ಭಾರತದ ರಾಷ್ಟ್ರೀಯ ಚಿಹ್ನೆ

ಭಾರತ ಸರ್ಕಾರವು ೧೯೫೦ ಜನವರಿ ೨೬ ರಂದು ಅಧಿಕೃತವಾಗಿ ಸಾರನಾಥದ, ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹವನ್ನು ತನ್ನ ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿತು.

ಚಿಹ್ನೆಯಲ್ಲಿ ಮೂರೆ ಮುಖ ಕಾಣಿಸಿದರು, ಲಾಂಛನವು ನಾಲ್ಕು ಸಿಂಹದ ಮುಖಗಳನ್ನು ಹೊಂದಿದ್ದು, ನಾಲ್ಕನೆಯ ಮುಖವು ಹಿಂಬದಿಯಲ್ಲಿರುವುದು.

ಭಾರತದ ರಾಷ್ಟ್ರೀಯ ಚಿಹ್ನೆ
ಭಾರತದ ರಾಷ್ಟ್ರೀಯ ಚಿಹ್ನೆ
Armigerಭಾರತ ಗಣರಾಜ್ಯ
ಸ್ವೀಕಾರ೨೬ ಜನವರಿ ೧೯೫೦
ಧ್ಯೇಯ"ಸತ್ಯಮೇವ ಜಯತೆ" (ಸಂಸ್ಕೃತ)
"ಸತ್ಯವೇ ಜಯಿಸುತ್ತದೆ"

("ಮುಂಡಕೋಪನಿಷತ್" ನಿಂದ ಬಂದಿದೆ, ಇದು ಹಿಂದೂ ವೇದದ ಒಂದು ಭಾಗವಾಗಿದೆ)

ಈ ಲಾಂಛನವು ಒಂದು ವೃತ್ತಾಕಾರದ ಹಾಸುಗಲ್ಲಿನ ಮೇಲೆ ಅಲಂಕರಿಸಿದ್ದು, ಓಡುತ್ತಿರುವ ಕುದುರೆ, ಏತ್ತು, ಆನೆ ಮತ್ತು ಸಿಂಹದ ಅಕೃತಿಗಳು ಧರ್ಮ ಚಕ್ರದ ಜೊತೆಯಲ್ಲಿ ಪರ್ಯಾಯವಾಗಿ ಹಾಸುಗಲ್ಲಿನ ಮೇಲೆ ಕೆತ್ತಲ್ಪಟ್ಟಿದೆ. ಇವುಗಳ ಜೊತೆಗೆ ಮುಂಡಕೋಪನಿಷತ್ ನಲ್ಲಿ ಉಲ್ಲೇಖಿಸಿರುವ "ಸತ್ಯಮೇವ ಜಯತೇ" ಪದವನ್ನು ದೇವನಾಗರಿ ಲಿಪಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಅಶೋಕ ಸ್ತಂಭ ಚಿತ್ರದ ಅಂಚೆ ಚೀಟಿಯ ಕಥೆ

೧೯೪೭ರ ಆಗಸ್ಟ ೧೫ರಂದು ಭಾರತ ಸ್ವತಂತ್ರವಾದಾಗ ಆ ಸಂತಸವನ್ನು ಅಂಚೆಚೀಟಿಗಳ ಮೂಲಕ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಯಾಕೆಂದರೆ ಆಗ ಅಂಚೆಚೀಟಿಗಳನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡುವ ಸಂವಿಧಾನಿಕ ಸಂಸ್ಥೆ ಇನ್ನೂ ಅಸ್ತಿತ್ವದಲ್ಲಿ ಬಂದಿರಲಿಲ್ಲ. ಹೀಗಾಗಿ ಸ್ವತಂತ್ರ ಭಾರತದ ಮೊದಲ ಅಂಚೆಚೀಟಿ ಬಿಡುಗಡೆಯಾಗಲು ಸುಮಾರು ೯೯ ದಿನಗಳ ಕಾಲ ಕಾಯಬೇಕಾಯಿತು! ಹೀಗೆ ಮೊದಲ ಅಂಚೆಚೀಟಿಯು ತ್ರಿವರ್ಣ ಧ್ವಜವನ್ನು ಹೊತ್ತು ೧೯೪೭ರ ನವಂಬರ ೨೧ರಂದು ಬಿಡುಗಡೆಯಾಯಿತು. ಅದಾಗಿ ೨೪ ದಿನಗಳ ಬಳಿಕ ಡಿಸೆಂಬರ ೧೫ರಂದು ಭಾರತದ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭದ ಮೇಲಿರುವ ಚತುರ್ಮುಖ ಸಿಂಹಗಳ ಚಿತ್ರವನ್ನು ಹೊತ್ತು ಎರಡನೆಯ ಅಂಚೆಚೀಟಿ ಹೊರಬಂದಿತು.

ಈ ಅಂಚೆಚೀಟಿಗಳಲ್ಲಿ ಬಳಸಿದ ಚಿತ್ರವು ಭಾರತದ ಭಾರತದ ರಾಷ್ಟ್ರೀಯ ಚಿಹ್ನೆಯದ್ದಾಗಿದೆ. ಮೌರ್ಯ ವಂಶದ ಚಕ್ರವರ್ತಿ ಸಾಮ್ರಾಟ ಅಶೋಕನು ವಾರಣಾಸಿಯ ಬಳಿಯ ಸಾರಾನಾಥದಲ್ಲಿ ಸ್ಥಾಪಿಸಿದ ಕಂಬದ ತುದಿಯಲ್ಲಿನ ನಾಲ್ಕು ಮುಖದ ಸಿಂಹದ ಚಿತ್ರವನ್ನು ನಮ್ಮ ರಾಷ್ಟ್ರಚಿಹ್ನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಮೌರ್ಯ ಸಾಮ್ರಾಟ ಚಂದ್ರಗುಪ್ತನ ಮೊಮ್ಮಗನೂ, ಬಿಂದುಸಾರನ ಮಗನೂ ಆಗಿದ್ದ ಅಶೋಕನು ಕಳಿಂಗ ರಾಜ್ಯದ ಮೇಲೆ ದಂಡೆತ್ತಿಹೋದಾಗ ನಡೆದ ಲಕ್ಷಾಂತರ ಸೈನಿಕರ ಮಾರಣಹೋಮ, ಹರಿದ ನೆತ್ತರಿನ ಕೋಡಿಯನ್ನು ಕಂಡು ಜಿಗುಪ್ಸೆಗೊಂಡು ಬೌದ್ಧಮತವನ್ನು ಸ್ವೀಕರಿಸುತ್ತಾನೆ. ತಾನು ನಂಬಿದ ತತ್ವಗಳನ್ನು ಪ್ರಸಾರಮಾಡಲು ಅನೇಕ ಶಿಲಾಶಾಸನಗಳನ್ನೂ, ಸ್ಥೂಪಗಳನ್ನೂ, ಕಂಬಗಳನ್ನೂ ಸ್ಥಾಪಿಸುತ್ತಾನೆ.

ನೋಡಿ

ಉಲ್ಲೇಖಗಳು

Tags:

ಜನವರಿ ೨೬ಭಾರತ ಸರ್ಕಾರ೧೯೫೦

🔥 Trending searches on Wiki ಕನ್ನಡ:

ಭಾಷಾ ವಿಜ್ಞಾನಬಾಲ್ಯರಾಶಿಕರಗ (ಹಬ್ಬ)ರಾಷ್ಟ್ರೀಯ ಸ್ವಯಂಸೇವಕ ಸಂಘಶಕ್ತಿಭೂಮಿ ದಿನಕರ್ನಾಟಕದ ಅಣೆಕಟ್ಟುಗಳುಒಲಂಪಿಕ್ ಕ್ರೀಡಾಕೂಟಮುಟ್ಟಿದರೆ ಮುನಿಪಾಂಡವರುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜ್ಯೋತಿಬಾ ಫುಲೆಭಾರತರಾಜಧಾನಿಗಳ ಪಟ್ಟಿಆರ್ಥಿಕ ಬೆಳೆವಣಿಗೆಸಂಸ್ಕೃತ ಸಂಧಿವೇದವ್ಯಾಸಹರಪನಹಳ್ಳಿ ಭೀಮವ್ವಸಂಶೋಧನೆತುಳಸಿಮಹಾಕವಿ ರನ್ನನ ಗದಾಯುದ್ಧಶಿಕ್ಷಕಚಾರ್ಲ್ಸ್ ಬ್ಯಾಬೇಜ್ಥಿಯೊಸೊಫಿಕಲ್ ಸೊಸೈಟಿಮಲ್ಲಿಕಾರ್ಜುನ್ ಖರ್ಗೆಜಾಗತೀಕರಣಕನ್ನಡ ಬರಹಗಾರ್ತಿಯರುಹೊಯ್ಸಳ ವಿಷ್ಣುವರ್ಧನಕರ್ನಾಟಕದ ಹಬ್ಬಗಳುಶಾಂತಕವಿಅಶ್ವಮೇಧಹೈದರಾಬಾದ್‌, ತೆಲಂಗಾಣಋತುಚಕ್ರತಾಜ್ ಮಹಲ್ಬಿ.ಜಯಶ್ರೀಗ್ರಾಮಗಳುದಾಸ ಸಾಹಿತ್ಯವಿಲಿಯಂ ಷೇಕ್ಸ್‌ಪಿಯರ್ಕನ್ನಡ ವ್ಯಾಕರಣಖಾಸಗೀಕರಣದೇಶಗಳ ವಿಸ್ತೀರ್ಣ ಪಟ್ಟಿಯೋನಿವಾಲ್ಮೀಕಿಕಾಟೇರಸೂರ್ಯವ್ಯೂಹದ ಗ್ರಹಗಳುಸುಮಲತಾಡಿ.ಎಲ್.ನರಸಿಂಹಾಚಾರ್ಸಮಾಸವಿಕಿಪೀಡಿಯಔಡಲರಾಮ ಮಂದಿರ, ಅಯೋಧ್ಯೆಎ.ಕೆ.ರಾಮಾನುಜನ್ಭರತನಾಟ್ಯಗ್ರಂಥ ಸಂಪಾದನೆಯೋಗವಾಹಸಮುದ್ರಗುಪ್ತಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತೀಯ ಶಾಸ್ತ್ರೀಯ ಸಂಗೀತವ್ಯಕ್ತಿತ್ವಲಿವರ್ ಪೂಲ್ ಫುಟ್ ಬಾಲ್ ಕ್ಲಬ್ಪ್ರವಾಹರಾಮಾಯಣಆದಿ ಶಂಕರಜೀವವೈವಿಧ್ಯತ್ಯಾಜ್ಯ ನಿರ್ವಹಣೆಅಲ್ಬರ್ಟ್ ಐನ್‍ಸ್ಟೈನ್ದಯಾನಂದ ಸರಸ್ವತಿಸಂಭೋಗಭಾರತದ ಚುನಾವಣಾ ಆಯೋಗಯಜಮಾನ (ಚಲನಚಿತ್ರ)ಕರ್ನಾಟಕದುಗ್ಧರಸ ಗ್ರಂಥಿ (Lymph Node)ಕಲ್ಯಾಣ ಕರ್ನಾಟಕಪಾಲಕ್🡆 More