ವಿಮಿತಿ

ಭೌತಶಾಸ್ತ್ರ ಮತ್ತು ಗಣಿತದಲ್ಲಿ, ಒಂದು ಗಣಿತೀಯ ಪ್ರದೇಶದ (ಅಥವಾ ವಸ್ತುವಿನ) ಆಯಾಮವನ್ನು ಅನೌಪಚಾರಿಕವಾಗಿ ಅದರೊಳಗಿನ ಯಾವುದೇ ಬಿಂದುವನ್ನು ನಿರ್ದಿಷ್ಟವಾಗಿ ಹೇಳಲು ಬೇಕಾಗುವ ಕನಿಷ್ಠತಮ ಸಂಖ್ಯೆಯ ನಿರ್ದೇಶಾಂಕಗಳು ಎಂದು ವ್ಯಾಖ್ಯಾನಿಸಲಾಗುತ್ತದೆ.

ಹಾಗಾಗಿ ಒಂದು ರೇಖೆಯು ಒಂದು ಆಯಾಮವನ್ನು ಹೊಂದಿದೆ ಏಕೆಂದರೆ ಅದರ ಮೇಲಿನ ಒಂದು ಬಿಂದುವನ್ನು ಹೆಸರಿಸಲು ಕೇವಲ ಒಂದು ನಿರ್ದೇಶಾಂಕ ಬೇಕಾಗುತ್ತದೆ ಉದಾಹರಣೆಗೆ, ಒಂದು ಸಂಖ್ಯಾ ರೇಖೆಯ ಮೇಲೆ ಬಿಂದು 5. ಸಮತಲದಂತಹ ಹೊರಮೈಯು ಅಥವಾ ಉರುಳೆ ಅಥವಾ ಗೋಳದ ಹೊರಮೈಯು ಎರಡು ಆಯಾಮಗಳನ್ನು ಹೊಂದಿದೆ ಏಕೆಂದರೆ ಅದರ ಮೇಲಿನ ಒಂದು ಬಿಂದುವನ್ನು ಹೆಸರಿಸಲು ಎರಡು ನಿರ್ದೇಶಾಂಕಗಳು ಬೇಕಾಗುತ್ತದೆ. ಉದಾಹರಣೆಗೆ, ಗೋಳದ ಮೇಲ್ಮೈ ಮೇಲೆ ಒಂದು ಬಿಂದುವನ್ನು ಗುರುತಿಸಲು ಅಕ್ಷಾಂಶ ಮತ್ತು ರೇಖಾಂಶ ಎರಡೂ ಬೇಕಾಗುತ್ತವೆ. ಘನಾಕೃತಿ, ಉರುಳೆ ಅಥವಾ ಗೋಳದ ಒಳಗಿನ ಭಾಗ ಮೂರು ಆಯಾಮದ್ದು ಏಕೆಂದರೆ ಈ ಪ್ರದೇಶಗಳೊಳಗಿನ ಒಂದು ಬಿಂದುವನ್ನು ಗುರುತಿಸಲು ಮೂರು ನಿರ್ದೇಶಾಂಕಗಳು ಬೇಕಾಗುತ್ತವೆ.

ವಿಮಿತಿ
ಎಡದಿಂದ ಬಲಕ್ಕೆ: ಚೌಕ, ಘನಾಕೃತಿ ಮತ್ತು ಟೆಸರ‍್ಯಾಕ್ಟ್. ಎರಡು ಆಯಾಮದ ಚೌಕವು ಒಂದು ಆಯಾಮದ ರೇಖೆಗಳನ್ನು ಗಡಿಯಾಗಿ ಹೊಂದಿದೆ; ಮೂರು ಆಯಾಮದ (3D) ಘನಾಕೃತಿಯು ಎರಡು ಆಯಾಮದ ವಿಸ್ತೀರ್ಣಗಳಿಂದ; ಮತ್ತು ನಾಲ್ಕು ಆಯಾಮದ (4D) ಟೆಸರ‍್ಯಾಕ್ಟ್ ಮೂರು ಆಯಾಮದ ಘನ ಅಳತೆಗಳಿಂದ. ಪರದೆಯಂತಹ ಎರಡು ಆಯಾಮದ ಮೇಲ್ಮೈ ಮೇಲೆ ಪ್ರದರ್ಶನಕ್ಕಾಗಿ, ಥ್ರೀಡಿ ಘನಾಕೃತಿ ಮತ್ತು ಫ಼ೋರ್‍ಡಿ ಟೆಸರ‍್ಯಾಕ್ಟ್‌ಗೆ ಪ್ರಕ್ಷೇಪಣ ಅಗತ್ಯವಾಗುತ್ತದೆ.

ಪ್ರಾಚೀನ ಯಂತ್ರಶಾಸ್ತ್ರದಲ್ಲಿ, ಸ್ಥಳ ಮತ್ತು ಕಾಲಗಳು ಭಿನ್ನ ವರ್ಗಗಳಾಗಿವೆ ಮತ್ತು ನಿರಪೇಕ್ಷ ಸ್ಥಳ ಹಾಗೂ ಕಾಲವನ್ನು ಸೂಚಿಸುತ್ತವೆ. ವಿಶ್ವದ ಕಲ್ಪನೆಯು ನಾಲ್ಕು ಆಯಾಮದ ಸ್ಥಳವಾಗಿದೆ, ಆದರೆ ಇದು ವಿದ್ಯುತ್ಕಾಂತತೆಯನ್ನು ವಿವರಿಸಲು ಬೇಕಾದ ಕಲ್ಪನೆಯಿಂದ ಭಿನ್ನವಾಗಿದೆ. ದೇಶಕಾಲದ ನಾಲ್ಕು ಆಯಾಮಗಳು ದೈಶಿಕವಾಗಿ ಮತ್ತು ಕಾಲಸೂಚಕವಾಗಿ ನಿರಪೇಕ್ಷವಾಗಿ ವ್ಯಾಖ್ಯಾನ ಮಾಡಲಾಗದ, ಬದಲಾಗಿ ವೀಕ್ಷಕನ ಚಲನೆಗೆ ಸಾಪೇಕ್ಷವಾಗಿ ತಿಳಿಯಲಾದ ಘಟನೆಗಳನ್ನು ಹೊಂದಿವೆ. ಮಿಂಕಾವ್‍ಸ್ಕಿ ದೇಶಕಲ್ಪನೆಯು ಮೊದಲು ಬ್ರಹ್ಮಾಂಡವನ್ನು ಗುರುತ್ವವಿಲ್ಲದೆ ಅಂದಾಜಿಸುತ್ತದೆ; ಸಾಮಾನ್ಯ ಸಾಪೇಕ್ಷತೆಯ ಹುಸಿ ರೈಮನಿಯನ್ ಬಹುರೂಪಿಗಳು ದೇಶಕಾಲವನ್ನು ಭೌತವಸ್ತು ಮತ್ತು ಗುರುತ್ವದೊಂದಿಗೆ ವಿವರಿಸುತ್ತವೆ. ಸ್ಟ್ರಿಂಗ್ ಸಿದ್ಧಾಂತವನ್ನು ವಿವರಿಸಲು ಹತ್ತು ಆಯಾಮಗಳನ್ನು ಬಳಸಲಾಗುತ್ತದೆ, ಸೂಪರ್‍ಗ್ರ್ಯಾವಿಟಿ ಮತ್ತು ಎಮ್-ಥಿಯರಿಯನ್ನು ಹನ್ನೊಂದು ಆಯಾಮಗಳು ವಿವರಿಸಬಲ್ಲವು, ಮತ್ತು ಕ್ವಾಂಟಮ್ ಯಂತ್ರಶಾಸ್ತ್ರದ ಸ್ಥಿತಿ-ದೇಶವು ಅನಂತ ಆಯಾಮದ ಫಲನ ದೇಶಕಲ್ಪನೆಯಾಗಿದೆ.

ಉಲ್ಲೇಖಗಳು

Tags:

ಅಕ್ಷಾಂಶಗಣಿತಗೋಳಭೌತಶಾಸ್ತ್ರ

🔥 Trending searches on Wiki ಕನ್ನಡ:

ಗೋಲ ಗುಮ್ಮಟಉತ್ತರ ಕನ್ನಡಪ್ಯಾರಾಸಿಟಮಾಲ್ಭಾರತದ ಚುನಾವಣಾ ಆಯೋಗಸ್ವರ್ಣಯುಗಓಂ (ಚಲನಚಿತ್ರ)ಕಳಿಂಗ ಯುದ್ದ ಕ್ರಿ.ಪೂ.261ಬ್ರಿಟಿಷ್ ಆಡಳಿತದ ಇತಿಹಾಸದ್ವಿರುಕ್ತಿಭಾರತದ ಸಂವಿಧಾನ ರಚನಾ ಸಭೆಭಾರತದ ಸರ್ವೋಚ್ಛ ನ್ಯಾಯಾಲಯಇತಿಹಾಸಮೇರಿ ಕೋಮ್ಭಾರತದಲ್ಲಿ ಕೃಷಿಶ್ರೀವಿಜಯಶಿಶುನಾಳ ಶರೀಫರುಭಾರತೀಯ ರಿಸರ್ವ್ ಬ್ಯಾಂಕ್ಬೆಂಗಳೂರುಸಂವತ್ಸರಗಳುಪ್ರೀತಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುದೇವನೂರು ಮಹಾದೇವತೆಂಗಿನಕಾಯಿ ಮರನಾಗಮಂಡಲ (ಚಲನಚಿತ್ರ)ಕಿತ್ತಳೆಕರ್ನಾಟಕದ ಮಹಾನಗರಪಾಲಿಕೆಗಳುಸಮುದ್ರಗುಪ್ತಬಾಬು ಜಗಜೀವನ ರಾಮ್ಶ್ರವಣಬೆಳಗೊಳಯೂಟ್ಯೂಬ್‌ಕರ್ನಾಟಕದ ಜಲಪಾತಗಳುಇ-ಕಾಮರ್ಸ್ರೇಯಾನ್ವಿಷ್ಣುಮೂಕಜ್ಜಿಯ ಕನಸುಗಳು (ಕಾದಂಬರಿ)ಬೌದ್ಧ ಧರ್ಮತಂತ್ರಜ್ಞಾನಸಸ್ಯ ಅಂಗಾಂಶಕರ್ನಾಟಕದಲ್ಲಿ ಪಂಚಾಯತ್ ರಾಜ್ಮಾರುಕಟ್ಟೆನೀರಾವರಿಬಿಲ್ಹಣಸಂಗೊಳ್ಳಿ ರಾಯಣ್ಣಹಾಲುಮೈಸೂರು ಸಂಸ್ಥಾನದ ದಿವಾನರುಗಳುಕನ್ನಡ ಛಂದಸ್ಸುಹರಿಹರ (ಕವಿ)ಜಿ.ಪಿ.ರಾಜರತ್ನಂಬಸವೇಶ್ವರಹೈಡ್ರೊಕ್ಲೋರಿಕ್ ಆಮ್ಲಕವಿಗಳ ಕಾವ್ಯನಾಮಸುಭಾಷ್ ಚಂದ್ರ ಬೋಸ್ಬಾದಾಮಿ ಶಾಸನಮಹಾಕಾವ್ಯಸಂಸ್ಕೃತಿಎರಡನೇ ಮಹಾಯುದ್ಧಕಲಬುರಗಿಗುರುತ್ವಸಮಸ್ಥಾನಿಮೈಸೂರು ಸಂಸ್ಥಾನಹಲ್ಮಿಡಿಲಾರ್ಡ್ ಕಾರ್ನ್‍ವಾಲಿಸ್ಹ್ಯಾಲಿ ಕಾಮೆಟ್ದ್ಯುತಿಸಂಶ್ಲೇಷಣೆಜಾತಿಸುಧಾ ಮೂರ್ತಿಮಹಾತ್ಮ ಗಾಂಧಿವಿಜಯನಗರ ಸಾಮ್ರಾಜ್ಯಸಂಕರಣಶಿರಾಜಾಹೀರಾತುಜಾಗತೀಕರಣಇಮ್ಮಡಿ ಪುಲಕೇಶಿಸ್ವಾತಂತ್ರ್ಯಭಾರತದ ಮಾನವ ಹಕ್ಕುಗಳುಚುನಾವಣೆಹನುಮಾನ್ ಚಾಲೀಸಸ್ನಾಯುಪರಮಾಣು ಸಂಖ್ಯೆ🡆 More