ಕೊಡಗು
ಕರ್ನಾಟಕದ ಒಂದು ಜಿಲ್ಲೆ
ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ.

koorg District ಕೊಡಗು ಜಿಲ್ಲೆ | |
---|---|
ಜಿಲ್ಲೆ | |
![]() | |
Nickname(s): ಕೂರ್ಗ್ | |
![]() Location of the district in Karnataka | |
Country | India |
State | Karnataka |
Region | Malnad |
Division | Mysore Division |
Headquarters | Madikeri |
Talukas | Madikeri, Somwarpet, Virajpet |
ಸರ್ಕಾರ | |
• Deputy Commissioner | Anurag Tewari,IAS (2013) |
Area | |
• Total | ೪,೧೦೨ km೨ (೧,೫೮೪ sq mi) |
ಜನಸಂಖ್ಯೆ (2011)[೨] | |
• ಒಟ್ಟು | ೫,೫೪,೯೮೨ |
• Density | ೧೪೦/km೨ (೩೫೦/sq mi) |
Languages | |
• Official | Kannada language |
ಸಮಯ ವಲಯ | UTC+5:30 (IST) |
PIN | 571201(ಮಡಿಕೇರಿ) |
Telephone code | + 91 (0) 8272 |
ವಾಹನ ನೋಂದಣಿ | KA-12 |
Literacy | 82.52% |
Lok Sabha constituency | Mysore Lok Sabha constituency |
Climate | Tropical Wet (Köppen) |
Precipitation | 2,725.5 millimetres (107.30 in) |
Avg. summer temperature | 28.6 °C (83.5 °F) |
Avg. winter temperature | 14.2 °C (57.6 °F) |
Website | kodagu |
ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ
ಅಲ್ಲೆ ಆ ಕಡೆ ನೋಡಲಾ
ಅಲ್ಲೆ ಕೊಡಗರ ನಾಡಲಾ
ಅಲ್ಲೆ ಕೊಡಗರ ಬೀಡಲಾ
ಭೂಲಕ್ಷ್ಮಿಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. .
ಹೆಸರಿನ ನಿಷ್ಪತ್ತಿ
ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ ಬಳಕೆಯೂ ಇದೆ. ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಇದಕ್ಕಿದೆ.https://tripedia.info/attraction/coorg-karnataka-india/ 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ.
ಇಲ್ಲಿಯ ಜನ
ಕೊಡವರು ಹಾಗೂ ಗೌಡರು ಇಲ್ಲಿಯ ಮುಖ್ಯ (ಮೂಲ) ಜನರು. ಕೊಡವ ತಕ್ಕ್ ಹಾಗೂ ಅರೆಬಾಷೆ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆಗಳು. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು.https://www.yatra.com/india-tourism/coorg/language ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ,ಹಾಗೂ ಅರೆಬಾಷೆಗೆ ಕೂಡ ಲಿಪಿ ಇಲ್ಲ. ಕೊಡವ ಭಾಷೆಯನ್ನು ಸುಮಾರು 3೦೦,೦೦೦ ಜನರು ಮಾತನಾಡಲು ಬಳಸುತ್ತಾರೆ ಹಾಗೂ ಅರೆಬಾಷೆಯನ್ನು 2,00,000 ಜನ ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.
ಜನಸಂಖ್ಯೆ
೨೦೧೧ರ ಜನಗಣತಿಯ [೨] ಪ್ರಕಾರ ಕೊಡಗಿನ ಜನಸಂಖ್ಯೆ ೫,೫೪,೭೬೨.http://www.census2011.co.in/census/district/259-kodagu.html ಇವರಲ್ಲಿ ೨,೭೪,೭೨೫ ಪುರುಷರು ಮತ್ತು ೨,೮೦,೦೩೭ ಸ್ತ್ರೀಯರು. ಅಂದರೆ ಪ್ರತಿ ೧೦೦೦ ಪುರುಷರಿಗೆ ೧೦೧೯ ಸ್ತ್ರೀಯರಿದ್ದಾರೆ. ಕೊಡಗಿನ ಒಟ್ಟು ವಿಸ್ತೀರ್ಣವನ್ನು ೪,೧೦೨ ಚದರ ಕಿಲೊಮೀಟರನ್ನು ಪರಿಗಣಿಸಿದಾಗ ಇಲ್ಲಿನ ಜನಸಾಂದ್ರತೆ ಪ್ರತಿ ಚದರ ಕಿಲೊಮೀಟರಿಗೆ ೧೩೫ ಮಂದಿ. ಕೊಡಗಿನ ಒಟ್ಟು ಜನಸಂಖ್ಯೆಯಲ್ಲಿ ೪,೧೪,೩೦೫ ಮಂದಿ ( ಅಂದರೆ ೮೨.೫೨% ) ಅಕ್ಷರಸ್ಥರು. ಇವರಲ್ಲಿ ೨,೧೬,೪೧೩ ಮಂದಿ ಪುರುಷರು (೮೭.೨೪%) ಮತ್ತು ೧,೯೭,೮೯೨ ಸ್ತ್ರೀಯರು (೭೭.೯೧%). ಈ ಕೆಳಗಿನ ಕೋಷ್ಠಕದಲ್ಲಿ ಕೊಡಗಿನ ಕುರಿತ ಅಂಕಿ-ಅಂಶಗಳನ್ನು ೨೦೦೧ರ ಜನಗಣತಿಯೊಡನೆ ಹೋಲಿಸಿ ಕೊಡಲಾಗಿದೆ:
ವಿವರ | ೨೦೧೧ | ೨೦೦೧ |
---|---|---|
ಒಟ್ಟು ಜನಸಂಖ್ಯೆ | ೫,೫೪,೭೬೨ | ೫,೪೮,೫೬೧ |
ಪುರುಷರು | ೨,೭೪,೭೨೫ | ೨,೭೪,೮೩೧ |
ಸ್ತ್ರೀಯರು | ೨,೮೦,೦೩೭ | ೨,೭೩,೭೩೦ |
ಜನಸಂಖ್ಯೆಯ ಹೆಚ್ಚುವರಿ | ೧.೧೩% | ೧೨.೩೧% |
ಕೊಡಗಿನ ವಿಸ್ತೀರ್ಣ | ೪,೧೦೨ ಚ ಕಿಮೀ | ೪,೧೦೨ ಚ ಕಿಮೀ |
ಜನಸಾಂದ್ರತೆ | ೧೩೫ ಮಂದಿ/ಚ ಕಿಮೀ | ೧೩೪ ಮಂದಿ/ಚ ಕಿಮೀ |
ಕರ್ನಾಟಕದ ಜನಸಂಖ್ಯೆಯ ಅನುಪಾತ | ೦.೯೧% | ೧.೦೪% |
೧೦೦೦ ಪುರುಷರಿಗೆ ಸ್ತ್ರೀಯರ ಸಂಖ್ಯೆ | ೧೦೧೯ | ೯೯೬ |
ಒಟ್ಟು ಅಕ್ಷರಸ್ಥರು | ೪,೧೪,೩೦೫ | ೩,೭೩,೫೪೧ |
ಅಕ್ಷರಸ್ಥ ಪುರುಷರು | ೨,೧೬,೪೧೩ | ೨,೦೦,೫೮೮ |
ಅಕ್ಷರಸ್ಥ ಸ್ತ್ರೀಯರು | ೧,೯೭,೮೯೨ | ೧,೭೨,೯೫೩ |
ಸರಾಸರಿ ಒಟ್ಟು ಅಕ್ಷರಸ್ಥರು | ೮೨.೫೨% | ೭೭.೯೯% |
ಪುರುಷರ ಪ್ರಮಾಣ | ೮೭.೨೪% | ೮೩.೭೦% |
ಸ್ತ್ರೀಯರ ಪ್ರಮಾಣ | ೭೭.೯೧% | ೭೨.೨೬% |
ಭೂಗೋಳ
ಕೊಡಗು ತನ್ನ ಪಶ್ಚಿಮ ಸರಹದ್ದಿನಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯನ್ನೂ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆಗಳನ್ನೂ ಹೊಂದಿದೆ. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯವಿಂಗಡನೆಯಾದಾಗ ಮೈಸೂರು ರಾಜ್ಯಕ್ಕೆ ಜಿಲ್ಲೆಯಾಗಿ ಸೇರಲ್ಪಟ್ಟಿತು.
ತಾಲೂಕುಗಳು
ಕೊಡಗಿನಲ್ಲಿ ಐದುತಾಲೂಕುಗಳಿವೆ. ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರಗಳಿವೆ.
- ಮಡಿಕೇರಿ
- ವಿರಾಜಪೇಟೆ
- [[ಸೋಮವಾರಪೇಟೆ]
- ಕುಶಾಲನಗರ
- ಪೊನ್ನಂಪೇಟೆ
ಮಡಿಕೇರಿ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು
ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾಗಿ ಮಡಿಕೇರಿ ತಾಲೂಕಿನಲ್ಲಿ
- ಅಬ್ಬಿ ಜಲಪಾತ,
- ಓಂಕಾರೇಶ್ವರ ದೇವಸ್ಥಾನ,
- ಗದ್ದಿಗೆ,
- ಅರಮನೆ,
- ರಾಜಸೀಟ್,
- ತಲಕಾವೇರಿ, ಇತ್ಯಾದಿಗಳಾದರೆ,
- ಎಮ್ಮೆಮಾಡ್ (ಸೂಫೀ ಶ ಹೀ ದ್)
ವಿರಾಜಪೇಟೆ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು
ವಿರಾಜಪೇಟೆ ತಾಲೂಕಿನಲ್ಲಿ-
- ನಾಗರಹೊಳೆ ,
- ಇರ್ಪು,
- ಕುಂದ,
- ಟೀ ಏಸ್ಟೇಟ್,
- ಸೈಂಟ್ ಏನ್ಸ್ ಚರ್ಚ್,
- ಇಗ್ಗುತ್ತಪ್ಪ ದೇವಸ್ಥಾನ,
- ನಾಲ್ಕುನಾಡು ಅರಮನೆ, ಮುಂತಾದವು ಇವೆ.
ಕುಶಾಲನಗರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು
[ಕುಶಾಲನಗರ ]] ತಾಲೂಕಿನಲ್ಲಿ-
- ಕಾವೇರಿ ನಿಸರ್ಗಧಾಮ,
- [[ಟಿಬೆಟ್ಟಿನ ಸ್ವರ್ಣದೇಗುಲ]ಪಿರಿಯಾಪಟ್ಟಣ{ತಾ}]],
- ವೀರಭೂಮಿ,
- ದುಬಾರೆ ಅರಣ್ಯ,
- ಹಾರಂಗಿ ಜಲಾಶಯ,
- ಚಿಕ್ಲಿ ಹೊಳೆ
- ಸೋಮವಾರಪೇಟೆ ತಾಲೂಕಿನಲ್ಲಿ
- ಹೊನ್ನಮ್ಮನ ಕೆರೆ,
- ಮಲ್ಲಳ್ಳಿ ಜಲಪಾತ,
- ಪುಷ್ಪಗಿರಿ ಅಭಯಾರಣ್ಯ ಮೊದಲಾದವಿವೆ.
ಬೆಳೆಗಳು
ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆಯಲ್ಲದೆ ಕರಿಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೧/೩ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.
ಇತಿಹಾಸ
ಕೊಡವರು ಇಲ್ಲಿಯ ಮುಖ್ಯ ಜನರು. ಕನ್ನಡ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ ಹಾಗು ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, [[ಅರೆಗನ್ನಡ ಅಥವಅರೆಭಾಷೆ |ಅರೆಭಾಷೆ]], ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು 10೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.
ಹೊರಗಿನ ಸಂಪರ್ಕಗಳು
Wikimedia Commons has media related to Kodagu district. |
- ಕೊಡವ
- ['ಕೊಡಗು-ಕೊಡವರ ಸಿರಿನಾಡು ಕಾವೇರಿಯ ತವರು'-ಯಶೋದಾ ಮುತ್ತಣ್ಣ, ತರಂಗ,೨೯ ಸೆಪ್ಟೆಂಬರ್,೨೦೧೬,ಪು.೧೪-೩೦ & ೫೧-೫೩,ಮಂಜು ಮುಸುಕಿದ ಕೊಡವ ನಾಡು-ಚಿತ್ರ.ಅನಿಲ್.ಎಚ್.ಟಿ.]
ಉಲ್ಲೇಖ
- ↑ "Kodagu district Profile". DSERT. Retrieved 11 January 2011.
- ↑ ೨.೦ ೨.೧ http://www.census2011.co.in/census/district/259-kodagu.html