ಅಮೆಜಾನ್ ಮಳೆಕಾಡು: ದಕ್ಷಿಣ ಅಮೆರಿಕದ ಮಳೆಕಾಡು

ಅಮೆಜಾನ್ ಮಳೆಕಾಡು (ಪೊರ್ಚುಗೀಸ್‌ ಭಾಷೆ: Floresta Amazônica ಅಥವಾ Amazônia ; ಸ್ಪ್ಯಾನಿಷ್: Error: }: text has italic markup (help)) - ಇದು ಅಮೆಜೋನಿಯಾ ಅಥವಾ ಅಮೆಜಾನ್‌ ಕಾಡು ಎಂದು ಹೆಸರಾಗಿದೆ.

ಇದು ದಕ್ಷಿಣ ಅಮೆರಿಕಾದ ಅಮೆಜಾನ್‌ ಜಲಾನಯನ ಪ್ರದೇಶದ ಬಹಳಷ್ಟು ಭಾಗವನ್ನು ಆವರಿಸಿರುವ ತೇವ ಹಾಗೂ ಅಗಲ ಎಲೆಗಳುಳ್ಳ ಕಾಡು. ಈ ಜಲಾನಯನ ಪ್ರದೇಶವು ಏಳು ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು ವಿಸ್ತೀರ್ಣ (1.7 ಶತಕೋಟಿ ಎಕರೆಗಳು) ಆವರಿಸಿದೆ. ಇದರಲ್ಲಿ ಐದೂವರೆ ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು (1.4 ಶತಕೋಟಿ ಎಕರೆಗಳು) ಭಾಗವನ್ನು ಮಳೆಕಾಡು ಆವರಿಸಿದೆ. ಅಮೆಜಾನ್‌ ಮಳೆಕಾಡು ಪ್ರದೇಶವು ಒಂಭತ್ತು ರಾಷ್ಟ್ರಗಳ ಭೂಪ್ರದೇಶಗಳನ್ನು ಒಳಗೊಂಡಿದೆ. ಈ ಕಾಡಿನ ಬಹುತೇಕ ಭಾಗ, ಅಂದರೆ 60%ರಷ್ಟು ಭಾಗವು ಬ್ರೆಜಿಲ್‌ ದೇಶದಲ್ಲಿ, ನಂತರ 13%ರಷ್ಟು ಪೆರು ದೇಶದಲ್ಲಿ, ಹಾಗೂ ಕೊಲಂಬಿಯಾ, ವೆನಿಜೂಯೆಲಾ, ಇಕ್ವೆಡಾರ್‌, ಬೊಲಿವಿಯಾ, ಗಯಾನಾ, ಸೂರಿನಾಮ್‌ ಹಾಗೂ ಫ್ರೆಂಚ್‌ ಗಯಾನಾ ದೇಶಗಳಲ್ಲಿ ಸ್ವಲ್ಪ ಭಾಗಗಳು ಆವರಿಸಿವೆ. ನಾಲ್ಕು ರಾಷ್ಟ್ರಗಳಲ್ಲಿನ ರಾಜ್ಯಗಳು ಅಥವಾ ಇಲಾಖೆಗಳು ಈ ಕಾಡು ಪ್ರದೇಶದ ಹೆಸರಿಗೆ ಅನುಗುಣವಾಗಿ ಅಮೆಜೊನಾಸ್‌ ಎಂಬ ಹೆಸರು ಪಡೆದಿವೆ. ಭೂಮಿಯಲ್ಲಿ ಉಳಿದಿರುವ ಮಳೆಕಾಡುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಲನ್ನು ಅಮೆಜಾನ್‌ ಪ್ರತಿನಿಧಿಸುತ್ತದೆ. ಇಡೀ ವಿಶ್ವದ ಉಷ್ಣವಲಯದ ಮಳೆಕಾಡಿನ ಅತಿ ವಿಶಾಲ ಹಾಗೂ ಹಲವು ಸಮೃದ್ಧ ಪ್ರಭೇದಗಳನ್ನು ಅಮೆಜಾನ್‌ ಮಳೆಕಾಡು ಒಳಗೊಂಡಿದೆ. ವಿಶ್ವದ ಏಳು ಹೊಸ ಅದ್ಭುತಗಳ ಪ್ರತಿಷ್ಠಾನವು ಪ್ರಕೃತಿಯ ಏಳು ಹೊಸ ಅದ್ಭುತಗಳ ಒಂದು ನಾಮನಿರ್ದೇಶನವಾಗಿ 2008ರಲ್ಲಿ ಅಮೆಜಾನ್‌ ಮಳೆಕಾಡುಗಳನ್ನು ಪಟ್ಟಿ ಮಾಡಿತ್ತು. 2009ರ ಫೆಬ್ರವರಿಯಲ್ಲಿ, ಕಾಡುಗಳು ರಾಷ್ಟ್ರೀಯ ಉದ್ಯಾನಗಳು ಮತ್ತು ನೈಸರ್ಗಿಕ ವನ್ಯಧಾಮಗಳ ವಿಭಾಗವಾದ ಗ್ರೂಪ್‌ ಇ ನಲ್ಲಿ ಅಮೆಜಾನ್‌ ಕಾಡು ಅಗ್ರಶ್ರೇಣಿಯಲ್ಲಿತ್ತು.

Amazon Rainforest
Forest
[[Image:| 256px|none
]]
Kintras Brazil, Peru, Colombia, Venezuela, Ecuador, Bolivia, Guyana, Suriname, French Guiana
Pairt o South America
River Amazon River
Area ೫೫,೦೦,೦೦೦ km² (೨೧,೨೩,೫೬೨ sq mi)
[[Image:| 256px|none
]]

ವ್ಯುತ್ಪತ್ತಿ

ಅಮೆಜಾನ್ ‌ ಎಂಬ ಹೆಸರು, ದಕ್ಷಿಣ ಅಮೆರಿಕಾದ ಟಪುಯಾ ಹಾಗೂ ಇತರೆ ಬುಡಕಟ್ಟು ಜನಾಂಗದವರೊಂದಿಗೆ ಫ್ರಾನ್ಸಿಸ್ಕೊ ಡಿ ಒರೆಲಾನಾ ನಡೆಸಿದ ಯುದ್ಧದಿಂದ ಉದ್ಭವವಾಯಿತು ಎನ್ನಲಾಗಿದೆ. ಆ ಇಡೀ ಬುಡಕಟ್ಟು ಜನಾಂಗಗಳ ಪದ್ಧತಿಯಂತೆ, ಸ್ತ್ರೀಯರೂ ಸಹ ಪುರುಷರ ಸಂಗಡ ಸೇರಿ ಯುದ್ಧ ಮಾಡಿದರು. ಒರೆಲಾನಾರ ವಿವರಣೆಗಳು ನಿಖರವಾಗಿದ್ದಿರಬಹುದು, ಆದರೆ, ಸ್ತ್ರೀಯರ ಹುಲ್ಲಿನ ಲಂಗ‌ಗಳನ್ನು ಧರಿಸಿದ ಬುಡಕಟ್ಟು ಪುರುಷರನ್ನು 'ಸ್ತ್ರೀಯರು' ಎಂದು ತಪ್ಪಾಗಿ ಪರಿಗಣಿಸಿರುವ ಸಾಧ್ಯತೆಯೂ ಇರಬಹುದು ಎಂದು ಕೆಲವು ಇತಿಹಾಸಜ್ಞರು ಊಹಿಸಿದ್ದಾರೆ. [ಸೂಕ್ತ ಉಲ್ಲೇಖನ ಬೇಕು] ಗ್ರೀಕ್‌ ಪುರಾಣಕಥೆಗಳಲ್ಲಿ ಹೆರೊಡೊಟಸ್‌ ಮತ್ತು ಡಯೊಡೊರಸ್‌ ವಿವರಿಸಿದ ಪುರಾತನ ಕಾಲದ ಏಷ್ಯಾ ಮತ್ತು ಆಫ್ರಿಕಾದ ಅಮೆಜಾನ್‌ಗಳಿಂದ ಅಮೆಜೋನಾಸ್‌ ಎಂಬ ಹೆಸರನ್ನು ಒರೆಲಾನಾ ಪಡೆದುಕೊಂಡ. ಇನ್ನೊಂದು ವ್ಯುತ್ಪತ್ತಿ ಶಾಸ್ತ್ರದ ಪ್ರಕಾರ, ಇದು ಸ್ಪ್ಯಾನಿಷ್‌ ಭಾಷೆಯ amazona ಅಥವಾ ಪೋರ್ಚುಗೀಸ್‌ ಭಾಷೆಯ amassona ಎಂಬ ಸ್ಥಳೀಯ ಪದದಿಂದ ಉದ್ಭವಿಸಿರಬಹುದು ಎನ್ನಲಾಗಿದೆ. ಇದರ ಅರ್ಥ 'ದೋಣಿಗಳ ನಾಶಕ' ಎನ್ನಲಾಗಿದೆ. ಕೆಲವು ನದಿ ತೀರದ ಗಿಡಗಳ ಬೇರಿನ ವಿನಾಶಕ ಸ್ವರೂಪವನ್ನು ಇದು ಉಲ್ಲೇಖಿಸುತ್ತದೆ.

ಇತಿಹಾಸ

ಚಿತ್ರ:Paleogene-EoceneGlobal.jpg
ಈಯಸೀನ್‌ ಯುಗದಲ್ಲಿ ಭೂಮಿ.

ಈಯೊಸೀನ್‌ ಯುಗದಲ್ಲಿ ಈ ಮಳೆಕಾಡು ಉದ್ಭವವಾಯಿತು ಎನ್ನಲಾಗಿದೆ. ಅಟ್ಲಾಂಟಿಕ್‌ ಸಾಗರವು ಸಾಕಷ್ಟು ಅಗಲ ಹೊಂದಿ, ಅಮೆಜಾನ್‌ ಜಲಾನಯನ ಪ್ರದೇಶದಲ್ಲಿ ಬೆಚ್ಚನೆಯ, ತೇವವುಳ್ಳ ಹವಾಗುಣವುಂಟಾಯಿತು. ಇದರಿಂದಾಗಿ, ಉಷ್ಣವಲಯದ ಉಷ್ಣಾಂಶವು ವಿಶ್ವದಾದ್ಯಂತ ಕಡಿಮೆಯಾಗಿ, ಮಳೆಕಾಡುಗಳು ಉದ್ಭವವಾದವು. ಕನಿಷ್ಠ ಪಕ್ಷ 55 ದಶಲಕ್ಷ ವರ್ಷಗಳಿಂದಲೂ ಈ ಮಳೆಕಾಡು ಅಸ್ತಿತ್ವದಲ್ಲಿದೆ. ಪ್ರಚಲಿತ ಹಿಮ ಯುಗದ ತನಕ ಹವಾಗುಣವು ಇನ್ನಷ್ಟು ಶುಷ್ಕವಾಗಿದ್ದು, ಹುಲ್ಲುಗಾಡು ಹೆಚ್ಚು ವ್ಯಾಪಿಸಿತ್ತು. ಈ ಯುಗದ ನಂತರ, ಅಮೆಜಾನ್‌ ಜಲಾನಯನ ಪ್ರದೇಶದ ಬಹಳಷ್ಟು ಭಾಗವು ಹುಲ್ಲುಗಾವಲುತರಹದ ಪರಿಸರ ವ್ಯವಸ್ಥೆಯಿಂದ ಮುಕ್ತವಾಗಿದೆ. ಕ್ರಿಟೇಷಿಯಾ–ತೃತೀಯಕ ಅಳಿಯುವ ವಿದ್ಯಮಾನ ದ ನಂತರ ಡೈನೊಸಾರ್‌ಗಳ ಅವನತಿ ಹಾಗೂ ತೇವವುಳ್ಳ ಹವಾಗುಣದಿಂದಾಗಿ ಉಷ್ಣವಲಯದ ಮಳೆಕಾಡು ಖಂಡದುದ್ದಕ್ಕೂ ಹರಡಿಕೊಳ್ಳಲು ಅವಕಾಶ ನೀಡಿರಬಹುದು.

65–34 Myaದಿಂದ ಈ ಮಳೆಕಾಡು 45°ರಷ್ಟು ದಕ್ಷಿಣದ ವರೆಗೂ ವಿಸ್ತರಿಸಿತು. ಕೊನೆಯ 34 ದಶಲಕ್ಷ ವರ್ಷಗಳ ಕಾಲಾವಧಿಯಲ್ಲಿ ಏರುಪೇರಿನ ಹವಾಗುಣಗಳಿಂದಾಗಿ, ಹುಲ್ಲುಗಾಡು ಪ್ರದೇಶಗಳು ಉಷ್ಣವಲಯದ ವರೆಗೂ ವಿಸ್ತರಿಸಲು ಅವಕಾಶ ನೀಡಿರಬಹುದು. ಉದಾಹರಣೆಗೆ, ಆಲಿಗಸೀನ್‌ ಯುಗದಲ್ಲಿ, ಮಳೆಕಾಡು 15°N ಅಕ್ಷಾಂಶ ಮೇಲ್ಭಾಗಕ್ಕೆ ಕಿರಿದಾದ ಪಟ್ಟಿಯಲ್ಲಿ ವಿಸ್ತರಿಸಿತ್ತು.ಮಯೊಸೀನ್‌ ಯುಗದ ಮಧ್ಯಕಾಲಾವಧಿಯಲ್ಲಿ ಈ ಮಳೆಕಾಡು ಪುನಃ ವಿಸ್ತರಿಸಲಾರಂಭಿಸಿತು. ನಂತರ ಅದು ಹಿಮ ಯುಗದ ಗರಿಷ್ಠ ಸ್ಥಿತಿಯ ಕೊನೆಯಲ್ಲಿ ಬಹುತೇಕ ಒಳನಾಡಿನ ರಚನೆಯಾಗಿ ಹಿಂದಕ್ಕೆ ಸರಿಯಿತು. ಆದರೂ, ಮಳೆಕಾಡು ಈ ಹಿಮಯುಗದ ಅವಧಿಗಳಲ್ಲಿ ವರ್ಧಿಸಲು ಸಫಲವಾಯಿತು. ಇದರಿಂದಾಗಿ ಇನ್ನಷ್ಟು ವೈವಿಧ್ಯದ ಪ್ರಭೇದಗಳ ಉಳಿವು ಮತ್ತು ವಿಕಸನಕ್ಕೆ ಅವಕಾಶ ಮಾಡಿಕೊಟ್ಟಿತು. 

ಈಯಸೀನ್‌ ಯುಗದ ಮಧ್ಯಕಾಲದಲ್ಲಿ, ಅಮೆಜಾನ್‌ ನಾಲೆ ಜಲಾನಯನ ಪ್ರದೇಶವು ಖಂಡದ ಮಧ್ಯಭಾಗದಲ್ಲಿ ಪುರುಸ್‌ ಆರ್ಚ್‌ನಿಂದಾಗಿ ಇಬ್ಭಾಗವಾಯಿತು ಎಂದು ನಂಬಲಾಗಿದೆ. ಖಂಡದ ಪೂರ್ವ ಬದಿಯಲ್ಲಿರುವ ನೀರು ಅಟ್ಲಾಂಟಿಕ್‌ ಸಾಗರದತ್ತ ಹಾಗೂ ಪಶ್ಚಿಮ ಪಕ್ಕದಲ್ಲಿನ ನೀರು ಅಮೆಜೋನಾಸ್‌ ಜಲಾನಯನದ ಮೂಲಕ ಶಾಂತಸಾಗರದತ್ತ ಹರಿಯಿತು. ಆಂಡೆಸ್‌ ಪರ್ವತಶ್ರೇಣಿಯು ಎದ್ದಾಗ, ಸರೋವರವೊಂದನ್ನು ಸುತ್ತುವರಿದ ವಿಶಾಲ ಜಲಾನಯನ ಸೃಷ್ಟಿಯಾಯಿತು. ಇದನ್ನು ಈಗ ಸೊಲಿಮೋಸ್‌ ಜಲಾನಯನ ಎನ್ನಲಾಗಿದೆ. ಕೊನೆಯ 5-10 ದಶಲಕ್ಷ ವರ್ಷಗಳಲ್ಲಿ, ಸಂಗ್ರಹವಾದ ಈ ನೀರು, ಪುರಸ್‌ ಆರ್ಚ್‌ ಮೂಲಕ ಅಟ್ಲಾಂಟಿಕ್‌ ಸಾಗರದತ್ತ ಪೂರ್ವದಿಕ್ಕಿನ ಹರಿವಿನಲ್ಲಿ ಸೇರಿಕೊಂಡಿತು. ಕೊನೆಯ 21,000 ವರ್ಷಗಳಲ್ಲಿ, ಕೊನೆಯ ಹಿಮಯುಗ ಗರಿಷ್ಠ (LGM) ಹಾಗೂ ತರುವಾಯದ ನೀರ್ಗಲ್ಲು ಕರಗುವಿಕೆಯ ಮೂಲಕ, ಅಮೆಜಾನ್ ಮಳೆಕಾಡು ಸಸ್ಯವರ್ಗದಲ್ಲಿ ಗಮನಾರ್ಹ ಪರಿವರ್ತನೆಗಳಾಗಿವೆ ಎಂಬುದಕ್ಕೆ ಬಹಳಷ್ಟು ಸಾಕ್ಷ್ಯಗಳಿವೆ. ಅಮೆಜಾನ್‌ ಜಲಾನಯನ ಪ್ರದೇಶದ ಪುರಾತನ ಕೆರೆಗಳು ಮತ್ತು ಅಮೆಜಾನ್‌ ಮೆಕ್ಕಲುಮಣ್ಣಿನ ಘನವಸ್ತುಕಣ ನಿಕ್ಷೇಪಗಳ ವಿಶ್ಲೇಷಣೆಯ ಪ್ರಕಾರ, ಹಿಮ ಗರಿಷ್ಠ ಯುಗದ(LGM ) ಕಾಲದಲ್ಲಿ ಜಲಾನಯನ ಪ್ರದೇಶದ ಮಳೆ ಇಂದಿಗಿಂತಲೂ ಕಡಿಮೆಯಿತ್ತು, ಇದು ಜಲಾನಯನ ಪ್ರದೇಶದಲ್ಲಿ ಕಡಿಮೆಯಾದ ಆರ್ದ್ರತೆಯ ಉಷ್ಣವಲಯ ಸಸ್ಯವರ್ಗದ ವ್ಯಾಪ್ತಿಗೆ ಸಂಬಂಧಿಸಿರುವುದು ಬಹುತೇಕ ಖಚಿತ.‌ ಆದರೂ, ಇಳಿತದ ಪ್ರಮಾಣ ಎಷ್ಟರ ಮಟ್ಟಕ್ಕಿತ್ತು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮಳೆಕಾಡು ಮುಕ್ತ ಅರಣ್ಯದಿಂದ ಮತ್ತು ಹುಲ್ಲುಗಾಡಿನಿಂದ ಪ್ರತ್ಯೇಕವಾದ ಸಣ್ಣ, ಪ್ರತ್ಯೇಕ ಅಪಾಯದಂಚಿನ ಪ್ರಾಣಿಗಳ ಆಶ್ರಯತಾಣ(ರಿಫ್ಯೂಜಿಯ)ವಾಗಿ ತಗ್ಗಿತೆಂದು ಕೆಲವು ವಿಜ್ಞಾನಿಗಳು ವಾದಿಸುತ್ತಾರೆ. ಮಳೆಕಾಡು ಬಹುತೇಕ ಪೂರ್ಣವಾಗಿ ಉಳಿದಿತ್ತು. ಆದರೆ ಇಂದು ಕಾಣುವುದಕ್ಕಿಂತ ಉತ್ತರ, ದಕ್ಷಿಣ ಹಾಗೂ ಪೂರ್ವ ದಿಕ್ಕಿನಲ್ಲಿ ಕಡಿಮೆ ವಿಸ್ತರಣೆಯಾಗಿತ್ತು. ಈ ಚರ್ಚೆಯನ್ನು ಇತ್ಯರ್ಥಗೊಳಿಸುವುದು ಕಷ್ಟ, ಏಕೆಂದರೆ, ಮಳೆಕಾಡಿನಲ್ಲಿ ಕೆಲಸ ಮಾಡುವ ಪ್ರಾಯೋಗಿಕ ಇತಿಮಿತಿಗಳ ಅರ್ಥವೇನೆಂದರೆ, ದತ್ತಾಂಶ ಮಾದರಿಯು ಅಮೇಜಾನ್ ಜಲಾನಯದ ಮಧ್ಯಭಾಗದಿಂದ ದೂರದಲ್ಲಿದ್ದು, ಸರಿಯಾಗಿರುವುದಿಲ್ಲ. ಎರಡೂ ವಿವರಣೆಗಳನ್ನು ಲಭ್ಯವಿರುವ ದತ್ತಾಂಶಗಳಿಂದ ಸಮಂಜಸವಾಗಿ ಸಮರ್ಥಿಸಬಹುದು. ಕೆವರ್ನಾ ಡಾ ಪೆಡ್ರಾ ಪಿಂಟಾಡಾದಲ್ಲಿನ ಉತ್ಖನನದಿಂದ ಸಿಕ್ಕಿದ ಲಭ್ಯ ಪುರಾತತ್ವ ಸಾಕ್ಷ್ಯಾಧಾರಗಳಿಂದ, ಮಾನವನು ಮೊದಲ ಬಾರಿಗೆ 11,200 ವರ್ಷಗಳ ಹಿಂದೆ ಅಮೆಜಾನ್‌ ಪ್ರದೇಶದಲ್ಲಿ ನೆಲೆ ಸ್ಥಾಪಿಸಿದ. ತರುವಾಯದ ಬೆಳವಣಿಗೆಯು ಕೊನೆಯ ಪ್ರಾಗೈತಿಹಾಸಿಕ ನೆಲೆಗಳು (ಕ್ರಿಸ್ತಪೂರ್ವ 1250ರಲ್ಲಿ) ಅಮೆಜಾನ್‌ ಮಳೆಕಾಡುಗಳ ಗಡಿಯುದ್ದಕ್ಕೂ ಸ್ಥಾಪನೆಯಾಗಲು ದಾರಿ ಕಲ್ಪಿಸಿತು. ಇದರಿಂದಾಗಿ ಕಾಡಿನ ವ್ಯಾಪ್ತಿಯಲ್ಲಿ ಬದಲಾವಣೆಗಳಿಗೆ ಪ್ರೇರಣೆಯಾಯಿತು. ಬೇಟೆಯಾಡುವ ಮೂಲಕ, ಮಳೆಕಾಡಿನಲ್ಲಿ ಪ್ರತಿ /km2ಗೆ ಗರಿಷ್ಠ 0.2ರಷ್ಟು ಜನರು ಜೀವಿಸಬಹುದು ಎಂದು ಜೀವಶಾಸ್ತ್ರಜ್ಞರು ನಂಬಿದ್ದಾರೆ. ಆದ್ದರಿಂದ, ಇನ್ನೂ ಹೆಚ್ಚಿನ ಜನಸಂಖ್ಯೆಗೆ ಆಶ್ರಯ ನೀಡಲು ಕೃಷಿಯ ಅಗತ್ಯವಿದೆ. 1542ರಲ್ಲಿ ಫ್ರ್ಯಾನ್ಸಿಸ್ಕೊ ಡಿ ಒರೆಲಾನಾ ಅಮೆಜಾನ್‌ ನದಿಯುದ್ದಕ್ಕೂ ಪ್ರಯಾಣ ನಡೆಸಿದ ಮೊದಲ ಯುರೋಪಿಯನ್‌ ವ್ಯಕ್ತಿ. ಇನ್ನು 5,000,000 CEಗೆ ಮುಂಚೆ ಮಳೆಕಾಡು ತಾನೇ ಸ್ವತಃ ನಾಶವಾಗಿ, ಅದರ ಜಾಗದಲ್ಲಿ ಹುಲ್ಲುಗಾಡು ಪ್ರದೇಶವಾಗಲಿದೆ ಎಂದು ಮುಂಗಾಣಲಾಗಿದೆ. ಇಂದಿನ ಹಕ್ಕಿಗಳು, ಕೀಟಗಳು, ಸಸ್ತನಿಗಳು ಹಾಗೂ ಸರಿಸೃಪಗಳು ಸೇರಿದಂತೆ ಮಳೆಕಾಡಿನಲ್ಲಿರುವ ಪ್ರಸ್ತುತ ಪ್ರಾಣಿಗಳೆಲ್ಲವೂ ಅಳಿದುಹೋಗಿ, ಮಳೆಕಾಡಿನ ಜಾಗದಲ್ಲಿ ಉದ್ಭವವಾಗುವ ಹುಲ್ಲುಗಾಡಿನಲ್ಲಿ ಹೊಸ ಪ್ರಾಣಿಗಳು ವಿಕಸನ ಹೊಂದುತ್ತವೆ.

ಜೀವವೈವಿಧ್ಯ

ಅಮೆಜಾನ್ ಮಳೆಕಾಡು: ವ್ಯುತ್ಪತ್ತಿ, ಇತಿಹಾಸ, ಜೀವವೈವಿಧ್ಯ 
ಅಮೆಜಾನ್‌ ಮಳೆಕಾಡಿನಲ್ಲಿ ಅರಣ್ಯನಾಶದಿಂದಾಗಿ, ಪರಿಸರೀಯ ಬದಲಾವಣೆಗಳಿಗೆ ಬಹಳ ಸೂಕ್ಷ್ಮವಾಗಿರುವ ಮರಕಪ್ಪೆಗಳ ಹಲವು ಪ್ರಭೇದಗಳಿಗೆ ಅಪಾಯ (ಚಿತ್ರದಲ್ಲಿ: ಬೃಹತ್ ಎಲೆ ಕಪ್ಪೆ)
ಅಮೆಜಾನ್ ಮಳೆಕಾಡು: ವ್ಯುತ್ಪತ್ತಿ, ಇತಿಹಾಸ, ಜೀವವೈವಿಧ್ಯ 
ಅಮೆರಿಕನ್‌ ಉಷ್ಣವಲಯದಲ್ಲಿ ವಾಸಿಸುವ ಸ್ಕಾರ್ಲೆಟ್‌ ಮಕಾ ಗಿಣಿ.

ತೇವವುಳ್ಳ ಉಷ್ಣವಲಯ ಕಾಡುಗಳಲ್ಲಿ ಸಮೃದ್ಧ ಪ್ರಭೇದಗಳಪರಿಸರ ವ್ಯವಸ್ಥೆ‌ಯಿದೆ. ಆಫ್ರಿಕಾ ಹಾಗೂ ಏಷ್ಯಾ ಖಂಡಗಳ ತೇವ ಕಾಡುಗಳಿಗಿಂತಲೂ, ಅಮೆರಿಕಾದ ಎರಡೂ ಉಷ್ಣವಲಯ ಕಾಡುಗಳಲ್ಲಿ ಸತತ ಸಮೃದ್ಧ ಪ್ರಭೇದಗಳಿವೆ. ಅಮೆರಿಕಾ ಖಂಡಗಳಲ್ಲಿ ಅತಿಹೆಚ್ಚು ವಿಸ್ತೀರ್ಣದ ಉಷ್ಣವಲಯ ಮಳೆಕಾಡಾದ ಅಮೆಜಾನ್‌ ಮಳೆಕಾಡುಗಳಲ್ಲಿರುವ ಜೀವವೈವಿಧ್ಯ ವಿಶಿಷ್ಠವಾಗಿದೆ. ವಿಶ್ವದಲ್ಲಿರುವ ಹತ್ತು ಜ್ಞಾತ ಪ್ರಭೇದಗಳಲ್ಲಿ ಒಂದು ಅಮೆಜಾನ್‌ ಮಳೆಕಾಡಿನಲ್ಲಿದೆ. ಅಮೆಜಾನ್‌ ಮಳೆಕಾಡು ಸಜೀವ ಸಸ್ಯ-ಪ್ರಾಣಿವರ್ಗ ಪ್ರಭೇದಗಳ ದೊಡ್ಡ ಸಮೂಹವನ್ನೇ ಒಳಗೊಂಡಿದೆ. ಅಮೇಜಾನ್‌ ಮಳೆಕಾಡು ಸುಮಾರು 2.5 ದಶಲಕ್ಷ ಕೀಟ ಪ್ರಭೇದಗಳು, ಹತ್ತು ಸಾವಿರಕ್ಕಿಂತಲೂ ಹೆಚ್ಚು ಸಸ್ಯಗಳು ಹಾಗೂ 2,000 ಪಕ್ಷಿಗಳು ಮತ್ತು ಸಸ್ತನಿಗಳಿಗೆ ಆವಾಸಸ್ಥಾನವಾಗಿದೆ. ಇದುವರೆಗೂ, ಈ ಪ್ರದೇಶದಲ್ಲಿ ಕನಿಷ್ಠ 40,000 ಸಸ್ಯಪ್ರಭೇದಗಳು, 3,000 ಮೀನುಗಳು, 1,294 ಹಕ್ಕಿಗಳು, 427 ಸಸ್ತನಿಗಳು, 428 ಉಭಯಚರಿಗಳು ಹಾಗೂ 378 ಸರಿಸೃಪಗಳನ್ನು ವೈಜ್ಞಾನಿಕವಾಗಿ ವಿಂಗಡಿಸಲಾಗಿದೆ. ವಿಶ್ವದ ಪ್ರತಿ ಐದು ಹಕ್ಕಿ ಪ್ರಭೇದಗಳಲ್ಲಿ ಒಂದು ಅಮೆಜಾನ್‌ ಮಳೆಕಾಡುಗಳಲ್ಲಿ ವಾಸಿಸುತ್ತದೆ. ವಿಜ್ಞಾನಿಗಳು ಬ್ರೆಜಿಲ್‌ ಒಂದರಲ್ಲೇ ಸುಮಾರು 96,660ರಿಂದ 128,843 ಅಕಶೇರುಕ ಪ್ರಭೇದಗಳನ್ನು ವಿವರಿಸಿದ್ದಾರೆ. ಇಲ್ಲಿನ ಸಸ್ಯಪ್ರಭೇದಗಳ ವೈವಿಧ್ಯತೆಯು ಇಡೀ ಭೂಮಿಯಲ್ಲೇ ಅತಿ ಹೆಚ್ಚು. ಒಂದು ಚದರ ಕಿಲೋಮೀಟರ್‌ ವಿಸ್ತೀರ್ಣದಲ್ಲಿ 75,000 ವಿಧದ ಮರಗಳು ಹಾಗೂ 150,000 ಪ್ರಭೇದಗಳ ದೊಡ್ಡ ಗಿಡಗಳಿವೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಅಮೆಜಾನ್‌ ಮಳೆಕಾಡಿನ ಒಂದು ಚದರ ಕಿಲೋಮೀಟರ್‌ ವಿಸ್ತೀರ್ಣದಲ್ಲಿ ಸುಮಾರು 90,790 ಟನ್‌ಗಳಷ್ಟು ಸಜೀವ ಸಸ್ಯಗಳನ್ನು ಒಳ ಗೊಂಡಿವೆ. ಸಸ್ಯ ಜೀವರಾಶಿಯ ಸರಾಸರಿಯು ಸುಮಾರು 356 ± 47 tonnes ha−1 ಎಂದು ಅಂದಾಜು ಮಾಡಲಾಗಿದೆ. ಇದುವರೆಗೆ, ಈ ಪ್ರದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಮಹತ್ವ ಹೊಂದಿರುವ ಸುಮಾರು 438,000 ಸಸ್ಯ ಪ್ರಭೇದಗಳನ್ನು ದಾಖಲಿಸಲಾಗಿದೆ. ಶೋಧಿಸಬೇಕಾದ ಹಾಗೂ ವರ್ಗೀಕರಿಸಬೇಕಾದ ಇನ್ನು ಹಲವಾರು ಸಸ್ಯಗಳಿವೆ. ಋತುವಾರು ಬದಲಾವಣೆಗಳ ಫಲವಾಗಿ, ಗಿಡ-ಮರಗಳ ಹಸಿರು ಎಲೆಗಳ ಪ್ರದೇಶವು 25%ರಷ್ಟು ವ್ಯತ್ಯಾಸವಾಗುತ್ತದೆ. ಶುಷ್ಕ ಋತುವಿನಲ್ಲಿ ಸೂರ್ಯನ ಬೆಳಕು ಗರಿಷ್ಠ ಮಟ್ಟದಲ್ಲಿರುವಾಗ ಎಲೆಗಳು ಹಿಗ್ಗುತ್ತವೆ. ಆಮೇಲೆ ಮೋಡಗಳುಳ್ಳ ತೇವ ಋತುವಿನಲ್ಲಿ ಎಲೆಗಳು ಉದುರಿಹೋಗುತ್ತವೆ. ಈ ಬದಲಾವಣೆಗಳು ದ್ಯುತಿಸಂಷ್ಲೇಶಣೆ ಮತ್ತು ಉಸಿರಾಟದ ನಡುವೆ ಇಂಗಾಲದ ಸಮತೋಲನ ಒದಗಿಸುತ್ತದೆ. ಅಪಾಯಕಾರಿ ಎನ್ನಲಾದ ಹಲವು ಪ್ರಭೇದಗಳು ಮಳೆಕಾಡಿನಲ್ಲಿವೆ. ಅತಿ ದೊಡ್ಡ ಪರಭಕ್ಷಕಗಳ ಪ್ರಾಣಿಗಳಲ್ಲಿ ಕರಿ ಕೇಮನ್‌ ಮೊಸಳೆ, ಜಾಗ್ವರ್‌ ಚಿರತೆ, ಕೂಗರ್ (ದೊಡ್ಡ ಗಾತ್ರದ ಕರಿ ಬೆಕ್ಕಿನಂತಹ ಪ್ರಾಣಿ)‌ ಹಾಗೂ ಅನಾಕೊಂಡಾ ಸೇರಿವೆ. ಅಮೆಜಾನ್‌ ನದಿಯಲ್ಲಿರುವ ವಿದ್ಯುತ್‌ ಹಾವುಮೀನುಗಳು ನೀಡುವ ವಿದ್ಯುತ್‌ ಆಘಾತದಿಂದಾಗಿ ಪ್ರಾಣಕ್ಕೆ ಅಪಾಯವಾಗಬಹುದು; ಪಿರಾನ್ಹಾ ಮೀನುಗಳು ಮನುಷ್ಯರನ್ನ ಕಚ್ಚಿ ಗಾಯಗೊಳಿಸುತ್ತವೆ ಎನ್ನಲಾಗಿದೆ. ವಿಷ ಹಾರಿಸುವ ಕಪ್ಪೆಗಳ ವಿಭಿನ್ನ ಪ್ರಭೇದಗಳು ತಮ್ಮ ಚರ್ಮಗಳ ಮೂಲಕ ಲಿಪೊಫಿಲಿಕ್ ಕ್ಷಾರಾಭ ವಿಷಗಳನ್ನು ಸೂಸುತ್ತವೆ. ಜೊತೆಗೆ ಹಲವು ಪರಾವಲಂಬಿಗಳು ಮತ್ತು ರೋಗವಾಹಕಗಳಿವೆ. ಅಮೆಜಾನ್‌ ಮಳೆಕಾಡಿನಲ್ಲಿ ವಾಸಿಸುವ ರಕ್ತಹೀರುವ ಬಾವಲಿಗಳು ರೇಬೀಸ್‌ ವೈರಸ್‌ಗಳನ್ನು ಹರಡಬಹುದು. ಮಲೇರಿಯಾ, ಪೀತಜ್ವರ ಹಾಗೂ ಡೆಂಘೀ ಜ್ವರವೂ ಸಹ ಅಮೆಜಾನ್‌ ಪ್ರದೇಶದಲ್ಲಿ ಸಂಭವಿಸುವ ಸಾಧ್ಯತೆಯಿದೆ.

ಅರಣ್ಯನಾಶ

ಅಮೆಜಾನ್ ಮಳೆಕಾಡು: ವ್ಯುತ್ಪತ್ತಿ, ಇತಿಹಾಸ, ಜೀವವೈವಿಧ್ಯ 
ಅಮೆಜಾನ್ ಮಳೆಕಾಡು

ಅರಣ್ಯನಾಶ(ಕಾಡುಕಡಿಯುವಿಕೆ) ಎಂಬುದು ಕಾಡು ಪ್ರದೇಶವನ್ನು ಅರಣ್ಯೇತರ ಪ್ರದೇಶಗಳಾಗಿ ಪರಿವರ್ತಿಸುವ ಕ್ರಿಯೆಯಾಗಿದೆ. ಮಾನವ ವಸಾಹತು ಮತ್ತು ಭೂಮಿಯ ಅಭಿವೃದ್ಧಿಯು ಅಮೆಜಾನ್‌ನಲ್ಲಿ ಅರಣ್ಯನಾಶದ ಮುಖ್ಯ ಮೂಲಗಳಾಗಿವೆ. 1960ರ ದಶಕದ ಕಾಲಾವಧಿಗೆ ಮುಂಚೆ, ಕಾಡಿನ ಒಳಪ್ರದೇಶಗಳಿಗೆ ಪ್ರವೇಶಾನುಮತಿ ತೀರಾ ನಿರ್ಬಂಧಿತವಾಗಿತ್ತು; ಕಾಡು ಮೂಲತಃ ನಾಶವಾಗದೇ ಉಳಿದಿತ್ತು . 1960ರ ದಶಕದ ಕಾಲಾವಧಿಯಲ್ಲಿ ಸ್ಥಾಪಿಸಲಾದ ಹೊಲಗದ್ದೆಗಳು ಬೆಳೆಯ ಸಾಗುವಳಿ ಮತ್ತು ಕತ್ತರಿಸಿ ಸುಡುವ ವಿಧಾನವನ್ನು ಆಧರಿಸಿತ್ತು. ಆದರೂ, ಮಣ್ಣು ಫಲವತ್ತತೆಯ ನಷ್ಟ ಹಾಗೂ ಕಳೆ ಅಕ್ರಮಣದಿಂದಾಗಿ, ವಸಾಹತುಗಾರರು ತಮ್ಮ ಜಮೀನುಗಳನ್ನು ಮತ್ತು ಬೆಳೆಗಳನ್ನು ನಿರ್ವಹಿಸಲು ಅಸಮರ್ಥರಾದರು. ಅಮೆಜಾನ್‌ ಪ್ರದೇಶದ ಮಣ್ಣು ಅಲ್ಪ ಕಾಲಕ್ಕಾಗಿ ಮಾತ್ರ ಫಲವತ್ತಾಗಿರುತ್ತದೆ. ಹಾಗಾಗಿ, ರೈತರು ಸತತವಾಗಿ ಹೊಸ ಪ್ರದೇಶಗಳಿಗೆ ಸ್ಥಳಾಂತರಗೊಂಡು, ಇನ್ನಷ್ಟು ನೆಲವನ್ನು ತೆರವುಗೊಳಿಸುತ್ತಿದ್ದರು. ಇಂತಹ ಕೃಷಿ ಪದ್ಧತಿಗಳಿಂದಾಗಿ ಅರಣ್ಯನಾಶವುಂಟಾಗಿ ವ್ಯಾಪಕ ಪರಿಸರೀಯ ಹಾನಿ ಉಂಟುಮಾಡಿತು. ಅರಣ್ಯನಾಶವು ಗಮನಾರ್ಹ ಪ್ರಮಾಣದಲ್ಲಿ ಸಂಭವಿಸಿತು. ಅರಣ್ಯ ತೆರವುಗೊಳಿಸಿದ ಪ್ರದೇಶಗಳನ್ನು ಬಾಹ್ಯಾಕಾಶದಿಂದ ನೋಡಬಹುದಾದಷ್ಟು ಸ್ಪಷ್ಟವಾಗಿ ಕಂಡಿತು. 1991ರಿಂದ 2000ದ ಇಸವಿಯ ತನಕ, ಅಮೆಜಾನ್‌ನಲ್ಲಿ ನಾಶವಾದ ಕಾಡಿನ ಒಟ್ಟು ವಿಸ್ತೀರ್ಣವು 415,000 ರಿಂದ 587,000 km2 ವರೆಗೆ ಹೆಚ್ಚಿತು. ನಾಶವಾದ ಅರಣ್ಯಪ್ರದೇಶಗಳು ಸಾಮಾನ್ಯವಾಗಿ ಜಾನುವಾರುಗಳ ಮೇವಿನ ಹುಲ್ಲುಗಾವಲಿನ ತಾಣವಾಯಿತು. ಅಮೆಜಾನ್‌ನಲ್ಲಿ ಮುಂಚೆ ಕಾಡು ಪ್ರದೇಶವಾಗಿದ್ದರಲ್ಲಿ 70%ರಷ್ಟು ಹಾಗೂ, 1970ರಿಂದಲೂ ಅರಣ್ಯನಾಶವಾದ ನೆಲದ 91%ರಷ್ಟು ಜಾನುವಾರುಗಳ ಮೇವಿನ ಹುಲ್ಲುಗಾವಲಿಗಾಗಿ ಬಳಸಲಾಗುತ್ತಿದೆ. ಜೊತೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ನಂತರ, ಬ್ರೆಜಿಲ್ ಎರಡನೆಯ ಅತಿ ದೊಡ್ಡ ಜಾಗತಿಕ ಸೊಯಾಬೀನ್‌ ಉತ್ಪಾದಕವಾಗಿದೆ. ‌ ಅಮೆಜಾನ್‌ನಲ್ಲಿ ಇದೀಗ ಅಭಿವೃದ್ಧಿಯಾಗುತ್ತಿರುವ ವಿವಾದಗ್ರಸ್ಥ ಸಾರಿಗೆ ಯೋಜನೆಗಳನ್ನು ಕ್ರಮಬದ್ಧಗೊಳಿಸಲು, ಸೊಯಾಬೀನ್‌ ರೈತರ ಅಗತ್ಯಗಳನ್ನು ಬಳಸಿಕೊಳ್ಳಲಾಯಿತು. ಮೊದಲ ಎರಡು ಹೆದ್ದಾರಿಗಳು ಮಳೆಕಾಡಿಗೆ ಯಶಸ್ವಿಯಾಗಿ ಮಾರ್ಗ ಕಲ್ಪಿಸಿದವು. ಇದರಿಂದಾಗಿ ಹೆಚ್ಚಿದ ವಸಾಹತು ಮತ್ತು ಅರಣ್ಯನಾಶಕ್ಕೆ ಕಾರಣವಾಯಿತು. 2000ರಿಂದ 2005ರ ತನಕದ ಸರಾಸರಿ ಅರಣ್ಯನಾಶ ದರವು (ಪ್ರತಿ ವರ್ಷ 22,392 km2)‌, ಮುಂಚಿನ ಐದು ವರ್ಷಗಳಿಗಿಂತ(19,018 km2 ಪ್ರತಿವರ್ಷಕ್ಕೆ) 18%ರಷ್ಟು ಹೆಚ್ಚಿನ ದರದಲ್ಲಿತ್ತು. ಸದ್ಯದ ದರದಲ್ಲಿ, ಇನ್ನು ಎರಡು ದಶಕಗಳಲ್ಲಿ ಅಮೆಜಾನ್‌ ಮಳೆಕಾಡು 40%ರಷ್ಟು ಕ್ಷೀಣಿಸುತ್ತದೆ.

ಸಂರಕ್ಷಣೆ ಮತ್ತು ಹವಾಗುಣ ಬದಲಾವಣೆ

ಅಮೆಜಾನ್‌ ಮಳೆಕಾಡನ್ನು ನಾಶಗೊಳಿಸಬಲ್ಲ ಜೀವವೈವಿಧ್ಯದ ನಷ್ಟ, ಹಾಗೂ ಜಾಗತಿಕ ತಾಪಮಾನ ಏರಿಕೆಯನ್ನು ವೇಗೋತ್ಕರ್ಷಗೊಳಿಸಬಹುದಾದ ಸಸ್ಯವರ್ಗದಲ್ಲಿರುವ ಇಂಗಾಲದ ಬಿಡುಗಡೆ ಕುರಿತು ಪರಿಸರ ತಜ್ಞರು ತಳಮಳ ವ್ಯಕ್ತಪಡಿಸಿದ್ದಾರೆ. ಅಮೆಜಾನ್‌ನ ನಿತ್ಯಹರಿದ್ವರ್ಣೀಯ ಕಾಡುಗಳು ವಿಶ್ವದ ಭೂಚರ ಪ್ರಾಥಮಿಕ ಉತ್ಪಾದಕತೆಯಲ್ಲಿ ಸುಮಾರು 10%ರಷ್ಟು ಪಾಲನ್ನು ಹೊಂದಿದೆ ಹಾಗೂ ಪರಿಸರೀಯ ವ್ಯವಸ್ಥೆಯಲ್ಲಿ ಇಂಗಾಲ ಶೇಖರಣೆಯಲ್ಲಿ 10%ರಷ್ಟು ಪಾಲನ್ನು ಹೊಂದಿದೆ.- ಇಂಗಾಲದ 1.1 × 1011 ಮೆಟ್ರಿಕ್‌ ಟನ್‌ಗಳ ಶ್ರೇಣಿಯಲ್ಲಿ. 1975ರಿಂದ 1996ರ ವರೆಗೆ ಅಮೆಜೋನಿಯನ್‌ ಕಾಡುಗಳಲ್ಲಿ ಪ್ರತಿ ವರ್ಷ ಪ್ರತಿ ಹೆಕ್ಟೇರ್‌ಗೆ 0.62 ± 0.37 ಟನ್‌ಗಳಷ್ಟು ಇಂಗಾಲವನ್ನು ಸಂಗ್ರಹಿಸಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯಿಂದಾಗುವ ಮುಂದಿನ ಹವಾಗುಣ ಬದಲಾವಣೆಯನ್ನು ಅಂದಾಜು ಮಾಡುವ ಕಂಪ್ಯೂಟರ್‌ ಮಾದರಿಯ ಪ್ರಕಾರ,ತೀವ್ರ ಇಳಿಮುಖವಾದ ಮಳೆ ಹಾಗೂ ಹೆಚ್ಚಿದ ಉಷ್ಣಾಂಶದ ಸ್ಥಿತಿಗಳಲ್ಲಿ ಅಮೆಜಾನ್‌ ಮಳೆಕಾಡು ಪೋಷಣ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ, 2100ರೊಳಗೆ, ಜಲಾನಯನ ಪ್ರದೇಶದಲ್ಲಿನ ಮಳೆಕಾಡಿನ ವ್ಯಾಪ್ತಿಯು ಸಂಪೂರ್ಣವಾಗಿ ನಾಶವಾಗುವುದೆಂದು ಅಂದಾಜು ಮಾಡಲಾಗಿದೆ. ಆದರೂ, ವಿವಿಧ ಮಾದರಿಗಳಲ್ಲಿ ಅಮೆಜಾನ್ ಜಲಾನಯನ ಪ್ರದೇಶದಲ್ಲಿನ ಹವಾಗುಣ ಬದಲಾವಣೆಗಳ ಅನುಕರಣೆಗಳು ಹೊಂದಿಕೆಯಾಗುವುದಿಲ್ಲ. ದುರ್ಬಲ ಹೆಚ್ಚಳದಿಂದ ಹಿಡಿದು ಪ್ರಬಲ ಇಳಿಮುಖದವರೆಗೆ ಇರುವ ಅವುಗಳ ಮಳೆಯ ಪ್ರತಿಕ್ರಿಯೆಯ ಮುನ್ನಂದಾಜಿನಲ್ಲಿ ಈ ಹೊಂದಿಕೆ ಇರುವುದಿಲ್ಲ. ಒಟ್ಟಾರೆ, ಇಪ್ಪತ್ತೊಂದನೆಯ ಶತಮಾನದಲ್ಲಿ, ಅರಣ್ಯನಾಶದ ಜೊತೆಗೆ ಹವಾಗುಣ ಬದಲಾವಣೆಗಳು ಮಳೆಕಾಡುಗಳಿಗೆ ಅಪಾಯವೊಡ್ಡಬಹುದು ಎಂದು ಈ ಪರಿಣಾಮಗಳು ಸೂಚಿಸುತ್ತವೆ. 1989ರಲ್ಲಿ, ಅಮೆಜಾನ್‌ ಮಳೆಕಾಡನ್ನು ಸಂರಕ್ಷಿಸುವಲ್ಲಿ ಆರ್ಥಿಕ ಮತ್ತು ಜೈವಿಕ ಉತ್ತೇಜನವಿದೆ ಎಂದು ಪರಿಸರವಾದಿ ಸಿ. ಎಂ. ಪೀಟರ್ಸ್‌ ಮತ್ತು ಅವರ ಇಬ್ಬರು ಸಹೋದರರು ಹೇಳಿದ್ದಾರೆ.ಪೆರುವಿಯನ್‌ ಅಮೆಜಾನ್‌ನ ಒಂದು ಹೆಕ್ಟೇರ್ ವ್ಯಾಪ್ತಿಯಲ್ಲಿ ಅಖಂಡ ಕಾಡನ್ನು ಹಣ್ಣು, ಲೇಟೆಕ್ಸ್‌ ಮತ್ತು ನಾಟ ಸಮರ್ಥನೀಯವಾಗಿ ತೆಗೆಯಲು ಬಳಸಿದಲ್ಲಿ, 6820 ಡಾಲರ್‌ಗಳ ಮೌಲ್ಯ ಲಭಿಸುವುದೆಂದು ಅಂದಾಜು ಮಾಡಲಾಗಿದೆ. ಒಂದು ವೇಳೆ ಕಾಡನ್ನು ಕತ್ತರಿಸಿ ವಾಣಿಜ್ಯ ಉದ್ದೇಶದ ನಾಟಕ್ಕಾಗಿ ಅಸಮರ್ಪಕ ರೀತಿಯಲ್ಲಿ ಕೊಯ್ಲು ಮಾಡಿದಲ್ಲಿ, 1000 ಡಾಲರ್‌ಗಳು, ಹಾಗೂ ಜಾನುವಾರು ಮೇವಿಗಾಗಿ ಬಳಸಿದಲ್ಲಿ ಕೇವಲ 148 ಡಾಲರ್‌ ಲಭಿಸುತ್ತದೆ. ಅರಣ್ಯನಾಶ ಮತ್ತು ಪರಿಸರ ನಾಶದಿಂದಾಗಿ ಸ್ಥಳೀಯ ಪ್ರಾಂತ್ಯಗಳೂ ಸಹ ನಾಶವಾಗುತ್ತಿವೆ. ಉದಾಹರಣೆಗೆ, ಪೆರುವಿಯನ್‌ ಅಮೆಜಾನ್‌ ‌ ಬುಡಕಟ್ಟು ಜನರ ಮಳೆಕಾಡು ಸಮುದಾಯಗಳು ಕಣ್ಮರೆಯಾಗುತ್ತಿವೆ. ಉರರಿನಾದಂತಹ ಸಮುದಾಯಗಳು ತಮ್ಮ ಸಾಂಸ್ಕೃತಿಕ ಉಳಿವು ಮತ್ತು ಕಾಡು ಪ್ರದೇಶಗಳ ಭವಿಷ್ಯಕ್ಕಾಗಿ ಹೋರಾಟ ಮುಂದುವರಿಸಿವೆ. ಏತನ್ಮಧ್ಯೆ, ದಕ್ಷಿಣ ಅಮೆರಿಕಾ ಖಂಡದಲ್ಲಿ ತಗ್ಗುಪ್ರದೇಶಗಳ ಬುಡಕಟ್ಟು ಜನತೆಯ ಸಂಕೇತ ಹಾಗೂ ಅಸ್ತಿತ್ವದಲ್ಲಿದ್ದ ಮಾನವೇತರ ಪ್ರೈಮೇಟ್‌‌ಗಳ ನಡುವಿನ ಸಂಬಂಧವು ಜನಾಂಗೀಯ ಜೀವಶಾಸ್ತ್ರ ಮತ್ತು ಸಮುದಾಯ-ಆಧಾರಿತ ಸಂರಕ್ಷಣಾ ಯತ್ನಗಳಾಗಿ ಹೆಚ್ಚಿನ ಗಮನ ಸೆಳೆದಿದೆ. 2002ರಿಂದ 2006ರ ತನಕ, ಅಮೆಜಾನ್‌ ಮಳೆಕಾಡಿನಲ್ಲಿ ಸಂರಕ್ಷಿತ ಭೂಮಿಯು ಮೂರು ಪಟ್ಟು ಹೆಚ್ಚಾಗಿದೆ. ಅರಣ್ಯನಾಶ ದರವು 60%ರಷ್ಟು ಇಳಿದಿದೆ. ಸುಮಾರು 1,000,000 square kilometres (250,000,000 acres)ನ್ನು ಕೆಲವು ರೀತಿಯ ಸಂರಕ್ಷಣೆಯಲ್ಲಿ ಸೇರಿಸಿ, ಇದರಿಂದಾಗಿ ಸಧ್ಯಕ್ಕೆ 1,730,000 square kilometres (430,000,000 acres)ರಷ್ಟು ಪ್ರಮಾಣದಲ್ಲಿದೆ. ಮಾನವ ಅರಣ್ಯನಾಶ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾದರೂ ಕೂಡ,ಅಮೆಜಾನ್‌ ಮಳೆಕಾಡು ಕ್ರಮೇಣ ಮುಂದಿನ ಐದು ದಶಲಕ್ಷ ವರ್ಷಗಳಲ್ಲಿ ನಾಶವಾಗಿ ಅದರ ಜಾಗದಲ್ಲಿ ಹುಲ್ಲುಗಾಡು ಆವರಿಸಲಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.

ದೂರ ಸಂವೇದನೆ

ಅಮೆಜಾನ್ ಮಳೆಕಾಡು: ವ್ಯುತ್ಪತ್ತಿ, ಇತಿಹಾಸ, ಜೀವವೈವಿಧ್ಯ 
ಕಾಡು ಮತ್ತು ವಾತಾವರಣದ ಅಂತರಕ್ರಿಯೆಯಿಂದ ನಡೆಸಿ “ಪಾಪ್ಕಾರ್ನ್” ಮೋಡಗಳ ಏಕರೂಪದ ಪದರವನ್ನು ಸೃಷ್ಟಿಸಿರುವುದನ್ನು ಈ ಚಿತ್ರ ತೋರಿಸುತ್ತದೆ.

ದೂರ ಸಂವೇದಿದತ್ತಾಂಶದ ಬಳಕೆಯಿಂದ ಅಮೆಜಾನ್‌ ಜಲಾನಯನ ಪ್ರದೇಶದ ಕುರಿತು ಸಂರಕ್ಷಣಾವಾದಿಗಳ ಜ್ಞಾನಭಂಡಾರ ಗಮನಾರ್ಹವಾಗಿ ಸುಧಾರಿಸುತ್ತಿದೆ. ವಸ್ತುನಿಷ್ಠತೆ ಮತ್ತು ಉಪಗ್ರಹ ಆಧಾರಿತ ನೆಲದ ವ್ಯಾಪ್ತಿ ವಿಶ್ಲೇಷಣೆಯ ಕಡಿಮೆ ವೆಚ್ಚಗಳಿಂದಾಗಿ, ಜಲಾನಯನ ಪ್ರದೇಶದಲ್ಲಿ ಅರಣ್ಯನಾಶದ ಹರವು ಮತ್ತು ಹಾನಿಯನ್ನು ಅಂದಾಜುಮಾಡಲು ದೂರ ಸಂವೇದಿ ತಂತ್ರಜ್ಞಾನವು ಅವಿಭಾಜ್ಯ ಅಂಗವಾಗಲಿದೆ. ಇನ್ನೂ ಹೆಚ್ಚಿಗೆ, ಅಮೆಜಾನ್‌ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದ ಅಧ್ಯಯನ ನಡೆಸಲು ದೂರ ಸಂವೇದಿ ಅತ್ಯುತ್ತಮ ಹಾಗೂ ಏಕೈಕ ಸಂಭವನೀಯ ವಿಧಾನವಾಗಿದೆ.

ಅಮೆಜಾನ್‌ ಮಳೆಕಾಡುಗಳ ಸಂರಕ್ಷಣೆಗಾಗಿ ದೂರ ಸಂವೇದಿ ಮಾಹಿತಿಯನ್ನು ಅಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರೂ ಬಳಸಿ, ಅವರ ಜಮೀನುಗಳನ್ನು ವಾಣಿಜ್ಯ ಉದ್ದೇಶದ ಹಿತಾಸಕ್ತಿಗಳಿಂದ ರಕ್ಷಿಸಿಕೊಳ್ಳಲು ಯತ್ನಿಸಿವೆ. ಸೂರಿನೇಮ್‌ ದೇಶದ ದಕ್ಷಿಣ ಭಾಗದಲ್ಲಿ ವಾಸಿಸುವ ಟ್ರಯೊ ಬುಡಕಟ್ಟು ಜನಾಂಗದ ಜನರು, ಅಂಗೈಯಲ್ಲಿ ಹಿಡಿಯಬಹುದಾದ GPS ಉಪಕರಣಗಳು ಹಾಗೂ ಗೂಗಲ್‌ ಅರ್ಥ್‌‌ನಂತಹ ತಂತ್ರಾಂಶಗಳನ್ನು ಬಳಸಿ, ತಮ್ಮ ಪ್ರದೇಶಗಳ ಮೇಲೆ ಹಕ್ಕು ಸಾಧಿಸಲು ತಮ್ಮ ಪೂರ್ವಜರ ನೆಲಗಳ ನಕ್ಷೆ ರೂಪಿಸಿದರು. ಸದ್ಯಕ್ಕೆ, ಅಮೆಜಾನ್‌ನಲ್ಲಿ ಹಲವು ಬುಡಕಟ್ಟು ಪಂಗಡಗಳು ಸ್ಪಷ್ಟ ಗಡಿಗಳನ್ನು ಹೊಂದಿಲ್ಲ. ಇದರಿಂದಾಗಿ ವಾಣಿಜ್ಯ ಉದ್ದೇಶದ ಉದ್ಯಮಗಳು ಈ ಬುಡಕಟ್ಟು ಜನತೆಯ ಜಮೀನನ್ನು ಕಬಳಿಸಲು ಸುಲಭವಾಗುತ್ತಿವೆ. ಅಮೆಜಾನ್‌ನ ಜೀವರಾಶಿ ಹಾಗೂ ನಂತರದ ಇಂಗಾಲ-ಸಂಬಂಧಿತ ಹೊರಸೂಸುವಿಕೆಯನ್ನು ನಿಖರವಾಗಿ ನಕ್ಷೆ ಮಾಡಲು, ಕಾಡಿನ ವಿವಿಧೆಡೆ, ಮರಗಳ ಬೆಳವಣಿಗೆಯ ವಿವಿಧ ಹಂತಗಳನ್ನು ವರ್ಗೀಕರಿಸುವುದು ಬಹಳ ಮುಖ್ಯ. 2006ರಲ್ಲಿ, ಟಟಿಯಾನಾ ಕಪ್ಲಿಕ್‌ ಅಮೆಜಾನ್‌ ಮಳೆಕಾಡಿನ ಮರಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಿದರು: (1) ಪಕ್ವವಾಗಿ ಬೆಳೆದ ಕಾಡು(2) ಮರುಸೃಷ್ಟಿ(ಮತ್ತೆಬೆಳೆದ) ಕಾಡು [ಮೂರು ವರ್ಷಗಳಿಗಿಂತಲೂ ಕಡಿಮೆ], (3) ಮರುಸೃಷ್ಟಿ ಕಾಡು [ಮೂರರಿಂದ ಐದು ವರ್ಷಗಳ ವರೆಗಿನ ಮರುಬೆಳವಣಿಗೆ], (4) ಮರುಸೃಷ್ಟಿ ಕಾಡು [ಹನ್ನೊಂದರಿಂದ ಹದಿನೆಂಟು ವರ್ಷಗಳ ಸತತ ಬೆಳವಣಿಗೆ].

ಅಮೆಜಾನ್‌ನ ವಿವಿಧ ಭಾಗಗಳನ್ನು ನಾಲ್ಕು ವಿಂಗಡಣೆಗಳ ಪೈಕಿ ಒಂದರಲ್ಲಿ ನಿಖರವಾಗಿ ಇರಿಸಲು, ಸಂಶೋಧಕರು ಸಂಶ್ಲೇಷಿತ ದ್ಯುತಿರಂಧ್ರ ರೆಡಾರ್‌ (Synthetic aperture radar (SAR)) ಹಾಗೂ ವಿಷಯಾನುಕ್ರಮ ನಕ್ಷೆ (Thematic Mapper (TM)) ಸಂಯೋಜನೆಯನ್ನು ಬಳಸಿದರು. 

ಅಮೆಜಾನ್‌ ಬರಗಾಲದ ಪರಿಣಾಮ

2005ರಲ್ಲಿ, ಅಮೆಜಾನ್‌ ಜಲಾನಯನ ಪ್ರದೇಶದ ಕೆಲವು ಭಾಗಗಳಲ್ಲಿ ನೂರು ವರ್ಷಗಳಲ್ಲಿಯೇ ಅತಿ ಕೆಟ್ಟ ಬರಗಾಲ ಸಂಭವಿಸಿತು. 2006ರಲ್ಲೂ ಸಹ ಪುನಃ ಬರಗಾಲ ಸಂಭವಿಸಬಹುದು ಎಂಬ ಸೂಚನೆಗಳೂ ಸಹ ಇದ್ದವು. ಈಗಿನ ಸ್ವರೂಪದಲ್ಲಿ ಅಮೆಜಾನ್‌ ಮಳೆಕಾಡು ಕೇವಲ ಮೂರು ವರ್ಷಗಳ ಬರಗಾಲವನ್ನು ಮಾತ್ರ ಸಹಿಸಿಕೊಂಡು ಉಳಿಯಬಲ್ಲದು ಎಂದು ವುಡ್ಸ್‌ ಹೋಲ್‌ ರಿಸರ್ಚ್‌ ಸೆಂಟರ್‌ ವರದಿಯನ್ನು ಉಲ್ಲೇಖಿಸಿ, ಯುನೈಟೆಡ್‌ ಕಿಂಗ್ಡಮ್‌ನ ವಾರ್ತಾ ಪತ್ರಿಕೆ ದಿ ಇಂಡಿಪೆಂಡೆಂಟ್ ‌ 2006ರ ಜುಲೈ 23ರಂದು ವರದಿ ಮಾಡಿತು. ಬರಗಾಲದ ಪ್ರತಿಕ್ರಿಯೆ ಮತ್ತು ಪ್ರದೇಶದಲ್ಲಿನ ಹವಾಗುಣದ ಮೇಲೆ ಅರಣ್ಯನಾಶದ ಪ್ರಭಾವವು ಮಳೆಕಾಡನ್ನು ಗಂಭೀರ ಸ್ಥಿತಿಗೆ ದೂಡುತ್ತಿದ್ದು, ಬದಲಾಗದ ರೀತಿಯಲ್ಲಿ ಸಾಯಲಾರಂಭಿಸುತ್ತವೆ ಎಂದು ಬ್ರೆಜಿಲ್‌ನ ರಾಷ್ಟ್ರೀಯ ಅಮೆಜೋನಿಯನ್‌ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಈ ಲೇಖನದಲ್ಲಿ ವಾದಿಸುತ್ತಾರೆ. ಮಳೆಕಾಡು ಹುಲ್ಲುಗಾಡು ಅಥವಾ ಮರುಭೂಮಿಯಾಗಿ ಪರಿವರ್ತನೆಯಾಗುವ ಅಂಚಿನಲ್ಲಿದ್ದು, ಇದು ವಿಶ್ವದ ಹವಾಮಾನದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರಬಹುದು ಎಂದು ಈ ವರದಿಯು ನಿರ್ಣಯಿಸಿತು. ಅಮೆಜಾನ್‌ ಮಳೆಕಾಡಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಹ ಎಲ್ಲಾ ಮಾನವ ಚಟುವಟಿಕೆಗಳು ಶಾಶ್ವತವಾಗಿ ನಿಂತುಹೋದರೂ, ಐದು ದಶಲಕ್ಷ ವರ್ಷಗಳ ನಂತರ ಈ ಮಳೆಕಾಡು ತಾನೇ ತಾನಾಗಿ ಹಾಳಾಗಿ, ಹುಲ್ಲುಗಾಡು ಪ್ರದೇಶವಾಗುತ್ತದೆ. ವಿಶ್ವಾದ್ಯಂತ ನಿಸರ್ಗ ನಿಧಿ ಪ್ರಕಾರ, ಹವಾಗುಣ ಬದಲಾವಣೆ ಮತ್ತು ಅರಣ್ಯನಾಶದಿಂದಾಗಿ ಸತ್ತ ಮರಗಳು ಒಣಗುವ ಪರಿಣಾಮ ತ್ವರಿತಗೊಳಿಸಿ, ಕಾಳ್ಗಿಚ್ಚಿನ ಸಂಭವ ಹೆಚ್ಚಾಗುತ್ತದೆ.

ವಿಮಾನ ಅಪಘಾತಗಳು

2006ರ ಸೆಪ್ಟೆಂಬರ್‌ 30ರಂದು, ಗೋಲ್‌ ಟ್ರಾನ್ಸ್‌ಪೋರ್ಟ್ಸ್‌ ಏರೊಸ್‌ ಫ್ಲೈಟ್ 1907 ಹಾಗೂ ಎಕ್ಸೆಲ್‌ ಏರ್‌ ಲಿಯರ್ಜೆಟ್‌ N600XL ವಿಮಾನದೊಂದಿಗೆ ಆಮೇಜಾನ್‌ ಪ್ರದೇಶದ ಮೇಲೆ ಆಕಾಶದ ಮಧ್ಯೆ ಢಿಕ್ಕಿ ಹೊಡೆದವು. ಲಿಯರ್‌ಜೆಟ್‌ ವಿಮಾನವು ಕಚಿಂಬೊ ವೈಮಾನಿಕ ನೆಲೆಯಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. ಆದರೆ ಬೊಯಿಂಗ್‌ 737-8EHವಿಮಾನವು ನೆಲಕ್ಕೆ ಅಪ್ಪಳಿಸುವ ಮುಂಚೆ ಹೋಳಾಯಿತು ಹಾಗೂ ಅದರಲ್ಲಿದ್ದ ಎಲ್ಲಾ 154 ಪ್ರಯಾಣಿಕರು ಮತ್ತು ಸಿಬ್ಬಂದಿ ಈ ಅಪಘಾತದಲ್ಲಿ ಸತ್ತರು.

ಇವನ್ನೂ ನೋಡಿ

  • Reforestation
  • Peruvian Amazon
  • Amanyé
  • Amazon Basin
  • Amazon Conservation Team (ACT)
  • Amazon River
  • Amazon Watch
  • Atlantic Forest
  • Climate change
  • Coordinator of Indigenous Organizations of the Amazon River Basin (COICA)
  • Conservation (ethic)
  • Indigenous peoples in Brazil
  • Uncontacted peoples
  • List of Peruvian monkey species
  • Rainforest Foundation Fund
  • Global warming
  • List of plants of Amazon Rainforest vegetation of Brazil
  • Legal logging and illegal logging
  • Sistema de Vigilância da Amazônia
  • Bandeirantes
  • Belém, Brazil
  • Santarém, Brazil
  • Manaus, Brazil
  • Iquitos, Peru
  • Save the Amazon Rainforest Organisation (STARO)
  • ವರ್ಗ:People of the Amazon

ಟಿಪ್ಪಣಿಗಳು

ಉಲ್ಲೇಖಗಳು

ಬಾಹ್ಯ ಕೊಂಡಿಗಳು

2007ರ ಮಾರ್ಚ್‌ 20ರಿಂದ 22ರ ತನಕ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದನ ಒರಿಯಲ್‌ ಕಾಲೇಜ್‌ನಲ್ಲಿ ನೀಡಲಾದ ಭಾಷಣಗಳ ಪಾಡ್‌ಕ್ಯಾಸ್ಟ್‌ಗಳು. 

Tags:

ಅಮೆಜಾನ್ ಮಳೆಕಾಡು ವ್ಯುತ್ಪತ್ತಿಅಮೆಜಾನ್ ಮಳೆಕಾಡು ಇತಿಹಾಸಅಮೆಜಾನ್ ಮಳೆಕಾಡು ಜೀವವೈವಿಧ್ಯಅಮೆಜಾನ್ ಮಳೆಕಾಡು ಅರಣ್ಯನಾಶಅಮೆಜಾನ್ ಮಳೆಕಾಡು ಸಂರಕ್ಷಣೆ ಮತ್ತು ಹವಾಗುಣ ಬದಲಾವಣೆಅಮೆಜಾನ್ ಮಳೆಕಾಡು ಇವನ್ನೂ ನೋಡಿಅಮೆಜಾನ್ ಮಳೆಕಾಡು ಟಿಪ್ಪಣಿಗಳುಅಮೆಜಾನ್ ಮಳೆಕಾಡು ಉಲ್ಲೇಖಗಳುಅಮೆಜಾನ್ ಮಳೆಕಾಡು ಬಾಹ್ಯ ಕೊಂಡಿಗಳುಅಮೆಜಾನ್ ಮಳೆಕಾಡುಎಕ್ವಡಾರ್ಕೊಲೊಂಬಿಯಗಯಾನಜಗತ್ತಿನ ಹೊಸ ಏಳು ಅದ್ಭುತಗಳುದಕ್ಷಿಣ ಅಮೇರಿಕಪೆರುಬೊಲಿವಿಯಬ್ರೆಜಿಲ್ವೆನೆಜುವೆಲಾಸುರಿನಾಮ್ಸ್ಪ್ಯಾನಿಷ್ ಭಾಷೆ

🔥 Trending searches on Wiki ಕನ್ನಡ:

ವಿಶ್ವ ಮಹಿಳೆಯರ ದಿನಅಕ್ಷಾಂಶ ಮತ್ತು ರೇಖಾಂಶದುಂಬಿಮುದ್ದಣವಸಾಹತುಸತಿ ಪದ್ಧತಿಅಂತರಜಾಲನೆಹರು ವರದಿದೆಹಲಿಇಟಲಿಮಾರುಕಟ್ಟೆನೀರುವಿಶ್ವಕೋಶಗಳುಪು. ತಿ. ನರಸಿಂಹಾಚಾರ್ಉದ್ಯಮಿಕಾವೇರಿ ನದಿಕಲ್ಯಾಣ ಕರ್ನಾಟಕಕರ್ನಾಟಕದ ನದಿಗಳುಪ್ರಜಾಪ್ರಭುತ್ವದ ಲಕ್ಷಣಗಳುಉತ್ಪಾದನಾಂಗಗಳುಕನ್ನಡ ಸಾಹಿತ್ಯ ಸಮ್ಮೇಳನಇಸ್ಲಾಂ ಧರ್ಮಐರ್ಲೆಂಡ್ಭಾರತ ಬಿಟ್ಟು ತೊಲಗಿ ಚಳುವಳಿಶಾಂತರಸ ಹೆಂಬೆರಳುಬೆಂಗಳೂರುದಕ್ಷಿಣ ಭಾರತದ ನದಿಗಳುರಾಷ್ಟ್ರೀಯತೆಕನ್ನಡಿಗಗೋದಾವರಿಬ್ಯಾಂಕ್ಲಕ್ಷ್ಮೀಶಸಿಂಧೂತಟದ ನಾಗರೀಕತೆಯೂಟ್ಯೂಬ್‌ಹನುಮಾನ್ ಚಾಲೀಸಕನಕದಾಸರುಲಿಪಿಸತ್ಯ (ಕನ್ನಡ ಧಾರಾವಾಹಿ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಋಗ್ವೇದಕೂದಲುಕೊರೋನಾವೈರಸ್ಚೋಳ ವಂಶಚೀನಾಚಂದ್ರಗುಪ್ತ ಮೌರ್ಯಕೃಷ್ಣಚಂದ್ರಶೇಖರ ಕಂಬಾರಕನ್ನಡ ಪತ್ರಿಕೆಗಳುಹೋಳಿರೋಸ್‌ಮರಿಅರಬ್ಬೀ ಸಮುದ್ರಅಂತಿಮ ಸಂಸ್ಕಾರವಾಲಿಬಾಲ್ಮಾವಂಜಿಜವಾಹರ‌ಲಾಲ್ ನೆಹರುಹಿಂದೂ ಧರ್ಮಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಆದಿಪುರಾಣಪ್ರಧಾನ ಖಿನ್ನತೆಯ ಅಸ್ವಸ್ಥತೆಗಣಿತಕೆಂಪು ಮಣ್ಣುಕಲಾವಿದದಿಕ್ಸೂಚಿಆದಿ ಶಂಕರರು ಮತ್ತು ಅದ್ವೈತನುಗ್ಗೆಕಾಯಿಭಾರತದ ಸಂಯುಕ್ತ ಪದ್ಧತಿಆಂಧ್ರ ಪ್ರದೇಶಈರುಳ್ಳಿಶುಭ ಶುಕ್ರವಾರಉಡಹಗ್ಗಭಾರತೀಯ ಭೂಸೇನೆಸೂಳೆಕೆರೆ (ಶಾಂತಿ ಸಾಗರ)ಮಡಿವಾಳ ಮಾಚಿದೇವಒಂದನೆಯ ಮಹಾಯುದ್ಧಬ್ಲಾಗ್ಬೆಳಗಾವಿಅಕ್ಬರ್🡆 More