ಮಗು: ಹುಟ್ಟು ಮತ್ತು ಯವ್ವನದ ನಡುವಿನ ಮನುಷ್ಯ

ಜೀವವಿಜ್ಞಾನ ರೀತ್ಯಾ, ಮಗುವು ಜನನ ಮತ್ತು ಪ್ರೌಢಾವಸ್ಥೆಯ ಹಂತಗಳ ನಡುವಿನ ಮಾನವ ಜೀವಿ.

ಮಗುವಿನ ಕಾನೂನಾತ್ಮಕ ವ್ಯಾಖ್ಯಾನವು ಅಪ್ರಾಪ್ತವಯಸ್ಕನನ್ನು ನಿರ್ದೇಶಿಸುತ್ತದೆ, ಇನ್ನೊಂದು ರೀತಿ ಹೇಳಬೇಕೆಂದರೆ ಪ್ರಾಪ್ತ ವಯಸ್ಸಿಗಿಂತ ಚಿಕ್ಕವನಿರುವ ವ್ಯಕ್ತಿ. ಅನೇಕ ಸಾಮಾಜಿಕ ಸಮಸ್ಯೆಗಳು ಮಕ್ಕಳನ್ನು ಬಾಧಿಸುತ್ತವೆ, ಉದಾಹರಣೆಗೆ ಬಾಲ್ಯದ ಶಿಕ್ಷಣ, ಪೀಡನೆ, ಬಾಲ್ಯದ ಬಡತನ, ಅಪಸಾಮಾನ್ಯ ಕುಟುಂಬಗಳು, ಬಾಲಕಾರ್ಮಿಕತೆ, ಹಸಿವು, ಮತ್ತು ಬಾಲ್ಯ ನಿರಾಶ್ರಿತತೆ. ಮಕ್ಕಳನ್ನು ತಂದೆತಾಯಿಗಳು, ಸಾಕು ತಂದೆತಾಯಿಗಳು, ಪೋಷಕರು ಬೆಳೆಸಬಹುದು ಅಥವಾ ದಿವಾಪಾಲನಾ ಕೇಂದ್ರದಲ್ಲಿ ಭಾಗಶಃ ಬೆಳೆಸಬಹುದು.

ಮಗು: ಹುಟ್ಟು ಮತ್ತು ಯವ್ವನದ ನಡುವಿನ ಮನುಷ್ಯ
3 ವರ್ಷದ ಮಗು

ಸಾಮಾನ್ಯವಾಗಿ ವಯಸ್ಕರಿಗಿಂತ ಮಕ್ಕಳು ಕಡಿಮೆ ಹಕ್ಕುಗಳನ್ನು ಹೊಂದಿರುತ್ತಾರೆ ಮತ್ತು ಅವರನ್ನು ಗಂಭೀರ ತೀರ್ಮಾನಗಳನ್ನು ಮಾಡುವಲ್ಲಿ ಅಸಮರ್ಥರೆಂದು ವರ್ಗೀಕರಿಸಲಾಗುತ್ತದೆ. ಕಾನೂನಾತ್ಮಕವಾಗಿ ಮಕ್ಕಳು ಯಾವಾಗಲೂ ಒಬ್ಬ ಜವಾಬ್ದಾರಿಯುತ ವಯಸ್ಕ ಅಥವಾ ಮಕ್ಕಳ ಸುಪರ್ದಿಯ ಆರೈಕೆಯಲ್ಲಿ ಇರಬೇಕು, ಅವರುಗಳ ತಂದೆತಾಯಿಯರು ವಿಚ್ಛೇದನ ಪಡೆದರೂ ಅಥವಾ ಪಡೆದಿದ್ದರೂ. ವಯಸ್ಕತೆಯಿಂದ ಭಿನ್ನವಾಗಿರುವ ಸ್ಥಿತಿಯಾಗಿ ಬಾಲ್ಯವನ್ನು ಗುರುತಿಸುವುದು ೧೬ನೇ ಮತ್ತು ೧೭ನೇ ಶತಮಾನಗಳಲ್ಲಿ ಉದಯಿಸಲು ಪ್ರಾರಂಭವಾಯಿತು. ಸಮಾಜವು ಮಗುವಿನೊಂದಿಗೆ ಕಿರು ವಯಸ್ಕನಾಗಿ ಅಲ್ಲದೇ ವಯಸ್ಕರ ರಕ್ಷಣೆ, ಪ್ರೀತಿ ಮತ್ತು ಪಾಲನೆಯ ಅಗತ್ಯವಿರುವ ಕಡಿಮೆ ಪರಿಪಕ್ವತಾ ಮಟ್ಟದ ವ್ಯಕ್ತಿಯೆಂದು ಸಂಬಂಧ ಕಲ್ಪಿಸಲು ಆರಂಭಿಸಿತು. ಈ ಬದಲಾವಣೆಯನ್ನು ವರ್ಣಚಿತ್ರಗಳಲ್ಲಿ ಪತ್ತೆಹಚ್ಚಬಹುದು: ಮಧ್ಯಯುಗದಲ್ಲಿ, ಕಲೆಯಲ್ಲಿ ಮಕ್ಕಳನ್ನು ಯಾವುದೇ ಮಗುವಿನಂಥ ಗುಣಲಕ್ಷಣಗಳಿಲ್ಲದ ಕಿರು ವಯಸ್ಕರಾಗಿ ಬಿಂಬಿಸಲಾಗಿತ್ತು. ೧೬ನೇ ಶತಮಾನದಲ್ಲಿ, ಮಕ್ಕಳ ಚಿತ್ರಗಳು ವಿಶಿಷ್ಟ ಮಗುವಿನಂಥ ನೋಟವನ್ನು ಪಡೆಯಲು ಪ್ರಾರಂಭವಾಯಿತು. ೧೭ನೇ ಶತಮಾನದ ಕೊನೆಯಿಂದ ಮುಂದಕ್ಕೆ, ಆಟಿಕೆಗಳೊಂದಿಗೆ ಆಡುತ್ತಿರುವಂತೆ ಮಕ್ಕಳನ್ನು ತೋರಿಸಲಾಯಿತು ಮತ್ತು ನಂತರ ಈ ಸಮಯದಲ್ಲಿ ಮಕ್ಕಳ ಸಾಹಿತ್ಯವು ಬೆಳೆಯಲು ಆರಂಭವಾಯಿತು.

ಮಗು: ಹುಟ್ಟು ಮತ್ತು ಯವ್ವನದ ನಡುವಿನ ಮನುಷ್ಯ
ಒಂದು ವರ್ಷದ ಮಗು- Toddler

ಪ್ರತಿಯೊಂದು ಮಗುವು ಸಾಮಾಜಿಕ ಬೆಳವಣಿಗೆಯ ಅನೇಕ ಹಂತಗಳ ಮೂಲಕ ಸಾಗುತ್ತದೆ. ಒಂದು ಶಿಶು ಅಥವಾ ಬಹಳ ಚಿಕ್ಕ ಮಗುವು ಒಂಟಿಯಾಗಿ ಖುಶಿಯಿಂದ ಆಡುತ್ತದೆ. ಆ ಪರಿಸ್ಥಿತಿಯಲ್ಲಿ ಮತ್ತೊಂದು ಮಗುವು ಬಂದರೆ, ಆ ಮಗುವನ್ನು ಇತರ ಮಗುವು ದೈಹಿಕವಾಗಿ ದಾಳಿ ಮಾಡಬಹುದು ಅಥವಾ ದಾರಿಯಿಂದ ಹೊರಗೆ ಸರಿಸಬಹುದು. ನಂತರ, ಮಗುವು ಮತ್ತೊಂದು ಮಗುವಿನ ಜೊತೆ ಆಡಬಹುದು, ಮತ್ತು ಕ್ರಮೇಣವಾಗಿ ಹಂಚಿಕೊಳ್ಳುವುದು ಮತ್ತು ಸರದಿಗಾಗಿ ಕಾಯುವುದನ್ನು ಕಲಿಯಬಹುದು. ಅಂತಿಮವಾಗಿ, ಗುಂಪು ದೊಡ್ಡದಾಗುತ್ತದೆ, ಮತ್ತು ಮೂರು ಅಥವಾ ನಾಲ್ಕು ಮಕ್ಕಳು ಇರಬಹುದು. ಒಂದು ಮಗುವು ಶಿಶುವಿಹಾರವನ್ನು ಪ್ರವೇಶಿಸುವ ವೇಳೆಗೆ, ಅದು ಸಾಮಾನ್ಯವಾಗಿ ಗುಂಪುಗಳಲ್ಲಿ ಸೇರಿಕೊಂಡು ಗುಂಪು ಅನುಭವಗಳನ್ನು ಆನಂದಿಸಬಲ್ಲದು. ಮಗುವಿನ ಬೆಳವಣಿಗೆಯಲ್ಲಿ ಮಗುವಿನ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಸರ ಪ್ರಮುಖ ಪಾತ್ರ ವಹಿಸುತ್ತವೆ.ಮಗುವಿನ ಎಲ್ಲಾ ತರಹ ಬೆಳವಣಿಗೆಗಳಲ್ಲಿ ಪೋಷಕರ ಪಾತ್ರ ಪ್ರಮುಖವಾಗುತ್ತದೆ.ಪೋಷಕರು ಮಗುವಿನ ನಡವಳಿಕೆಗಳನ್ನು ಬದಲಾಯಿಸಲು ಬಯಸಿ ಮಗುವನ್ನು ದಂಡಿಸುವ ಮೊದಲು ತಮ್ಮ ನಡೆ ನುಡಿಗಳನ್ನು ಮಗುವಿಗೆ ಮಾದರಿಯಾಗುವಂತೆ ಬದಲಾಯಿಸಿಕೊಂಡರೆ ಮಾತ್ರವೇ ಮಗುವನ್ನು ದಂಡಿಸುವ ಪ್ರಮೇಯವೆ ಬರದು.

ಹೊರ ಸಂಪರ್ಕ

ಉಲ್ಲೇಖಗಳು

Tags:

ಜನನಬಾಲಕಾರ್ಮಿಕಹಸಿವು

🔥 Trending searches on Wiki ಕನ್ನಡ:

ಜಲ ಮಾಲಿನ್ಯಚೋಳ ವಂಶಬೇವುವಿದುರಾಶ್ವತ್ಥಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕರ್ನಾಟಕ ಲೋಕಸಭಾ ಚುನಾವಣೆ, 2019ಕರ್ನಾಟಕದ ಅಣೆಕಟ್ಟುಗಳುಶ್ರವಣಬೆಳಗೊಳಶ್ರೀಧರ ಸ್ವಾಮಿಗಳುಎಸ್.ಎಲ್. ಭೈರಪ್ಪಪೊನ್ನಮತದಾನಪ್ರಜಾವಾಣಿಸಂಗೊಳ್ಳಿ ರಾಯಣ್ಣಭೂಕುಸಿತಕಲ್ಲುಹೂವು (ಲೈಕನ್‌ಗಳು)ಯಣ್ ಸಂಧಿಪಾಲಕ್ತಾಳೀಕೋಟೆಯ ಯುದ್ಧಮೂಳೆಮಂಡ್ಯಬಾಬು ಜಗಜೀವನ ರಾಮ್ಕ್ಯಾರಿಕೇಚರುಗಳು, ಕಾರ್ಟೂನುಗಳುಸರ್ಪ ಸುತ್ತುಮುರುಡೇಶ್ವರಅದ್ವೈತಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಸಾರ್ವಜನಿಕ ಹಣಕಾಸುಕೈಗಾರಿಕಾ ನೀತಿಕೊಡಗುಕೆಂಪು ಕೋಟೆಟಿಪ್ಪು ಸುಲ್ತಾನ್ಪಾಂಡವರುಚದುರಂಗದ ನಿಯಮಗಳುಭಾರತದಲ್ಲಿನ ಚುನಾವಣೆಗಳುಅಶ್ವತ್ಥಾಮಚಾರ್ಲಿ ಚಾಪ್ಲಿನ್ಶ್ರೀ ಕೃಷ್ಣ ಪಾರಿಜಾತಡೊಳ್ಳು ಕುಣಿತದಾಳಿಂಬೆಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಬಾದಾಮಿಇಸ್ಲಾಂ ಧರ್ಮಗುಬ್ಬಚ್ಚಿಪೋಕ್ಸೊ ಕಾಯಿದೆದಲಿತ1935ರ ಭಾರತ ಸರ್ಕಾರ ಕಾಯಿದೆಕ್ರಿಯಾಪದ೧೮೬೨ಪ್ರದೀಪ್ ಈಶ್ವರ್ಆವಕಾಡೊಭಾರತದ ರಾಷ್ಟ್ರೀಯ ಉದ್ಯಾನಗಳುಅಲಾವುದ್ದೀನ್ ಖಿಲ್ಜಿಗೂಗಲ್ಭಾರತೀಯ ಭಾಷೆಗಳುಹನಿ ನೀರಾವರಿವೈದೇಹಿಕರ್ನಾಟಕ ಸಂಗೀತತಂತಿವಾದ್ಯನುಡಿ (ತಂತ್ರಾಂಶ)ಧರ್ಮವ್ಯಂಜನಪಗಡೆದಸರಾವಾಯು ಮಾಲಿನ್ಯಜನಪದ ಕಲೆಗಳುಸಂಯುಕ್ತ ಕರ್ನಾಟಕಹೆಣ್ಣು ಬ್ರೂಣ ಹತ್ಯೆಕರ್ನಾಟಕ ವಿಧಾನ ಪರಿಷತ್ಬಾಗಿಲುಮಂಗಳೂರುಹನುಮಾನ್ ಚಾಲೀಸಕಾಂತಾರ (ಚಲನಚಿತ್ರ)ಜೀವವೈವಿಧ್ಯನರೇಂದ್ರ ಮೋದಿ🡆 More