ಬೈಬಲ್

ಬೈಬಲ್ ಅಥವಾ ಸತ್ಯವೇದ ಕ್ರೈಸ್ತರ ಪವಿತ್ರ ಗ್ರಂಥವಾಗಿದೆ.

ಬೈಬಲ್ ಎಂಬ ಪದವು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಉದ್ಭವಿಸಿದೆ. ಇದರ ಅರ್ಥ, 'ಪುಸ್ತಕಗಳು'ಅಥವಾಾ 'ಪುಸ್ತಕಗಳ ಸಂಗ್ರಹ'. ಬೈಬಲ್‌ನ ಪ್ರಮುಖ ಭಾಗಗಳದ "ಹಳೆ ಒಡಂಬಡಿಕೆ"ಯಲ್ಲಿ ಒಟ್ಟು ೩೯(ಪ್ರೊಟೆಸ್ಟಂಟ್‌)ಅಥವಾಾ ೫೨(ರೋಮನ್ ಕಥೋಲಿಕ)ಪುಸ್ತಕಗಳೂ "ಹೊಸ ಒಡಂಬಡಿಕೆ"ಯಲ್ಲಿ ಒಟ್ಟು ೨೭ ಪುಸ್ತಕಗಳೂ ಇವೆ.ಇವು ದೈವ ಪ್ರೇರಣೆಯಿಂದ ಬೇರೆ ಬೇರೆ ಕಾಲಘಟ್ಟಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ವ್ಯಕ್ತಿಗಳಿಂದ ರಚಿಸಲ್ಪಟ್ಟ ಪುಸ್ತಕಗಳ ಸಂಗ್ರಹವೆಂಬುದು ಕ್ರೈಸ್ತರ ನಂಬಿಕೆ.

ಬೈಬಲ್

ಬೈಬಲ್‌ ನಡೆದು ಬಂದ ದಾರಿ

  • ಇಂದು ಪುಸ್ತಕದ ರೂಪದಲ್ಲಿ ನೋಡುತ್ತಿರುವ ಬೈಬಲ್‌ ಮೂಲರೂಪವಾದ ಹಳೇ ಒಡಂಬಡಿಕೆಯು ಆರಂಭದಲ್ಲಿ 'ದೈವ ವಾಕ್ಯ'ವೆಂಬ ಭಯ, ಭಕ್ತಿಯಿಂದ ಒಂದಕ್ಷರವೂ ಬದಲಾಗದಂತೆ ಜನರ ಬಾಯಿಂದ ಬಾಯಿಗೆ ಪ್ರಸಾರವಾಗುತಿತ್ತು. ಲಿಪಿಗಳು ಬಳಕೆಗೆ ಬರುತಿದ್ದಂತೆ ಅತ್ಯಂತ ಶೃಧ್ಧೆಯಿಂದ ಈ ವಾಕ್ಯಗಳನ್ನು ಕ್ರಮವಾಗಿ ಕಲ್ಲು, ಮೇಣ, ಜೇಡಿ ಮಣ್ಣಿನ ಫಲಕಗಳ ಮೇಲೆ ಬರೆದಿರಿಸತೊಡಗಿದರು. ಅನಂತರ ಪಾಪಿರಸ್ ಎಂಬ ವಸ್ತುವಿನ ಮೇಲೆ ಹಾಗೂ ಕುರಿ, ಮೇಕೆ, ಹಸುವಿನ ಚರ್ಮದ ತೆಳು ಹಾಳೆಗಳ ಮೇಲೆ ಬರೆಯಲು ಉಪಕ್ರಮಿಸಿದರು.
  • ಸುಮಾರು ೧೫೦೦-೨೦೦೦ ವರ್ಷಗಳ ಐತಿಹ್ಯವಿರುವ ಬೈಬಲ್‌ನ ಮೂಲ ರೂಪ ಹೀಬ್ರುಗಳ ಪವಿತ್ರ ಗ್ರಂಥವಾದ ತನಕ್. ೫೦೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಇದು ಹಳೆ ಒಡಂಬಡಿಕೆ ಎಂಬ ಹೆಸರಿನಲ್ಲಿ ಬೈಬಲ್‌ನ ಒಂದು ಭಾಗವಾಗಿ ಉಳಿದುಕೊಂಡಿದೆ. ಲಿಪಿಗಳು ಆರಂಭವಾಗುವ ಮೊದಲು 'ದೈವ ವಾಕ್ಯ'ಗಳನ್ನು ಕಲ್ಲು, ಮೇಣ ಮತ್ತು ಜೇಡಿ ಮಣ್ಣಿನ ಫಲಕಗಳ ಮೇಲೆ ಸರಳ ರೂಪದ ಚಿತ್ರಗಳಾಗಿ ಕೆತ್ತುತ್ತಿದ್ದರು. ಇದನ್ನು 'ಕ್ಯುನಿಫಾರ್ಮ್ ಬರವಣಿಗೆ' ಎನ್ನುತ್ತಾರೆ.
  • ಕ್ರಿ.ಪೂ.೧ರ ವೇಳೆಗೆ ಹೀಬ್ರೂ ಭಾಷೆ ಬಳಕೆಗೆ ಬಂದು ಅದು ಈ ಗ್ರಂಥದ ಮೊದಲ ಲಿಪಿಯಾಯಿತು. ಬೈಬಲ್‌ನ ಕೆಲವು ಪ್ರತಿಗಳು ಅರಾಮೈಕ್ ಭಾಷೆಯಲ್ಲೂ ಬರೆದಿರುವುದು ದೊರಕಿದೆ. ಮುಂದೆ ಇವುಗಳನ್ನು ಗ್ರೀಕ್‌ಗೆ ಭಾಷಾಂತರಿಸಲಾಯಿತು. ಈಗ ಜಗತ್ತಿನ ಅನೇಕ ಭಾಷೆಗಳಲ್ಲಿ 'ಬೈಬಲ್' ಲಭ್ಯವಿವೆಯಲ್ಲದೇ, ಅನೇಕ ಭಾಷೆಗಳಲ್ಲಿ ತರ್ಜುಮೆಗೊಂಡ ಏಕೈಕ ಗ್ರಂಥವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಜಾನ್ ಹ್ಯಾಂಡ್ಸ್ ಅವರು ಕನ್ನಡ ಭಾಷೆಗೆ ಬೈಬಲ್ ಅನುವಾದಿಸಿದರು.

ಹಳೇ ಒಡಂಬಡಿಕೆ(ರೋಮನ್ ಕಥೋಲಿಕ)ಯಲ್ಲಿನ ಪುಸ್ತಕಗಳು

  1. ಆದಿಕಾಂಡ
  2. ವಿಮೋಚನಾಕಾಂಡ
  3. ಯಾಜಕಕಾಂಡ
  4. ಸಂಖ್ಯಾಕಾಂಡ
  5. ಧರ್ಮೋಪದೇಶಕಾಂಡ
  6. ಯೊಹೋಶುವ
  7. ನ್ಯಾಯಸ್ಥಾಪಕರು
  8. ರೂತಳು
  9. ಸಮುವೇಲನು ಭಾಗ ೧
  10. ಸಮುವೇಲನು ಭಾಗ ೨
  11. ಅರಸುಗಳು ಭಾಗ ೧
  12. ಅರಸುಗಳು ಭಾಗ ೨
  13. ಪೂರ್ವಕಾಲದ ವೃತ್ತಾಂತ ಭಾಗ ೧
  14. ಪೂರ್ವಕಾಲದ ವೃತ್ತಾಂತ ಭಾಗ ೨
  15. ಎಜ್ರನು
  16. ನೆಹೆಮೀಯಾ
  17. ಎಸ್ತೆರಳು
  18. ಯೋಬನ ಗ್ರಂಥ
  19. ಕೀರ್ತನೆಗಳು
  20. ಜ್ಞಾನೋಕ್ತಿಗಳು
  21. ಉಪದೇಷಕ
  22. ಪರಮಗೀತೆ
  23. ಪ್ರವಾದಿ ಯೆಶಾಯನ ಗ್ರಂಥ
  24. ಪ್ರವಾದಿ ಯೆರೆಮೀಯನ ಗ್ರಂಥ
  25. ಪ್ರಲಾಪಗಳು
  26. ಪ್ರವಾದಿ ಯೆಜೆಕಿಯೇಲನ ಗ್ರಂಥ
  27. ಪ್ರವಾದಿ ದಾನಿಯೇಲನ ಗ್ರಂಥ
  28. ಪ್ರವಾದಿ ಹೊಶೇಯನ ಗ್ರಂಥ
  29. ಪ್ರವಾದಿ ಯೊವೇಲನ ಗ್ರಂಥ
  30. ಪ್ರವಾದಿ ಆಮೋಸನ ಗ್ರಂಥ
  31. ಪ್ರವಾದಿ ಓಬದ್ಯನ ಗ್ರಂಥ
  32. ಪ್ರವಾದಿ ಯೋನನ ಗ್ರಂಥ
  33. ಪ್ರವಾದಿ ಮೀಕನ ಗ್ರಂಥ
  34. ಪ್ರವಾದಿ ನಹೂಮನ ಗ್ರಂಥ
  35. ಪ್ರವಾದಿ ಹಬಕ್ಕೂಕನ ಗ್ರಂಥ
  36. ಪ್ರವಾದಿ ಜೆಫನ್ಯನ ಗ್ರಂಥ
  37. ಪ್ರವಾದಿ ಹಗ್ಗಾಯನ ಗ್ರಂಥ
  38. ಪ್ರವಾದಿ ಜೆಕರ್ಯನ ಗ್ರಂಥ
  39. ಪ್ರವಾದಿ ಮಲಾಕಿಯನ ಗ್ರಂಥ
    • ಅನುಗ್ರಂಥಗಳು(ಪ್ರೊಟೆಸ್ಟಂಟರ ಬೈಬಲ್‌ನಲ್ಲಿ ಈ ಕೆಳಕಂಡ ೧೩ ಪುಸ್ತಕಗಳು ಇರುವುದಿಲ್ಲ)
  1. ತೊಬೀತನ ಗ್ರಂಥ ೧
  2. ತೊಬೀತನ ಗ್ರಂಥ ೨
  3. ಜೂಡಿತಳು
  4. ಎಸ್ತೇರಳು
  5. ಸೊಲೊಮೋನನ ಜ್ಞಾನಗ್ರಂಥ
  6. ಸಿರಾಖನು
  7. ಬಾರೂಕನು
  8. ಪ್ರವಾದಿ ಯೆರೆಮೀಯನ ಪತ್ರ
  9. ಅಜರ್ಯನ ಗೀತೆ ಹಾಗು ಮೂವರು ಯುವಕರ ಕೀರ್ತನೆ
  10. ಸುಸನ್ನಳ ಗ್ರಂಥ
  11. ಬೇಲ್ ದೇವತೆ ಮತ್ತು ಘಟಸರ್ಪ
  12. ಮಕ್ಕಾಬಿಯರ ಗ್ರಂಥ೧
  13. ಮಕ್ಕಾಬಿಯರ ಗ್ರಂಥ೨

ಆಡಿಯೋ ಬೈಬಲ್ - audio

ಹೊಸ ಒಡಂಬಡಿಕೆಯಲ್ಲಿನ ಪುಸ್ತಕಗಳು

  1. ಮತ್ತಾಯನು ಬರೆದ ಸುಸಂದೇಶಗಳು
  2. ಮಾರ್ಕನು ಬರೆದ ಸುಸಂದೇಶಗಳು
  3. ಲೂಕನು ಬರೆದ ಸುಸಂದೇಶಗಳು
  4. ಯೊವಾನ್ನನು ಬರೆದ ಸುಸಂದೇಶಗಳು
  5. ಪ್ರೇಷಿತರ ಕಾರ್ಯಕಲಾಪಗಳು
  6. ಪೌಲನು ರೋಮನರಿಗೆ ಬರೆದ ಪತ್ರ
  7. ಪೌಲನು ಕೊರಿಂಥಿಯರಿಗೆ ಬರೆದ ಮೊದಲ ಪತ್ರ
  8. ಪೌಲನು ಕೊರಿಂಥಿಯರಿಗೆ ಬರೆದ ಎರಡನೆಯ ಪತ್ರ
  9. ಪೌಲನು ಗಲಾತ್ಯರಿಗೆ ಬರೆದ ಪತ್ರ
  10. ಪೌಲನು ಎಫೆಸಿಯರಿಗೆ ಬರೆದ ಪತ್ರ
  11. ಪೌಲನು ಫಿಲಿಪಿಯರಿಗೆ ಬರೆದ ಪತ್ರ
  12. ಪೌಲನು ಕೊಲೊಸ್ಸೆಯರಿಗೆ ಬರೆದ ಪತ್ರ
  13. ಪೌಲನು ಥೆಸೆಲೋನಿಯರಿಗೆ ಮೊದಲ ಬರೆದ ಪತ್ರ
  14. ಪೌಲನು ಥೆಸೆಲೋನಿಯರಿಗೆ ಎರಡನೆಯ ಬರೆದ ಪತ್ರ
  15. ಪೌಲನು ತಿಮೊಥೇಯನಿಗ ಬರೆದ ಮೊದಲ ಪತ್ರ
  16. ಪೌಲನು ತಿಮೊಥೇಯನಿಗೆ ಬರೆದ ಎರಡನೆಯ ಪತ್ರ
  17. ಪೌಲನು ತೀತನಿಗೆ ಬರೆದ ಪತ್ರ
  18. ಪೌಲನು ಫಿಲೆಮೋನನಿಗೆ ಬರೆದ ಪತ್ರ
  19. ಪೌಲನು ಹಿಬ್ರಿಯರಿಗೆ ಬರೆದ ಪತ್ರ
  20. ಯಕೋಬನು ಬರೆದ ಪತ್ರ
  21. ಪೇತ್ರನು ಬರೆದ ಮೊದಲ ಪತ್ರ
  22. ಪೇತ್ರನು ಬರೆದ ಎರಡನೆಯ ಪತ್ರ
  23. ಯೊವಾನ್ನನು ಬರೆದ ಮೊದಲ ಪತ್ರ
  24. ಯೊವಾನ್ನನು ಬರೆದ ಎರಡನೆಯ ಪತ್ರ
  25. ಯೊವಾನ್ನನು ಬರೆದ ಮೂರನೆಯ ಪತ್ರ
  26. ಯೂದನು ಬರೆದ ಪತ್ರ
  27. ಯೊವಾನ್ನನು ಕಂಡ ದಿವ್ಯ ದರ್ಶನಗಳ ಪ್ರಕಟಣೆ


Tags:

ಕ್ರೈಸ್ತ ಧರ್ಮಪವಿತ್ರ ಗ್ರಂಥಲ್ಯಾಟಿನ್ಹಳೆ ಒಡಂಬಡಿಕೆಹೊಸ ಒಡಂಬಡಿಕೆ

🔥 Trending searches on Wiki ಕನ್ನಡ:

ಜ್ಞಾನಪೀಠ ಪ್ರಶಸ್ತಿಭಾರತದ ಆರ್ಥಿಕ ವ್ಯವಸ್ಥೆಸೂರ್ಯೋದಯಭಾರತ ಸಂವಿಧಾನದ ಪೀಠಿಕೆಚಿಪ್ಕೊ ಚಳುವಳಿಚಿನ್ನಎಸ್.ಎಲ್. ಭೈರಪ್ಪಆಮದು ಮತ್ತು ರಫ್ತುರಾಜ್‌ಕುಮಾರ್ಭಾರತೀಯ ರೈಲ್ವೆಹನುಮಾನ್ ಚಾಲೀಸಜೋಡು ನುಡಿಗಟ್ಟುಕೆ. ಎಸ್. ನಿಸಾರ್ ಅಹಮದ್ಸಾವಯವ ಬೇಸಾಯಗುಡುಗುಕಾಲಾಯ ತಸ್ಮೈ ನಮಃ (ಚಲನಚಿತ್ರ)ಪರಮಾಣು ಸಂಖ್ಯೆಕರ್ಬೂಜಡೊಳ್ಳು ಕುಣಿತಊಳಿಗಮಾನ ಪದ್ಧತಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಕಬೀರ್ಮಹಾತ್ಮ ಗಾಂಧಿಸಂತಾನೋತ್ಪತ್ತಿಯ ವ್ಯವಸ್ಥೆದಖ್ಖನ್ ಪೀಠಭೂಮಿಇಂದಿರಾ ಗಾಂಧಿಹೆಚ್.ಡಿ.ಕುಮಾರಸ್ವಾಮಿರತನ್ ನಾವಲ್ ಟಾಟಾತೂಕಮೋಕ್ಷಗುಂಡಂ ವಿಶ್ವೇಶ್ವರಯ್ಯಕೇಂದ್ರ ಲೋಕ ಸೇವಾ ಆಯೋಗಮೊಘಲ್ ಸಾಮ್ರಾಜ್ಯಮಯೂರವರ್ಮಭಾರತೀಯ ರಿಸರ್ವ್ ಬ್ಯಾಂಕ್ಅಲಾವುದ್ದೀನ್ ಖಿಲ್ಜಿಹುರುಳಿನಾಯಕನಹಟ್ಟಿಪಂಚಾಂಗಪ್ಲೇಟೊಭೂಕಂಪಜನಪದ ಕಲೆಗಳುನಾಮಪದಭಾರತೀಯ ಸಂವಿಧಾನದ ತಿದ್ದುಪಡಿಶಾಲಿವಾಹನ ಶಕೆಸಾರಜನಕದ.ರಾ.ಬೇಂದ್ರೆಸ್ವರಸಂವಹನಸಿಂಧನೂರುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಜಾನಪದಹಿಂದೂ ಮಾಸಗಳುಸಾರ್ವಜನಿಕ ಹಣಕಾಸುಜವಾಹರ‌ಲಾಲ್ ನೆಹರುರವೀಂದ್ರನಾಥ ಠಾಗೋರ್ಭತ್ತಮೈಸೂರು ಸಂಸ್ಥಾನದ ದಿವಾನರುಗಳುಬಾಹುಬಲಿದಕ್ಷಿಣ ಕನ್ನಡರಾಷ್ಟ್ರೀಯ ಸೇವಾ ಯೋಜನೆಮುಂಬಯಿ ವಿಶ್ವವಿದ್ಯಾಲಯಸೂರ್ಯವ್ಯೂಹದ ಗ್ರಹಗಳುಅಲ್ಲಮ ಪ್ರಭುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಏಡ್ಸ್ ರೋಗಅರಬ್ಬೀ ಸಮುದ್ರಕರ್ಣಾಟ ಭಾರತ ಕಥಾಮಂಜರಿಪ್ರತಿಧ್ವನಿಬಂಡೀಪುರ ರಾಷ್ಟ್ರೀಯ ಉದ್ಯಾನವನದುಗ್ಧರಸ ಗ್ರಂಥಿ (Lymph Node)ಜಾಹೀರಾತುಹಳೆಗನ್ನಡಕನ್ನಡ ರಂಗಭೂಮಿಜಾತಿರಚಿತಾ ರಾಮ್ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳು🡆 More