ಸ್ಟಾರ್‌ಬಕ್ಸ್‌‌

ಸ್ಟಾರ್‌ಬಕ್ಸ್‌‌ ಕಾರ್ಪೊರೇಷನ್‌ (NASDAQ: SBUX) ಎಂಬುದು ಒಂದು ಅಂತರರಾಷ್ಟ್ರೀಯ ಕಾಫಿ ಮತ್ತು ಕಾಫಿಗೃಹ ಸರಣಿಯಾಗಿದ್ದು, ವಾಷಿಂಗ್ಟನ್‌ನ ಸಿಯಾಟಲ್‌‌‌ನಲ್ಲಿ ತನ್ನ ಮೂಲವನ್ನು ಹೊಂದಿದೆ.೫೦ ದೇಶಗಳಲ್ಲಿ ೧೭,೦೦೯ ಮಳಿಗೆಗಳನ್ನು ಹೊಂದುವುದರೊಂದಿಗೆ ಸ್ಟಾರ್‌ಬಕ್ಸ್‌‌ ವಿಶ್ವದಲ್ಲಿನ ಅತಿದೊಡ್ಡ ಕಾಫಿಗೃಹದ ಕಂಪನಿ ಎನಿಸಿಕೊಂಡಿದ್ದು, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿರುವ ೧೧,೦೦೦ಕ್ಕೂ ಹೆಚ್ಚಿನ ಮಳಿಗೆಗಳು, ಕೆನಡಾದಲ್ಲಿರುವ ೧೦೦೦ಕ್ಕೂ ಹೆಚ್ಚಿನ ಮಳಿಗೆಗಳು, ಮತ್ತು UKಯಲ್ಲಿರುವ ೭೦೦ಕ್ಕೂ ಹೆಚ್ಚಿನ ಮಳಿಗೆಗಳು ಇವುಗಳಲ್ಲಿ ಸೇರಿವೆ.

Starbucks Corporation
ಸಂಸ್ಥೆಯ ಪ್ರಕಾರPublic (NASDAQ: SBUX)
ಸ್ಥಾಪನೆPike Place Market in Seattle, Washington (ಮಾರ್ಚ್ 30, 1971 (1971-03-30))
ಸಂಸ್ಥಾಪಕ(ರು)Jerry Baldwin
Gordon Bowker
Zev Siegl
ಮುಖ್ಯ ಕಾರ್ಯಾಲಯSeattle, Washington, U.S.
ಕಾರ್ಯಸ್ಥಳಗಳ ಸಂಖ್ಯೆ೧೭,೦೦೯ (FY ೨೦೧೦)
ವ್ಯಾಪ್ತಿ ಪ್ರದೇಶ೫೦ countries
ಪ್ರಮುಖ ವ್ಯಕ್ತಿ(ಗಳು)Howard Schultz, Chairman, President and CEO
Troy Alstead, CFO
Stephen Gillett, CIO
ಉದ್ಯಮRestaurants
Retail coffee and tea
Retail beverages
Entertainment
ಉತ್ಪನ್ನWhole bean coffee
Boxed tea
Made-to-order beverages
Bottled beverages
Baked goods
Merchandise
Frappuccino beverages
Smoothies
ಸೇವೆಗಳುCoffee
ಆದಾಯಸ್ಟಾರ್‌ಬಕ್ಸ್‌‌ US$೧೦.೭೧ billion (FY ೨೦೧೦)
ಆದಾಯ(ಕರ/ತೆರಿಗೆಗೆ ಮುನ್ನ)ಸ್ಟಾರ್‌ಬಕ್ಸ್‌‌ US$೧.೪೨ billion (FY ೨೦೧೦)
ನಿವ್ವಳ ಆದಾಯಸ್ಟಾರ್‌ಬಕ್ಸ್‌‌ US$೯೪೫.೬ million (FY ೨೦೧೦)
ಒಟ್ಟು ಆಸ್ತಿಸ್ಟಾರ್‌ಬಕ್ಸ್‌‌ US$೬.೩೮ billion (FY ೨೦೧೦)
ಒಟ್ಟು ಪಾಲು ಬಂಡವಾಳIncrease US$೩.೬೮ billion (FY ೨೦೧೦)
ಉದ್ಯೋಗಿಗಳು೧೩೭,೦೦೦ (೨೦೧೦)
ಉಪಸಂಸ್ಥೆಗಳುStarbucks Coffee Company
Tazo Tea Company
Seattle's Best Coffee
Torrefazione Italia
Hear Music
Ethos Water
ಜಾಲತಾಣstarbucks.com

ಜಿನುಗು ಕುದಿತದ ಕಾಫಿ, ಎಸ್‌ಪ್ರೆಸೊ-ಆಧರಿತ ಮಾದಕ ಪಾನೀಯಗಳು, ಇತರ ಬಿಸಿಯಾದ ಮತ್ತು ತಂಪಾದ ಪಾನೀಯಗಳು, ಕಾಫಿ ಬೀಜಗಳು, ಪಚ್ಚಡಿಗಳು, ಬಿಸಿಯಾದ ಮತ್ತು ತಂಪಾದ ಸ್ಯಾಂಡ್‌ವಿಚ್‌ಗಳು ಮತ್ತು ಪಾನಿನಿ, ಪಿಷ್ಟಭಕ್ಷ್ಯಗಳು, ಕುರುಕಲು ತಿಂಡಿಗಳು, ಹಾಗೂ ಪಾನಪಾತ್ರೆಗಳು ಮತ್ತು ಲೋಟಗಳಂಥ ವಸ್ತುಗಳನ್ನು ಸ್ಟಾರ್‌ಬಕ್ಸ್‌‌ ಮಾರಾಟ ಮಾಡುತ್ತದೆ.

ಸ್ಟಾರ್‌ಬಕ್ಸ್‌‌ ಎಂಟರ್‌ಟೈನ್‌ಮೆಂಟ್‌ ವಿಭಾಗ ಮತ್ತು ಹಿಯರ್‌ ಮ್ಯೂಸಿಕ್‌ ಬ್ರಾಂಡ್ ಮೂಲಕ ಕಂಪನಿಯು ಪುಸ್ತಕಗಳು, ಸಂಗೀತ, ಮತ್ತು ಚಲನಚಿತ್ರಗಳನ್ನೂ ಸಹ ಮಾರುಕಟ್ಟೆ ಮಾಡುತ್ತದೆ. ಕಂಪನಿಯ ಅನೇಕ ಉತ್ಪನ್ನಗಳು ಕಾಲೋಚಿತವಾಗಿವೆ ಅಥವಾ ಮಳಿಗೆಯ ತಾಣಕ್ಕೆ ನಿರ್ದಿಷ್ಟವಾಗಿವೆ. ಸ್ಟಾರ್‌ಬಕ್ಸ್‌‌-ಬ್ರಾಂಡ್‌ನ ಐಸ್‌ ಕ್ರೀಮ್‌ ಮತ್ತು ಕಾಫಿಯನ್ನು ಕಿರಾಣಿ ಮಳಿಗೆಗಳಲ್ಲೂ ನೀಡಲಾಗುತ್ತದೆ.

ಕಾಫಿ ಬೀಜವನ್ನು ಹುರಿಯುವ ಮತ್ತು ಚಿಲ್ಲರೆ ಮಾರಾಟ ಮಾಡುವ ಒಂದು ಸ್ಥಳೀಯ ಘಟಕವಾಗಿ ನಂತರದ ಸ್ವರೂಪಗಳಲ್ಲಿ ಸಿಯಾಟಲ್‌‌‌ನಲ್ಲಿ ಸ್ಟಾರ್‌ಬಕ್ಸ್‌ ಸಂಸ್ಥಾಪನೆಗೊಳ್ಳುವುದರಿಂದ ಮೊದಲ್ಗೊಂಡು ಕಂಪನಿಯು ಕ್ಷಿಪ್ರವಾಗಿ ವಿಸ್ತರಿಸಿದೆ. ೧೯೯೦ರ ದಶಕದಲ್ಲಿ, ಪ್ರತಿಯೊಂದು ಕೆಲಸದ ದಿನದಂದು ಒಂದು ಹೊಸ ಮಳಿಗೆಯನ್ನು ಸ್ಟಾರ್‌ಬಕ್ಸ್‌ ಪ್ರಾರಂಭಿಸುತ್ತಿತ್ತು ಮತ್ತು ಈ ವೇಗವು ೨೦೦೦ದ ದಶಕಕ್ಕೂ ಮುಂದುವರಿಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಅಥವಾ ಕೆನಡಾದ ಹೊರಗಿನ ಮೊದಲ ಮಳಿಗೆಯು ೯೦ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭವಾದವು, ಮತ್ತು ಸ್ಟಾರ್‌ಬಕ್ಸ್‌‌ನ ಮಳಿಗೆಗಳ ಸರಿಸುಮಾರು ಮೂರನೇ ಒಂದರಷ್ಟು ಭಾಗವನ್ನು ಸಾಗರೋತ್ತರ ಮಳಿಗೆಗಳು ಪ್ರತಿನಿಧಿಸುತ್ತವೆ. ೨೦೦೯ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಹೊರಗೆ ೯೦೦ ಹೊಸ ಮಳಿಗೆಗಳ ಒಂದು ಜಾಲವನ್ನು ತೆರೆಯಲು ಕಂಪನಿಯು ಯೋಜಿಸಿತಾದರೂ, ೨೦೦೮ರಿಂದೀಚೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ೯೦೦ ಮಳಿಗೆಗಳ ಮುಚ್ಚುವಿಕೆಗಳ ಕುರಿತು ಅದು ಪ್ರಕಟಿಸಿದೆ.

ನ್ಯಾಯಸಮ್ಮತ-ವ್ಯಾಪಾರ ಕಾರ್ಯನೀತಿಗಳು, ಕಾರ್ಮಿಕ ಸಂಬಂಧಗಳು, ಪರಿಸರೀಯ ಪ್ರಭಾವ, ರಾಜಕೀಯ ದೃಷ್ಟಿಕೋನಗಳು, ಮತ್ತು ಸ್ಪರ್ಧಾತ್ಮಕತೆ-ವಿರೋಧಿ ಪರಿಪಾಠಗಳಂಥ ವಿವಾದಾಂಶಗಳ ಕುರಿತಾದ ಪ್ರತಿಭಟನೆಗಳಿಗೆ ಸ್ಟಾರ್‌ಬಕ್ಸ್‌ ಒಂದು ಗುರಿಯಾಗುತ್ತಾ ಬಂದಿದೆ.

ಇತಿಹಾಸ

ಸ್ಟಾರ್‌ಬಕ್ಸ್‌‌ 
1912 ಪೈಕ್‌ ಪ್ಲೇಸ್‌ನಲ್ಲಿರುವ ಸ್ಟಾರ್‌ಬಕ್ಸ್‌ ಮಳಿಗೆ.ಇದು 1971ರಿಂದ 1976ರವರೆಗೆ 2000 ವೆಸ್ಟರ್ನ್‌ ಅವೆನ್ಯೂದಲ್ಲಿದ್ದ ಮೂಲ ಸ್ಟಾರ್‌ಬಕ್ಸ್‌‌ನ ಎರಡನೇ ತಾಣವಾಗಿದೆ.
ಸ್ಟಾರ್‌ಬಕ್ಸ್‌‌ 
ವಿಶ್ವದ ಮೊದಲ ಸ್ಟಾರ್‌ಬಕ್ಸ್‌‌ನ ಒಳಭಾಗದಲ್ಲಿ ಕಾಫಿ ತಯಾರಿಯ ಪರಿಚಾರಕರು‌ ಕೆಲಸ ಮಾಡುತ್ತಿರುವುದು.

ಸಂಸ್ಥಾಪನೆ

೧೯೭೧ರ ಮಾರ್ಚ್‌ ೩೦ರಂದು ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ಮೊದಲ ಸ್ಟಾರ್‌ಬಕ್ಸ್‌ ಪ್ರಾರಂಭವಾಯಿತು; ಇಂಗ್ಲಿಷ್‌ ಶಿಕ್ಷಕ ಜೆರ್ರಿ ಬಾಲ್ಡ್‌ವಿನ್‌, ಇತಿಹಾಸ ಶಿಕ್ಷಕ ಜೆವ್‌ ಸೀಗಲ್‌, ಮತ್ತು ಬರಹಗಾರ ಗೋರ್ಡಾನ್‌ ಬೌಕರ್‌ ಎಂಬ ಮೂವರು ಇದರ ಪಾಲುದಾರರಾಗಿದ್ದರು. ಈ ಮೂವರೂ ವೈಯಕ್ತಿಕವಾಗಿ ಅರಿತಿದ್ದ ಆಲ್‌ಫ್ರೆಡ್‌ ಪೀಟ್‌ ಎಂಬ ವಾಣಿಜ್ಯೋದ್ಯಮಿಯು ಉನ್ನತ-ಗುಣಮಟ್ಟದ ಕಾಫಿ ಬೀಜಗಳು ಮತ್ತು ಸಂಬಂಧಿತ ಸಲಕರಣೆಗಳನ್ನು ಮಾರಾಟ ಮಾಡುವಂತೆ ಅವರನ್ನು ಪ್ರೇರೇಪಿಸಿದ. ಪೆಕ್ವಾಡ್‌‌ ಎಂಬ ಹೆಸರನ್ನು ಸಹ-ಸಂಸ್ಥಾಪಕರ ಪೈಕಿ ಒಬ್ಬರು ತಿರಸ್ಕರಿಸಿದ ನಂತರ, ಮೋಬಿ-ಡಿಕ್‌ ಎಂಬ ಕಾದಂಬರಿಯಿಂದ ಸ್ಟಾರ್‌ಬಕ್ ಎಂಬ ಸದರಿ ಹೆಸರನ್ನು ಆರಿಸಿಕೊಳ್ಳಲಾಯಿತು; ಪೆಕ್ವಾಡ್‌‌‌ ನಲ್ಲಿನ ಮೊದಲ ಸಹೋದ್ಯೋಗಿಯಾದ ಸ್ಟಾರ್‌ಬಕ್‌ ಹೆಸರನ್ನು ಕಂಪನಿಗೆ ಇರಿಸಲಾಯಿತು.

ಮೊದಲ ಸ್ಟಾರ್‌ಬಕ್ಸ್‌‌ ೧೯೭೧ರಿಂದ ೧೯೭೫ರವರೆಗೆ ೨೦೦೦ ವೆಸ್ಟರ್ನ್‌ ಅವೆನ್ಯೂ ಎಂಬ ತಾಣದಲ್ಲಿ ನೆಲೆಗೊಂಡಿತ್ತು; ನಂತರ ಅದು ೧೯೧೨ ಪೈಕ್‌ ಪ್ಲೇಸ್ ಎಂಬಲ್ಲಿಗೆ ತನ್ನ ನೆಲೆಯನ್ನು ಬದಲಾಯಿಸಿಕೊಂಡಿದ್ದು, ಇಂದಿನವರೆಗೂ ಅದು ಅಲ್ಲಿಯೇ ಉಳಿದುಕೊಂಡಿದೆ. ಕಾರ್ಯಾಚರಣೆಯ ಮೊದಲ ವರ್ಷದ ಅವಧಿಯಲ್ಲಿ ಅದರ ಸಂಸ್ಥಾಪಕರು ಪೀಟ್‌'ಸ್‌ ಕಾಫಿಯಿಂದ ಹಸಿರು ಕಾಫಿ ಬೀಜಗಳನ್ನು ಖರೀದಿಸಿದರು; ನಂತರದಲ್ಲಿ ಕಾಫಿ ಬೆಳೆಯುವವರಿಂದಲೇ ಅವರು ನೇರವಾಗಿ ಕಾಫಿ ಬೀಜಗಳನ್ನು ಖರೀದಿಸಲು ಆರಂಭಿಸಿದರು.

ಸ್ಟಾರ್‌ಬಕ್ಸ್‌‌ 
ಸಿಯಾಟಲ್‌ನ ಸ್ಟಾರ್‌ಬಕ್ಸ್‌ ಸೆಂಟರ್‌.ಹಳೆಯ ಸಿಯರ್ಸ್‌ನಲ್ಲಿರುವ ಕಂಪನಿ HQ ಆಗಿರುವ ರೂಬಕ್‌ ಅಂಡ್‌ ಕೊ, ಪೂರ್ಣಪಟ್ಟಿ ವಿತರಣಾ ಕೇಂದ್ರದ ಕಟ್ಟಡ

ಕಂಪನಿಯ ಚಿಲ್ಲರೆ ವ್ಯಾಪಾರದ ಕಾರ್ಯಾಚರಣೆಗಳು ಮತ್ತು ಮಾರಾಟಗಾರಿಕೆಯ ನಿರ್ದೇಶಕನಾಗಿ ಹೋವರ್ಡ್‌ ಷುಲ್ಟ್ಜ್‌‌ ಎಂಬ ವಾಣಿಜ್ಯೋದ್ಯಮಿಯು ೧೯೮೨ರಲ್ಲಿ ಕಂಪನಿಯನ್ನು ಸೇರಿಕೊಂಡ; ಇಟಲಿಯ ಮಿಲನ್‌ ಎಂಬಲ್ಲಿಗೆ ಒಂದು ಆತ ಪ್ರವಾಸವನ್ನು ಕೈಗೊಂಡ ನಂತರ, ಕಾಫಿ ಬೀಜಗಳ ಜೊತೆಜೊತೆಯಲ್ಲಿಯೇ ಕಂಪನಿಯು ಕಾಫಿ ಮತ್ತು ಎಸ್‌ಪ್ರೆಸೊ ಪಾನೀಯಗಳನ್ನು ಮಾರಾಟ ಮಾಡುವುದು ಒಳಿತು ಎಂಬುದಾಗಿ ಸಲಹೆ ನೀಡಿದ. ೧೯೬೭ರಲ್ಲಿ ಲಾಸ್ಟ್‌ ಎಕ್ಸಿಟ್‌ ಆನ್‌ ಬ್ರೂಕ್ಲಿನ್‌ ಎಂಬ ಕಾಫಿಗೃಹವು ಸಿಯಾಟಲ್‌ನಲ್ಲಿ ಆರಂಭವಾದಾಗಿನಿಂದಲೂ ವರ್ಧಿಸುತ್ತಿರುವ ಪ್ರತಿಸಾಂಸ್ಕೃತಿಕ ಕಾಫಿಗೃಹದ ಒಂದು ಸನ್ನಿವೇಶಕ್ಕೆ ಸಿಯಾಟಲ್‌ ನೆಲೆಯಾಗಿತ್ತಾದರೂ, ಸದರಿ ಮಾಲೀಕರು ಈ ಪರಿಕಲ್ಪನೆಯನ್ನು ತಿರಸ್ಕರಿಸಿದ್ದರು; ಏಕೆಂದರೆ, ಪಾನೀಯ ವ್ಯವಹಾರದೊಳಗೆ ತೊಡಗಿಸಿಕೊಳ್ಳುವುದರಿಂದ ಕಂಪನಿಯ ಪ್ರಧಾನ ಗಮನವು ಬೇರೆಡೆಗೆ ತಿರುಗಿದಂತಾಗುತ್ತದೆ ಎಂಬುದು ಅವರ ಭಾವನೆಯಾಗಿತ್ತು. ಅವರ ಪ್ರಕಾರ, ಕಾಫಿ ಎಂಬುದು ಮನೆಯಲ್ಲಿ ತಯಾರಿಸಲ್ಪಡುವಂಥ ಒಂದು ಉತ್ಪನ್ನವಾಗಿತ್ತು; ಆದರೂ ಸಹ ಪೂರ್ವ-ರೂಪಿತ ಪಾನೀಯಗಳ ಉಚಿತ ಮಾದರಿಗಳನ್ನು ಅವರು ವಿತರಿಸಿದರು. ಪೂರ್ವ-ರೂಪಿತ ಪಾನೀಯಗಳ ಮಾರಾಟದಿಂದ ಹಣ ಗಳಿಕೆಯಾಗುತ್ತದೆ ಎಂಬುದು ನಿಶ್ಚಿತವಾಗುತ್ತಿದ್ದಂತೆಯೇ, ೧೯೮೬ರ ಏಪ್ರಿಲ್‌ನಲ್ಲಿ Il ಗಿಯೋರ್ನೇಲ್‌ ಕಾಫಿ ಪಾನಗೃಹ ಸರಣಿಯನ್ನು ಷುಲ್ಟ್ಜ್‌‌ ಆರಂಭಿಸಿದ.

ಮಾರಾಟ ಮತ್ತು ವಿಸ್ತರಣೆ

೧೯೮೪ರಲ್ಲಿ, ಸ್ಟಾರ್‌ಬಕ್ಸ್‌‌ನ ಮೂಲ ಮಾಲೀಕರು ಬಾಲ್ಡ್‌ವಿನ್ ನೇತೃತ್ವದಲ್ಲಿ ಪೀಟ್‌'ಸ್‌ ಕಾಫಿಯನ್ನು (ಬಾಲ್ಡ್‌ವಿನ್‌ ಈಗಲೂ ಅಲ್ಲಿ ಕೆಲಸ ಮಾಡುತ್ತಾನೆ) ಖರೀದಿಸುವ ಅವಕಾಶವನ್ನು ಪಡೆದುಕೊಂಡರು. ೧೯೮೭ರಲ್ಲಿ, ಅವರು ಸ್ಟಾರ್‌ಬಕ್ಸ್‌‌ ಸರಣಿಯನ್ನು ಷುಲ್ಟ್ಜ್‌‌ನ Il ಗಿಯೋರ್ನೇಲ್‌ಗೆ ಮಾರಾಟ ಮಾಡಿದರು; ಇದರಿಂದಾಗಿ Il ಗಿಯೋರ್ನೇಲ್‌ ಮಳಿಗೆಗಳು ಸ್ಟಾರ್‌ಬಕ್ಸ್‌ ಎಂಬುದಾಗಿ ಮರುಬ್ರಾಂಡ್‌ ಮಾಡಲ್ಪಟ್ಟವು ಮತ್ತು ಅವು ಕ್ಷಿಪ್ರವಾಗಿ ವಿಸ್ತರಿಸಲು ತೊಡಗಿದವು. ಸಿಯಾಟಲ್‌ ಹೊರಗಡೆಯ ತನ್ನ ಮೊದಲು ತಾಣಗಳನ್ನು ವ್ಯಾಂಕೂವರ್‌ನಲ್ಲಿಯ ವಾಟರ್‌ಫ್ರಂಟ್‌ ನಿಲ್ದಾಣ, ಬ್ರಿಟಿಷ್‌ ಕೊಲಂಬಿಯಾ, ಮತ್ತು ಇಲಿನಾಯ್ಸ್‌‌‌ನ ಚಿಕಾಗೊಗಳಲ್ಲಿ ಅದೇ ವರ್ಷದಲ್ಲಿ ಸ್ಟಾರ್‌ಬಕ್ಸ್‌‌ ತೆರೆಯಿತು. ೧೯೯೨ರಲ್ಲಿ, ಸ್ಟಾಕ್‌ ಮಾರುಕಟ್ಟೆಯಲ್ಲಿ ತನ್ನ ಪ್ರಾಥಮಿಕ ಷೇರುಗಳ ವಿತರಣೆಯನ್ನು ಮಾಡುವ ವೇಳೆಗಾಗಲೇ ಸ್ಟಾರ್‌ಬಕ್ಸ್‌ ಮಳಿಗೆಗಳ ಸಂಖ್ಯೆಯು ೧೬೫ನ್ನು ಮುಟ್ಟಿತ್ತು.

ಅಂತರರಾಷ್ಟ್ರೀಯ ವಿಸ್ತರಣೆ

ಪ್ರಸಕ್ತವಾಗಿ ೫೫ಕ್ಕೂ ಹೆಚ್ಚಿನ ದೇಶಗಳಲ್ಲಿ ಸ್ಟಾರ್‌ಬಕ್ಸ್‌‌ನ ಅಸ್ತಿತ್ವವಿದೆ.

ಆಫ್ರಿಕಾ ಉತ್ತರ ಅಮೆರಿಕಾ ಓಷಿಯಾನಿಯಾ ದಕ್ಷಿಣ ಅಮೆರಿಕಾ ಏಷ್ಯಾ ಯುರೋಪ್‌
  • ಸ್ಟಾರ್‌ಬಕ್ಸ್‌‌  ಆಸ್ಟ್ರೇಲಿಯಾ
  • ಸ್ಟಾರ್‌ಬಕ್ಸ್‌‌  ನ್ಯೂಜಿಲೆಂಡ್‌

ಹಿಂದಿನ ತಾಣಗಳು

ಉತ್ತರ ಅಮೆರಿಕಾದ ಹೊರಗಡೆಯ ಮೊದಲ ಸ್ಟಾರ್‌ಬಕ್ಸ್‌‌ ತಾಣವು ೧೯೯೬ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ಪ್ರಾರಂಭವಾಯಿತು. ೧೯೯೮ರಲ್ಲಿ U.K. ಮಾರುಕಟ್ಟೆಯನ್ನು ಸ್ಟಾರ್‌ಬಕ್ಸ್‌‌ ಪ್ರವೇಶಿಸಿತು; ಆ ವೇಳೆಗೆ ೬೦-ಮಳಿಗೆಗಳನ್ನು ಹೊಂದಿದ್ದ UK-ಮೂಲದ ಸಿಯಾಟಲ್‌‌ ಕಾಫಿ ಕಂಪನಿಯನ್ನು ೮೩ ದಶಲಕ್ಷ $ನಷ್ಟು ಮೊತ್ತವನ್ನು ಪಾವತಿಸಿ ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ಈ ಪ್ರವೇಶವು ಕೈಗೂಡಿತು; ಈ ಎಲ್ಲಾ ಮಳಿಗೆಗಳನ್ನೂ ನಂತರದಲ್ಲಿ ಸ್ಟಾರ್‌ಬಕ್ಸ್ ಎಂಬುದಾಗಿ ಮರು-ಬ್ರಾಂಡ್‌ಮಾಡಲಾಯಿತು. ೨೦೦೨ರ ಸೆಪ್ಟೆಂಬರ್‌‌ನಲ್ಲಿ, ಲ್ಯಾಟಿನ್‌ ಅಮೆರಿಕಾದಲ್ಲಿನ ತನ್ನ ಮೊದಲ ಮಳಿಗೆಯನ್ನು ಮೆಕ್ಸಿಕೋ ನಗರದಲ್ಲಿ ಸ್ಟಾರ್‌ಬಕ್ಸ್‌‌ ಪ್ರಾರಂಭ ಮಾಡಿತು. ೨೦೧೦ರ ನವೆಂಬರ್‌ನಲ್ಲಿ, ಮಧ್ಯ ಅಮೆರಿಕಾದದಲ್ಲಿನ ತನ್ನ ಮೊದಲ ಮಳಿಗೆಯನ್ನು ಎಲ್ ಸಾಲ್ವಡಾರ್‌‌ನ ರಾಜಧಾನಿ ಸ್ಯಾನ್‌ ಸಾಲ್ವಡಾರ್‌‌‌ನಲ್ಲಿ ಸ್ಟಾರ್‌ಬಕ್ಸ್‌ ತೆರೆಯಿತು. ೨೦೧೧ರ ಮಾರ್ಚ್‌ ೧೭ರಂದು, ಮಧ್ಯ ಅಮೆರಿಕಾದಲ್ಲಿನ ತನ್ನ ಮೂರನೇ ಉಪಾಹಾರ ಗೃಹವನ್ನು ಹಾಗೂ ಗ್ವಾಟೆಮಾಲಾದ ಗ್ವಾಟೆಮಾಲಾ ನಗರದಲ್ಲಿನ ತನ್ನ ಮೊದಲ ಉಪಾಹಾರ ಗೃಹವನ್ನು ಸ್ಟಾರ್‌ಬಕ್ಸ್‌ ತೆರೆಯಿತು.

೨೦೦೩ರ ಏಪ್ರಿಲ್‌ನಲ್ಲಿ, AFC ಎಂಟರ್‌ಪ್ರೈಸಸ್‌‌ನಿಂದ ಸಿಯಾಟಲ್‌‌'ಸ್‌‌ ಬೆಸ್ಟ್‌ ಕಾಫಿ ಮತ್ತು ಟೋರೆಫೆಜಿಯೋನ್‌ ಇಟಾಲಿಯಾ ಇವುಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಸ್ಟಾರ್‌ಬಕ್ಸ್‌‌ ಸಂಪೂರ್ಣಗೊಳಿಸಿತು; ಇದರಿಂದಾಗಿ ವಿಶ್ವಾದ್ಯಂತ ಹಬ್ಬಿಕೊಂಡಿರುವ ಸ್ಟಾರ್‌ಬಕ್ಸ್‌‌-ನಿರ್ವಹಣೆಯ ಒಟ್ಟು ತಾಣಗಳ ಸಂಖ್ಯೆಯು ೬,೪೦೦ನ್ನು ಮೀರಿತು. ೨೦೦೬ರ ಸೆಪ್ಟೆಂಬರ್‌ ೧೪ರಂದು, ಎದುರಾಳಿ ಕಂಪನಿಯಾದ ಡೈಡ್ರಿಚ್‌ ಕಾಫಿ ಪ್ರಕಟಣೆಯೊಂದನ್ನು ನೀಡಿ, ತನ್ನ ಕಂಪನಿಯ-ಸ್ವಾಮ್ಯದ ಚಿಲ್ಲರೆ ವ್ಯಾಪಾರ ಮಳಿಗೆಗಳ ಪೈಕಿ ಬಹುಪಾಲನ್ನು ಸ್ಟಾರ್‌ಬಕ್ಸ್‌‌ಗೆ ಮಾರಾಟ ಮಾಡುವುದಾಗಿ ತಿಳಿಸಿತು. ಒರೆಗಾಂವ್‌-ಮೂಲದ ಕಾಫಿ ಪೀಪಲ್‌ ಸರಣಿಯ ಕಂಪನಿ-ಸ್ವಾಮ್ಯದ ತಾಣಗಳು ಈ ಮಾರಾಟದಲ್ಲಿ ಸೇರಿಕೊಂಡಿದ್ದವು. ಡೈಡ್ರಿಚ್‌ ಕಾಫಿ ಮತ್ತು ಕಾಫಿ ಪೀಪಲ್‌ ತಾಣಗಳನ್ನು ಸ್ಟಾರ್‌ಬಕ್ಸ್ ತಾಣಗಳಾಗಿ ಸ್ಟಾರ್‌ಬಕ್ಸ್‌‌ ಪರಿವರ್ತಿಸಿತಾದರೂ, ಪೋರ್ಟ್‌ಲೆಂಡ್‌ ವಿಮಾನ ನಿಲ್ದಾಣದ ಕಾಫಿ ಪೀಪಲ್‌ ತಾಣಗಳನ್ನು ಮಾರಾಟ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು.

ಸ್ಟಾರ್‌ಬಕ್ಸ್‌‌ ಪರವಾನಗಿ ಪಡೆದ ಮಳಿಗೆಗಳನ್ನು ಅನೇಕ ಪುಸ್ತಕ-ಮಳಿಗೆಗಳು ತಮ್ಮೊಳಗೆ ಹೊಂದಿವೆ; ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಬಾರ್ನೆಸ್‌ & ನೋಬಲ್‌, ಕೆನಡಾದಲ್ಲಿನ (ಕಂಪನಿಯ ನಿರ್ವಹಣೆಯ) ಚಾಪ್ಟರ್ಸ್‌-ಇಂಡಿಗೊ, ಬ್ರೆಜಿಲ್‌ನಲ್ಲಿನ ಲಿವ್ರೇರಿಯಾ ಸರೈವಾ ಮತ್ತು ಫ್ನಾಕ್‌ ಹಾಗೂ ಥೈಲೆಂಡ್‌ನಲ್ಲಿನ B೨S ಮೊದಲಾದವು ಇಂಥ ಮಳಿಗೆಗಳಿಗೆ ಉದಾಹರಣೆಗಳಾಗಿವೆ.

ಬೀಜಿಂಗ್‌ನಲ್ಲಿನ ಹಿಂದಿನ ಚಕ್ರಾಧಿಪತ್ಯದ ಅರಮನೆಯಲ್ಲಿದ್ದ ಸ್ಟಾರ್‌ಬಕ್ಸ್‌‌ ತಾಣವು ೨೦೦೭ರ ಜುಲೈನಲ್ಲಿ ಮುಚ್ಚಲ್ಪಟ್ಟಿತು. ೨೦೦೦ನೇ ಇಸವಿಯಲ್ಲಿ ಈ ಕಾಫಿ ಮಳಿಗೆಯು ಆರಂಭವಾದಾಗಿನಿಂದಲೂ, ಅದು ಚಾಲ್ತಿಯಲ್ಲಿರುವ ವಿವಾದದ ಒಂದು ಮೂಲವಾಗಿತ್ತು; ಈ ತಾಣದಲ್ಲಿ ಅಮೆರಿಕಾದ ಸರಣಿಯ ಅಸ್ತಿತ್ವವಿರುವುದರಿಂದ "ಚೀನಿಯರ ಸಂಸ್ಕೃತಿಯು ತುಳಿತಕ್ಕೊಳಗಾಗುತ್ತಿದೆ" ಎಂಬ ಗ್ರಹಿಕೆಯನ್ನು ಇಟ್ಟುಕೊಂಡಿದ್ದ ಅಲ್ಲಿನ ಪ್ರತಿಭಟನಾಕಾರರು ಈ ಮಳಿಗೆಗೆ ಆಕ್ಷೇಪಿಸುತ್ತಿದ್ದುದೇ ಸದರಿ ವಿವಾದಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಭಾರತದೊಳಗೆ ಮಳಿಗೆಗಳನ್ನು ವಿಸ್ತರಿಸುವ ಯೋಜನೆಗಳನ್ನೂ ಸ್ಟಾರ್‌ಬಕ್ಸ್‌ ೨೦೦೭ರಲ್ಲಿ ರದ್ದುಗೊಳಿಸಿತಾದರೂ, ರಷ್ಯಾದಲ್ಲಿನ ತನ್ನ ಮೊದಲ ಮಳಿಗೆಯನ್ನು ತೆರೆಯಿತು. ಇದು ಅಲ್ಲಿ ಒಂದು ಸರಕುಮುದ್ರೆಯನ್ನು ಮೊದಲು ನೋಂದಾಯಿಸಿದ ಹತ್ತು ವರ್ಷಗಳ ನಂತರ ಪ್ರಾರಂಭವಾದ ಮಳಿಗೆಯಾಗಿತ್ತು. ೨೦೦೮ರಲ್ಲಿ, ಸ್ಟಾರ್‌ಬಕ್ಸ್‌ ತನ್ನ ವಿಸ್ತರಣೆಯನ್ನು ಮುಂದುವರಿಸುತ್ತಾ ಅರ್ಜೆಂಟೈನಾ, ಬಲ್ಗೇರಿಯಾ, ಝೆಕ್‌ ಗಣರಾಜ್ಯ ಮತ್ತು ಪೋರ್ಚುಗಲ್‌ ಇವೇ ಮೊದಲಾದ ಕಡೆಗಳಲ್ಲಿ ನೆಲೆಯೂರಿತು. ಲ್ಯಾಟಿನ್‌ ಅಮೆರಿಕಾದಲ್ಲಿನ ಅತಿದೊಡ್ಡ ಸ್ಟಾರ್‌ಬಕ್ಸ್‌‌ ಮಳಿಗೆಯು ಬ್ಯೂನೋಸ್‌ ಐರ್ಸ್‌‌ನಲ್ಲಿ ಪ್ರಾರಂಭವಾಯಿತು. ೨೦೦೯ರ ಏಪ್ರಿಲ್‌ನಲ್ಲಿ ಪೋಲೆಂಡ್‌ನ್ನು ಸ್ಟಾರ್‌ಬಕ್ಸ್‌‌ ಪ್ರವೇಶಿಸಿತು‌. ಆಲ್ಜೀರಿಯಾದಲ್ಲಿ ಹೊಸ ಮಳಿಗೆಗಳು ಪ್ರಾರಂಭವಾಗಲಿವೆ. ೨೦೦೯ರ ಆಗಸ್ಟ್‌ ೫ರಂದು, ನೆದರ್ಲೆಂಡ್ಸ್‌‌ನ ಉಟ್ರೆಕ್ಟ್‌‌‌ನಲ್ಲಿಯೂ ಸ್ಟಾರ್‌ಬಕ್ಸ್‌‌ ತನ್ನ ಮಳಿಗೆಗಳನ್ನು ತೆರೆಯಿತು. ೨೦೦೯ರ ಅಕ್ಟೋಬರ್‌ ೨೧ರಂದು ಹೊರಬಿದ್ದ ಪ್ರಕಟಣೆಯ ಅನುಸಾರ, ಸ್ಟಾರ್‌ಬಕ್ಸ್‌ ಅಂತಿಮವಾಗಿ ಸ್ವೀಡನ್‌ನಲ್ಲಿ ಮಳಿಗೆಯನ್ನು ಸ್ಥಾಪಿಸಲಿದೆ ಮತ್ತು ಇದು ಸ್ಟಾಕ್‌ಹೋಮ್‌ ಹೊರಗಡೆಯಿರುವ ಆರ್ಲಾಂಡಾ ವಿಮಾನ ನಿಲ್ದಾಣದಲ್ಲಿ ತಾಣವೊಂದನ್ನು ಆರಂಭಿಸುವುದರೊಂದಿಗೆ ಕೈಗೂಡಲಿದೆ ಎಂದು ತಿಳಿದುಬಂತು. ೨೦೧೦ರ ಜೂನ್‌ ೧೬ರಂದು, ಹಂಗರಿಯ ಬುಡಾಪೆಸ್ಟ್‌‌ನಲ್ಲಿ ಸ್ಟಾರ್‌ಬಕ್ಸ್‌ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿತು.

೨೦೧೦ರ ಮೇ ತಿಂಗಳಿನಲ್ಲಿ, ದಕ್ಷಿಣ ಆಫ್ರಿಕಾದ ಸದರ್ನ್‌ ಸನ್‌ ಹೊಟೇಲ್ಸ್‌ ಪ್ರಕಟಣೆಯೊಂದನ್ನು ನೀಡಿ, ಸ್ಟಾರ್‌ಬಕ್ಸ್‌ ಜೊತೆಗೆ ತಾನು ಒಡಂಬಡಿಕೆಯೊಂದಕ್ಕೆ ಸಹಿಹಾಕಿದ್ದು, ಇದು ದಕ್ಷಿಣ ಆಫ್ರಿಕಾದಲ್ಲಿನ ಆಯ್ದ ಸದರ್ನ್‌ ಸನ್‌ ಮತ್ತು ತ್ಸೋಂಗಾ ಸನ್‌ ಹೊಟೇಲುಗಳಲ್ಲಿ ಸ್ಟಾರ್‌ಬಕ್ಸ್‌‌ ಕಾಫಿಗಳನ್ನು ತಯಾರುಮಾಡಲು ತನಗೆ ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿತು. ದಕ್ಷಿಣ ಆಫ್ರಿಕಾದ ವತಿಯಿಂದ ಆಯೋಜಿಸಲ್ಪಟ್ಟ ೨೦೧೦ರ FIFA ವಿಶ್ವಕಪ್‌ನ ಆರಂಭದ ವೇಳೆಗೆ ಸರಿಯಾಗಿ ದೇಶದಲ್ಲಿ ಸ್ಟಾರ್‌ಬಕ್ಸ್‌‌ ಕಾಫಿಗಳ ಸೇವೆಯು ನಡೆಯಬೇಕು ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಒಡಂಬಡಿಕೆಯನ್ನು ಆಂಶಿಕವಾಗಿ ಕೈಗೊಳ್ಳಲಾಗಿತ್ತು.

ಈಜಿಪ್ಟ್ ಮತ್ತು ದಕ್ಷಿಣ ಆಫ್ರಿಕಾಗಳ ನಂತರ ಆಫ್ರಿಕಾದಲ್ಲಿನ ತನ್ನ ಮೂರನೇ ತಾಣವನ್ನು ಆಲ್ಜೀರಿಯಾದಲ್ಲಿ ತೆರೆಯಲು ಸ್ಟಾರ್‌ಬಕ್ಸ್‌‌ ಯೋಜಿಸುತ್ತಿದೆ. ಆಲ್ಜೀರಿಯಾದ ಸೆವಿಟಾl ಎಂಬ ಆಹಾರ-ಕಂಪನಿಯೊಂದಿಗೆ ಕೈಗೊಂಡಿರುವ ಪಾಲುದಾರಿಕೆಯೊಂದರ ದೆಸೆಯಿಂದಾಗಿ, ಆಲ್ಜೀರಿಯಾದಲ್ಲಿನ ತನ್ನ ಮೊದಲ ಮಳಿಗೆಯನ್ನು ಆಲ್ಜಿಯರ್ಸ್‌‌ನಲ್ಲಿ ತೆರೆಯುವುದು ಸ್ಟಾರ್‌ಬಕ್ಸ್‌ಗೆ ಅನುಕೂಲಕರವಾಗಿ ಪರಿಣಮಿಸಲಿದೆ.

೨೦೧೧ರ ಜನವರಿಯಲ್ಲಿ, ಸ್ಟಾರ್‌ಬಕ್ಸ್‌‌ ಮತ್ತು ಏಷ್ಯಾದ ಅತಿದೊಡ್ಡ ಕಾಫಿ ನೆಡುತೋಪು ಕಂಪನಿಯಾದ ಟಾಟಾ ಕಾಫಿ ಇವುಗಳು ಒಂದಷ್ಟು ಯೋಜನೆಗಳನ್ನು ಪ್ರಕಟಿಸಿದ್ದು, ಇವುಗಳ ಅನುಸಾರ ಈ ವರ್ಷದ ದ್ವಿತೀಯಾರ್ಧದಲ್ಲಿ ಸ್ಟಾರ್‌ಬಕ್ಸ್‌ ಸರಣಿಯನ್ನು ಭಾರತಕ್ಕೆ ತರುವುದಕ್ಕೆ ಸಂಬಂಧಿಸಿದ ಕಾರ್ಯತಂತ್ರದ ಒಪ್ಪಂದವೊಂದು ರೂಪುಗೊಂಡಂತಾಗಿದೆ. ಭಾರತದಲ್ಲಿರುವ ಟಾಟಾ ಕಂಪನಿಯ ಚಿಲ್ಲರೆ ವ್ಯಾಪಾರದ ತಾಣಗಳು ಮತ್ತು ಹೊಟೇಲುಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಸ್ಟಾರ್‌ಬಕ್ಸ್‌‌ ಯೋಜಿಸಿದೆ; ಅಷ್ಟೇ ಅಲ್ಲ, ಟಾಟಾ ಕಾಫಿಗೆ ಸೇರಿದ ಕೊಡಗು ಘಟಕದಲ್ಲಿ ಕಾಫಿ ಬೀಜಗಳನ್ನು ಸಂಗ್ರಹಿಸುವ ಹಾಗೂ ಹುರಿಯುವ ಕುರಿತೂ ಸ್ಟಾರ್‌ಬಕ್ಸ್‌‌ ಯೋಜಿಸಿದೆ.

ಉಪಾಹಾರ ಗೃಹದ ಪ್ರಯೋಗ

೧೯೯೯ರಲ್ಲಿ, ಸರ್ಕಾಡಿಯಾ ಎಂದು ಕರೆಯಲಾಗುವ ಉಪಾಹಾರ ಗೃಹದ ಸರಣಿಯೊಂದರ ಮೂಲಕ, ಸ್ಯಾನ್‌ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದಲ್ಲಿ ಉಪಾಹಾರ ಗೃಹಗಳನ್ನು ಸ್ಥಾಪಿಸುವ ಪ್ರಯೋಗವನ್ನು ಸ್ಟಾರ್‌ಬಕ್ಸ್‌ ನಡೆಸಿತು. ಕೆಲವೇ ದಿನಗಳಲ್ಲಿ ಈ ಉಪಾಹಾರ ಗೃಹಗಳು ಸ್ಟಾರ್‌ಬಕ್ಸ್‌‌ ವ್ಯಾಪಾರ ಸಂಸ್ಥೆಗಳಾಗಿ "ಬೆಳಕಿಗೆ ಬಂದವು" ಹಾಗೂ ಸ್ಟಾರ್‌ಬಕ್ಸ್‌‌ ಕೆಫೆಗಳಾಗಿ ಪರಿವರ್ತಿಸಲ್ಪಟ್ಟವು.

ಸಾಂಸ್ಥಿಕ ಆಡಳಿತ

ಸ್ಟಾರ್‌ಬಕ್ಸ್‌‌ 
ಸ್ಟಾರ್‌ಬಕ್ಸ್‌‌ನ CEO ಆಗಿರುವ ಹೋವರ್ಡ್‌ ಷುಲ್ಟ್ಜ್‌‌

೨೦೦೧ರಿಂದ ೨೦೦೫ರವರೆಗೆ ಓರಿನ್‌ C. ಸ್ಮಿತ್‌ ಎಂಬಾತ ಸ್ಟಾರ್‌ಬಕ್ಸ್‌ನ ಅಧ್ಯಕ್ಷ ಮತ್ತು CEO ಆಗಿದ್ದ.

ಸ್ಟಾರ್‌ಬಕ್ಸ್‌‌ನ ಸಭಾಪತಿಯಾದ ಹೋವರ್ಡ್‌ ಷುಲ್ಟ್ಜ್‌‌ ಕಂಪನಿಯಲ್ಲಿ ಖಚಿತ ಬೆಳವಣಿಗೆಯನ್ನು ಕೈಗೊಳ್ಳುವುದರ ಕುರಿತು ಮಾತನಾಡುತ್ತಾ, ಕಂಪನಿಯ ಸಂಸ್ಕೃತಿ ಹಾಗೂ ಒಂದು ಸಣ್ಣ ಕಂಪನಿಯಂತೆ ವರ್ತಿಸಬೇಕಿರುವುದರ ಕುರಿತಾದ ಕಂಪನಿಯ ನಾಯಕತ್ವದ ಸಾಮಾನ್ಯ ಗುರಿಯನ್ನು, ಖಚಿತ ಬೆಳವಣಿಗೆಯ ಕ್ರಮವು ದುರ್ಬಲಗೊಳಿಸುವುದಿಲ್ಲ ಎಂದು ಹೇಳಿದ್ದಾನೆ.

ಎಂಟು ವರ್ಷ ಅವಧಿಯ ಒಂದು ಸರಣಿಭಂಗದ ನಂತರ, ೨೦೦೮ರ ಜನವರಿಯಲ್ಲಿ ಸಭಾಪತಿ ಹೋವರ್ಡ್‌ ಷುಲ್ಟ್ಜ್‌‌, ಅಧ್ಯಕ್ಷ ಮತ್ತು CEO ಆಗಿ ತನ್ನ ಹೊಣೆಗಾರಿಕೆಯ ಪಾತ್ರಗಳನ್ನು ಮತ್ತೆ ಅಲಂಕರಿಸಿದ ಮತ್ತು ಜಿಮ್‌ ಡೊನಾಲ್ಡ್‌‌ನ ಸ್ಥಾನವನ್ನು ಆಕ್ರಮಿಸಿಕೊಂಡ; ಸದರಿ ಹುದ್ದೆಗಳನ್ನು ಜಿಮ್‌ ಡೊನಾಲ್ಡ್ ೨೦೦೫ರಲ್ಲಿ ಅಲಂಕರಿಸಿದ್ದ, ಆದರೆ ೨೦೦೭ರಲ್ಲಿ ಮಾರಾಟವು ತಗ್ಗಿದ ನಂತರ ಕೆಳಗಿಳಿಯುವಂತೆ ಅವನನ್ನು ಕೇಳಿಕೊಳ್ಳಲಾಯಿತು. ಕ್ಷಿಪ್ರ ವಿಸ್ತರಣೆಗೆ ಅಭಿಮುಖವಾಗಿ "ವೈಶಿಷ್ಟ್ಯ ಸೂಚಕ ಸ್ಟಾರ್‌ಬಕ್ಸ್‌‌ ಅನುಭವ" ಎಂದು ತಾನು ಕರೆಯುವ ಅನುಭೂತಿಯನ್ನು ಪುನರ್‌ಸ್ಥಾಪಿಸುವುದು ಷುಲ್ಟ್ಜ್‌‌ನ ಗುರಿಯಾಗಿದೆ. ಮೆಕ್‌‌ಡೊನಾಲ್ಡ್‌'ಸ್‌ ಮತ್ತು ಡಂಕಿನ್‌' ಡೋನಟ್ಸ್‌‌ಗಳನ್ನು ಒಳಗೊಂಡಂತೆ ಕಡಿಮೆ-ಬೆಲೆಯನ್ನು ಹೊಂದಿರುವ ದಿಢೀರ್‌-ಆಹಾರದ ಸರಣಿಗಳಿಂದ ಎದುರಾಗುವ ಹೆಚ್ಚಿನ ಮಟ್ಟದ ಪೈಪೋಟಿ ಹಾಗೂ ಸಾಮಗ್ರಿಗಳ ಏರುತ್ತಿರುವ ಬೆಲೆಗಳೊಂದಿಗೆ ಹೇಗೆ ಹೆಣಗಾಡುವುದು ಎಂಬುದನ್ನು ಷುಲ್ಟ್ಜ್‌ ನಿರ್ಣಯಿಸಬೇಕಾಗುತ್ತದೆ ಎಂದು ವಿಶ್ಲೇಷಕರು ಭಾವಿಸುತ್ತಾರೆ. ೨೦೦೮ರಲ್ಲಿ ರಾಷ್ಟ್ರವ್ಯಾಪಿಯಾಗಿ ಪ್ರಾರಂಭಿಸಬೇಕೆಂದು ಮೂಲತಃ ಉದ್ದೇಶಿಸಲಾಗಿದ್ದ ಬಿಸಿ ತಿಂಡಿಯಾಗಿ ಬಳಸುವ ಸ್ಯಾಂಡ್‌ವಿಚ್‌ ಉತ್ಪನ್ನಗಳನ್ನು ತಾನು ಸ್ಥಗಿತಗೊಳಿಸುವುದಾಗಿ ಸ್ಟಾರ್‌ಬಕ್ಸ್‌‌ ಪ್ರಕಟಿಸಿತು; ಕಾಫಿಯ ಮೇಲೆ ಬ್ರಾಂಡ್‌ನ ಗಮನವನ್ನು ಮರುಕೇಂದ್ರೀಕರಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಆದರೆ ದೂರುಗಳನ್ನು ನಿಭಾಯಿಸುವ ದೃಷ್ಟಿಯಿಂದ ಸ್ಯಾಂಡ್‌ವಿಚ್‌ಗಳು ಮತ್ತೆ ರೂಪಿಸಲ್ಪಟ್ಟವು ಹಾಗೂ ಇದರಿಂದಾಗಿ ಸದರಿ ಉತ್ಪನ್ನಶ್ರೇಣಿಯು ನೆಲೆಯೂರಿತು. ಕಾಫಿ ತಯಾರಿಕೆಗೆ ಸಂಬಂಧಿಸಿದ ತನ್ನ ಪರಿಚಾರಕರಿಗೆ ತರಬೇತಿ ನೀಡುವ ಸಲುವಾಗಿ, ೨೦೦೮ರ ಫೆಬ್ರುವರಿ ೨೩ರಂದು ಸಂಜೆ ೫:೩೦ರಿಂದ ೯:೦೦ರವರೆಗಿನ ಸ್ಥಳೀಯ ಕಾಲದ ಅವಧಿಯಲ್ಲಿ ಸ್ಟಾರ್‌ಬಕ್ಸ್‌‌ ತನ್ನ ಮಳಿಗೆಗಳನ್ನು ಮುಚ್ಚಿತು.

ಇತ್ತೀಚಿನ ಬದಲಾವಣೆಗಳು

ಸ್ಟಾರ್‌ಬಕ್ಸ್‌‌ ಷೇರುದಾರರನ್ನು ಉದ್ದೇಶಿಸಿಕೊಂಡು ೨೦೦೮ರ ಮಾರ್ಚ್‌ನಲ್ಲಿ ಷುಲ್ಟ್ಜ್‌ ಹಲವಾರು ಪ್ರಕಟಣೆಗಳನ್ನು ಮಾಡಿದ. ಥರ್ಮೋಪ್ಲಾನ್‌ AG ವತಿಯಿಂದ ತಯಾರಿಸಿಸಲ್ಪಟ್ಟ ಮಾಸ್ಟ್ರೆನಾ ಎಂಬ ಸ್ಟಾರ್‌ಬಕ್ಸ್‌ನ "ಅತ್ಯಾಧುನಿಕ ಎಸ್‌ಪ್ರೆಸೊ ವ್ಯವಸ್ಥೆ"ಯನ್ನು ಷುಲ್ಟ್ಜ್‌‌ ಪರಿಚಯಿಸಿದ. ಇದು ಸ್ಟಾರ್‌ಬಕ್ಸ್‌ನ ಸೂಪರ್‌ಆಟೋ ವ್ಯವಸ್ಥೆಯಾದ ಥರ್ಮೋಪ್ಲಾನ್‌ ವೆರಿಸ್ಮೊ ೮೦೧ರ (ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಥರ್ಮೋಪ್ಲಾನ್‌ ಬ್ಲ್ಯಾಕ್‌ & ವೈಟ್‌ ಎಂದೇ ಕರೆಯಲ್ಪಡುತ್ತದೆ) ಸ್ಥಾನವನ್ನು ಆಕ್ರಮಿಸಿಕೊಂಡಿತು. ಶಕ್ತಿ-ಪೇಯದ ಮಾರುಕಟ್ಟೆಯನ್ನು ಪ್ರವೇಶಿಸುವುದರ ಕುರಿತು ಕಂಪನಿಯು ಭರವಸೆಗಳನ್ನಿಟ್ಟುಕೊಂಡಿದೆ ಎಂಬುದಾಗಿಯೂ ಸ್ಟಾರ್‌ಬಕ್ಸ್‌‌ ಪ್ರಕಟಿಸಿತು. ಪೂರ್ವಭಾವಿಯಾಗಿ-ಪುಡಿಮಾಡಿದ ಬೀಜಗಳನ್ನು ಮತ್ತೆಂದಿಗೂ ಬಳಸುವುದಿಲ್ಲವಾದ್ದರಿಂದ, ಸಂಪೂರ್ಣ ಕಾಫಿ ಬೀಜದ ಪುಡಿಮಾಡುವಿಕೆಯು ಅಮೆರಿಕಾದ ಮಳಿಗೆಗಳಿಗೆ "ಪರಿಮಳ, ರೋಮಾಂಚಕ ವಾತಾವರಣ ಮತ್ತು ಸಭಾಂಗಣದ ವಾತಾವರಣವನ್ನು" ತರಲಿದೆ. ಕ್ಲೋವರ್‌ ಬ್ರ್ಯೂಯಿಂಗ್‌ ಸಿಸ್ಟಮ್‌ನ ತಯಾರಕನಾದ ದಿ ಕಾಫಿ ಎಕ್ವಿಪ್‌ಮೆಂಟ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ಕುರಿತೂ ಕಂಪನಿಯು ಪ್ರಕಟಿಸಿತು. "ತಾಜಾ ಆಗಿ-ತಯಾರಿಸುವ" ಈ ಕಾಫಿ ವ್ಯವಸ್ಥೆಯನ್ನು ಕಂಪನಿಯು ಪ್ರಸಕ್ತವಾಗಿ ಆರು ಸ್ಟಾರ್‌ಬಕ್ಸ್‌‌ ತಾಣಗಳಲ್ಲಿ ಪರೀಕ್ಷಾರ್ಥ ಮಾರಾಟಗಾರಿಕೆ ಮಾಡುತ್ತಿದ್ದು, ಆ ಆರು ತಾಣಗಳ ಪೈಕಿ ಮೂರು ಸಿಯಾಟಲ್‌ನಲ್ಲಿದ್ದರೆ, ಉಳಿದ ಮೂರು ಬಾಸ್ಟನ್‌ನಲ್ಲಿವೆ.

ಸ್ಟಾರ್‌ಬಕ್ಸ್‌‌ 
UKಯ ಪೀಟರ್‌ಬರೋದಲ್ಲಿರುವ ಈ ವಿಶಿಷ್ಟ ಮಾರಾಟ ಪ್ರದೇಶವು ಆಹಾರ ಮತ್ತು ಪಾನೀಯ ತಯಾರಿಕಾ ಪ್ರದೇಶದ ಒಂದು ಪ್ರದರ್ಶನವನ್ನು ತೋರಿಸುತ್ತಿದೆ

rBGHನಿಂದ ಉಪಚರಿಸಲ್ಪಟ್ಟ ಹಸುಗಳಿಂದ ಉತ್ಪತ್ತಿಯಾಗುವ ಹಾಲಿನ ಬಳಕೆಯನ್ನು ೨೦೦೭ರಲ್ಲಿ ಸ್ಟಾರ್‌ಬಕ್ಸ್‌‌ ನಿಲ್ಲಿಸಿತು.

೨೦೦೮ರ ಆರಂಭದಲ್ಲಿ, ಮೈ ಸ್ಟಾರ್‌ಬಕ್ಸ್‌‌ ಐಡಿಯಾ ಎಂಬ ಹೆಸರಿನ ಒಂದು ಸಮುದಾಯ ವೆಬ್‌ಸೈಟ್‌ನ್ನು ಸ್ಟಾರ್‌ಬಕ್ಸ್‌‌ ಆರಂಭಿಸಿತು; ಗ್ರಾಹಕರಿಂದ ಸಲಹೆಗಳು ಮತ್ತು ಪರಿಣಾಮ ಮಾಹಿತಿಯನ್ನು ಸಂಗ್ರಹಿಸಲು ಇದನ್ನು ವಿನ್ಯಾಸಗೊಳಿಸಲಾಗಿತ್ತು. ವ್ಯಾಖ್ಯಾನ ಮಾಡಲು ಹಾಗೂ ಸಲಹೆಗಳನ್ನು ನೀಡಲು ಇತರ ಬಳಕೆದಾರರಿಗೆ ಅವಕಾಶವಿರುತ್ತದೆ. ಪತ್ರಕರ್ತ ಜ್ಯಾಕ್‌ ಸ್ಕೋಫೀಲ್ಡ್‌ ಈ ಕುರಿತು ಉಲ್ಲೇಖಿಸುತ್ತಾ, "ಮೈ ಸ್ಟಾರ್‌ಬಕ್ಸ್‌ ಈ ಕ್ಷಣಕ್ಕೆ ಎಲ್ಲಾ ಸೌಜನ್ಯ ಮತ್ತು ವಿವೇಕಗಳ ಸಂಗಮವಾಗಿ ಕಂಡುಬರುತ್ತದೆ; ಸಾಕಷ್ಟು ಕತ್ತರಿ ಪ್ರಯೋಗಕ್ಕೆ ಒಳಗಾಗದೆಯೇ ಇದು ಸಾಧ್ಯವಾಗುತ್ತದೆ ಎಂದು ನನಗನ್ನಿಸುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾನೆ. ಸೇಲ್ಸ್‌ಫೋರ್ಸ್‌ ತಂತ್ರಾಂಶದಿಂದ ಈ ವೆಬ್‌ಸೈಟ್‌ ಚಾಲಿಸಲ್ಪಡುತ್ತದೆ.

೨೦೦೮ರ ಮೇ ತಿಂಗಳಲ್ಲಿ, ಸ್ಟಾರ್‌ಬಕ್ಸ್‌‌ ಕಾರ್ಡ್‌ನ (ಹಿಂದೆ ಇದು ಸರಳವಾಗಿ ಒಂದು ಕೊಡುಗೆ ಕಾರ್ಡ್‌ ಎಂದು ಕರೆಯಲ್ಪಡುತ್ತಿತ್ತು) ನೋಂದಾಯಿತ ಬಳಕೆದಾರರಿಗಾಗಿ ನಿಷ್ಠಾವಂತಿಕೆಯ ಕಾರ್ಯಸೂಚಿಯೊಂದನ್ನು ಪರಿಚಯಿಸಲಾಯಿತು; ಉಚಿತ ವೈ-ಫೈ ಅಂತರ್ಜಾಲ ಸಂಪರ್ಕ, ಸೋಯಾ ಹಾಲು ಮತ್ತು ಸುವಾಸಿತ ಸಕ್ಕರೆ ಪಾನಕಗಳಿಗೆ ಯಾವುದೇ ಶುಲ್ಕವನ್ನು ವಿಧಿಸದಿರುವಿಕೆ, ಮತ್ತು ತಯಾರುಮಾಡಲ್ಪಟ್ಟ ಜಿನುಗು ಕಾಫಿಯ ಮೇಲಣ ಉಚಿತ ಮರುಪೂರಣಗಳು ಇಂಥ ವಿಶೇಷ ಸವಲತ್ತುಗಳನ್ನು ಆ ಕಾರ್ಡ್‌ ಒಳಗೊಂಡಿತ್ತು. ಉಚಿತ ವೈ-ಫೈ ಅಂತರ್ಜಾಲ ಸಂಪರ್ಕವು ವಿಭಿನ್ನ ಪ್ರದೇಶಗಳಲ್ಲಿ ಬದಲಾಗುತ್ತಾ ಹೋಗುತ್ತದೆ. US ಮತ್ತು ಕೆನಡಾದ ಕಾರ್ಡುದಾರರು ೨ ಗಂಟೆಗಳಷ್ಟು ಅವಧಿಯ ಅಂತರ್ಜಾಲ ಸಂಪರ್ಕವನ್ನು ಹೊಂದಬಹುದಾಗಿದ್ದು, ಇದು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ AT&T ಮೂಲಕ ನಡೆದರೆ, ಕೆನಡಾದ ವ್ಯಾಪ್ತಿಯೊಳಗೆ ಬೆಲ್‌ ಕೆನಡಾ ಮೂಲಕ ನಡೆಯುತ್ತದೆ. ಜರ್ಮನಿಯಲ್ಲಿನ ಗ್ರಾಹಕರು ಸಂದಾಯ-ಪ್ರಮಾಣಿತ ಕಾರ್ಡ್ (ವೋಚರ್‌ ಕಾರ್ಡ್‌) ಒಂದರ ನೆರವಿನಿಂದ ೧ ಗಂಟೆಯಷ್ಟು ಅವಧಿಯ ಉಚಿತ ವೈ-ಫೈ ಸೇವೆಯನ್ನು ಪಡೆಯಬಹುದಾಗಿದೆ. ಇದೇ ರೀತಿಯಲ್ಲಿ, ಸ್ವಿಜರ್ಲೆಂಡ್‌ ಮತ್ತು ಆಸ್ಟ್ರಿಯಾಗಳಲ್ಲಿನ ಗ್ರಾಹಕರು (T-ಮೊಬೈಲ್‌ ಮೂಲಕ) ೩೦ ನಿಮಿಷಗಳಷ್ಟು ಅವಧಿಯ ಉಚಿತ ವೈ-ಫೈ ಸೇವೆಯನ್ನು ಪಡೆಯಬಹುದಾಗಿದೆ.

೨೦೦೯ರ ಜೂನ್‌ನಲ್ಲಿ ತನ್ನ ಸೇವಾವಿವರವನ್ನು ಪರಿಷ್ಕರಿಸಲಿರುವುದಾಗಿ ಕಂಪನಿಯು ಪ್ರಕಟಿಸಿತು ಹಾಗೂ, ಉನ್ನತ ಮಟ್ಟದ ಹಣ್ಣಿನ ಸಕ್ಕರೆಯ ಜೋಳದ ಪಾನಕ ಅಥವಾ ಕೃತಕ ಘಟಕಾಂಶಗಳನ್ನು ಹೊಂದಿರದ ಬೇಯಿಸಿದ ಪದಾರ್ಥಗಳನ್ನು ಮತ್ತು ಪಚ್ಚಡಿಗಳನ್ನು ಮಾರಾಟ ಮಾಡುವುದಾಗಿ ಅದು ತಿಳಿಸಿತು. ಈ ಕ್ರಮವು ಆರೋಗ್ಯ-ಪ್ರಜ್ಞೆಯುಳ್ಳ ಮತ್ತು ವೆಚ್ಚ-ಪ್ರಜ್ಞೆಯುಳ್ಳ ಗ್ರಾಹಕರನ್ನು ಆಕರ್ಷಿಸಲಿದೆ ಹಾಗೂ ಇದು ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. "ಸ್ಟಾರ್‌ಬಕ್ಸ್‌‌ನಿಂದ ಪ್ರೇರೇಪಿಸಲ್ಪಟ್ಟ" ಸ್ಥಳೀಯ ಕಾಫಿ ಗೃಹಗಳು ಎಂಬುದಾಗಿ ಮಳಿಗೆಗಳನ್ನು ಮರುರೂಪಿಸಲು, ಮತ್ತು ಲಾಂಛನ ಹಾಗೂ ಬ್ರಾಂಡ್‌ ಹೆಸರನ್ನು ತೆಗೆದುಹಾಕಲು, ಸಿಯಾಟಲ್‌ನಲ್ಲಿ ಕನಿಷ್ಟಪಕ್ಷ ಮೂರು ಮಳಿಗೆಗಳ "ಹಣೆಪಟ್ಟಿಯನ್ನು ತೆಗೆಯಲಾಯಿತು". ಕ್ಯಾಪಿಟಲ್‌ ಹಿಲ್‌ನಲ್ಲಿ ಜುಲೈನಲ್ಲಿ ಪ್ರಾರಂಭವಾಗಿದ್ದ ೧೫ತ್‌ ಅವೆನ್ಯೂ ಕಾಫಿ ಅಂಡ್‌ ಟೀ ಎಂಬ ಮಳಿಗೆಯು ಇವುಗಳ ಪೈಕಿ ಮೊದಲನೆಯದಾಗಿದ್ದು, ಸ್ಟಾರ್‌ಬಕ್ಸ್‌‌ ನೌಕರರು ಪರಿಶೀಲನೆಗಾಗಿ ಸ್ಥಳೀಯ ಕಾಫಿ ಗೃಹಗಳಿಗೆ ಭೇಟಿನೀಡಿದ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಯಿತು. ಇದು ಮದ್ಯ ಮತ್ತು ಬಿಯರ್‌ನ್ನು ಪೂರೈಸುತ್ತದೆ, ಹಾಗೂ ಪ್ರತ್ಯಕ್ಷ ಸಂಗೀತ ಮತ್ತು ಕವಿತಾ ವಾಚನಗಳನ್ನು ಆಯೋಜಿಸಲು ಯೋಜಿಸುತ್ತಿದೆ. ಪರಿಸರ-ಸ್ನೇಹಿ ವಸ್ತುವಿನ ಮಾರಾಟದ ಭ್ರಮೆಹುಟ್ಟಿಸುವ ರೀತಿಯಲ್ಲಿಯೇ ಇದು "ಸ್ಥಳೀಯ ಸಾಮಗ್ರಿಯನ್ನು ಮಾರುವ ಭ್ರಮೆಹುಟ್ಟಿಸುವ" ಉದ್ದೇಶವನ್ನು ಹೊಂದಿದೆ ಎಂಬುದಾಗಿ ಈ ಪರಿಪಾಠವು ಟೀಕಿಸಲ್ಪಟ್ಟಿದೆ.

೨೦೦೯ರ ಸೆಪ್ಟೆಂಬರ್‌ನಲ್ಲಿ, UKಯಲ್ಲಿನ ತನ್ನ ಬಹುತೇಕ ಮಳಿಗೆಗಳಲ್ಲಿ ತನ್ನ ವೈ-ಫೈ ಪಾಲುದಾರನಾದ BT ಓಪನ್‌‌ಜೋನ್‌ ಸಹಯೋಗದಲ್ಲಿ ಉಚಿತ ವೈ-ಫೈ ಸೇವೆಯನ್ನು ಪ್ರಾರಂಭಿಸಿತು. ಸ್ಟಾರ್‌ಬಕ್ಸ್‌‌ ಕಾರ್ಡ್‌ ಒಂದನ್ನು ಹೊಂದಿರುವ ಗ್ರಾಹಕರು ತಮ್ಮ ಕಾರ್ಡಿನ ವಿವರಗಳನ್ನು ಬಳಸಿಕೊಂಡು ಮಳಿಗೆಯಲ್ಲಿ ವ್ಯವಸ್ಥೆಗೊಳಿಸಲಾಗಿರುವ ವೈ-ಫೈ ಸೇವೆಯನ್ನು ಉಪಯೋಗಿಸಲು ಅವರಿಗೆ ನೆರವಾಗುವುದು ಈ ವ್ಯವಸ್ಥೆಯ ವಿಶಿಷ್ಟತೆಯಾಗಿತ್ತು; ಇದರಿಂದಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಮಟ್ಟದಲ್ಲಿಯೇ ನಿಷ್ಠಾವಂತಿಕೆಯ ಕಾರ್ಯಸೂಚಿಯ ಪ್ರಯೋಜನಗಳನ್ನು ಗ್ರಾಹಕರಿಗೆ ಒದಗಿಸುವುದು ಇಲ್ಲಿನ ವಿಶೇಷತೆಯಾಗಿತ್ತು. ೨೦೧೦ರ ಜುಲೈನಿಂದ ಹಮ್ಮಿಕೊಳ್ಳಲಾಗಿರುವ ಯೋಜನೆಯಂತೆ, USನಲ್ಲಿರುವ ತನ್ನೆಲ್ಲಾ ಮಳಿಗೆಗಳಲ್ಲಿ AT&T ಮೂಲಕ ಉಚಿತ ವೈ-ಫೈ ಸೇವೆಯನ್ನು ನೀಡಲು ಹಾಗೂ ಯಾಹೂ! ಜೊತೆಗಿನ ಒಂದು ಪಾಲುದಾರಿಕೆಯ ಮೂಲಕ ಮಾಹಿತಿಯನ್ನು ಒದಗಿಸಲು ಸ್ಟಾರ್‌ಬಕ್ಸ್‌ ಬಯಸಿದೆ. ಇದು ಬಹಳ ಕಾಲದಿಂದ ಉಚಿತ ವೈ-ಫೈ ಸೇವೆಯನ್ನು ನೀಡುತ್ತಾ ಬಂದಿರುವ ಸ್ಥಳೀಯ ಸರಣಿಗಳ ವಿರುದ್ಧ ಹೆಚ್ಚು ಸ್ಪರ್ಧಾತ್ಮಕವಾಗಿರುವುದರ ಒಂದು ಪ್ರಯತ್ನವಾಗಿದೆ. ಅಷ್ಟೇ ಅಲ್ಲ, ೨೦೧೦ರಲ್ಲಿ ಉಚಿತವಾದ ನಿಸ್ತಂತು ಅಂತರ್ಜಾಲ ಸಂಪರ್ಕವನ್ನು ನೀಡಲು ಆರಂಭಿಸಿದ ಮೆಕ್‌‌ಡೊನಾಲ್ಡ್‌'ಸ್‌ ಸರಣಿಗೆ ಪ್ರತಿಯಾಗಿ ಸ್ಟಾರ್‌ಬಕ್ಸ್‌ ಹಮ್ಮಿಕೊಂಡಿರುವ ಯೋಜನೆಯಾಗಿದೆ. ೨೦೧೦ರ ಜೂನ್‌ ೩೦ರಂದು ಸ್ಟಾರ್‌ಬಕ್ಸ್‌ ಪ್ರಕಟಣೆಯೊಂದನ್ನು ನೀಡಿ, ಕೆನಡಾದಲ್ಲಿನ ಕಂಪನಿ-ಸ್ವಾಮ್ಯದ ಎಲ್ಲಾ ತಾಣಗಳಲ್ಲಿ ತನ್ನ ಗ್ರಾಹಕರಿಗೆ ವೈ-ಫೈ ಮೂಲಕ ಅನಿಯಮಿತವಾದ ಮತ್ತು ಉಚಿತವಾದ ಅಂತರ್ಜಾಲ ಸಂಪರ್ಕವನ್ನು ತಾನು ನೀಡಲಿದ್ದು, ಈ ಸೇವೆಯು ೨೦೧೦ರ ಜುಲೈ ೧ರಂದು ಆರಂಭವಾಗಲಿದೆ ಎಂದು ತಿಳಿಸಿತು.

ಸ್ಟಾರ್‌ಬಕ್ಸ್‌ ಕಾರ್ಪೊರೇಷನ್‌ನ ಹೊಸ ಪರಿಕಲ್ಪನೆಗಳ ಬಳಕೆಗೆಂದು ಮೀಸಲಾಗಿರುವ ಸಿಯಾಟಲ್‌ನಲ್ಲಿನ ಮಳಿಗೆಯೊಂದು ೨೦೧೦ರ ಶರತ್ಕಾಲದಲ್ಲಿ ಮರುಪ್ರಾರಂಭವಾಗಲಿದ್ದು, ಇದರ ಒಳಾಂಗಣದ ಅಲಂಕರಣಕ್ಕೆ ಒಂದಷ್ಟು ಮಾರ್ಪಾಡುಗಳಾಗಲಿವೆ ಹಾಗೂ ಪೆಸಿಫಿಕ್‌ ವಾಯವ್ಯ ಭಾಗದ ದ್ರಾಕ್ಷಿತೋಟಗಳಿಂದ ತರಿಸಲಾದ ಮದ್ಯವು ಇಲ್ಲಿ ಸೇರ್ಪಡೆಯಾಗಲಿದೆ. ಒಂದು "ಕಾಫಿಯ ಸಭಾಂಗಣ" ಎಂಬುದಾಗಿ ಸ್ಟಾರ್‌ಬಕ್ಸ್‌ನಿಂದ ಕರೆಯಲ್ಪಡುವ ವಾತಾವರಣವೊಂದನ್ನು ಸೃಷ್ಟಿಸುವುದಕ್ಕಾಗಿ, ಮಳಿಗೆಯ ಮಧ್ಯಭಾಗದಲ್ಲಿ ಎಸ್‌ಪ್ರೆಸೊ ಯಂತ್ರಗಳನ್ನು ಇರಿಸಲಾಗುತ್ತದೆ.

VIA "ರೆಡಿ ಬ್ರ್ಯೂ" ದಿಢೀರ್‌ ಕಾಫಿ

VIA "ರೆಡಿ ಬ್ರ್ಯೂ" ಎಂದು ಕರೆಯಲ್ಪಡುವ, ತಾಂತ್ರಿಕವಾಗಿ ಮುಂದುವರಿದ ಕಾಫಿಗಳ ಒಂದು ಹೊಚ್ಚ ಹೊಸ ಶ್ರೇಣಿಯನ್ನು ೨೦೦೯ರ ಮಾರ್ಚ್‌ನಲ್ಲಿ ಸ್ಟಾರ್‌ಬಕ್ಸ್‌‌ ಪರಿಚಯಿಸಿತು. ನ್ಯೂಯಾರ್ಕ್‌ ನಗರದಲ್ಲಿ ಇದು ಮೊದಲು ಅನಾವರಣಗೊಂಡಿತು; ಉತ್ಪನ್ನದ ತರುವಾಯದ ಪರೀಕ್ಷಾ ಪ್ರಯೋಗಗಳು ಸಿಯಾಟಲ್‌‌, ಚಿಕಾಗೊ ಮತ್ತು ಲಂಡನ್‌ಗಳಲ್ಲಿಯೂ ನಡೆಯಿತು. ಕೆಲವೊಂದು VIA ಪರಿಮಳಗಳಲ್ಲಿ ಇಟಾಲಿಯನ್‌ ರೋಸ್ಟ್‌ ಮತ್ತು ಕೊಲಂಬಿಯಾ ಸೇರಿದ್ದು ಇವು ೨೦೦೯ರ ಅಕ್ಟೋಬರ್‌ನಲ್ಲಿ U.S. ಮತ್ತು ಕೆನಡಾದಾದ್ಯಂತ ಬಿಡುಗಡೆಯಾದವು; ತಾಜಾ ಆಗಿ ಹುರಿದ ಕಾಫಿಗೆ ಪ್ರತಿಯಾಗಿ ದಿಢೀರ್‌ ಕಾಫಿಯ ಒಂದು ಬುದ್ಧಿಪೂರ್ವಕವಲ್ಲದ ಅಥವಾ ಕುರುಡು ಪದ್ಧತಿಯ "ರುಚಿಯ ಸವಾಲನ್ನು" ಏರ್ಪಡಿಸುವ ಮೂಲಕ ಸ್ಟಾರ್‌ಬಕ್ಸ್‌‌ ಮಳಿಗೆಗಳು ಸದರಿ ಉತ್ಪನ್ನವನ್ನು ಪ್ರವರ್ತಿಸಿದವು ಎಂಬುದು ಗಮನಾರ್ಹ ಅಂಶ. ದಿಢೀರ್‌ ಕಾಫಿ ಮತ್ತು ತಾಜಾ ಆಗಿ ಹುರಿದು ತಯಾರುಮಾಡಲ್ಪಟ್ಟ ಕಾಫಿಯ ನಡುವಿನ ವ್ಯತ್ಯಾಸವನ್ನು ಹೇಳಲು ಅನೇಕ ಜನರಿಗೆ ಸಾಧ್ಯವಾಗಲಿಲ್ಲ. ದಿಢೀರ್‌ ಕಾಫಿಯನ್ನು ಪರಿಚಯಿಸುವ ಮೂಲಕ ಸ್ಟಾರ್‌ಬಕ್ಸ್‌‌ ತನ್ನದೇ ಸ್ವಂತದ ಬ್ರಾಂಡ್‌ನ್ನು ಅಪಮೌಲ್ಯೀಕರಿಸಲು ಹೊರಟಿದೆ ಎಂಬುದಾಗಿ ಕೆಲವೊಂದು ವಿಶ್ಲೇಷಕರು ಊಹೆ ಕಟ್ಟಿದರು. VIA ಕಾಫಿಯ ಶ್ರೇಣಿಯು ಯಶಸ್ವಿಯಾಗಿ ಪರಿಚಯಿಸಲ್ಪಟ್ಟಿತು. ಡೆಕಾಫ್‌ ಇಟಾಲಿಯನ್‌ ರೋಸ್ಟ್‌ ಮಾತ್ರವೇ ಅಲ್ಲದೇ "ಐಸ್ಡ್‌" ಎಂದು ಕರೆಯಲ್ಪಡುವ ಒಂದು ಸಿಹಿಗೊಳಿಸಲಾದ ರೂಪಾಂತರವೂ ಈ ಸಂದರ್ಭದಲ್ಲಿ ಪರಿಚಯಿಸಲ್ಪಟ್ಟಿತು. ೨೦೧೦ರ ಅಕ್ಟೋಬರ್‌ನಲ್ಲಿ, ಪೂರ್ವಭಾವಿಯಾಗಿ-ಸಿಹಿಗೊಳಿಸಲಾದ ನಾಲ್ಕು ಹೊಸ ಸುವಾಸಿತ ರೂಪಾಂತರಗಳನ್ನು ಪರಿಚಯಿಸುವ ಮೂಲಕ, VIA ಆಯ್ಕೆಯ-ಸಂಗ್ರಹವನ್ನು ಸ್ಟಾರ್‌ಬಕ್ಸ್‌‌ ವಿಸ್ತರಿಸಿತು. ಆ ಹೊಸ ರೂಪಾಂತರಗಳೆಂದರೆ: ವೆನಿಲ್ಲಾ, ಕ್ಯಾರಮೆಲ್‌, ಸಿನಮನ್‌ ಸ್ಪೈಸ್‌ ಮತ್ತು ಮಾಕ. ೨೦೧೦ರಲ್ಲಿ ರಜೆಯ ಋತುವನ್ನು ಮನಸ್ಸಿನಲ್ಲಿಟ್ಟುಕೊಂಡು, ಕ್ರಿಸ್‌ಮಸ್‌ ಬ್ಲೆಂಡ್‌ ಮತ್ತು ಡೆಕಾಫ್‌ ಕ್ರಿಸ್‌ಮಸ್‌ ಬ್ಲೆಂಡ್‌ ಎಂಬ ಎರಡು ಸ್ವಾದಗಳನ್ನೂ ಸ್ಟಾರ್‌ಬಕ್ಸ್‌‌ ಪರಿಚಯಿಸಿತು.

ಮಳಿಗೆಯ ಮುಚ್ಚುವಿಕೆಗಳು

"ಚಾಲ್ತಿಯಲ್ಲಿರುವ ಕಾರ್ಯಾಚರಣೆಯ ಸವಾಲುಗಳು" ಮತ್ತು "ಕಷ್ಟಕರವಾಗಿರುವ ವ್ಯವಹಾರದ ಪರಿಸರ"ವನ್ನು ಉಲ್ಲೇಖಿಸುವ ಮೂಲಕ, ಇಸ್ರೇಲ್‌ನಲ್ಲಿನ ತನ್ನೆಲ್ಲಾ ಆರೂ ತಾಣಗಳನ್ನು ೨೦೦೩ರಲ್ಲಿ ಸ್ಟಾರ್‌ಬಕ್ಸ್‌‌ ಮುಚ್ಚಿತು.

೨೦೦೮ರ ಜುಲೈ ೧ರಂದು ಕಂಪನಿಯು ಪ್ರಕಟಣೆಯೊಂದನ್ನು ನೀಡಿ, ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸದ ಕಂಪನಿ-ಸ್ವಾಮ್ಯದ ೬೦೦ ಮಳಿಗೆಗಳನ್ನು ತಾನು ಮುಚ್ಚುತ್ತಿರುವುದಾಗಿ ಮತ್ತು ಬೆಳೆಯುತ್ತಿರುವ ಆರ್ಥಿಕ ಅನಿಶ್ಚಿತತೆಯ ಸಂದರ್ಭದಲ್ಲಿ U.S. ವಿಸ್ತರಣೆ ಯೋಜನೆಗಳನ್ನು ಕಡಿತಗೊಳಿಸುವುದಾಗಿ ತಿಳಿಸಿತು. ಬ್ರಾಂಡ್‌ನ ಬಲವರ್ಧನೆಯನ್ನು ಮತ್ತೊಮ್ಮೆ ಕೈಗೊಳ್ಳುವ ಸಲುವಾಗಿ ಹಾಗೂ ಅದರ ಲಾಭಗಳಿಕೆಯನ್ನು ಹೆಚ್ಚಿಸುವ ಸಲುವಾಗಿ, ಚಿಲ್ಲರೆ ವ್ಯಾಪಾರಕ್ಕೆ-ಸಂಬಂಧಿಸದ ಸರಿಸುಮಾರು ೧,೦೦೦ ಉದ್ಯೋಗಗಳನ್ನೂ ಸಹ ೨೦೦೮ರ ಜುಲೈ೨೯ರಂದು ಸ್ಟಾರ್‌ಬಕ್ಸ್‌ ಕಡಿತಗೊಳಿಸಿತು. ಈ ಹೊಸ ಕಡಿತಗಳ ಪೈಕಿ ೫೫೦ರಷ್ಟು ಸ್ಥಾನಗಳು ಹಂಗಾಮಿ ವಜಾಗಳಾಗಿದ್ದವು ಮತ್ತು ಉಳಿದವು ಭರ್ತಿಮಾಡದ ಉದ್ಯೋಗಗಳಾಗಿದ್ದವು. ೧೯೯೦ರ ದಶಕದ ಮಧ್ಯಭಾಗದಲ್ಲಿ ಆರಂಭವಾಗಿದ್ದ ಕಂಪನಿಯ ಬೆಳವಣಿಗೆ ಮತ್ತು ವಿಸ್ತರಣೆಯ ಅವಧಿಯನ್ನು ಈ ಮುಚ್ಚುವಿಕೆಗಳು ಮತ್ತು ಹಂಗಾಮಿ ವಜಾಗಳು ಪರಿಣಾಮಕಾರಿಯಾಗಿ ಅಂತ್ಯಗೊಳಿಸಿದವು.

೨೦೦೮ರ ಆಗಸ್ಟ್‌ ೩ರ ವೇಳೆಗೆ ಆಸ್ಟ್ರೇಲಿಯಾದಲ್ಲಿನ ತನ್ನ ೮೪ ಮಳಿಗೆಗಳ ಪೈಕಿ ೬೧ ಮಳಿಗೆಗಳನ್ನು ತಾನು ಮುಚ್ಚಲಿರುವುದಾಗಿಯೂ ಸ್ಟಾರ್‌ಬಕ್ಸ್‌‌ ೨೦೦೮ರ ಜುಲೈನಲ್ಲಿ ಪ್ರಕಟಿಸಿತು. ಸಿಡ್ನಿ ವಿಶ್ವವಿದ್ಯಾಲಯದ ಕಾರ್ಯತಂತ್ರದ ವ್ಯವಸ್ಥಾಪನಾ ವಿಷಯದಲ್ಲಿನ ಓರ್ವ ಪರಿಣಿತನಾದ ನಿಕ್‌ ವೈಲ್ಸ್‌ ಎಂಬಾತ ಈ ಕುರಿತು ವ್ಯಾಖ್ಯಾನಿಸುತ್ತಾ, "ಆಸ್ಟ್ರೇಲಿಯಾದ ಕೆಫೆ ಸಂಸ್ಕೃತಿಯನ್ನು ನಿಜವಾಗಿ ಅರ್ಥಮಾಡಿಕೊಳ್ಳಲು ಸ್ಟಾರ್‌ಬಕ್ಸ್‌‌ ವಿಫಲವಾಯಿತು" ಎಂದು ಅಭಿಪ್ರಾಯಪಟ್ಟ.

ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸದ ೩೦೦ ಹೆಚ್ಚುವರಿ ಮಳಿಗೆಗಳನ್ನು ಮುಚ್ಚುವುದಾಗಿ ಮತ್ತು ೭,೦೦೦ ಸ್ಥಾನಗಳನ್ನು ತೆಗೆದುಹಾಕುವುದಾಗಿ ೨೦೦೯ರ ಜನವರಿ ೨೮ರಂದು ಸ್ಟಾರ್‌ಬಕ್ಸ್‌‌ ಪ್ರಕಟಿಸಿತು. CEO ಹೋವರ್ಡ್‌ ಷುಲ್ಟ್ಜ್‌‌ ಕೂಡಾ ಈ ಸಂದರ್ಭದಲ್ಲಿ ವಿಷಯವನ್ನು ಹೊರಗೆಡಹುತ್ತಾ, ತನ್ನ ವೇತನವನ್ನು ತಗ್ಗಿಸಿಕೊಳ್ಳುವುದಕ್ಕಾಗಿ ಮಂಡಳಿಯು ತನಗೆ ಕಳಿಸಿದ ಅನುಮೋದನೆಯನ್ನು ತಾನು ಸ್ವೀಕರಿಸಿರುವುದ್ದಾಗಿ ತಿಳಿಸಿದ. ಒಟ್ಟಾರೆಯಾಗಿ ಹೇಳುವುದಾದರೆ, ೨೦೦೮ರ ಫೆಬ್ರುವರಿಯಿಂದ ೨೦೦೯ರ ಜನವರಿಯವರೆಗೆ ಒಂದು ಅಂದಾಜಿನ ಪ್ರಕಾರ U.S.ನಲ್ಲಿನ ೧೮,೪೦೦ ಉದ್ಯೋಗಗಳನ್ನು ಸ್ಟಾರ್‌ಬಕ್ಸ್‌‌ ಕೊನೆಗೊಳಿಸಿತ್ತು ಹಾಗೂ ವಿಶ್ವಾದ್ಯಂತದ ೯೭೭ ಮಳಿಗೆಗಳನ್ನು ಮುಚ್ಚಲು ಪ್ರಾರಂಭಿಸಿತ್ತು.

೨೦೦೯ರ ಆಗಸ್ಟ್‌ನಲ್ಲಿ ಅಹೋಲ್ಡ್‌ ಪ್ರಕಟಣೆಯೊಂದನ್ನು ನೀಡಿ, ತಮ್ಮ US ಮೂಲದ ಸ್ಟಾಪ್‌ & ಷಾಪ್‌ ಮತ್ತು ಜೈಂಟ್‌ ಸೂಪರ್‌ಮಾರ್ಕೆಟ್‌ಗಳಿಗೆ ಸಂಬಂಧಿಸಿದಂತೆ, ಪರವಾನಗಿ ಪಡೆದ ಮಳಿಗೆಯ ಸ್ಟಾರ್‌ಬಕ್ಸ್‌‌ ಕಿಯಾಸ್ಕ್‌ಗಳ ಪೈಕಿ ೪೩ನ್ನು ಮುಚ್ಚುವ ಹಾಗೂ ಮರುಬ್ರಾಂಡ್‌ಮಾಡುವ ಕುರಿತಾಗಿ ತಿಳಿಸಿತು. ಆದಾಗ್ಯೂ, ಪರವಾನಗಿ ಪಡೆದ ಸ್ಟಾರ್‌ಬಕ್ಸ್‌‌ ಪರಿಕಲ್ಪನೆಯನ್ನು ಅಹೋಲ್ಡ್‌ ಇನ್ನೂ ರದ್ದುಮಾಡಿಲ್ಲ; ೨೦೦೯ರ ಅಂತ್ಯದ ವೇಳೆಗೆ ಪರವಾನಗಿ ಪಡೆದ ೫ ಹೊಸ ಮಳಿಗೆಗಳನ್ನು ತೆರೆಯಲು ಅದು ಯೋಜಿಸುತ್ತಿದೆ.

ಬ್ರಾಂಡ್‌ ಮಾಡದ ಮಳಿಗೆಗಳು

೨೦೦೯ರಲ್ಲಿ, ಮಳಿಗೆಗಳ ಲಾಂಛನ ಮತ್ತು ಬ್ರಾಂಡ್‌ ಹೆಸರನ್ನು ತೆಗೆದುಹಾಕುವುದಕ್ಕಾಗಿ ಹಾಗೂ "ಸ್ಟಾರ್‌ಬಕ್ಸ್‌ನಿಂದ ಪ್ರೇರೇಪಿಸಲ್ಪಟ್ಟ" ಸ್ಥಳೀಯ ಕಾಫಿಗೃಹಗಳಾಗಿ ಮಳಿಗೆಗಳನ್ನು ಮರುರೂಪಿಸುವುದಕ್ಕಾಗಿ, ಸಿಯಾಟಲ್‌ನಲ್ಲಿನ ಕನಿಷ್ಟಪಕ್ಷ ಮೂರು ಮಳಿಗೆಗಳ ಹಣೆಪಟ್ಟಿಯನ್ನು ತೆಗೆಯಲಾಯಿತು. ಬ್ರಾಂಡ್‌ ಮಾಡದ ಮಳಿಗೆಗಳು "ಸ್ಟಾರ್‌ಬಕ್ಸ್‌ಗೆ ಸಂಬಂಧಿಸಿದ ಒಂದು ಪ್ರಯೋಗಾಲಯವಾಗಿದ್ದವು" ಎಂಬುದಾಗಿ CEO ಹೋವರ್ಡ್‌ ಷುಲ್ಟ್ಜ್‌‌ ಅಭಿಪ್ರಾಯಪಡುತ್ತಾನೆ. ೨೦೦೯ರ ಜುಲೈನಲ್ಲಿ ಕ್ಯಾಪಿಟಲ್‌ ಹಿಲ್‌ನಲ್ಲಿ ಪ್ರಾರಂಭವಾದ ೧೫ತ್‌ ಅವೆನ್ಯೂ ಕಾಫಿ ಮತ್ತು ಟೀ ಎಂಬ ಮಳಿಗೆಯು ಇವುಗಳ ಪೈಕಿ ಮೊದಲನೆಯದಾಗಿತ್ತು. ಮದ್ಯ ಮತ್ತು ಬಿಯರ್‌‌ನ್ನು ಇದು ಪೂರೈಸುತ್ತದೆ, ಹಾಗೂ ಪ್ರತ್ಯಕ್ಷ ಸಂಗೀತ ಮತ್ತು ಕವಿತಾ ವಾಚನಗಳನ್ನು ಆಯೋಜಿಸಲು ಇದು ಯೋಜಿಸುತ್ತಿದೆ. ಸದರಿ ಮಳಿಗೆಗಳು "ರಹಸ್ಯವರ್ತನೆಯ ಸ್ಟಾರ್‌ಬಕ್ಸ್‌‌" ಎಂಬುದಾಗಿ ಕರೆಯಲ್ಪಟ್ಟಿವೆಯಾದರೂ ಮತ್ತು "ಸ್ಥಳೀಯ ಸಾಮಗ್ರಿಯನ್ನು ಮಾರುವ ಭ್ರಮೆಹುಟ್ಟಿಸುವ" ಮಳಿಗೆಗಳೆಂಬಂತೆ ಟೀಕಿಸಲ್ಪಟ್ಟಿವೆಯಾದರೂ, ಷುಲ್ಜ್‌ ತನ್ನದೇ ಆದ ರೀತಿಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, "ನಾವು ಬ್ರಾಂಡನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದೆವು ಎಂದು ಹೇಳುವಷ್ಟರ ಮಟ್ಟಿಗೆ ಇರಲಿಲ್ಲವಾದರೂ, ಸ್ಟಾರ್‌ಬಕ್ಸ್‌ಗೆ ಸೂಕ್ತವಾದವುಗಳೆಂದು ನಮಗೆ ಅನ್ನಿಸದಂಥ ಕೆಲಸಗಳನ್ನು ಆ ಮಳಿಗೆಗಳಲ್ಲಿ ಕೈಗೊಳ್ಳಲು ಪ್ರಯತ್ನಿಸುತ್ತಿದ್ದೆವು" ಎಂದು ಹೇಳುತ್ತಾನೆ.

೨೦೦೯ರ ನ್ಯೂಯಾರ್ಕ್‌ ನಗರದ ಮೇಲಿನ ಬಾಂಬ್‌ ದಾಳಿ

೨೦೦೯ರ ಮೇ ತಿಂಗಳ ೨೫ರಂದು ಸರಿಸುಮಾರಾಗಿ ಮುಂಜಾನೆ ೩:೩೦ರ ವೇಳೆಗೆ, ನ್ಯೂಯಾರ್ಕ್‌ನ ನ್ಯೂಯಾರ್ಕ್‌ ನಗರದ ಮ್ಯಾನ್‌ಹಾಟ್ಟನ್‌ ವಿಭಾಗದಲ್ಲಿನ ಅಪ್ಪರ್‌ ಈಸ್ಟ್‌ ಸೈಡ್‌‌ನಲ್ಲಿ ನೆಲೆಗೊಂಡಿರುವ ಸ್ಟಾರ್‌ಬಕ್ಸ್‌‌ ಮಳಿಗೆಯೊಂದು ಬಾಂಬ್‌ದಾಳಿಗೆ ಈಡಾಯಿತು. ಒಂದು ಸಣ್ಣದಾದ, ಪೂರ್ವಸಿದ್ಧತೆಯಿಲ್ಲದೆ ಅನುವುಗೊಳಿಸಲಾದ ಸ್ಫೋಟಕ ಸಾಧನವೊಂದನ್ನು ಈ ಸಂದರ್ಭದಲ್ಲಿ ಬಳಸಲಾಗಿತ್ತು ಮತ್ತು ಹಾನಿಯು ಹೊರಾಂಗಣ ಕಿಟಕಿಗಳಿಗೆ ಹಾಗೂ ಪಾರ್ಶ್ವಪಥದ ಪೀಠವೊಂದಕ್ಕೆ ಸೀಮಿತವಾಗಿತ್ತು; ದಾಳಿಯಿಂದ ಯಾರಿಗೂ ಯಾವುದೇ ಗಾಯಗಳು ಉಂಟಾಗಿರಲಿಲ್ಲ. ಬಾಂಬ್‌ ದಾಳಿಗೀಡಾದ ತಾಣದ ಮೇಲಿದ್ದ ಗೃಹಸ್ತೋಮಗಳ ನಿವಾಸಿಗಳನ್ನು ಕ್ಷಿಪ್ರವಾಗಿ ಸ್ಥಳಾಂತರಿಸಲಾಯಿತು. ಮ್ಯಾನ್‌ಹಾಟ್ಟನ್‌ನಲ್ಲಿ ನಡೆಸುತ್ತಿರುವ ಒಂದು ಸರಣಿ ಬಾಂಬ್‌ ವಿಮಾನ ಕಾರ್ಯಾಚರಣೆಗೆ ಈ ಬಾಂಬ್‌ ದಾಳಿಯು ಸಂಬಂಧಿಸಿರಬಹುದು ಎಂಬುದಾಗಿ ಆರಕ್ಷಕರು ಮೊದಲಿಗೆ ನಂಬಿದ್ದರು; ಏಕೆಂದರೆ, ಈ ದಾಳಿಯ ಸ್ವರೂಪವು ಮ್ಯಾನ್‌ಹಾಟ್ಟನ್‌ನಲ್ಲಿ ಬ್ರಿಟಿಷ್‌ ಮತ್ತು ಮೆಕ್ಸಿಕೋದ ದೂತಾವಾಸಗಳ ಸಮೀಪ ನಡೆದಿದ್ದ ಹಾಗೂ ಟೈಮ್ಸ್‌ ಚೌಕದಲ್ಲಿರುವ U.S. ಸೇನಾ-ನೇಮಕಾತಿ ಕೇಂದ್ರವೊಂದರ ಮೇಲೆ ನಡೆದಿದ್ದ ಹಿಂದಿನ ಬಾಂಬ್‌ ದಾಳಿಗಳ ರೀತಿಯಲ್ಲೇ ಇತ್ತು. ಆದಾಗ್ಯೂ, ಈ ಸಂಬಂಧವಾಗಿ ೧೭-ವರ್ಷ-ವಯಸ್ಸಿನ ಹುಡುಗನೊಬ್ಬ ಬಂಧಿಸಲ್ಪಟ್ಟ; ಫೈಟ್‌ ಕ್ಲಬ್‌ ಎಂಬ ಚಲನಚಿತ್ರವನ್ನು ಅನುಸರಿಸುವುದಕ್ಕಾಗಿ ತಾನು ಮಳಿಗೆಯ ಮೇಲೆ ಬಾಂಬ್‌ದಾಳಿಮಾಡಿದ್ದು ಎಂಬುದಾಗಿ ಅವನು ಕೊಚ್ಚಿಕೊಳ್ಳುತ್ತಿದ್ದುದು ಗಮನಕ್ಕೆ ಬಂದ ನಂತರ ಈ ಕ್ರಮವನ್ನು ಕೈಗೊಳ್ಳಲಾಯಿತು.

ಸ್ಟಾರ್‌ಬಕ್ಸ್‌‌ಗೆ ಸ್ವತಃ ತನ್ನನ್ನು ಮಾರಿಕೊಳ್ಳುವುದಕ್ಕಾಗಿ ಚರ್ಚೆಗಳಲ್ಲಿ ತೊಡಗಿಸಿಕೊಂಡ ಪೀಟ್‌'ಸ್‌ ಕಾಫಿ

ತನ್ನ ಎದುರಾಳಿಯಾದ ಸ್ಟಾರ್‌ಬಕ್ಸ್‌ಗೆ ಸ್ವತಃ ಮಾರಾಟಗೊಳ್ಳುವುದಕ್ಕಾಗಿ ಪೀಟ್‌'ಸ್‌ ಕಾಫಿಯು ಮಾತುಕತೆಗಳಲ್ಲಿ ತೊಡಗಿಸಿಕೊಂಡಿದೆ ಎಂಬುದಾಗಿ FT, ಬಿಸಿನೆಸ್‌ವೀಕ್‌ ಮೊದಲಾದವೂ ಸೇರಿದಂತೆ ನಾನಾಬಗೆಯ ಸುದ್ದಿ ಮೂಲಗಳು ವರದಿಮಾಡಿದವು, ಮತ್ತು ಮಾತುಕತೆಗಳು ನಡೆದುದನ್ನು ಒಪ್ಪಿಕೊಳ್ಳಲು ಎರಡೂ ನಿರಾಕರಿಸಿದವು.

ಬೌದ್ಧಿಕ ಸ್ವತ್ತು

Starbucks at Ibn Battuta Mall, Dubai
The store in Insadong, Seoul, South Korea with Hangeul script sign
Starbucks Coffee (星巴克咖啡) in mainland China

ಸ್ಟಾರ್‌ಬಕ್ಸ್‌‌ U.S. ಬ್ರಾಂಡ್ಸ್‌, LLC ಎಂಬುದು ಸ್ಟಾರ್‌ಬಕ್ಸ್‌‌-ಸ್ವಾಮ್ಯದ ಒಂದು ಕಂಪನಿಯಾಗಿದ್ದು, ಅದು ಪ್ರಸಕ್ತವಾಗಿ ಸ್ಟಾರ್‌ಬಕ್ಸ್‌‌ ಕಾಫಿ ಕಂಪನಿಯ ಸರಿಸುಮಾರು ೧೨೦ ಏಕಸ್ವಾಮ್ಯದ ಹಕ್ಕುಪತ್ರಗಳು ಮತ್ತು ಸರಕುಮುದ್ರೆಗಳನ್ನು ಹೊಂದಿದೆ. ಇದು ನೆವಡಾದ ಮಿಂಡೆನ್‌‌ನಲ್ಲಿನ ೨೫೨೫ ಸ್ಟಾರ್‌ಬಕ್ಸ್‌‌ ಮಾರ್ಗದಲ್ಲಿ ನೆಲೆಗೊಂಡಿದೆ.

ಹೆಸರು

ಮೋಬಿ-ಡಿಕ್‌ ಎಂಬ ಕಾದಂಬರಿಯಲ್ಲಿ ಕ್ಯಾಪ್ಟನ್‌ ಅಹಾಬ್‌‌ನ ಮೊದಲ ಸಹೋದ್ಯೋಗಿಯಾದ ಸ್ಟಾರ್‌ಬಕ್‌‌ನ ಹೆಸರನ್ನು ಕಂಪನಿಯು ಒಂದು ಭಾಗವಾಗಿ ಹೊಂದಿದೆ; ಅಷ್ಟೇ ಅಲ್ಲ, ರೈನಿಯರ್ ಪರ್ವತ‌ದ ಮೇಲಿನ ಶತಮಾನದ ತಿರುವಿನ ಒಂದು ಗಣಿಗಾರಿಕಾ ಶಿಬಿರದ (ಸ್ಟಾರ್ಬೊ ಅಥವಾ ಸ್ಟೋರ್ಬೊ ) ಹೆಸರನ್ನೂ ಇದು ಆಂಶಿಕವಾಗಿ ಹೊಂದಿದೆ. ಹೋವರ್ಡ್‌ ಷುಲ್ಟ್ಜ್‌‌‌ನ ಪೌರ್‌ ಯುವರ್‌ ಹಾರ್ಟ್‌ ಇನ್‌ಟು ಇಟ್‌: ಹೌ ಸ್ಟಾರ್‌ಬಕ್ಸ್‌‌ ಬಿಲ್ಟ್‌ ಎ ಕಂಪನಿ ಒನ್‌ ಕಪ್‌ ಅಟ್‌ ಎ ಟೈಮ್‌ ಎಂಬ ಪುಸ್ತಕದ ಅನುಸಾರ, ಮೋಬಿ-ಡಿಕ್‌ ಕಾದಂಬರಿಯಿಂದ ಕಂಪನಿಯ ಹೆಸರು ಜನ್ಯವಾಯಿತಾದರೂ, ಅನೇಕ ಅಂದುಕೊಳ್ಳುವ ರೀತಿಯಲ್ಲಿಯ ನೇರ ಶೈಲಿಯಲ್ಲಿ ಅದು ಆಗಲಿಲ್ಲ. "ಪೆಕ್ವಾಡ್‌‌" (ಕಾದಂಬರಿಯಲ್ಲಿನ ಹಡಗು) ಎಂಬ ಹೆಸರನ್ನು ಗೋರ್ಡಾನ್‌ ಬೌಕರ್‌ ಇಷ್ಟಪಟ್ಟಿದ್ದನಾದರೂ, ಅವನ ಅಂದಿನ ಸೃಜನಶೀಲ ಪಾಲುದಾರನಾದ ಟೆರ್ರಿ ಹೆಕ್ಲರ್‌ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ "ಒಂದು ಬಟ್ಟಲಿನಷ್ಟು ಪೀ-ಕ್ವಾಡ್‌ನ್ನು ಯಾರೂ ಕುಡಿಯಲು ಹೋಗುವುದಿಲ್ಲ!" ಎಂದುಬಿಟ್ಟ. "ಸ್ಟಾರ್ಬೊ" ಎಂಬ ಹೆಸರನ್ನು ಹೆಕ್ಲರ್‌ ಸೂಚಿಸಿದ. ಈ ಎರಡು ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಆದ ಮಿದುಳುದಾಳಿ ಅಥವಾ ಸಲಹೆಗಳ ಮಹಾಪೂರದಿಂದಾಗಿ, ಪೆಕ್ವಾಡ್‌‌‌ನ ಮೊದಲ ಸಹೋದ್ಯೋಗಿಯಾದ ಸ್ಟಾರ್‌ಬಕ್‌ ಹೆಸರನ್ನು ಕಂಪನಿಗೆ ಇರಿಸಲಾಯಿತು.

ಅಂತರರಾಷ್ಟ್ರೀಯ ಹೆಸರುಗಳು

ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್‌ಬಕ್ಸ್‌‌ ಈ ಕೆಳಗೆ ನಮೂದಿಸಿರುವ ಹೆಸರುಗಳಿಂದಲೂ ಚಿರಪರಿಚಿತವಾಗಿದೆ:

  • ‌ಅರೇಬಿಕ್ ಭಾಷೆಯನ್ನು ಮಾತನಾಡುವ ದೇಶಗಳು: ستاربكس (ಲಿಪ್ಯಂತರಣ: ಸ್ಟಾರ್‌ಬಕ್ಸ್‌ )
  • ಬಲ್ಗೇರಿಯಾ: Старбъкс (ಲಿಪ್ಯಂತರಣ: ಸ್ಟಾರ್‌ಬಾಕ್ಸ್‌ )
  • ಚೀನಾ, ಹಾಂಕಾಂಗ್‌‌, ಮಕಾವು, ತೈವಾನ್‌: 星巴克 ಪಿನ್‌ಯಿನ್‌: ಕ್ಸೀಂಗ್‌ಬೇಕ್‌ (星 ಕ್ಸೀಂಗ್‌ ಎಂದರೆ "ಸ್ಟಾರ್‌‌" (ತಾರೆ) ಎಂದರ್ಥವಾದರೆ, 巴克 ಎಂಬುದು "-ಬಕ್ಸ್‌" ಎಂಬುದರ ಒಂದು ಲಿಪ್ಯಂತರಣವಾಗಿದೆ.)
  • ಇಸ್ರೇಲ್: סטארבקס (ಲಿಪ್ಯಂತರಣ: ಸ್ಟಾರ್‌ಬಕ್ಸ್‌ )
  • ಜಪಾನ್‌: スターバックス (ಲಿಪ್ಯಂತರಣ: ಸುತಾಬಕ್ಕುಸು ), ಮತ್ತು スタバ ಎಂಬ ಸಂಕ್ಷಿಪ್ತ ರೂಪವನ್ನೂ ಸಂಕೇತಭಾಷೆಯಲ್ಲಿ ಬಳಸಲಾಗುತ್ತದೆ
  • ರಷ್ಯಾ: Старбакс (ಲಿಪ್ಯಂತರಣ: ಸ್ಟಾರ್‌ಬಕ್ಸ್‌ )
  • ದಕ್ಷಿಣ ಕೊರಿಯಾ: 스타벅스 (ಲಿಪ್ಯಂತರಣ: ಸ್ಯೂಟಾಬೆಯೊಕ್ಸಿಯು ), ಆದರೆ ಕೊರಿಯಾದ ಅನುವಾದವಾದ 별다방 [(ತಾರೆ) ಸ್ಟಾರ್‌‌-ಚಹಾಗೃಹ] ಎಂಬುದನ್ನೂ ಸಂಕೇತಭಾಷೆಯಲ್ಲಿ ಬಳಸಲಾಗುತ್ತದೆ
  • ಕ್ವೆಬೆಕ್‌, ಕೆನಡಾ: ಕೆಫೆ ಸ್ಟಾರ್‌ಬಕ್ಸ್‌‌ ಕಾಫಿ
  • ಥೈಲೆಂಡ್‌: สตาร์บัคส์ ಇದನ್ನು ಹೀಗೆ ಉಚ್ಚರಿಸಲಾಗುತ್ತದೆ [satāːbākʰ]

ಲಾಂಛನ

೨೦೦೬ರಲ್ಲಿ, ಸ್ಟಾರ್‌ಬಕ್ಸ್‌ನ ಓರ್ವ ವಕ್ತಾರಳಾದ ವ್ಯಾಲೇರಿ ಒ'ನೀಲ್ ಎಂಬಾಕೆಯು ಲಾಂಛನದ ಕುರಿತಾಗಿ ಮಾತನಾಡುತ್ತಾ, ಅದು "ಜೋಡಿ-ಬಾಲದ ಮೋಹಿನಿ"ಯೋರ್ವಳ ಒಂದು ಬಿಂಬವಾಗಿದೆ ಎಂದು ತಿಳಿಸಿದಳು. ವರ್ಷಗಳಾಗುತ್ತಾ ಬರುತ್ತಿದ್ದಂತೆ ಸದರಿ ಲಾಂಛನವನ್ನು ಗಮನಾರ್ಹವಾಗಿ ಸುವ್ಯವಸ್ಥೆಗೊಳಿಸಲಾಗಿದೆ. ೧೭ನೇ-ಶತಮಾನದ ಅವಧಿಯ, "ನಾರ್ವೆ ದೇಶದ" ಒಂದು ಮರದ ಪಡಿಯಚ್ಚನ್ನು ಆಧರಿಸಿದ್ದ ಮೊದಲ ರೂಪಾಂತರದಲ್ಲಿ, ಸ್ಟಾರ್‌ಬಕ್ಸ್‌‌ ಮೋಹಿನಿಗೆ ಮೇಲುಡುಪು ಇರಲಿಲ್ಲ ಮತ್ತು ಸಂಪೂರ್ಣವಾಗಿ ಗೋಚರಿಸುವ ಒಂದು ಜೋಡಿ ಮೀನಿನ ಬಾಲವನ್ನು ಆಕೆಯು ಹೊಂದಿದ್ದಳು. ಸದರಿ ಬಿಂಬವು ಒಂದು ಒರಟಾದ ದೃಶ್ಯ-ವಿನ್ಯಾಸವನ್ನೂ ಹೊಂದಿತ್ತು ಹಾಗೂ ಅದು ಒಂದು ಮೆಲ್ಯುಸೈನ್‌‌ಗೆ ಹೋಲಿಸಲ್ಪಡುವ ರೀತಿಯಲ್ಲಿತ್ತು. ೧೯೮೭-೯೨ರ ಅವಧಿಯಲ್ಲಿ ಬಳಸಲ್ಪಟ್ಟ ಎರಡನೇ ರೂಪಾಂತರದಲ್ಲಿ, ಅವಳ ತೂಗಾಡುವ ಕೂದಲು ಅವಳ ಸ್ತನಗಳನ್ನು ಮುಚ್ಚಿತ್ತಾದರೂ, ಅವಳ ಹೊಕ್ಕಳು ಇನ್ನೂ ಗೋಚರಿಸುತ್ತಿತ್ತು; ಹಾಗೂ ಮೀನಿನ ಬಾಲವನ್ನು ಕೊಂಚಮಟ್ಟಿಗೆ ತೆಗೆದುಹಾಕಲಾಗಿತ್ತು. ೧೯೯೨ ಮತ್ತು ೨೦೧೧ರ ನಡುವೆ ಬಳಸಲ್ಪಟ್ಟ ಮೂರನೇ ರೂಪಾಂತರದಲ್ಲಿ, ಅವಳ ಹೊಕ್ಕಳು ಮತ್ತು ಸ್ತನಗಳು ಗೋಚರಿಸುತ್ತಲೇ ಇರಲಿಲ್ಲ, ಮತ್ತು ಮೀನಿನ ಬಾಲಗಳ ಕೇವಲ ಕುರುಹುಗಳಷ್ಟೇ ಉಳಿದುಕೊಂಡಿದ್ದವು. "ಮರದ ಪಡಿಯಚ್ಚಿನ" ಮೂಲ ಲಾಂಛನವನ್ನು ಸಿಯಾಟಲ್‌ನಲ್ಲಿರುವ ಸ್ಟಾರ್‌ಬಕ್ಸ್‌‌ನ ಕೇಂದ್ರಕಾರ್ಯಾಲಯಕ್ಕೆ ಸಾಗಿಸಲಾಗಿದೆ.

೨೦೦೬ರ ಸೆಪ್ಟೆಂಬರ್‌ನ ಆರಂಭದಲ್ಲಿ ಹಾಗೂ ನಂತರ ೨೦೦೮ರ ಪ್ರಥಮಾರ್ಧದಲ್ಲಿ ಇನ್ನೊಮ್ಮೆ, ಕಂದುಬಣ್ಣದ ತನ್ನ ಮೂಲ ಲಾಂಛನವನ್ನು ಬಿಸಿ-ಪೇಯದ ಕಾಗದದ ಬಟ್ಟಲುಗಳ ಮೇಲೆ ಸ್ಟಾರ್‌ಬಕ್ಸ್‌‌ ತಾತ್ಕಾಲಿಕವಾಗಿ ಮರುಪರಿಚಯಿಸಿತು. ಪೆಸಿಫಿಕ್‌ ವಾಯವ್ಯ ಭಾಗಕ್ಕೆ ಸೇರಿದ ಕಂಪನಿಯ ಪರಂಪರೆಯನ್ನು ತೋರಿಸುವುದಕ್ಕಾಗಿ ಮತ್ತು ವ್ಯವಹಾರಕ್ಕಿಳಿದು ೩೫ ವರ್ಷಗಳಾದುದನ್ನು ಆಚರಿಸುವುದಕ್ಕಾಗಿ ಇದನ್ನು ಮಾಡಲಾಯಿತು ಎಂದು ಸ್ಟಾರ್‌ಬಕ್ಸ್‌‌ ಹೇಳಿಕೊಂಡಿದೆ. ಬಿಂಬದಲ್ಲಿ ತೋರುತ್ತಿದ್ದ ಮೋಹಿನಿಯು ನಗ್ನ ಸ್ತನಗಳ ಕಾರಣದಿಂದಾಗಿ ಸದರಿ ಹಿಂದಿನ ಲಾಂಛನವು ಒಂದಷ್ಟು ವಿವಾದವನ್ನು ಹೊತ್ತಿಸಿತಾದರೂ, ತಾತ್ಕಾಲಿಕ ಬದಲಾವಣೆಯನ್ನು ಕೈಗೊಂಡಿದ್ದು ಮಾಧ್ಯಮಗಳ ಗಮನವನ್ನು ಅಷ್ಟಾಗಿ ಸೆಳೆಯಲಿಲ್ಲ. ಸದರಿ ಹಿಂದಿನ ಲಾಂಛನವನ್ನು ೨೦೦೬ರಲ್ಲಿ ಸ್ಟಾರ್‌ಬಕ್ಸ್‌‌ ಮರುಪರಿಚಯಿಸಿದಾಗ, ಅದು ಇದೇ ರೀತಿಯ ಟೀಕೆಯನ್ನು ಎದುರಿಸಬೇಕಾಗಿ ಬಂತು. ೨೦೦೦ನೇ ಇಸವಿಯಲ್ಲಿ ಸೌದಿ ಅರೇಬಿಯಾದ ಮಾರುಕಟ್ಟೆಯನ್ನು ಸ್ಟಾರ್‌ಬಕ್ಸ್‌ ಪ್ರವೇಶಿಸಬೇಕಾಗಿ ಬಂದಾಗ, ಮೋಹಿನಿಯ ಚೆಲುವಿನ ಬಹುತೇಕ ಭಾಗವನ್ನು ತೆಗೆದುಹಾಕಿ ಕೇವಲ ಅವಳ ಕಿರೀಟವನ್ನಷ್ಟೇ ಉಳಿಸುವ ಮೂಲಕ ಲಾಂಛನವನ್ನು ಮಾರ್ಪಡಿಸಲಾಯಿತು ಎಂಬ ಅಂಶವು ೨೦೦೨ರಲ್ಲಿ ದಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಕೋಲ್ಬರ್ಟ್‌ I. ಕಿಂಗ್‌ ಎಂಬಾತ ಬರೆದ ಪುಲಿಟ್ಜರ್‌‌ ಬಹುಮಾನ-ವಿಜೇತ ಅಂಕಣವೊಂದರಲ್ಲಿ ವರದಿ ಮಾಡಲ್ಪಟ್ಟಿತು. ಅಂತರರಾಷ್ಟ್ರೀಯ ಲಾಂಛನವನ್ನು ಸೌದಿ ಅರೇಬಿಯಾದಲ್ಲಿ ತಾನು ಬಳಸಲಿರುವುದಾಗಿ ಮೂರು ತಿಂಗಳುಗಳ ನಂತರ ಕಂಪನಿಯು ಪ್ರಕಟಿಸಿತು.

ಕಂಪನಿಯ ಲಾಂಛನಕ್ಕೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವುದಾಗಿ ೨೦೧೧ರ ಜನವರಿಯಲ್ಲಿ ಸ್ಟಾರ್‌ಬಕ್ಸ್‌‌ ಪ್ರಕಟಿಸಿತು; ಮೋಹಿನಿಯ ಸುತ್ತಲೂ ಇರುವ ಸ್ಟಾರ್‌ಬಕ್ಸ್‌‌ ಪದದ ಗುರುತನ್ನು ತೆಗೆದುಹಾಕುವ ಮತ್ತು ಮೋಹಿನಿ ಬಿಂಬವನ್ನೇ ಹಿಗ್ಗಲಿಸುವ ಕ್ರಮವನ್ನು ಇದು ಒಳಗೊಂಡಿತ್ತು.

ವಿಕೃತಾನುಕರಣೆಗಳು ಮತ್ತು ಉಲ್ಲಂಘನೆಗಳು

ಸ್ಟಾರ್‌ಬಕ್ಸ್‌ನ ಲಾಂಛನವು ವಿಕೃತಾನುಕರಣೆಗಳು ಮತ್ತು ನಕಲುಗಳಿಗೆ ಗುರಿಯಾಗಿದೆ ಮತ್ತು ತನ್ನ ಬೌದ್ಧಿಕ ಸ್ವತ್ತನ್ನು ಉಲ್ಲಂಘಿಸುತ್ತಿದ್ದಾರೆ ಎಂದು ತಾನು ಗ್ರಹಿಸಿದವರ ವಿರುದ್ಧ ಸ್ಟಾರ್‌ಬಕ್ಸ್‌ ಕಾನೂನು ಕ್ರಮವನ್ನು ಜರುಗಿಸಿದೆ. ೨೦೦೦ನೇ ಇಸವಿಯಲ್ಲಿ, ಸ್ಯಾನ್‌ ಫ್ರಾನ್ಸಿಸ್ಕೊದ ವ್ಯಂಗ್ಯಚಿತ್ರಕಾರನಾದ ಕೀರನ್‌ ಡ್ವೈಯರ್‌ ಎಂಬಾತನ ಮೇಲೆ ಕೃತಿಸ್ವಾಮ್ಯದ ಮತ್ತು ಸರಕುಮುದ್ರೆಯ ಉಲ್ಲಂಘನೆಗಾಗಿ ಸ್ಟಾರ್‌ಬಕ್ಸ್‌ ಮೊಕದ್ದಮೆ ಹೂಡಿತು; ಈತ ಸ್ಟಾರ್‌ಬಕ್ಸ್‌ನ ಮೋಹಿನಿ ಲಾಂಛನದ ವಿಕೃತಾನುಕರಣೆಯೊಂದನ್ನು ಮಾಡಿ ಅದನ್ನು ತನ್ನ ಸಚಿತ್ರ ಹಾಸ್ಯಪತ್ರಿಕೆಗಳ (ಕಾಮಿಕ್ಸ್‌) ಪೈಕಿ ಒಂದರ ಮುಖಪುಟದಲ್ಲಿ ಮುದ್ರಿಸಿದ್ದ; ನಂತರದಲ್ಲಿ, ತನ್ನ ವೆಬ್‌ಸೈಟ್‌ ಮೂಲಕ ಹಾಗೂ ಸಚಿತ್ರ ಹಾಸ್ಯ ಪುಸ್ತಕದ ಸಮಾವೇಶಗಳಲ್ಲಿ ಆತ ಮಾರಾಟ ಮಾಡಿದ ಕಾಫಿ ಪಾನಪಾತ್ರೆಗಳು, ಟಿ-ಷರ್ಟ್‌ಗಳು, ಮತ್ತು ಸ್ಟಿಕರ್‌ಗಳ ಮೇಲೂ ಅದನ್ನು ಮುದ್ರಿಸಿದ್ದ. ಇದು ಆತನ ಮೇಲಿನ ಮೊಕದ್ದಮೆಯ ಹೂಡಿಕೆಗೆ ಕಾರಣವಾಗಿತ್ತು. ತನ್ನ ಕೃತಿಯು ಒಂದು ವಿಕೃತಾನುಕರಣೆಯಾಗಿದ್ದರಿಂದ, U.S. ಕಾನೂನಿನ ಅಡಿಯಲ್ಲಿನ ಮುಕ್ತ ಅಭಿವ್ಯಕ್ತಿಗೆ ಸಂಬಂಧಿಸಿರುವ ಹಕ್ಕಿನಿಂದ ಅದು ಸಂರಕ್ಷಿಸಲ್ಪಟ್ಟಿತ್ತು ಎಂಬುದು ಡ್ವೈಯರ್‌ನ ಅಭಿಮತವಾಗಿತ್ತು. ಸ್ಟಾರ್‌ಬಕ್ಸ್ ಜೊತೆಗಿನ ವಿಚಾರಣಾ ಪ್ರಕರಣವೊಂದನ್ನು ಸಹಿಸಿಕೊಳ್ಳುವಷ್ಟು ಹಣಕಾಸಿನ ಸಾಮರ್ಥ್ಯವು ತನಗಿಲ್ಲ ಎಂಬುದಾಗಿ ಡ್ವೈಯರ್‌ ಸಮರ್ಥಿಸಿಕೊಂಡ ಕಾರಣದಿಂದಾಗಿ, ಸದರಿ ಪ್ರಕರಣವು ಅಂತಿಮವಾಗಿ ನ್ಯಾಯಾಲಯದ ಹೊರಗೆ ಇತ್ಯರ್ಥಗೊಂಡಿತು. ಡ್ವೈಯರ್‌ನ ಕೃತಿಯು ಒಂದು ವಿಕೃತಾನುಕರಣೆಯಾಗಿತ್ತು ಎಂಬುದಕ್ಕೆ ನ್ಯಾಯಾಧೀಶ ಸಮ್ಮತಿಸಿದ ಮತ್ತು ಈ ಕಾರಣದಿಂದ ಡ್ವೈಯರ್‌ ಸಾಂವಿಧಾನಿಕ ಸಂರಕ್ಷಣೆಯನ್ನು ಪಡೆದುಕೊಂಡ; ಆದಾಗ್ಯೂ, ಸ್ಟಾರ್‌ಬಕ್ಸ್‌‌ನ ಮೋಹಿನಿ ಲಾಂಛನವನ್ನು "ಗೊಂದಲಗೊಳಿಸುವ ರೀತಿಯಲ್ಲಿ ಹೋಲುವಂತಿರುವ" ಬಿಂಬವೊಂದರಿಂದ ಹಣಕಾಸಿನ ವಿಚಾರವಾಗಿ "ಲಾಭಗಳಿಕೆಯನ್ನು" ಮಾಡಿಕೊಳ್ಳದಂತೆ ಅವನ ಮೇಲೆ ನಿಷೇಧವನ್ನು ಹೇರಲಾಯಿತು. ಮುಕ್ತ ಮಾತಿನ ಒಂದು ಅಭಿವ್ಯಕ್ತಿಯಾಗಿ ಬಿಂಬವನ್ನು ಪ್ರದರ್ಶಿಸುವುದಕ್ಕೆ ಡ್ವೈಯರ್‌ಗೆ ಪ್ರಸಕ್ತವಾಗಿ ಅವಕಾಶ ನೀಡಲಾಗಿದೆಯಾದರೂ, ಅವನು ಅದನ್ನು ಇನ್ನೆಂದೂ ಮಾರಾಟ ಮಾಡುವಂತಿರುವುದಿಲ್ಲ. ಇದೇ ರೀತಿಯ ಪ್ರಕರಣವೊಂದರಲ್ಲಿ, "ಫಕ್‌ ಆಫ್‌" ಎಂಬ ಪದಗಳನ್ನು ಹೊಂದಿರುವ ಸ್ಟಾರ್‌ಬಕ್ಸ್‌‌ ಲಾಂಛನವನ್ನು ಬಳಸಿಕೊಂಡಿರುವ ಸ್ಟಿಕರ್‌ಗಳು ಮತ್ತು ಟಿ-ಷರ್ಟ್‌ಗಳನ್ನು ಮಾರಾಟ ಮಾಡುತ್ತಿದ್ದ ನ್ಯೂಯಾರ್ಕ್‌ನ ಮಳಿಗೆಯೊಂದರ ಮೇಲೆ ಕಂಪನಿಯು ೧೯೯೯ರಲ್ಲಿ ಮೊಕದ್ದಮೆಯನ್ನು ಹೂಡಿತು. ಸ್ಟಾರ್‌ಬಕ್ಸ್‌‌ ಲಾಂಛನದ ರೂಪುಗೆಡಿಸಲು ಜನರನ್ನು ಉತ್ತೇಜಿಸಿದ starbuckscoffee.co.uk ಎಂಬ ಒಂದು ಸ್ಟಾರ್‌ಬಕ್ಸ್‌-ವಿರೋಧಿ‌ ವೆಬ್‌ಸೈಟ್‌, ೨೦೦೫ರಲ್ಲಿ ಸ್ಟಾರ್‌ಬಕ್ಸ್‌ಗೆ ವರ್ಗಾಯಿಸಲ್ಪಟ್ಟಿತಾದರೂ, ಅಲ್ಲಿಂದಾಚೆಗೆ ಅದು www.starbuck‌scoffee.org.uk ಎಂಬ ಹೆಸರಿನಲ್ಲಿ ಪುನರುದಯಿಸಿತು. USನಲ್ಲಿರುವ ಕ್ರಿಶ್ಚಿಯನ್‌ ಪುಸ್ತಕಮಳಿಗೆಗಳು ಮತ್ತು ವೆಬ್‌ಸೈಟ್‌ಗಳು ಸ್ಟಾರ್‌ಬಕ್ಸ್‌ ರೀತಿಯದ್ದೇ ಲಾಂಛನವನ್ನು ಒಳಗೊಂಡಿರುವ ಟಿ-ಷರ್ಟ್‌ಗಳನ್ನು ಮಾರಾಟ ಮಾಡುತ್ತಿವೆ; ಆದರೆ ಇಲ್ಲಿ ಮತ್ಸ್ಯಕನ್ಯೆಯ ಬಿಂಬವನ್ನು ಜೀಸಸ್‌ನ ಬಿಂಬದಿಂದ ಬದಲಾಯಿಸಲಾಗಿದೆ ಮತ್ತು ಅಂಚಿನ ಸುತ್ತಲೂ "ಸ್ಯಾಕ್ರಿಫೈಸ್ಡ್‌ ಫಾರ್‌ ಮಿ" ಎಂಬ ಪದಗಳನ್ನು ಮುದ್ರಿಸಲಾಗಿದೆ.

ಸ್ಟಾರ್‌ಬಕ್ಸ್‌ ವತಿಯಿಂದ ಸಲ್ಲಿಸಲ್ಪಟ್ಟ ಇತರ ಯಶಸ್ವಿ ಪ್ರಕರಣಗಳಲ್ಲಿ ಚೀನಾದ ಷಾಂಘೈನಲ್ಲಿ ಸರಕುಮುದ್ರೆ ಉಲ್ಲಂಘನೆಗಾಗಿ ಕ್ಸಿಂಗ್‌ಬೇಕ್‌ ಸರಣಿಯ ವಿರುದ್ಧ ೨೦೦೬ರಲ್ಲಿ ಗೆಲ್ಲಲಾದ ಪ್ರಕರಣವೂ ಸೇರಿದೆ; ಸ್ಟಾರ್‌ಬಕ್ಸ್‌ಗೆ ಸಂಬಂಧಿಸಿದ ಚೀನೀ ಭಾಷೆಯ ರೂಪಾಂತರವನ್ನು ಹೋಲುವ ರೀತಿಯಲ್ಲಿ ಧ್ವನಿವಿಜ್ಞಾನದ ಪ್ರಕಾರ ಅಥವಾ ಉಚ್ಚಾರಣಾನುರೂಪವಾಗಿ ಧ್ವನಿಸುವ ಹೆಸರೊಂದನ್ನು ಹೊಂದಿದ್ದ ಹಸಿರು-ಮತ್ತು-ಬಿಳಿಯ ಲಾಂಛನವೊಂದನ್ನು ಈ ಸರಣಿಯು ಬಳಸಿದ್ದರಿಂದ ಅದರ ಮೇಲೆ ಮೊಕದ್ದಮೆ ಹೂಡಲಾಗಿತ್ತು‌‌. ೧೯೯೭ರಲ್ಲಿ ರಷ್ಯಾದಲ್ಲಿ ತನ್ನ ಸರಕುಮುದ್ರೆಯನ್ನು ಮೊದಲು ನೋಂದಾಯಿಸಿದ ನಂತರ ಸ್ಟಾರ್‌ಬಕ್ಸ್‌‌ ಯಾವುದೇ ಮಳಿಗೆಗಳನ್ನು ತೆರೆದಿರಲಿಲ್ಲ ಹಾಗೂ ೨೦೦೨ರಲ್ಲಿ ರಷ್ಯಾದ ಓರ್ವ ವಕೀಲನು ಸದರಿ ಸರಕುಮುದ್ರೆಯನ್ನು ರದ್ದುಗೊಳಿಸುವಂತೆ ಮನವಿಯೊಂದನ್ನು ಸಲ್ಲಿಸುವಲ್ಲಿ ಯಶಸ್ವಿಯಾದ. ಆತ ನಂತರದಲ್ಲಿ ಮಾಸ್ಕೋವಿನ ಒಂದು ಕಂಪನಿಯೊಂದಿಗೆ ಹೆಸರನ್ನು ನೋಂದಾಯಿಸಿದ ಹಾಗೂ ಸ್ಟಾರ್‌ಬಕ್ಸ್‌‌ಗೆ ಸದರಿ ಸರಕುಮುದ್ರೆಯನ್ನು ಮಾರಾಟ ಮಾಡುವುದಕ್ಕಾಗಿ ೬೦೦,೦೦೦ $ನಷ್ಟು ಮೊತ್ತವನ್ನು ಕೇಳಿದ; ಆದರೆ ೨೦೦೫ರ ನವೆಂಬರ್‌ನಲ್ಲಿ ಅವನ ವಿರುದ್ಧ ತೀರ್ಪುನೀಡಲಾಯಿತು. ಒರೆಗಾಂವ್‌ನಲ್ಲಿ ಒಂದು ಕಾಫಿ ಮಳಿಗೆಯನ್ನು ಹೊಂದಿರುವ ಸ್ಯಾಮ್‌ ಬಕ್‌ ಎಂಬಾಕೆಯು ಮಳಿಗೆಯ ಮುಂಭಾಗದಲ್ಲಿ ತನ್ನ ಹೆಸರನ್ನು ಬಳಸದಂತೆ ೨೦೦೬ರಲ್ಲಿ ಅವಳ ಮೇಲೆ ನಿಷೇಧವನ್ನು ಹೇರಲಾಯಿತು.

೨೦೦೩ರಲ್ಲಿ, ಕೆನಡಾದ ಬ್ರಿಟಿಷ್‌ ಕೊಲಂಬಿಯಾದ ಮ್ಯಾಸೆಟ್‌ ಎಂಬಲ್ಲಿರುವ "ಹೈದಾಬಕ್ಸ್‌ ಕಾಫಿ ಹೌಸ್‌"ಗೆ ನಿಲುಗಡೆಯ-ಮತ್ತು-ಬಿಟ್ಟುಬಿಡುವಿಕೆಯ ಪತ್ರವೊಂದನ್ನು ಸ್ಟಾರ್‌ಬಕ್ಸ್‌ ಕಳಿಸಿತು. "ಬಕ್ಸ್‌" ಎಂಬ ಹೆಸರಿನಿಂದ ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ ತರುಣ ಹೈದಾ ಜನರ ಒಂದು ಗುಂಪು ಈ ಮಳಿಗೆಯ ಮಾಲೀಕತ್ವವನ್ನು ಹೊಂದಿತ್ತು. ಹೈದಾಬಕ್ಸ್‌ ತನ್ನ ಹೆಸರಿನಿಂದ "ಕಾಫಿ ಹೌಸ್‌" ಎಂಬ ಪದವನ್ನು ಕೈಬಿಟ್ಟ ನಂತರ, ಟೀಕೆಯನ್ನು ಎದುರಿಸಿದ ಮೇಲೆ, ಸ್ಟಾರ್‌ಬಕ್ಸ್‌‌ ತನ್ನ ಬೇಡಿಕೆಯನ್ನು ಕೈಬಿಟ್ಟಿತು.

ಇತರ ಪ್ರಕರಣಗಳು ಕಂಪನಿಯ ವಿರುದ್ಧವಾಗಿ ನಿಂತಿವೆ. ದಕ್ಷಿಣ ಕೊರಿಯಾದಲ್ಲಿ ಸ್ಟಾರ್‌ಪ್ರೆಯಾ ಎಂಬ ಹೆಸರಿನ ಅಡಿಯಲ್ಲಿ ಕಾಫಿ ನಿಲ್ದಾಣಗಳನ್ನು ನಿರ್ವಹಿಸುವ, ಸಣ್ಣಗಾತ್ರದ ಕಾಫಿ ಮಾರಾಟಗಾರ ಮಳಿಗೆಯೊಂದರ ವಿರುದ್ಧ ಸಲ್ಲಿಸಲಾಗಿದ್ದ ಸರಕುಮುದ್ರೆ ಉಲ್ಲಂಘನೆಯ ಪ್ರಕರಣವೊಂದನ್ನು ೨೦೦೫ರಲ್ಲಿ ಸ್ಟಾರ್‌ಬಕ್ಸ್‌ ಸೋತಿತು. ಎಲ್‌ಪ್ರೆಯಾ ಎಂಬ ಈ ಕಂಪನಿಯು ಈ ಕುರಿತು ವಿವರ ನೀಡುತ್ತಾ, ಫ್ರೇಜಾ ಎಂಬ ನಾರ್ವೆ ದೇಶದ ದೇವತೆಯ ಹೆಸರಿನ ಹಿನ್ನೆಲೆಯಲ್ಲಿ ಸ್ಟಾರ್‌ಪ್ರೆಯಾ ಎಂಬ ಹೆಸರನ್ನು ಇಡಲಾಗಿದ್ದು, ಕೊರಿಯನ್ನರ ಉಚ್ಚಾರಣೆಯನ್ನು ಸರಾಗಗೊಳಿಸುವ ಸಲುವಾಗಿ ಆ ಹೆಸರಿನ ಅಕ್ಷರಗಳನ್ನು ಬದಲಾಯಿಸಲಾಗಿದೆ ಎಂದು ತಿಳಿಸಿತು. ಸ್ಟಾರ್‌ಪ್ರೆಯಾದ ಲಾಂಛನವೂ ಸಹ ತಮ್ಮದೇ ಲಾಂಛನದ ರೀತಿಯಲ್ಲೇ ಇದೆ ಎಂಬಂಥ ಸ್ಟಾರ್‌ಬಕ್ಸ್‌ನ ಸಮರ್ಥನೆಯನ್ನು ನ್ಯಾಯಾಲಯವು ತಿರಸ್ಕರಿಸಿತು. USAಯ ಟೆಕ್ಸಾಸ್‌ನ ಗ್ಯಾಲ್ವೆಸ್ಟನ್‌ನಲ್ಲಿನ ಓರ್ವ ಪಾನಗೃಹ ಮಾಲೀಕನು, "ಸ್ಟಾರ್‌ ಬ್ಲಾಕ್‌ ಬಿಯರ್‌‌"ನ್ನು ಮಾರಾಟ ಮಾಡುವ ಹಕ್ಕನ್ನು ಗೆದ್ದುಕೊಂಡ; ೨೦೦೩ರಲ್ಲಿ ಈ ಹೆಸರನ್ನು ಅವನು ನೋಂದಾಯಿಸಿದ ನಂತರ, ಸ್ಟಾರ್‌ಬಕ್ಸ್‌‌ ಅವನ ಮೇಲೆ ಮೊಕದ್ದಮೆಯೊಂದನ್ನು ಹೂಡಿತ್ತು. ಆದರೆ ಬಿಯರ್‌‌ನ ಮಾರಾಟವನ್ನು ಗ್ಯಾಲ್ವೆಸ್ಟನ್‌ಗೆ ಪರಿಮಿತಗೊಳಿಸಬೇಕು ಎಂಬುದಾಗಿ ಒಕ್ಕೂಟದ ನ್ಯಾಯಾಲಯದ ಅಧಿಕೃತ ತೀರ್ಪು ೨೦೦೫ರಲ್ಲಿ ತಿಳಿಸಿತ್ತು. ಈ ಅಧಿಕೃತ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ೨೦೦೭ರಲ್ಲಿ ಎತ್ತಿಹಿಡಿಯಿತು.

ಚಾಲ್ತಿಯಲ್ಲಿರುವ ಪ್ರಕರಣಗಳಲ್ಲಿ, ಸಿಯಾಟಲ್‌‌ನ ರ್ಯಾಟ್‌ ಸಿಟಿ ರೋಲರ್‌ಗರ್ಲ್ಸ್‌ ಲಾಂಛನಕ್ಕೆ ಸಂಬಂಧಿಸಿದಂತೆ ೨೦೦೮ರಲ್ಲಿ ಸಲ್ಲಿಸಲ್ಪಟ್ಟ ಕೃತಿಸ್ವಾಮ್ಯದ ಅರ್ಜಿಯ ಕುರಿತಾದ ವಿವಾದವೊಂದು ಸೇರಿದೆ. ವಾಷಿಂಗ್ಟನ್‌ನ ಓರ್ವ ಕಲಾವಿದನಿಂದ ಚಿತ್ರಿಸಲ್ಪಟ್ಟ ರೋಲರ್‌ ಡರ್ಬಿ ಲೀಗ್‌ನ ಲಾಂಛನವು ತನ್ನ ಲಾಂಛನವನ್ನು ಹೋಲುವ ರೀತಿಯಲ್ಲಿದೆ ಎಂಬುದಾಗಿ ಸ್ಟಾರ್‌ಬಕ್ಸ್‌ ಕಂಪನಿಯು ಸಮರ್ಥಿಸಿತ್ತು. ಸದರಿ ವಿವಾದಾಂಶವನ್ನು ಮತ್ತಷ್ಟು ಅವಲೋಕಿಸುವ ಸಲುವಾಗಿ ಹಾಗೂ ಸಾಧ್ಯವಾದರೆ ದೂರೊಂದನ್ನು ನೀಡುವ ಸಲುವಾಗಿ, ಒಂದು ವಿಸ್ತರಣೆಯನ್ನು ನೀಡುವಂತೆ ಸ್ಟಾರ್‌ಬಕ್ಸ್‌‌ ಮನವಿ ಮಾಡಿಕೊಂಡಿತು; ಇದಕ್ಕೆ ಸರಕುಮುದ್ರೆ ಕಚೇರಿಯಿಂದ ಮಂಜೂರಾತಿಯು ಸಿಕ್ಕಿತು. ಸ್ಟಾರ್‌ಬಕ್ಸ್‌ ಕಾರ್ಪೊರೇಷನ್ ವತಿಯಿಂದ ಯಾವುದೇ ಕ್ರಮವು ಜರುಗಿಸಲ್ಪಡದೆಯೇ, ೨೦೦೮ರ ಜುಲೈ ೧೬ರ ಗಡುವು ದಾಟಿಕೊಂಡುಹೋಯಿತು. ಷಹನಾಜ್‌ ಹುಸೇನ್‌ರಿಂದ ನಡೆಸಲ್ಪಡುತ್ತಿದ್ದ ಭಾರತದ ಶೃಂಗಾರ ಸಾಧನಗಳ ವ್ಯವಹಾರವೊಂದರ ವಿರುದ್ಧ ಸ್ಟಾರ್‌ಬಕ್ಸ್‌‌ ಕ್ರಮವನ್ನು ಜರುಗಿಸಿತು; ಕಾಫಿ ಮತ್ತು ಸಂಬಂಧಿತ ಉತ್ಪನ್ನಗಳೊಂದಿಗಿನ ಬಳಕೆಗಾಗಿ ಸ್ಟಾರ್‌ಸ್ಟ್ರಕ್‌ ಎಂಬ ಹೆಸರನ್ನು ನೋಂದಾಯಿಸುವುದಕ್ಕಾಗಿ ಆಕೆಯು ಅರ್ಜಿ ಸಲ್ಲಿಸಿದ ನಂತರ ಸ್ಟಾರ್‌ಬಕ್ಸ್‌‌ ಕಂಪನಿಯು ಈ ಕ್ರಮಕ್ಕೆ ಮುಂದಾಗಿತ್ತು. ಕಾಫಿ ಮತ್ತು ಚಾಕೊಲೇಟ್‌-ಆಧರಿತ ಶೃಂಗಾರ ಸಾಧನಗಳನ್ನು ಮಾರಾಟ ಮಾಡುವ ಮಳಿಗೆಗಳ ಸರಣಿಯೊಂದನ್ನು ತೆರೆಯುವುದು ತನ್ನ ಗುರಿಯಾಗಿತ್ತು ಎಂದು ಆಕೆ ಈ ಸಂದರ್ಭದಲ್ಲಿ ಹೇಳಿಕೊಂಡಳು.

ಸ್ಟಾರ್‌ಬಕ್ಸ್‌‌ ಲಾಂಛನವನ್ನು ಮಾರ್ಪಡಿಸದೆಯೇ ಮತ್ತು ಯಾವುದೇ ಅನುಮತಿಯಿಲ್ಲದೆಯೇ ಒಂದಷ್ಟು ಕಡೆ ಅದನ್ನು ಬಳಸಿದ್ದಾರೆ; ಉದಾಹರಣೆಗೆ, ಪಾಕಿಸ್ತಾನದಲ್ಲಿನ ಕೆಫೆಯೊಂದು ೨೦೦೩ರಲ್ಲಿ ತನ್ನ ಜಾಹೀರಾತುಗಳಲ್ಲಿ ಸದರಿ ಲಾಂಛನವನ್ನು ಬಳಸಿಕೊಂಡಿತು ಮತ್ತು ಕಾಂಬೋಡಿಯಾದ ಕೆಫೆಯೊಂದು ೨೦೦೯ರಲ್ಲಿ ಇದೇ ರೀತಿಯ ಕ್ರಮವನ್ನು ಅನುಸರಿಸಿತು. ಅದರ ಮಾಲೀಕನು ಈ ಕುರಿತು ಮಾತನಾಡುತ್ತಾ, "ನಾವು ಏನೆಲ್ಲಾ ಮಾಡಿದ್ದೇವೋ ಅದನ್ನು ಕಾನೂನಿನ ವ್ಯಾಪ್ತಿಯೊಳಗೇ ಮಾಡಿದ್ದೇವೆ" ಎಂದು ಹೇಳಿದ್ದು ಗಮನಾರ್ಹವಾಗಿತ್ತು.

ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ

೨೦೦೯ರಲ್ಲಿ, ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಯ ಕುರಿತಾದ ವಾರ್ಷಿಕ ವರದಿಯೊಂದನ್ನು ಸ್ಟಾರ್‌ಬಕ್ಸ್‌‌ ಬಿಡುಗಡೆ ಮಾಡಿತು.

ಪರಿಸರೀಯ ಪ್ರಭಾವ

ಸ್ಟಾರ್‌ಬಕ್ಸ್‌‌ 
ಗ್ರೌಂಡ್ಸ್‌ ಫಾರ್‌ ಯುವರ್‌ ಗಾರ್ಡನ್‌

ತನ್ನ ವ್ಯವಹಾರವನ್ನು ಹೆಚ್ಚು ಪರಿಸರ-ಸ್ನೇಹಿಯಾಗಿಸುವ ದೃಷ್ಟಿಯಿಂದ, "ಗ್ರೌಂಡ್ಸ್‌ ಫಾರ್‌ ಯುವರ್‌ ಗಾರ್ಡನ್‌" ಎಂಬ ಅಭಿಯಾನವನ್ನು ಸ್ಟಾರ್‌ಬಕ್ಸ್‌‌ ೧೯೯೯ರಲ್ಲಿ ಆರಂಭಿಸಿತು. ಮಿಶ್ರಗೊಬ್ಬರವನ್ನು ಮಾಡುವುದಕ್ಕಾಗಿ ಕಾಫಿ ಚರಟಕ್ಕೆ ಮನವಿ ಸಲ್ಲಿಸುವ ಯಾರಿಗೇ ಆದರೂ ಉಳಿದ ಕಾಫಿ ಚರಟವನ್ನು ನೀಡುವುದು ಇದರ ವೈಶಿಷ್ಟ್ಯತೆಯಾಗಿದೆ. ಈ ಅಭಿಯಾನದಲ್ಲಿ ಎಲ್ಲಾ ಮಳಿಗೆಗಳು ಮತ್ತು ಪ್ರದೇಶಗಳು ಭಾಗವಹಿಸುವುದಿಲ್ಲವಾದರೂ, ಸದರಿ ಪರಿಪಾಠವನ್ನು ಆರಂಭಿಸುವಂತೆ ಗ್ರಾಹಕರು ತಮ್ಮ ಸ್ಥಳೀಯ ಪ್ರದೇಶದ ಮಳಿಗೆಗೆ ಮನವಿ ಸಲ್ಲಿಸಬಹುದಾಗಿದೆ ಮತ್ತು ಅದರ ಮೇಲೆ ಪ್ರಭಾವ ಬೀರಬಹುದಾಗಿದೆ.

೨೦೦೪ರಲ್ಲಿ, ಮಳಿಗೆಯಲ್ಲಿ ಬಳಸುತ್ತಿದ್ದ ಕಾಗದ ಸಣ್ಣ ಚೌಕಗಳು (ನ್ಯಾಪ್‌ಕಿನ್‌ಗಳು) ಮತ್ತು ಮಳಿಗೆಯ ಕಸದ ಚೀಲಗಳ ಗಾತ್ರವನ್ನು ತಗ್ಗಿಸುವ ಕ್ರಮಕ್ಕೆ ಸ್ಟಾರ್‌ಬಕ್ಸ್‌ ಮುಂದಾಯಿತು. ಅಷ್ಟೇ ಅಲ್ಲ, ಘನ ತ್ಯಾಜ್ಯದ ಉತ್ಪಾದನೆಯನ್ನು ೮೧೬.೫ ಮೆಟ್ರಿಕ್‌ ಟನ್ನುಗಳಷ್ಟು ಪ್ರಮಾಣಕ್ಕೆ (೧.೮ ದಶಲಕ್ಷ ಪೌಂಡುಗಳು) ಅದು ತಗ್ಗಿಸುವ ಕ್ರಮ ಕೈಗೊಂಡಿತು. ೨೦೦೮ರಲ್ಲಿ, ನವೀಕರಿಸಬಹುದಾದ ಶಕ್ತಿಯ ಖರೀದಿಗಳಿಗೆ ಸಂಬಂಧಿಸಿದ ೨೫ ಅಗ್ರಗಣ್ಯ ಹಸಿರು ಶಕ್ತಿ ಪಾಲುದಾರರ ಕುರಿತಾದ U.S. ಪರಿಸರೀಯ ಸಂರಕ್ಷಣಾ ಸಂಸ್ಥೆಯ ಪಟ್ಟಿಯಲ್ಲಿ ಸ್ಟಾರ್‌ಬಕ್ಸ್‌ ೧೫ನೇ ಶ್ರೇಯಾಂಕವನ್ನು ಪಡೆಯಿತು.

೨೦೦೮ರ ಅಕ್ಟೋಬರ್‌ನಲ್ಲಿ ದಿ ಸನ್‌ ವೃತ್ತಪತ್ರಿಕೆಯು ವರದಿಯೊಂದನ್ನು ನೀಡುತ್ತಾ, ಸ್ಟಾರ್‌ಬಕ್ಸ್‌‌ ದಿನವೊಂದಕ್ಕೆ ೨೩.೪ ದಶಲಕ್ಷ ಲೀಟರುಗಳಷ್ಟು ನೀರನ್ನು ಹಾಳುಮಾಡುತ್ತಿದೆ ಎಂದು ತಿಳಿಸಿತು; ತನ್ನ ಪ್ರತಿಯೊಂದು ಮಳಿಗೆಗಳಲ್ಲೂ ಇರುವ 'ಮುಳುಗುಹಾಕುವ ದೊಡ್ಡತೊಟ್ಟಿ'ಯಲ್ಲಿ ಪಾತ್ರೆಗಳನ್ನು ಜಾಲಿಸಿ ತೊಳೆಯುವಾಗ ಒಂದು ಕೊಳಾಯಿಯಲ್ಲಿನ ನೀರು ನಿರಂತರವಾಗಿ ಹರಿಯುತ್ತಿರುತ್ತದೆ ಎಂಬುದು ಸದರಿ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿತ್ತು. ಆದರೆ, ಸರ್ಕಾರದ ಸಾರ್ವಜನಿಕ ಆರೋಗ್ಯ ಸಂಹಿತೆಯ ಅನುಸಾರ ಇದು ಅನೇಕವೇಳೆ ಅಗತ್ಯವಾಗಿರುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

೨೦೦೯ರ ಜೂನ್‌ನಲ್ಲಿ, ತನ್ನ ಮಳಿಗೆಗಳಲ್ಲಿ ಆಗುತ್ತಿರುವ ಹೆಚ್ಚುವರಿ ನೀರಿನ ಬಳಕೆಯ ಕುರಿತಾದ ಕಳವಳಗಳಿಗೆ ಪ್ರತಿಕ್ರಿಯೆಯಾಗಿ, ಸ್ಟಾರ್‌ಬಕ್ಸ್‌‌ ತನ್ನ ಮಳಿಗೆಗಳಲ್ಲಿನ ಮುಳುಗುಹಾಕುವ ದೊಡ್ಡತೊಟ್ಟಿಯ ವ್ಯವಸ್ಥೆಯನ್ನು ಮರುಪರಿಷ್ಕರಿಸಿತು. ೨೦೦೯ರ ಸೆಪ್ಟೆಂಬರ್‌ನಲ್ಲಿ, ಕೆನಡಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿರುವ ಕಂಪನಿ-ನಿರ್ವಹಣೆಯ ಸ್ಟಾರ್‌ಬಕ್ಸ್‌‌ ಮಳಿಗೆಗಳು, ಸರ್ಕಾರದ ಆರೋಗ್ಯದ ಮಾನದಂಡಗಳನ್ನು ಈಡೇರಿಸಬಲ್ಲ, ನೀರು ಉಳಿಸುವ ಒಂದು ಹೊಸ ಪರಿಹಾರೋಪಾಯವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದವು. ವಿಭಿನ್ನ ಬಗೆಯ ಹಾಲುಗಳಿಗೆ ಒಂದು ಮೀಸಲಾದ ಚಮಚವನ್ನು ನೀಡಲಾಗುತ್ತಿತ್ತು ಮತ್ತು ಅದು ಇಕ್ಕೈ ಹೂಜಿಯಲ್ಲಿ ಉಳಿದುಕೊಳ್ಳುತ್ತಿತ್ತು; ಜಾಲಿಸಿ ತೊಳೆಯುವಿಕೆಗೆ ಸಂಬಂಧಿಸಿದಂತೆ, ಮುಳುಗುಹಾಕುವ ದೊಡ್ಡತೊಟ್ಟಿಗಳ ಜಾಗವನ್ನು ಅದುಮು ಗುಂಡಿಯ ಮಾಪಕವುಳ್ಳ ಪೀಪಾಯಿ ನಲ್ಲಿಗಳು ಆಕ್ರಮಿಸಿಕೊಂಡವು. ತಿಳಿದುಬಂದಿರುವ ಮಾಹಿತಿಯಂತೆ, ಈ ಕ್ರಮವನ್ನು ಅನುಸರಿಸುವುದರಿಂದಾಗಿ ಪ್ರತಿ ಮಳಿಗೆಯಲ್ಲೂ ದಿನವೊಂದಕ್ಕೆ ೧೫೦ ಗ್ಯಾಲನ್ನುಗಳಷ್ಟು ಪ್ರಮಾಣದವರೆಗೆ ನೀರು ಉಳಿಯುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಸ್ಟಾರ್‌ಬಕ್ಸ್‌‌ 
ಸ್ಟಾರ್‌ಬಕ್ಸ್‌‌ ಬಟ್ಟಲುಗಳಿಂದ ತುಂಬಿ ಸುರಿಯುತ್ತಿರುವ ಒಂದು ತೊಟ್ಟಿ

ಮರುಬಳಕೆ

U.S.ನ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ ಇಲಾಖೆಯು ಮರುಬಳಕೆ ಮಾಡಲ್ಪಟ್ಟ ವಸ್ತುವನ್ನು ಆಹಾರ ಕಟ್ಟುವಿಕೆಯಲ್ಲಿ ಬಳಸುವುದಕ್ಕೆ ಸಂಬಂಧಿಸಿದಂತೆ ಸ್ಟಾರ್‌ಬಕ್ಸ್‌‌ ಕಾಫಿ ಬಟ್ಟಲುಗಳಿಗೆ ಮೊಟ್ಟಮೊದಲ ಬಾರಿಗೆ ಅನುಮೋದನೆಯನ್ನು ನೀಡಿತು. ೨೦೦೫ರಲ್ಲಿ, ನ್ಯಾಷನಲ್‌ ರೀಸೈಕ್ಲಿಂಗ್‌ ಕೊಯಲಿಷನ್‌ ರೀಸೈಕ್ಲಿಂಗ್‌ ವರ್ಕ್ಸ್‌ ಪ್ರಶಸ್ತಿಯನ್ನು ಸ್ಟಾರ್‌ಬಕ್ಸ್‌‌ ಸ್ವೀಕರಿಸಿತು.

ಉತ್ತರ ಅಮೆರಿಕಾದಲ್ಲಿನ ಮಳಿಗೆಗಳಿಗಾಗಿ ಸ್ಟಾರ್‌ಬಕ್ಸ್‌‌ ೨೦೦೭ರಲ್ಲಿ ೨.೫ ಶತಕೋಟಿ ಬಟ್ಟಲುಗಳನ್ನು ಖರೀದಿಸಿತು. ಸ್ಟಾರ್‌ಬಕ್ಸ್‌ನಿಂದ ಬಳಸಲ್ಪಟ್ಟ ಮರುಬಳಕೆಯ ಕಾಗದದ ಬಟ್ಟಲುಗಳ ಪೈಕಿ ೧೦%ನಷ್ಟನ್ನು ಮರುಬಳಕೆ ಮಾಡಲಾಗುವುದಿಲ್ಲ, ಏಕೆಂದರೆ ಬಟ್ಟಲಿನಲ್ಲಿ ಸೋರುವಿಕೆಯಾಗದಂತೆ ತಡೆಯುವ ಪ್ಲಾಸ್ಟಿಕ್‌ ಲೇಪನವು ಸದರಿ ಬಟ್ಟಲು ಮರುಬಳಕೆಗೆ ಒಳಗಾಗದಂತೆಯೂ ತಡೆಯುತ್ತದೆ. ತಂಪಾದ ಪಾನೀಯಗಳಿಗಾಗಿ ಬಳಸಲ್ಪಡುವ ಪ್ಲಾಸ್ಟಿಕ್‌ ಬಟ್ಟಲುಗಳನ್ನು ಬಹುತೇಕ ಪ್ರದೇಶಗಳಲ್ಲಿ ಮರುಬಳಕೆ ಮಾಡಲಾಗುವುದಿಲ್ಲ. #೧ ಪ್ಲಾಸ್ಟಿಕ್‌ (ಪಾಲಿಎಥಿಲೀನ್‌ ಟೆರಿಥ್ಯಾಲೇಟ್‌, PETE) ಬಳಸಿಕೊಂಡು ಸ್ಟಾರ್‌ಬಕ್ಸ್‌‌ ಬಟ್ಟಲುಗಳನ್ನು ಮೂಲತಃ ರೂಪಿಸಲಾಗುತ್ತದೆಯಾದರೂ, ಅವನ್ನು #೫ ಪ್ಲಾಸ್ಟಿಕ್‌ಗೆ (ಪಾಲಿಪ್ರೊಪಿಲೀನ್‌, PP) ಬದಲಾಯಿಸಲಾಯಿತು. #೧ ಪ್ಲಾಸ್ಟಿಕ್‌ನ್ನು U.S.ನ ಬಹುತೇಕ ಪ್ರದೇಶಗಳಲ್ಲಿ ಮರುಬಳಕೆ ಮಾಡಲು ಸಾಧ್ಯವಿದೆ, ಆದರೆ #೫ ಪ್ಲಾಸ್ಟಿಕ್‌ನ್ನು ಮರುಬಳಕೆ ಮಾಡಲಾಗುವುದಿಲ್ಲ. ಬಟ್ಟಲುಗಳ ಒಳಭಾಗಕ್ಕೆ ಲೇಪವನ್ನು ಅಥವಾ ಒಳಪದರವನ್ನು ಕೊಡಲು ಪ್ಲಾಸ್ಟಿಕ್‌ ಬದಲಿಗೆ ಜೈವಿಕ ವಿಘಟನೀಯ ಸಾಮಗ್ರಿಯನ್ನು ಬಳಸುವುದರ ಕುರಿತು ಸ್ಟಾರ್‌ಬಕ್ಸ್‌‌ ಪರಿಗಣಿಸುತ್ತಿದೆ, ಮತ್ತು ಅಸ್ತಿತ್ವದಲ್ಲಿರುವ ಬಟ್ಟಲುಗಳನ್ನು ಮಿಶ್ರಗೊಬ್ಬರ ಮಾಡುವಿಕೆಯಲ್ಲಿ ಬಳಸುವುದರ ಕುರಿತಾಗಿ ಪರೀಕ್ಷಾ ಪ್ರಯೋಗವನ್ನು ನಡೆಸುತ್ತಿದೆ. ಕೆನಡಾದ ಮ್ಯಾನಿಟೋಬಾದ ವಿನ್ನಿಪೆಗ್‌ನಲ್ಲಿರುವ ಮಳಿಗೆಗಳು ಇದಕ್ಕೆ ಅಪವಾದವಾಗಿವೆ; ಇಲ್ಲಿ "ರಿಗ್ಲರ್‌'ಸ್‌ ರ್ಯಾಂಚ್‌" ಎಂದು ಕರೆಯಲ್ಪಡುವ ಸ್ಥಳೀಯ ಕಂಪನಿಯೊಂದಕ್ಕೆ ಕಾಗದ ಬಟ್ಟಲುಗಳನ್ನು ಮರುಬಳಕೆಗೆಂದು ಕಳಿಸಲಾಗುತ್ತದೆ. ಅಲ್ಲಿ ಅವು ಮಿಶ್ರಗೊಬ್ಬರದ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ. ಬಹುತೇಕ ಸ್ಟಾರ್‌ಬಕ್ಸ್‌‌ ಮಳಿಗೆಗಳು ಮರುಬಳಕೆಯ ತೊಟ್ಟಿಗಳನ್ನು ಹೊಂದಿರುವುದಿಲ್ಲ; ಕಂಪನಿ-ಸ್ವಾಮ್ಯದ ಮಳಿಗೆಗಳ ಪೈಕಿ ಕೇವಲ ೧/೩ರಷ್ಟು ಭಾಗದ ಮಳಿಗೆಗಳು ಮಾತ್ರವೇ ೨೦೦೭ರಲ್ಲಿ ಒಂದಷ್ಟು ಸಾಮಗ್ರಿಗಳ ಮರುಬಳಕೆ ಮಾಡಿದ್ದವು; ಆದಾಗ್ಯೂ, ಅಂದಿನಿಂದಲೂ ಸುಧಾರಣೆಗಳು ಮಾಡಲ್ಪಟ್ಟಿವೆ ಹಾಗೂ ಹೆಚ್ಚಿನ ಸಂಖ್ಯೆಯ ಮಳಿಗೆಗಳಲ್ಲಿ ಮರುಬಳಕೆ ತೊಟ್ಟಿಗಳು ವರ್ಧಿಸುತ್ತಿವೆ (ನಿಶ್ಚಿತ ಪ್ರದೇಶಗಳಲ್ಲಿ ಮರುಬಳಕೆಯ ಶೇಖರಿಸುವಿಕೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ಸೌಲಭ್ಯಗಳ ಕೊರತೆಯನ್ನು ಮಳಿಗೆಗಳು ಎದುರಿಸುತ್ತಿರುವುದು, ಪ್ರತಿಯೊಂದು ಮಳಿಗೆಯಲ್ಲಿಯೂ ತೊಟ್ಟಿಗಳನ್ನು ಹೊಂದುವುದಕ್ಕೆ ಸಂಬಂಧಿಸಿದ ಸ್ಟಾರ್‌ಬಕ್ಸ್‌‌ನ ಸಾಮರ್ಥ್ಯಕ್ಕೆ ಅಡ್ಡಿಯುಂಟುಮಾಡುತ್ತಿರುವ ಏಕೈಕ ಅಂಶವಾಗಿದೆ.)[ಸೂಕ್ತ ಉಲ್ಲೇಖನ ಬೇಕು] ‌ನ್ಯಾಷನಲ್‌ ರಿಸೋರ್ಸಸ್‌ ಡಿಫೆನ್ಸ್‌ ಕೌನ್ಸಿಲ್‌‌‌ನ ಅಲೆನ್ ಹೆರ್ಷ್‌ಕೋವಿಟ್ಜ್‌ ಈ ಕುರಿತು ಅಭಿಪ್ರಾಯವನ್ನು ತಿಳಿಸುತ್ತಾ, ಮರುಬಳಕೆ ಮಾಡಲ್ಪಟ್ಟ ಸಾಮಗ್ರಿಯು ಹೆಚ್ಚು ವೆಚ್ಚವನ್ನು ಉಂಟುಮಾಡುತ್ತದೆಯಾದ್ದರಿಂದ, ತಾನು ಕೇವಲ ೧೦%ನಷ್ಟು ಮರುಬಳಕೆ ಮಾಡಲ್ಪಟ್ಟ ಸಾಮಗ್ರಿಯನ್ನು ಆಂಶಿಕವಾಗಿ ಬಳಸುತ್ತಿರುವಾಗಿ ಸ್ಟಾರ್‌ಬಕ್ಸ್‌‌ ಸಮರ್ಥಿಸಿಕೊಂಡಿದೆ ಎಂದು ತಿಳಿಸಿದ.

ಮರುಬಳಕೆ ಮಾಡಬಹುದಾದ ಬಟ್ಟಲನ್ನು ಗ್ರಾಹಕರು ಸ್ವತಃ ತಂದಾಗ, ಸ್ಟಾರ್‌ಬಕ್ಸ್‌ ಅವರಿಗೆ ೧೦ ಸೆಂಟ್‌ಗಳಷ್ಟು ರಿಯಾಯಿತಿಯನ್ನು ನೀಡುತ್ತದೆ, ಹಾಗೂ ಬಳಕೆದಾರರು ಮರುಬಳಕೆ ಮಾಡಿದ ನಂತರದ ನಾರುಪದಾರ್ಥದ ೬೦ ಪ್ರತಿಶತ ಭಾಗದಷ್ಟು ಭಾಗದಿಂದ ಮಾಡಲ್ಪಟ್ಟ ನಿರಿಗೆಗಟ್ಟಿದ ಬಟ್ಟಲಿನ ಸುತ್ತುಕೊಳವೆಗಳನ್ನು ಈಗ ಬಳಸುತ್ತಿದೆ.

ನ್ಯಾಯೋಚಿತ ವ್ಯಾಪಾರ

ಸ್ಟಾರ್‌ಬಕ್ಸ್‌‌ 
ಸ್ಟಾರ್‌ಬಕ್ಸ್‌‌ ಕಾಫಿ ಬೀಜಗಳು

೨೦೦೦ನೇ ಇಸವಿಯಲ್ಲಿ, ನ್ಯಾಯೋಚಿತ ವ್ಯಾಪಾರದ ಉತ್ಪನ್ನಗಳ ಒಂದು ಶ್ರೇಣಿಯನ್ನು ಕಂಪನಿಯು ಪರಿಚಯಿಸಿತು. ೨೦೦೬ರಲ್ಲಿ ಸ್ಟಾರ್‌ಬಕ್ಸ್‌‌ ಖರೀದಿಸಿದ ಸರಿಸುಮಾರು ೧೩೬,೦೦೦ ಮೆಟ್ರಿಕ್‌ ಟನ್ನುಗಳಷ್ಟು (೩೦೦ ದಶಲಕ್ಷ ಪೌಂಡುಗಳು) ಕಾಫಿಯ ಪೈಕಿ ಕೇವಲ ಸುಮಾರು ೬%ನಷ್ಟು ಭಾಗ ಮಾತ್ರವೇ ನ್ಯಾಯೋಚಿತ ವ್ಯಾಪಾರ ಎಂಬುದಾಗಿ ಪ್ರಮಾಣೀಕರಿಸಲ್ಪಟ್ಟಿತು.

ಸ್ಟಾರ್‌ಬಕ್ಸ್‌‌ನ ಅನುಸಾರ, ೨೦೦೪ರ ಹಣಕಾಸಿನ ವರ್ಷದಲ್ಲಿ ಅದು ೨,೧೮೦ ಮೆಟ್ರಿಕ್‌ ಟನ್ನುಗಳಷ್ಟು (೪.೮ ದಶಲಕ್ಷ ಪೌಂಡುಗಳು) ನ್ಯಾಯೋಚಿತ ವ್ಯಾಪಾರದ ಪ್ರಮಾಣಿತ ಕಾಫಿಯನ್ನು ಖರೀದಿಸಿತು ಹಾಗೂ ೨೦೦೫ರಲ್ಲಿ ಇದರ ಪ್ರಮಾಣ ೫,೨೨೦ ಮೆಟ್ರಿಕ್‌ ಟನ್ನುಗಳಷ್ಟಿತ್ತು (೧೧.೫ ದಶಲಕ್ಷ ಪೌಂಡುಗಳು). ಉತ್ತರ ಅಮೆರಿಕಾದಲ್ಲಿ, ನ್ಯಾಯೋಚಿತ ವ್ಯಾಪಾರದ ಪ್ರಮಾಣಿತ ಕಾಫಿಯ ಅತಿದೊಡ್ಡ ಖರೀದಿದಾರ (ಜಾಗತಿಕ ಮಾರುಕಟ್ಟೆಯ ೧೦%ನಷ್ಟು ಭಾಗ) ಎಂಬ ಕೀರ್ತಿಯನ್ನು ಸ್ಟಾರ್‌ಬಕ್ಸ್‌ ದಕ್ಕಿಸಿಕೊಂಡಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ನ್ಯಾಯೋಚಿತ ವ್ಯಾಪಾರದ ಪ್ರಮಾಣಿತ ಕಾಫಿಯ ಏಕೈಕ ಮೂರನೇ-ಪಕ್ಷಸ್ಥ ಪ್ರಮಾಣಕರ್ತನಾದ ಟ್ರಾನ್ಸ್‌ಫೇರ್‌ USA ಎಂಬ ಸಂಸ್ಥೆಯು, ನ್ಯಾಯೋಚಿತ ವ್ಯಾಪಾರ ಮತ್ತು ಕಾಫಿ ಕೃಷಿಕರ ಜೀವನಗಳ ಮೇಲೆ ಸ್ಟಾರ್‌ಬಕ್ಸ್‌ ಉಂಟುಮಾಡಿರುವ ಪ್ರಭಾವವನ್ನು ಗುರುತಿಸಿದೆ:

Since launching {its} FTC coffee line in 2000, Starbucks has undeniably made a significant contribution to family farmers through their rapidly growing FTC coffee volume. By offering FTC coffee in thousands of stores, Starbucks has also given the FTC label greater visibility, helping to raise consumer awareness in the process.

UK ಮತ್ತು ಐರ್ಲೆಂಡ್‌ನಲ್ಲಿ ಮಾರಾಟವಾದ ಎಲ್ಲಾ ಎಸ್‌ಪ್ರೆಸೊ ಹುರಿದ ಕಾಫಿಯು ೧೦೦% ನ್ಯಾಯೋಚಿತ ವ್ಯಾಪಾರದ ಸಾಮಗ್ರಿಯಾಗಿದೆ. ಅಂದರೆ, ಎಸ್‌ಪ್ರೆಸೋ ಶೈಲಿಯ ಎಲ್ಲಾ ಹಾಲುಕಾಫಿಗಳಲ್ಲಿರುವ ಮತ್ತು ನಂತರದ ಕಾಫಿಗಳಲ್ಲಿರುವ ಕಾಫಿಯು ೧೦೦% ನ್ಯಾಯೋಚಿತ ವ್ಯಾಪಾರದ ಎಸ್‌ಪ್ರೆಸೊದಿಂದ ತಯಾರುಮಾಡಲ್ಪಟ್ಟಿದೆ ಎಂದರ್ಥ.

ಸ್ಟಾರ್‌ಬಕ್ಸ್‌‌ ಮಾಡುತ್ತಿರುವ ನ್ಯಾಯೋಚಿತ ವ್ಯಾಪಾರದ ಕಾಫಿಗಳ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂಬುದಾಗಿ ಗ್ಲೋಬಲ್‌ ಎಕ್ಸ್‌ಚೇಂಜ್‌‌ನಂಥ ಗುಂಪುಗಳು ಕರೆ ನೀಡುತ್ತಿವೆ. [ಸೂಕ್ತ ಉಲ್ಲೇಖನ ಬೇಕು]

ನ್ಯಾಯೋಚಿತ ವ್ಯಾಪಾರದ ಪ್ರಮಾಣೀಕರಣದ ಆಚೆಗೆ ತಾನು ತನ್ನೆಲ್ಲಾ ಕಾಫಿಗೆ ಸಂಬಂಧಿಸಿದಂತೆ ಮಾರುಕಟ್ಟೆ ಬೆಲೆಗಳಿಗಿಂತ ಹೆಚ್ಚಿನ ಬೆಲೆಯನ್ನು ಕೊಡುವುದಾಗಿ ಸ್ಟಾರ್‌ಬಕ್ಸ್‌‌ ವಾದಿಸುತ್ತದೆ. ಕಂಪನಿಯ ಅನುಸಾರ, ಉನ್ನತ-ಗುಣಮಟ್ಟದ ಕಾಫಿ ಬೀಜಗಳಿಗೆ ಸಂಬಂಧಿಸಿದಂತೆ ೨೦೦೪ರಲ್ಲಿ ಅದು ಪ್ರತಿ ಪೌಂಡಿಗೆ ಸರಾಸರಿ ೧.೪೨ $ನಷ್ಟು (ಕೆ.ಜಿ.ಗೆ ೨.೬೪ $ನಷ್ಟು) ದರವನ್ನು ಪಾವತಿಸಿತು. ಇದು ೨೦೦೩-೦೪ರಲ್ಲಿ ೦.೫೦$–೦.೬೦$ನಷ್ಟು ಕಡಿಮೆಯಿದ್ದ ವ್ಯಾಪಾರದ ಸರಕಿನ ಬೆಲೆಗಳಿಗೆ ಹೋಲಿಸಿದಾಗ ಇದ್ದ ಬೆಲೆಯಾಗಿದೆ. [ಸೂಕ್ತ ಉಲ್ಲೇಖನ ಬೇಕು]

ಸ್ಟಾರ್‌ಬಕ್ಸ್‌‌ ಮತ್ತು ಇಥಿಯೋಪಿಯಾ ನಡುವಿನ ಸುದೀರ್ಘ-ಕಾಲದ ಒಂದು ವಿವಾದದ ನಂತರ, ಇಥಿಯೋಪಿಯಾದ ಕಾಫಿಗಳನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಸ್ಟಾರ್‌ಬಕ್ಸ್‌‌ ಸಮ್ಮತಿಸಿತು. BBC ನ್ಯೂಸ್‌ನಲ್ಲಿ ಪ್ರಕಟವಾದ ಒಂದು ಲೇಖನವು ಅಭಿಪ್ರಾಯ ಪಡುವ ಪ್ರಕಾರ, ಹರಾರ್‌‌ ಮತ್ತು ಸಿದಾಮೊದಂಥ ಜನಪ್ರಿಯ ಕಾಫಿ ಅಂಕಿತಗಳ ಇಥಿಯೋಪಿಯಾದ ಮಾಲೀಕತ್ವವು, ಒಂದು ವೇಳೆ ಅವು ನೋಂದಾಯಿಸಲ್ಪಡದಿದ್ದರೂ ಸಹ ಅಂಗೀಕರಿಸಲ್ಪಟ್ಟಿದೆ. ಈ ಅಂಗೀಕಾರಕ್ಕಾಗಿ ಇಥಿಯೋಪಿಯಾ ತೀವ್ರವಾಗಿ ಸೆಣಸಾಡಿದ್ದಕ್ಕೆ ಮುಖ್ಯ ಕಾರಣವೆಂದರೆ, ಬಡತನ-ಬಡಿದಿರುವ ತನ್ನ ಕೃಷಿಕರಿಗೆ ಹೆಚ್ಚು ಹಣವನ್ನು ಮಾಡಿಕೊಳ್ಳಲು ಒಂದು ಅವಕಾಶ ನೀಡಬೇಕು ಎಂಬುದು ಅದರ ಇರಾದೆಯಾಗಿತ್ತು. ದುರದೃಷ್ಟವಶಾತ್‌, ಇದು ವಾಸ್ತವ ಸಂಗತಿಯಾಗಿರಲಿಲ್ಲ. ೨೦೦೬ರಲ್ಲಿ, ತನ್ನ ಕಾಫಿಗಾಗಿ ತಾನು ಪ್ರತಿ ಪೌಂಡಿಗೆ ೧.೪೨ $ನಷ್ಟು ದರವನ್ನು ಪಾವತಿಸಿರುವುದಾಗಿ ಸ್ಟಾರ್‌ಬಕ್ಸ್‌ ಹೇಳಿಕೊಂಡಿದೆ. ಆ ಸಮಯದಲ್ಲಿ, ಪ್ರತಿ ಪೌಂಡಿಗೆ ೧.೪೨ $ನಷ್ಟು ದರದಲ್ಲಿ ಸ್ಟಾರ್‌ಬಕ್ಸ್‌ ಖರೀದಿಸಿದ ಕಾಫಿಯು, ಪ್ರತಿ ಪೌಂಡಿಗೆ ೧೦.೯೯ $ನಷ್ಟು ಮಾರಾಟ ಬೆಲೆಯನ್ನು ಹೊಂದಿತ್ತು. ೨೦೧೦ರ ಆಗಸ್ಟ್‌ ವೇಳೆಗೆ ಇದ್ದಂತೆ, ಸ್ಟಾರ್‌ಬಕ್ಸ್‌ ತನ್ನ ವೆಬ್‌ಸೈಟ್‌ ಮೂಲಕ ಕೇವಲ ಒಂದೇ ಒಂದು ಇಥಿಯೋಪಿಯಾದ ಕಾಫಿಯನ್ನು ಮಾರಾಟ ಮಾಡುತ್ತದೆ ಹಾಗೂ ವೆಬ್‌ಸೈಟ್‌ ಪ್ರಕಟಪಡಿಸುವ ಪ್ರಕಾರ ಇದು ಹೊಸ ಕಾಫಿಯಾಗಿದೆ.

ಸ್ಟಾರ್‌ಬಕ್ಸ್‌‌ 
ಸ್ಟಾರ್‌ಬಕ್ಸ್‌‌ ಕಾಫಿ ತಯಾರಿಸುವ ಓರ್ವ ಪರಿಚಾರಕ

ಸಿಬ್ಬಂದಿ ತರಬೇತಿ

'ಕಾಫಿ ಮಾಸ್ಟರ್‌'‌ ಎಂಬ ಶಿಕ್ಷಣ ಕ್ರಮವನ್ನು ಸಂಪೂರ್ಣಗೊಳಿಸಿರುವ ನೌಕರರು "ಕಾಫಿ ಮಾಸ್ಟರ್‌‌" ಎಂಬ ಶೀರ್ಷಿಕೆಯನ್ನು ಪ್ರದರ್ಶಿಸುವ ಕಪ್ಪು ಮುಂಗವಚಗಳನ್ನು (ಏಪ್ರನ್‌ಗಳನ್ನು) ಧರಿಸಿರುತ್ತಾರೆ; ಕಾಫಿಯ ರುಚಿನೋಡುವಿಕೆ, ಕಾಫಿ ಬೆಳೆಯುವ ಪ್ರದೇಶಗಳು, ಕಾಫಿಯ ಹುರಿಯುವಿಕೆ, ಮತ್ತು ಖರೀದಿಸುವಿಕೆಯ (ನ್ಯಾಯೋಚಿತ ವ್ಯಾಪಾರವನ್ನು ಒಳಗೊಂಡಂತೆ) ವಿಷಯಗಳಲ್ಲಿ ಕಾಫಿ ಮಾಸ್ಟರ್‌‌ ಶಿಕ್ಷಣ ಕ್ರಮವು ನೌಕರರಿಗೆ ಶಿಕ್ಷಣ ನೀಡುತ್ತದೆ.

ಈತಾಸ್‌ ನೀರು

ಸ್ಟಾರ್‌ಬಕ್ಸ್‌‌ 
ಈತಾಸ್‌ದ ನೀರಿನ ಒಂದು ಪ್ರದರ್ಶನ

೨೦೦೫ರಲ್ಲಿ ಸ್ಟಾರ್‌ಬಕ್ಸ್‌ ಸ್ವಾಧೀನಪಡಿಸಿಕೊಂಡ ಬಾಟಲಿಯಲ್ಲಿ ತುಂಬಿಸಿದ ನೀರಿನ ಒಂದು ಬ್ರಾಂಡ್‌ ಆಗಿರುವ ಈತಾಸ್‌, ಉತ್ತರ ಅಮೆರಿಕಾದಾದ್ಯಂತ ಇರುವ ತಾಣಗಳಲ್ಲಿ ಮಾರಲ್ಪಡುತ್ತದೆ. "ಹೆಲ್ಪಿಂಗ್‌ ಚಿಲ್ರನ್‌ ಗೆಟ್‌ ಕ್ಲೀನ್‌ ವಾಟರ್‌" ಎಂಬ ಉಲ್ಲೇಖವನ್ನು ಹೊಂದಿರುವ ಎದ್ದುಕಾಣುವ ಹಣೆಪಟ್ಟಿಯನ್ನು ಈತಾಸ್‌ ಬಾಟಲಿಗಳ ಮೇಲೆ ಅಂಟಿಸಲಾಗಿರುತ್ತದೆ; ೧.೮೦ $ ಮೌಲ್ಯದ ಪ್ರತಿ ಬಾಟಲಿಯ ಮಾರಾಟದಿಂದ ಬರುವ ಹಣದಲ್ಲಿ ೦.೦೫ $ನಷ್ಟು ಹಣವು (ಕೆನಡಾದಲ್ಲಾದರೆ ಪ್ರತಿ ಬಾಟಲಿಗೆ ೦.೧೦ $) ಹಿಂದುಳಿದ ಪ್ರದೇಶಗಳಲ್ಲಿನ ಶುದ್ಧ ನೀರಿನ ಯೋಜನೆಗಳಿಗೆ ಧನಸಹಾಯ ಮಾಡಲು ಬಳಸಲ್ಪಡುತ್ತದೆ ಎಂಬ ಅಂಶವನ್ನು ಹಣೆಪಟ್ಟಿಯ ಮೇಲಿನ ಆ ಉಲ್ಲೇಖವು ಸೂಚಿಸುತ್ತದೆ. ಈತಾಸ್‌ ನೀರಿನ ಮಾರಾಟವು, ಶುದ್ಧ ನೀರಿನ ಪ್ರಯತ್ನಗಳಿಗೆ ಸಂಬಂಧಿಸಿದಂತೆ ೬,೨೦೦,೦೦೦ $ಗೂ ಹೆಚ್ಚಿನ ಹಣವನ್ನು ಸಂಗ್ರಹಿಸಿದೆಯಾದರೂ, ಈ ಬ್ರಾಂಡ್‌ ಒಂದು ದತ್ತಿಯಾಗಿಲ್ಲ ಅಥವಾ ಧರ್ಮಕಾರ್ಯದ ಉದ್ದೇಶವನ್ನು ಹೊಂದಿಲ್ಲ. ಈತಾಸ್‌ ಉತ್ಪನ್ನವು ವಾಸ್ತವವಾಗಿ ಲಾಭದ ಉದ್ದೇಶಕ್ಕಾಗಿ ರೂಪಿಸಿರುವ ಒಂದು ಬ್ರಾಂಡ್‌ ಆಗಿರುವಾಗ ಮತ್ತು ಮಾರಾಟ ಬೆಲೆಯ ಬೃಹತ್‌ ಭಾಗವು (೯೭.೨%) ಶುದ್ಧ-ನೀರಿನ ಯೋಜನೆಗಳನ್ನು ಬೆಂಬಲಿಸದಿರುವಾಗ, ಸದರಿ ನೀರಿನ ಬಾಟಲಿಯ ಮೇಲಿನ ಹಣೆಪಟ್ಟಿಯಲ್ಲಿನ ಸಮರ್ಥನೆಯು ಈತಾಸ್‌ ಎಂಬುದು ಪ್ರಧಾನವಾಗಿ ಒಂದು ಧರ್ಮಾರ್ಥದ ಸಂಘಟನೆ ಎಂದು ಭಾವಿಸುವಂತೆ ಬಳಕೆದಾರರನ್ನು ತಪ್ಪುದಾರಿಗೆಳೆದಂತಾಗುತ್ತದೆ ಎಂದು ಟೀಕಾಕಾರರು ವಾದಿಸಿದ್ದಾರೆ. ಈ ಕುರಿತು ಈತಾಸ್‌ನ ಸಂಸ್ಥಾಪಕರು ವಿವರಣೆಯನ್ನು ನೀಡುತ್ತಾ, ತೃತೀಯ-ವಿಶ್ವದಲ್ಲಿನ ಶುದ್ಧ ನೀರಿನ ಕುರಿತಾದ ವಿವಾದಾಂಶಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಇತರ ಬ್ರಾಂಡ್‌ಗಳ ಜಾಗದಲ್ಲಿ ಈತಾಸ್‌ ಬ್ರಾಂಡನ್ನು ಗ್ರಾಹಕರು ಆಯ್ಕೆಮಾಡುವ ಮೂಲಕ, ಶುದ್ಧನೀರಿನ ಕುರಿತಾದ ವಿಷಯಕ್ಕೆ ಬೆಂಬಲಿಸಲು ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರುವ ಬಳಕೆದಾರರಿಗೆ ಒಂದು ಅವಕಾಶವನ್ನು ಕಲ್ಪಿಸುವುದು ಈ ಬ್ರಾಂಡ್‌ನ ಹಿಂದಿರುವ ಉದ್ದೇಶವಾಗಿದೆ ಎಂದಿದ್ದಾರೆ. ಅಂದಿನಿಂದ ಸ್ಟಾರ್‌ಬಕ್ಸ್‌‌ ಅಮೆರಿಕಾದಲ್ಲಿ ಬಳಸಲಾಗುವ ಈತಾಸ್‌ ನೀರಿನ ಬಾಟಲಿಗಳ ಆವೃತ್ತಿಯನ್ನು ಮರುವಿನ್ಯಾಸಗೊಳಿಸಿರುವುದರ ಜೊತೆಗೆ, ಪ್ರತಿ ಬಾಟಲಿಗೆ ದೇಣಿಗೆ ನೀಡಲಾಗುವ ಹಣದ ಮೊತ್ತವನ್ನು ಅದರ ಮೇಲಿನ ವಿವರಣೆಯಲ್ಲಿ ಉಲ್ಲೇಖಿಸುವ ಕ್ರಮಕ್ಕೆ ಮುಂದಾಗಿರುವುದು ಗಮನಾರ್ಹ ಸಂಗತಿಯಾಗಿದೆ.

ಪ್ರಾಡಕ್ಟ್‌‌ ರೆಡ್‌

೨೦೦೮ರ ನವೆಂಬರ್‌ನಲ್ಲಿ ಪ್ರಾಡಕ್ಟ್‌‌ ರೆಡ್‌ ಪದಾರ್ಥಗಳ ಮಾರಾಟವನ್ನು ಸ್ಟಾರ್‌ಬಕ್ಸ್‌‌ ಆರಂಭಿಸಿತು; ಇದರಿಂದಾಗಿ ವರ್ಷವೊಂದಕ್ಕೆ ೩,೮೦೦ ಜನರಿಗಾಗಿ AIDS ಔಷಧಿಯನ್ನು ಪೂರೈಕೆ ಮಾಡುವ ಕ್ರಮವನ್ನು ಅನುವುಗೊಳಿಸಿದಂತಾಯಿತು.

ನ್ಯೂ ಓರ್ಲಿಯಾನ್ಸ್

ಕಟ್ರೀನಾ ಚಂಡಮಾರುತವು ಅಪ್ಪಳಿಸಿದ ಮೂರು ವರ್ಷಗಳ ನಂತರ ೨೦೦೮ರಲ್ಲಿ, ನ್ಯೂ ಓರ್ಲಿಯಾನ್ಸ್‌‌‌ನಲ್ಲಿ ಸ್ವಯಂಪ್ರೇರಿತ ಕಾರ್ಯಸೂಚಿಯೊಂದನ್ನು ಸ್ಟಾರ್‌ಬಕ್ಸ್‌‌ ಪ್ರಕಟಿಸಿತು. ರೀಬಿಲ್ಡಿಂಗ್‌ ಟುಗೆದರ್‌ ನ್ಯೂ ಓರ್ಲಿಯಾನ್ಸ್ ಎಂಬ ಅಭಿಯಾನದ ಅನುಸಾರ, ಮನೆಗಳನ್ನು ನಿರ್ಮಿಸುವುದು, ಮರಗಳನ್ನು ನೆಡುವುದು ಹಾಗೂ ನಗರ ಪ್ರದೇಶ ತೋಟವೊಂದನ್ನು ರೂಪಿಸುವುದು ಇವೇ ಮೊದಲಾದ ಕೆಲಸಗಳನ್ನು ಒಳಗೊಂಡಂತೆ ನಾನಾಬಗೆಯ ಯೋಜನೆಗಳ ಕುರಿತಾಗಿ ನೌಕರರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಓರ್ವ ಸ್ವಯಂಸೇವಕ ಸಂಘಟಕನು ಈ ಕುರಿತು ಮಾತನಾಡುತ್ತಾ, "ಒಂದು ಸಂಸ್ಥೆಯಿಂದ ಈ ಬಗೆಯ ಅಗಾಧತೆಯನ್ನು ನಾನೆಂದಿಗೂ ಈ ಹಿಂದೆ ನೋಡಿರಲಿಲ್ಲ; ನಾನು ಹೇಳುತ್ತಿರುವುದು ಶುದ್ಧಾಂಗ ಸಂಖ್ಯೆಗಳ ಪರಿಭಾಷೆಯಲ್ಲಿದೆ" ಎಂದು ತಿಳಿಸಿದ.

ಸ್ಪಾರ್ಕ್‌ಹೋಪ್‌

೨೦೦೪ರಲ್ಲಿ, UNICEF ಫಿಲಿಪೈನ್ಸ್‌ ಮತ್ತು ಸ್ಟಾರ್‌ಬಕ್ಸ್‌ ಸೇರಿಕೊಂಡು ಸ್ಪಾರ್ಕ್‌ಹೋಪ್ ಎಂಬ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದವು. ಫಿಲಿಪೈನ್ಸ್‌ನಲ್ಲಿನ ಸ್ಟಾರ್‌ಬಕ್ಸ್‌‌ ಮಳಿಗೆಗಳು ಒಂದು ನಿರ್ದಿಷ್ಟ ಸಮುದಾಯದಲ್ಲಿರುವ ಮಕ್ಕಳಿಗಾಗಿ ಆರಂಭಿಕ ಬಾಲ್ಯದ ಪಾಲನೆ ಮತ್ತು ಬೆಳವಣಿಗೆಯ ಸವಲತ್ತುಗಳನ್ನು ಒದಗಿಸುವುದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಇದರ ಅನುಸಾರ, ಪ್ರತಿಯೊಂದು ಮಳಿಗೆಯಲ್ಲಿರುವ ಒಂದು ಪ್ರದೇಶವು ಒಂದು ದೇಣಿಗೆ ಪೆಟ್ಟಿಗೆಯನ್ನು ಹೊಂದಿರುತ್ತದೆ ಹಾಗೂ ದತ್ತು ಸ್ವೀಕರಿಸಲ್ಪಟ್ಟ ಸಮುದಾಯದ ಛಾಯಾಚಿತ್ರಗಳನ್ನು ಹಾಗೂ UNICEFನ ಕಾರ್ಯಕ್ರಮದ ಕುರಿತಾದ ಮಾಹಿತಿಯನ್ನು ಅದು ತೋರಿಸುತ್ತದೆ.

ಟೀಕೆ ಮತ್ತು ವಿವಾದ

ಸ್ಟಾರ್‌ಬಕ್ಸ್‌‌ 
ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿರುವ ಒಂದು ವ್ಯಾಪಾರ ಕೇಂದ್ರದಲ್ಲಿರುವ ಎರಡು ಸ್ಟಾರ್‌ಬಕ್ಸ್‌‌ ಮಳಿಗೆಗಳು

ಮಾರುಕಟ್ಟೆಯ ಕಾರ್ಯತಂತ್ರ

ಮಾರುಕಟ್ಟೆಯಲ್ಲಿ ತಮ್ಮ ಪ್ರಬಲ ಸ್ಥಾನವನ್ನು ವಿಸ್ತರಿಸುವುದಕ್ಕೆ ಮತ್ತು ಕಾಯ್ದುಕೊಂಡು ಹೋಗುವುದಕ್ಕೆ ಸ್ಟಾರ್‌ಬಕ್ಸ್‌ ಬಳಸಿಕೊಂಡಿರುವ ಕೆಲವೊಂದು ವಿಧಾನಗಳಿಗೆ ಸ್ಪರ್ಧಾತ್ಮಕತೆಯ-ವಿರೋಧಿ ಎಂಬ ಹಣೆಪಟ್ಟಿಯನ್ನು ಟೀಕಾಕಾರರು ಅಂಟಿಸಿದ್ದಾರೆ; ಉದ್ದೇಶಪೂರ್ವಕವಾಗಿ ನಷ್ಟದಲ್ಲಿ ನಡೆಸಲ್ಪಡುತ್ತಿರುವ ಪ್ರತಿಸ್ಪರ್ಧಿಗಳ ಗುತ್ತಿಗೆ ಕರಾರುಗಳನ್ನು ಖರೀದಿಸುವುದು, ಮತ್ತು ಒಂದು ಸಣ್ಣ ಭೌಗೋಳಿಕ ಪ್ರದೇಶದಲ್ಲಿನ ಹಲವಾರು ತಾಣಗಳನ್ನು ಒಟ್ಟುಗೂಡಿಸುವುದು (ಅಂದರೆ, ಮಾರುಕಟ್ಟೆಯನ್ನು ಪರ್ಯಾಪ್ತಗೊಳಿಸುವಿಕೆ) ಇವು ಇಂಥ ವಿಧಾನಗಳಲ್ಲಿ ಸೇರಿವೆ. ಉದಾಹರಣೆಗೆ, ಸಿಯಾಟಲ್‌‌ ಕಾಫಿ ಕಂಪನಿಯನ್ನು ಖರೀದಿಸುವುದರೊಂದಿಗೆ UK ಮಾರುಕಟ್ಟೆಯೊಳಗಿನ ತನ್ನ ಆರಂಭಿಕ ವಿಸ್ತರಣೆಯನ್ನು ಸ್ಟಾರ್‌ಬಕ್ಸ್‌‌ ಉತ್ತೇಜಿಸಿತು, ಆದರೆ ಪ್ರಧಾನ ತಾಣಗಳನ್ನು ಪಡೆದುಕೊಳ್ಳುವುದಕ್ಕಾಗಿ ತನ್ನ ಬಂಡವಾಳ ಹಾಗೂ ಪ್ರಭಾವವನ್ನು ಅದು ಬಳಸಿತು; ಅವುಗಳಲ್ಲಿ ಕೆಲವು ಹಣಕಾಸಿನ ನಷ್ಟದಲ್ಲಿ ನಿರ್ವಹಿಸಲ್ಪಡುತ್ತಿದ್ದವು. ಇದು ಸಣ್ಣಗಾತ್ರದ, ಸ್ವತಂತ್ರ ಪ್ರತಿಸ್ಪರ್ಧಿಗಳನ್ನು ಹೊರಗೋಡಿಸುವ ಒಂದು ನ್ಯಾಯಸಮ್ಮತವಲ್ಲದ ಪ್ರಯತ್ನ ಎಂದು ಟೀಕಾಕಾರರು ಸಮರ್ಥಿಸಿದರು; ಅಧಿಕಮೌಲ್ಯದ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೃತಕವಾಗಿ ಏರಿಸಲ್ಪಟ್ಟ ಬೆಲೆಗಳನ್ನು ಪಾವತಿಸಲು ಈ ಸಣ್ಣಗಾತ್ರದ-ಸ್ವತಂತ್ರ ಪ್ರತಿಸ್ಪರ್ಧಿಗಳು ಅಸಮರ್ಥರಾಗಿದ್ದರು. ೨೦೦೦ದ ದಶಕದಲ್ಲಿ, ತನ್ನ "ಪರವಾನಗಿ ಪಡೆದ ಮಳಿಗೆ" ವ್ಯವಸ್ಥೆಯನ್ನು ಸ್ಟಾರ್‌ಬಕ್ಸ್‌‌ ಮಹತ್ತರವಾಗಿ ಹೆಚ್ಚಿಸಿತು. ಸ್ಟಾರ್‌ಬಕ್ಸ್‌‌ ಪರವಾನಗಿಗಳು ಪರವಾನಗಿದಾರನ ಒಟ್ಟು ಆದಾಯದ ೨೦%ಗಿಂತ ಕಡಿಮೆ ಭಾಗವನ್ನು ಕೊಡುಗೆ ನೀಡಿದರೆ ಮಾತ್ರವೇ ಈ ವ್ಯವಸ್ಥೆಯು ಅಂಥ ಪರವಾನಗಿಗಳಿಗೆ ಅನುಮತಿ ನೀಡುವುದು ಅದರ ವಿಶೇಷತೆಯಾಗಿತ್ತು. ಅಷ್ಟೇ ಅಲ್ಲ, ಬ್ರಾಂಡ್‌ ಹೊಂದಿರುವ ಸಾರ್ವಜನಿಕ ಕಲ್ಪನೆಯನ್ನು ದುರ್ಬಲಗೊಳಿಸದಂತಾಗಲು‌, ಇಂಥ ಪರವಾನಿಗೆಗಳು ಇತರ ಇತರ ಮಳಿಗೆಗಳ ಒಳಭಾಗದಲ್ಲಿ ಅಥವಾ ಸೀಮಿತವಾದ ಅಥವಾ ಪರಿಮಿತಗೊಳಿಸಲ್ಪಟ್ಟ ಸಂಪರ್ಕದ ಸ್ಥಳಾವಕಾಶಗಳಲ್ಲಿ ಇರಬೇಕಾಗಿತ್ತು. ಪರವಾನಗಿಯ ಒಡಂಬಡಿಕೆಗಳು ಪ್ರಮಾಣದಲ್ಲಿ ಅಪರೂಪವಾಗಿವೆ ಮತ್ತು ಫಾರ್ಚೂನ್‌ ೧೦೦೦ ಮಳಿಗೆಗಳು ಅಥವಾ ಅಂಥ ಗಾತ್ರದ ಸರಣಿಯ ಮಳಿಗೆಗಳೊಂದಿಗೆ ಮಾತ್ರವೇ ಸಾಮಾನ್ಯವಾಗಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಒಂದೇ ವ್ಯಾಪಾರ ಸ್ಥಳದಲ್ಲಿ ೨ ಅಥವಾ ಹೆಚ್ಚು ಸ್ಟಾರ್‌ಬಕ್ಸ್‌‌ ಕೆಫೆಗಳ ಭ್ರಮೆಯನ್ನು ಪರವಾನಗಿ ಪಡೆದ ಮಳಿಗೆ ವ್ಯವಸ್ಥೆಯು ಸೃಷ್ಟಿಸಬಲ್ಲದಾಗಿರುತ್ತದೆ; ಇಂಥ ನಿದರ್ಶನದಲ್ಲಿ, ಒಂದು ಕೆಫೆಯು ಕಂಪನಿ ಸ್ವಾಮ್ಯದ ಸ್ವತಂತ್ರವಾದ ಕೆಫೆಯಾಗಿದ್ದರೆ, ಇತರವುಗಳು ಪರವಾನಗಿ ಪಡೆದವುಗಳಾಗಿರುತ್ತವೆ. ಪರವಾನಗಿ ಪಡೆದ ಮಳಿಗೆಗಳ ಸೇವಾವಿವರಗಳು ಒಂದೇ ರೀತಿಯಲ್ಲಿರಬಹುದು ಅಥವಾ ಒಪ್ಪವಾಗಿಸಲಾದ ಸ್ವರೂಪವನ್ನು ಹೊಂದಿರಬಹುದು ಅಥವಾ ಅವು ಕೆಫೆಗಳ ಅಗತ್ಯಕ್ಕನುಸಾರವಾಗಿ ಮಾರ್ಪಡಿಸಲಾದ ರೂಪಾಂತರಗಳಾಗಿರಬಹುದು, ಅಥವಾ ಸ್ಟಾರ್‌ಬಕ್ಸ್‌‌ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕಾಗಿ ಹುಟ್ಟಿಕೊಂಡ ಸ್ವತಂತ್ರ ಕೆಫೆಗಳಾಗಿ ಅವು ನೆಲೆಗೊಂಡಿರಬಹುದು (ಉದಾಹರಣೆಗೆ, ಬಾರ್ನ್ಸ್‌ & ನೋಬಲ್‌).

ಕಾರ್ಮಿಕ ವಿವಾದಗಳು

ಸ್ಟಾರ್‌ಬಕ್ಸ್‌‌ 
ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ 2007ರಲ್ಲಿ ಸ್ಟಾರ್‌ಬಕ್ಸ್‌-ವಿರೋಧಿ ಪ್ರತಿಭಟನೆಯೊಂದರ ನೇತೃತ್ವ ವಹಿಸಿರುವ ರೆವರೆಂಡ್‌ ಬಿಲ್ಲಿ

ಏಳು ಮಳಿಗೆಗಳಲ್ಲಿನ ಸ್ಟಾರ್‌ಬಕ್ಸ್‌‌ ಕಾರ್ಯಕರ್ತರು ಇಂಡಸ್ಟ್ರಿಯಲ್‌ ವರ್ಕರ್ಸ್‌ ಆಫ್‌ ದಿ ವರ್ಲ್ಡ್‌‌‌‌ನ್ನು (IWW) ಸ್ಟಾರ್‌ಬಕ್ಸ್‌‌ ಕಾರ್ಯಕರ್ತರ ಸಂಘವಾಗಿ ೨೦೦೪ರಿಂದಲೂ ಸೇರಿಕೊಂಡಿದ್ದಾರೆ.

ಸ್ಟಾರ್‌ಬಕ್ಸ್‌‌ ಸಂಘದ ಪತ್ರಿಕಾ ಪ್ರಕಟಣೆಯೊಂದರ ಅನುಸಾರ, ಅಂದಿನಿಂದ ಮೊದಲ್ಗೊಂಡು ಸದರಿ ಆಂದೋಲನವು ಹುಟ್ಟಿಕೊಂಡ ತಾಣವಾದ ನ್ಯೂಯಾರ್ಕ್‌ ನಗರ ಮಾತ್ರವೇ ಅಲ್ಲದೇ, ಚಿಕಾಗೊ ಮತ್ತು ಮೇರಿಲ್ಯಾಂಡ್‌ಗಳಿಗೂ ಸಂಘದ ಸದಸ್ಯತ್ವವು ವಿಸ್ತರಿಸಲು ಪ್ರಾರಂಭಿಸಿದೆ. ೨೦೦೬ರ ಮಾರ್ಚ್‌ ೭ರಂದು, ರಾಷ್ಟ್ರೀಯ ಕಾರ್ಮಿಕ ಸಂಬಂಧಗಳ ಮಂಡಳಿಯ ಫೈಸಲಾತಿಯೊಂದಕ್ಕೆ IWW ಮತ್ತು ಸ್ಟಾರ್‌ಬಕ್ಸ್‌‌ ಸಮ್ಮತಿಸಿದವು; ಈ ಇತ್ಯರ್ಥದಲ್ಲಿ ಸ್ಟಾರ್‌ಬಕ್ಸ್‌‌ನ ಮೂವರು ಕೆಲಸಗಾರರಿಗೆ ಸುಮಾರು ೨,೦೦೦ US$ನಷ್ಟು ಮೊತ್ತವನ್ನು ಬಾಕಿ ಸಂಬಳಗಳ ಸ್ವರೂಪದಲ್ಲಿ ನೀಡಲಾಯಿತು ಹಾಗೂ ತೆಗೆದುಹಾಕಲ್ಪಟ್ಟ ಇಬ್ಬರು ನೌಕರರಿಗೆ ಪುನಃ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆಯನ್ನು ನೀಡಲಾಯಿತು. ಸ್ಟಾರ್‌ಬಕ್ಸ್‌‌ ಸಂಘದ ಅನುಸಾರ, ೨೦೦೬ರ ನವೆಂಬರ್‌ ೨೪ರಂದು ವಿಶ್ವದ ಅನೇಕ ದೇಶಗಳಲ್ಲಿನ ೫೦ಕ್ಕೂ ಹೆಚ್ಚಿನ ನಗರಗಳಲ್ಲಿರುವ ಸ್ಟಾರ್‌ಬಕ್ಸ್‌‌ ತಾಣಗಳಲ್ಲಿ IWW ಸದಸ್ಯರು ಧರಣಿ ನಡೆಸಿದರು; ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಮತ್ತು UK ಇವೇ ಮೊದಲಾದ ದೇಶಗಳಲ್ಲದೆ, ನ್ಯೂಯಾರ್ಕ್‌, ಚಿಕಾಗೊ, ಮಿನ್ನೆಯಾಪೊಲಿಸ್‌ ಮತ್ತು ಸ್ಯಾನ್‌ ಫ್ರಾನ್ಸಿಸ್ಕೊ ಮೊದಲಾದವನ್ನು ಒಳಗೊಂಡ U.S. ನಗರಗಳಲ್ಲಿನ ಸ್ಟಾರ್‌ಬಕ್ಸ್‌ ತಾಣಗಳ ಬಳಿ ಸದರಿ ಧರಣಿಯನ್ನು ನಡೆಸಲಾಯಿತು; ಸ್ಟಾರ್‌ಬಕ್ಸ್‌‌ ಕೆಲಸಗಾರರ ಸಂಘದ ಐವರು ಸಂಘಟಕರನ್ನು ವಜಾಗೊಳಿಸಿದ್ದಕ್ಕೆ ಪ್ರತಿಭಟಿಸಲು ಹಾಗೂ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಹಕ್ಕೊತ್ತಾಯವನ್ನು ಸಲ್ಲಿಸಲು ಈ ಧರಣಿಯನ್ನು ನಡೆಸಲಾಯಿತು.

ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌, ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ನೆಲೆಗೊಂಡಿರುವ ಸ್ಟಾರ್‌ಬಕ್ಸ್‌ನ ಒಂದಷ್ಟು ಕಾಫಿ ತಯಾರಕ ಪರಿಚಾರಕರು ವೈವಿಧ್ಯಮಯ ಸಂಘಗಳಿಗೆ ಸೇರ್ಪಡೆಗೊಂಡಿದ್ದಾರೆ.

ವಾಷಿಂಗ್ಟನ್‌ನ ಕೆಂಟ್‌ ಎಂಬಲ್ಲಿರುವ ತನ್ನ ಕಾಫಿಬೀಜ ಹುರಿಯುವ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಂದಿ ನೌಕರರಿಗೆ ಸ್ಟಾರ್‌ಬಕ್ಸ್‌ ೨೦೦೫ರಲ್ಲಿ ೧೬೫,೦೦೦ US$ನಷ್ಟು ಮೊತ್ತವನ್ನು ಪಾವತಿಸಿತು; ಈ ನೌಕರರು ಸಂಘದ ಪರವಾಗಿ ಇದ್ದುದಕ್ಕೆ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲಾಯಿತು ಎಂಬ ಆಪಾದನೆಗಳನ್ನು ಇತ್ಯರ್ಥಮಾಡಿಕೊಳ್ಳಲು ಪಾವತಿಸಿದ ಮೊತ್ತ ಇದಾಗಿತ್ತು. ಆ ಸಮಯದಲ್ಲಿ, ಕಾರ್ಯನಿರ್ವಾಹಕ ಎಂಜಿನಿಯರುಗಳ ಅಂತರರಾಷ್ಟ್ರೀಯ ಸಂಘದಿಂದ ಘಟಕದ ಕಾರ್ಯಕರ್ತರು ಪ್ರತಿನಿಧಿಸಲ್ಪಟ್ಟಿದ್ದರು. ಫೈಸಲಾತಿಯಲ್ಲಿ ಯಾವುದೇ ತಪ್ಪುಮಾಡದಿರಲು ಸ್ಟಾರ್‌ಬಕ್ಸ್‌‌ ಒಪ್ಪಿಕೊಂಡಿತು.

೨೦೦೫ರ ನವೆಂಬರ್‌ ೨೩ರಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌‌ನಲ್ಲಿ ಸ್ಟಾರ್‌ಬಕ್ಸ್‌‌ ಮುಷ್ಕರವೊಂದು ಸಂಭವಿಸಿತು. ಯುನೈಟ್‌ ಯೂನಿಯನ್‌ ವತಿಯಿಂದ ಸಂಘಟಿಸಲ್ಪಟ್ಟಿದ್ದ ಈ ಮುಷ್ಕರದಲ್ಲಿ, ಅನುಕೂಲಕರವಾದ ಕಾರ್ಯನಿರ್ವಹಣೆಯ ಅವಧಿಗಳು, ಪ್ರತಿ ಗಂಟೆಗೆ ೧೨ NZ$ನಷ್ಟಿರುವ ಒಂದು ಕನಿಷ್ಟ ವೇತನ, ಹಾಗೂ ಯುವಕ ದರಗಳ ರದ್ದತಿ ಮೊದಲಾದವನ್ನು ಕೆಲಸಗಾರರು ಬಯಸಿದ್ದರು. ೨೦೦೬ರಲ್ಲಿ ಸಂಘದ ಬೇಡಿಕೆಯನ್ನು ಕಂಪನಿಯು ಇತ್ಯರ್ಥಗೊಳಿಸಿತು. ಇದರ ಫಲವಾಗಿ ವೇತನದಲ್ಲಿನ ಹೆಚ್ಚಳಗಳು, ಹೆಚ್ಚಿಸಲ್ಪಟ್ಟ ಸುಭದ್ರತಾ ಕಾರ್ಯಾವಧಿಗಳು, ಹಾಗೂ ಯುವಕ ದರಗಳಲ್ಲಿನ ಒಂದು ಸುಧಾರಣೆ ಇವು ಕಂಡುಬಂದವು.

ಸ್ಟಾರ್‌ಬಕ್ಸ್‌‌ 
ಮ್ಯಾಸಚೂಸೆಟ್ಸ್‌ನ ಬಾಸ್ಟನ್‌ನಲ್ಲಿನ ಫೈನಾನ್ಷಿಯಲ್‌ ಡಿಸ್ಟ್ರಿಕ್ಟ್‌ನಲ್ಲಿರುವ ಸ್ಟಾರ್‌ಬಕ್ಸ್‌

ಕ್ಯಾಲಿಫೋರ್ನಿಯಾದ ವರ್ಗ ಕ್ರಮದ ಮೊಕದ್ದಮೆಯೊಂದರಲ್ಲಿ, ಹಿಂಪಾವತಿಯ ಪರಿಹಾರದ ರೂಪದಲ್ಲಿ ೧೦೦ ದಶಲಕ್ಷ US$ಗೂ ಹೆಚ್ಚಿನ ಮೊತ್ತವನ್ನು ಕಾಫಿ ತಯಾರಕ ಪರಿಚಾರಕರಿಗೆ‌ ಪಾವತಿಸುವಂತೆ ೨೦೦೮ರ ಮಾರ್ಚ್‌ನಲ್ಲಿ ಸ್ಟಾರ್‌ಬಕ್ಸ್‌‌ಗೆ ಆದೇಶಿಸಲಾಯಿತು; ಕಾಫಿ ತಯಾರಕ ಪರಿಚಾರಕರು ಚಾಲನೆ ನೀಡಿದ್ದ ಈ ಮೊಕದ್ದಮೆಯಲ್ಲಿ, ಟಿಪ್‌‌ ಹಣದ ಒಂದು ಭಾಗವನ್ನು ಪಾಳಿ-ಮೇಲ್ವಿಚಾರಕರಿಗೆ ನೀಡಬೇಕೆಂಬುದು ಸಂಸ್ಥಾನದ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂಬ ಆರೋಪಗಳನ್ನು ಸದರಿ ಪರಿಚಾರಕರು ಮಾಡಿದ್ದರು. ಈ ನಿಟ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಕಂಪನಿಯು ಯೋಜಿಸುತ್ತಿದೆ. ಇದೇ ರೀತಿಯಲ್ಲಿ, ಮ್ಯಾಸಚೂಸೆಟ್ಸ್‌‌ನ ಚೆಸ್ಟ್‌ನಟ್‌ ಹಿಲ್ ಎಂಬಲ್ಲಿನ ೧೮ ವರ್ಷ-ವಯಸ್ಸಿನ ಓರ್ವ ಕಾಫಿ ತಯಾರಕ ಪರಿಚಾರಕನು ಟಿಪ್‌ ಹಣದ ಸಲ್ಲಿಕೆಯ ಕಾರ್ಯನೀತಿಗೆ ಸಂಬಂಧಿಸಿದಂತೆ ಮತ್ತೊಂದು ಮೊಕದ್ದಮೆಯನ್ನು ಸಲ್ಲಿಸಿದ್ದಾನೆ. ಟಿಪ್‌ ಹಣದ ಸಲ್ಲಿಕೆಯಲ್ಲಿ ವ್ಯವಸ್ಥಾಪಕರಿಗೆ ಒಂದು ಭಾಗವು ಸಿಗುವಂತಿಲ್ಲ ಎಂಬುದಾಗಿ ಮ್ಯಾಸಚೂಸೆಟ್ಸ್‌ ಕಾನೂನು ಕೂಡಾ ಹೇಳುತ್ತದೆ. ೨೦೦೮ರ ಮಾರ್ಚ್‌ ೨೭ರಂದು ಮಿನ್ನೆಸೋಟಾದಲ್ಲಿ ಇದೇ ರೀತಿಯ ಮೊಕದ್ದಮೆಯೊಂದು ಸಲ್ಲಿಸಲ್ಪಟ್ಟಿತು.

ಯೋಜನಾ ಅನುಮತಿಯಿಲ್ಲದೆ ತೆರೆಯುವಿಕೆ

ಬಳಕೆಯಲ್ಲಿದ್ದ ಆವರಣವೊಂದನ್ನು ಒಂದು ಉಪಾಹಾರ ಗೃಹವಾಗಿ ಬದಲಾಯಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಯೋಜನಾ ಅನುಮತಿಯಿಲ್ಲದೆಯೇ ಯುನೈಟೆಡ್‌ ಕಿಂಗ್‌ಡಂನಲ್ಲಿನ ಚಿಲ್ಲರೆ ವ್ಯಾಪಾರದ ವಲಯದಲ್ಲಿ ಹಲವಾರು ಮಳಿಗೆಗಳನ್ನು ತೆರೆಯುತ್ತಿರುವುದಕ್ಕಾಗಿ, ಸ್ಟಾರ್‌ಬಕ್ಸ್‌ ಮೇಲೆ ಸ್ಥಳೀಯ ಪ್ರಾಧಿಕಾರಗಳು ಆಪಾದನೆಗಳನ್ನು ಹೊರಿಸಿವೆ. ಸ್ಟಾರ್‌ಬಕ್ಸ್‌ ಈ ಕುರಿತು ವಾದಿಸುತ್ತಾ, "ಪ್ರಸಕ್ತ ಯೋಜನಾ ಕಾನೂನಿನ ಅಡಿಯಲ್ಲಿ, ಕಾಫಿ ಮಳಿಗೆಗಳು ಎಂಬ ಯಾವುದೇ ಅಧಿಕೃತ ವರ್ಗೀಕರಣವಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಪ್ರಾಧಿಕಾರಗಳು ವಿಭಿನ್ನ ಮಾರ್ಗಗಳಲ್ಲಿ ಮಾರ್ಗದರ್ಶನವನ್ನು ನೀಡುವುದರಿಂದ, ಸ್ಟಾರ್‌ಬಕ್ಸ್‌‌ ಕಷ್ಟಕರವಾದ ಸನ್ನಿವೇಶವನ್ನು ಎದುರಿಸಬೇಕಾಗಿ ಬರುತ್ತಿದೆ. ಕೆಲವೊಂದು ನಿದರ್ಶನಗಳಲ್ಲಿ, ಕಾಫಿ ಮಳಿಗೆಗಳು A೧ ಅನುಮತಿಯ ಅಡಿಯಲ್ಲಿ ಕಾರ್ಯನಿರ್ವಹಿಸಿದರೆ, ಇನ್ನು ಕೆಲವು ಸಮ್ಮಿಶ್ರವಾಗಿ A೧/A೩ ಅನುಮತಿಯ ಅಡಿಯಲ್ಲಿ ಮತ್ತು ಇನ್ನು ಕೆಲವು A೩ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ" ಎಂದು ಹೇಳಿತು.

೨೦೦೮ರ ಮೇ ತಿಂಗಳಿನಲ್ಲಿ, ಸ್ಥಳೀಯ ಯೋಜನಾ ಪ್ರಾಧಿಕಾರವಾದ ಬ್ರೈಟನ್‌ ಮತ್ತು ಹೋವ್‌ ನಗರ ಪರಿಷತ್ತಿನ ವತಿಯಿಂದ ಅನುಮತಿಯು ನಿರಾಕರಿಸಲ್ಪಟ್ಟ ಹೊರತಾಗಿಯೂ, ಇಂಗ್ಲೆಂಡ್‌ನ ಬ್ರೈಟನ್‌‌ನ ಕೆಂಪ್‌ಟೌನ್‌‌‌ನಲ್ಲಿನ ಸೇಂಟ್‌ ಜೇಮ್ಸ್‌‌ ಸ್ಟ್ರೀಟ್‌ನಲ್ಲಿ ಸ್ಟಾರ್‌ಬಕ್ಸ್‌ನ ಶಾಖೆಯೊಂದು ಸಂಪೂರ್ಣಗೊಂಡಿತು; ಸದರಿ ಬೀದಿಯಲ್ಲಿ ಅಷ್ಟುಹೊತ್ತಿಗಾಗಲೇ ಮಿತಿಮೀರಿದ ಸಂಖ್ಯೆಯಲ್ಲಿ ಕಾಫಿ ಮಳಿಗೆಗಳಿದ್ದುದನ್ನು ಸಮರ್ಥಿಸಿದ್ದ ಸದರಿ ಪರಿಷತ್ತು ಅನುಮತಿಯನ್ನು ನಿರಾಕರಿಸಿತ್ತು. ತನ್ನದು ಕೇವಲ ಕಾಫಿ, ಪಾನಪಾತ್ರೆಗಳು ಮತ್ತು ಸ್ಯಾಂಡ್‌ವಿಚ್‌ಗಳನ್ನು ಮಾರಾಟ ಮಾಡುವ ಒಂದು ಚಿಲ್ಲರೆ ವ್ಯಾಪಾರ ಮಳಿಗೆಯಷ್ಟೇ ಎಂದು ಸಮರ್ಥಿಸುವ ಮೂಲಕ, ತೀರ್ಪಿನ ಪುನರ್‌ಪರಿಶೀಲನೆಗಾಗಿ ಸ್ಟಾರ್‌ಬಕ್ಸ್‌‌ ಮೇಲ್ಮನವಿಯನ್ನು ಸಲ್ಲಿಸಿತು ಮತ್ತು ಆರು ತಿಂಗಳ ಅವಧಿಯ ಒಂದು ವಿಸ್ತರಣೆಯನ್ನು ಕೋರಿತು. ಆದರೆ ಚಿಲ್ಲರೆ ವ್ಯಾಪಾರ ಮಳಿಗೆಯೊಂದಕ್ಕೆ ಸಂಬಂಧಿಸಿದ ಯೋಜನಾ ಕಟ್ಟುಪಾಡುಗಳೊಂದಿಗೆ ಹೊಂದಿಕೊಳ್ಳುವುದಕ್ಕೋಸ್ಕರ ಮಳಿಗೆಯ ಆವರಣದಿಂದ ಎಲ್ಲಾ ಮೇಜುಗಳು ಮತ್ತು ಕುರ್ಚಿಗಳನ್ನು ತೆಗೆದುಹಾಕುವಂತೆ ಸ್ಟಾರ್‌ಬಕ್ಸ್‌ಗೆ ಪರಿಷತ್ತು ಆದೇಶಿಸಿತು. ಮಳಿಗೆಯ ವಿರುದ್ಧವಾಗಿ ರೂಪಿಸಲಾಗಿದ್ದ ಮನವಿಯೊಂದಕ್ಕೆ ೨೫೦೦ ನಿವಾಸಿಗಳು ಸಹಿಹಾಕಿದರಾದರೂ, ೨೦೦೯ರ ಜೂನ್‌ನಲ್ಲಿ ನಡೆದ ಸಾರ್ವಜನಿಕ ವಿಚಾರಣೆಯೊಂದರ ನಂತರ ಸರ್ಕಾರಿ ಪರಿಶೀಲನಾಧಿಕಾರಿಯೊಬ್ಬನು ಮಳಿಗೆಯು ಉಳಿದುಕೊಳ್ಳುವುದಕ್ಕೆ ಅನುಮತಿ ನೀಡಿದ.

ಯೋಜನಾ ಅನುಮತಿಯಿಲ್ಲದೆಯೇ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯವರೆಗೆ ತೆರೆದಿದ್ದ ಹೆರ್ಟ್‌ಫೋರ್ಡ್‌ನಲ್ಲಿನ ಸ್ಟಾರ್‌ಬಕ್ಸ್‌ ಮಳಿಗೆಯೊಂದು ೨೦೦೯ರ ಏಪ್ರಿಲ್‌ನಲ್ಲಿ ತನ್ನ ಮನವಿಗೆ ಜಯವನ್ನು ದಕ್ಕಿಸಿಕೊಂಡಿತು. ಎಡಿನ್‌ಬರ್ಗ್‌ನಲ್ಲಿನ ಎರಡು ಮಳಿಗೆಗಳು, ಮ್ಯಾಂಚೆಸ್ಟರ್‌ನಲ್ಲಿನ ಒಂದು ಮಳಿಗೆ, ಕಾರ್ಡಿಫ್‌ನಲ್ಲಿನ ಒಂದು ಮಳಿಗೆ, ಪಿನ್ನರ್‌‌ ಮತ್ತು ಹ್ಯಾರೋದಲ್ಲಿನ ಒಂದು ಮಳಿಗೆಗಳು ಕೂಡಾ ಯೋಜನಾ ಅನುಮತಿಯಿಲ್ಲದೆ ಪ್ರಾರಂಭವಾಗಿದ್ದ ಮಳಿಗೆಗಳಾಗಿದ್ದವು. ೨೦೦೭ರಲ್ಲಿ ಪ್ರಾರಂಭವಾಗಿದ್ದ ಪಿನ್ನರ್‌‌ ಕೆಫೆಯು, ತೆರೆಯುವಿಕೆಗೆ ತಡೆಯಾಜ್ಞೆ ತಂದಿದ್ದ ಮನವಿಯೊಂದನ್ನು ೨೦೧೦ರಲ್ಲಿ ಗೆದ್ದಿತು. ಲೆವಿಶಾಮ್‌‌ನ ಬ್ಲ್ಯಾಕ್‌ಹೀತ್ ಎಂಬಲ್ಲಿದ್ದ ಒಂದು ಮಳಿಗೆಯೂ ಸಹ ತನಗೆ ನೀಡಿದ್ದ ಪರವಾನಗಿಯ ಉಲ್ಲಂಘನೆಗಾಗಿ ೨೦೦೨ರಲ್ಲಿ ತನಿಖೆಗೀಡಾಗಿತ್ತು; ಕೇವಲ ನಾಲ್ಕು ಆಸನಗಳಿಗಾಗಿ ಮಾತ್ರವೇ ಅದಕ್ಕೆ ಒಂದು ಪರವಾನಗಿ ಸಿಕ್ಕಿದ್ದರೂ ಅದು ಒಂದು ಉಪಾಹಾರ ಗೃಹವಾಗಿ ಕಾರ್ಯನಿರ್ವಹಿಸುತ್ತಿದ್ದುದೇ ಉಲ್ಲಂಘನೆ ಎನಿಸಿಕೊಂಡಿತ್ತು ಹಾಗೂ ಸದರಿ ಮಳಿಗೆಗೆ ಅಲ್ಲಿಂದ ತಿಂಡಿಯನ್ನು ತೆಗೆದುಕೊಂಡು ತಿನ್ನಲು ಬೇರೆಡೆಗೆ ಹೋಗುವ ಆಯ್ಕೆಯನ್ನಷ್ಟೇ ಸೀಮಿತಗೊಳಿಸಲಾಗಿತ್ತು. ಸಂರಕ್ಷಿತ ಪ್ರದೇಶ ಎಂದು ಕರೆಯಲ್ಪಡುವ ವಲಯವೊಂದರಲ್ಲಿ ಯಾವುದೇ ದೊಡ್ಡ ಮಳಿಗೆಯ ಸರಣಿಗಳು ಪ್ರಾರಂಭವಾಗುವುದನ್ನು ವಿರೋಧಿಸಿದ ಸ್ಥಳೀಯ ಸಮುದಾಯದ ಸದಸ್ಯರಿಂದ ಒಂದು ಪರಿಗಣನಾರ್ಹ ಪ್ರತಿಕ್ರಿಯೆಯು ಹೊರಹೊಮ್ಮಿತು. ನ್ಯಾಯಾಲಯದ ಪ್ರಕರಣವಾದ ನಂತರದ ೮ ವರ್ಷಗಳಾಗಿರುವ ಇಂದಿನವರೆಗೆ, ತಿಂಡಿಯನ್ನು ಬೇರೆಡೆಗೆ ಕಟ್ಟಿಕೊಡುವ ಒಂದು ಮಳಿಗೆಯಾಗಿಯೇ ಸ್ಟಾರ್‌ಬಕ್ಸ್‌ ಈಗಲೂ ಕಾರ್ಯಾಚರಣೆ ನಡೆಸುತ್ತಿದೆ.

ಕೆನಡಾ ಮತ್ತು ಯುನೈಟೆಡ್‌ ಕಿಂಗ್‌ಡಂನಲ್ಲಿನ ಸ್ಟಾರ್‌ಬಕ್ಸ್‌ ವಿರುದ್ಧದ ಹಿಂಸಾಚಾರ

A store on Piccadilly with its windows boarded up after being smashed by protesters
A damaged front window of a Starbucks coffee shop in Toronto

೨೦೦೯ರ ಜನವರಿ ೧೨ರಂದು, ಲಂಡನ್‌ನಲ್ಲಿನ ವೈಟ್‌ಚಾಪೆಲ್‌ ರಸ್ತೆಯಲ್ಲಿರುವ ಸ್ಟಾರ್‌ಬಕ್ಸ್‌‌ ಮಳಿಗೆಯೊಂದು ಪ್ಯಾಲಿಸ್ಟೈನಿನ-ಪರವಾದ ಪ್ರತಿಭಟನೆಕಾರರಿಂದ ಉಂಟಾದ ವಿಧ್ವಂಸಕತೆಗೆ ಗುರಿಯಾಯಿತು; ಈ ಪ್ರತಿಭಟನೆಕಾರರು ಕಿಟಕಿಗಳನ್ನು ಮುರಿದುಹಾಕಿದ್ದಲ್ಲದೆ, ದೊಂಬಿಯ ನಿಗ್ರಹಕ್ಕೆ ಬಂದ ಆರಕ್ಷಕರೊಂದಿಗೆ ನಡೆಸಿದ ಘರ್ಷಣೆಗಳ ನಂತರ ಮಳಿಗೆಯ ಅಳವಡಿಕೆಗಳು ಮತ್ತು ಸಲಕರಣೆಗಳನ್ನು ಕಿತ್ತುಹಾಕಿದರು ಎಂಬುದಾಗಿ ತಿಳಿದುಬಂತು. ಮಾರನೆಯ ದಿನದ ಮುಂಜಾನೆ ಬೆಳ್ಳಂಬೆಳಗ್ಗೆಯೇ, ತಾತ್ಕಾಲಿಕ ವ್ಯವಸ್ಥೆಯ ಒಂದು ಶಂಕಿತ ಬೆಂಕಿಬಾಂಬು ಮಳಿಗೆಯ ಆವರಣದೊಳಗೆ ಬೀಸಿ ಎಸೆಯಲ್ಪಟ್ಟಿದ್ದರಿಂದ ಮತ್ತಷ್ಟು ಹಾನಿಯುಂಟಾಯಿತು.

೨೦೦೯ರ ಜನವರಿ ೧೭ರಂದು, ಮಧ್ಯ ಲಂಡನ್‌ನ ಟ್ರಾಫಲ್ಗರ್‌‌ ಚೌಕದಲ್ಲಿ ಸ್ಟಾಪ್‌ ದಿ ವಾರ್‌ ಕೊಯಲಿಷನ್‌ ಎಂಬ ಸಂಘಟನೆಯ ವತಿಯಿಂದ ಗಾಜಾ-ಪರವಾದ ಪ್ರತಿಭಟನೆಯೊಂದು ಆಯೋಜಿಸಲ್ಪಟ್ಟಿತು. ಸಭೆಯು ಸಂಪೂರ್ಣಗೊಂಡ ನಂತರ, ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದ ಕೆಲವರನ್ನು ಒಳಗೊಂಡಿದ್ದ ಎರಡು ಗುಂಪುಗಳಲ್ಲಿದ್ದ ಜನರು, ಪಿಕಾಡಿಲಿ ಮತ್ತು ಷಾಫ್ಟ್ಸ್‌ಬರಿ ಅವೆನ್ಯೂದಲ್ಲಿರುವ ಎರಡು ಸ್ಟಾರ್‌ಬಕ್ಸ್‌ ಮಳಿಗೆಗಳನ್ನು ಪುಡಿಪುಡಿ ಮಾಡಿದರು ಹಾಗೂ ಲೂಟಿಹೊಡೆದರು. ಇದರ ಹಿಂದಿನ ವಾರದಲ್ಲಿ ಸ್ಟಾರ್‌ಬಕ್ಸ್‌ ಮಳಿಗೆಯೊಂದರ ವಿರುದ್ಧ ನಡೆದಿದ್ದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಸದರಿ ಮಳಿಗೆಗಳು ಹೆಚ್ಚಿನ ಪ್ರಮಾಣದಲ್ಲಿ ಆರಕ್ಷಕ ಸಂರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದವಾದರೂ, "ಹಾನಿಯನ್ನು ಮಾಡಿಯೇ ತೀರುತ್ತೇವೆ ಎಂದು ದೃಢಸಂಕಲ್ಪ-ಮಾಡಿದ್ದ ಠಕ್ಕರನ್ನು ತಡೆಗಟ್ಟುವುದು" ತನ್ನ ಕೈಲಿ ಸಾಧ್ಯವಿಲ್ಲ ಎಂಬುದಾಗಿ ಸ್ಕಾಟ್ಲೆಂಡ್‌ ಯಾರ್ಡ್‌ ತಿಳಿಸಿತ್ತು.

೨೦೧೦ರ ಜೂನ್‌ ೨೬ರಂದು, ೨೦೧೦ರ G-೨೦ ಟೊರೊಂಟೊ ಶೃಂಗಸಭೆಯ ಪ್ರತಿಭಟನೆಗಳ ಸಂದರ್ಭದಲ್ಲಿ, "ಕರಿಯ ಸಮುದಾಯ"ದ (ಬ್ಲ್ಯಾಕ್‌ ಬ್ಲಾಕ್‌) ವತಿಯಿಂದ ಸ್ಟಾರ್‌ಬಕ್ಸ್‌ ಮಳಿಗೆಯೊಂದರ ಕಿಟಕಿಯು ಪುಡಿಪುಡಿ ಮಾಡಲ್ಪಟ್ಟಿತು ಹಾಗೂ ಇತರ ಮಳಿಗೆಗಳಿಗೂ ಇದೇ ಸ್ಥಿತಿ ಬಂದಿತು. ಸದಸ್ಯನೆಂದು ಭಾವಿಸಲಾದ ವ್ಯಕ್ತಿಯೋರ್ವನನ್ನು CBC ರೇಡಿಯೋ ವರದಿಗಾರನೊಬ್ಬ ಹೀಗೇಕೆ ಎಂದು ಕೇಳಿದಾಗ, ಇಸ್ರೇಲ್‌ನ್ನು ಸ್ಟಾರ್‌ಬಕ್ಸ್ ಬೆಂಬಲಿಸುತ್ತಿರುವುದೇ ಇದರ ಹಿಂದಿನ ಕಾರಣ ಎಂದು ಆತ ಉಲ್ಲೇಖಿಸಿದ.

"ದಿ ವೇ ಐ ಸೀ ಇಟ್‌"

ಕಲಾವಿದರು, ಬರಹಗಾರರು, ವಿಜ್ಞಾನಿಗಳು ಮತ್ತು ಇತರರಿಂದ ಹೊರಹೊಮ್ಮಿರುವ ಅನೇಕ ಸೂಕ್ತಿಗಳು, "ದಿ ವೇ ಐ ಸೀ ಇಟ್‌" ಎಂದು ಕರೆಯಲ್ಪಟ್ಟ ಪ್ರಚಾರಾಂದೋಲನವೊಂದರಲ್ಲಿ ೨೦೦೫ರಿಂದಲೂ ಸ್ಟಾರ್‌ಬಕ್ಸ್‌‌ ಬಟ್ಟಲುಗಳ ಮೇಲೆ ಕಾಣಿಸಿಕೊಂಡಿವೆ. ಕೆಲವೊಂದು ಸೂಕ್ತಿಗಳು ವಿವಾದವನ್ನೂ ಸೃಷ್ಟಿಸಿದ್ದು, ಬರಹಗಾರ ಆರ್ಮಿಸ್ಟೆಡ್‌ ಮೌಪಿನ್‌ ಮತ್ತು ಜೋನಾಥನ್‌ ವೆಲ್ಸ್‌‌‌ರಿಂದ ಹೊರಹೊಮ್ಮಿದ ಸೂಕ್ತಿಗಳು ಇದಕ್ಕೆ ಉದಾಹರಣೆಗಳಾಗಿವೆ; ಅದರಲ್ಲೂ ನಿರ್ದಿಷ್ಟವಾಗಿ ಜೋನಾಥನ್‌ ವೆಲ್ಸ್‌‌ನ ಸೂಕ್ತಿಯೊಂದು ಸುಜನನ ಶಾಸ್ತ್ರ, ಗರ್ಭಪಾತ ಮತ್ತು ವರ್ಣಭೇದ ನೀತಿಯೊಂದಿಗೆ 'ಡಾರ್ವಿನ್‌ ಸಿದ್ಧಾಂತ'ವನ್ನು ತಳುಕುಹಾಕಿದ್ದು ಗಮನಾರ್ಹ ಸಂಗತಿಯಾಗಿತ್ತು.

ರೋಗದಂತೆ ಹಬ್ಬಿದ US ಸೇನೆಯ ಇ-ಮೇಲ್‌

ಸ್ಟಾರ್‌ಬಕ್ಸ್‌ ಕಂಪನಿಯು ಇರಾಕ್‌ ಯುದ್ಧವನ್ನು ಬೆಂಬಲಿಸದ ಕಾರಣದಿಂದಾಗಿ, US ಸೇನೆಗೆ ನೀಡುತ್ತಿದ್ದ ಕಾಫಿ ದೇಣಿಗೆಗಳ ಪೂರೈಕೆಯನ್ನು ನಿಲ್ಲಿಸಿತು ಎಂಬ ತಪ್ಪುಮಾಹಿತಿಯನ್ನು ಪಡೆದಿದ್ದ US ನೌಕಾದಳದ ಓರ್ವ ಸಾರ್ಜೆಂಟ್‌, ೨೦೦೪ರ ಆಗಸ್ಟ್‌ನಲ್ಲಿ ತನ್ನ ಹತ್ತು ಮಂದಿ ಸ್ನೇಹಿತರಿಗೆ ಈ ಕುರಿತಾಗಿ ಇ-ಮೇಲ್ ಕಳಿಸಿದ್ದ. ಸದರಿ ಇ-ಮೇಲ್‌ ರೋಗದಂತೆ ಹಬ್ಬಿಕೊಂಡು ಹತ್ತಾರು ದಶಲಕ್ಷಗಳಷ್ಟು ಜನರಿಗೆ ಕಳಿಸಲ್ಪಟ್ಟಿತು. ಸ್ಟಾರ್‌ಬಕ್ಸ್‌‌ ಮತ್ತು ಸದರಿ ಇ-ಮೇಲ್‌ನ ಸೃಷ್ಟಿಕರ್ತ ಇಬ್ಬರೂ ಒಂದು ತಿದ್ದುಪಡಿಯನ್ನು ಕಳಿಸಿದರಾದರೂ, ಸ್ಟಾರ್‌ಬಕ್ಸ್‌ನ ಜಾಗತಿಕ ಸಂಪರ್ಕಗಳ VP ಆಗಿರುವ ವ್ಯಾಲೇರಿ ಒ'ನೀಲ್, ತನಗೆ ಪ್ರತಿ ಕೆಲವೇ ವಾರಗಳಿಗೊಮ್ಮೆ ಸದರಿ ಇ-ಮೇಲ್‌ನ್ನು ಈಗಲೂ ರವಾನಿಸಲಾಗುತ್ತಿದೆ ಎಂದು ಹೇಳುತ್ತಾಳೆ.

ಕಾಫಿಯ ಗುಣಮಟ್ಟ

ಕನ್ಸ್ಯೂಮರ್‌ ರಿಪೋರ್ಟ್ಸ್‌ ನಿಯತಕಾಲಿಕದ ೨೦೦೭ರ ಮಾರ್ಚ್‌ನ ಸಂಚಿಕೆಯು ಸ್ಟಾರ್‌ಬಕ್ಸ್‌, ಬರ್ಗರ್‌ ಕಿಂಗ್‌ ಮತ್ತು ಡಂಕಿನ್‌' ಡೋನಟ್ಸ್‌ ಕಾಫಿಗಳನ್ನು ಹಿಂದಕ್ಕೆ ತಳ್ಳಿ, ಮೆಕ್‌‌ಡೊನಾಲ್ಡ್‌’ಸ್‌ನ ಪ್ರೀಮಿಯಂ ರೋಸ್ಟ್‌ ಕಾಫಿಯನ್ನು “ಅತಿ ಅಗ್ಗದ ಮತ್ತು ಅತ್ಯುತ್ತಮವಾದ” ಕಾಫಿಯೆಂದು ಕರೆಯಿತು. ಸದರಿ ನಿಯತಕಾಲಿಕವು ಸ್ಟಾರ್‌ಬಕ್ಸ್‌‌ ಕಾಫಿಯ ಕುರಿತು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ, ಇದು ಕಡುವಾಗಿದ್ದರೂ ಸಹ ಸುಟ್ಟಂತಿದೆ ಮತ್ತು ನಿಮ್ಮ ಕಣ್ಣುಗಳನ್ನು ತೆರೆಸುವುದರ ಬದಲಿಗೆ ಅದರಲ್ಲಿ ನೀರು ಬರಿಸುವಷ್ಟು ಕಹಿಯಾಗಿದೆ" ಎಂದು ಹೇಳಿತು.

ನೀರನ್ನು ಪೋಲುಮಾಡುವಿಕೆ

ವಿಶ್ವವ್ಯಾಪಿಯಾಗಿ ಹಬ್ಬಿಕೊಂಡಿರುವ ತನ್ನ ಪ್ರತಿಯೊಂದು ಮಳಿಗೆಯಲ್ಲೂ ನೀರಿನ ಕೊಳಾಯಿಯ ನಿರಂತರ ಹರಿಯುವಿಕೆಯನ್ನು ಕಡ್ಡಾಯಗೊಳಿಸಿರುವ ಕಾರ್ಯನೀತಿಯೊಂದರ ಮೂಲಕ, ಸ್ಟಾರ್‌ಬಕ್ಸ್‌ ಪ್ರತಿದಿನವೂ ಲಕ್ಷಗಟ್ಟಲೆ ಲೀಟರುಗಳಷ್ಟು ನೀರನ್ನು ಪೋಲುಮಾಡುತ್ತಿದೆ ಎಂಬುದಾಗಿ ಬ್ರಿಟಿಷ್‌ ವೃತ್ತಪತ್ರಿಕೆಯೊಂದು ವರದಿ ಮಾಡಿತು. ಹರಿಯುತ್ತಿರುವ ಕೊಳಾಯಿಯನ್ನು ಹೊಂದಿದ್ದ "ಮುಳುಗುಹಾಕುವ ದೊಡ್ಡತೊಟ್ಟಿಯನ್ನು" ನೈರ್ಮಲ್ಯದ ಕಾರಣಗಳಿಗಾಗಿ ವ್ಯವಸ್ಥೆಗೊಳಿಸಲಾಗಿತ್ತು ಎಂಬುದಾಗಿ ಸ್ಟಾರ್‌ಬಕ್ಸ್‌‌ ಸಮರ್ಥಿಸಿತು.

ಸಂಗೀತ, ಚಲನಚಿತ್ರ, ಮತ್ತು ದೂರದರ್ಶನ

ಸ್ಟಾರ್‌ಬಕ್ಸ್‌‌ 
ಟೆಕ್ಸಾಸ್‌ನ ಸ್ಯಾನ್‌ ಆಂಟೋನಿಯೊ ನಗರದ ಮಧ್ಯಭಾಗದಲ್ಲಿರುವ ರಿವರ್‌ ವಾಕ್‌ಗೆ ಹೊಂದಿಕೊಂಡಂತಿರುವ ದಕ್ಷಿಣ ದಂಡೆಯ ಅಭಿವೃದ್ಧಿ ಪ್ರದೇಶದಲ್ಲಿರುವ ಸ್ಟಾರ್‌ಬಕ್ಸ್‌‌ನ ಎರಡನೇ ಹಿಯರ್‌ ಮ್ಯೂಸಿಕ್‌ ಕಾಫಿಗೃಹ.

ಹಿಯರ್‌ ಮ್ಯೂಸಿಕ್‌ ಎಂಬುದು ಸ್ಟಾರ್‌ಬಕ್ಸ್‌‌ನ ಚಿಲ್ಲರೆ ವ್ಯಾಪಾರದ ಸಂಗೀತದ ಪರಿಕಲ್ಪನೆಯ ಬ್ರಾಂಡ್‌ ಹೆಸರಾಗಿದೆ. ಒಂದು ಪೂರ್ಣಪಟ್ಟಿಯ ಕಂಪನಿಯಾಗಿ (ಕೆಟಲಾಗ್‌ ಕಂಪನಿಯಾಗಿ) ೧೯೯೦ರಲ್ಲಿ ಆರಂಭವಾದ ಹಿಯರ್‌ ಮ್ಯೂಸಿಕ್‌, ಸ್ಯಾನ್‌ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದಲ್ಲಿ ಕೆಲವೇ ಚಿಲ್ಲರೆ ವ್ಯಾಪಾರದ ತಾಣಗಳನ್ನು ಸೇರಿಸುತ್ತಾ ಹೋಯಿತು. ಹಿಯರ್‌ ಮ್ಯೂಸಿಕ್‌ನ್ನು ೧೯೯೯ರಲ್ಲಿ ಸ್ಟಾರ್‌ಬಕ್ಸ್‌ ಖರೀದಿಸಿತು. ಸರಿಸುಮಾರು ಮೂರು ವರ್ಷಗಳ ನಂತರ ೨೦೦೨ರಲ್ಲಿ, ಲ್ಯೂಸಿಯಾನೊ ಪಾವರಟ್ಟಿಯಂಥ ಕಲಾವಿದರನ್ನು ಒಳಗೊಂಡಿರುವ ಸ್ಟಾರ್‌ಬಕ್ಸ್‌‌ ಗೀತನಾಟಕದ ಸಂಪುಟವೊಂದನ್ನು ಅವರು ತಯಾರಿಸಿದರು; ಇದಾದ ನಂತರ ೨೦೦೭ರ ಮಾರ್ಚ್‌ನಲ್ಲಿ ಪಾಲ್‌ ಮೆಕ್‌ಕಾರ್ಟ್ಬನೆಯಿಂದ ಹಾಡಿದ "ಮೆಮರಿ ಆಲ್‌ಮೋಸ್ಟ್‌ ಫುಲ್‌" ಎಂಬ ಪ್ರಚಂಡ ಯಶಸ್ಸಿನ CDಯನ್ನು ತಯಾರಿಸಲಾಯಿತು. ಸ್ಟಾರ್‌ಬಕ್ಸ್‌‌ ಮಳಿಗೆಗಳಲ್ಲಿ ಮಾರಾಟ ಮಾಡಲಾದ ಹೊಸ ಹಿಯರ್‌ ಮ್ಯೂಸಿಕ್‌ ಧ್ವನಿಮುದ್ರಿಕೆಗೆ ಸಹಿಹಾಕಿದ ಮೊದಲ ಕಲಾವಿದ ಎಂಬ ಕೀರ್ತಿಗೆ ಮೆಕ್‌ಕಾರ್ಟ್ಬನೆ ಪಾತ್ರನಾಗಲು ಇದು ಕಾರಣವಾಯಿತು. ಇದರ ಪ್ರಾರಂಭಿಕ ಬಿಡುಗಡೆಯು ೨೦೦೭ರ ಮೊದಲ ತ್ರೈಮಾಸಿಕದಲ್ಲಿ ಸ್ಟಾರ್‌ಬಕ್ಸ್‌ಗೆ ಸಂಬಂಧಿಸಿದಂತೆ ಒಂದು ದೊಡ್ಡ ಕಾಫಿಯೇತರ ಕಾರ್ಯಕ್ರಮ ಎನಿಸಿಕೊಂಡಿತು.

೨೦೦೬ರಲ್ಲಿ, ಸ್ಟಾರ್‌ಬಕ್ಸ್‌‌ ಎಂಟರ್‌ಟೈನ್‌ಮೆಂಟ್ ಎಂಬ ಸಂಸ್ಥೆಯನ್ನು ಕಂಪನಿಯು ಹುಟ್ಟುಹಾಕಿತು, ಇದು ೨೦೦೬ರಲ್ಲಿ ಬಂದ ಅಕೀಲಾಹ್‌ ಅಂಡ್‌ ದಿ ಬೀ ಎಂಬ ಚಲನಚಿತ್ರದ ನಿರ್ಮಾಪಕರಲ್ಲಿ ಒಂದೆನಿಸಿಕೊಂಡಿತು. ಈ ಚಲನಚಿತ್ರದ ಬಿಡುಗಡೆಗೆ ಮುಂಚಿತವಾಗಿ ಅದರ ಕುರಿತು ಚಿಲ್ಲರೆ ವ್ಯಾಪಾರದ ಮಳಿಗೆಗಳು ಅಗಾಧವಾಗಿ ಪ್ರಚಾರ ಮಾಡಿದವು ಹಾಗೂ DVDಯನ್ನು ಮಾರಾಟ ಮಾಡಿದವು.

ಆಪಲ್ ಜೊತೆಗಿನ ಪಾಲುದಾರಿಕೆ

"ಕಾಫಿಗೃಹದ ಅನುಭವ"ದ ಒಂದು ಭಾಗವಾಗಿ ಸಂಗೀತವನ್ನು ಮಾರಾಟ ಮಾಡುವುದರ ಕುರಿತಾಗಿ ಜತೆಗೂಡಿ ಕೆಲಸಮಾಡಲು, ಆಪಲ್‌ ಜೊತೆಗಿನ ಪಾಲುದಾರಿಕೆಯೊಂದಕ್ಕೆ ಸ್ಟಾರ್‌ಬಕ್ಸ್‌‌ ಸಮ್ಮತಿಸಿದೆ. ೨೦೦೬ರ ಅಕ್ಟೋಬರ್‌ನಲ್ಲಿ, ಸ್ಟಾರ್‌ಬಕ್ಸ್‌‌ ಎಂಟರ್‌ಟೈನ್‌ಮೆಂಟ್‌ ಪ್ರದೇಶವೊಂದನ್ನು ಐಟ್ಯೂನ್ಸ್‌ ಸ್ಟೋರ್‌‌ಗೆ ಆಪಲ್‌ ಸೇರ್ಪಡೆ ಮಾಡಿತು; ಐಟ್ಯೂನ್ಸ್‌ ಸ್ಟೋರ್ ಎಂಬುದು ಸ್ಟಾರ್‌ಬಕ್ಸ್‌‌ ಮಳಿಗೆಗಳಲ್ಲಿ ಕೇಳಿಸಲಾಗುವ ಸಂಗೀತವನ್ನು ಹೋಲುವಂತಿರುವ ಸಂಗೀತವನ್ನು ಮಾರಾಟ ಮಾಡುತ್ತದೆ ಎಂಬುದು ಗಮನಾರ್ಹ ಸಂಗತಿ. ೨೦೦೭ರ ಸೆಪ್ಟೆಂಬರ್‌ನಲ್ಲಿ ಪ್ರಕಟಣೆಯೊಂದನ್ನು ನೀಡಿದ ಆಪಲ್‌, USನಲ್ಲಿನ ಗ್ರಾಹಕರು ವೈ-ಫೈ ವ್ಯವಸ್ಥೆಯ ಮೂಲಕ (ವೈ-ಫೈ ಜಾಲಕ್ಕೆ ಲಾಗಿನ್‌ ಆಗುವ ಯಾವುದೇ ಅವಶ್ಯಕತೆಯಿಲ್ಲದೆಯೇ) ಸ್ಟಾರ್‌ಬಕ್ಸ್‌ನಲ್ಲಿರುವ ಐಟ್ಯೂನ್ಸ್‌ ಸ್ಟೋರ್‌ನ್ನು ಬ್ರೌಸ್‌ ಮಾಡಬಹುದು ಎಂದು ತಿಳಿಸಿತು; ಇದು ಐಫೋನ್‌, ಐಪಾಡ್‌ ಟಚ್‌, ಮತ್ತು ಮ್ಯಾಕ್‌ಬುಕ್‌ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ರೂಪಿಸಿದ ಯೋಜನೆಯಾಗಿತ್ತು. ಸ್ಟಾರ್‌ಬಕ್ಸ್‌ ಮಳಿಗೆಯೊಂದರಲ್ಲಿ ಕೇಳಿಸಲಾಗುವ ಇತ್ತೀಚಿನ ಹಾಡುಗಳನ್ನು ಐಟ್ಯೂನ್ಸ್‌ ಸ್ಟೋರ್‌ ಸ್ವಯಂಚಾಲಿತವಾಗಿ ಪತ್ತೆಹಚ್ಚುತ್ತದೆ ಮತ್ತು ಧ್ವನಿಪಥಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಕೆಲವೊಂದು ಮಳಿಗೆಗಳು LCD ಪರದೆಗಳನ್ನೂ ಹೊಂದಿದ್ದು, ಪ್ರಸಕ್ತವಾಗಿ ಕೇಳಿಸಲಾಗುತ್ತಿರುವ ಹಾಡು, ಅದನ್ನು ಹಾಡಿದ ಕಲಾವಿದರ ಹೆಸರು ಹಾಗೂ ಅದು ಸೇರಿಕೊಂಡಿರುವ ಗೀತಸಂಪುಟದ ಮಾಹಿತಿಗಳು ಈ ಪರದೆಗಳ ಮೇಲೆ ಪ್ರದರ್ಶಿಸಲ್ಪಡುತ್ತವೆ. ಈ ವಿಶಿಷ್ಟ ಲಕ್ಷಣವನ್ನು ನ್ಯೂಯಾರ್ಕ್‌ ನಗರದ ಸಿಯಾಟಲ್‌‌, ಮತ್ತು ಸ್ಯಾನ್‌ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು; ಹಾಗೂ ೨೦೦೭-೨೦೦೮ರ ಅವಧಿಯಲ್ಲಿ ಇದನ್ನು ಸೀಮಿತವಾದ ಮಾರುಕಟ್ಟೆಗಳಲ್ಲಿ ನೀಡಲಾಯಿತು. ೨೦೦೭ರ ಶರತ್ಕಾಲದ ಅವಧಿಯಲ್ಲಿ, ಐಟ್ಯೂನ್ಸ್ ಮೂಲಕ ಮಾಡಲಾದ ನಿಶ್ಚಿತ ಗೀತಸಂಪುಟಗಳ ಡಿಜಿಟಲ್‌ ಡೌನ್‌ಲೋಡ್‌ಗಳನ್ನು ಮಾರಾಟ ಮಾಡಲೂ ಸಹ ಸ್ಟಾರ್‌ಬಕ್ಸ್‌ ಆರಂಭಿಸಿತು. ೨೦೦೭ರಲ್ಲಿ ಕೈಗೊಳ್ಳಲಾದ "ಸಾಂಗ್‌ ಆಫ್‌ ದಿ ಡೇ" ಪ್ರಚಾರದ ಒಂದು ಭಾಗವಾಗಿ, ಐಟ್ಯೂನ್ಸ್‌ ಮೂಲಕ ಉಚಿತ ಡೌನ್‌ಲೋಡ್‌ ಮಾಡಿಕೊಳ್ಳುವುದಕ್ಕಾಗಿ ೩೭ ವಿಭಿನ್ನ ಹಾಡುಗಳನ್ನು ಸ್ಟಾರ್‌ಬಕ್ಸ್‌‌ ನೀಡಿತು, ಮತ್ತು ಒಂದು "ಪಿಕ್‌ ಆಫ್‌ ದಿ ವೀಕ್‌" ಕಾರ್ಡು ಕೂಡಾ ಈಗ ಸ್ಟಾರ್‌ಬಕ್ಸ್‌‌ನಲ್ಲಿ ಲಭ್ಯವಿದ್ದು, ಇದನ್ನು ಹಾಡಿನ ಒಂದು ಉಚಿತವಾದ ಡೌನ್‌ಲೋಡ್‌ಗಾಗಿ ಬಳಸಬಹುದಾಗಿದೆ. ಒಂದು ಸ್ಟಾರ್‌ಬಕ್ಸ್‌ ಆಪ್‌ ವ್ಯವಸ್ಥೆಯು ಐಫೋನ್‌ ಆಪ್‌ ಸ್ಟೋರ್‌‌‌ನಲ್ಲಿ ಲಭ್ಯವಿದೆ.

MSNBC ಜೊತೆಗಿನ ಪಾಲುದಾರಿಕೆ

೨೦೦೯ರ ಜೂನ್‌ ೧ರಂದು ಆರಂಭಗೊಂಡ, ಮಾರ್ನಿಂಗ್‌ ಜೋ ಎಂಬ ಶೀರ್ಷಿಕೆಯ MSNBC ಮುಂಜಾನೆ ಸುದ್ದಿ ಕಾರ್ಯಕ್ರಮವನ್ನು "ಸ್ಟಾರ್‌ಬಕ್ಸ್‌ನಿಂದ ತಯಾರುಮಾಡಲ್ಪಟ್ಟ" ಕಾರ್ಯಕ್ರಮ ಎಂಬುದಾಗಿ ಸಾದರಪಡಿಸಲಾಗಿದೆ ಮತ್ತು ಕಂಪನಿಯ ಲಾಂಛನವನ್ನು ಒಳಗೊಳ್ಳುವುದಕ್ಕಾಗಿ ಸದರಿ ಪ್ರದರ್ಶನ ಕಾರ್ಯಕ್ರಮದ ಲಾಂಛನವನ್ನು ಬದಲಾಯಿಸಲಾಯಿತು ಎಂಬುದು ಗಮನಾರ್ಹ ಅಂಶ. MSNBC ಅಧ್ಯಕ್ಷ ಫಿಲ್‌ ಗ್ರಿಫಿನ್‌‌ನ ಮಾತುಗಳಲ್ಲಿ ಹೇಳುವುದಾದರೆ, ಕಾರ್ಯಕ್ರಮದ ಆಯೋಜಕರು ಸ್ಟಾರ್‌ಬಕ್ಸ್‌‌ ಕಾಫಿಯನ್ನು ಪ್ರಸಾರದ ಸಮಯದಲ್ಲಿ ಹಿಂದೆ "ಉಚಿತವಾಗಿ" ಸೇವಿಸಿದ್ದರಾದರೂ, ಆ ಸಮಯದಲ್ಲಿ ಇದಕ್ಕೆ ಹಣದ ಪಾವತಿಯಾಗಿರಲಿಲ್ಲ. ಎದುರಾಳಿ ಸುದ್ದಿ ಸಂಘಟನೆಗಳು ಈ ಕ್ರಮಕ್ಕೆ ಸಮ್ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದವು; ಅಂದರೆ ಒಂದು ಆರ್ಥಿಕ ಅವನತಿಯ ಸಂದರ್ಭದಲ್ಲಿ ಕಂಡುಬಂದ ಒಂದು ದಕ್ಷ ಪಾಲುದಾರಿಕೆಯ ದೃಷ್ಟಿಯಿಂದಲೂ ಮತ್ತು ವೃತ್ತಪತ್ರಿಕೆಗಳ ಮಾನದಂಡಗಳ ಒಂದು ಹೊಂದಾಣಿಕೆಯ ದೃಷ್ಟಿಯಿಂದಲೂ ಈ ಕ್ರಮವನ್ನು ನೋಡಲಾಯಿತು.

ಬಟ್ಟಲಿನ ಗಾತ್ರಗಳು

ಹೆಸರು ಅಳತೆ ಟಿಪ್ಪಣಿಗಳು
ಷಾರ್ಟ್‌ 8 US fluid ounces (240 mL) ಎರಡು ಮೂಲ ಗಾತ್ರಗಳ ಪೈಕಿ ಸಣ್ಣದಾಗಿರುವಂಥದ್ದು
ಟಾಲ್‌ 12 US fl oz (350 mL) ಎರಡು ಮೂಲ ಗಾತ್ರಗಳ ಪೈಕಿ ದೊಡ್ಡದಾಗಿರುವಂಥದ್ದು
ಗ್ರಾಂಡೆ 16 US fl oz (470 mL) ದೊಡ್ಡದಾಗಿರುವಂಥದ್ದಕ್ಕೆ ಸಂಬಂಧಿಸಿದ ಇಟಲಿ ಭಾಷೆ/ಸ್ಪ್ಯಾನಿಷ್‌ ಭಾಷೆಯಹೆಸರು
ವೆಂಟಿ 20 US fl oz (590 mL), 24 US fl oz (710 mL) ಇಪ್ಪತ್ತಕ್ಕೆ ಸಂಬಂಧಿಸಿದ ಇಟಲಿ ಭಾಷೆಯ ಹೆಸರು
ಟ್ರೆಂಟಾ 31 US fl oz (920 mL) ಮೂವತ್ತಕ್ಕೆ ಸಂಬಂಧಿಸಿದ ಇಟಲಿ ಭಾಷೆಯ ಹೆಸರು

ಇವನ್ನೂ ಗಮನಿಸಿ

ಟೆಂಪ್ಲೇಟು:Portal box

  • ಕಾಫಿ ಸಂಸ್ಕೃತಿ
  • ಕಾಫಿ ಕಂಪನಿಗಳ ಪಟ್ಟಿ
  • ಕಾಫಿಗೃಹದ ಸರಣಿಗಳ ಪಟ್ಟಿ
  • ಸಿಯಾಟಲ್‌‌ ಮೂಲದ ಕಂಪನಿಗಳ ಪಟ್ಟಿ
  • ಬಹುರಾಷ್ಟ್ರೀಯ ಸಂಸ್ಥೆ

ಉಲ್ಲೇಖಗಳು

This article uses material from the Wikipedia ಕನ್ನಡ article ಸ್ಟಾರ್‌ಬಕ್ಸ್‌‌, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ಸ್ಟಾರ್‌ಬಕ್ಸ್‌‌ ಇತಿಹಾಸಸ್ಟಾರ್‌ಬಕ್ಸ್‌‌ ಬೌದ್ಧಿಕ ಸ್ವತ್ತುಸ್ಟಾರ್‌ಬಕ್ಸ್‌‌ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಸ್ಟಾರ್‌ಬಕ್ಸ್‌‌ ಟೀಕೆ ಮತ್ತು ವಿವಾದಸ್ಟಾರ್‌ಬಕ್ಸ್‌‌ ಸಂಗೀತ, ಚಲನಚಿತ್ರ, ಮತ್ತು ದೂರದರ್ಶನಸ್ಟಾರ್‌ಬಕ್ಸ್‌‌ ಬಟ್ಟಲಿನ ಗಾತ್ರಗಳುಸ್ಟಾರ್‌ಬಕ್ಸ್‌‌ ಇವನ್ನೂ ಗಮನಿಸಿಸ್ಟಾರ್‌ಬಕ್ಸ್‌‌ ಉಲ್ಲೇಖಗಳುಸ್ಟಾರ್‌ಬಕ್ಸ್‌‌ ಹೆಚ್ಚಿನ ಓದಿಗಾಗಿಸ್ಟಾರ್‌ಬಕ್ಸ್‌‌ ಬಾಹ್ಯ ಕೊಂಡಿಗಳು‌ಸ್ಟಾರ್‌ಬಕ್ಸ್‌‌ಕಾಫಿ

🔥 Trending searches on Wiki ಕನ್ನಡ:

ಭಗವದ್ಗೀತೆಸೂರ್ಯಕಂಪ್ಯೂಟರ್ಕನ್ನಡ ಗುಣಿತಾಕ್ಷರಗಳುಅರಬ್ಬೀ ಸಾಹಿತ್ಯಭಾಮಿನೀ ಷಟ್ಪದಿಉಚ್ಛಾರಣೆಶಿಶುಪಾಲಜೀವನಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಸಂಭೋಗಶಿಕ್ಷಣರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಮಾನವ ಹಕ್ಕುಗಳುವೆಂಕಟೇಶ್ವರ ದೇವಸ್ಥಾನಕರ್ಮಮೂಢನಂಬಿಕೆಗಳುಹುಬ್ಬಳ್ಳಿಭಾರತದ ಮಾನವ ಹಕ್ಕುಗಳುನಿರ್ವಹಣೆ ಪರಿಚಯವಸ್ತುಸಂಗ್ರಹಾಲಯಎ.ಪಿ.ಜೆ.ಅಬ್ದುಲ್ ಕಲಾಂಬಾಬು ಜಗಜೀವನ ರಾಮ್ಬಿ.ಜಯಶ್ರೀಸ್ವರಾಜ್ಯಗುರುರಾಜ ಕರಜಗಿಕರ್ನಾಟಕದ ಏಕೀಕರಣಕರ್ನಾಟಕ ವಿಧಾನ ಪರಿಷತ್ವಿಜಯ ಕರ್ನಾಟಕಕರ್ನಾಟಕದ ಜಾನಪದ ಕಲೆಗಳುವೇದಕರ್ನಾಟಕದ ಕಲೆ ಮತ್ತು ಸಂಸ್ಕೃತಿಭಾರತದ ನದಿಗಳುಗೋವಿಂದ ಪೈಪರಿಣಾಮಕರ್ನಾಟಕ ವಿಧಾನ ಸಭೆಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಮನೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಟಿಪ್ಪು ಸುಲ್ತಾನ್ಗಾಂಧಿ- ಇರ್ವಿನ್ ಒಪ್ಪಂದಬೀಚಿದೇವಸ್ಥಾನಗುಡಿಸಲು ಕೈಗಾರಿಕೆಗಳುಕರ್ನಾಟಕದ ನದಿಗಳುಶಬರಿಕೃಷ್ಣಗುಪ್ತ ಸಾಮ್ರಾಜ್ಯದ್ವಿಗು ಸಮಾಸಯೋಗ ಮತ್ತು ಅಧ್ಯಾತ್ಮಅತ್ತಿಮಬ್ಬೆಕನ್ನಡತಿ (ಧಾರಾವಾಹಿ)ಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ತುಳುವಡ್ಡಾರಾಧನೆತಾಳಗುಂದ ಶಾಸನವಿಜಯವಾಣಿಭಾರತದ ಸಂವಿಧಾನ ರಚನಾ ಸಭೆಸರ್ವಜ್ಞಭೂತಕೋಲಭೂಕಂಪಸಮಾಸಗೂಬೆಹೊನ್ನಾವರಕರ್ನಾಟಕ ಹೈ ಕೋರ್ಟ್ಸ್ವರವೇಶ್ಯಾವೃತ್ತಿಅನುನಾಸಿಕ ಸಂಧಿಸರ್ವೆಪಲ್ಲಿ ರಾಧಾಕೃಷ್ಣನ್ದಾಸ ಸಾಹಿತ್ಯಚದುರಂಗ (ಆಟ)ಮಲಬದ್ಧತೆಕರ್ನಾಟಕದ ಮಹಾನಗರಪಾಲಿಕೆಗಳುಯಣ್ ಸಂಧಿಮೈಸೂರು ಮಲ್ಲಿಗೆಶಿವರಾಮ ಕಾರಂತ🡆 More