ಕಂಪಾಲ

ಕಂಪಾಲ : ಪೂರ್ವ ಆಫ್ರಿಕದಲ್ಲಿರುವ ಉಗಾಂಡ ದೇಶದ ರಾಜಧಾನಿ; ಅಲ್ಲಿಯ ಅತ್ಯಂತ ದೊಡ್ಡ ನಗರ, ಬುಗಾಂಡ ಪ್ರಾಂತ್ಯದಲ್ಲಿ ಎನ್ಟೆಬ್ಬೆಗೆ ಉತ್ತರಕ್ಕೂ ಈಶಾನ್ಯಕ್ಕೂ ನಡುವೆ 34 ಕಿಮೀ ದೂರದಲ್ಲಿ ವಿಕ್ಟೋರಿಯ ಸರೋವರದ ದಡದ ಮೇಲಿದೆ.

ಈ ನಗರದ ವಿಸ್ತೀರ್ಣ 22 ಚ.ಕಿಮೀ ಜನವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳು ಪ್ರತ್ಯೇಕವಾಗಿವೆ. ಮುಖ್ಯ ರಸ್ತೆಯ ಉದ್ಧ 8 ಕಿಮೀ ಇದರ ಮಧ್ಯದಲ್ಲಿ ಇರುವ ಪುರಭವನವನ್ನು ಕಟ್ಟಿಸಿದಾತ (1950) ಒಬ್ಬ ಭಾರತೀಯ ವ್ಯಾಪಾರಿ. ಸರ್ಕಾರಿ ಭವನವೂ ಕೆಲವು ಸಚಿವಾಲಯಗಳೂ ಎನ್ಟೆಬ್ಬೆಯಲ್ಲಿವೆ. ಇತರ ಖಾತೆಗಳೂ ಸರ್ಕಾರಿ ಕಚೇರಿಗಳೂ ಇರುವುದು ಕಂಪಾಲದಲ್ಲಿ. ವಿಧಾನ ಪರಿಷತ್ತಿನ ಅಧಿವೇಶನ ನಡೆಯುವುದೂ ಸಂಸದೀಯ ಭವನ ಇರುವುದೂ ಇಲ್ಲೇ, ಮುಖ್ಯರಸ್ತೆಯ ಎರಡು ಪಕ್ಕಗಳಲ್ಲೂ ಹಿಂದೆ ಇದ್ದ ಹಳೆಯ ಭಾರತೀಯ ಮಳಿಗೆಗಳಿಗೆ ಬದಲಾಗಿ ಈಗ ಹೊಸ ಭವನಗಳು ಎದ್ದಿವೆ. ಉಗಾಂಡದ ವಿದ್ಯುಚ್ಛಕ್ತಿ ಮಂಡಳಿಯ ಭವನ (ಅಂಬರ್ ಹೌಸ್), ಲಿಂಟ್ ಮಾರುಕಟ್ಟೆ ಮತ್ತು ಕಾಫಿ ಮಂಡಲಿಯ ಭವನಗಳು ಉದಾಹರಣೆಗಳು. ಉಗಾಂಡದ ವಸ್ತುಸಂಗ್ರಹಾಲಯ ಮತ್ತು ನ್ಯಾಯಾಲಯಗಳು ಹಳೆಯ ಮಾದರಿಯ ಕಟ್ಟಡಗಳಲ್ಲಿಯೇ ಇವೆ. 1952ರಲ್ಲಿ ವಸ್ತುಸಂಗ್ರಹಾಲಯವನ್ನು ಹೊಸದಾಗಿ ಕಟ್ಟಲಾಯಿತು. ಕಂಪಾಲದಲ್ಲಿ ಅನೇಕ ಮಸೀದಿಗಳು, ದೇವಾಲಯಗಳು, ಚರ್ಚುಗಳು, ಆಸ್ಪತ್ರೆಗಳು, ಶಾಲಾ ಕಾಲೇಜುಗಳು, ಜ್ಯೂಬಿಲಿ ಉದ್ಯಾನ, ಕ್ರೀಡಾಂಗಣ ಮುಂತಾದುವೂ ಇವೆ. ಕಂಪಾಲದ ಬಾನುಲಿ ಕೇಂದ್ರ ಇರುವುದು ಬುಗೋಲೋಬಿ ಬೆಟ್ಟದ ಮೇಲೆ ಒಂದು ವಿಶ್ವವಿದ್ಯಾನಿಲಯವಿದೆ.

Kampala
Capital city
Montage of various landmarks in Kampala, Uganda.
Montage of various landmarks in Kampala, Uganda.
Coordinates: 00°18′49″N 32°34′52″E / 0.31361°N 32.58111°E / 0.31361; 32.58111
CountryUganda
CityKampala
Government
 • Lord MayorErias Lukwago
 • Executive DirectorDorothy Kisaka
Area
 • Capital city೧೮೯ km (೭೩ sq mi)
 • Land೧೭೬ km (೬೮ sq mi)
 • Water೧೩ km (೫ sq mi)
 • Metro
೮,೪೫೧.೯ km (೩,೨೬೩.೩ sq mi)
Elevation
೧,೨೦೦ m (೩,೯೦೦ ft)
Population
 (2019)
 • Capital city೧೬,೫೦,೬೦೦
 • Metro
೬೭,೦೯,೯೦೦
DemonymMunakampala
Time zoneUTC+3 (EAT)
Websitewww.kcca.go.ug

ಕಂಪಾಲ ಉಗಾಂಡದ ಮುಖ್ಯರಸ್ತೆ, ರೈಲ್ವೆ, ಜಲಮಾರ್ಗ ಮತ್ತು ವಾಯುಮಾರ್ಗಗಳ ಕೇಂದ್ರ. ಇಲ್ಲಿಯ ಜನಸಂಖ್ಯೆ 1,659,600 (2011).

ಉಲ್ಲೇಖಗಳು

ಕಂಪಾಲ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಕಂಪಾಲ

Tags:

ಆಫ್ರಿಕಉಗಾಂಡ

🔥 Trending searches on Wiki ಕನ್ನಡ:

ಬಾದಾಮಿ ಗುಹಾಲಯಗಳುಕಾದಂಬರಿಮಡಿವಾಳ ಮಾಚಿದೇವಅಲ್-ಬಿರುನಿಹೊಯ್ಸಳೇಶ್ವರ ದೇವಸ್ಥಾನಚಾಣಕ್ಯಕಾರಡಗಿಋಗ್ವೇದಮಹಮದ್ ಬಿನ್ ತುಘಲಕ್ಪಂಚ ವಾರ್ಷಿಕ ಯೋಜನೆಗಳುಜ್ಯೋತಿಷ ಶಾಸ್ತ್ರಮಧುಮೇಹಏಲಕ್ಕಿರಾಘವಾಂಕಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಅನುನಾಸಿಕ ಸಂಧಿಬಹುವ್ರೀಹಿ ಸಮಾಸವಿಲಿಯಂ ಷೇಕ್ಸ್‌ಪಿಯರ್ಪೋಕ್ಸೊ ಕಾಯಿದೆಬಹಮನಿ ಸುಲ್ತಾನರುಅನುಶ್ರೀಹಿಂದೂ ಮಾಸಗಳುಮೊದಲನೆಯ ಕೆಂಪೇಗೌಡರವಿ ಬೆಳಗೆರೆತ. ರಾ. ಸುಬ್ಬರಾಯಜಶ್ತ್ವ ಸಂಧಿಕರ್ನಾಟಕಜಯಚಾಮರಾಜ ಒಡೆಯರ್ಶಬ್ದನದಿಬಿ.ಎಸ್. ಯಡಿಯೂರಪ್ಪಜಾಹೀರಾತುಶಬರಿರಾಮ ಮನೋಹರ ಲೋಹಿಯಾರಾಷ್ಟ್ರೀಯತೆಹೊಂಗೆ ಮರಛತ್ರಪತಿ ಶಿವಾಜಿಗೂಗಲ್ಎಚ್.ಎಸ್.ಶಿವಪ್ರಕಾಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮಂಕುತಿಮ್ಮನ ಕಗ್ಗಜಾನಪದಕಂದಗೋಕರ್ಣನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಮೈಸೂರು ದಸರಾಜಾಗತೀಕರಣಸೆಸ್ (ಮೇಲ್ತೆರಿಗೆ)ಸೂರ್ಯವ್ಯೂಹದ ಗ್ರಹಗಳುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಮುದ್ದಣಸಾಹಿತ್ಯಪಾಟೀಲ ಪುಟ್ಟಪ್ಪಹೋಬಳಿಬಿ.ಎಫ್. ಸ್ಕಿನ್ನರ್ಅಶ್ವತ್ಥಮರಚಂದ್ರಗುಪ್ತ ಮೌರ್ಯರಾಜಕೀಯ ಪಕ್ಷಕನ್ನಡ ರಾಜ್ಯೋತ್ಸವಮಲೈ ಮಹದೇಶ್ವರ ಬೆಟ್ಟಶಿಂಶಾ ನದಿಭಾರತೀಯ ಭೂಸೇನೆಹರಕೆಸಿದ್ಧರಾಮಗಣಗಲೆ ಹೂಎಳ್ಳೆಣ್ಣೆಕನ್ನಡ ಸಾಹಿತ್ಯ ಪ್ರಕಾರಗಳುವೈದಿಕ ಯುಗದಾಸವಾಳಓಂ (ಚಲನಚಿತ್ರ)ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಭಾರತದ ಸಂವಿಧಾನದ ೩೭೦ನೇ ವಿಧಿಭೂಕಂಪನಾಗವರ್ಮ-೧ವ್ಯವಸಾಯಭಾರತದ ಮಾನವ ಹಕ್ಕುಗಳುಹುಣ್ಣಿಮೆ🡆 More