ಅನಿಮ್ಯಾಕ್ಸ್‌

Animax (アニマックス, Animakkusu?)ಅನಿಮೆ; ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ದೇಶ ಹೊಂದಿರುವ ಜಪಾನಿನ ಅನಿಮೆ(ಜಪಾನಿನ ಎನಿಮೇಶನ್ ಕಾರ್ಯಕ್ರಮಗಳು) ಉಪಗ್ರಹ ದೂರದರ್ಶನ ಜಾಲವಾಗಿದೆ.

ಜಪಾನಿನ ಮಾಧ್ಯಮ ಸಂಘಟಿತ ವ್ಯಾಪಾರಿ ಸಂಸ್ಥೆ ಸೋನಿಯ ಅಂಗಸಂಸ್ಥೆಯಾದ ಅನಿಮ್ಯಾಕ್ಸ್ ಜಪಾನಿನ ಟೋಕಿಯೊದ ಮಿನಾಟೊದ New Pier Takeshiba North Tower (ニューピア竹芝ノースタワー Nyū Pia Takeshiba Nōsu Tawā?)ನಲ್ಲಿ ತನ್ನ ಪ್ರಧಾನ ಕಛೇರಿ ಹೊಂದಿದೆ. ಇದರ ಸಹ-ಸ್ಥಾಪಕರು ಮತ್ತು ಷೇರುದಾರರೆಂದರೆ ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್‌ ಹಾಗೂ ಪ್ರಮುಖ ಅನಿಮೆ ಸ್ಟುಡಿಯೊಗಳಾದ ಸನ್‍‌ರೈಸ್, ಟಾಯ್ ಅನಿಮೇಶನ್‌, TMS ಎಂಟರ್ಟೈನ್ಮೆಂಟ್‌ ಮತ್ತು ನಿರ್ಮಾಣ ಕಂಪನಿ NAS. ಇತ್ಯಾದಿ. ಅನಿಮ್ಯಾಕ್ಸ್ ಜಪಾನ್‌, ತೈವಾನ್, ಹಾಂಗ್‌ ಕಾಂಗ್, ದಕ್ಷಿಣ ಕೊರಿಯ, ಆಗ್ನೇಯ ಏಷ್ಯಾ, ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೆರಿಕ ಹಾಗೂ ಇತ್ತೀಚೆಗೆ ಯುರೋಪ್‌ (ಜರ್ಮನಿ, ರೊಮೇನಿಯಾ, ಹಂಗೇರಿಯ, ಜೆಕ್ ರಿಪಬ್ಲಿಕ್‌ ಮೊದಲಾದೆಡೆಗಳಲ್ಲಿ 2007ರಲ್ಲಿ, ಸ್ಲೊವಾಕಿಯಾ, ಸ್ಪೇನ್‌ ಮತ್ತು ಪೋರ್ಚುಗಲ್‌‌ ಮೊದಲಾದ ಕಡೆಗಳಲ್ಲಿ 2008ರಲ್ಲಿ ಪ್ರಾರಂಭವಾಗಿದೆ. ಅಲ್ಲದೇ ಯುನೈಟೆಡ್ ಕಿಂಗ್ಡಮ್‌, ಪೋಲೆಂಡ್, ಇಟಲಿ, ಫ್ರಾನ್ಸ್‌ ಮತ್ತು ಇತರ ಅನೇಕ ರಾಷ್ಟ್ರಗಳಲ್ಲಿ ಅತಿ ಶೀಘ್ರದಲ್ಲಿ ಆರಂಭವಾಗುತ್ತದೆ.), ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಮೊದಲಾದೆಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅನಿಮ್ಯಾಕ್ಸ್‌ ಪ್ರಪಂಚದಲ್ಲೇ 24-ಗಂಟೆ ಅನಿಮೆಯನ್ನು ಪ್ರಸಾರ ಮಾಡುವ ಮೊದಲ ಮತ್ತು ಅತಿದೊಡ್ಡ ಜಾಲವಾಗಿದೆ. ಇದು ಸುಮಾರು 89 ದಶಲಕ್ಷ ಕುಟುಂಬಗಳು, 62 ರಾಷ್ಟ್ರಗಳು ಹಾಗೂ 17ಕ್ಕಿಂತಲೂ ಹೆಚ್ಚು ಭಾಷೆಗಳ ವೀಕ್ಷಕರನ್ನು ಹೊಂದಿದೆ. ಇದರ ಶೀರ್ಷಿಕೆಯು anime (アニメ?) ಮತ್ತು max (マックス makkusu?) ಪದಗಳ ಮಿಶ್ರಪದವಾಗಿದೆ. ಇದು ಇಂಗ್ಲಿಷ್ ಭಾಷೆಯ ಜಾಲಗಳನ್ನು ಆಗ್ನೇಯ ಏಷ್ಯಾ, ದಕ್ಷಿಣ ಏಷ್ಯಾ, ದಕ್ಷಿಣ ಆಫ್ರಿಕಾ ಮೊದಲಾದ ಕಡೆಗಳಲ್ಲಿ ಹಾಗೂ ಇತ್ತೀಚೆಗೆ ಎರಡು-ಗಂಟೆಗಳ ಜಾಲವನ್ನು ಆಸ್ಟ್ರೇಲಿಯಾದಲ್ಲಿ ಹೊಂದಿದೆ. ಅಲ್ಲದೆ ಇದು ಇಂಗ್ಲಿಷ್ ಭಾಷೆಯ ಇತರ ಜಾಲಗಳನ್ನು ಮುಖ್ಯವಾಗಿ ಯುನೈಟೆಡ್ ಕಿಂಗ್ಡಮ್‌, ಆಸ್ಟ್ರೇಲಿಯಾ ಮತ್ತು ಉತ್ತರ ಅಮೆರಿಕದಲ್ಲಿ ಆರಂಭಿಸಲು ಯೋಜನೆ ಹಾಕಿಕೊಂಡಿದೆ.

Animax
アニマックス
ಸಂಸ್ಥೆಯ ಪ್ರಕಾರAnime satellite television network
ಸ್ಥಾಪನೆMay 20, 1998
ಮುಖ್ಯ ಕಾರ್ಯಾಲಯMinato, Tokyo, Japan
ಪ್ರಮುಖ ವ್ಯಕ್ತಿ(ಗಳು)Masao Takiyama, President & Representative Director
ಉದ್ಯಮAnime broadcasting and production
ಪೋಷಕ ಸಂಸ್ಥೆSony Pictures Entertainment, Inc.
Sunrise, Inc.
Toei Animation Co., Ltd.
TMS Entertainment, Ltd.
NAS
ಜಾಲತಾಣAnimax's official website
ಅನಿಮ್ಯಾಕ್ಸ್‌
2009ರ ಜನವರಿಯ ಪ್ರಕಾರ ಅನಿಮ್ಯಾಕ್ಸ್‌ ಪ್ರಸಾರ.

ಇತಿಹಾಸ

ಅನಿಮ್ಯಾಕ್ಸ್‌ 
ಅನಿಮ್ಯಾಕ್ಸ್‌ನ ಹಿಂದಿನ ಜಪಾನ್‌ ಲೋಗೊ, ಇದನ್ನು ಅದರ ಸ್ಥಾಪನೆಯಾದಂದಿನಿಂದ 2006ರವರೆಗೆ ಬಳಸಲಾಗಿತ್ತು.
ಚಿತ್ರ:Animax2.png
ಅನಿಮ್ಯಾಕ್ಸ್‌ನ ಪ್ರಸ್ತುತದ ಜಪಾನ್‌ ಲೋಗೊ, ಇದನ್ನು 2006ರಿಂದ ಕೆಲವು ಪ್ರದೇಶಗಳಲ್ಲಿ ಇಂದೂ ಸಹ ಬಳಸಲಾಗುತ್ತಿದೆ.

ಜಪಾನ್‌

1998ರ ಮೇ 20ರಂದು ಸೋನಿಯಿಂದ ಸ್ಥಾಪಿತವಾದ Animax Broadcast Japan Inc. (株式会社アニマックスブロードキャスト・ジャパン Kabushiki-gaisha Animakkusu Burōdokyasuto Japan?) ಅದೇ ವರ್ಷ ಜೂನ್ 1ರಂದು ಜಪಾನಿನಲ್ಲಿ ಸ್ಕೈ ಪರ್ಫೆಕ್ಟಿವಿ! (ಸ್ಕೈ ಪರ್ಫೆಕ್ಟಿವಿ!) (ಸ್ಕೈ ಪರಫೆಕ್ಟ್ ಟೀವಿ) ಉಪಗ್ರಹ ಸಂಪರ್ಕದ ದೂರದರ್ಶನದ ಮೂಲಕ ಅದರ ಪ್ರಥಮ ಕಾರ್ಯಕ್ರಮ ಪ್ರಸಾರ ಮಾಡಿತು. ಜಪಾನಿನ‌ ಟೋಕಿಯೊದ ಮಿನಾಟೊದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು, ಮಸಾವೊ ಟಾಕಿಯಾಮದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಿಮ್ಯಾಕ್ಸ್‌ನ ಷೇರುದಾರರು ಮತ್ತು ಸಂಸ್ಥಾಪಕರೆಂದರೆ ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್‌, ಸನ್‍‌ರೈಸ್, ಟಾಯ್ ಅನಿಮೇಶನ್‌, TMS ಎಂಟರ್ಟೈನ್ಮೆಂಟ್‌ ಮತ್ತು NAS. ಪ್ರಮುಖ ಅನಿಮೆ ನಿರ್ಮಾಪಕ ಮತ್ತು ನಿರ್ಮಾಣ ವಿನ್ಯಾಸಕ ಯೋಶಿರೊ ಕ್ಯಾಟೋಕ ಸಹ ಇದರ ಸ್ಥಾಪಕರಲ್ಲಿ ಒಳಗೊಳ್ಳುತ್ತಾನೆ. ಈ ಜಾಲವು ಹೆಚ್ಚು ಸ್ಪಷ್ಟರೂಪತೆಯಲ್ಲಿ 2009ರ ಅಕ್ಟೋಬರ್‌ನಿಂದ ಪ್ರಸಾರವಾಗಲು ಆರಂಭವಾಯಿತು. ಅನಿಮ್ಯಾಕ್ಸ್‌ ಅನಿಮೆಯ ಮೊದಲ ನಿರ್ಮಾಪಕ ಒಸಾಮು ಟೆಜುಕನ ಟೆಜುಕ ಪ್ರೊಡಕ್ಷನ್ಸ್ ಕಂಪನಿ, ಪಿಯೆರಾಟ್, ನಿಪ್ಪನ್ ಅನಿಮೇಶನ್ ಹಾಗೂ ಹಲವಾರು ಇತರ ಕಂಪನಿಗಳನ್ನು ಅಂಗಸಂಸ್ಥೆಯಾಗಿ ಹೊಂದಿದೆ. ಇದು ಅನೇಕ ಅನಿಮೆಗಳನ್ನು ನಿರ್ಮಿಸಿ, ಜಪಾನಿನಲ್ಲಿ ಮೊದಲ ಬಾರಿಗೆ ಪ್ರಸಾರ ಮಾಡಿದೆ, ಉದಾ. Ghost in the Shell: Stand Alone Complex , ಅಲ್ಟ್ರಾ ಮ್ಯಾನಿಯಕ್‌ , ಆಸ್ಟ್ರೊ ಬಾಯ್‌ , Hungry Heart: Wild Striker , ಐಶಿಟೆರುಜೆ ಬೇಬಿ ಹಾಗೂ ಮಾರ್ವೆಲ್‌ನ ಐರನ್‌ ಮ್ಯಾನ್ ಮತ್ತು ವಾಲ್ವರಿನ್ ‌ನ ಮ್ಯಾಡ್‌ಹೌಸ್‌ನ ಮುಂಬರುವ ಅನಿಮೆ ಹೊಂದಾವಣೆಯನ್ನೂ ಒಳಗೊಂಡಂತೆ ಅನೇಕ ಇತರ ಅನಿಮೆಗಳು. ಜಪಾನಿನ ಅಸಂಖ್ಯಾತ ಪ್ರಮುಖ ಪ್ರಸಿದ್ಧ ವ್ಯಕ್ತಿಗಳು ಅವರ ಸ್ವಂತ ಕಾರ್ಯಕ್ರಮಗಳೊಂದಿಗೆ ಅನಿಮ್ಯಾಕ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ, ಅವರಲ್ಲಿ ನಟಿ ನಟ್ಸುಕಿ ಕಾಟೊ ಸಹ ಸೇರಿದ್ದಾಳೆ. ಈ ಜಾಲದ ನಿರೂಪಕರೆಂದರೆ ಸೈಯು ಯುಕಾರಿ ಟಾಮುರ ಮತ್ತು ಕೋಸುಕೆ ಒಕಾನ್ ಹಾಗೂ 2007ರ ಅಕ್ಟೋಬರ್‌ನಿಂದ ಇದರಲ್ಲಿ ಸಯುರಿ ಯಹಾಗಿ ಸಹ ಕಾರ್ಯನಿರ್ವಹಿಸುತ್ತಿದ್ದಾಳೆ. ಅನಿಮ್ಯಾಕ್ಸ್‌ ಜಪಾನಿನಾದ್ಯಂತ ಅನೇಕ ಅನಿಮೆ-ಆಧಾರಿತ ಸ್ಪರ್ಧೆಗಳನ್ನು ಆಯೋಜಿಸುತ್ತದೆ, ಉದಾ. ಅನಿಮ್ಯಾಕ್ಸ್‌ ಟೈಶೊ ಕಥಾವಸ್ತು ಬರೆಯುವ ಸ್ಪರ್ಧೆ ಮತ್ತು ಅನಿಮ್ಯಾಕ್ಸ್‌ ಅನಿಸನ್ ಗ್ರ್ಯಾಂಡ್ ಪ್ರಿಕ್ಸ್ ಅನಿಮೆ ಗಾಯನ ಸಂಗೀತ ಸ್ಪರ್ಧೆ. ಈ ಸ್ಪರ್ಧೆಗಳಿಗೆ ಪ್ರಮುಖ ಅನಿಮೆ ಆಯ್ಕೆಯ ಪ್ರಸಿದ್ಧ ವ್ಯಕ್ತಿಗಳು ತೀರ್ಪುಗಾರರಾಗಿರುತ್ತಾರೆ. ಅಲ್ಲದೆ ಇದು ಜಪಾನಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಮತ್ತು ಸಂಗೀತ ಕಛೇರಿಗಳನ್ನು ನಡೆಸಿಕೊಡುತ್ತದೆ, ಉದಾ.ಪ್ರತಿ ವರ್ಷAnimax Summer Fest (アニマックスサマーフェス Animakkusu Samāfesu?), ವಾರ್ಷಿಕ ನೇರ ಪ್ರಸಾರದ ಸಂಗೀತ ಕಛೇರಿ, ಆ ಸಂದರ್ಭಗಳಲ್ಲಿ ಹೆಸರಾಂತ ಜಪಾನಿನ ಬ್ಯಾಂಡ್‌ಗಳು, ಕಲಾವಿದರು ಮತ್ತು ಸೈಯು ಪ್ರೇಕ್ಷಕರಿಗೆ ನೇರವಾಗಿ ಪ್ರದರ್ಶನ ನಡೆಸಿಕೊಡುತ್ತಾರೆ. ಇದು ಹೆಚ್ಚಾಗಿ ಜೆಪ್ಪ್ ಟೋಕಿಯೊದಲ್ಲಿ ನಡೆಯುತ್ತದೆ. ಪ್ರಾಥಮಿಕವಾಗಿ ದೂರದರ್ಶನ ಜಾಲವಾಗಿ ವ್ಯವಹಾರವನ್ನು ಪ್ರಾರಂಭಿಸಿದ ಅನಿಮ್ಯಾಕ್ಸ್‌ ಮೊಬೈಲ್ ದೂರದರ್ಶನ ಸೇವೆಯನ್ನೂ ಆರಂಭಿಸಿತು. ಅನಿಮ್ಯಾಕ್ಸ್‌ ಅದರ ಜಾಲದ ಮೊಬೈಲ್ ದೂರದರ್ಶನ ಸೇವೆಯೊಂದನ್ನು ಮೊಬೈಲ್ ಕಂಪನಿ MOBAHO! ದಲ್ಲಿ 2007ರ ಎಪ್ರಿಲ್‌ನಿಂದ ಆರಂಭಿಸಲಿದೆ, ಆ ಮೂಲಕ ಅದರ ಕಾರ್ಯಕ್ರಮಗಳನ್ನು ಕಂಪನಿಯ ಮೊಬೈಲ್ ದೂರವಾಣಿ ಚಂದಾದಾರರೂ ಸಹ ವೀಕ್ಷಿಸಬಹುದು ಎಂದು 2007ರ ಫೆಬ್ರವರಿಯಲ್ಲಿ ಘೋಷಿಸಿತು.

ಏಷ್ಯಾ

ಅನಿಮ್ಯಾಕ್ಸ್‌ 
ಹೊಸ ಲೋಗೊ, ಪ್ರಸ್ತುತ ಇದನ್ನು ಏಷ್ಯಾದ ಕೆಲವು ಮಾರುಕಟ್ಟೆಗಳಲ್ಲಿ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಬಳಸಲಾಗುತ್ತಿದೆ.

ಅನಿಮ್ಯಾಕ್ಸ್‌ 2004ರಲ್ಲಿ ಚಾನೆಲ್‌ನ ಪ್ರತ್ಯೇಕ ಏಷ್ಯನ್ ಆವೃತ್ತಿಗಳನ್ನು ಆರಂಭಿಸಿತು, ಇದು ಆಯಾ ಪ್ರದೇಶಗಳು ಮತ್ತು ಭಾಷೆಗಳಲ್ಲಿ ಬೇರೆ ಬೇರೆ ಜಾಲ ಮತ್ತು ಅವತರಣಿಕೆಗಳಲ್ಲಿ ಅದರ ಅನಿಮೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿತು. ಮೊದಲನೆಯದು ತೈವಾನ್ ಮತ್ತು ಫಿಲಿಪೈನ್ಸ್‌ನಲ್ಲಿ 2004ರ ಜನವರಿ 1ರಂದು ಹಾಗೂ ಹಾಂಗ್‌ ಕಾಂಗ್‌ನಲ್ಲಿ 2004ರ ಜನವರಿ 12ರಂದು ಆರಂಭವಾಯಿತು. ಒಂದು ವಾರದ ನಂತರ 2004ರ ಜನವರಿ 19ರಂದು ಅನಿಮ್ಯಾಕ್ಸ್‌ ಆಗ್ನೇಯ ಏಷ್ಯಾದಲ್ಲಿ ಆರಂಭಗೊಂಡಿತು. ಇದು ಇಂಗ್ಲಿಷ್ ಆಡಿಯೊ ಹಾಗೂ ಇಂಗ್ಲಿಷ್ ಉಪ-ಶೀರ್ಷಿಕೆಯೊಂದಿಗೆ ಮತ್ತು ಆಯಾ ಪ್ರದೇಶದ ಇತರ ಭಾಷೆಗಳೊಂದಿಗೆ ಜಪಾನೀ ಭಾಷೆಯ ಆಡಿಯೊದ ಅವತರಣಿಕೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿತು. ಆ ಮೂಲಕ ಅದು ಕಂಪನಿಯ ಮೊದಲ ಇಂಗ್ಲಿಷ್ ಭಾಷಾ ಜಾಲವಾಯಿತು. 2004ರ ಜುಲೈ 5ರಂದು ಅನಿಮ್ಯಾಕ್ಸ್‌ ದಕ್ಷಿಣ ಏಷ್ಯಾದಾದ್ಯಂತ ಇಂಗ್ಲಿಷ್-ಭಾಷಾ ಅವತರಣಿಕೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ತನ್ನ ಕಾರ್ಯವನ್ನು ಆರಂಭಿಸಿತು. 2006ರ ಎಪ್ರಿಲ್ 29ರಂದು ಅನಿಮ್ಯಾಕ್ಸ್‌ ದಕ್ಷಿಣ ಕೊರಿಯಾದಲ್ಲಿ, ಸಿಯೋಲ್‌ನಿಂದ ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿತು. 2006ರ ಆಗಸ್ಟ್ 31ರಂದು, ಅನಿಮ್ಯಾಕ್ಸ್‌ ಅದರ ಮಲೇಷಿಯನ್ ಅವತರಣಿಕೆಯನ್ನು ಕಾರ್ಯಗತಗೊಳಿಸಿತು. ಅನಿಮ್ಯಾಕ್ಸ್‌ ಏಷ್ಯಾ 2010ರ ಮೇ 4ರಂದು ಬಿಡುಗಡೆಯಾದ ಇತ್ತೀಚಿನ ಲೋಗೊವನ್ನು ಬಳಸುತ್ತದೆ.

ಲ್ಯಾಟಿನ್ ಅಮೆರಿಕ

ಸೋನಿಯು (ಸಂಚಾರಿ ಬಿತ್ತರ)ಲೋಕೊಮೋಶನ್ಅನ್ನು ತನ್ನದಾಗಿಸಿಕೊಂಡ ನಂತರ, ಅನಿಮ್ಯಾಕ್ಸ್‌ 2005ರ ಜುಲೈ 31ರಂದು ಲ್ಯಾಟಿನ್ ಅಮೆರಿಕ ಜಾಲವೊಂದನ್ನು ಆರಂಭಿಸಿತು. ಅನಿಮ್ಯಾಕ್ಸ್‌ ಲ್ಯಾಟಿನ್ ಅಮೆರಿಕವು ಆ ಪ್ರದೇಶದಾದ್ಯಂತ ಕಾರ್ಯನಿರ್ವಹಿಸಲು ಹಾಗೂ ಅದರ ಅನಿಮೆ ಕಾರ್ಯಕ್ರಮಗಳನ್ನು ಪ್ರತ್ಯೇಕ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಅವತರಣಿಕೆಗಳಲ್ಲಿ ಅನುಕ್ರಮವಾಗಿ ಸ್ಪ್ಯಾನಿಶ್-ಮಾತನಾಡುವ ರಾಷ್ಟ್ರಗಳು ಮತ್ತು ಬ್ರೆಜಿಲ್‌ನಾದ್ಯಂತ ಪ್ರಸಾರ ಮಾಡಲು ಆರಂಭಿಸಿತು. ಆ ಮೂಲಕ ಅದು ಆ ಪ್ರದೇಶದ ಅತಿದೊಡ್ಡ ಅನಿಮೆ ದೂರದರ್ಶನ ಜಾಲವಾಯಿತು. ಇದು ಸೋನಿಯ ಪರವಾನಗಿಯಡಿಯಲ್ಲಿ HBO ಲ್ಯಾಟಿನ್ ಅಮೆರಿಕ ಗ್ರೂಪ್‌ನಿಂದ ನಿಯಂತ್ರಿಸಲ್ಪಡುತ್ತದೆ. ಹಲವು ವರ್ಷಗಳ ನಂತರ ಅನಿಮ್ಯಾಕ್ಸ್‌ ಅನೇಕ ಅನಿಮೆ ಸರಣಿಗಳನ್ನು ಪ್ರಸಾರ ಮಾಡಿತು. ಇವುಗಳು ವೆನಜುವೆಲಾದಲ್ಲಿ ಎಸ್ಟುಡಿಯೋಸ್ ಲೇನ್‌ನಿಂದ ಮತ್ತು ನಂತರ ಮೆಕ್ಸಿಕೊದಲ್ಲಿ ಸ್ಪ್ಯಾನಿಶ್ ಆವೃತ್ತಿಗಳಿಗೆ ಡಬ್ ಮಾಡಲ್ಪಟ್ಟವು. ಅಲ್ಲದೇ ಇವನ್ನು ಬ್ರೆಜಿಲ್‌ನಲ್ಲಿ ಪೋರ್ಚುಗೀಸ್ ಆವೃತ್ತಿಗಳಿಗೆ(ಮರುನಕಲು) ಡಬ್ ಮಾಡಲಾಯಿತು. ಅವುಗಳಲ್ಲಿ ಹೆಚ್ಚಿನವನ್ನು ಸ್ಥಳೀಯವಾಗಿ ತೋರಿಸಲಾಗಲಿಲ್ಲ. ಅದರ ಕಾರ್ಯಕ್ರಮಗಳೆಂದರೆ ಲುನಾರ್ ಲೆಜೆಂಡ್ ಟ್ಸುಕಿಹಿಮ್ , ನಾಯ್ರ್ , ವೋಲ್ಫ್ಸ್ ರೈನ್ , ಲಾಸ್ಟ್ ಎಕ್ಸೈಲ್ , ಟ್ವಿನ್ ಸ್ಪಿಕ , ಪ್ಲ್ಯಾನೆಟ್ ಸರ್ವೈವಲ್ , ಎಕ್ಸೆಲ್ ಸಾಗ , ಸ್ಯಾಮುರೈ 7 , ಗನ್ ಫ್ರಾಂಟಿಯರ್ , ವ್ಯಾಂಡ್ರಿಯಡ್ , ಗ್ಯಾಂಟ್ಜ್ , ಹೀಟ್ ಗೈ J , ಗ್ಯಾಲಕ್ಸಿ ಏಂಜೆಲ್ , ಬರ್ಸ್ಟ್ ಏಂಜೆಲ್ , ಗೆಟ್ ಬ್ಯಾಕರ್ಸ್ , ಹಂಟರ್ x ಹಂಟರ್ , ಗಿ ಪ್ರಿನ್ಸ್ ಆಫ್ ಟೆನ್ನಿಸ್ , ಫುಲ್‌ಮೆಟಲ್ ಆಲ್ಕೆಮಿಸ್ಟ್ , ಬ್ಲಡ್+ , ಹೆಲ್ ಗರ್ಲ್ , ಮುಶಿಶಿ , ಬ್ಲೀಚ್ , ನಿಯಾನ್ ಜೆನೆಸಿಸ್ ಎವಾಂಗೆಲಿಯನ್ , ಸ್ಯಾಮುರೈ X , ದಿ ಮಿಥಿಕಲ್ ಡಿಟೆಕ್ಟಿವ್ ಲಾಕಿ ರಾಗ್ನರಾಕ್ , ಡೆತ್ ನೋಟ್ , ಫೇಟ್ ಸ್ಟೇ ನೈಟ್ , ಬ್ಲ್ಯಾಕ್ ಕ್ಯಾಟ್ , ಸಾಲ್ಟಿ ರೈ , R.O.D. ದಿ TV , xxxHOLIC , ಬೊಕುರಾನೊ , ಹುಮನಾಯ್ಡ್ ಮಾಂಸ್ಟರ್ ಬೆಮ್ , ಸ್ಪೀಡ್ ಗ್ರಾಫರ್ , ಬ್ಯಾಸಿಲಿಸ್ಕ್ , ಟ್ರಿನಿಟಿ ಬ್ಲಡ್ , ಹೆಲ್‌ಸಿಂಗ್ , ಬ್ಲ್ಯಾಕ್ ಜ್ಯಾಕ್ , ಗ್ಯಾಂಕುಟ್ಸೊಯ್ , Hungry Heart: Wild Striker , ಲೆಜೆಂಡ್ ಆಫ್ ಬ್ಲೂ , 009-1 ಮತ್ತು ಮುಸುಮೆಟ್ . 2007ರ ಜನವರಿಯಲ್ಲಿ ಆರಂಭಗೊಂಡು ಅನಿಮ್ಯಾಕ್ಸ್‌ ಅದರ ರೂಪುರೇಖೆಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಅದಲ್ಲದೇ ಕೆಲವು ಅನಿಮೆ ಸರಣಿಗಳನ್ನು ಅವು ಮರುಪ್ರಸಾರವಾಗುವುದಕ್ಕಿಂತ ಮೊದಲೇ ತೆಗೆದುಹಾಕಿತು. ಅನಿಮ್ಯಾಕ್ಸ್‌ ಲ್ಯಾಟಿನ್ ಅಮೆರಿಕವು 2007ರ ಆಗಸ್ಟ್‌ನಿಂದ ಅದರ ಪ್ರತಿಷ್ಠೆ ಮತ್ತು ಪರಿಕಲ್ಪನೆಯಲ್ಲಿ ಹೊಸತನ ಸಾರಿತು. ಅದಲ್ಲದೇ ವಯಸ್ಕರನ್ನು-ಆಧರಿಸಿದ ಸರಣಿಗಳನ್ನೊಳಗೊಂಡ ಹೊಸ ಕಾರ್ಯಕ್ರಮದ ಪ್ರಥಮ ಪ್ರದರ್ಶನ (ಲಾಲಿಪಾಪ್ ಎಂಬ ಹೆಸರಿನ)ದನ್ನು ಪ್ರಸಾರ ಮಾಡಿತು. ಅದೇ ರೀತಿ, 2008ರ ಮಾರ್ಚ್ 18ರಂದು ಇದು ಜಪಾನ್‌ ಮತ್ತು ಆಸ್ಟ್ರೇಲಿಯಾದಲ್ಲಿ ಲಭ್ಯಯಿರುವ ಮೊಬೈಲ್ ಸೇವೆ 'ಅನಿಮ್ಯಾಕ್ಸ್‌ ಮೊಬೈಲ್' ಮೆಕ್ಸಿಕೊದಲ್ಲಿ ಮತ್ತು ಅಂತಿಮವಾಗಿ ಇತರ ಲ್ಯಾಟಿನ್ ಅಮೆರಿಕಾದ ರಾಷ್ಟ್ರಗಳಲ್ಲೂ ಆರಂಭವಾಗುತ್ತದೆಂದು ಪ್ರಕಟಿಸಿತು.

ಉತ್ತರ ಅಮೆರಿಕ

ಅನಿಮ್ಯಾಕ್ಸ್‌ ಉತ್ತರ ಅಮೆರಿಕದಾದ್ಯಂತ ಅನೇಕ ಅನಿಮೆ-ಆಧಾರಿತ ಕಾರ್ಯಕ್ರಮಗಳನ್ನು ಪ್ರಾಯೋಜಿಸಿದೆ. ಇದು ಇತರ ಅನಿಮೆ ವಿತರಣ ಉದ್ಯಮಗಳಾದ ಬಾಂದೈ ಎಂಟರ್ಟೈನ್ಮೆಂಟ್‌ ಮತ್ತು VIZ ಮೀಡಿಯಾ ಸಹಯೋಗದೊಂದಿಗೆ ಸೋನಿಯ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಮನರಂಜನಾ ವ್ಯಾಪಾರ ಮಳಿಗೆ ಮೆಟ್ರಿಯಾನ್‌ನಲ್ಲಿ 2001ರ ಅಕ್ಟೋಬರ್‌ನಲ್ಲಿ ಅನಿಮೆ ಉತ್ಸವ ನಡೆಸಿತು. ಆ ಸಂದರ್ಭದಲ್ಲಿ ಅದು ಹಲವಾರು ಅನಿಮೆ ಕಾರ್ಯಕ್ರಮಗಳನ್ನು ಪ್ರದರ್ಶಿಸಿತು, ಅವುಗಳೆಂದರೆ ಗುಂಡಮ್ , ದಿ ಮೇಕಿಂಗ್ ಆಫ್ ಮೆಟ್ರೊಪೊಲೀಸ್ ಮತ್ತು ಲವ್ ಹಿನಾ ಪ್ರದರ್ಶನಗಳು. ಪ್ರಮುಖ ಅಂತಾರಾಷ್ಟ್ರೀಯ ವಾಣಿಜ್ಯ ಪತ್ರಿಕೆ ದಿ ಫೈನಾನ್ಶಿಯಲ್ ಟೈಮ್ಸ್ 2004ರ ಸೆಪ್ಟೆಂಬರ್‌ನಲ್ಲಿ, ಸೋನಿಯು ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಉತ್ತರ ಅಮೆರಿಕದಾದ್ಯಂತ ಅನಿಮ್ಯಾಕ್ಸ್‌ಅನ್ನು ಆರಂಭಿಸಲು ಯೋಜಿಸುತ್ತಿದೆ, ಅಲ್ಲದೇ ಹೆಚ್ಚು ಉತ್ಸಾಹಭರಿತವಾಗಿದೆ ಎಂದು ವರದಿ ಮಾಡಿತು. ನಂತರ ಸೋನಿಯು ಅದರ ಕನಿಷ್ಠ ಮೂರು ದೂರದರ್ಶನ ಜಾಲಗಳನ್ನು ಆ ಪ್ರದೇಶಕ್ಕೆ ತರಲು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಅತಿದೊಡ್ಡ ಕೇಬಲ್ ಕಂಪನಿ ಕಮ್ಕಾಸ್ಟ್ ಒಂದಿಗೆ ಒಪ್ಪೊಂದವೊಂದಕ್ಕೆ ಸಹಿಹಾಕಿತು, ಪ್ರಸಿದ್ಧ ಹಾಲಿವುಡ್ ಸ್ಟುಡಿಯೊ MGMನೊಂದಿಗಿನ ಇದರ US$4.8 ಶತಕೋಟಿ ಗಳಿಕೆಯಲ್ಲಿ ಸೋನಿ ಸಹ-ಪಾಲುದಾರನಾಗಿತ್ತು.

ಕೆನಡಾ

ಅನಿಮ್ಯಾಕ್ಸ್‌ ಅದರ ಮೊಬೈಲ್ ದೂರದರ್ಶನ ಸೇವೆ 'ಅನಿಮ್ಯಾಕ್ಸ್‌ ಮೊಬೈಲ್'ಅನ್ನು ಬೆಲ್ ಡಿಜಿಟಲ್‌ನ ಮೊಬೈಲ್ ದೂರವಾಣಿ ಸೇವೆಯಲ್ಲಿ ಕೆನಡಾದಲ್ಲಿ 2007ರ ಜುಲೈನಿಂದ ಆರಂಭಿಸುತ್ತದೆಂದು ಸೋನಿ ಪಿಕ್ಚರ್ಸ್ ಟೆಲಿವಿಷನ್ ಇಂಟರ್‌ನ್ಯಾಷನಲ್ 2007ರ ಜೂನ್ 13ರಂದು ಅಧಿಕೃತವಾಗಿ ಪ್ರಕಟಿಸಿತು. ಇದು ಅನಿಮ್ಯಾಕ್ಸ್‌ ಮೊಬೈಲ್‌ನ ಮೂರನೇ ಪ್ರಮುಖ ವಿಸ್ತರಣೆಯಾಗಿದೆ, ಅದಕ್ಕಿಂತ ಮೊದಲು ಅದು ಮೊಬೈಲ್ ದೂರದರ್ಶನ ಸೇವೆಯನ್ನು ಜಪಾನಿನಲ್ಲಿ 2007ರ ಎಪ್ರಿಲ್‌ನಲ್ಲಿ ಹಾಗೂ ಆಸ್ಟ್ರೇಲಿಯಾದಲ್ಲಿ 2007ರ ಜೂನ್ 12ರಂದು ಆರಂಭಿಸಿತ್ತು.

ಅಮೆರಿಕಾ ಸಂಯುಕ್ತ ಸಂಸ್ಥಾನಗಳು

2010ರ ಮಾರ್ಚ್ 30ರಂದು Crackle.com ಅದರ ಬ್ಲಾಗ್‌ನಲ್ಲಿ, ಅದು ಅನಿಮೆ ವೀಡಿಯೊಗಳ ಸಂಗ್ರಹವೊಂದನ್ನು ಅನಿಮ್ಯಾಕ್ಸ್‌ ಶೀರ್ಷಿಕೆಯಡಿಯಲ್ಲಿ ಬಿಡುಗಡೆಗೊಳಿಸಿದೆಯೆಂದು ಪ್ರಕಟಿಸಿತು. ಅದರ ಬ್ಲಾಗ್‌ನಲ್ಲಿ ಅದು 24-ಗಂಟೆಗಳ ಮೂಲ ಜಪಾನೀಸ್ ಅನಿಮ್ಯಾಕ್ಸ್‌ ಚಾನೆಲ್‌ನ ಬಗ್ಗೆ ಉಲ್ಲೇಖಿಸುತ್ತದೆ. Crackle.comನ "ಅನಿಮ್ಯಾಕ್ಸ್‌ ಸಂಗ್ರಹ"ದಡಿಯಲ್ಲಿರುವ ಕೆಲವು ಶೀರ್ಷಿಕೆಗಳೆಂದೆ: ಬ್ಲಡ್+, ನೊಡೇಮ್ ಕ್ಯಾಂಟಬೈಲ್, ಸ್ಯಾಮುರೈ X, ಆಸ್ಟ್ರೊಬಾಯ್, ವೋಲ್ಟ್ರನ್, ಬೇರ್ ರೈಡರ್ ಆಂಡ್ ಸ್ಟಾರ್ ಶೆರಿಫ್ಸ್. Crackle.com ಅನಿಮ್ಯಾಕ್ಸ್‌ ಹೆಸರಿನಡಿಯಲ್ಲಿ ಅನಿಮೆ ಮತ್ತು ನೇರ-ಪ್ರದರ್ಶನದ ಶೀರ್ಷಿಕೆಗಳನ್ನೂ ಸೇರಿಸಲು ಯೋಜಿಸುತ್ತಿದೆ.

ಯುರೋಪ್‌

2007ರ ಎಪ್ರಿಲ್‌ನಲ್ಲಿ ಅನಿಮ್ಯಾಕ್ಸ್‌ ಹಂಗೇರಿಯ, ರೊಮೇನಿಯಾ, ಜೆಕ್ ರಿಪಬ್ಲಿಕ್‌, ಸ್ಲೊವಾಕಿಯಾ ಮೊದಲಾದ ಯುರೋಪಿನ‌ ಅನೇಕ ರಾಷ್ಟ್ರಗಳಾಂದ್ಯತ ಆರಂಭಗೊಂಡಿತು. ಸೋನಿಯು ಯುನೈಟೆಡ್ ಕಿಂಗ್ಡಮ್‌, ಜರ್ಮನಿ, ಇಟಲಿ, ಸ್ಪೇನ್‌, ಪೋರ್ಚುಗಲ್‌, ಫ್ರಾನ್ಸ್‌, ಪೋಲೆಂಡ್ ಹಾಗೂ ಈ ಖಂಡದ ಇತರ ಪ್ರಮುಖ ರಾಷ್ಟ್ರಗಳಲ್ಲಿ ಪ್ರಸಾರವನ್ನು ಆರಂಭಿಸುವ ಯೋಜನೆಯನ್ನು ಪ್ರಕಟಿಸಿದೆ, ಇದರ ಬಗ್ಗೆ ಮಾತುಕತೆಗಳು ಪ್ರಗತಿಯಲ್ಲಿವೆ. ಇದು ಯುರೋಪಿಗೆ ಅನಿಮ್ಯಾಕ್ಸ್‌ನ ಮೊದಲ ಪ್ರಮುಖ ವಿಸ್ತರಣೆಯನ್ನು ಸೂಚಿಸುತ್ತದೆ. ಆ ಜಾಲವು ನಂತರ ಅತಿ ಶೀಘ್ರದಲ್ಲಿ ಜರ್ಮನಿಯಲ್ಲಿ 2007ರ ಮೇಯಲ್ಲಿ ಹಾಗೂ ಸ್ಪೇನ್‌ ಮತ್ತು ಪೋರ್ಚುಗಲ್‌‌ನಲ್ಲಿ 2008ರಲ್ಲಿ ಆರಂಭಗೊಂಡಿತು. 2007ರ ಅಕ್ಟೋಬರ್‌ನಲ್ಲಿ ಯುನೈಟೆಡ್ ಕಿಂಗ್ಡಮ್‌ನಲ್ಲಿ‌ ಅನಿಮ್ಯಾಕ್ಸ್‌ನ ಪ್ರಾರಂಭದ ವಿವರಗಳಲ್ಲಿ ಇನ್ನಷ್ಟು ಮಾಹಿತಿಯು ಪ್ರಕಟವಾಯಿತು. ಸೋನಿ ಪಿಕ್ಚರ್ಸ್ ಟೆಲಿವಿಷನ್ ಇಂಟರ್‌ನ್ಯಾಷನಲ್‌ನ ಹಿರಿಯ-ಉಪಾಧ್ಯಕ್ಷ ರಾಸ್ ಹೈರ್ ಬ್ರ್ಯಾಂಡ್ ರಿಪಬ್ಲಿಕ್‌ನ ಮೀಡಿಯಾ ವೀಕ್ ‌ನಲ್ಲಿ ಹೀಗೆಂದು ಹೇಳಿದನು - ಸೋನಿಯು ಅನಿಮ್ಯಾಕ್ಸ್‌ಅನ್ನು ಯುನೈಟೆಡ್ ಕಿಂಗ್ಡಮ್‌ನಲ್ಲಿ ಇತರ ಸೋನಿ ದೂರದರ್ಶನ ಜಾಲಗಳೊಂದಿಗೆ ಆರಂಭದಲ್ಲಿ ಬೇಡಿಕೆಯ-ಆಧಾರದಲ್ಲಿ ವೀಡಿಯೊ ಸೇವೆ ಒದಗಿಸುವ ಜಾಲವನ್ನು ಆರಂಭಿಸಲು ತಯಾರಿ ನಡೆಸುತ್ತಿದೆ. ಅದಲ್ಲದೇ ಸೋನಿಯು ಉಚಿತ ಡಿಜಿಟಲ್ ದೂರದರ್ಶನ ಸೇವೆ ಫ್ರೀವ್ಯೂ ಒಂದಿಗೆ ಹೊಸ ಆವರ್ತನಗಳಲ್ಲಿ ಮತ್ತು ಲಭ್ಯಯಿರುವ ಸ್ಥಳಗಳಲ್ಲಿ ಅನಿಮ್ಯಾಕ್ಸ್‌ಅನ್ನು ಆರಂಭಿಸುವ ಆಶಯ ಹೊಂದಿದೆ.

ಸ್ಪೇನ್‌ ಮತ್ತು ಪೋರ್ಚುಗಲ್‌

ಅನಿಮ್ಯಾಕ್ಸ್‌ ಸ್ಪೇನ್‌ ಮತ್ತು ಪೋರ್ಚುಗಲ್‌‌ನಲ್ಲಿ AXN ಚಾನೆಲ್‌ನಲ್ಲಿ ಪ್ರೋಗ್ರ್ಯಾಮಿಂಗ್ ಬ್ಲಾಕ್ ಆಗಿ ಆರಂಭವಾಯಿತು. ಇದು ಇನುಯಾಶ , ಔಟ್‌ಲಾ ಸ್ಟಾರ್ , ಟ್ರಿಗನ್ , ಆರ್ಫನ್ , ಎಕ್ಸೆಲ್ ಸಾಗ ಮತ್ತು ಸಾಮುರೈ ಚಾಂಪ್ಲೂ ಮೊದಲಾದವನ್ನು ಪ್ರಸಾರ ಮಾಡುತ್ತದೆ. ನಂತರ ಇದು ಕರೆಕ್ಟರ್ ಯುಯಿ , ದಿ ಲಾ ಆಫ್ ಯೂಕಿ , ಡಿಟೆಕ್ಟಿವ್ ಕೊನಾನ್ , ಲುಪಿನ್ III ಮತ್ತು ಕೊಚಿಕೇಮ್ ಮೊದಲಾದವನ್ನು ವಾರಾಂತ್ಯದಲ್ಲಿ 13:00ರಿಂದ 16:00ರವರೆಗೆ ಪ್ರಸಾರ ಮಾಡುತ್ತದೆ, ಇದು ಪೋರ್ಚುಗಲ್‌ ಮತ್ತು ಸ್ಪೇನ್‌ನಲ್ಲಿ 2007ರ ಅಕ್ಟೋಬರ್‌ನಿಂದ 2008ರವರೆಗೆ ಸೆಪ್ಟೆಂಬರ್‌ರವರೆಗೆ ಪ್ರಸಾರ ಮಾಡಿತು. ಈ ಚಾನೆಲ್‌ ಅನಂತರ 2008ರ ಎಪ್ರಿಲ್ 12ರಂದು ಇಮಾಜಿನಿಯೊ ಮತ್ತು ಡಿಜಿಟಲ್+ಪ್ಲಾಟ್‌ಫಾರ್ಮ್‌ನಲ್ಲಿ ಸ್ಪೇನ್‌ ಹಾಗೂ ಪೋರ್ಚುಗಲ್‌‌ನಲ್ಲಿ ಮಿಯೊ ಮತ್ತು ಕ್ಲಿಕ್ಸ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಯಿತು. ಸ್ಪೇನ್‌ ಮತ್ತು ಪೋರ್ಚುಗಲ್‌ನಲ್ಲಿ ಅನಿಮ್ಯಾಕ್ಸ್‌ನ ಜಾಲಗಳಲ್ಲಿ ಪ್ರಸಾರವಾದ ಸರಣಿಗಳೆಂದರೆ - ನಾನ , ಬ್ಲ್ಯಾಕ್ ಲಗೂನ್ , ಲವ್ ಹಿನ , Tsubasa: Reservoir Chronicle , ಚೊಬಿಟ್ಸ್ , ಡೆವಿಲ್ ಮೇ ಕ್ರೈ .

ಜರ್ಮನಿ

ಅನಿಮ್ಯಾಕ್ಸ್‌ ಜರ್ಮನಿಯಲ್ಲಿ 2007ರ ಜೂನ್‌ನ ಆರಂಭದಲ್ಲಿ ಶುರುವಾಗುತ್ತದೆ. ಅಲ್ಲದೇ ಆ ಮೂಲಕ ಇದು ರಾಷ್ಟ್ರದಲ್ಲೇ ಅನಿಮೆ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾದ ಮೊದಲ ದೂರದರ್ಶನ ಜಾಲವಾಗುತ್ತದೆಂದು ಸೋನಿಯು 2007ರ ಮೇ 14ರಂದು ಪ್ರಕಟಿಸಿತು. ಅನಿಮ್ಯಾಕ್ಸ್‌ 2007ರ ಜೂನ್ 5ರಂದು ಯುನಿಟಿ ಮೀಡಿಯಾಸ್ ಡಿಜಿಟಲ್ ಚಂದಾದಾರರಿಗಾಗಿ ದೂರದರ್ಶನ ಸೇವೆಯಲ್ಲಿ ನಾರ್ತ್ ರೈನೆ-ವೆಸ್ಟ್‌ಫಾಲಿಯ, ಹೆಸ್ಸೆ ಮತ್ತು ಇತರ ಪ್ರದೇಶಗಳಲ್ಲಿ ತನ್ನ ಪ್ರಸಾರ ಆರಂಭಿಸಿತು. ಅನಿಮ್ಯಾಕ್ಸ್‌ ಜರ್ಮನಿಯಲ್ಲಿ ಪ್ರಸಾರವಾದ ಮೊದಲ ಅನಿಮೆ ಸರಣಿಗಳೆಂದರೆ - .hack//SIGN , ಡ್ರ್ಯಾಗನ್‌ಬಾಲ್ , ಅರ್ತ್ ಗರ್ಲ್ ಅರ್ಜುನ , ಯುರೇಕ ಸೆವೆನ್ , ಗುಂಡಮ್ ಸೀಡ್ , ಓ! ಮೈ ಗಾಡೆಸ್ , ಒನ್ ಪೀಸ್ , ರೆಕಾರ್ಡ್ ಆಫ್ ಲಾಡಾಸ್ ವಾರ್ , ಸ್ಕೂಲ್ ರಂಬಲ್ , ದಿ ಕ್ಯಾಂಡಿಡೇಟ್ ಫಾರ್ ಗಾಡೆಸ್ , X ಮತ್ತು ಅನೇಕ ಇತ್ಯಾದಿ.

ಪೋಲೆಂಡ್

ಈ ಜಾಲವು ಕೇಂದ್ರ ಮತ್ತು ಪೂರ್ವ ಯುರೋಪ್‌‌ನಾದ್ಯಂತ ಇರುವ ಅನೇಕ ಇತರ ಅದೇ ರೀತಿಯ ವಿಸ್ತರಣೆಗಳನ್ನು ಅನುಸರಿಸಿ ಪೋಲೆಂಡ್‌ನಲ್ಲೂ ಪ್ರಸಾರವಾಗುತ್ತದೆ. ಇದು ಮುಂದೆ ಈ ರಾಷ್ಟ್ರದಲ್ಲಿ HBO ಪೋಲೆಂಡ್‌ನಿಂದ ಪ್ರಸಾರವಾಗಲಿದೆ.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾದಲ್ಲಿ 24-ಗಂಟೆಗಳ ಜಾಲವು ಇದುವರೆಗೆ ಆರಂಭವಾಗದಿದ್ದರೂ, ಅನಿಮ್ಯಾಕ್ಸ್‌ ಎರಡು-ಗಂಟೆಗಳ ಪ್ರೋಗ್ರ್ಯಾಮಿಂಗ್ ಬ್ಲಾಕ್ ಆಗಿ ಸ್ಕೈ ಫೈ ಚಾನೆಲ್‌ ಆಸ್ಟ್ರೇಲಿಯಾದಲ್ಲಿ (ಇದು ಅನಿಮ್ಯಾಕ್ಸ್‌ನ ಮಾತೃಸಂಸ್ಥೆ ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್‌‌ನಿಂದ ಸಹ-ಒಡೆತನ ಹೊಂದಿದೆ.) 2008ರ ನವೆಂಬರ್ 5ರಂದು ಆರಂಭವಾಯಿತು, ಇದು ಬುಧವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಪ್ರಸಾರವಾಗುತ್ತದೆ. ಇದು Ghost in the Shell: Stand Alone Complex , ಕೌಬಾಯ್ ಬೆಬಾಪ್ , ಬ್ಲ್ಯಾಕ್ ಲಗೂನ್ ಮತ್ತು ಬ್ಲಡ್+ ಮೊದಲಾದ ಸರಣಿಗಳೊಂದಿಗೆ ಆರಂಭವಾಯಿತು. ಇದು ಅನಿಮ್ಯಾಕ್ಸ್‌ನ ಆಗ್ನೇಯ ಏಷ್ಯಾ, ದಕ್ಷಿಣ ಏಷ್ಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿನ ಜಾಲಗಳ ನಂತರ ಇತ್ತೀಚಿನ ಇಂಗ್ಲಿಷ್ ಭಾಷಾ ಜಾಲವಾಗಿದೆ. ಹಿಂದೆ ಅನಿಮ್ಯಾಕ್ಸ್‌ ಸ್ಪೇನ್‌ ಮತ್ತು ಪೋರ್ಚುಗಲ್‌‌ನಲ್ಲಿ AXNನಲ್ಲಿ (ಸೋನಿ ಪಿಕ್ಚರ್ಸ್ ಎಂಟರ್ಟೈನ್ಮೆಂಟ್‌ನಿಂದ ಮಾಲಿಕತ್ವ ಹೊಂದಿದೆ.) ಪ್ರಾರಂಭವಾದಂತೆ ಮೂರು-ಗಂಟೆಗಳ ಪ್ರೋಗ್ರ್ಯಾಮಿಂಗ್ ಬ್ಲಾಕ್ ಆಗಿ ಆರಂಭಗೊಂಡಿತು. 2007ರಲ್ಲಿ ಆರಂಭವಾದ ಇದು ನಂತರ 2008ರ ಎಪ್ರಿಲ್ 12ರಂದು ಸಂಪೂರ್ಣವಾಗಿ 24-ಗಂಟೆಗಳ ಪ್ರತ್ಯೇಕ ಅನಿಮೆ ಜಾಲವಾಗಿ ತನ್ನ ಪ್ರಸಾರ ಪ್ರಾರಂಭಿಸಿತು. ಅನಿಮ್ಯಾಕ್ಸ್‌ ಕಾರ್ಯಕ್ರಮಗಳು 2007ರ ಜೂನ್ 12ರಿಂದ ಅದರ ಮೊಬೈಲ್ ದೂರದರ್ಶನ ಸೇವೆಯಾದ ಅನಿಮ್ಯಾಕ್ಸ್‌ ಮೊಬೈಲ್‌ನ ಮೂಲಕವೂ ಲಭ್ಯಯಿವೆ, ಇವು 3 ಮೊಬೈಲ್‌ನ 3G ಜಾಲದಲ್ಲಿ ಲಭ್ಯವಾಗುತ್ತವೆ. ಅದರ ನಾಲ್ಕು ಪೂರ್ಣ ಅನಿಮೆ ಸರಣಿಗಳನ್ನೊಳಗೊಂಡ ಆರಂಭಿಕ ಕಾರ್ಯಕ್ರಮಗಳೆಂದರೆ - ಬ್ಲಡ್+ , R.O.D -ದಿ ಟಿವಿ- , Gankutsuou: The Count of Monte Cristo ಹಾಗೂ ಲಾಸ್ಟ್ ಎಕ್ಸೈಲ್ .

ಆಫ್ರಿಕಾ

2007ರ ಆಗಸ್ಟ್‌ನಲ್ಲಿ ಅನಿಮ್ಯಾಕ್ಸ್‌ ಆಫ್ರಿಕಾದ ಅನೇಕ ರಾಷ್ಟ್ರಗಳಲ್ಲಿ DStv ಉಪಗ್ರಹ ಸೇವೆಯಲ್ಲಿ ಆರಂಭವಾಗುತ್ತದೆಂದು ಪ್ರಕಟಿಸಲಾಯಿತು, ಅವುಗಳೆಂದರೆ - ದಕ್ಷಿಣ ಆಫ್ರಿಕಾ, ನಮಿಬೀಯಾ, ಜಿಂಬಾಬ್ವೆ, ಬೋಟ್ಸಾವಾನಾ, ಜಾಂಬಿಯಾ, ಮೊಜಂಬಿಕ್ ಮತ್ತು ಲೆಸೊತೊ.ಇದು ನೈಜೀರಿಯಾದಲ್ಲಿ HiTVರಲ್ಲಿ 2009ರ ಮಾರ್ಚ್ 19ರಂದು ತನ್ನ ಪ್ರಸಾರವನ್ನು ಆರಂಭಿಸಿತು.

ದಕ್ಷಿಣ ಆಫ್ರಿಕಾ

ಈ ಜಾಲವು(ಡಿಜಿಟಲ್ ಆಧಾರಿತ) DStvರಲ್ಲಿ 2007ರ ನವೆಂಬರ್ 3ರಂದು ತನ್ನ ಪ್ರಸಾರ ಆರಂಭಿಸಿತು. ಅಲ್ಲದೇ ಇದು ಇಂಗ್ಲಿಷ್ ಭಾಷಾ ಕಾರ್ಯಕ್ರಮಗಳನ್ನೂ ಒಳಗೊಂಡಿದೆ. ಇದು ಇತರ ಯಾವುದೇ ಆಧಾರಗಳಿಗಿಂತ ಅಸಾಧಾರಣವಾಗಿ ಅನಿಮೆಯ ಬಗ್ಗೆ ತಿಳಿವಳಿಕೆ ಪ್ರಸಾರ ಮಾಡಿದುದಕ್ಕಾಗಿ ದಿ ಟೈಮ್ಸ್ ‌ ಮೊದಲಾದ ಪತ್ರಿಕೆಗಳಿಂದ ಪ್ರಶಂಸೆ ಪಡೆಯಿತು. ಅದು ದಕ್ಷಿಣ ಆಫ್ರಿಕಾದಲ್ಲಿ ಅದರ ಪ್ರಸಾರದ ಮೊದಲನೇ ವರ್ಷವನ್ನು 2008ರ ನವೆಂಬರ್‌ನಲ್ಲಿ ಆಚರಿಸಿತು. ಸೋನಿ ಪಿಕ್ಚರ್ಸ್ ಟೆಲಿವಿಷನ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ಫಿಲಿಪ್ ಸ್ಕ್ಮಿಡ್ತ್ ದಿ ಟೈಮ್ಸ್ ‌ನಲ್ಲಿ ಹೀಗೆಂದು ಹೇಳಿದನು - ದಕ್ಷಿಣ ಆಫ್ರಿಕಾದಲ್ಲಿ ಅನಿಮೆ ಕಾರ್ಯಕ್ರಮವನ್ನೇ ಮುಖ್ಯ ಉದ್ದೇಶವಾಗಿ ಹೊಂದಿ ಸ್ಥಾಪನೆಯಾಗುವುದು ಅನಿಮ್ಯಾಕ್ಸ್‌ನ ಪ್ರಾಥಮಿಕ ಗುರಿಯಾಗಿತ್ತು. ಇದಕ್ಕೆ ಬಂದ ಪ್ರತಿಕ್ರಿಯೆಯು ಇದು ರಾಷ್ಟ್ರದಲ್ಲಿ ಗಮನಾರ್ಹ ಪ್ರಭಾವ ಬೀರುತ್ತಿದೆ ಎಂಬುದನ್ನು ತೋರಿಸಿಕೊಟ್ಟಿತು. ಅನಿಮ್ಯಾಕ್ಸ್‌ ದಕ್ಷಿಣ ಆಫ್ರಿಕಾ ಪ್ರಸಾರ ಮಾಡಿದ ಕಾರ್ಯಕ್ರಮಗಳೆಂದರೆ - ನಿಯಾನ್ ಜೆನೆಸಿಸ್ ಎವಾಂಗೆಲಿಯನ್ , ಟೆಂಜೊ ಟೆಂಗೆ , Ghost in the Shell: Stand Alone Complex , Negima!: Magister Negi Magi , ಮೊಬೈಲ್ ಸ್ಯೂಟ್ ಗುಂಡಮ್ ಸೀಡ್ , ಯುರೇಕ 7 , ಏಂಜಲಿಕ್ ಲೇಯರ್ , ಸೋಲ್ಟಿ ರೈ , ಬ್ಲ್ಯಾಕ್ ಕ್ಯಾಟ್ , ಹಿನೊಟೋರಿ , ಫೈನಲ್ ಫ್ಯಾಂಟಸಿ ಅನ್‌ಲಿಮಿಟೆಡ್ , ಲಾಸ್ಟ್ ಎಕ್ಸೈಲ್ , ಸಾಮರೈ 7 , ಬ್ಲ್ಯಾಕ್ ಜ್ಯಾಕ್ , ಬ್ಲ್ಯಾಕ್ ಲಗೂನ್ , ವೋಲ್ಫ್ಸ್ ರೈನ್ , ಬ್ಯಾಸಿಲಿಸ್ಕ್ , ಗ್ಯಾಂಟ್ಜ್: ದಿ ಫರ್ಸ್ಟ್ ಸ್ಟೇಜ್ ಮತ್ತು ಎಲ್ಫೆನ್ ಲೈಡ್ .

ಇತರ ಸಾಹಸೋದ್ಯಮಗಳು

ಅನಿಮ್ಯಾಕ್ಸ್‌ ಮೊಬೈಲ್‌

ಅದರ ಕಾರ್ಯಕ್ರಮಗಳನ್ನು ದೂರದರ್ಶನ ಜಾಲವಾಗಿ ಪ್ರಸಾರ ಮಾಡುವ ಹೊರತಾಗಿ ಅನಿಮ್ಯಾಕ್ಸ್‌ ಇತ್ತೀಚೆಗೆ ಅದರ ಕಾರ್ಯಕ್ರಮಗಳನ್ನು ಮೊಬೈಲ್‌ ದೂರದರ್ಶನದಲ್ಲೂ ಆರಂಭಿಸಿದೆ. ಇದನ್ನು ಮೊದಲು ಅದರ ಮೂಲಸ್ಥಾನ ಜಪಾನ್‌ನಲ್ಲಿ ಹಾಗೂ ಅನಂತರ ಬೇರೆ ರಾಷ್ಟ್ರಗಳಲ್ಲಿ ಆರಂಭಿಸಿತು. ಅನಿಮ್ಯಾಕ್ಸ್‌ ಮೊಬೈಲ್‌ ದೂರದರ್ಶನ ಸೇವೆಯೊಂದನ್ನು ಜಪಾನಿನಲ್ಲಿ ಮೊಬೈಲ್‌ ದೂರವಾಣಿ ಕಂಪನಿ MOBAHO!ದಲ್ಲಿ 2007ರ ಎಪ್ರಿಲ್‌ನಲ್ಲಿ ಆರಂಭಿಸುತ್ತದೆ. ಅಲ್ಲದೇ ಆದ್ದರಿಂದ ಈ ಕಂಪನಿಯ ಮೊಬೈಲ್‌ ದೂರವಾಣಿ ಚಂದಾದಾರರೂ ಸಹ ಅದರ ಕಾರ್ಯಕ್ರಮಗಳನ್ನು ವೀಕ್ಷಿಸಬಹುದೆಂದು 2007ರ ಫೆಬ್ರವರಿಯಲ್ಲಿ ಪ್ರಕಟಿಸಿತು. . ಅನಂತರ ಅದರ ಮೊದಲ ಇಂಗ್ಲಿಷ್ ಭಾಷಾ ಮೊಬೈಲ್‌ ಜಾಲ ವನ್ನು 2007ರ ಜೂನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ, ಲ್ಯಾಟಿನ್ ಅಮೆರಿಕದಲ್ಲಿ 2008ರ ಮಾರ್ಚ್ 18ರಂದು ಹಾಗೂ ಆಗ್ನೇಯ ಏಷ್ಯಾದಲ್ಲಿ 2008ರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಆರಂಭಿಸಿತು. ಅದರ ಮೂರನೇ ಮೊಬೈಲ್‌ ಇಂಗ್ಲಿಷ್ ಭಾಷಾ ಜಾಲವನ್ನು ಮಲೇಷಿಯಾ ಮತ್ತು ಸಿಂಗಾಪೂರ್‌‌ನಲ್ಲಿ ಅನುಕ್ರಮವಾಗಿ ಆಸ್ಟ್ರೊ, ಮ್ಯಾಕ್ಸಿಸ್ ಮತ್ತು ಸ್ಟಾರ್‌ಹಬ್ ಮೊದಲಾದ ಮೊಬೈಲ್‌ ಸೇವೆ ಪೂರೈಕೆದಾರರ ಮೂಲಕ ಆರಂಭಿಸಿತು.

ಗೇಮ್ ಕ್ಷೇತ್ರ

ಸೋನಿ ಪಿಕ್ಚರ್ಸ್ ಟೆಲಿವಿಷನ್ ಇಂಟರ್‌ನ್ಯಾಷನಲ್ ಅದರ ವೆಬ್‌ಸೈಟ್‌ಗಳಿಗೆ ಗೇಮ್ ಕ್ಷೇತ್ರವನ್ನು ಒದಗಿಸಲು 2009ರ ಜನವರಿ 7ರಂದು ನಿರ್ಮಾಪಕ ಅರ್ಕೇಡಿಯಮ್‌ ಒಂದಿಗೆ ಒಪ್ಪಂದವೊಂದಕ್ಕೆ ಸಹಿಹಾಕಿತು. ಅನಿಮ್ಯಾಕ್ಸ್‌ಅನ್ನೂ ಒಳಗೊಂಡಂತೆ ನಲವತ್ತಕ್ಕಿಂತಲೂ ಹೆಚ್ಚು ಗೇಮ್‌ಗಳು ಪರವಾನಗಿ ಪಡೆದವು.

ಕಾರ್ಯಕ್ರಮಗಳು

ಅನಿಮ್ಯಾಕ್ಸ್‌ನ ಕಾರ್ಯಕ್ರಮಗಳು ಅನಿಮೆಗೆ ಮಾತ್ರ ಮೀಸಲಾಗಿವೆ. ಇದು ಪ್ರಪಂಚದಲ್ಲೇ ಅತಿದೊಡ್ಡ 24-ಗಂಟೆಗಳ ಅನಿಮೆ-ಏಕೈಕ ಜಾಲವೆಂಬ ಹೆಸರು ಪಡೆದಿದೆ. ಜಪಾನಿನಲ್ಲಿ ಜಾಲದ ಮೂಲ ಹೊಂದಿದ್ದು ಅನಿಮ್ಯಾಕ್ಸ್‌ ಅನೇಕ ಅನಿಮೆಗಳನ್ನು ಮೊದಲು ಪ್ರಸಾರ ಮಾಡಿದೆ, ಅವುಗಳೆಂದರೆ Ghost in the Shell: Stand Alone Complex ಮತ್ತು ಅದರ ಉತ್ತರಭಾಗಗಳಾದ Ghost in the Shell: Stand Alone Complex 2nd Gig , Hungry Heart: Wild Striker , ಐಶಿಟೆರುಜ್ ಬೇಬಿ , ವ್ಯಾಂಗನ್ ಮಿಡ್‌ನೈಟ್ ಹಾಗೂ ಇತ್ತೀಚೆಗೆ ಮ್ಯಾಡ್‌ಹೌಸ್ ಸ್ಟುಡಿಯೋಸ್‌ ನಿರ್ಮಾಣದ ಮಾರ್ವೆಲ್‌ನ ಐರನ್ ಮ್ಯಾನ್‌ ನ ಮುಂಬರುವ 2010ರ ಅನಿಮೆ ಹೊಂದಾಣಿಕೆ. ಇದಕ್ಕೆ ಹೆಚ್ಚುವರಿಯಾಗಿ, ಅದರ ಇಂಗ್ಲಿಷ್ ಭಾಷಾ ಜಾಲ ಅನಿಮ್ಯಾಕ್ಸ್‌ ಏಷ್ಯಾ ಮೊದಲ ಅನಿಮೆ ಸಹಪ್ರಸಾರವನ್ನು ಮಾಡಿತು. ಟಿಯರ್ಸ್ ಟು ಟಿಯಾರ ದ ಸಹಪ್ರಸಾರವನ್ನು ಜಪಾನಿ-ಭಾಷೆಯ ಮೊದಲ ಪ್ರದರ್ಶನದ ಅವಧಿಯಲ್ಲಿ ಹಾಗೂ ಫುಲ್‌ಮೆಟಲ್ ಅಲ್ಕೆಮಿಸ್ಟ್:ಬ್ರದರ್‌ಹುಡ್ ಸರಣಿಗಳನ್ನು ಜಪಾನಿ-ಭಾಷೆಯ ಮೊದಲ ಪ್ರದರ್ಶನದ ವಾರದಲ್ಲಿ ಮಾಡಿತು. ಇದನ್ನು 62 ರಾಷ್ಟ್ರಗಳು ಮತ್ತು 17 ಭಾಷೆಗಳಲ್ಲಿ ಸುಮಾರು 89 ದಶಲಕ್ಷ ಮಂದಿ ವೀಕ್ಷಿಸುತ್ತಾರೆ. ಇದು ಜಪಾನಿನಲ್ಲಿ, ಹೆಚ್ಚಾಗಿ ಪ್ರಥಮ ಪ್ರದರ್ಶನ, ಮತ್ತು ಪ್ರಪಂಚದಾದ್ಯಂತವಿರುವ ಅದರ ಜಾಲಗಳಲ್ಲಿ ಪ್ರಸಾರಮಾಡುವ ಇತರ ಸರಣಿಗಳೆಂದರೆ - ಬ್ಲಡ್+ , ಟ್ರಿನಿಟಿ ಬ್ಲಡ್ , ಕೌಬಾಯ್ ಬೆಬಾಪ್ , ಕೋಡ್ ಗೀಸ್: ಲಿಲೌಚ್ ಆಫ್ ದಿ ರೆಬೆಲಿಯನ್ , ಸಂಪೂರ್ಣ ಮೊಬೈಲ್‌ ಸ್ಯೂಟ್ ಗುಂಡಮ್ ಸರಣಿ, ಹನಿ ಆಂಡ್ ಕ್ಲೊವರ್ , ಇನುಯಾಶ , ಫುಲ್‌ಮೆಟಲ್ ಅಲ್ಕೆಮಿಸ್ಟ್ , ಯುರೇಕ 7 , ಉರುಸೈ ಯತ್ಸುರ , ರನ್ಮ 1/2 , ರುರೌನಿ ಕೆನ್ಸಿನ್ , ಡ್ರ್ಯಾಗನ್ ಬಾಲ್ ಸರಣಿ, ಕಾರ್ಡ್‌ಚ್ಯಾಪ್ಟರ್ ಸಕುರ , ತ್ಸುಬಾಸ ಕ್ರೋನಿಕಲ್ , ಚೋಬಿಟ್ಸ್ , ವಿಜನ್ ಆಫ್ ಎಸ್ಕಫ್ಲೌನೆ , ಡೆತ್ ನೋಟ್ , ನಿಯಾನ್ ಜೆನೆಸಿಸ್ ಇವಾಂಗೆಲಿಯನ್ , ಔರನ್ ಹೈ ಸ್ಕೂಲ್ ಹೋಸ್ಟ್ ಕ್ಲಬ್ , ವೋಲ್ಫ್ಸ್ ರೈನ್ , ಫ್ಯೂಚರ್ ಬಾಯ್ ಕೊನಾನ್, ಹೈಕರ-ಸ್ಯಾನ್ ಗ ಟೂರು , ಎಮ್ಮ - ಎ ವಿಕ್ಟೋರಿಯನ್ ರೊಮ್ಯಾನ್ಸ್ , ಡಾರ್ಕರ್ ದ್ಯಾನ್ ಬ್ಲ್ಯಾಕ್ , ವ್ಯಾಂಗನ್ ಮಿಡ್‌ನೈಟ್ ಮತ್ತು ಕ್ಯೊ ಕಾರ ಮವೋಹ್ ಹಾಗೂ ಇನ್ನೂ ಹಲವಾರು OVA ಸರಣಿಗಳು ಮತ್ತು ಅನಿಮೆ ಚಲನಚಿತ್ರಗಳೆಂದರೆ ಸ್ಟೀಮ್‌ಬಾಯ್ , ಮೆಟ್ರೊಪೊಲಿಸ್ , ಮೆಮರೀಸ್ , ಟೋಕಿಯೊ ಗಾಡ್‌ಫಾದರ್ಸ್ , ಘೋಸ್ಟ್ ಇನ್ ದಿ ಶೆಲ್ , Ghost in the Shell 2: Innocence , Nasu: Summer in Andalusia , Blood: The Last Vampire , ಅಪ್ಲೆಸೀಡ್ , ಎಸ್ಕಫ್ಲೌನೆ , ಸ್ಕೂಪಿ ಕಿಟಾರೊ, ಪಂಪ್ಕಿನ್ ಸಿಜರ್ಸ್, ಫೇಟ್/ಸ್ಟೇ ನೈಟ್ ಮತ್ತು ಅನೇಕ ಇತರೆ.

ಅನುವಾದ ಮತ್ತು (ನಕಲು)ಡಬ್ ಮಾಡುವ ತಂಡಗಳು

ಅನಿಮ್ಯಾಕ್ಸ್‌ ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದಲ್ಲಿನ ಅದರ ಇಂಗ್ಲಿಷ್-ಭಾಷಾ ಜಾಲಗಳಾದ್ಯಂತ ಅದರ ಅಸಂಖ್ಯಾತ ಅನಿಮೆ ಸರಣಿಗಳನ್ನು ಪ್ರಸಾರ ಮಾಡಲು ಹಲವಾರು ಅನುವಾದ ಮತ್ತು ಡಬ್ ಮಾಡುವ ಸ್ಟುಡಿಯೊಗಳನ್ನು ಬಳಸಿಕೊಂಡಿದೆ. ಅವುಗಳಲ್ಲಿ ಕೆಲವು ಉತ್ತರ ಅಮೆರಿಕ ಹಂಚಿಕೆದಾರರಿಂದ ಪರವಾನಗಿ ಪಡೆದಿರಲಿಲ್ಲ. ಹೀಗಾಗಿ ಇವು ಯಾವುದೇ ಇಂಗ್ಲಿಷ್-ಅಳವಡಿಕೆಗಳನ್ನು ಹೊಂದಿರಲಿಲ್ಲ, ಉದಾ. ಡಿಟೆಕ್ಟಿವ್ ಸ್ಕೂಲ್ Q , ಡೊಕ್ಕರಿ ಡಾಕ್ಟರ್ , ಟ್ವಿನ್ ಸ್ಪಿಕಾ , ಜೆಟೈ ಸ್ಫೋನೆನ್ , ಕ್ಲ್ಯಾಂಪ್ ಸ್ಕೂಲ್ , ಎಮ್ಮಾ: ಎ ವಿಕ್ಟೋರಿಯನ್ ರೊಮ್ಯಾನ್ಸ್ , ಫ್ಯೂಚರ್ ಬಾಯ್ ಕೊನಾನ್ , ವರ್ಲ್ಡ್ ಮಾಸ್ಟರ್‌ಪೀಸ್ ಥಿಯೇಟರ್ ಸರಣಿಗಳ ಅಸಂಖ್ಯಾತ ಕಂತುಗಳು ಮತ್ತು ಅನೇಕ ಇತರೆ. ಅನಿಮ್ಯಾಕ್ಸ್‌ ಅನಿಮೆ ಸರಣಿಗಳ ಸೆನ್ಸರ್ ಮಾಡದ ಇಂಗ್ಲಿಷ್ ಆವೃತ್ತಿಗಳನ್ನು ಮತ್ತು ಡಬ್‌ಗಳನ್ನೂ ಸಹ ತಯಾರಿಸಿ, ಪ್ರಸಾರ ಮಾಡಿದೆ, ಅವುಗಳಲ್ಲಿ ಹೆಚ್ಚು ಪ್ರಮುಖವಾದುದು ಕಾರ್ಡ್‌ಕ್ಯಾಪ್ಟರ್ ಸಕುರ ದ ಡಬ್. ಇದನ್ನು ಸೆನ್ಸರ್ ಮಾಡದೆ ತೋರಿಸಲಾಯಿತು ಹಾಗೂ ಅದು ಅದರ ಮೂಲ ಹೆಸರುಗಳು, ಕಥಾ ವಿವರಗಳು ಮತ್ತು ಸಂಭಾಷಣೆಗಳನ್ನು ಉಳಿಸಿಕೊಂಡಿತ್ತು. ಅನಿಮ್ಯಾಕ್ಸ್‌ ಅದರ ಇಂಗ್ಲಿಷ್-ಭಾಷಾ ಜಾಲಗಳಾದ್ಯಂತ ಇತರ ಉದ್ಯಮಗಳು ತಯಾರಿಸಿದ ಇಂಗ್ಲಿಷ್ ಡಬ್‌ಗಳನ್ನೂ ಸಹ ಪ್ರಸಾರ ಮಾಡುತ್ತದೆ, ಉದಾ. ಬಂದೈ ಎಂಟರ್ಟೈನ್ಮೆಂಟ್‌, ದಿ ಓಶನ್ ಗ್ರೂಪ್, ಅನಿಮೇಜ್ ಇಂಕ್., ಫನಿಮೇಶನ್, ಬ್ಯಾಂಗ್ ಜೂಮ್! ಎಂಟರ್ಟೈನ್ಮೆಂಟ್‌, ಗೆನಿಯಾನ್ ಎಂಟರ್ಟೈನ್ಮೆಂಟ್‌, ಇಂಡಸ್ಟ್ರಿಯಲ್ ಸ್ಮೋಕ್ ಆಂಡಿ ಮಿರರ್ಸ್, VIZ ಮೀಡಿಯಾ, ಸೆಂಟ್ರಲ್ ಪಾರ್ಕ್ ಮೀಡಿಯಾ, ಓಮ್ನಿ ಪ್ರೊಡಕ್ಷನ್ಸ್ ಹಾಗೂ ಇನ್ನೂ ಅನೇಕ. ಕೌಬಾಯ್ ಬೆಬಾಪ್ , ವಿಚ್ ಹಂಟರ್ ರಾಬಿನ್ , ಮೊಬೈಲ್‌ ಸ್ಯೂಟ್ ಗುಂಡಮ್ , ಬ್ರೈನ್ ಪವರ್ಡ್ , ಪ್ಲೀಸ್ ಟೀಚರ್! , ಗ್ಯಾಲಕ್ಸಿ ಏಂಜೆಲ್ , ಅರ್ಜುನ , ಜುಬೈ-ಚಾನ್ , ತ್ಸುಕಿಕಗೆ ರಾನ್ , ಏಂಜಲ್ ಟೇಲ್ಸ್ , ಸೇಬರ್ ಮ್ಯಾರಿಯೊನೆಟ್ , ಅಪ್ಲೆಸೀಡ್ , ಅಲೈನ್ 9 , ಇನುಯಾಶ ಚಲನಚಿತ್ರಗಳು, ಫುಲ್‌ಮೆಟಲ್ ಅಲ್ಕೆಮಿಸ್ಟ್ , ಯುಕಿಕಾಜೆ ಹಾಗೂ ಇನ್ನೂ ಅನೇಕದರ ಅದರ ಡಬ್‌ಗಳನ್ನೂ ಪ್ರಸಾರ ಮಾಡುತ್ತದೆ.

ಇವನ್ನೂ ಗಮನಿಸಿ

ಟೆಂಪ್ಲೇಟು:Portal box

  • ಅನಿಮ್ಯಾಕ್ಸ್‌ ಟೈಶೊ
  • ಅನಿಮ್ಯಾಕ್ಸ್‌ನಿಂದ ಪ್ರಸಾರವಾಗುವ ಕಾರ್ಯಕ್ರಮಗಳ ಪಟ್ಟಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

    ಅಧಿಕೃತ ಸೈಟ್‌ಗಳು


ಏಷ್ಯಾ

ಯುರೋಪ್‌

ಲ್ಯಾಟಿನ್ ಅಮೆರಿಕ

ಆಫ್ರಿಕಾ

ಆಸ್ಟ್ರೇಲಿಯಾ

Tags:

ಅನಿಮ್ಯಾಕ್ಸ್‌ ಇತಿಹಾಸಅನಿಮ್ಯಾಕ್ಸ್‌ ಇತರ ಸಾಹಸೋದ್ಯಮಗಳುಅನಿಮ್ಯಾಕ್ಸ್‌ ಕಾರ್ಯಕ್ರಮಗಳುಅನಿಮ್ಯಾಕ್ಸ್‌ ಇವನ್ನೂ ಗಮನಿಸಿಅನಿಮ್ಯಾಕ್ಸ್‌ ಉಲ್ಲೇಖಗಳುಅನಿಮ್ಯಾಕ್ಸ್‌ ಬಾಹ್ಯ ಕೊಂಡಿಗಳುಅನಿಮ್ಯಾಕ್ಸ್‌ಆಂಗ್ಲಆಗ್ನೇಯ ಏಷ್ಯಾಆಫ್ರಿಕಾಆಸ್ಟ್ರೇಲಿಯಇಟಲಿಉತ್ತರ ಅಮೇರಿಕಜಪಾನ್ಜರ್ಮನಿಜೆಕ್ ಗಣರಾಜ್ಯದಕ್ಷಿಣ ಆಫ್ರಿಕಾದಕ್ಷಿಣ ಕೊರಿಯಾಪೋರ್ಚುಗಲ್ಪೋಲೆಂಡ್ಫ್ರಾನ್ಸ್ಯುನೈಟೆಡ್ ಕಿಂಗ್‍ಡಮ್ಯುರೋಪ್ರೊಮಾನಿಯಲ್ಯಾಟಿನ್ ಅಮೇರಿಕಸ್ಪೇನ್ಹಾಂಗ್ ಕಾಂಗ್

🔥 Trending searches on Wiki ಕನ್ನಡ:

ಕನ್ನಡ ಛಂದಸ್ಸುಶಿವನ ಸಮುದ್ರ ಜಲಪಾತವಾಲಿಬಾಲ್ಮರುಭೂಮಿಭಾರತೀಯ ಜನತಾ ಪಕ್ಷಕಮಲಕರ್ನಾಟಕ ಪೊಲೀಸ್ಕನ್ನಡ ಸಾಹಿತ್ಯಆರ್ಯ ಸಮಾಜಸೇತುವೆದಾಸವಾಳಮೂಲಧಾತುಗಳ ಪಟ್ಟಿಭಾರತದ ತ್ರಿವರ್ಣ ಧ್ವಜಭಾರತದ ಸರ್ವೋಚ್ಛ ನ್ಯಾಯಾಲಯಸ್ವರವಿಕ್ರಮಾದಿತ್ಯಮಣ್ಣುಹೆಚ್.ಡಿ.ದೇವೇಗೌಡರಾಷ್ಟ್ರಕವಿಬೀಚಿಮುಟ್ಟುಪಂಪ ಪ್ರಶಸ್ತಿಮೈಸೂರುನಾಟಕಮಲೈ ಮಹದೇಶ್ವರ ಬೆಟ್ಟಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಸಂವಿಧಾನರತ್ನಾಕರ ವರ್ಣಿರೋಮನ್ ಸಾಮ್ರಾಜ್ಯಅಸ್ಪೃಶ್ಯತೆಕರಪತ್ರಎಂ. ಎಂ. ಕಲಬುರ್ಗಿನಾಗವರ್ಮ-೧ಮನೋಜ್ ನೈಟ್ ಶ್ಯಾಮಲನ್ಗಿಳಿಕೆ. ಎಸ್. ನರಸಿಂಹಸ್ವಾಮಿನಾಗಲಿಂಗ ಪುಷ್ಪ ಮರಭಾಷಾ ವಿಜ್ಞಾನಬಿ. ಆರ್. ಅಂಬೇಡ್ಕರ್ಹಳೆಗನ್ನಡಶಿವಗೋವಕೆ ವಿ ನಾರಾಯಣಚಂದ್ರಶೇಖರ ಕಂಬಾರಅಕ್ಷಾಂಶ ಮತ್ತು ರೇಖಾಂಶಮೈಸೂರು ಚಿತ್ರಕಲೆಕೊರೋನಾವೈರಸ್ ಕಾಯಿಲೆ ೨೦೧೯ಭಾರತದ ಸ್ವಾತಂತ್ರ್ಯ ದಿನಾಚರಣೆಭಾರತದಲ್ಲಿನ ಚುನಾವಣೆಗಳುಬ್ಯಾಸ್ಕೆಟ್‌ಬಾಲ್‌ದ್ವಂದ್ವ ಸಮಾಸಅಲಾವುದ್ದೀನ್ ಖಿಲ್ಜಿಭ್ರಷ್ಟಾಚಾರಎಸ್.ಎಲ್. ಭೈರಪ್ಪಸೂರ್ಯಸೇಬುಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಸರಸ್ವತಿಸಂವತ್ಸರಗಳುಮಳೆಗಾಲಬ್ಯಾಬಿಲೋನ್ಜಾಹೀರಾತುನೀರಿನ ಸಂರಕ್ಷಣೆಸಾಲುಮರದ ತಿಮ್ಮಕ್ಕಕಾರ್ಖಾನೆ ವ್ಯವಸ್ಥೆಭಾರತದಲ್ಲಿ ಮೀಸಲಾತಿಚನ್ನಬಸವೇಶ್ವರಅಂಬರೀಶ್ರಗಳೆಶಿವಕೋಟ್ಯಾಚಾರ್ಯಶ್ರೀಕೃಷ್ಣದೇವರಾಯನಾಗರಹಾವು (ಚಲನಚಿತ್ರ ೧೯೭೨)ಸಂಸ್ಕಾರಆಂಗ್‌ಕರ್ ವಾಟ್ತಿಪಟೂರುಕಾವ್ಯಮೀಮಾಂಸೆ🡆 More