ಭಯೋತ್ಪಾದನೆ

ಭಯೋತ್ಪಾದನೆ ಅಥವಾ ಸ್ವಚ್ಛಂದ ಹಿಂಸೆ ಎಂದರೆ ಹೆದರಿಸುವುದು.

ಸಮಾಜದಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಕದಡಿ ಭಯ ಹುಟ್ಟಿಸುವುದು. ಇದು ಸಮಾಜ ವಿರೋಧಿ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ಬದುಕು ದುಸ್ತರಗೊಳ್ಳುವುದು. ಅಪರಾಧವೆಂಬುದು ಸಮಾಜದಲ್ಲಿ ಅಸಹಜ ಪ್ರಕ್ರಿಯೆಯೇನಲ್ಲ. ದಮನ, ಮರ್ದನ, ಬಲಾತ್ಕಾರಗಳಿಗೆ ವಿರುದ್ಧ ಪ್ರತಿಕ್ರಿಯೆಯಾಗಿಯೂ ಅಪರಾಧ ಕೃತ್ಯ ನಡೆಯಬಹುದು. ಸ್ವಾರ್ಥವೂ ಅಂತಹ ಕೆಲಸವನ್ನು ಮಾಡಿಸಬಹುದು. ಹಾಗಂತ ಅದು ಭಯೋತ್ಪಾದನೆ ಆಗುವುದಿಲ್ಲ. ಇಂದು ರಾಜಕೀಯ, ಧಾರ್ಮಿಕ ಅಥವಾ ಸೈದ್ಧಾಂತಿಕ ಗುರಿ ಸಾಧಿಸಲು, ಸ್ವಚ್ಛಂದ ಹಿಂಸೆಯನ್ನು ಅನುಸರಿಸುವುದು ಸಹಜವೇ ಆಗಿದೆ.

ಭಯೋತ್ಪಾದನೆ
11 ಸೆಪ್ಟಂ.2001ರಂದು ಅಮೆರಿಕಾದ ವರ್ಲ್ಡ್ ಟ್ರೇಡ್ ಉತ್ತರ ಭಾಗದ ಗೋಪುರಕ್ಕೆ ಭಯೋತ್ಪಾದಕರು ವಿಮಾನ ಅಪ್ಪಳಿಸಿದ ದೃಶ್ಯ; ಅದನ್ನು 9-11 ಎನ್ನುವರು.

ಪರಿಚಯ

  • ಭಯೋತ್ಪಾದನೆ ಎಂಬುದೀಗ ಗುಪ್ತ ಕಾರ್ಯಾಚರಣೆಯ ರೂಪವನ್ನು ಕಳಚಿಕೊಂಡು ಬಹಿರಂಗ 'ಯುದ್ಧ'ದ ರೂಪದಲ್ಲಿ ರುದ್ರ ನರ್ತನ ನಡೆಸುವ ಧಾಷ್ಟ್ರ್ಯ ಪ್ರದರ್ಶಿಸಿದೆ. ಈ ಭಯೋತ್ಪಾದನೆ ಮತ್ತೆ ಮತ್ತೆ ಏಕೆ ನಮ್ಮನ್ನು ಕಾಡುತ್ತಿದೆ ಮತ್ತು ಇದನ್ನು ಏಕೆ ಶಾಶ್ವತವಾಗಿ ನಿರ್ಮೂಲನೆ ಮಾಡಲಾಗುತ್ತಿಲ್ಲ ಎಂಬುದನ್ನು ಯೋಚಿಸಿ, ಆ ಬಗ್ಗೆ ಕ್ರಮ ಕೈಗೊಳ್ಳುವಂತಹ ವಾತಾವರಣವನ್ನು ನಿರ್ಮಿಸುವುದು ಇಂದಿನ ಸಂದರ್ಭದಲ್ಲಿ ನಿಜವಾದ ದೇಶಪ್ರೇಮದ ಅಭಿವ್ಯಕ್ತಿ ಎನಿಸಿಕೊಳ್ಳುತ್ತದೆ.
  • ಇದು ನಾಲ್ಕನೇ ಪೀಳಿಗೆಯ ಯುದ್ಧ ಎನ್ನಬಹುದು ಮತ್ತು ಒಂದು ಹಿಂಸಾತ್ಮಕ ಅಪರಾಧ ಎಂದು ವರ್ಗೀಕರಿಸಲಾಗಿದೆ. ಆಧುನಿಕ ಕಾಲದಲ್ಲಿ, ಭಯೋತ್ಪಾದನೆ ಸಮಾಜದ ಒಂದು ಪ್ರಮುಖ ಶತ್ರು. ಬಹುತೇಕ ಸಂಧರ್ಭಗಳಲ್ಲಿ ಒಪ್ಪಿತ ಅಧಿಕಾರ ವ್ಯಾಪ್ತಿವ್ಯವಸ್ಥೆಗಳಲ್ಲಿ ಭಯೋತ್ಪಾದನಾ ವಿರೋಧಿ ಕಾನೂನುಗಳ ಅಡಿಯಲ್ಲಿ ಭಯೋತ್ಪಾದನೆ ಸಮಾಜಕ್ಕೆ ಬೆದರಿಕೆ; ಆದ್ದರಿಂದ ಅಕ್ರಮ ಎಂದು ಪರಿಗಣಿಸಲಾಗುತ್ತದೆ.
  • ನಾಗರಿಕರು, ತಟಸ್ಥ ಸೇನಾ ಸಿಬ್ಬಂದಿ,ಅಥವಾ ಯುದ್ಧದ ಶತ್ರು ಖೈದಿಗಳನ್ನೂ ವಿರೋಧಿ ಅಲ್ಲದವರು, ಇಂತಹವರನ್ನು ಗುರಿಯಾಗಿ ಹಿಂಸೆ ಕೊಲೆ ಬಳಸಿದಾಗ ಇದು ಯುದ್ಧದ ಕಾನೂನು ಅಡಿಯಲ್ಲಿ ಯುದ್ಧ ಅಪರಾಧದ ಪರಿಗಣಿಸಲಾಗಿದೆ.
  • ನಾಗರಿಕರು ವಿರೋಧಿ ಅಲ್ಲದವರು, ಶಾಂತವಾಗಿ ವಿರೋಧಿಸುವವರು, ಕೇವಲ ಅಭಿಪ್ರಾಯ ಬೇಧವಿದ್ದು ಶಾಂತವಾಗಿ ಅದನ್ನು ಪ್ರಕಟಿಸುವವರು ಇಂತಹವರ ಮೇಲೆ ಯಾವ ಅಭಿಪ್ರಾಯ, ಸಮಜಾಯಶಿಗೂ ಅವಕಾಶಕೊಡದೆ, ಹಿಂಸೆ ಬೆದರಿಕೆ, ಕೊಲೆ ಇವನ್ನು ಭಯೋತ್ಪಾದನೆ ಎನ್ನಬಹುದು.
  • ಹಾಗೆಯೇ ಯಾವುದೇ ಸಿದ್ಧಾಂತ ವಾದಿಗಳು ತಮ್ಮ ಸಿದ್ಧಾಂತವನ್ನು ಒಪ್ಪದವರನ್ನು ವಿರೋದಿಸುವವರನ್ನು ಹಿಂಸೆಯಿಂದ ಒಪ್ಪಿಸಲು ಪ್ರಯತ್ನಿಸುವುದು, ಅಥವಾ ವಿರೋಧವನ್ನು ಹತ್ತಿಕ್ಕಲು ಯಾವ ಚರ್ಚೆಗೂ ಅವಕಾಶ ಕೊಡದೆ ಕೊಲೆ ಬಲಾತ್ಕಾರ ಬಂಧನ, ಈ ಕ್ರಮ ಅನುಸರಿಸುವುದನ್ನು ಭಯೋತ್ಪಾದನೆ ಎನ್ನಬಹುದು. ಇದರಲ್ಲಿ ತಮ್ಮ ಅಥವಾ ತಮ್ಮ ನಾಯಕನ ಅಭಿಪ್ರಾಯ ಒಪ್ಪದವರಿಗೆ ಬದುಕುವ ಹಕ್ಕೇ ಇಲ್ಲವೆನ್ನುವ ಗಟ್ಟಿ ಕ್ರೂರ ನಿರ್ಧಾರವಿದೆ. ಆದ್ದರಿಂದ ಅದನ್ನು -ಭಯೋತ್ಪಾದನೆಯನ್ನು ಅಪರಾಧವೆಂದು ಎಲ್ಲಾ ಸರಕಾರಗಳೂ ಕಾನೂನು ಮಾಡಿವೆ.

ಭಯೋತ್ಪಾದನೆ ವಿಧಗಳು

  1. ಅಭಿವೃದ್ಧಿ ಭಯೋತ್ಪಾದನೆ
  2. ಅಂತರರಾಷ್ಟ್ರೀಯ ಭಯೋತ್ಪಾದನೆ
  3. ಹೈಟೆಕ್ ಭಯೋತ್ಪಾದನೆ

ಭಯೋತ್ಪಾದನೆಯಲ್ಲಿ ನೀತಿ ನಿಯಮಗಳು

  • ಭಯೋತ್ಪಾದನೆಯು ರಾಜಕೀಯ ಲಾಭಕ್ಕಾಗಿ ನೆಡೆಸುವ ಹಿಂಸೆಯ ಪ್ರಯೋಗ. ಸಾಮಾನ್ಯವಾಗಿ ಯುದ್ಧಗಳಲ್ಲಿರುವಂತೆ ಯಾವುದೂ ನೀತಿ ನಿಯಮಗಳು ಭಯೋತ್ಪಾದನೆಯಲ್ಲಿರುವುದಿಲ್ಲ. ಇದರಿಂದಾಗಿ ಯಾವುದೇ ಸಮಾಜದ ನೀತಿ ನಿಯಮಗಳನ್ನು ಧಿಕ್ಕರಿಸಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ವ್ಯವಸ್ಥಿತವಾಗಿ ನೆಡೆಸಲ್ಪಡುವ ಕ್ರಿಯೆ.
  • ಭಯೋತ್ಪದಕರ ಧಾಳಿಯು ಸಮಾಜದ ಎಲ್ಲ ವರ್ಗ ಮತ್ತು ಪಂಗಡಗಳನ್ನು ಭೇದ ಭಾವವಿಲ್ಲದೆ ನಾಶಪಡಿಸುವುದರಿಂದ "ಭಯೋತ್ಪಾದನೆ" ಎಂಬ ಪದವು, "ಅನ್ಯಾಯ", "ಅನೀತಿ", "ದೋಷಪೂರಿತ", "ವಿತಂಡ", "ಹೇಯ" ಮತ್ತು "ಹಿಂಸಾತ್ಮಕ" ಎಂಬ ಅರ್ಥ ಕೊಡುವ ಎಲ್ಲ ಪದಗಳ ಜೊತೆ ತಾಳೆ ಹೊಂದುತ್ತದೆ. ವಿಶ್ವದ ಸರ್ಕಾರಿ, ಅಸರ್ಕಾರಿ ಸಂಸ್ಥೆಗಳು ಮತ್ತು ವಿದ್ವಾಂಸರು "ಭಯೋತ್ಪಾದನೆ ಅಥವಾ ಭಯೋತ್ಪಾದಕ" ಎಂಬ ಪದವನ್ನು ವಿಶ್ವ ಮಾನ್ಯತೆ ಹೊಂದದ ಸೈನಿಕ ಶಕ್ತಿ ಎಂದೇ ಪರಿಗಣಿಸುತ್ತಾರೆ. ಯಾಕೆಂದರೆ ವಿಶ್ವದ ಎಲ್ಲ ದೇಶಗಳ ಸೈನ್ಯ ಸಂಸ್ಥೆಗಳು ವಿಶ್ವಸಂಸ್ಥೆಯ ಸಾಮಾನ್ಯ ಸೈನಿಕ ನಿಯಮಗಳಿದೆ ಬಧ್ಧರಾಗಿರುತ್ತಾರೆ. ಆದ್ಧರಿಂದ ಭಯೋತ್ಪಾದಕರು ಯಾವಾಗಲೂ ವಿಶ್ವದ ಖಂಡನೆಗೆ ಒಳಗಾಗುವ "ದುರ್ಜನರು".
  • ಆದರೆ ಈ ಮೇಲಿನ ವಿವರಣೆಯನ್ನು ಯಾವುದೇ ಭಯೋತ್ಪಾದಕರು ಒಪ್ಪುವುದಿಲ್ಲ, ಆದ್ದರಿಂದ "ಭಯೋತ್ಪಾದಕರೆಂದು" ಕರೆಯಲ್ಪಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ತನ್ನನ್ನು ಈ ವಿವರಣೆಗಳಿಂದ ಗುರುತಿಸಲ್ಪಡುವುದಕ್ಕೆ ವಿರೋಧಿಸುತ್ತದೆ. ಆದ್ಧರಿಂದ "ಭಯೋತ್ಪಾದಕರು" ತಮ್ಮನ್ನು ಪ್ರತ್ಯೇಕತಾವಾದಿಗಳು, ಸ್ವಾತಂತ್ರ ಯೋಧರು, ಬಿಡುಗಡೆಮಾಡುವವರು, ದೈವ ಸೈನಿಕರು, ಕ್ರಾಂತಿಕಾರಿಗಳು, ಫಿದಾಯೀ, ಮುಜಾಹಿದ್ದೀನ್, ಜಿಹಾದಿಗಳು ಮತ್ತು ಗೆರಿಲ್ಲಾ‌ಗಳೆಂದು ಕರೆದುಕೊಳ್ಳುತ್ತಾರೆ.
  • ಇಸ್ಲಾಮಿನ ಜಿಹಾದ್ ಕಲ್ಪನೆ ಕೂಡ ಭಯೋತ್ಪಾದನೆಗೆ ಪ್ರಮುಖ ಕಾರಣ. ಪ್ರಪಂಚದ ಹೆಚ್ಚಿನ ಭಯೋತ್ಪಾದಕರು ಇಸ್ಲಾಮ್ ಅನುಯಾಯಿಗಳಾಗಿರುವುದು ಇದನ್ನು ಸಮಥಿ‍ಸುತ್ತದೆ. ಜಿಹಾದ್ ಎಂದರೆ ಹೋರಾಟ ಎಂಬ ಅರ್ಥವಿದೆ. ಅದು ಅಲ್ಲಾನಲ್ಲಿ ನಂಬಿಕೆಯಿಡದವರ ವಿರುದ್ಧದ ಹೋರಾಟ. ಭಯೋತ್ಪಾದನೆಗೂ ಜಿಹಾದ್ ಗೂ ಸಂಬಂಧವಿಲ್ಲ ಎಂದು ಮುಸ್ಲಿಮ್ ವಿದ್ವಾಂಸರು ಹೇಳುತ್ತಾರೆ. ಆದರೆ, ವಿಶ್ವದ ಬಹುತೇಕ ವಿದ್ವಾಂಸರು ಇದನ್ನು ಒಪ್ಪುವುದಿಲ್ಲ. ಸಿದ್ಧಾಂತ ವಿರೋಧವನ್ನು ಹಿಂಸೆಯಿಂದ ನಿಗ್ರಹಿಸುವುದು, ಅಥವಾ ತಮ್ಮ ವಿರೋಧಿಗಳನ್ನು ಕೊಲ್ಲುವುದೇ ಪರಿಹಾರ ಎನ್ನುವುದನ್ನು ಹಿಂದೂ ಧರ್ಮದಂತಹ ಮಾನವತಾವಾದಿ ವಿಚಾರಗಳು ಒಪ್ಪುವುದಿಲ್ಲ.

ನಾಲ್ವರು ಉಗ್ರರು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರು

ಉರಿಯಲ್ಲಿನ ಸೇನಾ ನೆಲೆಯ ಮೇಲೆ ಭಾನುವಾರ ದಾಳಿ ನಡೆಸಿ 18 ಯೋಧರ ಸಾವಿಗೆ ಕಾರಣರಾದ ನಾಲ್ವರು ಉಗ್ರರು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರು ಎಂಬುದನ್ನು ತನಿಖೆ ಖಚಿತಪಡಿಸಿದೆ. ಭಾರಿ ಭದ್ರತೆಯ ಸೇನಾ ಶಿಬಿರದ ಹೊರಗಿನ ತಂತಿ ಬೇಲಿಯನ್ನು ಕತ್ತರಿಸಿ ಉಗ್ರರು ಒಳ ನುಗ್ಗಿದ್ದಾರೆ ಎಂಬ ಅಂಶವೂ ತಿಳಿದು ಬಂದಿದೆ. ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಸೇನಾ ನೆಲೆಯ ಬಗ್ಗೆ ಉಗ್ರರಿಗೆ ಸಮಗ್ರ ಜ್ಞಾನ ಇತ್ತು. ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಗೆ ಉಗ್ರರು ಹೊರಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ ನಂತರ ಯೋಧರು ಅಲ್ಲಿಂದ ಹೊರಬರಲಾಗದಂತೆ ಮಾಡಿದ್ದರು ಎಂಬ ಅಂಶವೂ ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಭಯೋತ್ಪಾದಕ ಧಾಳಿಗೆ ಬಲಿಯಾದವರು

ವರ್ಷ ನಾಗರೀಕರು ಭದ್ರತಾ ಸಿಬ್ಬಂದಿ ಭಯೊತ್ಪಾದಕರು ಒಟ್ಟು
೨೦೧೧ ೩೪ ೩೦ ೧೧೯ ೧೮೩
೨೦೧೨ ೧೬ ೧೭ ೮೪ ೧೧೭
೨೦೧೩ ೨೦ ೬೧ ೧೦೦ ೧೮೧
೨೦೧೪ ೩೨ ೫೧ ೧೧೦ ೧೯೩
೨೦೧೫ ೨೦ ೪೧ ೧೧೩ ೧೭೪
೨೦೧೬ ೧೦ ೬೯ ೧೨೮ ೨೦೭
ಒಟ್ಟು ೧೩೨ ೨೬೯ ೬೫೪ ೧೦೫೫

ತರಬೇತಿ

‘ಸ್ನೇಹಿತನೊಬ್ಬನ  ಮೂಲಕ ೨೦೦೨ರಲ್ಲಿ ಸಂಘಟನೆ ಸೇರಿಕೊಂಡಿದ್ದೆ. ತ್ರಿಪುರ, ಬಿಹಾರ, ಗುಜರಾತ್‌ನಲ್ಲಿ ತರಬೇತಿ ಪಡೆದಿದ್ದೆ. ಎ.ಕೆ–೫೬ ಬಂದೂಕು ಬಳಕೆ, ಬಾಂಬ್‌ ತಯಾರಿಕೆ ಹಾಗೂ  ಆತ್ಮಾಹುತಿ ಬಾಂಬ್‌ ಬಗ್ಗೆ ಅಲ್ಲಿಯೇ ತರಬೇತಿ ಪಡೆದಿದ್ದೆ. ತರಬೇತಿ ವೇಳೆಯೇ ಎಲ್‌ಇಟಿ ಮುಖ್ಯಸ್ಥರು, ದೇಶದ ವಿಜ್ಞಾನಿಗಳ ಹತ್ಯೆ ಮಾಡುವ ಬಗ್ಗೆ ಸಂಚು ರೂಪಿಸಿದ್ದರು.’ ‘ದೇಶದ ಹಲವೆಡೆ ನೆಲೆಸಿದ್ದ ಆಯ್ದ ವಿಜ್ಞಾನಿಗಳ ವಾಸಸ್ಥಾನ ಹಾಗೂ ಕಚೇರಿಗಳ ಮಾಹಿತಿ ಸಂಗ್ರಹಿಸಿದ್ದೆವು. ಅವರ ಚಲನವಲನಗಳ ಬಗ್ಗೆ ನಿಗಾವಹಿಸಿ  ಹತ್ಯೆ ಮಾಡುವುದು ನಮ್ಮ ಉದ್ದೇಶವಾಗಿತ್ತು’ ಎಂದು ಹಬೀಬ್‌ ಹೇಳಿಕೊಂಡಿದ್ದಾನೆ.

ಐಐಎಸ್‌ಸಿ ಬಳಿ ಮಾಹಿತಿಸಂಗ್ರಹ

ಐಐಎಸ್‌ಸಿ ಬಳಿಯೇ ಸುತ್ತಾಟ: ‘೨೦೦೫ರ ಡಿ. 28ರಂದು ಐಐಎಸ್‌ಸಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ವಿಜ್ಞಾನಿಗಳು ಬರುತ್ತಾರೆ ಎಂಬ ಮಾಹಿತಿ ಇತ್ತು. ಹೀಗಾಗಿ ಎ.ಕೆ.೫೬ ಬಂದೂಕು ಬಳಸುವಲ್ಲಿ ಪರಿಣಿತನಾಗಿದ್ದ ನೂರುಲ್ಲಾ ಖಾನ್‌ ಅಲಿಯಾಸ್‌ ಶಬಾವುದ್ದೀನ್‌ ನೇತೃತ್ವದ ತಂಡವು ಬೆಂಗಳೂರಿಗೆ ಬಂದಿತ್ತು. ಆ ತಂಡ ಹಲವು ದಿನಗಳವರೆಗೆ  ಐಐಎಸ್‌ಸಿ ಸುತ್ತ ಓಡಾಡಿ ಮಾಹಿತಿ ಕಲೆಹಾಕಿತ್ತು’ ಎಂದು ಶಂಕಿತ ಹೇಳಿರುವುದಾಗಿ ಎಟಿಎಸ್‌ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ದಾಳಿ ಮುಗಿದ ಬಳಿಕ ತಂಡವು ಅಲ್ಲಿಂದ ತಪ್ಪಿಸಿಕೊಂಡು ಬಿಹಾರಕ್ಕೆ ಬಂದಿತ್ತು. ತಂಡದ ಸದಸ್ಯರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದ್ದೆ. ಅಷ್ಟರಲ್ಲಿ ಕರ್ನಾಟಕ ಪೊಲೀಸರು ಅವರನ್ನು ಬಂಧಿಸಿದರು’ ಎಂದು ಶಂಕಿತ ತಿಳಿಸಿದ್ದಾನೆ.

ಸ್ನೇಹಿತರು ಜೈಲಿನಲ್ಲಿ

  • ‘ಹಬೀಬ್‌ನ ಸ್ನೇಹಿತರಲ್ಲಿ ಹಲವರು ಜೈಲಿನಲ್ಲಿದ್ದಾರೆ. ಕೆಲವರು ತೀರಿಕೊಂಡಿದ್ದಾರೆ. ಒಂಟಿಯಾಗಿದ್ದ ಆತ ಅಗರ್ತಲಾ ಬಳಿಯ ಜ್ಞಾನೇಂದ್ರನಗರದಲ್ಲಿ ನೆಲೆಸಿದ್ದ. ಎಲ್‌ಇಟಿಯ ಸಾರಿಗೆ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ’ ಎಂದು ಎಟಿಎಸ್‌ ಅಧಿಕಾರಿ ತಿಳಿಸಿದರು.

ದಾಖಲೆ ನಿಲುಗಡೆ

21 ಸಂಘಟನೆಗಳ 50 ಸಾವಿರ ಉಗ್ರರು ಅಫ್ಘಾನಿಸ್ತಾನದಲ್ಲಿ

  • 21 ಸಂಘಟನೆಗಳ 50 ಸಾವಿರ ಉಗ್ರರು ಅಫ್ಘಾನಿಸ್ತಾನದಲ್ಲಿದ್ದಾರೆ: ರಕ್ಷಣಾ ಇಲಾಖೆ:
  • ಅಫ್ಘಾನಿಸ್ತಾನ ರಕ್ಷಣಾ ಸಚಿವ ಹಿಲಾವುದ್ದೀನ್‌ ಹೆಲಾಲ್‌ ಅವರು ತಮ್ಮ ದೇಶದಲ್ಲಿ 21 ಸಂಘಟನೆಗಳಿಗೆ ಸೇರಿದ ಸುಮಾರು 50 ಸಾವಿರಕ್ಕೂ ಹೆಚ್ಚು ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಶೇ. 70 ರಷ್ಟು ಉಗ್ರರು ಪಾಕಿಸ್ತಾನ ಮೂಲದವರು ಎಂದು ಬೀಜಿಂಗ್‌ ಕ್ಸಿಯಾಂಗ್ಶಾನ್‌ ಫೋರಂನಲ್ಲಿ ಹೇಳಿದ್ದಾರೆ. ಅಪಾಯದಲ್ಲಿ ಮಾನವೀಯತೆ: ಜಾಗತಿಕ ಭಯೋತ್ಪಾದನೆ ಬೆದರಿಕೆ ಸೂಚಕಗಳು’ ವಿಷಯದ ಮೇಲೆ ನಡೆದ ಅಧ್ಯಯನದ ವರದಿಯಲ್ಲಿ ಈ ರೀತಿ ಹೇಳಲಾಗಿದೆ.

ಪುಲ್ವಾಮ ದಾಳಿ: ಪ್ರಪಂಚದಲ್ಲಿ ನಡೆದ ಅತಿ ಭಯಂಕರ ಭಯೋತ್ಪಾದನೆ ದಾಳಿ ಪುಲ್ವಾಮಾ ದಾಳಿ.ದೇಶ ಕಾಯುವ ಸೈನಿಕರ ಮೇಲೆ ಅತಿ ಕ್ರೂರವಾಗಿ ದಾಳಿ ಮಾಡಿ ಭಾರತದ ಸೈನಿಕರನ್ನು ಕೊಂದರು.ಈ ಒಂದು ಘಟನೆ ಇಡೀ ದೇಶವನ್ನು ಮೌನಕ್ಕೆ ಶರಣಾಗುವಂತೆ ಮಾಡಿತು.ಇಡೀ ಪ್ರಪಂಚ ಇದನ್ನು ಖಂಡಿಸಿತು,ಅಮಾಯಕರ ಪ್ರಾಣ ಹೋಯಿತು.ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ , ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗು ಕೇಂದ್ರ ಮೀಸಲು ಪೊಲೀಸ್ ಪಡೆಯ ೪೦ ಮಂದಿ ಹುತಾತ್ಮರಾದರು. ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಇಸ್ಲಾಮ್ ಉಗ್ರಗಾಮಿ ಗುಂಪು ಜೈಷ್–ಎ–ಮೊಹಮದ್ ಹೊತ್ತುಕೊಂಡಿದೆ. ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕನನ್ನು ಆಕ್ರಮಣಕಾರಿ ಎಂದು ಗುರುತಿಸಲಾಗಿದೆ. [೧]

ದಾಳಿಯ ಸ್ಥಳ Location ಲೆಥ್ಪಾರ, ಪುಲ್ವಾಮಾ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರ, ಭಾರತ

ನೋಡಿ

ಹೊರ ಸಂಪರ್ಕ

ಉಲ್ಲೇಖ

Tags:

ಭಯೋತ್ಪಾದನೆ ಪರಿಚಯಭಯೋತ್ಪಾದನೆ ವಿಧಗಳುಭಯೋತ್ಪಾದನೆ ನಾಲ್ವರು ಉಗ್ರರು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರುಭಯೋತ್ಪಾದನೆ ಭಾರತದಲ್ಲಿ ಭಯೋತ್ಪಾದಕ ಧಾಳಿಗೆ ಬಲಿಯಾದವರುಭಯೋತ್ಪಾದನೆ ದಾಖಲೆ ನಿಲುಗಡೆಭಯೋತ್ಪಾದನೆ

🔥 Trending searches on Wiki ಕನ್ನಡ:

ಭಾರತೀಯ ಆಡಳಿತಾತ್ಮಕ ಸೇವೆಗಳುಮಾಟ - ಮಂತ್ರಕವಿಗಳ ಕಾವ್ಯನಾಮವಾಲ್ಮೀಕಿಇಸ್ಲಾಂ ಧರ್ಮಜಲ ಮಾಲಿನ್ಯಮಂಕುತಿಮ್ಮನ ಕಗ್ಗಸ್ವಚ್ಛ ಭಾರತ ಅಭಿಯಾನಸಮುಚ್ಚಯ ಪದಗಳುದಶರಥಸಂಭೋಗಅಶೋಕ್ಕರ್ನಾಟಕದ ಏಕೀಕರಣಭಾರತೀಯ ಶಾಸ್ತ್ರೀಯ ಸಂಗೀತಒಲಂಪಿಕ್ ಕ್ರೀಡಾಕೂಟಗ್ರಾಮ ಪಂಚಾಯತಿಕರ್ನಾಟಕದ ಹಬ್ಬಗಳುಚಾಣಕ್ಯಹರಕೆಭಾರತದ ಸ್ವಾತಂತ್ರ್ಯ ಚಳುವಳಿನರೇಂದ್ರ ಮೋದಿಸೂರ್ಯಡೊಳ್ಳು ಕುಣಿತಅರ್ಥಶಾಸ್ತ್ರಶನಿಭಾಮಿನೀ ಷಟ್ಪದಿಇಂಡಿಯನ್ ಪ್ರೀಮಿಯರ್ ಲೀಗ್ಶ್ರವಣಬೆಳಗೊಳಭತ್ತಅಮೃತಹನುಮಂತಬೈಗುಳಭಾರತದ ರಾಷ್ಟ್ರಗೀತೆಕುಂಬಳಕಾಯಿದಿನೇಶ್ ಕಾರ್ತಿಕ್ಭಾರತದ ಮಾನವ ಹಕ್ಕುಗಳುಮೈಸೂರು ಅರಮನೆಗರ್ಭಧಾರಣೆಕರ್ನಾಟಕ ವಿಶ್ವವಿದ್ಯಾಲಯಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಾರುಕಟ್ಟೆಚಿತ್ರದುರ್ಗಮಾನವ ಸಂಪನ್ಮೂಲ ನಿರ್ವಹಣೆಅದ್ವೈತಫೇಸ್‌ಬುಕ್‌ಭಾರತೀಯ ರಿಸರ್ವ್ ಬ್ಯಾಂಕ್ಭಾರತದ ರಾಷ್ಟ್ರಪತಿಗೌತಮಿಪುತ್ರ ಶಾತಕರ್ಣಿಚಂಡಮಾರುತಚಿಕ್ಕಮಗಳೂರುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕೆ. ಎಸ್. ನರಸಿಂಹಸ್ವಾಮಿಚಿಪ್ಕೊ ಚಳುವಳಿಭಾರತದಲ್ಲಿ ಬಡತನಭಾರತದ ಮುಖ್ಯ ನ್ಯಾಯಾಧೀಶರುಒಂದನೆಯ ಮಹಾಯುದ್ಧಕೇರಳಮುಖ್ಯ ಪುಟಶಕುನಹಣಕಾಸು ಸಚಿವಾಲಯ (ಭಾರತ)ಕಬಡ್ಡಿಅರ್ಥ ವ್ಯತ್ಯಾಸಕಲಿಕೆನೀತಿ ಆಯೋಗಕನ್ನಡ ರಾಜ್ಯೋತ್ಸವಕರ್ನಾಟಕ ಸಂಗೀತವೃತ್ತಪತ್ರಿಕೆಮೇಘಾ ಶೆಟ್ಟಿಪೂರ್ಣಚಂದ್ರ ತೇಜಸ್ವಿಕಲ್ಪನಾಸೌದೆಸಂಗೊಳ್ಳಿ ರಾಯಣ್ಣವೇಗೋತ್ಕರ್ಷಮೂಲಭೂತ ಕರ್ತವ್ಯಗಳುಚೆಲ್ಲಿದ ರಕ್ತಇಂದಿರಾ ಗಾಂಧಿ🡆 More