ರಾಮಪ್ಪ ದೇವಾಲಯ

ರುದ್ರೇಶ್ವರ ದೇವಾಲಯ ಎಂದೂ ಕರೆಯಲ್ಪಡುವ ರಾಮಪ್ಪ ದೇವಾಲಯವು ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿದೆ.

ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಈ ದೇವಾಲಯದಲ್ಲಿರುವ ಒಂದು ಶಾಸನವು ಇದನ್ನು ಕ್ರಿ.ಶ. 1213 ಕಾಲಮಾನದ್ದೆಂದು ನಿರ್ಧರಿಸುತ್ತದೆ. ಇದನ್ನು ಕಾಕತೀಯ ಸೇನಾಪತಿ ರೇಚರ್ಲಾ ರುದ್ರನು ಕಾಕತೀಯ ದೊರೆ ಗಣಪತಿ ದೇವನ ಅವಧಿಯಲ್ಲಿ ನಿರ್ಮಿಸಿದನೆಂದು ಹೇಳುತ್ತದೆ.

ರಾಮಪ್ಪ ದೇವಾಲಯ
ರುದ್ರೇಶ್ವರ ದೇವಾಲಯ
ಭೂಗೋಳ
ಕಕ್ಷೆಗಳು18°15′33″N 79°56′36″E / 18.25917°N 79.94333°E / 18.25917; 79.94333
ದೇಶಭಾರತ
ರಾಜ್ಯತೆಲಂಗಾಣ
ಜಿಲ್ಲೆಮುಲುಗು
ಸ್ಥಳಪಾಲಮ್‍ಪೇಟ್ ಗ್ರಾಮ
ವಾಸ್ತುಶಿಲ್ಪ
ವಾಸ್ತುಶಿಲ್ಪ ಶೈಲಿಕಾಕತೀಯ ಶೈಲು, ಭೂಮಿಜ/ವೇಸರ ಶೈಲಿ
ವಾಸ್ತುಶಿಲ್ಪಿರಾಮಪ್ಪ
ಇತಿಹಾಸ ಮತ್ತು ಆಡಳಿತ
ಸೃಷ್ಟಿಕರ್ತರೇಚರ್ಲ ರುದ್ರ

ಇಲ್ಲಿ ರಾಮಲಿಂಗೇಶ್ವರ ದೇವರನ್ನು ಪೂಜಿಸಲಾಗುತ್ತದೆ. ಮಾರ್ಕೊ ಪೋಲೊ ಕಾಕತೀಯ ಸಾಮ್ರಾಜ್ಯಕ್ಕೆ ಭೇಟಿ ನೀಡಿದಾಗ ಈ ದೇವಸ್ಥಾನವನ್ನು "ದೇವಾಲಯಗಳ ನಕ್ಷತ್ರಪುಂಜದ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ" ಎಂದು ಕರೆದನು ಎಂದು ಹೇಳಲಾಗಿದೆ. ರಾಮಪ್ಪ ದೇವಸ್ಥಾನವು ೬ ಅಡಿ ಎತ್ತರದ ನಕ್ಷತ್ರಾಕಾರದ ವೇದಿಕೆ ಮೇಲೆ ನಿಂತಿದೆ. ಗರ್ಭಗೃಹದ ಮುಂಭಾಗದಲ್ಲಿರುವ ಸಭಾಂಗಣವು ಹಲವಾರು ಕೆತ್ತಿದ ಕಂಬಗಳನ್ನು ಹೊಂದಿದ್ದು ಇವು ಬೆಳಕು ಮತ್ತು ಸ್ಥಳವನ್ನು ಅದ್ಭುತವಾಗಿ ಸಂಯೋಜಿಸುವ ಪರಿಣಾಮವನ್ನು ಸೃಷ್ಟಿಸುವಂತೆ ಇರಿಸಲ್ಪಟ್ಟಿವೆ. ಈ ದೇವಾಲಯವನ್ನು ನಿರ್ಮಿಸಿದ ಶಿಲ್ಪಿ ರಾಮಪ್ಪನ ಹೆಸರನ್ನೇ ಇದಕ್ಕೆ ಇಡಲಾಗಿದೆ ಮತ್ತು ಬಹುಶಃ ತನ್ನ ಕುಶಲಕರ್ಮಿಯ ಹೆಸರಿನಲ್ಲಿರುವ ಭಾರತದ ಏಕೈಕ ದೇವಸ್ಥಾನ ಇದಾಗಿದೆ.

ಮುಖ್ಯ ರಚನೆಯು ಕೆಂಪು ಬಣ್ಣದ ಮರಳುಶಿಲೆಯಲ್ಲಿದೆ. ಆದರೆ ಹೊರಗೆ ಸುತ್ತಲೂ ಇರುವ ಕಂಬಗಳು ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸಿಲಿಕಾಗಳಿಂದ ಸಮೃದ್ಧವಾಗಿರುವ ಕಪ್ಪು ಬಸಾಲ್ಟ್‌ನ ದೊಡ್ಡ ಚಾಚುಪೀಠಗಳನ್ನು ಹೊಂದಿವೆ. ಇವುಗಳನ್ನು ಪೌರಾಣಿಕ ಪ್ರಾಣಿಗಳು ಅಥವಾ ನರ್ತಕಿಯರು ಅಥವಾ ಸಂಗೀತಗಾರರಂತೆ ಕೆತ್ತಲಾಗಿದೆ, ಮತ್ತು "ಕಾಕತೀಯ ಕಲೆಯ ಮೇರುಕೃತಿಗಳಾಗಿವೆ". ಇವು ತಮ್ಮ ಸೂಕ್ಷ್ಮ ಕೆತ್ತನೆ, ಇಂದ್ರಿಯಾಸ್ವಾದ್ಯ ಭಂಗಿಗಳು ಮತ್ತು ಉದ್ದನೆಯ ದೇಹಗಳು ಮತ್ತು ಶಿರಗಳಿಗೆ ಗಮನಾರ್ಹವಾಗಿವೆ.

25 ಜುಲೈ 2021 ರಂದು, ದೇವಾಲಯವನ್ನು "ಕಾಕತೀಯ ರುದ್ರೇಶ್ವರ (ರಾಮಪ್ಪ) ದೇವಸ್ಥಾನ, ತೆಲಂಗಾಣ" ಎಂದು ವಿಶ್ವ ಪರಂಪರೆಯ ತಾಣವಾಗಿ ದಾಖಲಿಸಲಾಯಿತು.

ವಿವರಣೆ

ದೇವಾಲಯದ ಮೇಲ್ಛಾವಣಿಯನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಇವು ಎಷ್ಟು ಹಗುರವಾಗಿವೆ ಎಂದರೆ ಇವು ನೀರಿನ ಮೇಲೆ ತೇಲಲು ಸಾಧ್ಯವಾಗುತ್ತದೆ.

ಮುಖ್ಯ ದೇವಾಲಯದ ಎರಡೂ ಬದಿಗಳಲ್ಲಿ ಎರಡು ಸಣ್ಣ ಶಿವ ದೇಗುಲಗಳಿವೆ. ಒಳಗೆ ಶಿವನ ದೇಗುಲಕ್ಕೆ ಎದುರಾಗಿ ಇರುವ ಅಗಾಧವಾದ ನಂದಿ ಉತ್ತಮ ಸ್ಥಿತಿಯಲ್ಲಿದೆ.

ನಟರಾಜ ರಾಮಕೃಷ್ಣನು ಪೆರಿಣಿ ಶಿವತಾಂಡವ ನೃತ್ಯವನ್ನು ಈ ದೇವಾಲಯದಲ್ಲಿರುವ ಶಿಲ್ಪಗಳನ್ನು ನೋಡಿ ಪುನರುಜ್ಜೀವಿತಗೊಳಿಸಿದನು.

ಮತ್ತೆ ಮತ್ತೆ ಸಂಭವಿಸಿದ ಯುದ್ಧಗಳು, ಲೂಟಿ ಮತ್ತು ಯುದ್ಧಗಳು ಹಾಗೂ ನೈಸರ್ಗಿಕ ವಿಪತ್ತುಗಳ ಸಮಯದಲ್ಲಾದ ನಾಶದ ನಂತರವೂ ದೇವಸ್ಥಾನವು ಹಾಗೆಯೇ ಉಳಿದಿದೆ. 17 ನೇ ಶತಮಾನದಲ್ಲಿ ಒಂದು ದೊಡ್ಡ ಭೂಕಂಪ ಸಂಭವಿಸಿದ್ದು ಅದು ಸ್ವಲ್ಪ ಹಾನಿಯನ್ನುಂಟುಮಾಡಿತು. ಇದು ಅಡಿಪಾಯ ಹಾಕುವ ಅದರ 'ಮರಳು ಪೆಟ್ಟಿಗೆ ತಂತ್ರ'ದ ಕಾರಣ ಭೂಕಂಪದಲ್ಲಿ ಉಳಿದುಕೊಂಡಿತು.

ಅನೇಕ ಸಣ್ಣ ರಚನೆಗಳನ್ನು ನಿರ್ಲಕ್ಷಿಸಲಾಗಿತ್ತು ಮತ್ತು ಅವು ಪಾಳುಬಿದ್ದಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದೆ. ದೇವಾಲಯದ ಹೊರ ಗೋಡೆಯಲ್ಲಿನ ಮುಖ್ಯ ಪ್ರವೇಶ ದ್ವಾರ ಹಾಳಾಗಿದೆ.

ಛಾಯಾಂಕಣ

ಉಲ್ಲೇಖಗಳು

 

ಗ್ರಂಥಸೂಚಿ

ಹೆಚ್ಚಿನ ಓದಿಗೆ

  • Michell, George, The Penguin Guide to the Monuments of India, Volume 1: Buddhist, Jain, Hindu, 1989, Penguin Books,  

Tags:

ರಾಮಪ್ಪ ದೇವಾಲಯ ವಿವರಣೆರಾಮಪ್ಪ ದೇವಾಲಯ ಛಾಯಾಂಕಣರಾಮಪ್ಪ ದೇವಾಲಯ ಉಲ್ಲೇಖಗಳುರಾಮಪ್ಪ ದೇವಾಲಯ ಹೆಚ್ಚಿನ ಓದಿಗೆರಾಮಪ್ಪ ದೇವಾಲಯಕಾಕತೀಯತೆಲಂಗಾಣದಕ್ಷಿಣ ಭಾರತವಿಶ್ವ ಪರಂಪರೆಯ ತಾಣ

🔥 Trending searches on Wiki ಕನ್ನಡ:

ವಾಯು ಮಾಲಿನ್ಯತುಮಕೂರುಏಡ್ಸ್ ರೋಗಕರ್ನಾಟಕ ಲೋಕಸೇವಾ ಆಯೋಗಭಾರತದ ಪ್ರಧಾನ ಮಂತ್ರಿಋಗ್ವೇದಕಲಿಯುಗಕಾಗೋಡು ಸತ್ಯಾಗ್ರಹಅಡೋಲ್ಫ್ ಹಿಟ್ಲರ್ಬಾಹುಬಲಿಸ್ವಾಮಿ ವಿವೇಕಾನಂದವಲ್ಲಭ್‌ಭಾಯಿ ಪಟೇಲ್ಹಾಸನಓಂ (ಚಲನಚಿತ್ರ)ಸ್ತ್ರೀಮೆಕ್ಕೆ ಜೋಳಪರಿಸರ ವ್ಯವಸ್ಥೆಸಂಪ್ರದಾಯಹಣ್ಣುಒಗಟುಪರೀಕ್ಷೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಐಹೊಳೆಆದಿಚುಂಚನಗಿರಿರಾಷ್ಟ್ರಕವಿಭಾರತೀಯ ಜನತಾ ಪಕ್ಷಹಳೆಗನ್ನಡಮಹಮದ್ ಬಿನ್ ತುಘಲಕ್ಬಿಳಿಗಿರಿರಂಗನ ಬೆಟ್ಟಪಟ್ಟದಕಲ್ಲುಭೀಮಸೇನಮೂಕಜ್ಜಿಯ ಕನಸುಗಳು (ಕಾದಂಬರಿ)ಕುಕ್ಕೆ ಸುಬ್ರಹ್ಮಣ್ಯ ದೇವಾಲಯಪೆರಿಯಾರ್ ರಾಮಸ್ವಾಮಿಗಣೇಶಭಾರತದ ಸಂವಿಧಾನದ ೩೭೦ನೇ ವಿಧಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸವರ್ಣದೀರ್ಘ ಸಂಧಿಜಾತಿಒನಕೆ ಓಬವ್ವಬೆಳಗಾವಿಉಚ್ಛಾರಣೆಶ್ರೀನಿವಾಸ ರಾಮಾನುಜನ್ಬ್ರಹ್ಮಜಪಾನ್ತಾಪಮಾನತಾಜ್ ಮಹಲ್ಜಯಪ್ರಕಾಶ್ ಹೆಗ್ಡೆಅಲಂಕಾರಶಿಶುನಾಳ ಶರೀಫರುಶ್ರೀ ರಾಘವೇಂದ್ರ ಸ್ವಾಮಿಗಳುಕರ್ನಾಟಕದ ಇತಿಹಾಸಮನೆಮೋಳಿಗೆ ಮಾರಯ್ಯಜಯಂತ ಕಾಯ್ಕಿಣಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ತಾಳೀಕೋಟೆಯ ಯುದ್ಧಸಮುಚ್ಚಯ ಪದಗಳುಭಕ್ತಿ ಚಳುವಳಿಮೈಸೂರು ದಸರಾವಿಮರ್ಶೆಭಾರತದಲ್ಲಿ ಮೀಸಲಾತಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಒಡೆಯರ್ಮಲಬದ್ಧತೆಮಂಕುತಿಮ್ಮನ ಕಗ್ಗಸಂಸ್ಕೃತ ಸಂಧಿವಚನ ಸಾಹಿತ್ಯಕೃಷ್ಣಕನ್ನಡ ಅಕ್ಷರಮಾಲೆಸುಬ್ರಹ್ಮಣ್ಯ ಧಾರೇಶ್ವರಹಲ್ಮಿಡಿ ಶಾಸನರಾಮ ಮಂದಿರ, ಅಯೋಧ್ಯೆಹಾರೆಕರ್ಮಧಾರಯ ಸಮಾಸಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಅಡಿಕೆ🡆 More