ಮೋಳಿಗೆ ಮಾರಯ್ಯ

ಮೋಳಿಗೆ ಮಾರಯ್ಯ ಸು.1160.

ಶಿವಶರಣ ಹಾಗೂ ವಚನಕಾರ, ಹನ್ನೆರಡನೆ ಶತಮಾನದ ಬಸವಣ್ಣನವರ ಸಮಕಾಲೀನ. ಇವನಿಗೆ ಮೋಳಿಗಯ್ಯ ಎಂಬ ಹೆಸರು ಇದೆ.

ಇವರು ಮೊದಲಿಗೆ ಕಾಶ್ಮೀರ ದೇಶದ ಸವಾಲಕ್ಷದ ಅರಸರಾಗಿದ್ದರು. ಮಾಂಡವ್ಯಪುರ ಇವರ ರಾಜಧಾನಿ. ಇವರ ಮೊದಲಿನ ಹೆಸರು ಮಹಾದೇವ ಭೂಪಾಲ ಇವರ ರಾಣಿಯ ಹೆಸರು ಮಹಾದೇವಿ, ಮಗನ ಹೆಸರು ಲಿಂಗಾರತಿ. ಬಸವಣ್ಣನವರ ತತ್ವಗಳಿಗೆ ಮಾರು ಹೋಗಿ ರಾಜ್ಯವನ್ನು ಮಗನಾದ ಲಿಂಗಾರತಿಗೆ ಪಟ್ಟಗಟ್ಟಿ ಪತ್ನಿ ಮಹಾದೇವಿಯೊಡನೆ ಕಲ್ಯಾಣಕ್ಕೆ ಬರುತ್ತಾರೆ. ಅಲ್ಲಿ ಶರಣರ ತತ್ವಗಳಿಗೆ ತಕ್ಕಂತೆ ಕಟ್ಟಿಗೆ ಮಾರುವ ಕಾಯಕವನ್ನು ಮಾಡುತ್ತಾರೆ .

ಮೊದಲಿಗೆ ಈತ ಕಾಶ್ಮೀರ ದೇಶದ ಮಾಂಡವ್ಯಪುರದ ರಾಜನಾಗಿದ್ದನೆಂದೂ ಅನಂತರ ಬಸವಣ್ಣನವರ ವಿಚಾರಗಳ ಆಕರ್ಷಣೆಗೊಳಗಾಗಿ ರಾಜ್ಯ ತ್ಯಜಿಸಿ ತನ್ನ ಹೆಂಡತಿ ಗಂಗಾದೇವಿಯೊಂದಿಗೆ ಕಲ್ಯಾಣಕ್ಕೆ ಬಂದು ಅಲ್ಲಿ ಮೋಳಿಗೆ ಮಾರಯ್ಯನಾದನೆಂದು ಹೆಂಡತಿ ಮಹಾದೇವಿಯಾದಳೆಂದು ವೀರಶೈವ ಗ್ರಂಥಗಳು ಹೇಳುತ್ತವೆ. ತೆಲುಗು ಬಸವಪುರಾಣಮು, ಕನ್ನಡ ಬಸವಪುರಾಣ, ಶಿವತತ್ತ್ವಚಿಂತಾಮಣಿ, ವೀರಶೈವಾಮೃತ ಮಹಾಪುರಾಣ, ಪ್ರಭುದೇವರ ಪುರಾಣ, ರಾಘವಾಂಕ ಚಾರಿತ್ರ, ಗುರುರಾಜಚಾರಿತ್ರ, ವೃಷಭೇಂದ್ರ ವಿಜಯ, ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ, ಶರಣಲೀಲಾಮೃತ, ಬೋರಬಸವಪುರಾಣ ಮೊದಲಾದ ಗ್ರಂಥಗಳಲ್ಲಿ ಈತನ ಚರಿತ್ರೆ ನಿರೂಪಿತವಾಗಿದೆ. ಹೊನ್ನಳ್ಳಿಯ ಗೌರಾಂಕ (ಸು. 1525) ಈತನನ್ನು ಕುರಿತು ಮೋಳಿಗಯ್ಯನ ಪುರಾಣ ಎಂಬ ಕಾವ್ಯವನ್ನು ಬರೆದಿದ್ದಾನೆ. ಪ್ರಭುದೇವರ ಶೂನ್ಯಸಂಪಾದನೆಯಲ್ಲಿ ಮೋಳಿಗಯ್ಯಗಳ ಸಂಪಾದನೆ ಎಂಬ ಭಾಗವಿದೆ.

ಇದುವರೆಗೆ ಈತನ 819 ವಚನಗಳು ದೊರಕಿವೆ. ನಿಃಕಳಂಕಮಲ್ಲಿಕಾರ್ಜುನ ಎಂಬುದು ಈ ವಚನಗಳ ಅಂಕಿತ. ಪಟ್ಸ್ಥಲಸಿದ್ಧಾಂತವನ್ನು ನಿರೂಪಿಸುವ ಈತನ ಒಂದು ವಚನ ಹೀಗಿದೆ.

ವೃಕ್ಷ ಬೀಜವ ನುಂಗಿತ್ತೋ, ಬೀಜ ವೃಕ್ಷವ ನುಂಗಿತ್ತೋ

ಎಂಬುದನರಿದಾಗವೆ ಭಕ್ತಸ್ಥಲ.

ಮುತ್ತು ಜಲವ ನುಂಗಿತ್ತೋ, ಜಲವು ಮುತ್ತು ನುಂಗಿತ್ತೋ

ಎಂಬುದನರಿದಾಗವೆ ಮಾಹೇಶ್ವರಸ್ಥಲ.

ಪ್ರಭೆ ಪಾಷಾಣವ ನುಂಗಿತ್ತೋ, ಪಾಷಾಣ ಪ್ರಭೆಯ ನುಂಗಿತ್ತೋ

ಎಂಬುದನರಿದಾಗವೆ ಪ್ರಸಾದಿಸ್ಥಲ.

ವಹ್ನಿ ಕಾಷ*ವ ನುಂಗಿತ್ತೋ, ಕಾಷ* ವಹ್ನಿಯ ನುಂಗಿತ್ತೋ

ಎಂಬುದನರಿದಾಗವೆ ಪ್ರಾಣಲಿಂಗಿಸ್ಥಲ.

ಸಾರ ಬಲಿದು ಶರಧಿಯ ಕೂಡಿದಾಗವೆ ಶರಣಸ್ಥಲ.

ವಾರಿ ಬಲಿದು ವಾರಿಧಿಯಂತಾದಾಗವೆ ಐಕ್ಯಸ್ಥಲ.

ಹೀಂಗಲ್ಲದೆ ಷಟ್ಸ್ಥಲಬ್ರಹ್ಮಿಗಳೆಂತಾದಿರಣ್ಣಾ ?

ಕರೆಯದೆ ಪಶುವಿಂಗೆ ತೃಣವ ಘಳಿಸುವನಂತೆ,

ಒಲ್ಲದ ಸತಿಯರಲ್ಲಿ ರತಿಕೂಟವ ಬಯಸುವನಂತೆ,

ಗೆಲ್ಲತನಕ್ಕೆ ಹೋರುವರಲ್ಲಿ ಬಲ್ಲತನವನರಸುವನಂತೆ,

ಕೊಲ್ಲಿಯಾವಿನಲ್ಲಿ ಸ್ವಲೀಲೆಯನರಸುವನಂತೆ,

ಬಲಿದ ವಂಶದಲ್ಲಿ ಕಳಿಲೆಯನರಸುವನಂತೆ,

ಬರಿಮಾತಿಂಗೆಡೆಯಾದುದುಂಟೆ ?

ಬಯಲ ಕೊಂಡ ಘನಕ್ಕೆ ಅವಧಿಗೊಡಲಿಲ್ಲ.

ಉರಿಕೊಂಡ ಕರ್ಪುರಕ್ಕೆ ರೂಪಿಂಗೆಡೆಯಿಲ್ಲ.

ಬಯಲ ಬಡಿವಡೆವಂಗೆ ಕೈಗೆ ಮೃದುವಿಲ್ಲ.

ಮನ ಮಹದಲ್ಲಿ ನಿಂದವಂಗೆ ಆರನೆಣಿಸಲಿಲ್ಲ, ಮೂರ ಮುಟ್ಟಲಿಲ್ಲ.

ಮೀರಿದ ತೋರಿದ ಘನ ತನ್ನಲ್ಲಿ ನಿರ್ಲೇಪ,

ನಿಃಕಳಂಕ ಮಲ್ಲಿಕಾರ್ಜುನಾ.

ಮೋಳಿಗೆ ಮಾರಯ್ಯ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಬಸವಣ್ಣ

🔥 Trending searches on Wiki ಕನ್ನಡ:

ಹಲ್ಮಿಡಿ ಶಾಸನಶ್ರೀಲಂಕಾಶಿವಕೈವಾರ ತಾತಯ್ಯ ಯೋಗಿನಾರೇಯಣರುಅಷ್ಟಾಂಗ ಯೋಗಸತಿಕನ್ನಡದಲ್ಲಿ ಮಹಿಳಾ ಸಾಹಿತ್ಯಗುಣ ಸಂಧಿಅಮೆರಿಕಉತ್ಪಾದನಾಂಗಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕಲಬುರಗಿನವಶಿಲಾಯುಗಇಮ್ಮಡಿ ಪುಲಕೇಶಿಭಾರತೀಯ ರಿಸರ್ವ್ ಬ್ಯಾಂಕ್ಕರ್ನಾಟಕ ಹೈ ಕೋರ್ಟ್ಬಾಲಕಾರ್ಮಿಕಯುವರತ್ನ (ಚಲನಚಿತ್ರ)ದಕ್ಷಿಣ ಭಾರತದ ನದಿಗಳುಮೆಂತೆಬಂಡಾಯ ಸಾಹಿತ್ಯಅವರ್ಗೀಯ ವ್ಯಂಜನನಾ. ಡಿಸೋಜಸವರ್ಣದೀರ್ಘ ಸಂಧಿಅರಿಸ್ಟಾಟಲ್‌ಗೋವಿಂದ ಪೈಅಕ್ಬರ್ಕನ್ನಡ ರಂಗಭೂಮಿಕ್ರಿಸ್ ಇವಾನ್ಸ್ (ನಟ)ವ್ಯಾಸರಾಯರುಈಸ್ಟರ್ಜನ್ನದಶಾವತಾರಚೋಳ ವಂಶಶಿರ್ಡಿ ಸಾಯಿ ಬಾಬಾಭಾರತದ ಆರ್ಥಿಕ ವ್ಯವಸ್ಥೆಮುದ್ದಣಇಮ್ಮಡಿ ಬಿಜ್ಜಳಗಣರಾಜ್ಯೋತ್ಸವ (ಭಾರತ)ಡಿ.ಆರ್. ನಾಗರಾಜ್ಲೋಕಕೋಲಾರಅಂಬಿಗರ ಚೌಡಯ್ಯಜಾರಿ ನಿರ್ದೇಶನಾಲಯನೀತಿ ಆಯೋಗಬೇಡಿಕೆಯ ನಿಯಮಕಾದಂಬರಿಜಾತ್ರೆವಿಕಿಪೀಡಿಯಸರ್ಕಾರೇತರ ಸಂಸ್ಥೆಕರ್ಣಾಟಕ ಬ್ಯಾಂಕ್ಜೋಗಿ (ಚಲನಚಿತ್ರ)ನಿರ್ಮಲಾ ಸೀತಾರಾಮನ್ಶ್ಯೆಕ್ಷಣಿಕ ತಂತ್ರಜ್ಞಾನಆಧುನಿಕ ಕನ್ನಡ ಕಾವ್ಯದ ಬೆಳವಣಿಗೆದ್ರಾವಿಡ ಭಾಷೆಗಳುಪ್ಲೇಟೊಪ್ರಕಾಶ್ ರೈವಿನಾಯಕ ಕೃಷ್ಣ ಗೋಕಾಕಭಾರತದ ಮುಖ್ಯಮಂತ್ರಿಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಶಾಂತರಸ ಹೆಂಬೆರಳುಹಾಸನ ಜಿಲ್ಲೆಅರ್ಜುನಕೆ.ಜಿ.ಎಫ್ಭಾಷೆಕಪ್ಪೆ ಅರಭಟ್ಟಕನ್ನಡ ಛಂದಸ್ಸುಪರಿಸರ ವ್ಯವಸ್ಥೆಗುರುಲಿಂಗ ಕಾಪಸೆಕನ್ನಡ ಪತ್ರಿಕೆಗಳುಕನ್ನಡ ಅಕ್ಷರಮಾಲೆಗ್ರಹಸಂಯುಕ್ತ ರಾಷ್ಟ್ರ ಸಂಸ್ಥೆನಯನ ಸೂಡಪತ್ರರಂಧ್ರ🡆 More