ಬಂಗಾಳಿ ಭಾಷೆ

ಬಂಗಾಳಿ ಅಥವಾ ಬಾಂಗ್ಲ ಇಂಡೊ-ಯೂರೋಪಿಯನ್ ಪಂಗಡಕ್ಕೆ ಸೇರಿದ ಭಾಷೆ.ಸಂಸ್ಕೃತ ಮತ್ತು ಪಾಳಿ ಭಾಷೆಗಳನ್ನು ಪೂರ್ವಜರನ್ನಾಗಿ ಹೊಂದಿರುವ ಈ ಭಾಷೆ, ಭಾರತದ ಪಶ್ಚಿಮ ಬಂಗಾಳದ ರಾಜ್ಯ ಭಾಷೆ ಮತ್ತು ಬಾಂಗ್ಲಾದೇಶದ ರಾಷ್ಟ್ರಭಾಷೆ.

ಸುಮಾರು ೨೦.೭ ಕೋಟಿ ಜನ ಈ ಭಾಷೆ ಮಾತನಾಡುತ್ತಾರೆ.

ಬಂಗಾಳಿ
বাংলা Bangla
ಬಂಗಾಳಿ ಭಾಷೆ
ಬಳಕೆಯಲ್ಲಿರುವ 
ಪ್ರದೇಶಗಳು:
ಬಾಂಗ್ಲಾದೇಶ, India (mainly in ಪಶ್ಚಿಮ ಬಂಗಾಳ, Tripura, Barak Valley of Assam), Bengali communities in East India and North-East India, and amongst the Bengali diaspora worldwide.
ಒಟ್ಟು 
ಮಾತನಾಡುವವರು:
೨೧೦ million
ಭಾಷಾ ಕುಟುಂಬ: Indo-European
 ಇಂಡೋ ಯುರೋಪಿಯನ್|ಇಂಡೋ ಇರಾನಿಯನ್
  Indo-Aryan
   Eastern
    Assamese–Bengali
     ಬಂಗಾಳಿ 
ಬರವಣಿಗೆ: Bengali alphabet
Indian Bengali Braille
Bangladeshi Bengali Braille 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಬಂಗಾಳಿ ಭಾಷೆ ಬಾಂಗ್ಲಾದೇಶ
ಬಂಗಾಳಿ ಭಾಷೆ ಭಾರತ; in following States and Union territory:
ನಿಯಂತ್ರಿಸುವ
ಪ್ರಾಧಿಕಾರ:
Bangla Academy (Bangladesh)
Paschimbanga Bangla Akademi (ಪಶ್ಚಿಮ ಬಂಗಾಳ)
ಭಾಷೆಯ ಸಂಕೇತಗಳು
ISO 639-1: bn
ISO 639-2: ben
ISO/FDIS 639-3: ben 
ಬಂಗಾಳಿ ಭಾಷೆ
Indic script
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...

ಬಂಗಾಳೀ ಭಾಷೆ - ಪಶ್ಚಿಮ ಬಂಗಾಳ ರಾಜ್ಯದ ಭಾಷೆ: ನೆರೆಯ ಬಾಂಗ್ಲದೇಶದಲ್ಲಿ ರಾಷ್ಟ್ರಭಾಷೆ: ಗಂಗಾನದಿ ಬಯಲಿನ ಉತ್ತರ ಮತ್ತು ಪೂರ್ವ ಭಾಗದಲ್ಲಿ ಹಬ್ಬಿರುವ ಬಂಗಾಳ ಪ್ರಾಂತ್ಯದ ಜನರ ಭಾಷೆ. ಇದು ಇಂಡೋ ಆರ್ಯನ್ ಭಾಷಾವರ್ಗದ ಮುಖ್ಯಭಾಷೆಗಳಲ್ಲಿ ಒಂದಾಗಿದ್ದು, ಮಾಗಧಿ ಅಪಭ್ರಂಶದ ಪೂರ್ವೀರೂಪದಿಂದ ವಿಕಾಸಗೊಂಡಿದೆ ಎಂದು ಭಾಷಾತಜ್ಞರ ಅಭಿಪ್ರಾಯ. ಭಾರತ, ಪಾಕಿಸ್ತಾನ, ಬಾಂಗ್ಲ ದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 80,000,000 ಜನ ಈ ಭಾಷೆಯನ್ನಾಡುತ್ತಾರೆ.

ಬಂಗ ಎಂಬ ಪದಕ್ಕೆ ಆಲ್ ಪ್ರತ್ಯಯ ಸೇರುವುದರ ಮೂಲಕ ಬಂಗಾಲಿ (ಬಂಗಾಳಿ) ಪದ ರೂಪುಗೊಂಡಿದೆ. ಈ ಪದ ಭಾಷಾಸೂಚಕ, ಸ್ಥಳಸೂಚಕ, ಹಾಗು ಜನಸಮುದಾಯಸೂಚಕ ರೂಪವಾಗಿ ಬಂದಿವೆ. ಬಂಗಾಳೀ ಪದಕ್ಕೆ ಪರ್ಯಾಯವಾಗಿ ಗೌಡಿ, ಮಾಗಧಿ, ಗೊಲ್ಲ ಎಂದೂ ಕರೆಯುವರು.

779ರಲ್ಲಿ ರಚಿತವಾದ ಕುವಲಯಮಾಲಾ ಎಂಬ ಗ್ರಂಥದಲ್ಲಿ ಈ ಪದವನ್ನು ಭಾಷೆ ಎಂಬಂರ್ಥದಲ್ಲಿ ಮೊತ್ತಮೊದಲು ಬಳಸಲಾಗಿದೆ. ಬಂಗಾಳೀ ಭಾಷೆಯಲ್ಲಿ ಪ್ರಾಚೀನ ಬಂಗಾಳೀ (ಸುಮಾರು 950-1350). ಮಧ್ಯಕಾಲೀನ ಬಂಗಾಳಿ (ಸುಮಾರು 1350-1800) ಮತ್ತು ಆಧುನಿಕ ಬಂಗಾಳಿ (1800ರಿಂದ ಈಚೆಗೆ) ಎಂಬ ಮೂರು ಅವಸ್ಥಾಭೇದಗಳಿವೆ. ಮಧ್ಯಕಾಲೀನ ಬಂಗಾಳಿಯಲ್ಲಿ ಮೊದಲಿನದು ಮತ್ತು ಆಮೇಲಿನದು ಎಂಬ ಎರಡು ಸ್ತರಗಳನ್ನು ಗುರ್ತಿಸಬಹುದು. ಮೊದಲದರ ಕಾಲ 1350-1500ರ ತನಕ; ಆಮೇಲಿನದರ ಕಾಲ 1500-1800ರ ತನಕ. ಮೊದಲಿನ ಮಧ್ಯಕಾಲೀನ ಬಂಗಾಳಿಯಿಂದ ಆಮೇಲಿನ ಮಧ್ಯಕಾಲೀನ ಬಂಗಾಳಿಯನ್ನು ಪ್ರತ್ಯೇಕಿಸುವ ಪ್ರಧಾನ ಲಕ್ಷಣಗಳಿವು: 1. ನಾಮಪದಗಳ ಮತ್ತು ಸರ್ವನಾಮಗಳ ಬಹುವಚನಸೂಚಕ ವಿಭಕ್ತಿ ಪ್ರತ್ಯಯಗಳನ್ನು ನಿರ್ಮಿಸಿದುದು, 2. ನಿರ್ದಿಷ್ಟ ಕ್ರಿಯಾಪದಗಳಿಂದ ವಚನಸೂಚಕಗಳು ಮಾಯವಾದ್ದು ಮತ್ತು ಆಖ್ಯಾತ ಪ್ರತ್ಯಯವನ್ನು ಹಚ್ಚದೆ ಸಹಾಯಕ ಕ್ರಿಯಾಪದವನ್ನು ಕಾಲತ್ರಯದಲ್ಲಿ ನಡೆಸಿದ್ದು; ಮತ್ತು 3. ಅಧಿಕ ಸಂಖ್ಯೆಯ ಪಾರ್ಸಿಯನ್-ಅರಾಬಿಕ್ ಪದಗಳನ್ನು ಸೇರಿಸಿಕೊಂಡುದು. ಮಧ್ಯಕಾಲೀನ ಬಂಗಾಳಿಯಲ್ಲಿ ಉದ್ದಕ್ಕೂ ಪೂರ್ತಿ ಒಂದು ವಿಶಿಷ್ಟವಾದ ಕಾವ್ಯಭಾಷೆ ಅಥವಾ ಪ್ರಕ್ರಿಯಾಪದಗಳು ಬಳಕೆಯಾಗಿವೆ. ಈ ಭಾಷೆಯನ್ನು ಬ್ರಜಬುಲಿ ಎನ್ನುತ್ತಾರೆ. ಅವಹಟ್ಠ ಕಾವ್ಯಸಂಪ್ರದಾಯ ಇದಕ್ಕೆ ಅಧಾರ. ಈ ಭಾಷೆಗೆ ಅನಂತರ ಸಂಸ್ಕøತ ಪದಗಳ ಜೊತೆಗೆ ಪಾರ್ಸಿ (ಅರಾಬಿಕ್ ಮತ್ತು ಸ್ವಲ್ಪ ತುರ್ಕಿ ಸೇರಿ) ಪದಗಳೂ ಸೇರಿದವು. ಬ್ರಿಟಿಷರು ಬಂಗಾಳದ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ತನಕ ಎಂದರೆ 18ನೆಯ ಶತಮಾನದ ಮಧ್ಯಕಾಲದ ತನಕ ಪರ್ಷಿಯನ್ ಪದಗಳ ಸ್ವೀಕರಣ ನಡೆಯುತ್ತಿತ್ತು. ಆ ವೇಳೆಗೆ ಪರ್ಷಿಯನ್ (ಮತ್ತು ಅರಾಬಿಕ್) ಭಾಷೆಗಳ ಕೆಲವು ವಿಭಕ್ತಿ ಪ್ರತ್ಯಯಗಳ ಬಳಕೆಯೂ ನಡೆದಿತ್ತು ಮತ್ತು ದಸ್ತಾವೇಜಿನ ಗದ್ಯಶೈಲಿಯನ್ನು ರೂಪಿಸಿತ್ತು. ಅನಂತರದ ದಿನಗಳಲ್ಲಿ ಇಂಗ್ಲಿಷ್ ಭಾಷೆಯ ಜೊತೆಗೆ ಪೋರ್ಚುಗೀಸ್ ಭಾಷೆಯ ಅನೇಕ ಪದಗಳು ಬಂಗಾಳಿ ಭಾಷೆಗೆ ಸೇರಿದುವು. ಇಂಗ್ಲಿಷ್ ವಿದ್ಯಾಭ್ಯಾಸ ಹರಡುತ್ತ ಬಂದಂತೆ ಬಂಗಾಳಿ ಭಾಷೆಯ ಮೇಲೆ ಇಂಗ್ಲಿಷ್‍ಭಾಷಾ ಪ್ರಭಾವ ಅಧಿಕವಾಯಿತು. ಇದನ್ನು ಮುಖ್ಯವಾಗಿ ಎರಡು ರೀತಿ ಗುರುತಿಸಬಹುದು. 1. ಬಂಗಾಳಿಯಲ್ಲಿ ತಕ್ಕ ಸಮಾನಾರ್ಥಕವಾಗಲಿ, ಸಮೀಪಾರ್ಥಕವಾಗಲಿ ಇಲ್ಲದ ಪದಗಳ ಮತ್ತು ಈ ದೇಶಕ್ಕೆ ತಿಳಿಯುವ ವಸ್ತುಗಳನ್ನು ಕುರಿತು ಪದಗಳ ಸೇರುವಿಕೆ, 2. ಇಂಗ್ಲಿಷ್ ಭಾಷೆಯ ಮತ್ತು ಸಾಹಿತ್ಯದ ನೇರವಾದ ಪ್ರಭಾವವೆಂದೇ ಹೇಳಲಾಗದ ರೀತಿಯಲ್ಲಿ ಬಂಗಾಳಿ ಗದ್ಯಶೈಲಿಯೊಂದರ ಬೆಳೆವಣಿಗೆ.

ಬಂಗಾಳಿ ಗ್ರಾಂಥಿಕ ಶೈಲಿ

ಬಂಗಾಳೀ ಭಾಷೆಯಲ್ಲಿ ಇಂದು ಎರಡು ಗ್ರಾಂಥಿಕ ಶೈಲಿಗಳಿವೆ:

ಸಾಧು ಭಾಷೆ (ಒಪ್ಪವಾದ್ದು)

16ನೆಯ ಶತಮಾನದ ಮಧ್ಯಕಾಲೀನ ಬಂಗಾಳಿ ಭಾಷೆಯ ಆಧಾರವುಳ್ಳ ಸಾಂಪ್ರದಾಯಿಕ ಸಾಹಿತ್ಯ ಶೈಲಿ, ಎರಡನೆಯದು ಈ ಶತಮಾನದಲ್ಲಿ ನಿರ್ಮಾಣಗೊಂಡದ್ದು. ಈ ಎರಡೂ ರೂಪಗಳ ನಡುವಣ ವ್ಯತ್ಯಾಸವಿರುವುದು ಕ್ರಿಯಾಪದ ಮತ್ತು ಸರ್ವ ನಾಮರೂಪಗಳಲ್ಲಿ. ಮೊದಲ ರೂಪದಲ್ಲಿ ಸಂಸ್ಕøತ ಪದಗಳು ಹೆಚ್ಚಾಗಿ ಕಂಡುಬಂದರೆ,

ಚಲಿತ ಭಾಷೆ (ಬಳಕೆಯ ಭಾಷೆ)

ಜನಬಳಕೆಯ ಮಾತುಗಳು, ಪದಪುಂಜಗಳು, ನುಡಿಗಟ್ಟುಗಳು ಹೆಚ್ಚಾಗಿ ಕಂಡುಬರುತ್ತವೆ. ಇಲ್ಲಿಯ ಅಯೋಗಾತ್ಮಕ ಪದಗಳಲ್ಲಿ ಪೂರ್ವಾಕ್ಷರದ ಮೇಲೆ ಬಲಘಾತ ಬೀಳುತ್ತದೆ. ಪುಲ್ಲಿಂಗ ಸ್ತ್ರೀಲಿಂಗ ಭೇದಗಳೂ ಏಕವಚನ ಬಹುವಚನ ರೂಪಗಳೂ ಇವೆ. ಬಹುವಚನ ರೂಪದ ಸಾಮಾನ್ಯ ಅಂತ್ಯಪ್ರತ್ಯಯಗಳೆಂದರೆ_ರಾ,_ಏರಾ,_ದೇರ್,_ಏದೇರ್,-ಗುಲಾ,-ಗಲೀ ಇವು ಸಚೇತನ ಮತ್ತು ಅಚೇತನ ನಾಮಪದಗಳಿಗೆ ಹತ್ತುತ್ತವೆ. ವಿಶೇಷಣರೂಪ ಲಿಂಗ ವಚನ ಅಥವಾ ವಿಭಕ್ತಿ ರೂಪಗಳಲ್ಲಿ ಹೆಚ್ಚಾಗಿ ಪರಿವರ್ತನೆಗೊಳ್ಳುವುದಿಲ್ಲ. ಪುರುಷಾರ್ಥಕ ಸರ್ವನಾಮಗಳಲ್ಲಿಯ ಮಧ್ಯಮ ಪುರುಷದಲ್ಲಿ ಸಾಮಾನ್ಯ (ಕಾಮನ್), ಗೌಣ (ಇನ್‍ಫೀರಿಯರ್) ಮತ್ತು ಗೌರವಸೂಚಕ (ಅನೋರಿಫಿಕ್) ಎಂಬ ಮೂರು ರೂಪಗಳಿವೆ ಮತ್ತು ಪ್ರಥಮ ಪುರುಷದಲ್ಲಿ ಸಾಮಾನ್ಯ ಮತ್ತು ಗೌರವಸೂಚಕ ಎಂಬ ಎರಡು ರೂಪಗಳು ಮಾತ್ರ ಇವೆ. ಪ್ರಥಮ ಪುರುಷದ ಮೂರು ಸರ್ವನಾಮಗಳು ನಿರ್ದೇ ಶಾತ್ಮಕ ಸರ್ವನಾಮಗಳಾಗಿಯೂ ಬಳಕೆಗೊಳ್ಳುತ್ತವೆ. ಕ್ರಿಯಾಪದಗಳಲ್ಲಿ ಏಕವಚನ ಬಹುವಚನ ರೂಪಗಳು ಸ್ಪಷ್ಟವಾಗಿಲ್ಲ. ಧಾತುಗಳಲ್ಲಿ ಸಾಮಾನ್ಯ ಮತ್ತು ಸಂಕೀರ್ಣ ಎಂದು ಎರಡು ವಿಧ: 1. ಸಾಮಾನ್ಯ ಧಾತುಗಳಿಗೆ ಪುರುಷವಾಚಕ ಅಂತ್ಯಪ್ರತ್ಯಯಗಳು ನೇರವಾಗಿ ಹತ್ತುತ್ತವೆ. 2. ಸಂಕೀರ್ಣ ಧಾತುಗಳಿಗೆ ಪುರುಷವಾಚಕ ಅಂತ್ಯಪ್ರತ್ಯಯಗಳು ಸೇರುವ ಮುನ್ನ ಧಾತುಗಳು ಅಂತ್ಯಪ್ರತ್ಯಯೀಕರಣಕ್ಕೆ ಒಳಗಾಗಿರುತ್ತವೆ. ಭೂತ ಕಾಲದ ಅಂತ್ಯಪ್ರತ್ಯಯ-ಲ-, ಭವಿಷ್ಯತ್ ಕಾಲದ್ದು-ಬ ಮತ್ತು ಸಾಪೇಕ್ಷ ರೂಪದ್ದು-ತ-.ಬಂಗಾಳೀ ಭಾಷೆಗೆ ತನ್ನದೇ ಆದ ಲಿಪಿಯಿದೆ. ಇದು ದೇವನಾಗರಿಯ ಒಂದು ರೂಪ. ಇದರ ಉಗಮ ಮತ್ತು ವಿಕಾಸದ ವಿಚಾರದಲ್ಲಿ ಒಮ್ಮತವಿಲ್ಲ. ಇದು ಅಶೋಕ ಶಾಸನಗಳ ಬ್ರಾಹ್ಮೀ ಅಕ್ಷರಮಾಲೆಯಿಂದ ಹುಟ್ಟಿದೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಪ್ರಾಚೀನ ನಾಗರೀ ಲಿಪಿಯ ಪೂರ್ವರೂಪದಿಂದ ವಿಕಾಸಗೊಂಡಿದೆ ಎಂದು ಹೇಳುತ್ತಾರೆ. ಕುಟಲ ಲಿಪಿಯಿಂದ ಬಂಗಾಳಿ, ಅಸ್ಲಾಮಿ ಮತ್ತು ಮೈಥಿüಲಿ ಲಿಪಿಗಳು ವಿಕಾಸಗೊಂಡಿವೆಯೆಂದು ಹೇಳುವವರೂ ಉಂಟು, 1180ರಲ್ಲಿ ಬರೆಯಲಾದ ಬೌದ್ಧಗಯಾದ ಕೆಲವು ಶಿಲಾಲೇಖಗಳಲ್ಲಿ ಈ ಲಿಪಿಯ ಬಗೆಗೆ ಕೆಲವು ಉಲ್ಲೇಖಗಳು ದೊರೆಯುತ್ತವೆ. ಚಾಲ್ರ್ಸ್ ವಿಲ್ಕಿನ್ಸ್ ಎಂಬಾತ 1778ರಲ್ಲಿ ಬಂಗಾಳೀ ಅಕ್ಷರ ಮಾಲೆಯನ್ನು ಮುದ್ರಣಕ್ಕೆ ಮೊದಲಿಗೆ ಅಳವಡಿಸಿದ. ಈ ಭಾಷೆಯಲ್ಲಿ ಗಮನಿಸಬೇಕಾದ ವಿಚಾರವೆಂದರೆ ಲಿಪಿಗೂ ಉಚ್ಚಾರಣೆಗೂ ನಿಕಟ ಸಂಬಂಧವಿಲ್ಲದಿರುವುದು, ಸಾಮಾನ್ಯವಾಗಿ `ವ ಬರುವ ಕಡೆಗಳಲ್ಲೆಲ್ಲ `ಬ ಬರುತ್ತದೆ. (ಕವಿತ>ಕೊಬಿತೊ), `ಅ' ಕಾರಗಳು `ಒ' ಕಾರಗಳಾಗುತ್ತವೆ, (ಜಲ>ಜೊಲ್), ಸ,ಶ,ಷ ಇವುಗಳಲ್ಲಿ ಭೇದ ಕಂಡುಬರುವುದಿಲ್ಲ (ಸಮುದ್ರ>ಶೊಮುದ್ದೊ). ಮತ್ತು ವಿಜಾತೀಯ ಸಂಯುಕ್ತಾಕ್ಷರಗಳು ಸಜಾತೀಯವಾಗುತ್ತವೆ (ಲಕ್ಷ್ಮಿ>ಲೊಕ್ಖಿ).

ಬಂಗಾಳಿ ಭಾಷೆಯ ಪ್ರಾದೇಶಿಕ ವರ್ಗ

ಬಂಗಾಳೀ ಭಾಷೆಯಲ್ಲಿ ನಾಲ್ಕು ಮುಖ್ಯ ಪ್ರಾದೇಶಿಕ ವರ್ಗಗಳಿವೆ:

  1. ಪಶ್ಚಿಮ ಬಂಗಾಳಕ್ಕೆ ಸೇರಿದವು
  2. ಉತ್ತರ ಬಂಗಾಳದವು
  3. ಈಶಾನ್ಯ ಬಂಗಾಳವು
  4. ಪೂರ್ವ ಮತ್ತು ಆಗ್ನೇಯ ಬಂಗಾಳದವು.

ಮೊದಲೆಡರ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ. ಮೂರನೆಯ ವರ್ಗದಲ್ಲಿ ಆರ್ಯೇತರ ಭಾಷಾ ಪ್ರಭಾವ ಕಾಣಬಹುದು. ಆಗ್ನೇಯ ಬಂಗಾಳ ಉಪಭಾಷೆಯ ಮೇಲೆ ಟಿಬೆಟೋ-ಬರ್ಮನ್ ಭಾಷಾ ಪ್ರಭಾವವನ್ನು ಗುರುತಿಸಬಹುದು, ಪೂರ್ವ ಮತ್ತು ಪಶ್ಚಿಮ ಬಂಗಾಳದ ಉಪಭಾಷೆಗಳ ನಡುವೆ ಹೊಂದಾಣಿಕೆ ಇರುವುವು ಕಂಡುಬರುತ್ತದೆ. ಬಂಗಾಳೀ ಭಾಷೆಯ ಉಪಭಾಷೆಗಳನ್ನು ಗ್ರಿಯರ್‍ಸನ್ ಮಹಾಶಯ ಪರಿನಿಷ್ಟಿತ ಬಂಗಾಳೀ (ಶಿಷ್ಟಭಾಷೆ), ಪಶ್ವಿಮೀ ಬಂಗಾಳಿ, ದಕ್ಷಿಣ-ಪಶ್ಚಿಮೀ ಬಂಗಾಳಿ, ಉತ್ತರಿ ಬಂಗಾಳಿ, ರಾಜಭಾಂಗ್ಸಿ, ಪೂರ್ವೀಬಂಗಾಳಿ, ದಕ್ಷಿಣ-ಪೂರ್ವೀಬಂಗಾಳಿ ಎಂದು ವಿಭಾಗಿಸಿದ್ದಾನೆ, ಇವುಗಳ ಜೊತೆಗೆ ಪಶ್ಚಿಮೀ ಬಂಗಾಳಿಯಲ್ಲಿ ಸರಾಕಿ, ಖಡಿಯಠಾರ್, ಪಹಾಡಿಯಠಾರ್ ಮತ್ತು ಮಾಲ್‍ಪಹಾಡಿಯ ಎಂಬ ರೂಪಗಳೂ ಉತ್ತರಿ ಬಂಗಾಳಿಯಲ್ಲಿ ಕೋಚ್, ಸಿರ್ಪುರಿಯ ಎಂಬ ರೂಪಗಳೂ ಪೂರ್ವೀಬಂಗಾಳಿಯಲ್ಲಿ ಹೈಜೊಂಗ್, ಸಿಲ್ಹಟಿಯ ಮುಂತಾದ ರೂಪಗಳೂ ಇವೆ. ಹೈಜೊಂಗ್ ಎಂಬುದು ಬರ್ಮಿ, ಬಂಗಾಳಿ ಮತ್ತು ಟಿಬೆಟ್ಟಿ ಭಾಷಾರೂಪಗಳ ಮಿಶ್ರಣವಾಗಿ ಕಂಡುಬರುತ್ತದೆ. ಭಾರತ ಸ್ವತಂತ್ರವಾದ ಮೇಲೆ ಪಶ್ಚಿಮ ಬಂಗಾಳದ ಬಂಗಾಳೀ ಭಾಷೆ ಮತ್ತು ಸಾಹಿತ್ಯವು ಪೂರ್ಣ ಬಂಗಾಳದ (ಬಾಂಗ್ಲಾದೇಶ) ಭಾಷೆ ಮತ್ತು ಸಾಹಿತ್ಯಕ್ಕಿಂತ ಭಿನ್ನವಾಗಿ ಬೆಳೆಯಲು ಅವಕಾಶವಾಗಿದೆ.

ಆಧುನಿಕ ಬಂಗಾಳೀ ಭಾಷೆ ಮತ್ತು ಸಾಹಿತ್ಯವನ್ನು ಕುರಿತು ವ್ಯಾಪಕ ಅಧ್ಯಯನ ನಡೆಯುತ್ತಿದೆ. ಇದರಿಂದ ಅನೇಕ ಹೊಸ ವಿಚಾರಗಳು ತಿಳಿದುಬರುತ್ತಿವೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಬಂಗಾಳಿ ಭಾಷೆ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಬಂಗಾಳಿ ಭಾಷೆ ಬಂಗಾಳಿ ಗ್ರಾಂಥಿಕ ಶೈಲಿಬಂಗಾಳಿ ಭಾಷೆ ಯ ಪ್ರಾದೇಶಿಕ ವರ್ಗಬಂಗಾಳಿ ಭಾಷೆ ಉಲ್ಲೇಖಗಳುಬಂಗಾಳಿ ಭಾಷೆ ಬಾಹ್ಯ ಸಂಪರ್ಕಗಳುಬಂಗಾಳಿ ಭಾಷೆಪಶ್ಚಿಮ ಬಂಗಾಳಬಾಂಗ್ಲಾದೇಶಭಾರತ

🔥 Trending searches on Wiki ಕನ್ನಡ:

ಭಕ್ತ ಪ್ರಹ್ಲಾದಥಿಯೊಸೊಫಿಕಲ್ ಸೊಸೈಟಿಉತ್ತರ ಕನ್ನಡಪತ್ರಕರ್ನಾಟಕದ ನದಿಗಳುಬಾಗಲಕೋಟೆಹಿಂದೂ ಧರ್ಮಭಾರತದಲ್ಲಿ ಮೀಸಲಾತಿವಾದಿರಾಜರುಷೇರು ಮಾರುಕಟ್ಟೆಹಾಸನ ಜಿಲ್ಲೆಎಲಾನ್ ಮಸ್ಕ್ಶಬರಿಕಂಪ್ಯೂಟರ್ಕೇಶಿರಾಜಸಹಕಾರಿ ಸಂಘಗಳುವೃದ್ಧಿ ಸಂಧಿಮಸೂರ ಅವರೆತೆಂಗಿನಕಾಯಿ ಮರಕನ್ನಡ ಸಾಹಿತ್ಯ ಸಮ್ಮೇಳನಕೃಷ್ಣದೇವರಾಯಜಿ.ಪಿ.ರಾಜರತ್ನಂಮುದ್ದಣಪ್ರಜಾವಾಣಿಬಬ್ರುವಾಹನಕರ್ನಾಟಕದ ಹಬ್ಬಗಳುಉತ್ತರ ಪ್ರದೇಶಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ.ಎಫ್. ಸ್ಕಿನ್ನರ್ಕದಂಬ ಮನೆತನಕೃತಕ ಬುದ್ಧಿಮತ್ತೆಪ್ಲೇಟೊಜೈನ ಧರ್ಮಭಾರತದಲ್ಲಿನ ಶಿಕ್ಷಣಗಾಂಧಿ ಜಯಂತಿಜಾಗತಿಕ ತಾಪಮಾನ ಏರಿಕೆಸಂಖ್ಯೆಪ್ರಬಂಧ ರಚನೆನರೇಂದ್ರ ಮೋದಿಸಾರಾ ಅಬೂಬಕ್ಕರ್ರಾವಣಬಾಲಕಾರ್ಮಿಕಕನಕದಾಸರುಕುಮಾರವ್ಯಾಸಸಿ ಎನ್ ಮಂಜುನಾಥ್ಕರ್ಣ1935ರ ಭಾರತ ಸರ್ಕಾರ ಕಾಯಿದೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುನವರತ್ನಗಳುತ್ರಿಪದಿಮಂಗಳೂರುಸಮಾಜಶಾಸ್ತ್ರಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಕೃಷ್ಣರಾಜಸಾಗರನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕರ್ನಾಟಕ ಲೋಕಸೇವಾ ಆಯೋಗಪಕ್ಷಿಭಾರತೀಯ ಸಂಸ್ಕೃತಿಬಿಸಿನೀರಿನ ಚಿಲುಮೆಮಾನವನ ಪಚನ ವ್ಯವಸ್ಥೆಸೂರ್ಯವಂಶ (ಚಲನಚಿತ್ರ)ಜೇನುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆನೀತಿ ಆಯೋಗಇಮ್ಮಡಿ ಪುಲಿಕೇಶಿಮಹಜರುರಾಜ್‌ಕುಮಾರ್ಭಾರತೀಯ ಭೂಸೇನೆಅಕ್ಕಮಹಾದೇವಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಲೋಕಸಭೆಕಾರ್ಲ್ ಮಾರ್ಕ್ಸ್ರವಿಚಂದ್ರನ್🡆 More