ವಿಕ್ಟೋರಿಯಾ ಸರೋವರ

ವಿಕ್ಟೋರಿಯಾ ಸರೋವರವು ಆಫ್ರಿಕಾದ ಮಹಾಸರೋವರಗಳಲ್ಲಿ ಒಂದಾಗಿದೆ.

ಸುಮಾರು ೬೮೦೦೦ ಚದರ ಕಿ.ಮೀ.ಗಳಷ್ಟು ವಿಸ್ತಾರವಾಗಿರುವ ಈ ಸರೋವರವು ಜಗತ್ತಿನ ಎರಡನೆಯ ಅತಿ ಅಗಲವಾದ ಸಿಹಿನೀರಿನ ಸರೋವರವಾಗಿದೆ. ಈ ಗಾತ್ರದ ಹೊರತಾಗಿಯೂ ಸರೋವರದ ಆಳ ಬಲು ಕಡಿಮೆಯಿರುವುದರಿಂದಾಗಿ ಇದರಲ್ಲಿನ ನೀರು ಜಗತ್ತಿನ ೭ನೆಯ ಅತಿ ಹೆಚ್ಚು ಪ್ರಮಾಣದ್ದು. ವಿಕ್ಟೋರಿಯಾ ಸರೋವರದ ಸರಾಸರಿ ಆಳವು ೪೦ ಮೀಟರ್‌ಗಳಷ್ಟಿದ್ದರೆ ಗರಿಷ್ಠ ಆಳ ೮೪ ಮೀ. ಇದರಲ್ಲಿರುವ ನೀರಿನ ಒಟ್ಟು ಪ್ರಮಾಣ ಸುಮಾರು ೨೭೫೦ ಘನ ಕಿ.ಮೀ. ಗಳಷ್ಟು. ನೈಲ್ ನದಿಯ ಹಿರಿಯ ಅಂಗವಾದ ಬಿಳಿ ನೈಲ್ ನದಿಗೆ ವಿಕ್ಟೋರಿಯಾ ಸರೋವರವು ಮೂಲ. ಈ ಸರೋವರದ ಜಲಾನಯನ ಪ್ರದೇಶದ ವಿಸ್ತಾರ ೧೮೪೦೦೦ ಚದರ ಕಿ.ಮೀ.ಗಳು. ಸರಸ್ಸಿನ ಸುತ್ತಳತೆ ೩೪೪೦ ಕಿ.ಮೀ. ಗಳಾಗಿದ್ದು ಸರಸ್ಸಿನಲ್ಲಿ ೩೦೦೦ಕ್ಕೂ ಹೆಚ್ಚು ದ್ವೀಪಗಳಿವೆ. ವಿಕ್ಟೋರಿಯಾ ಸರೋವರದ ಮೇಲೆ ಟಾಂಜಾನಿಯ, ಉಗಾಂಡ ಮತ್ತು ಕೆನ್ಯಾ ರಾಷ್ಟ್ರಗಳ ಅಧಿಪತ್ಯವಿದೆ.

ವಿಕ್ಟೋರಿಯಾ ಸರೋವರ
ಅಂತರಿಕ್ಷದಿಂದ ವಿಕ್ಟೋರಿಯಾ ಸರೋವರದ ನೋಟ. ಬದಿಯಲ್ಲಿ ಆಫ್ರಿಕಾದ ಇತರ ಮಹಾಸರೋವರಗಳನ್ನು ಮತ್ತು ಚಿತ್ರದ ಅಂಚಿನಲ್ಲಿ ಮೋಡಗಳಿಂದ ಆವೃತವಾದ ಕಾಂಗೋ ಮಳೆಕಾಡನ್ನು ಕಾಣಬಹುದು.

ಬಾಹ್ಯ ಸಂಪರ್ಕಗಳು

Tags:

ಆಫ್ರಿಕಾಉಗಾಂಡಕೆನ್ಯಾಜಲಾನಯನ ಪ್ರದೇಶಟಾಂಜಾನಿಯನೈಲ್

🔥 Trending searches on Wiki ಕನ್ನಡ:

ಕುದುರೆಜೋಗಿ (ಚಲನಚಿತ್ರ)ಭತ್ತಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಗಣೇಶಎ.ಎನ್.ಮೂರ್ತಿರಾವ್ಆಗಮ ಸಂಧಿವಿಕ್ರಮಾರ್ಜುನ ವಿಜಯಸರಾಸರಿತೆನಾಲಿ ರಾಮ (ಟಿವಿ ಸರಣಿ)ಮಂಕುತಿಮ್ಮನ ಕಗ್ಗಭರತನಾಟ್ಯಮಡಿವಾಳ ಮಾಚಿದೇವಬಿಳಿಗಿರಿರಂಗನ ಬೆಟ್ಟವಿಜಯನಗರದೆಹಲಿ ಸುಲ್ತಾನರುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಅಲಂಕಾರನೀತಿ ಆಯೋಗನದಿಕಂಪ್ಯೂಟರ್ಸರ್ಪ ಸುತ್ತುಶ್ರೀನಿವಾಸ ರಾಮಾನುಜನ್ಕನ್ನಡದಲ್ಲಿ ಗಾದೆಗಳುಪ್ರಬಂಧಎರಡನೇ ಮಹಾಯುದ್ಧಕರ್ನಾಟಕದ ಅಣೆಕಟ್ಟುಗಳುಭಾರತೀಯ ಭಾಷೆಗಳುರಾಷ್ಟ್ರೀಯ ಸೇವಾ ಯೋಜನೆಆದಿವಾಸಿಗಳುಬಡ್ಡಿ ದರಮಳೆಪರೀಕ್ಷೆಶ್ರೀ ರಾಮಾಯಣ ದರ್ಶನಂಮೈಸೂರುತೆಲುಗುರೋಮನ್ ಸಾಮ್ರಾಜ್ಯರಾಷ್ತ್ರೀಯ ಐಕ್ಯತೆಭಾರತದ ರಾಷ್ಟ್ರಪತಿಗಳ ಪಟ್ಟಿಸಾವಯವ ಬೇಸಾಯಸಹಕಾರಿ ಸಂಘಗಳುವಂದೇ ಮಾತರಮ್ಭೋವಿಗುಡಿಸಲು ಕೈಗಾರಿಕೆಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ರಾಜ್ಯೋತ್ಸವಶ್ಯೆಕ್ಷಣಿಕ ತಂತ್ರಜ್ಞಾನಶಕ್ತಿಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಮತದಾನಅಳಿಲುನುಡಿ (ತಂತ್ರಾಂಶ)ರೈತಪಶ್ಚಿಮ ಘಟ್ಟಗಳುಸಂಧಿಬೆಳ್ಳುಳ್ಳಿಕಂದಸೀತೆರತನ್ ನಾವಲ್ ಟಾಟಾಉಪೇಂದ್ರ (ಚಲನಚಿತ್ರ)ಭಾರತದಲ್ಲಿನ ಶಿಕ್ಷಣವಾಯು ಮಾಲಿನ್ಯಧರ್ಮದೇವನೂರು ಮಹಾದೇವಮಹಿಳೆ ಮತ್ತು ಭಾರತನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಆವಕಾಡೊತುಂಗಭದ್ರ ನದಿವ್ಯವಸಾಯತಾಜ್ ಮಹಲ್ರಾಷ್ಟ್ರೀಯತೆಕೊರೋನಾವೈರಸ್ಮಲ್ಲಿಕಾರ್ಜುನ್ ಖರ್ಗೆಶಿಶುಪಾಲಮಾನವ ಸಂಪನ್ಮೂಲ ನಿರ್ವಹಣೆಡಿ.ಕೆ ಶಿವಕುಮಾರ್ಪಂಪ ಪ್ರಶಸ್ತಿ🡆 More