ಲೆಸೊಥೊ

ಲೆಸೊಥೊ ಆಫ್ರಿಕಾದ ದಕ್ಷಿಣಭಾಗದಲ್ಲಿರುವ ಒಂದು ದೇಶ.

ಇದು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾ ರಾಷ್ಟ್ರದಿಂದ ಆವೃತವಾಗಿದೆ. ಲೆಸೊಥೊದ ವಿಸ್ತೀರ್ಣ ೩೦,೩೫೫ ಚ.ಕಿ.ಮೀ. ಮತ್ತು ಜನಸಂಖ್ಯೆ ಸುಮಾರು ೨೨ ಲಕ್ಷ. ರಾಷ್ಟ್ರದ ರಾಜಧಾನಿ ಮಸೇರು. ಹಲವು ಬುಡಕಟ್ಟುಗಳ ಪಾಳೆಯಗಾರರಿಂದ ಆಳಲ್ಪಡುತ್ತಿದ್ದ ಈ ಪ್ರದೇಶವು ೧೮೬೮ರಲ್ಲಿ ಬ್ರಿಟನ್ನಿನ ವಸಾಹತಾಯಿತು. ೧೯೬೫ರಲ್ಲಿ ಸ್ವಾಯತ್ತತೆಯನ್ನು ಪಡೆದ ಲೆಸೊಥೊ ೧೯೬೬ರಲ್ಲಿ ಸಂಪೂರ್ಣ ಸ್ವಾತಂತ್ರ್ಯ ಗಳಿಸಿತು. ಲೆಸೊಥೊ ಒಂದು ಸಾಂವಿಧಾನಿಕ ಅರಸೊತ್ತಿಗೆ. ಆದರೆ ಅರಸನ ಪದವಿ ಕೇವಲ ಅಲಂಕಾರಿಕ. ಬಹುಪಕ್ಷೀಯ ಸಂಸತ್ತನ್ನು ಹೊಂದಿರುವ ಲೆಸೊಥೊ ನಲ್ಲಿ ಬುಡಕಟ್ಟುಗಳ ನಾಯಕರಿಗೆ ವಿಶೇಷ ಸ್ಥಾನವಿದೆ. ಲೆಸೊಥೊದ ಎಲ್ಲಾ ಭೂಪ್ರದೇಶಗಳೂ ಸಮುದ್ರಮಟ್ಟದಿಂದ ೧೦೦೦ಮೀ. ಗೂ ಹೆಚ್ಚಿನ ಎತ್ತರದಲ್ಲಿವೆ. ವಿಶ್ವದಲ್ಲಿಯೇ ಇಂತಹ ಏಕೈಕ ಸ್ವತಂತ್ರ ರಾಷ್ಟ್ರ ಲೆಸೊಥೊ. ರಾಷ್ಟ್ರದ ಅರ್ಥ ವ್ಯವಸ್ಥೆಯು ಕೃಷಿ , ಉದ್ದಿಮೆಗಳು ಮತ್ತು ರಫ್ತು ವಹಿವಾಟನ್ನು ಅವಲಂಬಿಸಿದೆ. ನೆರೆಯ ದಕ್ಷಿಣ ಆಫ್ರಿಕಾ ದೇಶಕ್ಕೆ ಲೆಸೊಥೊ ನೀರು ಮತ್ತು ವಿದ್ಯುತ್ತನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುತ್ತಿದೆ. ರಫ್ತಾಗುವ ಸರಕುಗಳಲ್ಲಿ ಮುಖ್ಯವಾದುವು ವಜ್ರ, ತುಪ್ಪಳ ಮತ್ತು ಚರ್ಮೋತ್ಪನ್ನಗಳು. ನಾಡಿನ ಪ್ರಮುಖ ಭಾಷೆ ಬಂಟು. ರೋಮನ್ ಕ್ಯಾಥೊಲಿಕ್ ಧರ್ಮೀಯರು ಬಹುಸಂಖ್ಯಾತರು. ದೇಶದ ೮೫% ಜನತೆ ಓದುಬರಹ ಬಲ್ಲರು. ಆರೋಗ್ಯ ಮತ್ತು ಸ್ವಾಸ್ಥ್ಯದ ವಿಚಾರದಲ್ಲಿ ಲೆಸೊಥೊ ಬಹಳ ಹಿಂದಿದೆ. ನಾಡಿನ ೨೯% ಜನತೆ ಏಡ್ಸ್ ರೋಗದಿಂದ ಪೀಡಿತರು. ಈ ಆತಂಕಕಾರಿ ಬೆಳವಣಿಗೆ ದೇಶದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಲೆಸೊಥೊ ರಾಜ್ಯ
Muso oa Lesotho
ಮುಸೊ ಒಅ ಲೆಸೊಥೊ
Flag of ಲೆಸೊಥೊ
Flag
Coat of arms of ಲೆಸೊಥೊ
Coat of arms
Motto: "Khotso, Pula, Nala"
(ಸೆಸೊಥೊ ಭಾಷೆಯಲ್ಲಿ: "ಶಾಂತಿ, ಮಳೆ, ಸಮೃದ್ಧಿ")
Anthem: Lesotho Fatse La Bontata Rona
Location of ಲೆಸೊಥೊ
Capital
and largest city
Maseru
Official languagesಸೆಸೊಥೊ ಭಾಷೆ, ಆಂಗ್ಲ
Demonym(s)Mosotho (singular), Basotho (plural)
Governmentಸಾಂವಿಧಾನಿಕ ಅರಸೊತ್ತಿಗೆ
• ರಾಜ
ಮುಮ್ಮಡಿ ಲೆತ್ಸಿ
• ಪ್ರಧಾನ ಮಂತ್ರಿ
ಪಾಲಲಿಥ ಮೊಸಿಸಿಲಿ
ಸ್ವಾತಂತ್ರ್ಯ
ಅಕ್ಟೊಬರ್ ೪, ೧೯೬೬
• Water (%)
negligible
Population
• ಜುಲೈ ೨೦೦೫ estimate
1,795,0001 (146th)
• ೨೦೦೪ census
2,031,348
GDP (PPP)೨೦೦೫ estimate
• Total
$4.996 billion (150th)
• Per capita
$2,113 (139th)
HDI (೨೦೦೩)0.494
low · 149th
Currencyಲೊಟಿ (LSL)
Time zoneUTC+2
Calling code೨೬೬
Internet TLD.ls
1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected.

Tags:

ಅರಸಆಫ್ರಿಕಾಏಡ್ಸ್ ರೋಗಕೃಷಿದಕ್ಷಿಣ ಆಫ್ರಿಕಾನೀರುಬುಡಕಟ್ಟುಬ್ರಿಟಿಷ್ ಸಾಮ್ರಾಜ್ಯರಫ್ತುರಾಷ್ಟ್ರವಜ್ರವಿದ್ಯುತ್ಸಂವಿಧಾನಸಂಸತ್ತುಸ್ವಾತಂತ್ರ್ಯ೧೮೬೮೧೯೬೫೧೯೬೬

🔥 Trending searches on Wiki ಕನ್ನಡ:

ಹನುಮಂತಹಸ್ತ ಮೈಥುನಕನ್ನಡದಲ್ಲಿ ಮಹಿಳಾ ಸಾಹಿತ್ಯಇತಿಹಾಸರಾಶಿಸಂಸ್ಕಾರವಲ್ಲಭ್‌ಭಾಯಿ ಪಟೇಲ್ರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಪ್ರಬಂಧಹೊಸ ಆರ್ಥಿಕ ನೀತಿ ೧೯೯೧ಮನಮೋಹನ್ ಸಿಂಗ್ಬಿಜು ಜನತಾ ದಳಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತೀಯ ಸಮರ ಕಲೆಗಳುಮರಕದಂಬ ರಾಜವಂಶಕಿತ್ತೂರು ಚೆನ್ನಮ್ಮಕರ್ನಾಟಕ ಸಂಗೀತಓಂ (ಚಲನಚಿತ್ರ)ಮುಟ್ಟು ನಿಲ್ಲುವಿಕೆಕಬಡ್ಡಿದ್ವಿಗು ಸಮಾಸಸಮಾಜ ವಿಜ್ಞಾನಭಾರತದ ಸಂವಿಧಾನಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಮಗಧಮದ್ಯದ ಗೀಳುಸಾಹಿತ್ಯಶ್ಚುತ್ವ ಸಂಧಿಕರಗ (ಹಬ್ಬ)ಜೋಳಕಾದಂಬರಿಅಶ್ವತ್ಥಮರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಂಭೋಗಕರ್ನಾಟಕದ ಏಕೀಕರಣಶಾಲಿವಾಹನ ಶಕೆಭಾರತೀಯ ಸ್ಟೇಟ್ ಬ್ಯಾಂಕ್ದಯಾನಂದ ಸರಸ್ವತಿಹಲಸುಹಾವುವಾಣಿಜ್ಯ(ವ್ಯಾಪಾರ)ನಾಯಕ (ಜಾತಿ) ವಾಲ್ಮೀಕಿದ್ರಾವಿಡ ಭಾಷೆಗಳುಸಂಯುಕ್ತ ರಾಷ್ಟ್ರ ಸಂಸ್ಥೆಗಣರಾಜ್ಯಕಾಮಸೂತ್ರಕರ್ನಾಟಕದ ಅಣೆಕಟ್ಟುಗಳುಶಿಶುನಾಳ ಶರೀಫರುರಾಷ್ಟ್ರಕವಿಅನುಪಮಾ ನಿರಂಜನಭಾರತದ ಇತಿಹಾಸಅರಿಸ್ಟಾಟಲ್‌ಭಕ್ತಿ ಚಳುವಳಿಭಾರತದ ಸ್ವಾತಂತ್ರ್ಯ ಚಳುವಳಿಪಾಂಡವರುಯಜಮಾನ (ಚಲನಚಿತ್ರ)ಕರ್ನಾಟಕದ ಹಬ್ಬಗಳುದಾಳಿಂಬೆಮಾನವನ ವಿಕಾಸಭಜರಂಗಿ (ಚಲನಚಿತ್ರ)ಕಲಬುರಗಿತೆರಿಗೆಹೊಂಗೆ ಮರಕಲ್ಕಿನಾಗರೀಕತೆಕನ್ನಡ ಅಕ್ಷರಮಾಲೆಚಂದ್ರಸರ್ಪ ಸುತ್ತುಬಾಲಕೃಷ್ಣಕರ್ನಾಟಕದ ನದಿಗಳುಚಿಕ್ಕಬಳ್ಳಾಪುರಮತದಾನಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಬಿಳಿಗಿರಿರಂಗ🡆 More