ಆದಿಪುರಾಣ: ಪ್ರಥಮ ಜೈನ ಪುರಾಣ

ಆದಿಪುರಾಣವು ೧೦ನೇ ಶತಮಾನದ (ಕ್ರಿ.ಶ.

೯೪೨) ಕನ್ನಡದ ಆದಿಕವಿ ಪಂಪನು ರಚಿಸಿರುವ ಕೃತಿ. ಇದು ಜೈನ ಧರ್ಮದ ಮೊದಲ ತೀರ್ಥಂಕರನಾದ ವೃಷಭನಾಥನ ಜೀವನದ ಕಥೆ. ಇದು ಚಂಪೂಕಾವ್ಯವಾಗಿದ್ದು, ಇದರಲ್ಲಿ ೧೬ ಆಶ್ವಾಸಗಳಿವೆ.

ವಿವರ

ಸಂಸ್ಕೃತದಲ್ಲಿ ಜಿನಸೇನನು ಬರೆದ ಆದಿಪುರಾಣವನ್ನು ಪಂಪ ಕವಿಯು ಕನ್ನಡದಲ್ಲಿ ಬರೆದಿದ್ದಾನೆ. ಒಟ್ಟು ೧೬ ಅಶ್ವಾಸಗಳಲ್ಲಿ ಮೊದಲನೆಯ ೬ ಆಶ್ವಾಸಗಳು -ಪುರುದೇವನ ಹಿಂದಿನ ಒಂಬತ್ತು ಜನ್ಮಗಳ ಬಗ್ಗೆ ಹೇಳುತ್ತವೆ. ೭ರಿಂದ ೧೦ನೇ ಆಶ್ವಾಸಗಳು-ಪುರುದೇವನ ಜನನ, ಬಾಲ್ಯದ ಜೀವನದ ಬಗ್ಗೆ, ತಪಸ್ಸು, ಸಮವಸರಣದ ಬಗ್ಗೆ ಹೇಳುತ್ತವೆ. ೧೧ ರಿಂದ ೧೬ನೇ ಆಶ್ವಾಸವರೆಗೆ ಭರತ ಚಕ್ರವರ್ತಿಯ ಕಥೆಯನ್ನು ವಿವರಿಸುತ್ತದೆ. ಈ ಕಥೆಗಳಲ್ಲಿ ನೀಲಾಂಜನೆ ಎಂಬ ನರ್ತಕಿಯ ಕಥೆಯು ರೋಮಾಂಚನ ಮೂಡಿಸುತ್ತದೆ. ವೃಷಭನಾಥನ ಹಿರಿಯ ಮಗ ಭರತ ಚಕ್ರವರ್ತಿ ಮತ್ತು ಕಿರಿಯಮಗ ಬಾಹುಬಲಿಯ ನಡುವಿನ ಅಧಿಕಾರಕ್ಕಾಗಿ ನಡೆವ ಕದನದ ಪ್ರಸಂಗ ವಾಸ್ತವಿಕತೆಯಿಂದ ಕೂಡಿದೆ. ತನ್ನ ಅಣ್ಣನ ರಾಜ್ಯದ ಆಸೆಯನ್ನು ಕಂಡು ಬಾಹುಬಲಿಯ ಸಂನ್ಯಾಸತ್ವ ಪಡೆದು, ಭರತನಲ್ಲಿ ಪಶ್ಚ್ಯಾತಾಪ ಮೂಡಿಸುವುದು ಕಥೆಯ ಹಿರಿಮೆ.

ಪಂಪನಿಗೆ ಜಿನಧರ್ಮದ ಬಗ್ಗೆ ಇದ್ದ ಒತ್ತಾಸೆ

ಪಂಪನ ತಂದೆ ಪೂರ್ವಿಕರಿಂದ ಬಂದ ವೈದಿಕ ಧರ್ಮವನ್ನು ಬಿಟ್ಟುಕೊಟ್ಟು ಜೈನಧರ್ಮಕ್ಕೆ ಮತಾಂತರ ಹೊಂದಿದವನು. ಜೈನ ಧರ್ಮಕ್ಕೆ ಸೇರಿದ ಪಂಪನಿಗೆ, ತಾನು ಆ ಧರ್ಮವನ್ನು ಕುರಿತು, ಆ ಧರ್ಮದ ಮಹಾವ್ಯಕ್ತಿಗಳನ್ನು ಕುರಿತು ಕಾವ್ಯ ಬರೆಯಬೇಕು ಎನ್ನಿಸಿತು. ಅದಕ್ಕಾಗಿ ಅವನು “ಆದಿಪುರಾಣ” ಎಂಬ ಕಾವ್ಯವನ್ನು ಬರೆದ. “ಆದಿಪುರಾಣ” ಜೈನರ ಮೊಟ್ಟಮೊದಲ ತೀರ್ಥಂಕರನಾದ ಆದಿದೇವ ಅಥವಾ ಪುರುದೇವನನ್ನು ಕುರಿತದ್ದು. ಜೈನರ ಪ್ರಕಾರ ಇಪ್ಪತ್ನಾಲ್ಕು ಜನ ತೀರ್ಥಂಕರರು. ತೀರ್ಥಂಕರರು ಎಂದರೆ ಮುಕ್ತಿಯನ್ನು ಪಡೆದು ಪವಿತ್ರರಾದವರು. ಅವರಲ್ಲಿ ಮೊದಲನೆಯ ತೀರ್ಥಂಕರ ಆದಿದೇವ ಅಥವಾ ಪುರುದೇವ. ಈ ಆದಿದೇವನ ಕತೆಯೇ “ಆದಿಪುರಾಣ”ದ ಕತೆ.

ಹೆಗ್ಗಳಿಕೆ

ಮನುಷ್ಯನ ಮನಸ್ಸು, ಈ ಲೋಕದ ಸುಖ-ಸಂಪತ್ತುಗಳನ್ನು ಬಿಟ್ಟು ವೈರಾಗ್ಯದ ಹಾದಿಯನ್ನು ಹಿಡಿದರೆ ಯಾವ ನಲುವಿಗೆ ಏರುವುದೆಂಬುದನ್ನು ಪಂಪ “ಆದಿಪುರಾಣ”ದಲ್ಲಿ ಚಿತ್ರಿಸಿದ್ದಾನೆ. ಆದಿದೇವ ಅನೇಕ ಜನ್ಮಗಳಲ್ಲಿ ತೊಳಲಿ, ಪಾಪಗಳನ್ನು ಕಳೆದುಕೊಂಡು, ತೊಳಲಿಕೊಂಡು, ಗುರುವಿನ ಉಪದೇಶದಿಂದ ಸಾಧನೆ ಮಾಡುತ್ತಾ, ಕಡೆಗೆ ತೀರ್ಥಂಕರನಾಗುತ್ತಾನೆ.

ಪುರುದೇವನ ಹತ್ತು ಜನ್ಮಗಳು

  • ಜಯವರ್ಮ
  • ಮಹಾಬಲ
  • ಲಲಿತಾಂಗ
  • ವಜ್ರಜಂಘ
  • ಆರ್ಯ
  • ಶ್ರೀಧರದೇವ
  • ಸುವಿಧಿ
  • ಅಚ್ಯುತೇಂದ್ರ
  • ವಜ್ರನಾಭಿ
  • ಅಹಮಿಂದ್ರ

ಉಲ್ಲೇಖ

Tags:

ಆದಿಪುರಾಣ ವಿವರಆದಿಪುರಾಣ ಪಂಪನಿಗೆ ಜಿನಧರ್ಮದ ಬಗ್ಗೆ ಇದ್ದ ಒತ್ತಾಸೆಆದಿಪುರಾಣ ಹೆಗ್ಗಳಿಕೆಆದಿಪುರಾಣ ಪುರುದೇವನ ಹತ್ತು ಜನ್ಮಗಳುಆದಿಪುರಾಣ ಉಲ್ಲೇಖಆದಿಪುರಾಣಜೈನ ಧರ್ಮತೀರ್ಥಂಕರಪಂಪವೃಷಭನಾಥ

🔥 Trending searches on Wiki ಕನ್ನಡ:

ತೆಂಗಿನಕಾಯಿ ಮರಮಂಡ್ಯರವಿಚಂದ್ರನ್ರನ್ನಶಂಕರ್ ನಾಗ್ಕಲಿಯುಗಜ್ಯೋತಿಷ ಶಾಸ್ತ್ರಭಾರತದ ನದಿಗಳುಭೂತಾರಾಧನೆಭಾರತದ ಉಪ ರಾಷ್ಟ್ರಪತಿಚಿಕ್ಕಬಳ್ಳಾಪುರತಂತ್ರಜ್ಞಾನಮಣ್ಣುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತೀಯ ಸ್ಟೇಟ್ ಬ್ಯಾಂಕ್ಮೂಲಭೂತ ಕರ್ತವ್ಯಗಳುಮರಾಠಾ ಸಾಮ್ರಾಜ್ಯಕೆ. ಎಸ್. ನಿಸಾರ್ ಅಹಮದ್ವಿಜಯದಾಸರುಮಾನವನ ವಿಕಾಸಗ್ರಂಥ ಸಂಪಾದನೆಲಟ್ಟಣಿಗೆನವರತ್ನಗಳುಕಾಟೇರಜಾತಿಸತೀಶ್ ನಂಬಿಯಾರ್ವಸ್ತುಸಂಗ್ರಹಾಲಯಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಬಿ.ಎಚ್.ಶ್ರೀಧರಮಹಿಳೆ ಮತ್ತು ಭಾರತಕರ್ನಾಟಕ ಸಂಗೀತದಿಕ್ಕುಮಂತ್ರಾಲಯಬಿಳಿ ರಕ್ತ ಕಣಗಳುಸಂಗೊಳ್ಳಿ ರಾಯಣ್ಣಗದಗಸೌರಮಂಡಲಡಾಪ್ಲರ್ ಪರಿಣಾಮಕಾದಂಬರಿಜೈಮಿನಿ ಭಾರತಝೊಮ್ಯಾಟೊಬ್ಯಾಡ್ಮಿಂಟನ್‌ಆಂಧ್ರ ಪ್ರದೇಶಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಗುಣಿತಾಕ್ಷರಗಳುರೇಡಿಯೋಕರ್ನಾಟಕದ ಸಂಸ್ಕೃತಿಭಾರತದ ಸ್ವಾತಂತ್ರ್ಯ ದಿನಾಚರಣೆಓಂ (ಚಲನಚಿತ್ರ)ವಡ್ಡಾರಾಧನೆಹರಪನಹಳ್ಳಿ ಭೀಮವ್ವಮಹಾಕವಿ ರನ್ನನ ಗದಾಯುದ್ಧವಿಷ್ಣುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಹಣಕಾಸುಬೀಚಿಪು. ತಿ. ನರಸಿಂಹಾಚಾರ್ರಾಗಿಭಾರತದ ರಾಷ್ಟ್ರಗೀತೆನೇಮಿಚಂದ್ರ (ಲೇಖಕಿ)ಸಂಧಿಚಾರ್ಲ್ಸ್ ಬ್ಯಾಬೇಜ್ಯಣ್ ಸಂಧಿಸಂಯುಕ್ತ ಕರ್ನಾಟಕರಾಮಾಚಾರಿ (ಕನ್ನಡ ಧಾರಾವಾಹಿ)ಕಂಪ್ಯೂಟರ್ಮಳೆಗಾಲಬನವಾಸಿರಾಷ್ಟ್ರೀಯ ಉತ್ಪನ್ನಹಲಸುನೀನಾದೆ ನಾ (ಕನ್ನಡ ಧಾರಾವಾಹಿ)ಹನುಮ ಜಯಂತಿ🡆 More