ವಿಹಾರ

ವಿಹಾರ ಪದವು ಸಾಮಾನ್ಯವಾಗಿ ಬೌದ್ಧ ಸಂನ್ಯಾಸಿಗಳ ವಿರಕ್ತಗೃಹವನ್ನು ಸೂಚಿಸುತ್ತದೆ.

ಈ ಪರಿಕಲ್ಪನೆಯು ಪ್ರಾಚೀನವಾಗಿದೆ ಮತ್ತು ಮುಂಚಿನ ಸಂಸ್ಕೃತ ಹಾಗೂ ಪಾಲಿ ಪಠ್ಯಗಳಲ್ಲಿ, ಇದರರ್ಥ ಯಾವುದೇ ಸ್ಥಳ ಅಥವಾ ಸಂತೋಷ ಹಾಗೂ ಮನರಂಜನೆಗಾಗಿರುವ ಸೌಕರ್ಯಗಳ ವ್ಯವಸ್ಥೆ. ಈ ಪದವು ವಾಸ್ತುಶಿಲ್ಪ ಪರಿಕಲ್ಪನೆಯಾಗಿ ವಿಕಸನಗೊಂಡಿತು ಮತ್ತು ಇಲ್ಲಿ ಇದು ಭಿಕ್ಷುಗಳು ವಾಸಿಸುವ ಬೀಡುಗಳನ್ನು ಸೂಚಿಸುತ್ತದೆ, ವಿಶೇಷವಾಗಿ ಬೌದ್ಧಧರ್ಮದಲ್ಲಿ. ಇದು ಒಂದು ತೆರೆದ ಹಂಚಿಕೊಳ್ಳಲಾದ ಸ್ಥಳ ಅಥವಾ ಅಂಗಳವನ್ನು ಹೊಂದಿರುತ್ತಿತ್ತು. ಈ ಪದವು ಆಜೀವಿಕ, ಹಿಂದೂ ಮತ್ತು ಜೈನ ಸಂನ್ಯಾಸಿ ಸಾಹಿತ್ಯದಲ್ಲಿ ಕಾಣಬರುತ್ತದೆ, ಮತ್ತು ಸಾಮಾನ್ಯವಾಗಿ ಅಲೆದಾಡುವ ಭಿಕ್ಷುಗಳಿಗೆ ವಾರ್ಷಿಕ ಭಾರತೀಯ ಮುಂಗಾರಿನ ಅವಧಿಯಲ್ಲಿ ದೊರೆಯುವ ಆಶ್ರಯವನ್ನು ಸೂಚಿಸುತ್ತದೆ. ಭಾರತದ ಉತ್ತರದ ರಾಜ್ಯವಾದ ಬಿಹಾರವು ತನ್ನ ಹೆಸರನ್ನು "ವಿಹಾರ" ಶಬ್ದದಿಂದ ಪಡೆದಿದೆ, ಏಕೆಂದರೆ ಆ ಪ್ರದೇಶದಲ್ಲಿ ಅನೇಕ ಬೌದ್ಧ ವಿಹಾರಗಳಿದ್ದವು.

ವಿಹಾರ
ಅಜಂತಾ ಗುಹೆಗಳು

ವಿಹಾರ ಅಥವಾ ವಿಹಾರ ಸಭಾಂಗಣ ಪದವು ಭಾರತದ ವಾಸ್ತುಶೈಲಿಯಲ್ಲಿ ಹೆಚ್ಚು ನಿರ್ದಿಷ್ಟ ಅರ್ಥವನ್ನು ಹೊಂದಿದೆ, ವಿಶೇಷವಾಗಿ ಪ್ರಾಚೀನ ಭಾರತೀಯ ಕಲ್ಲು ಕೆತ್ತನೆಯ ವಾಸ್ತುಶಿಲ್ಪದಲ್ಲಿ. ಇಲ್ಲಿ ಇದರರ್ಥ ಒಂದು ಕೇಂದ್ರ ಸಭಾಂಗಣ ಮತ್ತು ಇದಕ್ಕೆ ಕೆಲವೊಮ್ಮೆ ಕಲ್ಲಿನಿಂದ ಕೆತ್ತಿದ ಹಾಸಿಗೆಗಳಿರುವ ಸಣ್ಣ ಕೊಠಡಿಗಳು ಸಂಪರ್ಕ ಹೊಂದಿದ್ದವು. ಕೆಲವು ಸಭಾಂಗಣಗಳು ಹಿಂದಿನ ಗೋಡೆಯ ಮಧ್ಯದಲ್ಲಿ ಸ್ಥಿತವಾದ ದೇವಮಂದಿರ ಕೊಠಡಿಯನ್ನು ಹೊಂದಿವೆ. ಇದು ಮುಂಚಿನ ಉದಾಹರಣೆಗಳಲ್ಲಿ ಸ್ತೂಪವನ್ನು, ಅಥವಾ ನಂತರ ಬುದ್ಧನ ವಿಗ್ರಹವನ್ನು ಹೊಂದಿರುತ್ತಿತ್ತು. ಅಜಂತಾ ಗುಹೆಗಳು, ಔರಂಗಾಬಾದ್ ಗುಹೆಗಳು, ಕಾರ್ಲ ಗುಹೆಗಳು ಮತ್ತು ಕಾನ್ಹೇರಿ ಗುಹೆಗಳಂತಹ ಪ್ರಾತಿನಿಧಿಕ ದೊಡ್ಡ ನಿವೇಶನಗಳು ಹಲವಾರು ವಿಹಾರಗಳನ್ನು ಹೊಂದಿವೆ. ಕೆಲವು ಹತ್ತಿರದಲ್ಲಿ ಒಂದು ಚೈತ್ಯ ಅಥವಾ ಪೂಜಾ ಸಭಾಂಗಣವನ್ನು ಒಳಗೊಂಡಿದ್ದವು. ಮೂಲತಃ ವಿಹಾರವು ಮಳೆ ಬಂದಾಗ ಭಿಕ್ಷುಗಳಿಗೆ ಆಶ್ರಯ ಒದಗಿಸುವ ಉದ್ದೇಶ ಹೊಂದಿತ್ತು.

ವೈದಿಕೋತ್ತರ ಕಾಲದಲ್ಲಿ ವಿಹಾರದ ಅರ್ಥ ಹೆಚ್ಚು ನಿರ್ದಿಷ್ಟವಾಗಿ ಭಾರತದ ತಪಸ್ವಿ ಸಂಪ್ರದಾಯಗಳಲ್ಲಿ ಒಂದು ಬಗೆಯ ವಿಶ್ರಾಂತಿಗೃಹ ಅಥವಾ ದೇವಾಲಯ ಅಥವಾ ವಿರಕ್ತಗೃಹ, ವಿಶೇಷವಾಗಿ ಭಿಕ್ಷುಗಳ ಒಂದು ಗುಂಪಿಗಾಗಿ. ಇದು ವಿಶೇಷವಾಗಿ ದೇವಾಲಯಗಳಾಗಿ ಬಳಸಲಾಗುತ್ತಿದ್ದ ಅಥವಾ ಭಿಕ್ಷುಗಳು ಭೇಟಿಯಾಗಿ ಮತ್ತು ಕೆಲವರು ನಡೆದಾಡುತ್ತಿದ್ದ ಸಭಾಂಗಣವನ್ನು ಸೂಚಿಸುತ್ತಿತ್ತು. ಪ್ರದರ್ಶನ ಕಲೆಗಳ ವಿಷಯದಲ್ಲಿ, ವಿಹಾರ ಪದದ ಅರ್ಥ ಭೇಟಿಯಾಗಲು, ಪ್ರದರ್ಶಿಸಲು ಅಥವಾ ವಿಶ್ರಾಂತಿ ಪಡೆಯುವ ನಾಟಕಮಂದಿರ, ಧರ್ಮ ಸಮಾಜ ಅಥವಾ ದೇವಾಲಯ ಆವರಣ. ನಂತರ ಇದು ಬೌದ್ಧ ಧರ್ಮ, ಹಿಂದೂ ಧರ್ಮ ಮತ್ತು ಜೈನ ಧರ್ಮದಲ್ಲಿ ಒಂದು ಬಗೆಯ ದೇವಾಲಯ ಅಥವಾ ವಿರಕ್ತಗೃಹ ಕಟ್ಟಡವನ್ನು ಸೂಚಿಸುತ್ತಿತ್ತು.

ಉಲ್ಲೇಖಗಳು

Tags:

ಸಂಸ್ಕೃತ

🔥 Trending searches on Wiki ಕನ್ನಡ:

ಅಲಾವುದ್ದೀನ್ ಖಿಲ್ಜಿಶಿವರಾಮ ಕಾರಂತಕೋವಿಡ್-೧೯ಅಸ್ಪೃಶ್ಯತೆಗುರು (ಗ್ರಹ)ಕರ್ನಾಟಕ ಯುದ್ಧಗಳುಚೋಮನ ದುಡಿಭರತೇಶ ವೈಭವಕಲ್ಪನಾಶಾಂತಲಾ ದೇವಿಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ನುಗ್ಗೆಕಾಯಿದಾನ ಶಾಸನಕರ್ನಾಟಕದ ಮಹಾನಗರಪಾಲಿಕೆಗಳುಸಂಗೊಳ್ಳಿ ರಾಯಣ್ಣಬೆಸಗರಹಳ್ಳಿ ರಾಮಣ್ಣಪರಿಸರ ರಕ್ಷಣೆಕಲಿಕೆಸೂರ್ಯವ್ಯೂಹದ ಗ್ರಹಗಳುಪಂಚತಂತ್ರಉತ್ತರ ಕರ್ನಾಟಕಭಾರತೀಯ ಸಂವಿಧಾನದ ತಿದ್ದುಪಡಿಕಾನೂನುರಾಮಮೋಕ್ಷಗುಂಡಂ ವಿಶ್ವೇಶ್ವರಯ್ಯಗುರುವ್ಯಕ್ತಿತ್ವಬ್ಯಾಂಕ್ಕೃತಕ ಬುದ್ಧಿಮತ್ತೆನೀನಾದೆ ನಾ (ಕನ್ನಡ ಧಾರಾವಾಹಿ)ಕನ್ನಡ ಬರಹಗಾರ್ತಿಯರುಭಾರತದ ರಾಜ್ಯಗಳ ಜನಸಂಖ್ಯೆಷಟ್ಪದಿನರೇಂದ್ರ ಮೋದಿದೇವರ ದಾಸಿಮಯ್ಯಗೊರೂರು ರಾಮಸ್ವಾಮಿ ಅಯ್ಯಂಗಾರ್ಬುಡಕಟ್ಟುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕರ್ನಾಟಕದ ಜಾನಪದ ಕಲೆಗಳುಪಟ್ಟದಕಲ್ಲುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕನ್ನಡ ವ್ಯಾಕರಣಲಕ್ಷ್ಮಿಬಾಬು ಜಗಜೀವನ ರಾಮ್ಸ್ವಾಮಿ ವಿವೇಕಾನಂದಕಬಡ್ಡಿಶಿಕ್ಷಣಯೋಜಿಸುವಿಕೆಕ್ರೀಡೆಗಳುದಾಸವಾಳಆಯ್ದಕ್ಕಿ ಲಕ್ಕಮ್ಮಅರ್ಜುನಗೋತ್ರ ಮತ್ತು ಪ್ರವರರವೀಂದ್ರನಾಥ ಠಾಗೋರ್ಪಂಪಸಂಭೋಗಮಾಟ - ಮಂತ್ರಜಾನಪದಭಾರತದ ಸಂಸ್ಕ್ರತಿಜ್ವರವಿಕಿಪೀಡಿಯಜನಪದ ನೃತ್ಯಗಳುಎ.ಎನ್.ಮೂರ್ತಿರಾವ್ರಸ(ಕಾವ್ಯಮೀಮಾಂಸೆ)ಆಂಧ್ರ ಪ್ರದೇಶಬ್ಲಾಗ್ವೀಣೆಫೇಸ್‌ಬುಕ್‌ಕರ್ಕಾಟಕ ರಾಶಿಓಂ ನಮಃ ಶಿವಾಯಬಿ.ಎಲ್.ರೈಸ್ವೆಂಕಟೇಶ್ವರ ದೇವಸ್ಥಾನಹರಕೆಆಯುರ್ವೇದಪ್ರಚಂಡ ಕುಳ್ಳಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗ್ರಂಥಾಲಯಗಳುಹಲಸು🡆 More