ಒನಕೆ ಓಬವ್ವ

ಒನಕೆ ಓಬವ್ವ ೧೮ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ.

ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.

ಒನಕೆ ಓಬವ್ವ

ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು.ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು.

ಚಿತ್ರದುರ್ಗದಲ್ಲಿನ ಓಬವ್ವ ಸ್ಮರಣೆ

ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ.

ಕನ್ನಡ ಚಿತ್ರರಂಗದಲ್ಲಿ ಓಬವ್ವ ಸ್ಮರಣೆ

ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿನ ಪ್ರಸಿದ್ಧ ಹಾಡಿನಲ್ಲಿ ಅವರ ವೀರೋಚಿತ ಪ್ರಯತ್ನವನ್ನು ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ನಟಿ ಜಯಂತಿ (ನಟಿ) ಅವರು ಓಬವ್ವನ ಪಾತ್ರ ಮಾಡಿದ್ದರು. ೨೦೧೯ರಲ್ಲಿ ಚಿತ್ರದುರ್ಗದ ಒನಕೆ ಓಬವ್ವ ಎನ್ನುವ ಸಿನಿಮಾದಲ್ಲಿ ತಾರಾ ಅನುರಾಧಾ ಅವರು ಒನಕೆ ಓಬವ್ವನಾಗಿ ಅಭಿನಯಿಸಿದ್ದಾರೆ.

ಇವನ್ನೂ ನೋಡಿ

ಕಿತ್ತೂರು ಚೆನ್ನಮ್ಮ ರಾಣಿ ಅಬ್ಬಕ್ಕ [[ವರ್ಗ:]]

Tags:

ಒನಕೆ ಓಬವ್ವ ಒನಕೆ ಓಬವ್ವ ಚಿತ್ರದುರ್ಗದಲ್ಲಿನ ಓಬವ್ವ ಸ್ಮರಣೆಒನಕೆ ಓಬವ್ವ ಕನ್ನಡ ಚಿತ್ರರಂಗದಲ್ಲಿ ಓಬವ್ವ ಸ್ಮರಣೆಒನಕೆ ಓಬವ್ವ ಇವನ್ನೂ ನೋಡಿಒನಕೆ ಓಬವ್ವಕಿತ್ತೂರು ಚೆನ್ನಮ್ಮಚಿತ್ರದುರ್ಗಮದಕರಿ ನಾಯಕರಾಣಿ ಅಬ್ಬಕ್ಕ

🔥 Trending searches on Wiki ಕನ್ನಡ:

ಭಾರತದ ಸಂಯುಕ್ತ ಪದ್ಧತಿಸಂಸ್ಕೃತ ಸಂಧಿರವಿ ಡಿ. ಚನ್ನಣ್ಣನವರ್ಆರ್ಯಭಟ (ಗಣಿತಜ್ಞ)ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದಯಾನಂದ ಸರಸ್ವತಿಬಿ. ಆರ್. ಅಂಬೇಡ್ಕರ್ವ್ಯಾಪಾರಮಂತ್ರಾಲಯಸೂಪರ್ (ಚಲನಚಿತ್ರ)ಹುಯಿಲಗೋಳ ನಾರಾಯಣರಾಯಕರ್ನಾಟಕದ ಮಹಾನಗರಪಾಲಿಕೆಗಳುದಾಸವಾಳಉತ್ತರ ಕನ್ನಡನಕ್ಷತ್ರಇಂಡಿ ವಿಧಾನಸಭಾ ಕ್ಷೇತ್ರಪುಷ್ಕರ್ ಜಾತ್ರೆಜೋಗತೆಂಗಿನಕಾಯಿ ಮರಆದೇಶ ಸಂಧಿಚಿಕ್ಕಮಗಳೂರುಅಶೋಕನ ಶಾಸನಗಳುಸುಧಾ ಮೂರ್ತಿನರೇಂದ್ರ ಮೋದಿಅಮೇರಿಕದ ಫುಟ್‌ಬಾಲ್ವಾಸ್ಕೋ ಡ ಗಾಮಅಂಕಿತನಾಮಶಾಂತಕವಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಮೂಢನಂಬಿಕೆಗಳುಗಿಳಿಮೂಲಧಾತುಗಳ ಪಟ್ಟಿವಾಲ್ಮೀಕಿರೈತಗೋವಿಂದ ಪೈವೀರಗಾಸೆವಿಜಯಾ ದಬ್ಬೆಓಂ (ಚಲನಚಿತ್ರ)ಕನ್ನಡ ವಿಶ್ವವಿದ್ಯಾಲಯಟೈಗರ್ ಪ್ರಭಾಕರ್ಮೂಲಸೌಕರ್ಯವಿವಾಹಯಣ್ ಸಂಧಿಮಂಡಲ ಹಾವುವೃತ್ತೀಯ ಚಲನೆಕ್ರೀಡೆಗಳುಭಾರತೀಯ ಕಾವ್ಯ ಮೀಮಾಂಸೆಗರ್ಭಧಾರಣೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆರೈತವಾರಿ ಪದ್ಧತಿಪ್ಲಾಸಿ ಕದನಗಂಗಾಆವಕಾಡೊವಿಕ್ರಮಾದಿತ್ಯಕಳಿಂಗ ಯುದ್ಧಹಳೇಬೀಡುಸಂಖ್ಯಾಶಾಸ್ತ್ರರಾಜ್ಯಸಭೆಹಲ್ಮಿಡಿ ಶಾಸನಗೋತ್ರ ಮತ್ತು ಪ್ರವರವಾಣಿಜ್ಯ(ವ್ಯಾಪಾರ)ಮಣ್ಣುಎಸ್. ಬಂಗಾರಪ್ಪಶಾತವಾಹನರುಕೇಂದ್ರ ಪಟ್ಟಿಕನ್ನಡ ಸಾಹಿತ್ಯ ಸಮ್ಮೇಳನಮಂಜಮ್ಮ ಜೋಗತಿಭಾರತದ ರಾಜಕೀಯ ಪಕ್ಷಗಳುಚಂದ್ರವಚನ ಸಾಹಿತ್ಯಗ್ರಾಹಕರ ಸಂರಕ್ಷಣೆವಿಕ್ರಮಾರ್ಜುನ ವಿಜಯತಂಬಾಕು ಸೇವನೆ(ಧೂಮಪಾನ)ರೈಲು ನಿಲ್ದಾಣಮೂಲಭೂತ ಕರ್ತವ್ಯಗಳುಎ.ಪಿ.ಜೆ.ಅಬ್ದುಲ್ ಕಲಾಂಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ🡆 More