ಮಾರೀಚ

ರಾಮಾಯಣದಲ್ಲಿ ಬರುವ ರಾಕ್ಷಸನ ಪಾತ್ರ.

ಮಾರೀಚ
ಮಾರೀಚ
ಚಿನ್ನದ ಜಿಂಕೆಯ ರೂಪದಲ್ಲಿರುವ ಮಾರೀಚನನ್ನು ಬೆನ್ನಟ್ಟುತ್ತಿರುವ ರಾಮ
ದೇವನಾಗರಿमारीच
ಸಂಸ್ಕೃತ ಲಿಪ್ಯಂತರಣಮಾರೀಚ
ಸಂಲಗ್ನತೆರಾಕ್ಷಸ
ನೆಲೆದಂಡಕಾರಣ್ಯ

ರಾಮ,ಲಕ್ಷ್ಮಣರು ವಿಶ್ವಾಮಿತ್ರರಲ್ಲಿ ವಿದ್ಯಾರ್ಜನೆ ಮಾಡುತ್ತಿರುವಾಗ ಸುಬಾಹು ಮತ್ತು ಮಾರೀಚನೆಂಬ ರಾಕ್ಷಸರು ವಿಶ್ವಾಮಿತ್ರರ ಹೋಮ-ಯಾಗಾದಿಗಳಲ್ಲಿ ವಿಘ್ನ ತರುತ್ತಿರುತ್ತಾರೆ. ಆಗ ವಿಶ್ವಾಮಿತ್ರರ ಅಪ್ಪಣೆಯ ಮೇರೆಗೆ ರಾಮ,ಲಕ್ಷ್ಮಣರು ಈ ರಾಕ್ಷಸರ ಮೇಲೆ ದಾಳಿ ಮಾಡಿದಾಗ ಸುಬಾಹು ಮೃತನಾಗುತ್ತಾನೆ ಮತ್ತು ಮಾರೀಚ ಅನಾಮಧೇಯ ದ್ವೀಪವೊಂದರಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ.ಮುಂದೆ ರಾಮ-ಲಕ್ಷ್ಮಣ-ಸೀತೆಯರು ಅರಣ್ಯದಲ್ಲಿ ವನವಾಸದಲ್ಲಿದ್ದಾಗ ಇದೇ ಮಾರೀಚ ರಾವಣನಿಗೆ ಸಹಾಯಮಾಡಲೆಂದು ಬಂಗಾರ ವರ್ಣದ ಜಿಂಕೆಯಾಗಿ ಸೀತೆಯ ಕುಟೀರದ ಮುಂದೆ ಸುಳಿದಾಡತೊಡಗಿ ಸೀತೆಯ ಮನಸೂರೆಗೊಳ್ಳುತ್ತಾನೆ. ಪತ್ನಿಯ ಆಸೆಗಾಗಿ ಈ ಮಾಯಾಮೃಗ ದ ಬೆನ್ನತ್ತಿ ಹೋದ ರಾಮ ಕೊನೆಗೆ ಬೇಸತ್ತು ಜಿಂಕೆಯನ್ನು ತೀರ್ಥಹಳ್ಳಿಯ ಸಮೀಪವಿರುವ ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಬಳಿ ಕೊಂದುಹಾಕುತ್ತಾನೆಂದು ರಾಮಾಯಣದಲ್ಲಿ ವಿವರಿಸಲಾಗಿದೆ.



ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |


ಭಾರತದಂತೆಯೇ ರಾಮಾಯಣವನ್ನು ತನ್ನ ರಾಷ್ಟ್ರೀಯ ಮಹಾಕಾವ್ಯವೆಂದು ಪರಿಗಣಿಸುವ ಮಾರೀಶಸ್‌ ಜನತೆ ತಮ್ಮ ದೇಶಕ್ಕೆ ಮಾರೀಚದ್ವೀಪವೆಂದು ಹೇಳಿಕೊಳ್ಳುವುದುಂಟು. ವಿಶ್ವಾಮಿತ್ರನ ಯಜ್ಞಕಾರ್ಯಕ್ಕೆ ವಿಘ್ನವುಂಟುಮಾಡುತ್ತಿದ್ದ ಮಾರೀಚ ಹಾಗೂ ಸುಭಾಹು ರಾಕ್ಷಸರನ್ನು. ರಾಮ-ಲಕ್ಷ್ಮಣರು ಯುದ್ಧದಲ್ಲಿ ಸೋಲಿಸಿ ಯಜ್ಞವನ್ನು ನಿರ್ವಿಘ್ನಗೊಳಿಸಿದ ಮೇಲೆ ಮಾರೀಚ ಒಬ್ಬ ರಾಮಭಕ್ತನೇ ಆಗಿ ಪರಿವರ್ತನಗೊಂಡು ದಂಡಕಾರಣ್ಯದಲ್ಲಿ ವಿರಕ್ತ ಜೀವನ ನಡೆಸಲಾರಂಭಿಸುತ್ತಾನೆ. ಆದರೆ ರಾಮನಾಮತನ್ಮಯನಾದ ಮಾರೀಚನನ್ನು ವಿಧಿ ಅಷ್ಟಕ್ಕೇ ಬಿಡುವುದಿಲ್ಲ. ಮಾಯಾ ಸುವರ್ಣ ಮೃಗದ ರೂಪ ಧರಿಸಿ ಸೀತಾಪಹರಣಕ್ಕೆ ನೆರವಾಗಬೇಕೆಂದು ರಾವಣನು ಮಾರೀಚನ ಮೇಲೆ ಒತ್ತಾಯ ತರುತ್ತಾನೆ. ಮಾರೀಚ ಮನಸ್ಸಿಲ್ಲದ ಮನಸ್ಸಿನಿಂದ ಇದಕ್ಕೊಪ್ಪಬೇಕಾಗುತ್ತದೆ. ಸೀತೆಯ ' ಒತ್ತಾಯಕ್ಕೆ ಮಣಿದು. ಮಾಯಾಸುವರ್ಣಮೃಗವನ್ನು ಬೆನ್ನಟ್ಟುವ ರಾಮ ಅದನ್ನು ವಧಿಸಿದಾಗ ತಾನು ವಧಿಸಿದ್ದು ಮೃಗವನ್ನಲ್ಲ ಮಾರೀಚನನ್ನೆಂದು ಅರಿತುಕೊಳ್ಳುತ್ತಾನೆ. ಮಾರೀಚನು ರಾಮನಿಗೆ ತನ್ನನ್ನು ಸಾಗರಕ್ಕೆ ಎಸೆಯುವಂತೆಯೂ ಸಾಗರದಲ್ಲಿ ತನ್ನ ದೇಹ ಬೀಳುವ ಭಾಗದಲ್ಲಿ ಉಂಟಾಗುವ ಭೂಮಿಗೆ ತನ್ನ ಹೆಸರೇ ಇಡಬೇಕೆಂತಲೂ ಕೇಳಿಕೊಂಡು ತನ್ನ ಹೇಸರಿನ ಹೊಸ ದ್ವೀಪದಲ್ಲಿ ರಾಮಕಥೆ ಹಾಡಲ್ಪಡುವಂತೆ ಅನುಗ್ರಹಿಸೆಬೇಕೆಂದು ಪ್ರಾರ್ಥಿಸುತ್ತಾನೆ. ರಾಮಚಂದ್ರನಿಂದ ಅನುಗ್ರಹಿಸಿದ ಬಳಿಕೆ ಮಾರೀಚ ಕೊನೆಯುಸಿರೆಳೆಯಸಿತ್ತಾನೆ. ಆ ಮಾರೀಚದ್ವೀಪವೇ ಈಗಿನ ಮಾರಿಶಸ್‌. ಡಾ. ಶ್ರೀಧರ ಕೇತಕರರ ಮರಾಠಿ ಜ್ಞಾನಕೋಶ ದಲ್ಲಿಯೂ ಈಕತೆಯೆ ಪ್ರಸ್ತಾಪವಿ

Tags:

ರಾಮಾಯಣ

🔥 Trending searches on Wiki ಕನ್ನಡ:

ಕರ್ನಾಟಕ ಐತಿಹಾಸಿಕ ಸ್ಥಳಗಳುದಕ್ಷಿಣ ಕನ್ನಡಕೃಷ್ಣಾ ನದಿಧರ್ಮಸ್ಥಳಭಾರತೀಯ ರಿಸರ್ವ್ ಬ್ಯಾಂಕ್ಸಿ. ಆರ್. ಚಂದ್ರಶೇಖರ್ರಾಜಕೀಯ ವಿಜ್ಞಾನಮುಟ್ಟು ನಿಲ್ಲುವಿಕೆಭಾರತ ಬಿಟ್ಟು ತೊಲಗಿ ಚಳುವಳಿಮುರುಡೇಶ್ವರಷಟ್ಪದಿಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಅಂತರಜಾಲವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆರಾಷ್ಟ್ರೀಯ ಸೇವಾ ಯೋಜನೆಭಾರತದಲ್ಲಿ ಕೃಷಿಗಂಗ (ರಾಜಮನೆತನ)ಹೊಂಗೆ ಮರಉಪನಯನಭಾರತದ ತ್ರಿವರ್ಣ ಧ್ವಜತಾಳಗುಂದ ಶಾಸನಭೂತಾರಾಧನೆಭರತ-ಬಾಹುಬಲಿಪುಸ್ತಕಭೀಷ್ಮಎ.ಪಿ.ಜೆ.ಅಬ್ದುಲ್ ಕಲಾಂಕನ್ನಡದ ಉಪಭಾಷೆಗಳುಕರ್ನಾಟಕ ಜನಪದ ನೃತ್ಯಹೊಯ್ಸಳಜೈಪುರಭಗತ್ ಸಿಂಗ್ಭಾರತದಲ್ಲಿನ ಶಿಕ್ಷಣಎಮ್.ಎ. ಚಿದಂಬರಂ ಕ್ರೀಡಾಂಗಣಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕುಟುಂಬವಿಷ್ಣುಅಕ್ಕಮಹಾದೇವಿಸಾರಾ ಅಬೂಬಕ್ಕರ್ಆವಕಾಡೊಪ್ರಿಯಾಂಕ ಗಾಂಧಿರಾವಣವ್ಯಕ್ತಿತ್ವಚಂದ್ರಗುಪ್ತ ಮೌರ್ಯಶಿವರಾಜ್‍ಕುಮಾರ್ (ನಟ)ಬಂಗಾರದ ಮನುಷ್ಯ (ಚಲನಚಿತ್ರ)ಭಜರಂಗಿ (ಚಲನಚಿತ್ರ)ಕರ್ನಾಟಕ ಸಂಗೀತಭಾರತದ ಬಂದರುಗಳುಪತ್ರಚಿತ್ರದುರ್ಗಚನ್ನವೀರ ಕಣವಿಪರಿಸರ ರಕ್ಷಣೆ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಕುಬೇರಹಣ್ಣುಭಾರತೀಯ ಸಮರ ಕಲೆಗಳುಸಾಲುಮರದ ತಿಮ್ಮಕ್ಕತುಳುಕೈಕೇಯಿಜಾತ್ರೆಸಾಹಿತ್ಯಲಕ್ಷ್ಮಿಡಾಪ್ಲರ್ ಪರಿಣಾಮಭಾಷೆಗೋಕಾಕ್ ಚಳುವಳಿಬಿಜು ಜನತಾ ದಳಸಂವತ್ಸರಗಳುಸಿದ್ದರಾಮಯ್ಯಔಡಲಹರಕೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಗಣರಾಜ್ಯಸಿರಿ ಆರಾಧನೆಸಂಯುಕ್ತ ಕರ್ನಾಟಕಕರ್ನಾಟಕ ಲೋಕಸೇವಾ ಆಯೋಗನುಡಿಗಟ್ಟುರವಿಚಂದ್ರನ್ಗ್ರಹಕುಂಡಲಿಅಲ್ಲಮ ಪ್ರಭು🡆 More