ಯಾವುದೇ ಒಂದು ದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಪ್ರಧಾನಪಾತ್ರವನ್ನು ವಹಿಸುತ್ತವೆ. ಹಲವಾರು ಕೈಗಾರಿಕೆಗಳು ಕೃಷಿಯನ್ನಾಧರಿಸಿವೆ. ಉದಾ.ಹತ್ತಿಬಟ್ಟೆ , ಕಾಗದ, ಸಕ್ಕರೆ, ಸಣಬು, ತಂಬಾಕು ಮುಂತಾದವು. ಈ ಕೈಗಾರಿಕೆಗಳಿಗೆ ಅಗತ್ಯವಾದಂತಹ ಕಚ್ಚಾ ಪದಾರ್ಥಗಳು ಕೃಷಿಯಿಂದ ಪೂರೈಕೆಯಾಗುತ್ತವೆ. ದೊಡ್ಡ ಪ್ರಮಾಣದ ಕೈಗಾರಿಕೆಗಳಿಂದ ಗ್ರಾಮೀಣ ಜನರಿಗೆ ಉದ್ಯೋಗ ಸಿಗಲಾರದು. ಗ್ರಾಮಾಂತರ ಪ್ರದೇಶಗಳಲ್ಲಿ ಗೃಹ ಮತ್ತು ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಆದ್ಯತೆ ಕೊಡಬೇಕಾಗುತ್ತದೆ, ಇಂತಹ ಕೈಗಾರಿಕೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಮೊದಲಿನಿಂದಲೂ ಕಂಡುಬರುತ್ತಿದ್ದವು, ಇವುಗಳ ಅಭಿವೃದ್ದಿಗೆ ಭಾರತವು ಸ್ವತಂತ್ರವಾದ ಮೇಲೆ ಹೆಚ್ಚು ಪ್ರೋತ್ಸಹಾ ಕೊಡಲಾಗುತ್ತಿದೆ, ರೈತರಿಗೆ ವರ್ಷದ ಎಲ್ಲ ತಿಂಗಳಲ್ಲಿ ಕೆಲಸವಿಲ್ಲದ್ದರಿಂದ ಅವರ ಸಂಪಾದನೆಗೆ ಪೂರಕಮಾಗಿ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಮಹಾತ್ಮಾ ಗಾಂಧಿಯವರು ಒತ್ತಿ ಹೇಳಿದ್ದರು ಗೃಹ ಕೈಗಾರಿಗಳನ್ನು ಗುಡಿ ಕೈಗಾರಿಕೆಗಳಂತಲೂ ಕರೆಯುತ್ತಾರೆ. ಇವುಗಳನ್ನು ಕುಶಲ ಕರ್ಮಿಗಳು ಅವರ ಮನೆಗಳಲ್ಲಿ ನಡೆಸುತ್ತಾರೆ ಇವರಿಗೆ ಅವರ ಕುಟುಂಬದ ಸದಸ್ಯರ ಮತ್ತು ಕಲಿಯುವವರು ಸಹಾಯ ಮಾಡುತ್ತಾರೆ ಇವು ಪ್ರಧಾನವಾಗಿ ಹಳ್ಳಿಗಳಲ್ಲಿ ಕೇಂದ್ರೀಕೃತವಾಗಿರುತ್ತವೆ, ಕೇತ್ತನೆ ಕೆಲಸ, ಬುಟ್ಟಿ ಹೆಣೆಯುವುದು, ಬೊಂಬೆ ತಯಾರು ಮಾಡುವುದು ಕೈ ಮಗ್ಗದಲ್ಲಿ ಬಟ್ಟೆ ಹಾಗೂ ಕಂಬಳಿ ನೇಯುವುದು, ಚಾಪೆ ತಯಾರಿಕೆ ಹಗ್ಗ ತಯಾರಿಸುವುದು, ಬಡಗಿತನ, ಕಮ್ಮಾರಿಕೆ, ಕುಂಚರಿಕೆ ಮುಂತಾದವು ಉದಾಹರಣೆಗಳಾಗಿದ್ದು ಇವುಗಳಲ್ಲಿ ಕೆಲವು ವಂಶಪಾರಂಪರ್ಯದಿಂದ ಬಂದುಗಳಾಗಿವೆ. ಈ ಕೈಗಾರಿಕೆಗಳು ಹೆಚ್ಚಾಗಿ ಸ್ಥಳೀಯ ಮಾರುಕಟ್ಟೆಗಾಗಿ ವಸ್ತುಗಳನ್ನು ಉತ್ಪಾದಿಸುತ್ತವೆ. ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ವಿದ್ಯುಚ್ಚಕ್ತಿಯನ್ನು ಬಳಸುತ್ತಾರೆ, ಉದಾಹರಣೆಗೆ, ಎತ್ತಿನಗಾಣದ ಬದಲು ವಿದ್ಯುತ್ ಗಾಣಗಳು ಬಂದಿವೆ ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಾರೆ ಒಂದು ನಿರ್ದಿಷ್ಟ ಕಟ್ಟಡದಲ್ಲಿ ಈ ಕೈಗಾರಿಕೆಗಳು ಸ್ಥಾಪಿಸಲ್ಪಟ್ಟಿರುತ್ತವೆ ಸರಕುಗಳ ಉತ್ಪಾದನೆಗೆ ಆಧುನಿಕ ಕೌಶಲ್ಯಗಳನ್ನು ಬಳಸಿಕೊಳ್ಳತ್ತಾರೆ. ರಾಸಾಯನಿಕ ವಸ್ತುಗಳು ಇಂಜಿನೀಯರಿಂಗ್ ವಸ್ತುಗಳು ಪಾದರಕ್ಷೆಗಳು ಸೈಕಲ್ಲುಗಳು ರೇಡಿಯೋ. ವಿದ್ಯುತ್ ಪಂಕಗಳು ಹೊಲಿಗೆ ಯಂತ್ರಗಳು, ಸಿದ್ದಪಡಿಸಿದ ಉಡುಪುಗಳು ಸಾಬೂನು ಮುಂತಾದವು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಉದಾಹರಣೆಗಳಾಗಿವೆ. ಈ ಕೈಗಾರಿಕೆಗಳ ಅನೇಕ ಉತ್ಪಾನ್ನಗಳು ರಫ್ತಾಗುತ್ತವೆ. ಭಾರತದ ಆರ್ಥಿಕ ಅಭಿವೃದ್ದಿಯಲ್ಲಿ ಗೃಹ ಮತ್ತು ಸಣ್ಣ ಕೈಗಾರಿಕೆಗಳ ಪಾತ್ರ ಹೀಗಿದೆ ,
ಗುಡಿ ಕೈಗಾರಿಕೆಗಳನ್ನು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಅಭಿವೃದ್ದಿಪಡಿಸುವುದು ನಮ್ಮ ರಾಷ್ಟ್ರೀಯ ಸರ್ಕಾರದ ನೀತಿಗಳಲ್ಲೊಂದಗಿದೆ ಅನೇಕ ಕೈಗಾರಿಕೆಗಳ ಅಭಿವೃದ್ದಿಗೆ ಮಹತ್ವದ ಸ್ಥಾನ ನೀಡಿದೆ ಸರ್ಕಾರವು ಕೈಗೊಂಡ ಕೆಲವು ಕಾರ್ಯಗಳಲ್ಲಿ ಮುಖ್ಯವಾದವು ಈ ರೀತಿ ಇವೆ , ಪ್ರಥಮ ಪಂಚಾವಾರ್ಷಿಕ ಯೋಜನೆಯಿಂದ ಆರನೆಯ ಪಂಚವಾರ್ಷಿಕ ಯೋಜನೆಯೊಳಗೆ ಸುಮಾರು ೩,೦೦೦ ಕೋಟಿ ರೂಪಾಯಿಗಳನ್ನು ಈ ಕೈಗಾರಿಕೆಗಳ ಏಳಿಗೆಗಾಗಿ ಖರ್ಚು ಮಾಡಲಾಯಿತು. ಈ ಕೈಗಾರಿಕೆಗಳ ಅಭಿವೃದ್ದಿಗೆ ಮುಖ್ಯವಾಗಿ ಅ) ಸಾಂಸ್ಥಿಕ ಸಹಾಯ ಆ) ಧನ ಸಹಾಯ ಇ) ತಾಂತ್ರಿಕ ನೇರವು ಈ) ಕಾರ್ಮಿಕರಿಗೆ ತರಬೇತಿ ಉ) ಕಚ್ಚಾವಸ್ತುಗಳ ಮತ್ತು ಶಕ್ತಿಯ ಪೂರೈಕೆ ಹಾಗೂ ಊ) ಮಾರುಕಟ್ಟೆ ಸೌಲಭ್ಯ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ
This article uses material from the Wikipedia ಕನ್ನಡ article ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.