ಪ್ರಾಣಾಯಾಮ: ಸ್ವಸ್ತಿಕ್ ಸನ

ಪ್ರಾಣಾಯಾಮ (ಸಂಸ್ಕೃತ  : प्राणायाम prāṇāyāma ) ಸಂಸ್ಕೃತ ಶಬ್ದವಾಗಿದ್ದು, ಪ್ರಾಣಾಯಾಮ ಎಂದರೆ ಪ್ರಾಣವನ್ನು ಹತೋಟಿಯಲ್ಲಿಡು ಅಥವಾ ಉಸಿರಾಡು ಎಂದಿದೆ .

ಈ ಶಬ್ದವು ಸಂಸ್ಕೃತದ ಎರಡು ಶಬ್ದಗಳಿಂದ ರಚಿಸಲ್ಪಟ್ಟಿದ್ದು, ಪ್ರಾಣ, ಜೀವ ಶಕ್ತಿ, ಅಥವಾ ಮಹತ್ವದ ಶಕ್ತಿ ,ಅದರಲ್ಲಿಯೂ ಮುಖ್ಯವಾಗಿ, ಉಸಿರು, ಮತ್ತು "ಆಯಾಮ", ಮುಂದಕ್ಕೆ ಹಾಕು ಅಥವಾ ಹತೋಟಿಯಲ್ಲಿಡು ಎಂಬುದೇ ಆಗಿದೆ. ಮತ್ತೆ ಬದಲಾಯಿಸಿ ಹೇಳುವುದಾದರೆ 'ಜೀವಶಕ್ತಿಯ ಹಿಡಿತವೇ' ಆಗಿದೆ. (ಪ್ರಾಣ ). ಯೋಗದಲ್ಲಿ ಇದನ್ನು ತಾಂತ್ರಿಕ ಶಬ್ದವಾಗಿ ಉಪಯೋಗಿಸುವುದಾದರೆ, ಬದಲಾದ ರೀತಿಯಲ್ಲಿ ಹೆಚ್ಚು ಸ್ಪಷ್ಟವಾಗಿ "ಉಸಿರಿನ ನಿಯಂತ್ರಣ" ಎನ್ನಬೇಕಾಗುತ್ತದೆ. ವಾಚ್ಯಾರ್ಥ ಬದಲಾವಣೆಯಲ್ಲಿ, ಎ. ಎ. ಮಕ್ ಡೋನೆಲ್ಲ್ಸ್ ರ "ಉಸಿರಾಟದ ತಾತ್ಕಾಲಿಕ ತಡೆ " ಮತ್ತು ಐ. ಕೆ. ತೈಮ್ನಿ ರವರ "ಕ್ರಮಬದ್ಧ ಉಸಿರಾಟ ".

ಪದಮೂಲ/ಶಬ್ದವ್ಯುತ್ಪತ್ತಿ

ಪ್ರಾಣಾಯಾಮ (ದೇವನಾಗರಿ : प्राणायाम, prāṇāyāma ) ಸಂಸ್ಕೃತದ ಸಂಯೋಜನಾ ಶಬ್ದ .

ವಿ . ಎಸ್ . ಆಪ್ಟೆ ಯವರು ಪ್ರಾಣ ಎಂಬ ಶಬ್ದಕ್ಕೆ ೧೪ ವಿಧದ ಅರ್ಥಗಳನ್ನು ಹೇಳುತ್ತಾರೆ. (ದೇವನಾಗರಿ : प्राण, prāṇa ) ಇವುಗಳನ್ನೂ ಸೇರಿಸಿಕೊಂಡಂತೆ :

  • ಉಸಿರು , ಉಸಿರಾಟ
  • ಜೀವನ, ಉಸಿರು , ಮಹತ್ವದ ಗಾಳಿ , ಜೀವನದ ತತ್ವ (ಸಾಮಾನ್ಯವಾಗಿ ಈ ಭಾವದಲ್ಲಿ ಬಹುವಚನ, ತಿಳಿದುಕೊಂಡಂತೆ ೫ ವಿಧದ ಮಹತ್ವದ ಗಾಳಿ /ಉಸಿರು, ಆದರೆ ಮೂರು , ಆರು , ಏಳು , ಒಂಭತ್ತು , ಮತ್ತು ಹತ್ತು ವಿಧಗಳೂ ಇವೆ ಎಂದು ಹೇಳುತ್ತಾರೆ.)
  • ಶಕ್ತಿ , ಓಜಸ್ಸು
  • ಚೈತನ್ಯ ಅಥವಾ ಆತ್ಮ

ಈ ಅರ್ಥಗಳಲ್ಲಿ , "ಮಹತ್ವದ ಗಾಳಿ/ಉಸಿರು " ಪರಿಕಲ್ಪನೆಯಲ್ಲಿ ಉಪಯೋಗಿಸಿದಂತೆ, ಭಟ್ಟಾಚಾರ್ಯ ವಿವರಿಸಿದಂತೆ, ಪ್ರಾಣಾಯಾಮ ದ ಬಗ್ಗೆ ಸಂಸ್ಕೃತ ಪುಸ್ತಕಗಳಲ್ಲಿ ವಿವರಿಸಿ ಉಪಯೋಗಿಸಿಕೊಳ್ಳಲಾಗಿದೆ. ಥಾಮಸ್ ಮಕ್ ಈವಿಲ್ಲೆಯ್ ಭಾಷಾಂತರಿಸಿದಂತೆ, "ಪ್ರಾಣ " ವನ್ನು "ಚೈತನ್ಯ-ಶಕ್ತಿ " ಎಂದು ಕರೆಯಬಹುದಾಗಿದೆ. ಇದರ ಸೂಕ್ಷ್ಮ ಭೌತಿಕ ರೀತಿ ಎಂದರೆ "ಉಸಿರು ",ಆದರೆ ಇದು ರಕ್ತದಲ್ಲಿಯೂ ಇದೆ, ಮತ್ತು ಇದನ್ನು ಕೇಂದ್ರೀಕರಿಸಿ ಹೇಳುವುದಾದರೆ, ಗಂಡಸರಲ್ಲಿ 'ವೀರ್ಯ' ಮತ್ತು ಹೆಂಗಸರಲ್ಲಿ 'ಯೋನಿನಾಳದ ದ್ರವ'.

ಮೋನಿಯರ್ -ವಿಲ್ಲಿಯಮ್ಸ್ ಈ ಶಬ್ದಗಳನ್ನು ವಿವರಿಸುತ್ತಾ prāṇāyāma ಹೇಳುತ್ತಾ (ಎಂ . ಪಿ ಎಲ್ ಕೂಡ . "ಎನ್).೩ ರೀತಿಯ 'ಉಸಿರಾಟದ -ಅಭ್ಯಾಸ ಮಾಡುತ್ತಾ,Saṃdhyā (ನೋಡಿ pūraka , recaka , kumbhaka). ಈ ತಾಂತ್ರಿಕ ವಿಶ್ಲೇಷಣೆಯು ಉಸಿರಾಟದ ನಿಯಂತ್ರಣದ ಮೂರು ಕ್ರಿಯೆಗಳ ಬಗ್ಗೆ ಹೇಳುವ ಭಟ್ಟಾಚಾರ್ಯ: pūraka (ಉಸಿರನ್ನು ಒಳಕ್ಕೆ ಎಳೆದುಕೊಳ್ಳಲು ), kumbhaka (ಉಳಿಸಿಕೊಳ್ಳಲು ), ಮತ್ತು recaka (ಉಸಿರನ್ನು ಹೊರಬಿಡಲು ). ಪ್ರಾಣಾಯಾಮದಲ್ಲಿ ಬೇರೆ ರೀತಿಗಳೂ ಸಹ ಇದ್ದು,ಈ ಮೂರು-ವಿಧದ ಮಾದರಿಗೆ ಸೇರಿಕೊಂಡಂತೆ ಇದೆ ಎಂದು ಹೇಳುತ್ತಾರೆ.

ಮಕ್ ಡೋನೆಲ್ ತಮ್ಮ ಶಬ್ದವ್ಯುತ್ಪತ್ತಿಯಲ್ಲಿ prāṇa + ಆಯಾಮ ವನ್ನು ಮತ್ತೆ ವಿವರಿಸುತ್ತಾ, ಉಸಿರಾಟವನ್ನು ಮುಂದಕ್ಕೆ ಹಾಕು ಎಂದು ಹೇಳುತ್ತಾರೆ. ( ಎಸ್ ಟಿ ಎಸ್ . ಪಿ ಎಲ್ . )".

ಆಪ್ಟೆ ಯವರ ವಿವರಣೆಯು āyāmaḥ ಬರುವುದು ā + yām ಮತ್ತು ವಿವಿಧ ಹಲವಾರು ನಾನಾವಿಧದ ಅರ್ಥಗಳನ್ನು, ಈ ಶಬ್ದವನ್ನು ಉಪಯೋಗಿಸಿದಾಗ ಕೊಡುತ್ತದೆ. ಮೊದಲ ಮೂರು ಅರ್ಥಗಳು "ಉದ್ದ ", "ವಿಸ್ತರಣೆ , ವಿಸ್ತೀರ್ಣ ", ಮತ್ತು "ಹಿಗ್ಗಿಸುವಿಕೆ , ವಿಸ್ತಾರಗೊಳ್ಳು ", ಆದರೆ ಈ ಶಬ್ದದ ಮುಖ್ಯ ಬಳಕೆಯಲ್ಲಿ prāṇāyāma ಈ ಬಗ್ಗೆ ಅವರು ವಿವರಿಸುತ್ತಾ, āyāmaḥ ಅರ್ಥೈಸಿದಂತೆ,"ನಿಗ್ರಹಿಸು,ಹಿಡಿತದಲ್ಲಿಡು , ನಿಲ್ಲಿಸು "ಎಂದಾಗುತ್ತದೆ.

ಈ ಶಬ್ದವ್ಯುತ್ಪತ್ತಿಯ ಬದಲಾದ ಶಬ್ದಕ್ಕೆ ರಾಮಮೂರ್ತಿ ಮಿಶ್ರ , ಹೇಳುತ್ತಾ  :

"ವೈಯಕ್ತಿಕ ಶಕ್ತಿಯನ್ನು ಕಾಸ್ಮಿಕ್ ಶಕ್ತಿಯಾಗಿ ವಿಸ್ತರಿಸುವಿಕೆ prāṇāyāma (prāṇa , ಶಕ್ತಿ + ayām , ವಿಸ್ತರಣೆ )ಎನ್ನುತ್ತಾನೆ ."

"ಯಾಮ " ಶಬ್ದದ (ದೇವನಾಗರಿ : याम, yāma ) ಅರ್ಥವೆಂದರೆ "ನಿಲುಗಡೆ " ಅಥವಾ ಹೆಚ್ಚು ಸಾಮಾನ್ಯವಾಗಿ "ಹತೋಟಿ " ಅಥವಾ "ನಿಗ್ರಹಿಸು ".

ಪ್ರಾಣಾಯಾಮದಿಂದ ಪ್ರಯೋಜನ

ಯೋಗಕ್ಕೂ ರೋಗಕ್ಕೂ ನಂಟಿದೆ. ದೇಹದೊಳಗೆ ಹರಡಿರುವ ರೋಗ, ನಮಗೆ ಹೇಳದೇ ಕೇಳದೇ ಹೋಗಬೇಕು ಅಂದರೆ, ಯೋಗ ಮಾಡಬೇಕು. ರೋಗ ಓಡಿಸೋಕೂ ಮೊದಲು ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳಬೇಕು. ಅಂದರೆ, ಪ್ರಾಣಾಯಾಮ ಮಾಡಲೇಬೇಕು. ಸುಖಪ್ರಾಣಾಯಾಮವನ್ನು ಎಲ್ಲರೂ ಮಾಡ್ತಾರೆ. ನಾವು ಸಾಮಾನ್ಯವಾಗಿ ಉಸಿರಾಡುವುದನ್ನೇ ಗಮನವಿಟ್ಟು, ವ್ಯವಸ್ಥಿತವಾಗಿ ಉಸಿರಾಡುವುದೇ ಸುಖಪ್ರಾಣಾಯಾಮ. ತನ್ನ ಕೈ ಕೆಳಗಿನ ಉದ್ಯೋಗಿಗಳು ಹೇಗೆ ಕೆಲಸ ಮಾಡುತ್ತಾರೆ ಅಂತ ಬಾಸ್‌ ನೋಡ್ತಾರಲ್ಲ; ಆರೀತಿ ಇದು. ಪ್ರಾಣಾಯಾಮಕ್ಕೆ

ಕುಳಿತಾಗ, ಉಸಿರ ಮೇಲೆ ಗಮನ ಕೊಡಿ. ಉಸಿರನ್ನು ಒಳಗೆ ತೆಗೆದುಕೊಂಡಾಗ, ಹೊಟ್ಟೆ ಉಬ್ಬಬೇಕು, ಬಿಟ್ಟಾಗ ಪೂರ್ತಿ ಖಾಲಿಯಾಗಬೇಕು. ಇದನ್ನು ಗಮನಿಸುತ್ತಲೇ, ಕುಂಭಕವನ್ನು ಮಾಡಬೇಕಾಗುತ್ತದೆ. ಕುಂಭಕ ಅಂದರೆ, ಮತ್ತೇನಿಲ್ಲ. ಉಸಿರನ್ನು ಎಳೆದುಕೊಂಡ ನಂತರ, ಬಿಡುವ ಮೊದಲು ಸ್ವಲ್ಪ ಹೊತ್ತು ಒಳಗೇ ಇಟ್ಟುಕೊಳ್ಳುವುದು. ಇದನ್ನು ಕುಂಭಕ ರೇಚಕ ಅಂತಾರೆ. ಉಸಿರನ್ನು ಪೂರ್ತಿ ಬಿಟ್ಟು ಒಂದು ನಿಮಿಷದ ನಂತರ ಎಳೆದುಕೊಳ್ಳುವುದಕ್ಕೆ ಕುಂಭಕ ಪೂರಕ ಅಂತಾರೆ.

ಪ್ರಾಣಾಯಾಮದ ಜೊತೆಗೇ ವೀರಾಸನವನ್ನೂ ಮಾಡಿ. ಅದು ಹೀಗೆ- ಎರಡೂ ಕಾಲುಗಳನ್ನು ಚಾಚಿ ನೇರವಾಗಿ ಕುಳಿತುಕೊಳ್ಳಿ. ಬಲಗಾಲನ್ನು ಹಿಂದಕ್ಕೆ ಮಡಚಿ, ಪಕ್ಕಕ್ಕೆ ಇಟ್ಟುಕೊಳ್ಳಿ. ಬಲಪಾದ ಕಾಲಿನ ನೇರಕ್ಕಿರಲಿ. ಮಂಡಿಗಳನ್ನು ಸಾಧ್ಯವಾದಷ್ಟು ಹತ್ತಿರ ತನ್ನಿ. ಈ ಭಂಗಿಯಲ್ಲಿ ಉಸಿರಾಡುತ್ತಾ, ಎರಡು ನಿಮಿಷ ಹಾಗೇ ಕುಳಿತುಕೊಳ್ಳಿ.

ಹಠಯೋಗ ಮತ್ತು ರಾಜ ಯೋಗದ ವಿಧಗಳು

ಪ್ರಾಣಾಯಾಮದ ವಿವಿಧ ರೀತಿಯಾದ ಹಠ ಮತ್ತು ರಾಜ ಯೋಗದ ವ್ಯತ್ಯಾಸಗಳ ಬಗ್ಗೆ ಕೆಲವು ಪಂಡಿತರು ,ಆರಂಭಿಕ ಕಲಿಕೆಯವರಿಗೆ 'ಹಠ'ಯೋಗದ ಬಗ್ಗೆ ಹೇಳುತ್ತಾರೆ. ತೈಮ್ನಿ ಯವರ ಪ್ರಕಾರ , ಹಠಯೋಗ ಪ್ರಾಣಾಯಾಮದಲ್ಲಿ , ಪ್ರಾಣದ ಅಲೆಗಳು ಕೈಚಳಕವನ್ನು ತೋರಿ ಉಸಿರಾಟದ ಕಟ್ಟುಪಾಡಿನಲ್ಲಿ ಚಿತ್ತವೃತ್ತಿಯನ್ನು ಹಿಡಿತದಲ್ಲಿರಿಸಿ ಏಕಾಗ್ರತೆಯಲ್ಲಿ ಬದಲಾಗಿದ್ದು, ಆದರೆ ರಾಜ ಯೋಗದಲ್ಲಿ ಪ್ರಾಣಾಯಾಮವು ಚಿತ್ತ -ವೃತ್ತಿಯ ಏಕಾಗ್ರತೆಯಲ್ಲಿದ್ದು, ಮನಸ್ಸಿನ ಇಚ್ಚಾಶಕ್ತಿಯನ್ನು ಹೊಂದಿದೆ. ವಿದ್ಯಾರ್ಥಿಗಳು ಪ್ರಾಣಾಯಾಮವನ್ನು ಅಭ್ಯಸಿಸಲು ಅರ್ಹರಾದಾಗ, ಹಠಯೋಗ ಪ್ರಾಣಾಯಾಮದ ಕೌಶಲಗಳನ್ನು ಮೊದಲ ಪ್ರಯತ್ನವಾಗಿಸುತ್ತಾರೆ .

ಭಗವದ್ಗೀತೆ

ಭಗವದ್ಗೀತೆ ಯ ಶ್ಲೋಕ ೪.೨೯ ರಲ್ಲಿ ಪ್ರಾಣಾಯಾಮದ ಬಗ್ಗೆ ಹೇಳಲಾಗಿದೆ.

ಉಲ್ಲೇಖಗಳು/ಆಧಾರ

Prana is a subtle invisible force. It is the life-force that pervades the body. It is the factor that connects the body and the mind, because it is connected on one side with the body and on the other side with the mind. It is the connecting link between the body and the mind. The body and the mind have no direct connection. They are connected through Prana only and this Prana is different from the breathing you have in your physical body.

— Swami Chidananda Saraswati

Yoga works primarily with the energy in the body, through the science of pranayama, or energy-control. Prana means also ‘breath.’ Yoga teaches how, through breath-control, to still the mind and attain higher states of awareness. The higher teachings of yoga take one beyond techniques, and show the yogi, or yoga practitioner, how to direct his concentration in such a way as not only to harmonize human with divine consciousness, but to merge his consciousness in the Infinite.

— Paramahansa Yogananda

ಪತಂಜಲಿಯ ಯೋಗ ಸೂತ್ರಗಳು

ಪತಂಜಲಿಯ ಯೋಗ ಸೂತ್ರಗಳ. ೨.೨೯ ರ ಶ್ಲೋಕದಲ್ಲಿ ,ರಾಜಯೋಗ ದ ೮ ಶಾಖೆಗಳ ಪೈಕಿ ಪ್ರಾಣಾಯಾಮವು ೪ ನೇ ಶಾಖೆಯಾಗಿದೆ. ಪತಂಜಲಿಯು ತನ್ನ ಯೋಗಸೂತ್ರದ ಶ್ಲೋಕ ೨.೪೯ ರ ಮೂಲಕ ೨.೫೧ ರಲ್ಲಿ ಪ್ರಾಣಾಯಾಮದ ಬಗ್ಗೆ ಸ್ಪಷ್ಟನೆ ನೀಡುತ್ತಾ, ೨.೫೨ ಮತ್ತು ೨.೫೩ ರ ಶ್ಲೋಕಗಳಲ್ಲಿ ಪ್ರಾಣಾಯಾಮದ ಅಭ್ಯಾಸ ದಿಂದ ಆಗುವ ಉಪಯೋಗಗಳನ್ನು ವಿವರಿಸುತ್ತಾನೆ. ಪ್ರಾಣದ ಪ್ರಕೃತಿಯ ಬಗ್ಗೆ ಪತಂಜಲಿಯು ,ಹೊಸದಾಗಿ ಬೆಳಕನ್ನು ಬೀರಿದೆ, ಪ್ರಾಣಾಯಾಮದ ವಿವರಣೆ ಮತ್ತು ಅಭ್ಯಾಸಗಳ ಬಗ್ಗೆ ಹೆಚ್ಚು ಅರ್ಥಗರ್ಭಿತ ಅಭಿವೃದ್ಧಿಗೆ ಗಮನ ನೀಡಿದ್ದಾನೆ. ಬುದ್ದನ ಪುಸ್ತಕಗಳಲ್ಲಿ ತಿಳಿಸಿರುವಂತೆ , ಪ್ರಾಣಾಯಾಮವನ್ನು ಅತ್ಯವಶ್ಯಕ ಅಭ್ಯಾಸವಾಗಿ ಕರೆಯಲ್ಪಟ್ಟಿದ್ದು,ಇದರಿಂದಾಗಿ 'ಏಕಾಗ್ರತೆಯ'ಪ್ರಾಥಮಿಕ ತಿಳುವಳಿಕೆಗೆ ಆಶಯವಾಗುತ್ತದೆ.

ಪತಂಜಲಿಯ ರಾಜ ಯೋಗದ ಉಪನ್ಯಾಸದ ಇತರ ಶಾಖೆಗಳಾದ , ಅದರಲ್ಲೂ ವಿಶೇಷವಾಗಿ ಯಮ , ನಿಯಮ , ಮತ್ತು ಆಸನ ಇವುಗಳನ್ನು ಪ್ರಾಣಾಯಾಮದ ಜೊತೆಗೆ ಕಲಿಯುವುದು ಸೂಕ್ತವೆಂದು ಹಲವು ಯೋಗ ಗುರುಗಳು ಹೇಳುತ್ತಾರೆ.

ಇದರಲ್ಲಿರುವ ಹಲವಾರು ತಾಂತ್ರಿಕತೆಗಳು/ ಕೌಶಲಗಳು...

  1. ಸೂರ್ಯ ಭೇದನ,
  2. ಚಂದ್ರ ಭೇದನ ,
  3. ನಾಡಿ ಶೋಧನ (ಅನುಲೋಮ ವಿಲೋಮ ),
  4. ಭಸ್ತ್ರಿಕ ,
  5. ಕಪಾಲಭಾತಿ ,
  6. ಉಜ್ಜಯಿ ಉಸಿರು
  7. ಪ್ಲವಿನಿ (ಭುಜಂಗಿನಿ )
  8. ಭ್ರಾಮರಿ
  9. ಶೀತ್ಕಾರಿ
  10. ಶೀತಲಿ
  11. ಶೀತ್ಕರಿ ಮತ್ತು ಶೀತಲಿಯ ಜೊತೆಗಾರಿಕೆ /ಬೆಸುಗೆ
  12. ಮೂರ್ಛಾ

ಬೌದ್ಧಧರ್ಮ

ಪಾಳಿ ಬುದ್ಧಿಸ್ಟ್ ಕ್ಯಾನನ್ ಪ್ರಕಾರ , ಬುದ್ಧನು ತನ್ನ ಜ್ಞಾನೋದಯವನ್ನು ಹೊಂದುವ ಮೊದಲು ಧ್ಯಾನದ ತಾಂತ್ರಿಕ ಕ್ರಿಯೆಯಲ್ಲಿ ತೊಡಗುತ್ತಾ, ಗಂಟಲನ್ನು (ಅಂಗಳ )ತನ್ನ ನಾಲಗೆಯಿಂದ ಒತ್ತುತ್ತಾ, ತನ್ನ ಉಸಿರಾಟವನ್ನು ನಿಯಂತ್ರಿಸಲು ಯತ್ನಿಸಿದ. ಇದು ಜ್ಞಾನೋದಯಕ್ಕೆ ಅತ್ಯಂತ ಕಷ್ಟದಾಯಕ ಮತ್ತು ಹಿತಕರವಲ್ಲದ ಕ್ರಿಯೆಯಾಗಿದೆ. ಬುದ್ಧನ ತಿಳಿವಳಿಕೆಅನ್ವಯ , ಉಸಿರಾಟ ಕ್ರಿಯೆ ನಿಲ್ಲುವುದು ೪ ನೇ ಝಾನ , ಆದರೂ ಇದು ತಾಂತ್ರಿಕತೆಯ ಪಾರ್ಶ್ವ ಪರಿಣಾಮವಾಗಿದ್ದು,ಉದ್ದೇಶಪೂರ್ವಕ ಪರಿಶ್ರಮದ ಫಲಿತಾಂಶ ಪಡೆಯುವುದಿಲ್ಲ.

ಅನಪಾನಸತಿ ಸುತ್ತ ದ ಪ್ರಾಥಮಿಕ ಚತುಷ್ಪಾತಿಯ ಉಸಿರಾಟದ ಧೀರ್ಘಕ್ರಿಯೆಯಲ್ಲಿ ಬುದ್ದನು,ಕೆಲವೊಂದು ಬದಲಾವಣೆಗಳನ್ನು ಮಿತಿಯಲ್ಲಿ ಮಾಡಿದ್ದಾನೆ. ಏಕಾಗ್ರತೆಯ ಗಳಿಕೆಯಲ್ಲಿ ಇದರ ಉಪಯೋಗವಾಗುತ್ತದೆ. ಇತ್ತೀಚಿನ ವಾಣಿಜ್ಯ-ಸಾಹಿತ್ಯದಲ್ಲಿ ಈ ಬಗ್ಗೆ ಹೇಳುತ್ತಾ,ಆರಂಭಿಕ ವಿದ್ಯಾರ್ಥಿಗಳಿಗೆ ಉಪಯೋಗ ಎಂದು ಹೇಳಿದೆ.

ಉಸಿರಾಟದ ಧ್ಯಾನ ಕ್ರಿಯೆಯಲ್ಲಿ, ಉಸಿರಾಟದ ಏಕಾಗ್ರತೆ ಬಹು ಮುಖ್ಯ ಎಂದು ಬುದ್ಧ ತಿಳಿಯುತ್ತಾನೆ. ಬುದ್ದನ ಹಿಂಬಾಲಕರು, ಉಸಿರಾಟದ ಪ್ರದರ್ಶನದಲ್ಲಿ ಸಂಯಮಕ್ಕೆ ಆಗ್ರಹಿಸಿದ್ದಾರೆ.

ವೈದ್ಯಕೀಯ

ಹಲವಾರು ಸಂಶೋಧಕರ ಅಭಿಪ್ರಾಯದ ಅನ್ವಯ , ಪ್ರಾಣಾಯಾಮದ ತಂತ್ರದಿಂದ ಒತ್ತಡದಿಂದಾಗಿ ಉದ್ಭವಿಸಿದಅವ್ಯವಸ್ಥೆಯ ಖಾಯಿಲೆಯ ಚಿಕಿತ್ಸೆಗೆ ಸೂಕ್ತ ಎಂದು ಹೇಳುತ್ತಾರೆ. ಸ್ವಯಂ ಕ್ರಿಯೆಯ ಕಾರ್ಯವನ್ನು ಉಪಯುಕ್ತವಾಗಿಸುವುದು, ಅಸ್ತಮಾ ಖಾಯಿಲೆಗೆ ಬಿಡುಗಡೆ , ಮತ್ತು ಆಮ್ಲಜನಕ ಒತ್ತಡ ದ ಸ್ಥಿತಿಯ ಬಿಡುಗಡೆಗೆ ಫಲಕಾರಿ. ಯೋಗನಿರತ ಪ್ರಾಣಾಯಾಮದಾರಿಗಳು ಹೇಳುವ ಹಾಗೆ, ಪ್ರಾಣಾಯಾಮದಿಂದಾಗಿ ಮನಸ್ಸು ಹೆಚ್ಚು ಕ್ರಿಯಾಶೀಲವಾಗಿದ್ದು,ಉನ್ನತ ಮನಃ ಶಕ್ತಿ, ಮತ್ತು ದಿಟ್ಟ, ನೇರ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಕಾರಿ, ಮತ್ತು ದೀರ್ಘಕಾಲದ ಅಭ್ಯಾಸದಿಂದ ಜೀವನದ ಆಯಸ್ಸನ್ನು ಹೆಚ್ಚಿಸುವುದಲ್ಲದೆ,ಗ್ರಹಿಕೆಯ ಶಕ್ತಿಯು ವೃದ್ಧಿಯಾಗುತ್ತದೆ.

ಎಚ್ಚರಿಕೆಗಳು

ಹಲವಾರು ಯೋಗ ಗುರುಗಳು ಹೇಳುವ ಹಾಗೆ ಪ್ರಾಣಾಯಾಮವನ್ನು ಎಚ್ಚರಿಕೆಯಿಂದ ಕಲಿಯಬೇಕು, ಮತ್ತು ಮುಂದುವರಿದ ಪ್ರಾಣಾಯಾಮದ ಕೌಶಲಗಳನ್ನು ಗುರುಗಳ ಮಾರ್ಗದರ್ಶನದಿಂದಲೇ ಅಭ್ಯಾಸ ಮಾಡಬೇಕು. ಈ ಎಚ್ಚರಿಕೆಗಳನ್ನೂ ಸಹ ಹಿಂದೂ ಸಂಪ್ರದಾಯ ಸಾಹಿತ್ಯಗಳಲ್ಲಿ ಹೇಳಲ್ಪಟ್ಟಿದೆ.

ಇವನ್ನೂ ಗಮನಿಸಿ

ಟಿಪ್ಪಣಿಗಳು

ಆಕರಗಳು

Tags:

ಪ್ರಾಣಾಯಾಮ ಪದಮೂಲಶಬ್ದವ್ಯುತ್ಪತ್ತಿಪ್ರಾಣಾಯಾಮ ಪತಂಜಲಿಯ ಯೋಗ ಸೂತ್ರಗಳುಪ್ರಾಣಾಯಾಮ ಬೌದ್ಧಧರ್ಮಪ್ರಾಣಾಯಾಮ ವೈದ್ಯಕೀಯಪ್ರಾಣಾಯಾಮ ಎಚ್ಚರಿಕೆಗಳುಪ್ರಾಣಾಯಾಮ ಇವನ್ನೂ ಗಮನಿಸಿಪ್ರಾಣಾಯಾಮ ಟಿಪ್ಪಣಿಗಳುಪ್ರಾಣಾಯಾಮಪ್ರಾಣಯೋಗಸಂಸ್ಕೃತ

🔥 Trending searches on Wiki ಕನ್ನಡ:

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಬಾಲ್ಯಕರ್ನಾಟಕದ ಸಂಸ್ಕೃತಿಜಶ್ತ್ವ ಸಂಧಿಟೈಗರ್ ಪ್ರಭಾಕರ್ಪ್ರಾಥಮಿಕ ಶಾಲೆವಾಯು ಮಾಲಿನ್ಯಕನ್ನಡ ಕಾವ್ಯಬಿ. ಎಂ. ಶ್ರೀಕಂಠಯ್ಯಕಾಮಸೂತ್ರಆರೋಗ್ಯಜೋಡು ನುಡಿಗಟ್ಟುಶನಿಭಾರತದ ಇತಿಹಾಸಆಮದು ಮತ್ತು ರಫ್ತುಎ.ಪಿ.ಜೆ.ಅಬ್ದುಲ್ ಕಲಾಂಹಲ್ಮಿಡಿ ಶಾಸನಕರ್ನಾಟಕದ ಅಣೆಕಟ್ಟುಗಳುಋತುಚಕ್ರಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕಯ್ಯಾರ ಕಿಞ್ಞಣ್ಣ ರೈನಾಗಚಂದ್ರಪರಶುರಾಮಉಡಉಳ್ಳಾಲಯಕೃತ್ತುಮುಟ್ಟುದ್ರೌಪದಿಕನ್ನಡದಲ್ಲಿ ಮಹಿಳಾ ಸಾಹಿತ್ಯಕಾಟೇರಇಂದಿರಾ ಗಾಂಧಿಚಾಲುಕ್ಯಮಾರುಕಟ್ಟೆಬೃಂದಾವನ (ಕನ್ನಡ ಧಾರಾವಾಹಿ)ಲಕ್ಷದ್ವೀಪಯಶ್(ನಟ)ನೀರಿನ ಸಂರಕ್ಷಣೆಭಾರತದಲ್ಲಿ ಪಂಚಾಯತ್ ರಾಜ್ಶಿವಕರ್ನಾಟಕ ಜನಪದ ನೃತ್ಯಉಡುಪಿ ಜಿಲ್ಲೆರಾಷ್ಟ್ರೀಯತೆಹವಾಮಾನಉಪನಯನರಕ್ತದೊತ್ತಡಒಟ್ಟೊ ವಾನ್ ಬಿಸ್ಮಾರ್ಕ್ಕೈಗಾರಿಕೆಗಳುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಮಾಸಚಂದ್ರಸುಧಾ ಮೂರ್ತಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಮತದಾನಹೊಯ್ಸಳ ವಾಸ್ತುಶಿಲ್ಪದ್ರುಪದಅಕ್ಕಮಹಾದೇವಿಉತ್ಪಾದನೆಪೋಕ್ಸೊ ಕಾಯಿದೆಕರ್ನಾಟಕ ವಿದ್ಯಾವರ್ಧಕ ಸಂಘಕ್ರೀಡೆಗಳುಎಸ್. ಎಂ. ಪಂಡಿತ್ಹನುಮಂತಅನುಭವ ಮಂಟಪಹಿಂದೂ ಕೋಡ್ ಬಿಲ್ಶಿಶುನಾಳ ಶರೀಫರುಹದಿಬದೆಯ ಧರ್ಮದಾಳಿಂಬೆಹೂಡಿಕೆಭಾರತದಲ್ಲಿನ ಚುನಾವಣೆಗಳುಸರ್ಪ ಸುತ್ತುಸಂಸ್ಕೃತ ಸಂಧಿಮಹಾಭಾರತನವಗ್ರಹಗಳುಮರುಭೂಮಿಹರಿಶ್ಚಂದ್ರಹೊಯ್ಸಳಎ.ಎನ್.ಮೂರ್ತಿರಾವ್ಸೀತಾ ರಾಮದಾಸ ಸಾಹಿತ್ಯ🡆 More