ಮಳೆಗಾಲ

ಸಮುದ್ರ, ಮಹಾಸಾಗರಗಳ ನೀರು ಆವಿಯಾಗಿ ಆಕಾಶ ತಲುಪಿ ಅಲ್ಲಿ ಮೋಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ.

ಮಳೆಯ ಉತ್ಪತ್ತಿ

ಮೋಡಗಳ ಸಾಂದ್ರತೆ ಹೆಚ್ಚಿ ಮತ್ತು ಅಲ್ಲಿನ ವಾತಾವರಣ ತಂಪಾದಾಗ ಮೋಡಗಳ ತೇವಾಂಶ ಹನಿಗೂಡಿ ಭೂಮಿಯನ್ನು ಸೇರುತ್ತದೆ. ನೆಲದ ಮೇಲೆ ಹೀಗೆ ಬಿದ್ದ ನೀರು ಹಳ್ಳ, ನದಿಗಳ ಮೂಲಕ ಮತ್ತೆ ಸಾಗರವನ್ನು ತಲುಪುವುದು. ಈ ಚಕ್ರ ಮತ್ತೆ ಮುಂದುವರಿಯುವುದು. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಜಲಚಕ್ರ ಎಂದು ಕರೆಯಲಾಗುತ್ತದೆ. ನೆಲದ ಮೇಲಿನ ಮರಗಿಡಗಳು ಸಹ ಗಣನೀಯ ಪ್ರಮಾಣದಲ್ಲಿ ತೇವಾಂಶವನ್ನು ವಾತಾವರಣಕ್ಕೆ ಸೇರಿಸುತ್ತವೆ.

ಮಳೆಗಾಲ 
ಭಾರತದ ವಿಂಧ್ಯ ಪರ್ವತಶ್ರೇಣಿಯಲ್ಲಿ ಮಳೆಗಾಲ

ಭಾರತದಲ್ಲಿ ಮಳೆಗಾಲ

ಪಶ್ಚಿಮ ದೇಶಗಳಲ್ಲಿ ವರ್ಷವನ್ನು ಸ್ಪ್ರಿಂಗ್, ಸಮ್ಮರ್, ಆಟಮ್, ವಿಂಟರ್, ಎಂದು ನಾಲ್ಕು ವಿಭಾಗ ಮಾಡಿದ್ದಾರೆ. ಆದರೆ ಭಾರತದಲ್ಲಿ ಹವಾಮಾನಕ್ಕೆ ಅನುಗುಣವಾಗಿ ಮೂರೇ ಕಾಲವನ್ನು ಹೇಳುವುದು ಬ್ರಿಟೀಷರ ಕಾಲದಿಂದ ರೂಢಿ ಆಗಿದೆ. ಅವು - ಬೇಸಿಗೆ ಕಾಲ, ಮಳೆಗಾಲ, ಛಳಿಗಾಲ. ಆದರೆ ಪ್ರಾಚೀನರು ಭಾರತ ಕಾಲಗಣನೆಯಲ್ಲಿ, ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಎಂದು ಆರು ಋತು ಅಥವಾ ಕಾಲವನ್ನು ವಿಭಾಗಿಸಿದ್ದಾರೆ. ಅದರಲ್ಲಿ ವರ್ಷ ಋತು ಮಳೆಯ ಋತು - ಅಂದರೆ ಶ್ರಾವಣ ಮತ್ತು ಭಾದ್ರಪದ ಮಾಸಗಳು. ಕರ್ನಾಟಕದ ಹಳ್ಳಿಗಳಲ್ಲಿ ಋತುಗಳು ಮತ್ತು ಮಳೆ ಮಹಾನಕ್ಷತ್ರಗಳು ಇನ್ನೂ ಪ್ರಚಲಿತದಲ್ಲಿವೆ. ಭರಣಿ ಮಳೆಗೆ ಬಿತ್ತನೆ, ಆರಿದ್ರ ಮಳೆಗೆ ಹಬ್ಬ, ಮೃಗಶಿರ (ಮಿರಗನ ಮಳೆ) ಇವು ವಿಶಿಷ್ಟವಾದವು.

ಭಾರತದಲ್ಲಿ ಮುಂಗಾರು ಮಳೆ

ಭಾರತಕ್ಕೆ ಮುಂಗಾರುಮಳೆ ಅತ್ಯಂತ ಪ್ರಮುಖವಾದುದು. ಭಾರತದ ಬಹಳಷ್ಟು ಬೆಳೆ, ನೀರಾವರಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆಗೆ ಅರಬ್ಬಿ ಸಮುದ್ರದಿಂದ ಹುಟ್ಟಿ ಬರುವ ನೈರುತ್ಯ ವಾಣಿಜ್ಯ ಮಾರುತಗಳು ತರುವ ಮುಂಗಾರು ಮಳೆ ಭಾರತದ ಜೀವ ಜಲಸಂಪನ್ಮೂಲ; ಜೀವನಾಧಾರ. ಅದು ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಆರಂಭವಾಗುತ್ತದೆ. ಹವಾಮಾನ ಇಲಾಖೆಯ ವರದಿಯಂತೆ ಈಚೆಗಿನ ೧೦ ವರ್ಷಗಳಲ್ಲಿ ಮುಂಗಾರುಮಳೆ ಮೇ ೨೩ ರಿಂದ - ಜೂನ್ ೧೦ ರ ಮಧ್ಯೆ ಕೇರಳಕ್ಕೆ ಪ್ರವೇಶಸಿ ಸೆಪ್ಟೆಂಬರ್, ಅಕ್ಟೋಬರ್ ವರೆಗೂ ಸುಮಾರು ನಾಲ್ಕು ತಿಂಗಳ ಕಾಲ ಇರುವುದು

ಮಳೆಗಾಲ- ೨೦೧೩ ರ ಅತಿವೃಷ್ಠಿ

ಚಿತ್ರ:Phailin27-10-2013.jpg.JPG
  • ವರ್ಷ ೨೦೧೩ ರ ಮಳೆಗಾಲದಲ್ಲಿ ಭಾರತದಲ್ಲಿ ಉತ್ತಮ ಮಳೆ ಆಗಿದ್ದರೂ ಅನೇಕ ಕಡೆ ಪ್ರಾಕೃತಿಕ ವಿಕೋಪ ಸಂಭವಿಸಿತು ; ಅದೂ ಉತ್ತರಾಖಾಂಡದಲ್ಲಿ ಭೀಕರ ರೌದ್ರ ನೃತ್ಯ ನಡೆಸಿತು. ೨೦೧೩, ಜೂನ್ ೧೪ ರಿಂದ ೧೭ರ ವರೆಗೆ ಸುರಿದ ಕುಂಭದ್ರೋಣ ಮಳೆಯಲ್ಲಿ ೧೧೦೦೦೦ (೧,೨೫,೦೦೦) ಕ್ಕೂ ಹೆಚ್ಚು ಜನ ಕೇದಾರನಾಥ ಯಾತ್ರಿಕರು ಕೇದಾರದಲ್ಲಿ ಸಿಕ್ಕಿಹಾಕಿಕೊಂಡು ಪ್ರಕೃತಿಯ ವಿಕೋಪಲ್ಲಿ ಜೀವನ್ಮರಣ ಹೋರಾಟ ನಡೆಸಬೇಕಾಯಿತು. ನೂರಾರು ಮನೆಗಳು ಕೊಚ್ಚಿ ಹೋದವು, ಶ್ರೀಶಂಕರರ ದೇವಾಲಯ ಮೂರ್ತಿಯೊಡನೆ ಪ್ರವಾಹದಲ್ಲಿ ಕೊಚ್ಚಿ ಹೋಯಿತು. ಕೇದಾರನಾಥ ದೇವಾಲಯ ಉಳಿದರೂ ಶಿಥಿಲವಾಯಿತು.
  • ಭಾರತ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು ೨೦೧೩ ಏಪ್ರಿಲ್ ನಿಂದ ಜುಲೈ ಅಂತ್ಯದ ವರೆಗೆ ೧೧೦೦ ಕ್ಕೂ ಹೆಚ್ಚು ಜನ ಸತ್ತಿದ್ದು ೧,೦೦,೦೦೦ ಕ್ಕೂ ಹೆಚ್ಚು ಮನೆಗಳು ಹಾನಿಗೀಡಾದವು. ಉತ್ತರಾಖಂಡ ಸರ್ಕಾರದ ಹೇಳಿಕೆ ಪ್ರಕಾರ ಆ ಪ್ರದೇಶದಲ್ಲಿ ೫೮೦ ಜನ ಸತ್ತಿದ್ದು ೫೪೭೪ ಜನ ನಾಪತ್ತೆಯಾಗಿದ್ದರು. ಸತ್ಯ ಸಂಗತಿ ಇದಕ್ಕೂ ಹೆಚ್ಚಿರಬಹುದೆಂದು ಊಹೆ. ಭಾರತದ ಹವಾಮಾನ ಇಲಾಖೆಯ ಹೇಳಿಕೆ ಪ್ರಕಾರ (ಶ್ರೀ ಎಸ.ಬಿ. ಗಾಂವಕರ್ ಹಿರಿಯ ವಿಜ್ಞಾನಿ) ಭಾರತವು ಒಟ್ಟಾರೆ ೨೦೧೩ ಆಗಸ್ಟ್ ಅಂತ್ಯಕ್ಕೆ ಶೇ.೧೧ ರಷ್ಟು ಹೆಚ್ಚು ಮಳೆಯನ್ನು ಪಡೆದಿತ್ತು. ದಿನಾಂಕ ೧ ಜೂನ್ ೨೦೧೩ ರಿಂದ ಆಗಸ್ಟ್ ಅಂತ್ಯಕ್ಕೆ (೩೧-೮-೨೦೧೩) ೭೮೧.೩ ಮಿಮೀ. ಮಳೆ ದಾಖಲಾಗಿತ್ತು. ಅದು ವಾರ್ಷಿಕ ಸರಾಸರಿ ೭೦೬ ಮಿ. ಮೀ.ಗಿಂತ ೭೪.೬ ಮಿ.ಮೀ. ಹೆಚ್ಚು. ಈಶಾನ್ಯ, ಮದ್ಯ ಮತ್ತು ದಕ್ಷಿಣ ಭಾರತವು ಕ್ರಮವಾಗಿ ೨೧%,೨೯%,೧೬% ರಷ್ಡು ಹೆಚ್ಚು ಮಳೆ ಪಡೆಯಿತು.
  • ೨೦೧೩ ರಲ್ಲಿ ಸುಮಾರು, ದೇಶದ ೮೭% ಭಾಗದಷ್ಟು ಪ್ರದೇಶ ಹೆಚ್ಚು ಅಥವಾ ವಾರ್ಷಿಕ ಸರಾಸರಿಯಷ್ಟು ಮಳೆ ಪಡೆಯಿತು. ಆದರೆ ೧೩% ಭಾಗದಷ್ಟು ಪ್ರದೇಶ ಕೊರತೆಯನ್ನು ಹೊಂದಿದೆ. ಕರ್ನಾಟಕದಲ್ಲಿ ಅನೇಕ ವರ್ಷಗಳ ನಂತರ ೨೦೧೩ ರಲ್ಲಿ ಉತ್ತಮ ಮಳೆ ಆಗಿದ್ದು ಜುಲೈ ತಿಂಗಳ ಅಂತ್ಯಕ್ಕೇ ಎಲ್ಲಾ ಅಣೆಕಟ್ಟುಗಳೂ ತುಂಬಿ ತುಳುಕಿದವು.
  • ಇಷ್ಟಾದರೂ ೨೦೧೩ರಲ್ಲಿ ಕರ್ನಾಟಕದಲ್ಲಿ ೫೨ ತಾಲ್ಲೂಕುಗಳಿಗೆ ಸಾಕಷ್ಟು ಮಳೆ ಆಗದೆ ಬರಗಾಲದ ಸಂಕಷ್ಟ ಒದಗಿತು. ಉತ್ತರ ಪ್ರದೇಶದಲ್ಲಿ ೧೭ ಲಕ್ಷ ಜನ ಅತಿ ವೃಷ್ಟಿಯ ಪರಿಣಾಮಗಳನ್ನು ಎದುರಿಸಿದರು. ಅಲ್ಲಿ ೨೮೦ ಜನ ಸಾವನ್ನಪ್ಪಿದರು.

ಫಾಯಿಲಿನ್ ತೂಫಾನು -ಸುಂಟರಗಾಳಿ

ªವಿಶೇಷ ಲೇಖನ:ಫಾಯಿಲಿನ್ ಚಂಡ ಮಾರುತ

ಮಳೆಗಾಲ 
ಒಡಿಶಾದಲ್ಲಿ ಅನಾಹುತ ಮಾಡಿದ ಚಂಡಮಾರತ 'ಫಯಲಿನ್' ಬಂಗಾಳ ಕೊಲ್ಲಿ 2/3-10-2013
  • ೧೨ ಅಕ್ಟೋಬರ್ ೨೦೧೩ ರಲ್ಲಿ ಬಂಗಾಳ ಕೊಲ್ಲಿಯಲ್ಲಿ ಆರಂಭವಾದ ತೂಫಾನು / ಸೈಕ್ಲೋನು ಒಡಿಶಾ, ಆಂಧ್ರದ ತೀರ ಪ್ರದೇಶಗಳಿಗೆ ಅಪ್ಪಳಿಸುವ ಸೂಚನೆಯನ್ನು ಹವಾಮಾನ ಇಲಾಖೆಯವರು ಪದೇ ಪದೇ ಟಿ.ವಿ ಯಲ್ಲಿ ಹೇಳುತ್ತಿದ್ದರು. ಅದು ಸುಮಾರು ೨೩೦- ೨೦೦ಕಿ.ಮೀ. ವೇಗದಲ್ಲಿ ಒಡಿಶಾ, ಆಂಧ್ರದ ತೀರ ಪ್ರದೇಶಗಳನ್ನು ಸಮೀಪಿಸುತ್ತಿತ್ತು. ಸುಮಾರು ೨೦,೦೦೦ ಸೈನ್ಯ ಪಡೆ ಸ್ಥಳೀಯ ಪೋಲೀಸ್ ಪಡೆ ಹಗಲು ರಾತ್ರಿ ಎನ್ನದೆ ಶ್ರಮಿಸಿ ೯.೧ ಲಕ್ಷ ಕರಾವಳಿ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದರು. ಇದು ಇತಿಹಾಸದಲ್ಲಿ ದಾಖಲೆ ಕಾರ್ಯ ಎನಿಸಿದೆ. ಅಲ್ಲಿಯ ಜಿಲ್ಲಾಧಿಕಾರಿಗಳು ೯೬ ಗಂಟೆಗಳ ಕಾಲ ಅವಿರತ ನಿದ್ದೆ ಬಿಟ್ಟು ಕೆಲಸ ಮಾಡಿದರೆಂದು ಮಾಧ್ಯಮಗಳು ಹೊಗಳಿದವು. (ಒಡಿಶಾದ ಗಂಜಾಮ್ ಜಿಲ್ಲೆಯ ಕ್ರಿಶನ್ ಕುಮಾರ್ ಅಲ್ಲಿಯ ಪೊಲೀಸ್ ಅಧಿಕಾರಿಗಳ ಜೊತೆ ಹಗಲುರಾತ್ರಿಯೆನ್ನದೆ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಪರಿಹಾರ ಕೈ ಗೊಂಡರು. -ವರದಿ).
  • ಆದರೆ ಆ ತೂಫಾನಿನಿಂದ ಸಾವಿನ ಸಂಖ್ಯೆ ಕೇವಲ ೩೭ ಆದರೂ, ತೂಫಾನು ಬಂದಾಗ ಸುರಿದ ಮಳೆಯು ಭೀಕರ ಪ್ರವಾಹ ಉಂಟುಮಾಡಿ ಆ ಕರಾವಳಿಯ ಮನೆ ಗುಡಿಸಲುಗಳನ್ನು ನಾಶ ಮಾಡಿತು. ನಂತರ ತಮ್ಮ ಊರಿಗೆ ಹಿಂತಿರುಗಿದ ೨.೫ ಲಕ್ಷ ಜನ ಮನೆ-ಮಠ, ಆಹಾರವಿಲ್ಲದೆ, ಅತೀವ ತೊಂದರೆಗೆ ಒಳಗಾದರು. ಪ್ರವಾಹದಲ್ಲಿ ಮನೆ-ರಸ್ತೆಗಳಲ್ಲಿ ನೀರು ನಿಂತು ೫ ದಿನ ಆದರೂ ಇಳಿದಿರಲಿಲ್ಲ. ಒಡಿಶಾ, ಆಂಧ್ರ, ಕೇಂದ್ರ ಸರ್ಕಾರಗಳು ತಮ್ಮ ಪೂರ್ಣ ಶಕ್ತಿಯನ್ನು ಉಪಯೋಗಿಸಿ ಜನರ ಸಂಕಷ್ಟ ನಿವಾರಣೆಗೆ ಶ್ರಮಿಸಿದವು.

ಹಿಂಗಾರು ಮಳೆ

  • ಭಾರತಕ್ಕೆ ಮುಂಗಾರು ಮಳೆ ಎಂದರೆ ನೈರುತ್ಯ ದಿಕ್ಕಿನಿಂದ ಬರುವ ಮಳೆ. ನೈರುತ್ಯ ಮಾನ್ಸೂನ್ ಮಾರುತಗಳು (ಪಶ್ಚಿಮ ದಕ್ಷಿಣದ ಮಧ್ಯದ ದಿಕ್ಕು) ಜೂನ್ ತಿಂಗಳಿನಿಂದ ಆರಂಭವಾಗಿ ಅಕ್ಟೋಬರ್ ೧೫ರ ವರೆಗೆ ಇರುತ್ತದೆ. ಇದು ಭಾರತದ ಪಶ್ಚಿಮದ ದಿಕ್ಕಿನಿಂದ ಅರಬ್ಬಿ ಸಮುದ್ರದಲ್ಲಿ ಆರಂಭವಾಗಿ ಭಾರತದ ಪಶ್ಚಿಮದ ತೀರಗಳಿಗೆ ಹೆಚ್ಚಾಗಿಯೂ ಉಳಿದ ಭಾಗಗಳಿಗೆ ಸಾಧಾರಣವಾಗಿಯೂ ಮಳೆ ತರುವುದು. (ಮುಂಗಾರು=ತೆಂಕಣ(ದಕ್ಷಿಣ) ಮತ್ತು ಪಡುವಣ(ಪಶ್ಚಿಮ) ದಿಕ್ಕುಗಳ ನಡುವಿನ ದಿಕ್ಕು southwest mosoon)
  • ಹಿಂಗಾರು ಮಳೆ ಅಥವಾ ಈಶಾನ್ಯ ಮಾರುತಗಳಿಂದ (ಉತ್ತರ ಮತ್ತು ಪೂರ್ವದ ಮಧ್ಯದ ದಿಕ್ಕು) ಬರುವ ಮಳೆ ಉತ್ತರ ದಿಕ್ಕಿನಿಂದ ಮಾರುತಗಳು (ಗಾಳ) ಆರಂಭವಾಗಿ ವಾಯು ಭಾರ ಕುಸಿತವಿರುವ ಬಂಗಾಳ ಕೊಲ್ಲಿ ಪ್ರವೇಶಮಾಡಿ ಭಾರತದ ಪೂರ್ವ ತೀರದ ರಾಜ್ಯಗಳಿಗೆ ಮಳೆ ತರುವುದು. ಮಧ್ಯ ಭಾಗಕ್ಕೆ ಸಾಧಾರಣ ಮಳೆ ತರುವುದು.
  • ಭಾರತ ಭೂಮಿಗೆ ಮುಂಗಾರು ಪ್ರಧಾನ ಮಳೆ ಆಗಿದೆ. ಈ ಬಾರಿ (೨೦೧೩) ಅಕ್ಟೋಬರ್ ಮೂರನೇ ವಾರ ಆರಂಭವಾಗುವುದಕ್ಕೂ ಸ್ವಲ್ಪ ಮುಂಚೆಯೇ ಹಿಂಗಾರು ಮಳೆ ಆರಂಭವಾಗಿದೆ. ಇದು ಪೂರ್ವ ಕರಾವಳಿಯ ರಾಜ್ಯಗಳ ಭಾಗ್ಯವಿಧಾತ. :(ಬಡಗಣ(ಉತ್ತರ) ಮತ್ತು ಮೂಡಣ (ಪೂರ್ವ) ದಿಕ್ಕುಗಳ ನಡುವಿನ ದಿಕ್ಕು : northeast mosoon)

ಹೆಲೆನ್ ಚಂಡಮಾರುತ

೧೧-೩-೨೦೧೪-ಸುದ್ದಿ

    ಅಕಾಲಿಕ ಮಳೆ - ಮಾರ್ಚಿ ೨೦೧೪ರಲ್ಲಿ ಆದ ಉತ್ತರ ಕರ್ನಾಟಕದ ವಿಜಾಪುರ ಜಿಲ್ಲೆಯೊಂದರಲ್ಲಿಯೇ ಬಿದ್ದ ಅಕಾಲಿಕ ಆಲಿಕಲ್ಲಿನಿಂದ ಕೂಡಿದ ಉತ್ಪಾತ ಮಳೆಯಿಂದಾಗಿ ಸುಮಾರು ೧.೨೨ ಲ.ಎಕರೆ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಿದ್ದಾರೆ. ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ ನೀರುಳ್ಳಿ ಮತ್ತಿತರ ಬೆಳೆಗಳು ೧.೮೨ ಟನ್ ಗಳಷ್ಟು ಸುಮಾರು ರೂ.೩೩೭ಕೋಟಿ ಬೆಲೆಯದು. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಹೇಳಿಕೆ.(ಪ್ರಜಾವಾಣಿ ೧೨-೩-೨೦೧೪) ಈ ಮಳೆಯಿಂದ, ಬೆಳಗಾವಿ ,ವಿಭಾಗದ ೯ ಜಿಲ್ಲೆಗಳಲ್ಲಿ ಹನ್ನೊಂದು ಜನ ಸತ್ತಿದ್ದಾರೆ. ೧೫೭ ಜಾನುವಾರುಗಳು ಸತ್ತಿವೆ. ೫೫೧ ಮನೆಗಳು ಹಾನಿಗೊಳಗಾಗಿವೆ. ಇನ್ನೂ ಹೆಚ್ಚಿನ ಹಾನಿಯಾಗಿದ್ದು ಪೂರ್ಣಮಹಿತಿ ಪಡೆಯಲು ಪ್ರಯತ್ನ ನಡೆಯಿತು.
  • ಪರಿಹಾರ ನಿಯಮ : ದ್ರಾಕ್ಷಿ, ದಾಳಿಂಬೆ ಮಾವು, ಅಡಿಕೆ, ತೆಂಗು ಇತ್ಯಾದಿ ತೋಟದ ಬೆಳಿಗಳಿಗೆ ರೂ.೧೨೦೦೦/- ಕೊಡಲು ಅವಕಾಶವಿದೆ . ಮಳೆಮಿಶ್ರಿತ ಬೆಳೆಗಳಿಗೆ ೪೫೦೦/- ನೀರಾವರಿ ಬೆಳೆಗೆ ರೂ. ೮೦೦೦/- ಆದರೆ ಸರಕಾರ ಮನಸ್ಸು ಮಾಡಬೇಕು. ಚುನಾವಣೆ ಇದ್ದರೂ ಪರಿಹಾರ ಕೊಡಲು ಅವಕಾಶವಿದೆಯೆಂದು ಹೇಳಲಾಗಿದೆ.(೧೧-೩-೨೦೧೪ಪ್ರಜಾವಾಣಿ)
  • ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಹಾನಿಗೊಳ­ಗಾದ ರೈತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಆಲಿಕಲ್ಲು ಮಳೆಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿರುವ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಸಂತ್ರಸ್ತ ರೈತರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಅನುಸರಿಸಿದ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
  • ಬಾಗಲಕೋಟೆ, ಬೆಳಗಾವಿ, ಬೀದರ್‌, ವಿಜಾಪುರ, ಗುಲ್ಬರ್ಗಾ, ಕೊಪ್ಪಳ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿತ್ತು. ಒಟ್ಟು 1.68 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಿ ಇದರಿಂದ ರೂ. 691 ಕೋಟಿಯಷ್ಟು ನಷ್ಟ ಆಗಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಮಾಡಿತು.

೨೦೧೪ ರ ಮುಂಗಾರು

  • ಜೂನ್ ೨೦೧೪ ಭಾರತದ ಅತ್ಯಂತ ಪ್ರಾಮುಖ್ಯವಾದ ಮುಂಗಾರು ಮಳೆ ಈ ಬಾರಿ ಸಮಯಕ್ಕೆ ಸರಿಯಾಗಿ ಕೇರಳಕ್ಕೆ ಕಾಲಿರಿಸಿ ಅಲ್ಲಿ ಸಾಕಷ್ಟು ಮಳೆಯಾಯಿತು. ಆದರೆ ಜೂನ್ ತಿಂಗಳಲ್ಲಿ /ಅದರ ಅಂತ್ಯಕ್ಕೆ ಶೇಕಡಾ ೫೪/ 54 ರಷ್ಟು ಮಳೆಯಾಗಿ ಶೇ. ೪೭/ 47 ರಷ್ಟು ಕೊರತೆಯಾಗಿತ್ತು. ರಾಷ್ಟೀಯ ಹವಾಮಾನ ಮುನ್ನೊಟ ಕೇಂದ್ರದ, ವರದಿಯಂತೆ ಸ್ಥಿತಿ ನಿರಾಶಾದಾಯಕವಾಗಿತ್ತು.
  • ಹೆಚ್ಚು ಧಾನ್ಯ ಬೆಳೆಯವ ಪಂಜಾಬ್, ಹರಿಯಾಣ ಇತ್ಯಾದಿ- ವಾಯವ್ಯ ಭಾಗದಲ್ಲಿ ಮಳೆ ಬಹಳ ಕೊರತೆಯಾಗಿ ಬಿತ್ತನೆ ತಡವಾಯಿತು. ಹವಾಮಾನ ಅಧಿಕಾರಿ ಮದ್ಯಭಾರತದಿಂದ ಪ್ರತಿರೋಧ ಗಾಳಿ ಬೀಸುತ್ತಿರುವುದರಿಂದ ಮಳೆ ಮಾರತಗಳು ವಾಯವ್ಯ ಭಾಗಕ್ಕೆ ಹೋಗುತ್ತಿಲ್ಲ ಎಂದರು. ದೇಶದ ಬಹು ಭಾಗದಲ್ಲಿ ಹತ್ತಿ, ದ್ವಿದಳ ಧಾನ್ಯ, ಬಿತ್ತನೆ ತಡವಾಯಿತು. ಇನ್ನೂ ಅಣೆಕಟ್ಟೆಗಳಿಗೆ ನೀರು ಬಂದಿರಲಿಲ್ಲ. ಸರ್ಕಾರಕ್ಕೂ ಜನತೆಗೂ ಚಿಂತೆಯಾಗಿತ್ತು.
  • ಹಿಂದಿನ ವರ್ಷ ಈರುಳ್ಳಿ ಟೊಮೇಟೋ, ತರಕಾರಿಗಳ ಬೆಲೆ ಕೆ.ಜಿ.ಗೆ ೧೦೦ ರೂಪಾಯಿಗೆ ಹೋಗಿದ್ದು ಈ ಬಾರಿ ರೂಪಾಯಿ ೨೦೦/- (200/-)ಕ್ಕೆ ಹೋಗಬಹುದೆಂದು ಮಾದ್ಯಮಗಳು ಊಹಿಸಿದ್ದವು. ಎಷ್ಟೇ ನೀರಾವರಿ ವ್ಯವಸ್ಥೆ ಇದ್ದರೂ ಮುಂಗಾರು ವಿಫಲವಾದರೆ ಭಾರತದ ಅರ್ಥ ವ್ಯವಸ್ಥೆ ಏರುಪೇರಾಗುವುದು ಸಾಮಾನ್ಯ.
  • ಮಹಾರಾಷ್ರ , ಉತ್ತರ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣಾ, ಒಡಿಶಾ, ಹೊಸ ಆಂಧ್ರ, ಉತ್ತರ ಭಾಗದ ಎಲ್ಲಾ ರಾಜ್ಯಗಳು, ಈಶಾನ್ಯ ರಾಜ್ಯಗಳು, ಶೇ. ೬೦/60 ಕ್ಕಿಂತ ಕಡಿಮೆ ಮಳೆ ಪಡೆದವು.

೨೦೧೪ ಜುಲೈ-ಕರ್ನಾಟಕದಲ್ಲಿ ಮಳೆಗಾಲ

  • ೨೦೧೪ ಜೂನ್‌ ತಿಂಗಳಲ್ಲಿ ವಾಡಿಕೆಯಂತೆ ೧೯೪ ಮಿ.ಮೀ. ಮಳೆ ಆಗಬೇಕಿತ್ತು. ಆದರೆ, ೭೮ ಮಿ.ಮೀ. ಮಾತ್ರ ಮಳೆ ಸುರಿದಿದೆ. ಕಳೆದ ೫೨ ವರ್ಷಗಳಲ್ಲಿ ಜೂನ್‌ ತಿಂಗಳಲ್ಲಿ ರಾಜ್ಯ ಇಷ್ಟೊಂದು ಕಡಿಮೆ ಮಳೆಯನ್ನು ಕಂಡಿರಲಿಲ್ಲ.
  • ಆ ವರ್ಷ ದಕ್ಷಿಣ ಒಳನಾಡು ಹೊರತುಪಡಿಸಿದರೆ ರಾಜ್ಯದ ಇತರ ಭಾಗಗಳಲ್ಲಿ ಶೇ ೪೫ ರಷ್ಟು ಮಳೆ ಕೊರತೆ ಉಂಟಾಗಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆ­ಯಾಗಿತ್ತು. ಮುಂಗಾರು ಹಂಗಾಮಿನಲ್ಲಿ ೭೪ ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯಿದ್ದುದು, ೧೮.೯೨ ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ­ಯಾಗಿತ್ತು.
  • ರಾಜ್ಯದಲ್ಲಿ ೧.೩೯ ಕೋಟಿ ಜಾನುವಾರುಗಳಿದ್ದು, ೭೨.೭೫ ಲಕ್ಷ ಟನ್‌ ಮೇವಿನ ಸಂಗ್ರಹ ಇತ್ತು. ಅದು ೧೫ ವಾರ­ಗಳಿಗೆ ಮಾತ್ರಾ ಸಾಕಾಗುತ್ತಿತ್ತು(೧೨-೭-೨೦೧೪ ರಿಂದ). ಪ್ರಮುಖ ಜಲಾಶಯಗಳ ನೀರಿನ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 864 ಟಿಎಂಸಿ ಅಡಿ ಇದ್ದುದು, ಆಗ ೧೬೬ ಟಿಎಂಸಿ ಅಡಿ ಮಾತ್ರ ನೀರು ಲಭ್ಯವಿತ್ತು.
  • ೨೦೧೩ರಲ್ಲಿ ಅದೇ ದಿನ ೨೫೪ ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು. ೨೦೧೪ ರಲ್ಲಿ ೩,೫೫೪ ನೀರಾವರಿ ಕೆರೆಗಳಿದ್ದು, ಎಂಟು ಮಾತ್ರ ತುಂಬಿದವು. ೧೫೯ ಕೆರೆಗಳು ಶೇ ೫೦ರಷ್ಟು ಮತ್ತು ೧,೦೬೨ ಕೆರೆಗಳು ಶೇ ೩೦ರಷ್ಟು ತುಂಬಿದ್ದರೆ, ಉಳಿದ ೨,೩೨೮ ಕೆರೆಗಳು ಖಾಲಿಯಾ­ಗಿದ್ದವು. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಗರಿಷ್ಠ ನೀರಿನ ಸಾಮರ್ಥ್ಯ ೧೧೫ ಟಿಎಂಸಿ ಇದ್ದು, ೨೦೧೪ ಜೂನ್ ನಲ್ಲಿ ೩೪ ಟಿಎಂಸಿ ಮಾತ್ರ ಲಭ್ಯವಿತ್ತು.
  • ಕೃಷ್ಣಾ ಜಲಾನಯನ ಪ್ರದೇಶಗಳ ಜಲಾಶಯಗಳ ಗರಿಷ್ಠ ಸಾಮರ್ಥ್ಯ ೪೨೧ ಟಿಎಂಸಿ ಇದ್ದು, ಆದೇ ಜೂನ್ ನಲ್ಲಿ ಕೇವಲ ೮೩ ಟಿಎಂಸಿ ನೀರು ಲಭ್ಯವಿತ್ತು. ರಾಜ್ಯದ ಎಲ್ಲಾ ಜಲಾಶಯಗಳ ಗರಿಷ್ಠ ಸಾಮರ್ಥ್ಯ ೮೬೪ ಟಿಎಂಸಿ ಇದ್ದು, ಹಿಂದಿನ ವರ್ಷ ಜೂ.೧೦ ರಂದು ೨೫೪ ಟಿಎಂಸಿ ಇತ್ತು.೨೦೧೪ ರ ವರ್ಷದಲ್ಲಿ ೧೬೬ ಟಿಎಂಸಿ ಇದ್ದು, ಅಲ್ಲಿಗೆ ೮೮ ಟಿಎಂಸಿ ನೀರಿನ ಕೊರತೆಯಾಗಿತ್ತು.

ಸೆಪ್ಟಂಬರ್ ೨- ೨೦೧೪ ರಿಂದ ಕಾಶ್ಮೀರದಲ್ಲಿ ಎಂದೂ ಕಾಣದ ಪ್ರವಾಹ

ಕನ್ನಡಿಗರ ರಕ್ಷಣೆ

  • ಸೆಪ್ಟೆಂಬರ್ ೨೦೧೪ರಲ್ಲಿ ಜಮ್ಮು ಮತ್ತು ಕಾಶ್ಮೀರದ ಭಾರಿ ಪ್ರವಾಹದಲ್ಲಿ ಸಿಲುಕಿರುವ ೬೬೦ ಕನ್ನಡಿಗರ ಪೈಕಿ ೫೬೦ ಜನರನ್ನು ರಕ್ಷಣೆ ಮಾಡಲಾಯಿತು. ಶ್ರೀನಗರ ತಲುಪಿದ ಎಲ್ಲಾ ಕನ್ನಡಿಗರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಟ್ಟಿದ್ದು, ಅವರು ಕರ್ನಾಟಕಕ್ಕೆ ಮರಳಲು ಬೇಕಾದ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರದ ವತಿಯಿಂದ ಮಾಡಲಾಗಿತ್ತು.
  • ಹುಬ್ಬಳ್ಳಿ-ಧಾರವಾಡ ಪ್ರಾದೇಶಿಕ ಆಯುಕ್ತರಾದ ರಮಣದೀಪ್ ಮತ್ತು ದೆಹಲಿಯ ಕರ್ನಾಟಕ ಭವನದ ಮೋಹನ್ ಕುಮಾರ್ ಅವರು ಕಾಶ್ಮೀರದಲ್ಲಿ ಕನ್ನಡಿಗರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ರಮಣದೀಪ್ ಅವರು ಶ್ರೀನಗರದ ವಿಮಾನ ನಿಲ್ದಾಣದಿಂದ ಕನ್ನಡಿಗರನ್ನು ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
  • ಕಾಶ್ಮೀರದಲ್ಲಿ ರಕ್ಷಿಸಲಾದ ೮೦ ಕನ್ನಡಿಗರು ದೆಹಲಿಯ ಕರ್ನಾಟಕ ಭವನದಲ್ಲಿದ್ದರು, ಅವರಿಗೆ ಅಲ್ಲಿ ಆಹಾರ, ನೀರು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಅವರು ಬೆಂಗಳೂರಿಗೆ ಮರಳಲು ವ್ಯವಸ್ಥೆ ಮಾಡಲಾಗಿತ್ತು, ನಂತರ ಅವರು ಕರ್ನಾಟಕಕ್ಕೆ ಆಗಮಿಸಿದರು.

(ಒನ್ ಇಂಡಿಯಾ ಸುದ್ದಿ-[೧]

೨೦೧೭ ರ ಅತಿವೃಷ್ಠಿ

  • ೨೦೧೭ ಆಗಸ್ಟ್ ತಿಂಗಳಲ್ಲಿ ಈಶಾನ್ಯ ರಾಜ್ಯಗಳ ಜೊತೆ ಬಿಹಾರವೂ ಅತಿವೃಷ್ಟಿಯ ವಿಕೋಪಕ್ಕೆ ಸಿಲುಕಿತು. ಬಿಹಾರದಲ್ಲಿ ಆಗಸ್ಟ್ ೨೨ ರ ಹೊತ್ತಿಗೆ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ೩೧೪ಕ್ಕೆ ತಲುಪಿತ್ತು ಮತ್ತು ಬಿಹಾರದ ೧೮ ಜಿಲ್ಲೆಗಳಲ್ಲಿ ಪ್ರವಾಹದಿಂದ ಒಂದು ಕೋಟಿಗೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದರು. ೧೦೮೫ ನಿರಾಶ್ರಿತರ ಕೇಂದ್ರಗಳಲ್ಲಿ ೨.೨೯ ಲಕ್ಷ ಜನ ಆಶ್ರಯ ಪಡೆದಿದ್ದರು.
  • ಸೇತುವೆ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ದೃಶ್ಯ- ವಿಡಿಯೊ:[೨]
  • ೨೦೧೭ ಅತಿವೃಷ್ಠಿ
  • 2017 Bihar Floods/ಬಿಹಾರದಲ್ಲಿ ಅತಿವೃಷ್ಟಿ
  • en:2014 India–Pakistan floods

೨೦೧೮ ರ ಕೇರಳದ ಅತಿವೃಷ್ಠಿ

ಮಳೆಗಾಲ 
೨೦೧೮ ಜುಲೈ ಆಗಸ್ಟ್ ತಿಂಗಳ ಅತಿವೃಷ್ಠಿ- SNC Initiates Operation Madad in Kerala-opmadad70
  • ಕೇರಳದಲ್ಲಿ ೨೦೧೮ರ ಮೇ ೩೦ ರಿಂದ ಮತ್ತು ಆಗಸ್ಟ್ ೨೦ ರ ವರೆಗೆ ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತದ ಪರಿಣಾಮವಾಗಿ ಭಾರಿ ಅನಾಹುತಗಳು ಸಂಭವಿಸಿವೆ. ಮೇ ೩೦ರಿಂದ ಆಗಸ್ಟ್ ೨೦ ರ ವರೆಗೆ ಒಟ್ಟು ೩೭೩ ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತಿಳಿಸಿದೆ. ಕೇರಳ ರಾಜ್ಯದ ೧೪ ಜಿಲ್ಲೆಗಳಲ್ಲಿ ಒಟ್ಟು ೮೭ ಜನರು ಗಾಯಗೊಂಡಿದ್ದು, ೩೨ ಜನರು ಕಾಣೆಯಾಗಿದ್ದಾರೆ ಎಂದು ಎನ್‌ಡಿಎಂಎ ೨೧-೮-೨೦೧೮ ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
  • ಅತಿವೃಷ್ಟಿಯ ಕಾರಣ ರಾಜ್ಯದ ೧೪ ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಉಂಟಾಗಿ ೫೪.೧೧ ಲಕ್ಷ ಜನರು ತೊಂದರೆಗೀಡಾದರು. ರಾಜ್ಯದಲ್ಲಿ ೫೬೪೫ ನಿರಾಶ್ರಿತರ ಶಿಬಿರಗಳನ್ನು ಸ್ಥಾಪಿಸಲಾಯಿತು. ಅದರಲ್ಲಿ ೧೨.೪೭ ಲಕ್ಷ ಜನರು ಆಶ್ರಯ ಪಡೆದರು. ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ೫೯ ತಂಡ ಹಾಗೂ ೨೦೭ ದೋಣಿಗಳನ್ನು ನಿಯೋಜನೆ ಮಾಡಿತು.
  • ನೌಕಾಪಡೆ ಸಿಬ್ಬಂದಿ ಮತ್ತು ವೈದ್ಯರನ್ನು ಒಳಗೊಂಡ ಒಂದು ತಂಡವನ್ನು ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕಾಗಿ ನಿಯೋಜನೆ ಮಾಡಲಾಯಿತು, ಎಂದು ಎನ್‌ಡಿಎಂಎ ತಿಳಿಸಿದೆ.

ಮಳೆ-ನಷ್ಟ-ಕಷ್ಟದ ವಿವರ

  • ೩೦-೮-೨೦೧೮:
  • ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಮೃತಪಟ್ಟವರು- ಕನಿಷ್ಠ ೪೮೩ ಜನ ಮೃತಪಟ್ಟಿದ್ದಾರೆ. ೧೫ ಜನ ಪತ್ತೆಯಾಗಿಲ್ಲ.
  • ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದವರು - ೧೪.೫೦ ಲಕ್ಷ ಜನ.
  • 305 ಪರಿಹಾರ ಶಿಬಿರಗಳಲ್ಲಿ ೫೯೨೯೬ ಜನ ಇದ್ದಾರೆ.
  • ಒಟ್ಟು ೫೭ ಸಾವಿರ ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ.
  • ಆಗಸ್ಟ್‌ ೯ರಿಂದ ೧೫ರವರೆಗೆ 98.5 ಮಿ.ಮೀ. ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ಅವಧಿಯಲ್ಲಿ 352.2 ಮಿ.ಮೀ. ಮಳೆಯಾಗಿದೆ.
  • ಕೇರಳದಲ್ಲಿ ೨೦೧೮ ಆಗಸ್ಟ್‌ನಲ್ಲಿ ಆದ ಅತಿವೃಷ್ಟಿಯಿಂದ ಮತ್ತು ಪ್ರವಾಹದಿಂದ ಅಲ್ಲಿ ರೂ. 31,000 ಕೋಟಿಯಷ್ಟು ಹಾನಿಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ವಿಕೋಪದ ನಂತರ ರಾಜ್ಯದ ಮರುನಿರ್ಮಾಣಕ್ಕೆ ಅಗತ್ಯವಿರುವ ಹಣ, ನೀತಿಗಳು ಮತ್ತು ಯೋಜನೆಗಳ ಬಗ್ಗೆ ವಿಶ್ವಸಂಸ್ಥೆಯು ಅಧ್ಯಯನ ನಡೆಸಿದೆ. ಈ ಅಧ್ಯಯನದ ವರದಿಯನ್ನು ಭಾರತಕ್ಕೆ ವಿಶ್ವಸಂಸ್ಥೆಯ ಸಂಯೋಜನಾಧಿಕಾರಿ ಯೂರಿ ಅಫನಾಸೀವ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಿದ್ದಾರೆ. ಮರುನಿರ್ಮಾಣದಲ್ಲಿ ಕೇರಳಕ್ಕೆ ವಿಶ್ವಸಂಸ್ಥೆಯಿಂದ ಹಣಕಾಸು ಮತ್ತು ವಿಶ್ವದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒದಗಿಸಲಾಗುತ್ತದೆ ಎಂದು ಯೂರಿ ಅವರು ವಿಜಯನ್ ಅವರಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
  • ವರದಿ:
  1. ೪೮೩ ಮಳೆಗೆ ಬಲಿಯಾದವರು
  2. ೩೪೧ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ
  3. ೧.೭೪ ಲಕ್ಷ ಕಟ್ಟಡಗಳು ಧ್ವಂಸವಾಗಿವೆ/ಹಾನಿಯಾಗಿವೆ
  4. ೫೪ ಲಕ್ಷ ಜನ ಮಳೆಯಿಂದ ತೊಂದರೆಗೆ ಒಳಗಾದವರು
  5. ೧೪ ಲಕ್ಷ ಮಂದಿಗೆ ಪುನರ್ವಸತಿ ಕಲ್ಪಿಸಲಾಗಿದೆ
  6. ರೂ. ೧೦೦೪೬ ಕೋಟಿ ರಸ್ತೆ, ಹೆದ್ದಾರಿಗಳಿಗೆ ಹಾನಿಯಾಗಿರುವ ಹಾನಿ
  7. ರೂ.೫೪೪೩ ಕೋಟಿ ಮನೆ ಮತ್ತು ಇತರ ಕಟ್ಟಡಗಳು ಧ್ವಂಸವಾಗಿರುವ ಕಾರಣ ಆಗಿರುವ ನಷ್ಟ
  8. ರೂ.೪೪೯೮ ಕೋಟಿ ಕೃಷಿ, ಮೀನುಗಾರಿಕೆ ಮತ್ತು ಹೈನುಗಾರಿಕೆ ಕ್ಷೇತ್ರಕ್ಕೆ ಆಗಿರುವ ನಷ್ಟದ ಮೊತ್ತ
  • ನಾಲ್ಕು ಅಂಶಗಳ ಕ್ರಿಯಾ ಯೋಜನೆಗೆ ಶಿಫಾರಸು
  • ೧. ಜಲಸಂಪನ್ಮೂಲಗಳ ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆ
  • ೨. ಪರಿಸರ ಸ್ನೇಹಿ ಮಾರ್ಗದಲ್ಲಿ ಜಮೀನಿನ ಬಳಕೆ
  • ೩. ಜನರನ್ನು ಒಳಗೊಳ್ಳುವ ಮೂಲಕ ಪುನರ್ವಸತಿ ಅನುಷ್ಠಾನ
  • ೪. ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ

.

ನೋಡಿ

ಆಧಾರ

ಉಲ್ಲೇಖ

Tags:

ಮಳೆಗಾಲ ಮಳೆಯ ಉತ್ಪತ್ತಿಮಳೆಗಾಲ ಭಾರತದಲ್ಲಿ ಮಳೆಗಾಲ ಭಾರತದಲ್ಲಿ ಮುಂಗಾರು ಮಳೆಮಳೆಗಾಲ - ೨೦೧೩ ರ ಅತಿವೃಷ್ಠಿಮಳೆಗಾಲ ಫಾಯಿಲಿನ್ ತೂಫಾನು -ಸುಂಟರಗಾಳಿಮಳೆಗಾಲ ಹಿಂಗಾರು ಮಳೆಮಳೆಗಾಲ ಹೆಲೆನ್ ಚಂಡಮಾರುತಮಳೆಗಾಲ ೨೦೧೪ ಜುಲೈ-ಕರ್ನಾಟಕದಲ್ಲಿ ಮಳೆಗಾಲ ಸೆಪ್ಟಂಬರ್ ೨- ೨೦೧೪ ರಿಂದ ಕಾಶ್ಮೀರದಲ್ಲಿ ಎಂದೂ ಕಾಣದ ಪ್ರವಾಹಮಳೆಗಾಲ ಕನ್ನಡಿಗರ ರಕ್ಷಣೆಮಳೆಗಾಲ ೨೦೧೭ ರ ಅತಿವೃಷ್ಠಿಮಳೆಗಾಲ ೨೦೧೮ ರ ಕೇರಳದ ಅತಿವೃಷ್ಠಿಮಳೆಗಾಲ ನೋಡಿಮಳೆಗಾಲ ಆಧಾರಮಳೆಗಾಲ ಉಲ್ಲೇಖಮಳೆಗಾಲ

🔥 Trending searches on Wiki ಕನ್ನಡ:

ಬಹಮನಿ ಸುಲ್ತಾನರುಗೊರೂರು ರಾಮಸ್ವಾಮಿ ಅಯ್ಯಂಗಾರ್ಸಂವಹನಕ್ರೀಡೆಗಳುಕರ್ನಾಟಕ ವಿಧಾನ ಸಭೆದ್ರವ್ಯಮೂಲಧಾತುಗಳ ಪಟ್ಟಿಪಶ್ಚಿಮ ಘಟ್ಟಗಳುಶ್ರೀರಂಗಪಟ್ಟಣಹುಯಿಲಗೋಳ ನಾರಾಯಣರಾಯವಂದನಾ ಶಿವಹಸಿರುಮನೆ ಪರಿಣಾಮರಾಷ್ಟ್ರೀಯತೆಸುಭಾಷ್ ಚಂದ್ರ ಬೋಸ್ವಿಜಯಾ ದಬ್ಬೆಭಾರತದ ಆರ್ಥಿಕ ವ್ಯವಸ್ಥೆಜಯದೇವಿತಾಯಿ ಲಿಗಾಡೆಕನ್ನಡ ಸಾಹಿತ್ಯ ಪ್ರಕಾರಗಳುರವೀಂದ್ರನಾಥ ಠಾಗೋರ್ಸಾಲುಮರದ ತಿಮ್ಮಕ್ಕಸೂರ್ಯ (ದೇವ)ಕರಗಬಾಲಕಾರ್ಮಿಕಗೋವಸಿದ್ಧಯ್ಯ ಪುರಾಣಿಕಚಿಕ್ಕಮಗಳೂರುಕರ್ನಾಟಕದ ಏಕೀಕರಣಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಲೆಕ್ಕ ಪರಿಶೋಧನೆದಿಕ್ಸೂಚಿಬಹುವ್ರೀಹಿ ಸಮಾಸಕಾರ್ಖಾನೆ ವ್ಯವಸ್ಥೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಗಾಂಧಿ ಜಯಂತಿಶಿವಮೊಗ್ಗಭಾಮಿನೀ ಷಟ್ಪದಿಯಶ್(ನಟ)ಸೀತೆರಸ(ಕಾವ್ಯಮೀಮಾಂಸೆ)ಪ್ಲೇಟೊಶರಣಬಸವೇಶ್ವರ ದೇವಸ್ಥಾನ ಕಲಬುರಗಿಎಸ್.ಜಿ.ಸಿದ್ದರಾಮಯ್ಯವಿಶ್ವ ರಂಗಭೂಮಿ ದಿನಲಾವಣಿಕನ್ನಡದ ಉಪಭಾಷೆಗಳುಲಿಂಗ ವಿವಕ್ಷೆದ್ವಿಗು ಸಮಾಸಶೂದ್ರ ತಪಸ್ವಿರಷ್ಯಾಜೋಗಸಂಭೋಗಹರಪ್ಪಮಂತ್ರಾಲಯನೀರಿನ ಸಂರಕ್ಷಣೆಅನುಪಮಾ ನಿರಂಜನಕೇಂದ್ರ ಪಟ್ಟಿಹಿಂದೂ ಮಾಸಗಳುಏಣಗಿ ಬಾಳಪ್ಪನರಿಸಾರಾ ಅಬೂಬಕ್ಕರ್ಸರ್ವಜ್ಞರೈತವಾರಿ ಪದ್ಧತಿಹೊಯ್ಸಳಅಖಿಲ ಭಾರತ ಬಾನುಲಿ ಕೇಂದ್ರಜಲ ಚಕ್ರಜಿ.ಎಸ್.ಶಿವರುದ್ರಪ್ಪಕನ್ನಡ ಅಕ್ಷರಮಾಲೆಗುರುನಾನಕ್ನಡುಕಟ್ಟುಭೀಮಸೇನಛತ್ರಪತಿ ಶಿವಾಜಿಕನ್ನಡ ಸಾಹಿತ್ಯ ಪರಿಷತ್ತುವ್ಯಾಪಾರಗ್ರಹಯಕ್ಷಗಾನಟೈಗರ್ ಪ್ರಭಾಕರ್ಕನ್ನಡ ಚಂಪು ಸಾಹಿತ್ಯಕಪ್ಪೆಚಿಪ್ಪು🡆 More