ಗಂಗೋತ್ರಿ

ಗಂಗೋತ್ರಿ ಭಾರತದ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿನ ಒಂದು ತೀರ್ಥಕ್ಷೇತ್ರ.

ಭಾಗೀರಥಿ ನದಿಯ ದಂಡೆಯಲ್ಲಿರುವ ಗಂಗೋತ್ರಿ ಹಿಮಾಲಯದ ಪವಿತ್ರ ಚತುರ್ಧಾಮಗಳ ಪೈಕಿ ಒಂದು. ಹಿಮಾಲಯದ ಉನ್ನತ ಪ್ರದೇಶದಲ್ಲಿರುವ ಗಂಗೋತ್ರಿ ಸಮುದ್ರಮಟ್ಟದಿಂದ ೩,೦೪೨ ಮೀ. ಎತ್ತರದಲ್ಲಿದೆ. ಉತ್ತರಾಖಂಡದ ಮುಖ್ಯ ನಗರಗಳಾದ ಹರಿದ್ವಾರ, ರಿಷಿಕೇಶ ಮತ್ತು ಡೆಹ್ರಾ ಡೂನ್‍‍ಗಳಿಂದ ಒಂದು ದಿನದ ಪ್ರಯಾಣ ಮಾಡಿ ಗಂಗೋತ್ರಿಯನ್ನು ತಲುಪಬಹುದು. ಯಮುನೋತ್ರಿಯಿಂದಾದರೆ ಎರಡು ದಿನಗಳ ಪ್ರಯಾಣ. ಗಂಗೋತ್ರಿಯವರೆಗೆ ವಾಹನಗಳು ಸಾಗಬಲ್ಲವಾದ್ದರಿಂದ ಇಲ್ಲಿಗೆ ಬರುವ ಯಾತ್ರಿಗಳ ಸಂಖ್ಯೆ ಯಮುನೋತ್ರಿಗೆ ಹೋಲಿಸಿದರೆ ಹೆಚ್ಚು. ಜೊತೆಗೆ ಗಂಗೋತ್ರಿ ಯಮುನೋತ್ರಿಗಿಂತ ಹೆಚ್ಚು ಪಾವನವೆಂದು ಜನರ ನಂಬಿಕೆ.

ಗಂಗೋತ್ರಿ
ಗಂಗೋತ್ರಿ
Population
 (2001)
 • Total೬೦೬
ಗಂಗೋತ್ರಿ
ಗಂಗೋತ್ರಿ ದೇವಾಲಯ

ಗಂಗೋತ್ರಿ ಗಂಗಾ ನದಿಯ ಉಗಮಸ್ಥಾನವಾಗಿದೆ. ಇಲ್ಲಿ ಗಂಗೆಯು ಭಾಗೀರಥಿ ಎಂಬ ಹೆಸರಿನಿಂದ ಕರೆಯಿಸಿಕೊಳ್ಳುವಳು. ಮುಂದೆ ದೇವಪ್ರಯಾಗದಲ್ಲಿ ಅಲಕನಂದಾ ನದಿಯೊಂದಿಗೆ ಸಂಗಮಿಸಿದ ನಂತರ ನದಿಗೆ ಗಂಗಾ ಎಂಬ ನಾಮಧೇಯ. ಗಂಗೋತ್ರಿಯಲ್ಲಿ ಗಂಗಾ ದೇವಿಯ ಆಲಯವು ಇದೆ. ದೇವಾಲಯದ ಪ್ರಾಂಗಣದಲ್ಲಿ ಗಂಗೆಯನ್ನು ಒಲಿಸಿಕೊಳ್ಳಲು ಭಗೀರಥ ಚಕ್ರವರ್ತಿಯು ತಪಸ್ಸನ್ನು ಮಾಡಿದನೆನ್ನಲಾಗುವ ಸ್ಥಳವನ್ನು ಸಹ ಗುರುತಿಸಲಾಗಿದೆ. ಗಂಗಾನದಿಯ ಮೂಲ ಗಂಗೋತ್ರಿಯಿಂದ ೧೮ ಕಿ.ಮೀ. ಮುಂದೆ ಉನ್ನತ ಪರ್ವತಗಳಲ್ಲಿ ಇರುವ ಗೋಮುಖ. ಗಂಗೋತ್ರಿಯಿಂದ ಇಲ್ಲಿಗೆ ಅತಿ ಕಠಿಣ ಕಾಲ್ನಡಿಗೆಯ ಹಾದಿ ಇದೆ. ಗಂಗೋತ್ರಿಯಲ್ಲಿ ಪ್ರತಿ ಸಂಜೆ ನಡೆಸಲಾಗುವ ಗಂಗಾ ಆರತಿ ಬಲು ಪ್ರಸಿದ್ಧ. ಚಳಿಗಾಲದ ೬ ತಿಂಗಳುಗಳ ಕಾಲ ಈ ಪ್ರದೇಶವು ಹಿಮದಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗಿರುತ್ತದೆ. ದೀಪಾವಳಿಯ ದಿನದಂದು ಗಂಗೋತ್ರಿ ದೇವಾಲಯವನ್ನು ಮುಚ್ಚಿ ಗಂಗೆಯ ವಿಗ್ರಹವನ್ನು ಹಾರ್ಸಿಲ್‌ ಬಳಿಯ ಮುಖ್ಬಾ ಗ್ರಾಮದಲ್ಲಿ ನೆಲೆಗೊಳಿಸಿ ಆರಾಧಿಸಲಾಗುತ್ತದೆ. ಮುಂದಿನ ಮೇ ತಿಂಗಳಲ್ಲಿ ಮತ್ತೆ ಗಂಗೋತ್ರಿ ದೇವಾಲಯವನ್ನು ತೆರೆಯಲಾಗುತ್ತದೆ. ಗಂಗೋತ್ರಿ ಮತ್ತು ಆಸುಪಾಸಿನ ಪ್ರದೇಶಗಳು ಗಂಗೋತ್ರಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿವೆ.


ಗಂಗೋತ್ರಿ
ಗಂಗೋತ್ರಿಯಲ್ಲಿ ಭಾಗೀರಥಿನದಿ
ಗಂಗೋತ್ರಿ
ಗಂಗಾ ನದಿಯ ಮೂಲ - ಗೋಮುಖ



ಇವನ್ನೂ ನೋಡಿ


ಬಾಹ್ಯ ಸಂಪರ್ಕಕೊಂಡಿಗಳು

Tags:

ಉತ್ತರಾಖಂಡಚತುರ್ಧಾಮಭಾಗೀರಥಿಭಾರತಯಮುನೋತ್ರಿರಿಷಿಕೇಶಹರಿದ್ವಾರಹಿಮಾಲಯ

🔥 Trending searches on Wiki ಕನ್ನಡ:

ಕರ್ನಾಟಕದ ತಾಲೂಕುಗಳುಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಭಾರತದ ರಾಜಕೀಯ ಪಕ್ಷಗಳುಯೇಸು ಕ್ರಿಸ್ತಡಿ. ದೇವರಾಜ ಅರಸ್ಎ.ಪಿ.ಜೆ.ಅಬ್ದುಲ್ ಕಲಾಂವಿಧಾನಸೌಧಅಶ್ವತ್ಥಾಮತತ್ಸಮ-ತದ್ಭವಪುಟ್ಟರಾಜ ಗವಾಯಿಸುಧಾ ಮೂರ್ತಿಅ.ನ.ಕೃಷ್ಣರಾಯಭಾರತದ ಮುಖ್ಯ ನ್ಯಾಯಾಧೀಶರುಮಂಜುಳಜಯಚಾಮರಾಜ ಒಡೆಯರ್ಮೆಂತೆಪೊನ್ನಡಿ.ವಿ.ಗುಂಡಪ್ಪಸೂರ್ಯವ್ಯೂಹದ ಗ್ರಹಗಳುತ್ರಿಪದಿಉಪ್ಪಿನ ಸತ್ಯಾಗ್ರಹಉತ್ಪಲ ಮಾಲಾ ವೃತ್ತಕರ್ಮಧಾರಯ ಸಮಾಸಕಾಳಿ ನದಿಕನಕಪುರಜಾತಿವಿರಾಟ್ ಕೊಹ್ಲಿಜೋಗಿ (ಚಲನಚಿತ್ರ)ಕಾಲಾಯ ತಸ್ಮೈ ನಮಃ (ಚಲನಚಿತ್ರ)ಕರ್ನಾಟಕದ ಜಾನಪದ ಕಲೆಗಳುಚಿನ್ನಹಳೇಬೀಡುಚದುರಂಗ (ಆಟ)ಕುರಿಆದಿವಾಸಿಗಳುರಾಮಬೇಲೂರುಪಠ್ಯಪುಸ್ತಕವೀರಗಾಸೆಋಗ್ವೇದವಿಶ್ವ ಪರಿಸರ ದಿನಎಸ್.ಎಲ್. ಭೈರಪ್ಪಜಶ್ತ್ವ ಸಂಧಿಕನ್ನಡಪ್ರಭಕರ್ನಾಟಕದ ಮಹಾನಗರಪಾಲಿಕೆಗಳುಸೆಸ್ (ಮೇಲ್ತೆರಿಗೆ)ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಭಾಷೆಉಡಮಾನವನ ವಿಕಾಸಖೊಖೊಚ.ಸರ್ವಮಂಗಳಕಾರ್ಯಾಂಗಸಜ್ಜೆಕೆ. ಅಣ್ಣಾಮಲೈಜಗತ್ತಿನ ಅತಿ ಎತ್ತರದ ಪರ್ವತಗಳುಅಯೋಧ್ಯೆಲೋಹಅಲಾವುದ್ದೀನ್ ಖಿಲ್ಜಿಮಹಾಕವಿ ರನ್ನನ ಗದಾಯುದ್ಧಚಂದ್ರಗುಪ್ತ ಮೌರ್ಯಆದಿ ಶಂಕರಕುವೆಂಪುಪರ್ವತ ಬಾನಾಡಿಶನಿಗುಣ ಸಂಧಿಕೇರಳಸ್ತ್ರೀತೆಲುಗುವಿಮೆಗರ್ಭಧಾರಣೆಆಯುರ್ವೇದಗೀತಾ ನಾಗಭೂಷಣಭಾರತದ ವಿಶ್ವ ಪರಂಪರೆಯ ತಾಣಗಳುಹಾ.ಮಾ.ನಾಯಕ🡆 More