ಅಷ್ಟಾಂಗ ಯೋಗ

ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ.

ಪತಂಜಲಿಯಿಂದ ಪ್ರವೃತ್ತವಾದ ಯೋಗಪದ್ಧತಿ. ಯೋಗವೆಂದರೆ ಚಿತ್ತವೃತ್ತಿನಿರೋಧವೆಂದು ವಿವರಿಸಿ ಯೋಗಸೂತ್ರ ಇದಕ್ಕೆ ಸಾಧನರೂಪವಾಗಿ ಯಮ, ನಿಯಮ , ಆಸನ , ಪ್ರಾಣಾಯಾಮ , ಪ್ರತ್ಯಾಹಾರ , ಧ್ಯಾನ , ಧಾರಣ , ಸಮಾಧಿ ಎಂಬ ಎಂಟು ಅಂಗಗಳನ್ನು ಎರಡನೆಯ ಅಧ್ಯಾಯವಾದ ಸಾಧನಪಾದದಲ್ಲಿ ಹೇಳಿದೆ. ಅಂಗವೆಂದರೆ ಅಶುದ್ಧವಾದ ಚಿತ್ತಕಲ್ಮಷಗಳು ಹೋಗಿ ವಿವೇಕ ಖ್ಯಾತಿ ಉಂಟಾಗುವುದಕ್ಕೆ ನೆರವಾಗುವ ಸಾಧನವೆಂದೂ ಅದರಿಂದ ಚಿತ್ತದಲ್ಲಿ ಸಾತ್ತ್ವಿಕ ಪರಿಣಾಮರೂಪವಾದ, ನಿರ್ಮಲರೂಪವಾದ ಪ್ರಕಾಶ (ಜ್ಞಾನದೀಪ್ತಿ) ಒದಗುವುದೆಂದೂ ಯೋಗಸೂತ್ರ ಭಾಷ್ಯಕಾರರಾದ ವ್ಯಾಸರು ವಿವರಿಸಿದ್ದಾರೆ. ನಿಷಿದ್ಧಕಾರ್ಯಗಳ ತ್ಯಾಗಯಮ ವೆನಿಸಿಕೊಳ್ಳುತ್ತದೆ. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವು ಯಮ; ಈ ಅಂಗದಲ್ಲಿ ಸೇರಿಬರುತ್ತವೆ. ವಿಹಿತ ಕಾರ್ಯಗಳ ಆಚರಣೆ ನಿಯಮ. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ,ಈಶ್ವರಪ್ರಣಿಧಾನ-ಇವು ನಿಯಮಗಳು. ಆಸನವೆಂದರೆ ನಿಯಮಗಳ ಅಭ್ಯಾಸಕ್ಕೆ ಅನುಕೂಲವಾದ ಸ್ಥಿರವೂ ಸುಖವೂ ಆದ ಭಂಗಿ. ಆಸನಗಳಲ್ಲಿ ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ ಮೊದಲಾದ ವೈವಿಧ್ಯವುಂಟು. ಆಸನಸಿದ್ಧಿಯಾದ ಅನಂತರ ಶ್ವಾಸ-ಪ್ರಶ್ವಾಸಗಳ ಗಮನಾಗಮನಗಳನ್ನು ತಡೆಯುವುದನ್ನು (ಶ್ವಾಸಪ್ರಶ್ವಾಸಯೋರ್ಗತಿವಿಚ್ಛೇದಃ) ಪ್ರಾಣಾಯಾಮವೆಂದು ನಿರ್ದೇಶಿಸಿದ್ದಾರೆ. ಪ್ರಾಣಾಯಾಮದಿಂದ ಶುದ್ಧವಾದ ಚಿತ್ತವನ್ನು ಒಂದೆಡೆ ನಿಲ್ಲಿಸುವುದು ಧಾರಣ. ಪಂಚೇಂದ್ರಿಯಗಳು ತಂತಮ್ಮ ವಿಷಯಗಳ ಕಡೆ ಒಲಿಯದಂತೆ ತಡೆಹಿಡಿದು, ಧಾರಣದಲ್ಲಿರುವ ಚಿತ್ತದಲ್ಲಿಯೇ ನಿಲ್ಲುವಂತೆ ಮಾಡುವುದು ಪ್ರತ್ಯಾಹಾರ. ಮುಂದಿನ ಯೋಗಾಂಗ ಧ್ಯಾನ. ಆ ಧಾರಣೆಯ ಸ್ಥಳದಲ್ಲಿ ಏಕತಾನತೆಯನ್ನು ಅವಲಂಬಿಸಿ ಚಿತ್ತವನ್ನು ಸ್ಥಿರವಾಗಿ ನಿಲ್ಲಿಸುವುದೇ ಧ್ಯಾನ.ಧ್ಯಾನ ಧ್ಯಾನವಸ್ತುವಿನ ಸ್ವರೂಪವನ್ನೇ ಪಡೆದು ಚಿತ್ತದ ಸ್ವರೂಪವನ್ನು ಕಳೆದುಕೊಳ್ಳುವುದು ಸಮಾಧಿ (ತದೇವಾರ್ಥ ಮಾತ್ರ ನಿರ್ಭಾಸಂ ಸ್ವರೂಪಶೂನ್ಯಮಿವ ಸಮಾಧಿಃ). ತಾನು ಧ್ಯಾನಿಸುತ್ತಿದ್ದೇನೆ ಎನ್ನುವುದೂ ಸಮಾಧಿಯಲ್ಲಿ ಮರೆತುಹೋಗುತ್ತದೆ. ಯೋಗ

Tags:

en:Wikipedia:Glossaryen:Wikipedia:Guide to layouten:Wikipedia:Manual of Style

🔥 Trending searches on Wiki ಕನ್ನಡ:

ಮೈಸೂರುಸ್ವಾಮಿ ವಿವೇಕಾನಂದಅವತಾರಭತ್ತಚಾರ್ಲಿ ಚಾಪ್ಲಿನ್ಗುಣ ಸಂಧಿಶನಿ (ಗ್ರಹ)ತೆರಿಗೆಜಾಗತೀಕರಣವಿಜಯನಗರಫೇಸ್‌ಬುಕ್‌ಪ್ರವಾಸಿಗರ ತಾಣವಾದ ಕರ್ನಾಟಕಹೃದಯಾಘಾತಜಿ.ಎಸ್.ಶಿವರುದ್ರಪ್ಪಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಆದೇಶ ಸಂಧಿಸಹಕಾರಿ ಸಂಘಗಳುರಾಯಲ್ ಚಾಲೆಂಜರ್ಸ್ ಬೆಂಗಳೂರುಮಾನವ ಸಂಪನ್ಮೂಲ ನಿರ್ವಹಣೆವಿಕಿಪೀಡಿಯಸಮುದ್ರಗುಪ್ತಚಂದ್ರಯಾನ-೩ಸಂಸ್ಕಾರಕೃಷ್ಣದೇವರಾಯ1935ರ ಭಾರತ ಸರ್ಕಾರ ಕಾಯಿದೆಇನ್ಸ್ಟಾಗ್ರಾಮ್ಮಡಿವಾಳ ಮಾಚಿದೇವರಾಷ್ತ್ರೀಯ ಐಕ್ಯತೆಕೃಷ್ಣಾ ನದಿಪೂರ್ಣಚಂದ್ರ ತೇಜಸ್ವಿಅಖ್ರೋಟ್ಜನಪದ ಕರಕುಶಲ ಕಲೆಗಳುಮಹಾಭಾರತಬೇಡಿಕೆಝಾನ್ಸಿಇಮ್ಮಡಿ ಪುಲಿಕೇಶಿಕನ್ನಡದಲ್ಲಿ ಸಣ್ಣ ಕಥೆಗಳುಭಯೋತ್ಪಾದನೆಶಿವರಾಮ ಕಾರಂತಭಾರತದ ಸರ್ವೋಚ್ಛ ನ್ಯಾಯಾಲಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾರತದ ರಾಷ್ಟ್ರಗೀತೆಬ್ರಹ್ಮಸೆಸ್ (ಮೇಲ್ತೆರಿಗೆ)ಕರ್ನಾಟಕದ ಜಿಲ್ಲೆಗಳುಜಯಪ್ರಕಾಶ್ ಹೆಗ್ಡೆದ.ರಾ.ಬೇಂದ್ರೆಪಾಲಕ್ಜಾನಪದಯೋನಿಕಾವೇರಿ ನದಿ ನೀರಿನ ವಿವಾದಭಾರತದ ಉಪ ರಾಷ್ಟ್ರಪತಿನೈಸರ್ಗಿಕ ಸಂಪನ್ಮೂಲಸಂಗ್ಯಾ ಬಾಳ್ಯಗ್ರಂಥಾಲಯಗಳುಗಾಂಧಿ ಜಯಂತಿಭಾರತದ ಆರ್ಥಿಕ ವ್ಯವಸ್ಥೆಮಲ್ಲಿಕಾರ್ಜುನ್ ಖರ್ಗೆನವರಾತ್ರಿಸಾಲುಮರದ ತಿಮ್ಮಕ್ಕವೃತ್ತಪತ್ರಿಕೆಕನ್ನಡ ಸಾಹಿತ್ಯ ಪ್ರಕಾರಗಳುಕೋಪಭಾರತದ ಸ್ವಾತಂತ್ರ್ಯ ದಿನಾಚರಣೆಇಂಡಿಯನ್ ಪ್ರೀಮಿಯರ್ ಲೀಗ್ನಯನತಾರರಾಹುಲ್ ಗಾಂಧಿಎಚ್ ೧.ಎನ್ ೧. ಜ್ವರಕೊಬ್ಬಿನ ಆಮ್ಲಕಮಲದಹೂಮದಕರಿ ನಾಯಕ🡆 More