ಕಾರವಾರ

ಕಾರವಾರ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ನಗರವಾಗಿದೆ.

ದಕ್ಷಿಣ ಭಾರತದ ಪಶ್ಚಿಮ ಕರವಾಳಿಯಲ್ಲಿ ಕಾಳಿ ನದಿ ಮುಖಭಾಗದಲ್ಲಿ ಕಾರವಾರ ನೆಲೆಗೊಂಡಿದೆ. ಬಂದರು ನಗರದಾಗಿರುವುದಿಂದ, ಕಾರವಾರ ಊರು ಕೃಷಿ, ಉತ್ಪಾದನೆ, ಮತ್ತು ಪ್ರವಾಸೋದ್ಯಮದ ಕೇಂದ್ರವಾಗಿದೆ. ಪೂರ್ವದಲ್ಲಿ ಸಹ್ಯಾದ್ರಿ ನಿತ್ಯಹರಿದ್ವರ್ಣ ಕಾಡಿದೆ, ಪಶ್ಚಿಮದಲ್ಲಿ ಅರಬಿಯಾ ಸಮುದ್ರ, ಮತ್ತು ಉತ್ತರಕ್ಕೆ ಕಾಳಿ ನದಿ. ಕಾರವಾರ ೭೭೧೩೯ ಜನಸಂಖ್ಯೆಯನ್ನು ಹೊಂದಿದೆ. ೧೯೫೬ ವರೆಗು, ಕಾರವಾರ ಊರು ಬಾಂಬೆ ಪ್ರೆಸಿಡೆನ್ಸಿ ಭಾಗವಾಗಿತ್ತು.

ಕಾರವಾರ
ನಗರ
Beach at Karwar
ಕಾರವಾರದ ಕಡಲು ತೀರ
ದೇಶ
ಭಾರತ
ರಾಜ್ಯ
ಕರ್ನಾಟಕ
ಜಿಲ್ಲೆ
ಉತ್ತರ ಕನ್ನಡ
ಸರ್ಕಾರ
 • ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. (ಭಾಆಸೇ)
 • ಶಾಸಕಿ ರೂಪಾಲಿ ನಾಯ್ಕ
 •ಅಧ್ಯಕ್ಷರು ಕಾರವಾರ ತಾಲೂಕ ಪಂಚಾಯತ್ ಪ್ರಮೀಳಾ ಸು ನಾಯ್ಕ
ಚದರ
 • ಒಟ್ಟು ೨೭.೯ ಚದರ ಕಿಮೇ
ಎತ್ತರ
೬ ಮೇ
ಜನಸಂಖ್ಯೆ (೨೦೧೪)
 • ಒಟ್ಟು ೧,೫೧,೭೩೯
 • ಸಾಂದ್ರತೆ ೫೫೬೩.೧೮/ ಚದರ ಕಿಮೀ 
ಭಾಷೆಗಳು
 • ಅಧಿಕೃತ ಕನ್ನಡ
ಸಮಯ ವಲಯ ಯುಟಿಸಿ+5:30 (ಐಎಸ್ಟಿ)
ಪಿನ್
೫೮೧೩೦೧
ದೂರವಾಣಿ ಕೋಡ್
೯೧-೮೩೮೨-XXX XXX
ವಾಹನ ನೊಂದಣಿ

KA-30

ವೆಬ್ಸೈಟ್

www.karwarcity.gov.in Archived 2009-02-02 ವೇಬ್ಯಾಕ್ ಮೆಷಿನ್ ನಲ್ಲಿ.

ವ್ಯುತ್ಪತ್ತಿಶಾಸ್ತ್ರ

ಕಾರವಾರ ತನ್ನ ಹೆಸರನ್ನು ಹತ್ತಿರದ ಗ್ರಾಮದ ಕಡವಾಡದಿಂದ ಪಡೆದುಕೊಂಡಿದೆ (ಕಡೆ ವಡ, ಕಡೆಯ ವಾಡೊ). ಕೊಂಕಣಿಯಲ್ಲಿ ಕಡೆ ಎಂದರೆ ಕೊನೆಯದು ಮತ್ತು ವಾಡೋ ಎಂದರೆ ಪ್ರದೇಶ. ಬೈತ್ ಕೋಲ್ ಎಂಬ ಹೆಸರು ಅರೇಬಿಕ್ ಭಾಷೆಯ ಪದವಾಗಿದೆ. ಬೈತ್ ಎ ಕೋಲ್ ಅಂದರೆ ಸುರಕ್ಷತೆಯ ಕೊಲ್ಲಿ.

ಇತಿಹಾಸ

ಉತ್ತರದಿಂದ ಬರುವ ದಾಳಿಗಳಿಂದ ಪಟ್ಟಣವನ್ನು ರಕ್ಷಿಸಲು, ಬಿಜಾಪುರ ಸುಲ್ತಾನ್ ಈ ಕೋಟೆಯನ್ನು ನಿರ್ಮಿಸಿದರು (ಶಿವೇಶ್ವರ ಹಳ್ಳಿ ಬಳಿ). ಶಿವೇಶ್ವರ ಕೋಟೆಯ ಅವಶೇಷಗಳಲ್ಲಿ ಒಂದು ಮುಸ್ಲಿಂ ಸ್ಮಶಾನ ಮತ್ತು ಪೂರ್ವ ಪ್ರವೇಶದಲ್ಲಿ ಸುರಂಗದಿದೆ.

ಪೋರ್ಚುಗೀಸ್ ವ್ಯಾಪಾರಿಗಳು ಕಾರವಾರವನ್ನು ಸಿಂತಚೊರ, ಚಿತ್ರಕುಲ್, ಚಿತ್ತಕುಲ ಅಥವಾ ಸಿಂದ್ಪುರ್ ಹೆಸರಿಸಿದರು. ೧೫೧೦ ರಲ್ಲಿ, ಪೋರ್ಚುಗೇಸ ಸೈನಿಕರು ಕಾರವಾರದಲ್ಲಿ ಒಂದು ಕೋಟೆಯನ್ನು ವಶಪಡಿಸಿಕೊಂಡರು ಮತ್ತು ಮುಸ್ಲಂ ದರ್ಗಾ (ಸುಫಿ ಸನ್ತರ ಶಹರಮುದ್ದಿನ್ ಸಮಾಧಿಯ) ಉಪಸ್ಥಿತಿಯಿಂದ ಆ ಕೋಟೆಯನ್ನು ಫೋರ್ತೆ ದೆ ಪಿಎರೊ ಕರೆದರು. ೧೭ ನೇ ಶತಮಾನದಲ್ಲಿ, ಪೋರ್ಚುಗೇಸ್ ಆಡಳಿತದಿಂದ ಅನೇಕ ನಿರಾಶ್ರಿತರು ಗೋವದಿಂದ ಕಾರವಾರಕ್ಕೆ ಸ್ಥಳಾಂತರಗೊಂಡರು. 

 ೧೬೩೮ ರಲ್ಲಿ, ಕೋರ್ತೀನ್ ಅಸ್ಸೋಸಿಯೇಷನ್ ಅವರು ಕಡವಾಡ ಹಳ್ಳಿಯಲ್ಲಿ ಒಂದು ಕಾರ್ಖಾನೆ ಸ್ಥಾಪಿಸಿದರು, ಮತ್ತು ಅವರು ಅರೆಬಿಯಾ ಮತ್ತು ಆಫ್ರಿಕಾದಿಂದ ವ್ಯಾಪಾರಿಗಳೊಂದಿಗೆ ವ್ಯಾಪಾರ ಮಾಡಿದರು. ಸಾಮಾನ್ಯ ಸರಕುಗಳೆಂದರೆ, ಮಸ್ಲಿನ್, ಕರಿಮೆಣಸು, ಏಲಕ್ಕಿ, ಕ್ಯಾಸಿಯರ್, ಮತ್ತು ಒರಟಾದ ನೀಲಿ ಹತ್ತಿ ಬಟ್ಟೆ. ೧೬೪೯ ರಲ್ಲಿ, ಕೋರ್ಟೀನ್ ಅಸ್ಸೋಸಿಯೇಷನ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ವಿಲೀನಗೊಂಡಿತು, ಮತ್ತು ಕಾರವಾರ ಒಂದು ಕಂಪೆನಿ ಪಟ್ಟಣವಾಯಿತು. 

ಈಸ್ಟ್ ಇಂಡಿಯಾ ಕಂಪೆನಿ ಕಾರವಾರ ಬಂದರಿನಲ್ಲಿ ಯುದ್ಧದ ಹಡಗುಗಳನ್ನು ನಿರ್ಮಿಸಿದರು. ಉದಾಹರನೆಗೆ, ಮರಾಠ ಅಡ್ಮಿರಲ್ ಕನ್ಹೋಜಿ ಆಂಗ್ರರಿಂದ ಬಾಂಬೆಯನ್ನು ರಕ್ಷಿಸಲು ೧೮ ಬಂದೂಕುಗಳನ್ನು ಹೊಂದಿದ್ದ ಬ್ರಿಟಾನಿಯಾ (೧೭೧೫) ಇಲ್ಲಿ ನಿರ್ಮಿಸಲಾಯಿತು.

೧೬೩೮ ರ ದಶಕದಲ್ಲಿ, ಕಾರವಾರವು ಮರಾಠರ ಸಾಮ್ರಾಜ್ಯದ ಭಾಗವಾಗಿತ್ತು. ಆದಾಗ್ಯೂ, ಮೂರನೇ ಅಂಗ್ಲೋ-ಮರಾಠ ಯುದ್ಧದಲ್ಲಿ ಮರಾಠರ ಸೋಲಿನ ನಂತರ, ಕಾರವಾರವು ಬ್ರಿಟಿಷರಿಗೆ ಆಧೀನಕ್ಕೆ ಒಳಪಟ್ಟಿತು. 

ಬೆಂಗಾಲಿ ಕವಿ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ, ರವೀಂದ್ರನಾಥ ಠಾಗೋರ್, ೧೮೮೨ ರಲ್ಲಿ ಕಾರವಾರಕ್ಕೆ ಭೇಟಿ ನೀಡಿದರು, ಮತ್ತು ಅವರ ಆತ್ಮಚರಿತ್ರೆಯಲ್ಲಿ ಅವರು ನಗರಕ್ಕೆ ಒಂದು ಅಧ್ಯಾಯವನ್ನು ಅರ್ಪಿಸಿದರು. ಟಾಗೋರ್ ೨೨ ವರ್ಷದವನಾಗಿದ್ದಾಗ, ಅವರು ತಮ್ಮ ಸಹೋದರ ಸತ್ಯಾಂಡ್ರಾನಾಥ ಟಾಗೋರೊಂದಿಗೆ ಉಳಿದರು, ಇವರು ಕಾರವಾರ ಜಿಲ್ಲೆಯಲ್ಲಿ ನ್ಯಾಯಾಧೀಶರು ಇದ್ದರು. 

೧೮೬೨ ರಿಂದ, ರಾಜ್ಯಗಳ ಪುನರ್ವಿಂಗಡಣೆಯಾಗುವವರೆಗೆ, ಉತ್ತರ ಕನ್ನಡ ಜಿಲ್ಲೆ ಬಾಂಬೆ ಪ್ರೆಸಿಡೇನ್ಸಿ ಭಾಗವಾಗಿತ್ತು. ಈ ಅವಧಿಯಲ್ಲಿ, ಹೊಸ ರಸ್ತೆಗಳು, ಒಂದು ವಾರ್ಫ್, ವಾರ್ಫ್ ರಸ್ತೆ ಮತ್ತು ಸೀವಾಲ್ ಕಾರವಾರ ಬಂದರಿನಲ್ಲಿ ನಿರ್ಮಿಸಲಾಯಿತು. ಹೆಚ್ಚುವರಿಯಾಗಿ, ಒಂದು ಶೇಖರಣೆಗಾಗಿ ಬಳಸಲಾಗುವ ಬಹು ಅಂತಸ್ತಿನ ಕಟ್ಟಡ, ಅಂಚೆ ಕಛೇರಿ, ಜಮೇಂದಾರದ ಕಚೇರಿಗಳು, ಮತ್ತು ಒಂದು ಕ್ರಿಶ್ಚಿಯನ್ ಸ್ಮಶಾನ.

ಸ್ಥಳೀಯ ಕೊಂಕಣಿ ಮಾತನಾಡುವ ಜನರು ಮುಂಬೈಯೊಂದಿಗೆ ಸಂಬನ್ಧ ಹೊಂದ್ದರು. ಅನೇಕ ಮರಾಠಿ ಶಾಲೆಗಳನ್ನು ಕಾರವಾರ ಮತ್ತು ಜೋಯ್ಡ ತಾಲ್ಲುಕುಗಳಲ್ಲಿ ಸ್ಥಾಪಿಸಲಾಯಿತು. ಮರಾಠಿ ಚಲನಚಿತ್ರಗಳನ್ನು ಕಾರವಾರದಲ್ಲಿ ಬಿಡುಗಡೆ ಮಾಡಲಾಯಿತು. ಪ್ರತಿ ವರ್ಷ, ಮರಾಠಿ ನಾಟಕ ತಂಡಗಳು ಮುಂಬೈ ಮತ್ತು ಪುಣೆಯಿಂದ ಕಾರವಾರಕ್ಕೆ ಭೇಟಿ ನೀಡಿದವು. ಎರಡನೆಯ ಮಹಾಯುದ್ಧ ಅವಧಿಯಲ್ಲಿ, ಕಾರವಾರ ಒಂದು ಭಾರತೀಯ ನೌಕಾ ತರಬೇತಿ ಸೈಟ್ ಆಗಿತ್ತು.

ಭೂಗೋಳ

ಕಾರವಾರ 

ಕಾರವಾರ ಭಾರತೀಯ ಉಪಖಂಡದ ಪಶ್ಚಿಮ ಕರಾವಳಿಯಲ್ಲಿ ಒಂದು ನಗರವಾಗಿದೆ. ನಗರದ ಪೂರ್ವಕ್ಕೆ ಪಶ್ಚಿಮ ಘಟ್ಟಗಳಿವೆ. ಕಾರವಾರವು ಕುಶಾವಲಿ ಹಳ್ಳಿಯಿಂದ ೧೫೩ ಕಿಲೋಮೀಟರ್ ದೂರದಲ್ಲಿ ಅರಬ್ಬೀ ಸಮುದ್ರಕ್ಕೆ ಹರಿಯುವ ಕಾಳಿ ನದಿಯ ದಡದಲ್ಲಿದೆ.  ಕಾರವಾರವು ಗೋವ-ಕರ್ನಾಟಕದ ಗಡಿಯಿಂದ ೧೫ ಕಿಮೀ ಕಕ್ಷಿಣವಾಗಿದೆ ಮತ್ತು ಕರ್ನಾಟಕದ ರಾಜಧಾನಿ, ಬೆಂಗಳೂರಿನಿಂದ, ೫೧೯ ಕಿ.ಮೀ. ವಾಯುವ್ಯವಾಗಿದೆ.

ಜೀವವೈವಿಧ್ಯ

ಕಾರವಾರದಿಂದ ೬೦ ಕಿಮೀ ಈಶಾನ್ಯದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶವಿದೆ. ಈ ಹುಲಿ ಮೀಸಲುಯಲ್ಲಿ ೧೯೭ ಅಪರೂಪ ಪಕ್ಷಿಗಳ ಜಾತಿಗಳನ್ನು ಹೊಂದಿದೆ, ಹಾಗೂ ೧೯ ಸ್ಥಳೀಯ ಜಾತಿಗಳನ್ನು, ಉದಾಹರಣೆಗೆ, ದೊಡ್ಡ ದಾಸಮಂಗಟ್ಟೆ, ಹುಲಿ,ಚಿರತೆ, ಕಪ್ಪು ಪ್ಯಾಂಥರ್, ಕರಡಿ, ಆನೆ, ಮತ್ತು ಜಿಂಕೆಗಳು.

ಹವಾಮಾನ

ಕಾರವಾರದಲ್ಲಿ ಮಾರ್ಚ್ನಿಂದ ಮೇವರೆಗೆ, ತಾಪಮಾನವು ೩೭° ತಲುಪಬಹುದು. ಡಿಸೇಂಬರ್ನಿಂದ ಫೆಬ್ರುವರಿವರೆಗೆ, ತಾಪಮಾನವು ತುಂಬ ಸೌಮ್ಯವಾಗಿರುತ್ತದೆ (೨೪°-೩೨°). ಮುಂಗಾರು ಸಮಾಯದಲ್ಲಿ, ಸರಾಸರಿ ಮಳೆಯು ೪೦೦ ಸೆಂಟಿಮೇಟರ್ ಆಗತ್ತೆ.

ಕಾರವಾರದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 32.8
(91)
33
(91)
33.5
(92.3)
34
(93)
33.3
(91.9)
29.7
(85.5)
28.2
(82.8)
28.4
(83.1)
29.5
(85.1)
30.9
(87.6)
32.3
(90.1)
32.8
(91)
31.53
(88.7)
ಕಡಮೆ ಸರಾಸರಿ °C (°F) 20.8
(69.4)
21.8
(71.2)
23.6
(74.5)
25
(77)
25.1
(77.2)
24.4
(75.9)
24.9
(76.8)
24
(75)
24.1
(75.4)
24.1
(75.4)
24.4
(75.9)
24.2
(75.6)
23.87
(74.94)
Average precipitation mm (inches) 1.1
(0.043)
0.2
(0.008)
2.9
(0.114)
24.4
(0.961)
183.2
(7.213)
೧,೦೨೭.೨
(೪೦.೪೪೧)
೧,೨೦೦.೪
(೪೭.೨೬)
787.3
(30.996)
292.1
(11.5)
190.8
(7.512)
70.9
(2.791)
16.4
(0.646)
೩,೭೯೬.೯
(೧೪೯.೪೮೫)
[ಸೂಕ್ತ ಉಲ್ಲೇಖನ ಬೇಕು]

ಜನಸಂಖ್ಯಾಶಾಸ್ತ್ರ

ಕಾರವಾರದ ಒಟ್ಟು ಜನಸಂಖ್ಯೆ ೨೦೧೪ ರಲ್ಲಿ ೧,೫೭೭,೩೯ ಆಗಿದೆ. ಕಾರವಾರದ ಸರಾಸರಿ ಸಾಕ್ಷರತೆ ಪ್ರಮಾನವು ೮೫% ಆಗಿದೆ, ಇದು ರಾಷ್ಟ್ರೇಯ ಸರಾಸರಿಯ ೭೪% ಮತ್ತು ಕರ್ನಾಟಕ ರಾಜ್ಯದ ಸರಾಸರಿಯ ೭೫% ಕ್ಕಿಂತ ಹೆಚ್ಚಾಗಿದೆ : ಪುರುಷರ ಸಾಕ್ಷರತೆ ೮೫% ಮತ್ತು ಸ್ತ್ರೀ ಸಾಕ್ಷರತೆ ೭೫% ಆಗಿತ್ತು. ಕಾರವಾರದಲ್ಲಿ, ಜನಸಂಖ್ಯೆಯ ೧೦% ೬ ವರ್ಷದೊಳಗಿನ ಮಕ್ಕಳು.  

ಭಾಷೆ

ಕನ್ನಡ ನಗರದ ಅಧಿಕೃತ ಮತ್ತು ಸ್ಥಳೀಯ ಭಾಷೆಯಾಗಿದೆ. ೨೦೧೧ ಜನಗಣತಿಯಲ್ಲಿ, ಉತ್ತರ ಕನ್ನಡದ ಪ್ರಮುಖ ಭಾಷೆಗಳೆಂದರೆ ಕನ್ನಡ (೫೫.೧೯%), ಕೊಂಕಣಿ (೧೯.೨೦%), ಉರ್ದೂ (೧೦.೯೦%), ಮರಾಠಿ (೯.೧೭%) ಮತ್ತು ಇತರ ಭಾಷೆಗಳು(೩.೧೨%) ಆಗಿತ್ತು. 

ಕಾರವಾರದಲ್ಲಿ ಧರ್ಮಗಳು
ಧರ್ಮ ಶೇಕಡಾವಾರು
ಹಿಂದು
  
84.19%
ಮುಸ್ಲಿಂ
  
10.93%
ಕ್ರಿಶ್ಚಿಯನ್
  
4.73%
ಸೀಖ್
  
0.04%
ಜೈನ
  
0.04%

ಧರ್ಮ

ಕಾರವಾರದಲ್ಲಿ ಹೆಚ್ಚಿನ ಜನರು ಹಿಂದು ಧರ್ಮವನ್ನು ಅನುಸರಿಸುತ್ತರೆ. ಗೋವದಲ್ಲಿ ಪೋರ್ಚುಗೀಸ್ ಅಡಳಿತ ಅವಧಿಯಲ್ಲಿ, ಕಾರವಾರಕ್ಕೆ ಕ್ರೈಸ್ತ ಧರ್ಮದ ಕಾರವಾರಕ್ಕೆ ಪರಿಚಯಿಸಲಾಯಿತುಆಗಮನವಾಯಿತು. ಬಹಮನಿ ರಾಜ್ಯಗಳಿಂದ, ಮುಸ್ಲಿಂ ವ್ಯಾಪಾರಿಗಳು ಕಾರವಾರಕ್ಕೆ ವಲಸೆ ಬಂದರು. ಕಾರವಾರದಲ್ಲಿ ಕೆಲವು ಗಮನಾರ್ಹ ದೇವಸ್ಥಾನಗಳೆಂದರೆ: ಶ್ರೀ ಶೆಜ್ಜೇಶ್ವರ ದೇವಸ್ಥಾನ, ಕಾಳಿಕ ದೇವಸ್ಥಾನ, ಶ್ರೀ ನರಸಿಂಹ ದೇವಸ್ಥಾನ, ಶ್ರೀ ರೇಣುಕ ಎಲ್ಲಮ್ಮ ದೇವಸ್ಥಾನ, ಆದಿಮಯ ದೇವಸ್ಥಾನ, ಶ್ರೀ ಮಹಾದೇವ ದೇವಸ್ಥಾನ, ಮತ್ತು ಶ್ರೀ ದುರ್ಗಾ ದೇವಿ ದೇವಸ್ಥಾನ.

ಗಡಿ ಸಮಸ್ಯೆಗಳು

ಉತ್ತರ ಕನ್ನಡವು ಮೂಲಭೂತವಾಗಿ ಒಂದು ಕನ್ನಡ ಮತ್ತು ಕೊಂಕಣಿ ಬಹುತೇಕ ಪ್ರದೇಶವಾಗಿತ್ತು. ಬ್ರಿಟಿಷ್ ಆಡಳಿತ ಅವಧಿಯಲ್ಲಿ, ಉತ್ತರ ಕನ್ನಡ ಜಿಲ್ಲೆಯನ್ನು ಬಾಂಬೆ ಪ್ರೆಸಿಡೆನ್ಸಿಯೊಂದಿಗೆ ವಿಲೀನಗೊಳಿಸಿದರು. ಅನೇಕ ಕೊಂಕಣಿ ಜನರು ಮುಂಬೈಗೆ ನಿಕಟ ಸಂಬಂಧ ಹೊಂದಿದ್ದರು. ಆದಾಗ್ಯೂ, ಮರಾಠಿ ಜನರು ಕೊಂಕಣಿ ಒಂದು ಮರಾಠಿ ಉಪಭಾಷೆ ಎಂದು ಹೇಳಿಕೊಂಡರು, ಇದು ಕೊಂಕಣಿ ಜನರಿಗೆ ಕೋಪವಾಯಿತು, ಅವರು ಕೊಂಕಣಿ ಸ್ವತಂತ್ರ ಭಾಷೆ ಎಂದು ಪ್ರತಿಪಾದಿಸಿದರು.ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ ಎಂದು ಮಹಾಜನ್ ಆಯೋಗದ ಮುಂದೆ ಕೊಂಕಣಿ ನಾಯಕ ಪಿ.ಎಸ್ ಕಕಾಮತ್ ಅವರು ವಾದಿಸಿದರು.             

ಆರ್ಥಿಕತೆ 

ಕಾರವಾರ 
ಸೂರ್ಯಾಸ್ತದಲ್ಲಿ ಮನೆಗೆ ಹಿಂತಿರುಗಿದ ಮೀನುಗಾರರು, ದೇವಭಾಗ್, ಕಾರವಾರ.

ಪ್ರಾಥಮಿಕ ಉದ್ಯಮ

ಕಾರವಾರ ಒಂದು ಕೃಷಿ ಪ್ರದೇಶವಾಗಿದೆ. ಸಾಮಾನ್ಯ ಬೆಳೆಗಳೆಂದರೆ ಅಕ್ಕಿ, ಕಡಲೇಕಾಯಿ, ಧಾನ್ಯಗಳು, ಈರುಳ್ಳಿ, ಮತ್ತು ಕಲ್ಲಂಗಡಿ. ಇತರ ಪ್ರಾಥಮಿಕ ಉದ್ಯಮಗಳೆಂದರೆ, ಪಶುಪಾಲನೆ, ರೇಷ್ಮೆ ಕೃಷಿ, ತೋಟಗಾರಿಕೆ, ಜೇನುಸಾಕಣೆ, ಮತ್ತು ಮರಕೆಲಸ.  

ಮೀನುಗಾರಿಕೆ ಕಾರವಾರದಲ್ಲಿ  ಒಂದು ಪ್ರಮುಖ ಉದ್ಯಮವಾಗಿದೆ. ಮೀನುಗಾರಿಕೆ ದೋಣಿಗಳ ಮತ್ತು ಮೀನುಗಾರಿಕೆ ಪರದೆಗಳಿಂದ ಮಾಡಲಾಗುತ್ತದೆ. ಸೀಗಡಿ ಸಾಕಣೆ ಕೂಡ ಮಾಡಲಾಗುತ್ತದೆ, ವಿಶೇಷವಾಗಿ ಕಾಳಿ ನದೀಮುಖದಲ್ಲಿರುವ ಉಪ್ಪು ನೀರಿನಿಂದ ಕಾರಣ. 

ಕಾರವಾರ 
ಮಸ್ಲಿನ್ ಬಳಸಿ ಉಡುಗೆ ತಯಾರಿಕೆ.

ದ್ವಿತೀಯ ಆರ್ಥಿಕತೆ

ಆಭರಣ ವಿನ್ಯಾಸ, ಉತ್ಪಾದನೆ, ಮತ್ತು ಸೋನಗಾರರ ಕೆಲಸಗಳು ಕಾರವಾರದಲ್ಲಿ ಸಾಮಾನ್ಯ ಕೈಗಾರಿಕೆಗಳಾಗಿವೆ. ಬಿಣಗಾ ಪ್ರದೇಶದಲ್ಲಿ, ಒಂದು ರಾಸಾಯನಿಕ ಕಂಪನಿ, ಆದಿತ್ಯ ಬಿರ್ಲಾ ಕೆಮಿಕಲ್ಸ್, ಕಾಸ್ಟಿಕ್ ಸೋಡಾ, ಲೈ ಫ್ಲೇಕ್ಸ್, ದ್ರವ ಮತ್ತು ಪುಡಿಮಾಡಿದ ಕ್ಲೋರಿನ್, ಹೈಡ್ರೋಕ್ಲೋರಿಕ್ ಆಮ್ಲ, ಫಾಸ್ಪರಿಕ್ ಆಮ್ಲ, ಮತ್ತು ಬ್ರೋಮಿನ್ಗಳನ್ನು ತಯಾರಿಸುತ್ತದೆ.  [ಸಾಕ್ಷ್ಯಾಧಾರ ಬೇಕಾಗಿದೆ]

ತೃತೀಯ ಆರ್ಥಿಕತೆ

ಕೈಗಾದಲ್ಲಿ, ಕಾರವಾರದಿಂದ  ಭಾರತೀಯ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಒಂದು ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ವಹಿಸುತ್ತದೆ, ಅದು ಕೈಗಾ ಪರಮಾಣು ವಿದ್ಯುತ್‌ ಸ್ಥಾವರ. ಈ ಪರಮಾಣು ವಿದ್ಯುತ್ ಸ್ಥಾವರವು ೮೮೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಇದು ಭಾರತದಲ್ಲಿ ೩ ನೇ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರುವಾಗಿದೆ. ಮಲ್ಲಾಪುರ್ ಮತ್ತು ಕದ್ರಾ ಊರುಗಳ ನಡುವೆ, ಕಾಳಿ ನದಿಯ ಮೇಲೆ, ಕರ್ನಾಟಕ ವಿದ್ಯುತ್ ನಿಗಮ ಕದ್ರಾ ಆಣೆಕಟ್ಟು ನಿರ್ವಹಿಸುತ್ತದೆ.

ಪ್ರವಾಸೋದ್ಯಮ

ಕಾರವಾರ 
ಠಾಗೋರ್ ಕಡಲು ತೀರ

ಆಸಕ್ತಿಯ ಸ್ಥಳಗಳು

ಕಡಲುತೀರಗಳು

  • ಬಿಣಗಾ ಕಡಲುತೀರ
    ಕಾರವಾರ 
    ರಾವೀಂದ್ರನಾಥ ಠಾಗೋರ್ ಕಡಲುತೀರದಲ್ಲಿ ಐಎನೆಸ್ ಚಪಲ್ ಯುದ್ಧನೌಕೆ ಮ್ಯೂಸಿಯಂ.
  • ದೇವಭಾಗ ಕಡಲುತೀರ
  • ಕಾಳಿ ಕಡಲುತೀರ
  • ಕಾರವಾರ ಕಡಲುತೀರ
  • ಕುರುಂಗಡ ದ್ವೀಪ ಕಡಲುತೀರ
  • ಮಜಲಿ ಕಡಲುತೀರ
  • ಒಯ್ಸ್ಟರ್ ರಾಕ್ ಲೈಟ್ ಹೌಸ್ 
  • ತಿಳಮತ್ತಿ ಕಡಲುತೀರ

ಒಳನಾಡು

  • ಅಣಶಿ ರಾಷ್ಟ್ರೀಯ ಉದ್ಯಾನ
  • ಚೈತನ್ಯ ಉದ್ಯಾನ
  • ಚೆಂದಿಯ ಮತ್ತು ನಾಗರಮಡಿ ಜಲಪಾತಗಳು
  • ದೇವಕರ್ ಜಲಪಾತ
  • ಗುಡ್ಡಹಳ್ಳಿ ಬೆಟ್ಟ
  • ಹಬ್ಬು ಬೆಟ್ಟ
  • ಮುದ್ಗೆರಿ ಅಣೆಕಟ್ಟು
  • ಶೀರ್ವೆ ಘಟ
  • ಮಕ್ಕೆರಿ

ಸಂಸ್ಕೃತಿ

ಕಾರವಾರ 
ಕುರ್ಲೆ ಅಮ್ಬತ್ (ಏಡಿ ಮಸಾಲ), ಸ್ಥಳೀಯ ಖಾದ್ಯ.

ಪಾಕಪದ್ಧತಿ

ಕಾರವಾರ ತನ್ನ ಸಮುದ್ರಾಹಾರ ತಿನಿಸುಗಳಿಗಾಗಿ ಹೆಸರುವಾಸಿಯಾಗಿದೆ.

ಪ್ರಮುಖ ವ್ಯಕ್ತಿಗಳು

ಸಹ ನೋಡಿ

ಉಲ್ಲೇಖಗಳು

Tags:

ಕಾರವಾರ ವ್ಯುತ್ಪತ್ತಿಶಾಸ್ತ್ರಕಾರವಾರ ಇತಿಹಾಸಕಾರವಾರ ಭೂಗೋಳಕಾರವಾರ ಹವಾಮಾನಕಾರವಾರ ಜನಸಂಖ್ಯಾಶಾಸ್ತ್ರಕಾರವಾರ ಗಡಿ ಸಮಸ್ಯೆಗಳುಕಾರವಾರ ಆರ್ಥಿಕತೆ ಕಾರವಾರ ಪ್ರವಾಸೋದ್ಯಮಕಾರವಾರ ಸಂಸ್ಕೃತಿಕಾರವಾರ ಪ್ರಮುಖ ವ್ಯಕ್ತಿಗಳುಕಾರವಾರ ಸಹ ನೋಡಿಕಾರವಾರ ಉಲ್ಲೇಖಗಳುಕಾರವಾರಉತ್ತರ ಕನ್ನಡ ಜಿಲ್ಲೆಉತ್ಪಾದನೆಕರ್ನಾಟಕಕಾಳಿ ನದಿಕೃಷಿಪ್ರವಾಸೋದ್ಯಮಬಾಂಬೆ ಪ್ರೆಸಿಡೆನ್ಸಿರಾಜ್ಯಸಹ್ಯಾದ್ರಿ

🔥 Trending searches on Wiki ಕನ್ನಡ:

ಸಂತಾನೋತ್ಪತ್ತಿಯ ವ್ಯವಸ್ಥೆಶ್ರೀ ರಾಮಾಯಣ ದರ್ಶನಂಭಾರತದ ಪ್ರಧಾನ ಮಂತ್ರಿಗಳ ಪಟ್ಟಿಅಬುಲ್ ಕಲಾಂ ಆಜಾದ್ಪಾಲಕ್ಹರಿಹರ (ಕವಿ)ಭೋವಿಅರ್ಜುನಮಲಾವಿಜವಹರ್ ನವೋದಯ ವಿದ್ಯಾಲಯಗ್ರಾಮ ಪಂಚಾಯತಿಬೆಳ್ಳುಳ್ಳಿಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಚಂದ್ರನವೋದಯಬಾಲ್ಯ ವಿವಾಹಜೀನುಭಾರತದ ರಾಷ್ಟ್ರಪತಿಕಾಮದೇವನೂರು ಮಹಾದೇವಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕೃಷ್ಣದಿನೇಶ್ ಕಾರ್ತಿಕ್ಋತುಹುರುಳಿಕರ್ನಾಟಕ ಸಶಸ್ತ್ರ ಬಂಡಾಯಚಂದ್ರಗುಪ್ತ ಮೌರ್ಯಮಲ್ಲಿಕಾರ್ಜುನ ಜ್ಯೋತಿರ್ಲಿಂಗಹಂಪೆಮಳೆನೀರು ಕೊಯ್ಲುದಾಸ ಸಾಹಿತ್ಯಶಬ್ದ ಮಾಲಿನ್ಯಸಂಸ್ಕೃತರಾಮಗಿರೀಶ್ ಕಾರ್ನಾಡ್ಕರ್ನಾಟಕ ಯುದ್ಧಗಳುಎಸ್.ನಿಜಲಿಂಗಪ್ಪಪ್ರಬಂಧ ರಚನೆಯಕ್ಷಗಾನದಶಾವತಾರರಂಗಭೂಮಿಕಾಳಿಡಿ.ವಿ.ಗುಂಡಪ್ಪಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಪೆರಿಯಾರ್ ರಾಮಸ್ವಾಮಿಸಿಂಧನೂರುಅಸಹಕಾರ ಚಳುವಳಿಆದೇಶ ಸಂಧಿಕನ್ನಡ ಸಾಹಿತ್ಯ ಸಮ್ಮೇಳನಯುವರತ್ನ (ಚಲನಚಿತ್ರ)ಅಂತರ್ಜಲಇಂದಿರಾ ಗಾಂಧಿಅರವಿಂದ ಘೋಷ್ವ್ಯವಸಾಯಕೈಗಾರಿಕೆಗಳುಸಜ್ಜೆಹರಿಶ್ಚಂದ್ರಆನೆಗೂಗಲ್ಹನುಮಾನ್ ಚಾಲೀಸ೨೦೧೬ ಬೇಸಿಗೆ ಒಲಿಂಪಿಕ್ಸ್ರಾಷ್ಟ್ರೀಯ ಸೇವಾ ಯೋಜನೆ1947-1948 ರ ಇಂಡೋ-ಪಾಕಿಸ್ತಾನ ಯುದ್ಧರಾಜ್‌ಕುಮಾರ್ಶಿವರಾಮ ಕಾರಂತಭಾರತದ ಚುನಾವಣಾ ಆಯೋಗಬಾಹುಬಲಿಬಿ. ಎಂ. ಶ್ರೀಕಂಠಯ್ಯದ್ವಿರುಕ್ತಿವಿಧಾನ ಪರಿಷತ್ತುಭಾರತದಲ್ಲಿ ತುರ್ತು ಪರಿಸ್ಥಿತಿಭಾರತದಲ್ಲಿನ ಶಿಕ್ಷಣಮಯೂರಶರ್ಮಕರ್ನಾಟಕದ ಹಬ್ಬಗಳುಶ್ರೀಶೈಲಐಹೊಳೆ🡆 More