ. ಪ್ರವಾಸೀ ಕಡಲತೀರಗಳು ಕೆಳಕಂಡಂತಿವೆ:

  • ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿನ ಕಡಲತೀರಗಳು
  • ಒಡಿಶಾಪುರಿ ಕಡಲತೀರಗಳು
  • ಪಶ್ಚಿಮ ಬಂಗಾಳದ ದಿಘಾ ಕಡಲತೀರಗಳು
  • ಗೋವಾದ ಕಡಲತೀರಗಳು
  • ಕೇರಳದ ಕೊವಲಂ ಕಡಲತೀರ
  • ಚೆನ್ನೈನ ಮರಿನಾ ಕಡಲತೀರ
  • ಮಹಾಬಲಿಪುರಂನಲ್ಲಿರುವ ಕಡಲತೀರದ ದೇವಾಲಯಗಳು
  • ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳು
  • ಮುಂಬಯಿನಲ್ಲಿರುವ ಕಡಲತೀರಗಳು
  • ಲಕ್ಷದ್ವೀಪ್‌
  • ದೀವ್‌ನ ಕಡಲತೀರಗಳು
  • ಪಶ್ಚಿಮ ಬಂಗಾಳದ ಮಿಡ್ನಾಪೋರ್‌ ಕಡಲತೀರಗಳು

ಸಾಹಸಿ ಪ್ರವಾಸೋದ್ಯಮ

ಭಾರತದಲ್ಲಿ ಪ್ರವಾಸೋದ್ಯಮ 
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸ್ಕೀಯಿಂಗ್‌

ಇದನ್ನೂ ನೋಡಿರಿ

  • ಭಾರತದಲ್ಲಿರುವ UNESCO ವಿಶ್ವ ಪಾರಂಪಾರಿಕ ಸ್ಥಾನಗಳ ಪಟ್ಟಿ
  • ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮ

ಉಲ್ಲೇಖಗಳು

ಟೆಂಪ್ಲೇಟು:Tourism in Asia

Tags:

ಭಾರತದಲ್ಲಿ ಪ್ರವಾಸೋದ್ಯಮ ರಾಜ್ಯವಾರು ಪ್ರವಾಸೋದ್ಯಮಭಾರತದಲ್ಲಿ ಪ್ರವಾಸೋದ್ಯಮ ಐತಿಹಾಸಿಕ ಸ್ಮಾರಕಗಳುಭಾರತದಲ್ಲಿ ಪ್ರವಾಸೋದ್ಯಮ ಪ್ರಕೃತಿ ಪ್ರವಾಸೋದ್ಯಮಭಾರತದಲ್ಲಿ ಪ್ರವಾಸೋದ್ಯಮ ಇದನ್ನೂ ನೋಡಿರಿಭಾರತದಲ್ಲಿ ಪ್ರವಾಸೋದ್ಯಮ ಉಲ್ಲೇಖಗಳುಭಾರತದಲ್ಲಿ ಪ್ರವಾಸೋದ್ಯಮ

🔥 Trending searches on Wiki ಕನ್ನಡ:

ಭಾವನಾ(ನಟಿ-ಭಾವನಾ ರಾಮಣ್ಣ)ಸಂಸ್ಕೃತಿಆಸ್ಟ್ರೇಲಿಯಾ ಕ್ರಿಕೆಟ್ ತಂಡಬಿ.ಎಸ್. ಯಡಿಯೂರಪ್ಪಪಂಚತಂತ್ರವ್ಯಂಜನಮೈಸೂರುಗೂಬೆಸಾಮಾಜಿಕ ಮಾರುಕಟ್ಟೆನಳಂದಬುಡಕಟ್ಟುಆದೇಶ ಸಂಧಿಹಿಂದೂ ಕೋಡ್ ಬಿಲ್ಕರ್ನಾಟಕಭಾರತದ ಉಪ ರಾಷ್ಟ್ರಪತಿಆಟಿಸಂಸೂರ್ಯಕೆ. ಎಸ್. ನರಸಿಂಹಸ್ವಾಮಿಯೂಟ್ಯೂಬ್‌ಶಿಕ್ಷಕಅದ್ವೈತಧರ್ಮಸ್ಥಳಪಶ್ಚಿಮ ಘಟ್ಟಗಳುಚಾಮರಾಜನಗರನ್ಯೂಟನ್‍ನ ಚಲನೆಯ ನಿಯಮಗಳುವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನನಿರ್ವಹಣೆ ಪರಿಚಯಕರ್ನಾಟಕ ರತ್ನಆಯ್ದಕ್ಕಿ ಲಕ್ಕಮ್ಮಭಾರತದ ರಾಷ್ಟ್ರಪತಿಮಾಸಕೈವಾರ ತಾತಯ್ಯ ಯೋಗಿನಾರೇಯಣರುಬುಧರಾಮಾಚಾರಿ (ಕನ್ನಡ ಧಾರಾವಾಹಿ)ಸವರ್ಣದೀರ್ಘ ಸಂಧಿಸತ್ಯಾಗ್ರಹಆರ್ಥಿಕ ಬೆಳೆವಣಿಗೆವಿಧಾನ ಸಭೆಮತದಾನಪಂಚ ವಾರ್ಷಿಕ ಯೋಜನೆಗಳುಹೊಯ್ಸಳ ವಿಷ್ಣುವರ್ಧನಬೆಂಗಳೂರುಭಾರತ ಸಂವಿಧಾನದ ಪೀಠಿಕೆಲಡಾಖ್ಗಳಗನಾಥಪ್ಯಾರಾಸಿಟಮಾಲ್ವೆಂಕಟೇಶ್ವರ ದೇವಸ್ಥಾನಕಲ್ಯಾಣ ಕರ್ನಾಟಕತ್ರಿಕೋನಮಿತಿಯ ಇತಿಹಾಸಕಾದಂಬರಿಶಿವಕುಮಾರ ಸ್ವಾಮಿಮೂಗುತಿಸಮುಚ್ಚಯ ಪದಗಳುವಿನೋಬಾ ಭಾವೆಹೈನುಗಾರಿಕೆಪು. ತಿ. ನರಸಿಂಹಾಚಾರ್ಗಣರಾಜ್ಯೋತ್ಸವ (ಭಾರತ)ಲಟ್ಟಣಿಗೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕೇಶಿರಾಜಭಾರತದ ಪಂಚಾಯತ್ ರಾಜ್ ವ್ಯವಸ್ಥೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಸೀತೆಭಾರತಶೈಕ್ಷಣಿಕ ಮನೋವಿಜ್ಞಾನತ್ರಯಂಬಕಂ (ಚಲನಚಿತ್ರ)ಸಂಧಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿರಾಜಕುಮಾರ (ಚಲನಚಿತ್ರ)ವಿಜ್ಞಾನವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಭಾಷಾಂತರನಾಲ್ವಡಿ ಕೃಷ್ಣರಾಜ ಒಡೆಯರು🡆 More