ವಿಶಾಖಪಟ್ನಂ

ವಿಶಾಖಪಟ್ಟಣ ಆಂಧ್ರ ಪ್ರದೇಶ ರಾಜ್ಯದ ಒಂದು ಕರಾವಳಿ ನಗರ ಹಾಗೂ ರೇವು ಪಟ್ಟಣ.

ವಿಶಾಖಪಟ್ಟಣ ಜಿಲ್ಲಾಕೇಂದ್ರ. ಭಾರತದ ಪೂರ್ವ ಕರಾವಳಿಯಲ್ಲಿರುವ ಈ ನಗರದ ಪಶ್ಚಿಮಕ್ಕೆ ಪೂರ್ವ ಘಟ್ಟಗಳು ಹಾಗೂ ಪೂರ್ವಕ್ಕೆ ಬಂಗಾಳ ಕೊಲ್ಲಿಯಿದೆ. ವೈಜಾಗ್ ಎಂಬ ಹೆಸರಿನಿಂದನೂ ಕರೆಯಲ್ಪಡುವ ಇದು ಆಂಧ್ರಪ್ರದೇಶದ ದೊಡ್ಡ ನಗರಗಳಲ್ಲಿ ಒಂದಾಗಿದ್ದು ವಾಣಿಜ್ಯ ರಾಜಧಾನಿಯಾಗಿದೆ. ಇದು ಭಾರತೀಯ ಕೋಸ್ಟ್ ಗಾರ್ಡ್ ನ ರಾಜ್ಯ ಪ್ರಧಾನ ಕಾರ್ಯಸ್ಥಾನವಾಗಿದೆ. ೨೦೧೧ರ ಜನಗಣತಿ ಪ್ರಕಾರ ಇದು ೨,೦೩೫,೯೨೨ ಜನಸಂಖ್ಯೆ ಹೊಂದಿದ್ದು ದೇಶದಲ್ಲಿ ೧೪ನೇ ಸ್ಥಾನದಲ್ಲಿದೆ.

ವಿಶಾಖಪಟ್ಟಣಂ
ವಿಶಾಖಪಟ್ಟಣಂ ನಗರದ ಪಕ್ಷಿನೋಟ
ವಿಶಾಖಪಟ್ಟಣಂ ನಗರದ ಪಕ್ಷಿನೋಟ
ವಿಶಾಖಪಟ್ಟಣದ ಪಕ್ಷಿನೋಟ
ವಿಶಾಖಪಟ್ನಂ
ವಿಶಾಖಪಟ್ನಂ
ವಿಶಾಖಪಟ್ಟಣಂ
ರಾಜ್ಯ
 - ಜಿಲ್ಲೆ
ಆಂಧ್ರ ಪ್ರದೇಶ
 - ವಿಶಾಖಪಟ್ಟಣ
ನಿರ್ದೇಶಾಂಕಗಳು 17.42° N 83.15° E
ವಿಸ್ತಾರ 208.5 km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ

 - 6,884.2/sq mi/ಚದರ ಕಿ.ಮಿ.
ಮೇಯರ್

ಈ ಪಟ್ಟಣದ ಇತಿಹಾಸವು ಕ್ರಿಸ್ತಪೂರ್ವದ ವರೆಗೂ ಇದ್ದು ಕಳಿಂಗ ರಾಜ್ಯದ ಭಾಗವಾಗಿತ್ತು. ನಂತರ ವೆಂಗಿ, ಪಲ್ಲವ, ಪೂರ್ವ ಗಂಗ ಸಾಮ್ರಾಜ್ಯಗಳಿಗೆ ಸೇರಿತ್ತು. ವಾಸ್ತುದಾಖಲೆಗಳ ಪ್ರಕಾರ ಈಗಿನ ಪಟ್ಟಣವು ೧೧ ಮತ್ತು ೧೩ನೇ ಶತಮಾನದ ಕಾಲದಲ್ಲಿ ಚೋಳ ಹಾಗೂ ಗಜಪತಿ ಸಾಮ್ರಾಜ್ಯಗಳ ತಿಕ್ಕಾಟದ ಅವಧಿಯಲ್ಲಿ ಕಟ್ಟಲ್ಪಟ್ಟಿತು. ಅನಂತರ ೧೫ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವು ವಶಪಡಿಸಿಕೊಂಡಿತು. ೧೬ನೇ ಶತಮಾನದಲ್ಲು ಮೊಘಲ್ ಸಾಮ್ರಾಜ್ಯಕ್ಕೆ ಸೇರಿ ಅನಂತರ ಯುರೋಪಿಯನ್ ದೇಶಗಳು ವ್ಯಾಪಾರಾಸಕ್ತಿ ಚಟುವಟಿಕೆಗಳ ನೆಲೆಯಾಯಿತು. ೧೮ನೇ ಶತಮಾನದ ಕೊನೆಯ ವೇಳೆಗೆ ಇದು ಫ್ರೆಂಚರ ಆಳ್ವಿಕೆಗೆ ಒಳಪಟ್ಟಿತು. ೧೮೦೪ರಿಂದ ೧೯೪೭ರ ಭಾರತದ ಸ್ವಾತಂತ್ರ್ಯದವರೆಗೆ ಬ್ರಿಟಿಶರ ಆಳ್ವಿಕೆಗೆ ಒಳಪಟ್ಟಿತ್ತು.

ಈ ನಗರವು ಅತಿಹಳೆಯ ಹಡಗುನೆಲೆ ಹಾಗೂ ಪೂರ್ವಕರಾವಳಿಯ ನೈಸರ್ಗಿಕ ಬಂದರನ್ನು ಹೊಂದಿದೆ. ಭಾರತೀಯ ನೌಕಾಸೇನೆಯ ಪೂರ್ವ ಕಮಾಂಡ್ ನ ಹಾಗೂ ಪೂರ್ವಕರಾವಳಿ ರೈಲ್ವೆ ವಲಯದ ಪ್ರಧಾನ ಕಛೇರಿಗಳು ಇಲ್ಲಿವೆ.


ಉಲ್ಲೇಖಗಳು

Tags:

ಆಂಧ್ರ ಪ್ರದೇಶಬಂಗಾಳ ಕೊಲ್ಲಿಭಾರತ

🔥 Trending searches on Wiki ಕನ್ನಡ:

ಅಂಚೆ ವ್ಯವಸ್ಥೆಬೀದರ್ವಿಜಯಪುರಕೊಪ್ಪಳಪಂಚತಂತ್ರವಾಲ್ಮೀಕಿಜಯಂತ ಕಾಯ್ಕಿಣಿವಾರ್ಧಕ ಷಟ್ಪದಿಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುಅಸ್ಪೃಶ್ಯತೆಕರ್ಣಪರಮ ವೀರ ಚಕ್ರಬ್ಯಾಬಿಲೋನ್ಭಾರತೀಯ ರೈಲ್ವೆಉಡುಪಿ ಜಿಲ್ಲೆಪರಮಾಣುಕರ್ನಾಟಕದ ಏಕೀಕರಣಅನುಪಮಾ ನಿರಂಜನಭಾರತದಡಾರಹಲ್ಮಿಡಿ ಶಾಸನಮೊಗಳ್ಳಿ ಗಣೇಶಬಿ. ಆರ್. ಅಂಬೇಡ್ಕರ್ಭಾರತದ ಸ್ವಾತಂತ್ರ್ಯ ಚಳುವಳಿಸಂಚಿ ಹೊನ್ನಮ್ಮಮಕ್ಕಳ ದಿನಾಚರಣೆ (ಭಾರತ)ವಿಕಿವಿಷ್ಣುವರ್ಧನ್ (ನಟ)ದಿಕ್ಸೂಚಿಮಾದರ ಚೆನ್ನಯ್ಯಜೀವನಭಾರತದಲ್ಲಿ ತುರ್ತು ಪರಿಸ್ಥಿತಿಸೇಬುರಾಮ್ ಮೋಹನ್ ರಾಯ್ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕೃಷ್ಣರಾಜಸಾಗರಫ್ರೆಂಚ್ ಕ್ರಾಂತಿಏಡ್ಸ್ ರೋಗರೋಮನ್ ಸಾಮ್ರಾಜ್ಯಜೀವನಚರಿತ್ರೆಆದೇಶ ಸಂಧಿಬೌದ್ಧ ಧರ್ಮಟಾವೊ ತತ್ತ್ವವಿವರಣೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆರಾಜಧಾನಿಗಳ ಪಟ್ಟಿವಾಲಿಬಾಲ್ಆರ್ಯ ಸಮಾಜಚಿತ್ರದುರ್ಗನಾಗರಹಾವು (ಚಲನಚಿತ್ರ ೧೯೭೨)ಚೌರಿ ಚೌರಾ ಘಟನೆಬೆಸಗರಹಳ್ಳಿ ರಾಮಣ್ಣವಿಮರ್ಶೆಬುಡಕಟ್ಟುಮಂಡಲ ಹಾವುಕನ್ನಡ ಪತ್ರಿಕೆಗಳುರತ್ನಾಕರ ವರ್ಣಿಕನ್ನಡದಲ್ಲಿ ಜೀವನ ಚರಿತ್ರೆಗಳುವ್ಯಕ್ತಿತ್ವನಾಗೇಶ ಹೆಗಡೆಮಂಜುಳಗಾಂಧಾರಭಾರತದ ರಾಷ್ಟ್ರಪತಿಚೋಮನ ದುಡಿಭಾರತದ ಸರ್ವೋಚ್ಛ ನ್ಯಾಯಾಲಯಹೊಸಗನ್ನಡರೇಣುಕತ್ರಿಪದಿಭಾರತದಲ್ಲಿನ ಶಿಕ್ಷಣಮಾನವ ಹಕ್ಕುಗಳುನುಡಿಗಟ್ಟುದಿಕ್ಕುಪಾಂಡವರುಕೆಳದಿಯ ಚೆನ್ನಮ್ಮಸಿದ್ಧಯ್ಯ ಪುರಾಣಿಕಯೋನಿಸಂಶೋಧನೆವಲ್ಲಭ್‌ಭಾಯಿ ಪಟೇಲ್ಅಂಬರೀಶ್🡆 More