ಜಾರಿ ನಿರ್ದೇಶನಾಲಯ

ಜಾರಿ ನಿರ್ದೇಶನಾಲಯ(Enforcement Directorate - ED) ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆಯಾಗಿದ್ದು ಆರ್ಥಿಕ ಕಾನೂನುಗಳನ್ನು ಶಿಸ್ತು ಬದ್ಧವಾಗಿ ಜಾರಿಮಾಡುವ, ಹಾಗು ಅವು ಪಾಲನೆಯಲ್ಲಿರುವಂತೆ ನಿಗಾ ವಹಿಸುವ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತದೆ.

ದೇಶದೊಳಗೆ ನಡೆಯುವ ಆರ್ಥಿಕ ಅಪರಾಧಗಳ ಮೇಲೂ ಕಣ್ಗಾವಲು ಇಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದ್ದು ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ವಿಭಾಗದ ಒಂದು ಪ್ರಮುಖ ಭಾಗವಾಗಿದೆ. ಭಾರತೀಯ ಆಡಳಿತಾತ್ಮಕ ಸೇವಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗು ಆದಾಯ ತೆರಿಗೆ ಅಧಿಕಾರಿಗಳನ್ನು ಈ ಸಂಸ್ಥೆ ಒಳಗೊಂಡಿರುತ್ತದೆ.

ಹಿನ್ನೆಲೆ

೧೯೫೬ ರ ಮೇ ೧ ನೇ ತಾರೀಕು ಕೇಂದ್ರ ಸರ್ಕಾರ ವಿದೇಶಿ ವಿನಿಮಯ ನಿಯಂತ್ರಣ ಕಾನೂನುಗಳ ಪಾಲನೆಗೆ 'ಜಾರಿ ಘಟಕ' ವನ್ನು ಸ್ಥಾಪಿಸಿತು. ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ - ೧೯೪೭ ರ ಸಂಪೂರ್ಣ ಪಾಲನೆಯೇ ಇಲಾಖೆಗೆ ಮುಖ್ಯ ಕರ್ತವ್ಯವಾಗಿತ್ತು. ಮುಂದೆ ೧೯೫೭ ರಲ್ಲಿ ಇದೇ ಘಟಕವನ್ನು 'ಜಾರಿ ನಿರ್ದೇಶನಾಲಯ' ಎಂದು ಮರು ನಾಮಕರಣ ಮಾಡಲಾಯಿತು .

ಜಾರಿ ನಿರ್ದೇಶನಾಲಯದ ಧ್ಯೇಯೋದ್ದೇಶಗಳು

ಆರ್ಥಿಕ ಕಾನೂನಿನ ಎರಡು ಮುಖ್ಯ ಕಾಯಿದೆಗಳಾದ 'ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ - ೧೯೯೯' ಹಾಗು 'ಕಪ್ಪು ಹಣ ಬದಲು ತಡೆ ಕಾಯಿದೆ ೨೦೦೨(ಮನಿ ಲಾಂಡರಿಂಗ್ ತಡೆ ಕಾಯಿದೆ) ಗಳನ್ನು ದೇಶದೊಳಗೆ ಸಮರ್ಥವಾಗಿ ಜಾರಿ ಮಾಡುವುದು ಹಾಗು ಅವು ಎಲ್ಲಿಯೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಜಾರಿ ನಿರ್ದೇಶನಾಲಯದ ಆದ್ಯ ಕರ್ತವ್ಯಗಳಾಗಿವೆ.

ಕಪ್ಪು ಹಣವನ್ನು ಅಕ್ರಮವಾಗಿ ಅಥವಾ ವಾಮ ಮಾರ್ಗದ ಮುಖಾಂತರ ಬಿಳಿಯನ್ನಾಗಿಸುವುದು ಅಪರಾಧವಾಗಿದ್ದು ಇಂತಹ ಅಪರಾಧಗಳು ನೇರವಾಗಿ ಜಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಬರಲಿವೆ.

ನಿರ್ದೇಶನಾಲಯದ ಸ್ವರೂಪ

ಜಾರಿ ನಿರ್ದೇಶನಾಲಯದ ಕೇಂದ್ರ ಕಛೇರಿ ನವದೆಹಲಿಯಲ್ಲಿದ್ದು ಜಾರಿ ನಿರ್ದೇಶಕರು ಇದರ ಮುಖ್ಯಸ್ಥರಾಗಿರುತ್ತಾರೆ. ಕೇಂದ್ರ ಕಛೇರಿ ಹೊರತು ಪಡಿಸಿ ಇತರ ಐದು ಪ್ರಾದೇಶಿಕ ಕಛೇರಿಗಳು ದೇಶದ ಪ್ರಮುಖ ನಗರಗಳಾದ ಮುಂಬಯಿ, ಚೆನ್ನೈ, ಚಂಡೀಗಢ, ಕೋಲ್ಕತ್ತಾ ಹಾಗು ದೆಹಲಿಗಳಲ್ಲಿವೆ. ಪ್ರಾದೇಶಿಕ ಕಛೇರಿಗಳಲ್ಲಿ ವಿಶೇಷ ಜಾರಿ ನಿರ್ದೇಶಕರು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ.

ಮೂರನೇ ಹಂತದ ಕಛೇರಿಗಳಾಗಿ ವಲಯ ಕಛೇರಿಗಳು ಅಸ್ತಿತ್ವದಲ್ಲಿದ್ದು ಅವು ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಚ್ಚಿ, ದೆಹಲಿ, ಪಣಜಿ, ಗುವಾಹಟಿ, ಹೈದರಾಬಾದ್, ಜೈಪುರ , ಜಲಂಧರ್, ಕೊಲ್ಕತ್ತಾ, ಲಕ್ನೋ, ಮುಂಬಯಿ, ಪಾಟ್ನಾ, ಹಾಗು ಶ್ರೀನಗರ ಗಳಲ್ಲಿವೆ. ಜಂಟಿ ಜಾರಿ ನಿರ್ದೇಶಕರು ಇವುಗಳ ಮುಖ್ಯಸ್ಥರಾಗಿರುತ್ತಾರೆ.

ಆಕರಗಳು

Tags:

ಜಾರಿ ನಿರ್ದೇಶನಾಲಯ ಹಿನ್ನೆಲೆಜಾರಿ ನಿರ್ದೇಶನಾಲಯ ದ ಧ್ಯೇಯೋದ್ದೇಶಗಳುಜಾರಿ ನಿರ್ದೇಶನಾಲಯ ನಿರ್ದೇಶನಾಲಯದ ಸ್ವರೂಪಜಾರಿ ನಿರ್ದೇಶನಾಲಯ ಆಕರಗಳುಜಾರಿ ನಿರ್ದೇಶನಾಲಯ

🔥 Trending searches on Wiki ಕನ್ನಡ:

ವಾದಿರಾಜರುಗರುಡ (ಹಕ್ಕಿ)ಸಕಲೇಶಪುರಆತ್ಮಚರಿತ್ರೆಮಹಾಭಾರತನರೇಂದ್ರ ಮೋದಿವಿಷ್ಣುವರ್ಧನ್ (ನಟ)ಹದ್ದುಉದ್ಯಮಿವಿಕಿಪೀಡಿಯಸಹಕಾರಿ ಸಂಘಗಳುಕಿಸ್ (ಚಲನಚಿತ್ರ)ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಭಾರತದ ಸ್ವಾತಂತ್ರ್ಯ ಚಳುವಳಿಮಂಡ್ಯಮೂಲಭೂತ ಕರ್ತವ್ಯಗಳುವಿಶಿಷ್ಟಾದ್ವೈತಶ್ರೀಶೈಲದಿ ಡೋರ್ಸ್‌ಪಾರ್ವತಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುರಾಜ್ಯಡಬ್ಲಿನ್ತುಮಕೂರುವೆಂಕಟೇಶ್ವರ ದೇವಸ್ಥಾನಕ್ಯಾನ್ಸರ್ಕಲ್ಯಾಣ ಕರ್ನಾಟಕರಾವಣಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ಆರ್ಥಿಕ ಬೆಳೆವಣಿಗೆನೈಸರ್ಗಿಕ ಸಂಪನ್ಮೂಲಗೋತ್ರ ಮತ್ತು ಪ್ರವರಎನ್ ಸಿ ಸಿಭಾರತದ ಆರ್ಥಿಕ ವ್ಯವಸ್ಥೆಸರ್ ಐಸಾಕ್ ನ್ಯೂಟನ್ಪಂಪಬೌದ್ಧ ಧರ್ಮದಯಾನಂದ ಸರಸ್ವತಿಸ್ವಾಮಿ ವಿವೇಕಾನಂದಒಲಂಪಿಕ್ ಕ್ರೀಡಾಕೂಟಶಂಕರ್ ನಾಗ್ಪ್ರಜಾಪ್ರಭುತ್ವದ ವಿಧಗಳುಸರ್‌ ಆರ್ಥರ್‌ ಕೊನನ್‌ ಡೋಯ್ಲ್‌ನುಗ್ಗೆಕಾಯಿಪಂಚ ವಾರ್ಷಿಕ ಯೋಜನೆಗಳುನಯನ ಸೂಡಸಂತಾನೋತ್ಪತ್ತಿಯ ವ್ಯವಸ್ಥೆಹಸ್ತ ಮೈಥುನಅಡಿಕೆಏಡ್ಸ್ ರೋಗಶಿವಕೋಟ್ಯಾಚಾರ್ಯಕನ್ನಡ ಸಾಹಿತ್ಯಎ.ಪಿ.ಜೆ.ಅಬ್ದುಲ್ ಕಲಾಂಗುವಾಮ್‌‌‌‌ಬಾಸ್ಟನ್ಭಾರತದಲ್ಲಿನ ಜಾತಿ ಪದ್ದತಿಕರ್ಣಾಟಕ ಬ್ಯಾಂಕ್ಜಾತ್ಯತೀತತೆಮೂಲಧಾತುಸುಧಾ ಮೂರ್ತಿತೆಂಗಿನಕಾಯಿ ಮರರಾಜ್‌ಕುಮಾರ್ಸಾಲುಮರದ ತಿಮ್ಮಕ್ಕಸತಿಗುಣ ಸಂಧಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಡಿ.ವಿ.ಗುಂಡಪ್ಪಕರ್ತವ್ಯಯೂಟ್ಯೂಬ್‌ಮಲ್ಲಿಕಾರ್ಜುನ ಜ್ಯೋತಿರ್ಲಿಂಗಆದಿಪುರಾಣಹಣಕಾಸುಸಮಾಸಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಭಾರತದ ಮುಖ್ಯಮಂತ್ರಿಗಳುಅಕ್ಕಮಹಾದೇವಿಬಸವೇಶ್ವರ🡆 More