ಅಲರ್ಜಿ

ಅಲರ್ಜಿ ಎಂದರೆ ದೇಹದ ರೋಗದ ನಿರೋಧಕ ಶಕ್ತಿಯ ಮೇಲೆ ಪ್ರತಿರೋಧಕ ಪ್ರತಿಕ್ರಿಯೆ ನೀಡುವ ಒಂದು ಪ್ರಕ್ರಿಯೆಯಾಗಿದೆ .ಬಹಳಷ್ಟು ಸಲ ಇದನ್ನು ಅಟೊಪಿ ಅಥವಾ ತಕ್ಷಣವೇ ತನ್ನ ವಿರುದ್ಧ ಸ್ಪಂದಿಸುವ ಲಕ್ಷಣವಾಗಿದೆ.

ಅಲರ್ಜಿಕ್ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಪರಿಸರದಲ್ಲಿರುವ ಅಪಾಯಕಾರಿಯಲ್ಲದ ಅಲರ್ಜಿನ್ ಎಂದು ಕರೆಯುವ ವಸ್ತುಗಳ ಮೇಲೆ ಇದು ಸಂಭವಿಸುತ್ತದೆ;ಇಂತಹ ಪ್ರತಿಕ್ರಿಯೆಗಳು ಹುಟ್ಟಿಕೊಂಡುದುದು,ಊಹಿಸಿದ್ದು ಮತ್ತು ತೀವ್ರ ಪರಿಣಾಮಕಾರಿಯೆನಿಸುತ್ತದೆ. ಕಡ್ಡಾಯವಾಗಿ ಹೇಳುವುದಾದರೆ ಅಲರ್ಜಿಯು ನಾಲ್ಕು ಅತಿಸೂಕ್ಷ್ಮ ಪ್ರತಿಕ್ರಿಯೆಗಳಲ್ಲೊಂದಾಗಿದೆ.ಇದನ್ನು ಪ್ರಕಾರ ದ (ಅಥವಾ ತಕ್ಷಣ ದ ವಿಪರೀತ ಪ್ರತಿಕ್ರಿಯೆ ಎನ್ನುವರು) ಇದು ಬಿಳಿ ರಕ್ತ ಕಣಗಳ ಅತಿಹೆಚ್ಚಿನ ಕ್ರಿಯಾತ್ಮಕ ವರ್ತನೆಯೇ ಕಾರಣವಾಗಿದೆ.ಇವುಗಳನ್ನು ಮಾಸ್ತ್ ಕಣಗಳು ಮತ್ತು ಬಾಸೊಫಿಲ್ಸ್ ಗಳು ರೋಗನಿರೋಧಕಗಳ ಮೂಲಕ ತನ್ನ ಗುಣಲಕ್ಷಣ ತೋರುತ್ತದೆ.ಇದನ್ನುIgE,ಎಂದೂ ಕರೆಯುತ್ತಾರೆ,ಇದರಲ್ಲಿ ಉರಿತದ ಪರಿಣಾಮ ಕಾಣಿಸುತ್ತದೆ. ಸಾಮಾನ್ಯ ಅಲರ್ಜಿಯೆಂದರೆ ಎಸ್ಜಿಮಾ,ಚರ್ಮದ ಮೇಲೆ ದದ್ದು,ಏರಿಳಿತದ ಜ್ವರ ,ಆಸ್ತಮಾ ರೋಗ,ಆಹಾರದ ಅಲರ್ಜಿಗಳು,ಹುಳುಗಳು ಕಚ್ಚಿದ ನಂಜು ವಿಷ, ಕಣಜಗಳ ಕಡಿತ,ಜೇನುನೊಣಗಳ ಕಡಿತ ಇತ್ಯಾದಿಯಿಂದ ಉಂಟಾಗುವ ಅಲರ್ಜಿಗಳು ಸಾಮಾನ್ಯವಾಗಿವೆ. ಸೌಮ್ಯ ಪ್ರಮಾಣದ ಅಲರ್ಜಿಯೆಂದರೆ ಏರಿಳಿತದ ಜ್ವರಭಾದೆಯು ಅತಿ ಸಾಂದ್ರತೆಯ ಜನಸಂಖ್ಯೆ ಇರುವಲ್ಲಿ ಕಾಣುತ್ತದೆ.ಇದರ ಪ್ರಮುಖ ಲಕ್ಷಣಗಳೆಂದರೆ ಅಲೆರ್ಜಿಕ್ ವಿಪರೀತತೆ,ಕಡಿತದ ಅನುಭವ ಮತ್ತು ನೆಗಡಿಯಿಂದ ಮೂಗು ಸೋರುವಿಕೆ. ಅಸ್ತಮಾ ಉಲ್ಬಣವಾಗಲು ಅಲರ್ಜಿಗಳು ಅತಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಜನರಲ್ಲಿ ಗಂಭೀರ ಅಲರ್ಜಿಗಳು ಪರಿಸರ ಅಥವಾ ಆಹಾರ ಅಥವಾ ಔಷಧಿಗಳ ಉಪಯೋಗದಿಂದ ಹಲವರು ಜೀವಕ್ಕೆ ಅಪಾಯಕಾರಿಯಾದ ಸೂಕ್ಷ್ಮ ಸಂವೇದನೆಯ ಪ್ರತಿಕ್ರಿಯೆಗಳು ಮಾರಣಾಂತಿಕ ಎನಿಸಬಹುದು. ಸದ್ಯ ಅಲರ್ಜಿಯನ್ನು ಪತ್ತೆಹಚ್ಚಲು ಹಲವಾರು ಬಗೆಯ ಪರೀಕ್ಷೆಗಳು ಲಭ್ಯವಿವೆ.ಸಂವೇದನೆ ಪರೀಕ್ಷೆಗೆ ಚರ್ಮದ ತಪಾಸಣೆಯಿಂದ ರಕ್ತದ ಮಾದರಿ ತೆಗೆಯುವುದು,ಅಲರ್ಜಿಗಳ ನೈಜ ಕಾರಣ ಕಂಡು ಹಿಡಿಯಲು IgE ವಿಧಾನವಿದೆ.ಆಂಟಿ-ಹಿಸ್ಟಾಮೈನ್ ಗಳ ಉಪಯೋಗದ ತಡೆ,ಸ್ಟಿರಿಯಾಡ್ ಗಳ ಬಳ್ಕೆಗೆ ಕಡಿವಾಣ ಅಥವಾ ಸ್ವಯಂ ಔಷಧಿ ಪಡೆಯುವುದು,ಸಂವೇದನೆ ತಡೆಗೆ ಇಮ್ಯುನೊ ಥೆರಪಿ ಅಥವಾ ಇನ್ನಾವುದೊ ಥೆರಪಿ ಅತಿ ಸೂಕ್ಷ್ಮ ಸಂವೇದನೆ ನಿಲ್ಲಿಸಲು ಯಾವುದೊ ಚಿಕಿತ್ಸೆಗೆ ಮುಂದಾಗುವುದನ್ನು ತಡೆಯಬೇಕಾಗುತ್ತದೆ. ವೈದ್ಯಕೀಯ ನಿಘಂಟಿನಲ್ಲಿ ಅಲರ್ಜಿಗಳನ್ನು ಕಂಡು ಹಿಡಿಯುವದನ್ನು ಅಲರ್ಜೊಲೊಜಿ ಎಂದು ಕರೆಯುತ್ತಾರೆ.

ಅಲರ್ಜಿ
Classification and external resources
ICD-10T78.4
ICD-9995.3
DiseasesDB33481
MedlinePlus೦೦೦೮೧೨
eMedicinemed/೧೧೦೧
MeSHD೦೦೬೯೬೭

ವರ್ಗೀಕರಣ ಮತ್ತು ಇತಿಹಾಸ

"ಅಲರ್ಜಿ"ಎಂಬ ಶಬ್ದವನ್ನು ವಿಯನ್ನೀಸ್ ನ ಒಬ್ಬ ಪರಿಣತ ವೈದ್ಯ ಕ್ಲೆಮೆನ್ಸ್ ವೊನ್ ಪಿರ್ಕ್ವೆಟ್ ಎಂಬಾತ ೧೯೦೬ರಲ್ಲಿ ಪ್ರಚಲಿತಕ್ಕೆ ತಂದನು.ಆತನು ತನ್ನಲ್ಲಿಗೆ ಬರುವ ರೋಗಿಗಳಿಗೆ ಧೂಳು,ಮಕರಂದ,ಅಥವಾ ಕೆಲವು ನಿಶ್ಚಿತ ಆಹಾರಗಳಿಂದ ಸಂಕಟ ಅನುಭವಿಸುತ್ತಿರುವುದನ್ನು ಕಂಡು ಹಿಡಿದನು. ಇದನ್ನು ಪಿರ್ಕ್ವೆಟ್ ಪ್ರಾಚೀನ ಗ್ರೀಕ್ ಶಬ್ದ ἄλλος ಅಲೊಸ್ ಮೂಲದಿಂದ " ಅಲರ್ಜಿ" ಎಂಬುದನ್ನು ಬಳಕೆಗೆ ತಂದನು.ಅಲೊಸ್ ಎಂದರೆ "ಪರಕೀಯ"ಮತ್ತು ἔργον ಎರ್ಜನ್ ಎಂದರೆ " ಕಾರ್ಯ" ಐತಿಹಾಸಿಕವಾಗಿ ಎಲ್ಲಾ ತೆರನಾದ ವಪರೀತ ಸಂವೇದನಾ ಸೂಕ್ಷ್ಮತೆಗಳು ಅಲರ್ಜಿಗಳಾಗಿ ವರ್ಗಿಕರಣಕೊಂಡಿವೆ.ಇವೆಲ್ಲವುಉ ರೋಗ ನಿರೋಧಕ ವ್ಯವಸ್ಥೆಯಲ್ಲಿನ ಅಸ್ತವ್ಯಸ್ತತೆಯಿಂದ ಈ ಪರಿಣಾಮ ಉಂಟಾಗುತ್ತದೆ. ನಂತರ ಇಅರ ಆಧಾರದ ಮೇಲೆ ಹಲವರು ಅಸ್ತವ್ಯಸ್ತತೆಗಳಿಗೆ ರೋಗ ನಿರೋಧಕ ಶಕ್ತಿಯ ಕೊರತೆ ಎಂಬುದನ್ನು ಕಂಡುಕೊಳ್ಳಲಾಯಿತು.ಇದರಿಂದ ಉಳಿದ ಕಾಯಿಲೆಗಳ ಹುಟ್ಟಿಗೆ ಕಾರಣ ತಿಳಿಯಲಾಯಿತು.ಇದಕ್ಕೆಲಾ ಬಹುಮುಖ್ಯವಾಗಿ ವಪರೀತ ಸಂವೇದನೆ ಸಾಧ್ಯವಾಯಿತು. ಸುಮಾರು ೧೯೬೩ರಲ್ಲಿ ಹೊಸ ವರ್ಗೀಕರಣಕ್ಕೆ ದಾರಿಯಾಯಿತು.ಫಿಲಿಪ್ ಗೆಲ್ ಮತ್ತು ರಾಬಿನ್ ಕೂಂಬ್ಸ್ ಅವರುಗಳು ಅತಿಸಂವೇದನೆಯ ಪ್ರತಿಕ್ರಿಯೆಗಳನ್ನು ನಾಲ್ಕು ವಿಭಾಗಗಳಲ್ಲಿ ವರ್ಗೀಕರಿಸಿದ್ದಾರೆ.ಇದನ್ನು ಟೈಪ್ Iರಿಂದ Type IV ರವರೆಗೆ ಎಂದು ಹೇಳಲಾಗುತ್ತದೆ. .ಈ ನೂತನ ವರ್ಗೀಕರಣದಿಂದಾಗಿ " ಅಲರ್ಜಿ"ಎಂಬ ಶಬ್ದವು ಪ್ರಕಾರ I ರಲ್ಲಿನ ಸೂಕ್ಷ್ಮ ಸಂವೇದನೆಯನ್ನು ಸೂಚಿಸುತ್ತದೆ.(ಇದನ್ನು ಹಠಾತ್ ಸೂಕ್ಷ್ಮ ಸಂವೇದನೆ ಎನ್ನುತ್ತಾರೆ)ಇದು ತತ್ ಕ್ಷಣವೇ ಇದು ಸಂಭವಿಸುತ್ತವೆ. ಅಲರ್ಜಿಯನ್ನು ಕಂಡು ಹಿಡಿಯುವ ವಿಧಾನವು ಬಹಳಷ್ಟು ತಿಳಿವಳೆಕೆ ಮತ್ತು ಸಂಶೋಧನೆಯು ಇದನ್ನು ಇಮ್ಮುನೊಗ್ಲೊಬುಲಿನ್ (IgE)-ಕಿಮಿಶ್ಗೆ ಇಶಿಜೆಕ್ ಮತ್ತು ಸಹ-ಕಾರ್ಯಕರ್ತರು (IgE)ನ್ನು ೧೯೬೦ರಲ್ಲಿ ಮೊದಲ ಬಾರಿಗೆ ಅಲರ್ಜಿ ಬಗ್ಗೆ ಪ್ರತ್ಯೇಕ ಅಧ್ಯಯನಕ್ಕೆ ಮುಂದಾದರು.

ಲಕ್ಷಣಗಳು ಮತ್ತು ಗುಣಲಕ್ಷಣಗಳು

ಅಲರ್ಜಿಯ ಸಾಮಾನ್ಯ ಲಕ್ಷಣಗಳು
ರೋಗ-ಲಕ್ಷಣಗಳು
ಮೂಗು swelling of the nasal mucosa ಮೂಗಿನ ಹೊರಳೆಯಲ್ಲಿನ ಲೊಳೆ ಸುರಿಸುವ ಭಾಗದ ಊತ,ಅಲರ್ಜಿಕ್ ಗುರುಳೆಗಳು
ಸೈನಸ್ (ಮೂಗು ಕಟ್ಟುವಿಕೆ) ಅಲರ್ಜಿ ಸೈನುಟಿಸ್
ಕಣ್ಣುಗ್ಳs ಕೆಂಪಾಗುವಿಕೆ ಮತ್ತು ನವೆ ಯಾತನೆa (ಅಲರ್ಜಿಯಿಂದಾಗುವ ವಿಪರೀತದ ಸಂವೇದನೆ))
ಗಾಳಿ ಮಾರ್ಗಗಳು ಸೀನುವಿಕೆ, ಕೆಮ್ಮುವಿಕೆ, ಬ್ರಾಂಕೊ ಸ್ಟ್ರಿಕ್ಸನ್ , ಉಸಿರಾಟ ತೊಂದರೆ ಮತ್ತು ಡೆಸ್ಪೆನ್ಸಿಯಾ , ಕೆಲವೊಮ್ಮೆ ಆಸ್ತಮಾ ತೀವ್ರತೆಯಾದ ಅಸ್ತಮಾ ವು ಕೆಲವೊಮ್ಮೆ ಶ್ವಾಶೋಚ್ಚಾಸದ ಮೇಲೆ ಪರಿಣಾಮ ಬೀರುತ್ತದೆ.ಇದರಿಂದ ಊತ ಉಂಟಾಗಿ ಅದನ್ನು , ಲಾರಿಂಜಿಯಲ್ ಎಡೆಮಾ
ಕಿವಿಗಳು ಸಂಪೂರ್ಣ ಭರ್ತಿ ಗಾಳಿ ತುಂಬಿದ ನೋವು ಕಂಡುಬರುತ್ತದೆ.ಇದಕ್ಕೆ ಎಸ್ಟ್ಯಾಕಿಯನ್ ಟೂಬ್‌ಹರಿಯ್ವಿನ ನಾಳ ಇಲ್ಲದ್ದೇ ಕಾರಣವಾಗುತ್ತದೆ.
ಚರ್ಮ ದದ್ದುಗಳು, ಅಂದರೆ ಎಸ್ಜಿಮಾ ಮತ್ತು ಕೆರೆತದ ದದ್ದು(ಯುರಿಟಿಕೆರಿಯಾ)
ದೊಡ್ಡ ಕರುಳಿನ ಅಂಗ ಹೊಟ್ಟೆ ನೋವು , ಡೊಳ್ಳು ಹೊಟ್ಟೆ, ವಾಂತಿಆಗುವಿಕೆ, ಭೇದಿ

ಹಲವಾರು ಅಲರ್ಜಿನ್ ಗಳು ಬಹುತೇಕ ಗಾಳಿ ಮೂಲಕ ಉಂಟಾಗುತ್ತವೆ.ಅಂದರೆ ಧೂಳು ಮತ್ತು ಪರಾಗಸ್ಪರ್ಶ ಈ ಪ್ರಕರಣಗಳಲ್ಲಿ ಗಾಳಿ ಮೂಲಕ ಅಲರ್ಜಿಯಾಗಲು ಕಣ್ಣುಗಳು,ಮೂಗು ಮತ್ತು ಶ್ವಾಶಕೋಶಗಳು ಕಾರಣವಾಗುತ್ತವೆ. ಉದಾಹರಣೆಗೆ ಮೂಗಿನ ಹೊರಳೆಯ ಲೋಳೆಯ ಅಲರ್ಜಿಯಿಂದ ಏರಿಳಿತದ ಜ್ವರ,ಮೂಗಿನಲ್ಲಿ ಉರಿತ,ಸೀನುವಿಕೆ ಮತ್ತು ಕಣ್ಣು ಕೆಂಪಾಗುವಿಕೆಯು ಇದರ ಲಕ್ಷಣಗಳೆನಿಸಿವೆ. ಶ್ವಾಶೋಚ್ಚಾಸದ ಮೂಲಕ ಉಂಟಾದ ಅಲರ್ಜಿಗಳು ಅಸ್ತಮಾದ ಲಕ್ಷಣಕ್ಕೆ ಕಾರಣವಾಉತ್ತವೆ,ಬ್ರಾಂಕೊ ಕನ್ ಸ್ಟ್ರಿಕ್ಸನ್ ನಲ್ಲಿ ಗಾಳಿ ಹೋಗುವ ದಾರಿಯನ್ನು ಸಂಕುಚಿತಗೊಳ್ಳಿಸುತ್ತದೆ.ಇದರಿಂದಾಗಿ ಮೂಗಿನ ಲೋಳೆ ಅಥವಾ ಸಿಂಬುಳ ಪ್ರಮಾಣ ಶ್ವಾಶನಾಳದಲ್ಲಿ ಹೆಚ್ಚಾಗುತ್ತದೆ.ಇದರಿ೬ದ ಉಸುರಾಟಕ್ಕೆ ತೊಂದರೆಯಾಗಿ ಭಾರದ ಅನುಭವ,ಕೆಮ್ಮು ಮತ್ತು ಸೀನುವಿಕೆಯು ಪ್ರಮುಖ ಪಾತ್ರವಹಿಸುತ್ತದೆ. ಇವುಗಳಿಂದಲ್ಲದೇ ಇನ್ನು ಕೆಲವು ಇವುಗಳನ್ನು ಸುತ್ತುವರೆದ ಬೇರೆ ಬೇರೆ ಅಲರ್ಜಿಗಳಿವೆ.ಅವು ಬರುವುದು;ಆಹಾರಗಳು,ಕೀಟಗಳ ಕಡಿತ,ಮತ್ತು ಪ್ರತ್ರಿಕ್ರಿಯೆಗಳು,ಔಷಧೋಪಚಾರಗಳು ಅಂದರೆ ಆಸ್ಪಿರಿಯನ್ ಮತ್ತು ಎಂಟಿಬಯೊಟಿಕ್ ಗಳು ಅಂದರೆ ಪೆನ್ಸಿಲಿಯನ.ಇತ್ಯಾದಿ.ಆಹಾರ ಅಲರ್ಜಿಯ ಉದಾಹರಣೆಗಳು:ಹೊಟ್ಟೆ ನೋವು,ಹೊಟ್ಟೆ ಊದಿಕೊಳ್ಳುವಿಕೆ,ವಾಂತಿಯಾಗುವಿಕೆ,ಬೇಧಿ,ನವೆತದ ಚರ್ಮ ಮತ್ತು ಚರ್ಮದ ಊತ ಅಲರ್ಜಿ ಸಂದರ್ಭದಲ್ಲಿ ಉಂಟಾಗಿದೆ. ಆಹಾರದ ಅಲರ್ಜಿಯಿಂದ ಉಸಿರಾಟದ ತೊಂದರೆ(ಆಸ್ತಮಾ)ಪ್ರರ್ತಿಕ್ರಿಯೆಗಳು ಅಥವಾ ಮೂಗಿನ ಲೋಳೆ ಪದರಿನ ಉರಿಊತದ ಪರಿಣಾಮಗಳು ಉಂಟಾಗುವದಿಲ್ಲ. ಕೀಟಗಳ ಕಡಿತಗಳು,ಆಂಟಿಬಯೊಟಿಕ್ಸ್ ,ಮತ್ತು ಕೆಲವು ಔಷಧಗಳು ಅಲರ್ಜಿಕ್ ಪ್ರತಿಕ್ರಿಯೆಗಳನ್ನು ತೋರುತ್ತವೆ.ಉದಾಹರಣೆಗೆ:ಅನಿಫಿಲ್ಯಾಕ್ಸಿಸ; ಹಲವಾರು ಅಂಗಗಳಿಗೆ ಇದು ಹಾನಿಕಾರಕವಾಗಬಹುದು.ಅಂದರೆ ಜೀರ್ಣಾಂಗ ವ್ಯವಸ್ಥೆ,ಉಸಿರಾಟದ ವ್ಯವಸ್ಥೆ,ಮತ್ತು ರಕ್ತಪರಿಚಲನೆ ವ್ಯವಸ್ಥೆ ಇದರಿಂದ ವ್ಯತ್ಯಯಕ್ಕೊಳಗಾಗಬಹುದಾಗಿದೆ. ಈ ಅಲರ್ಜಿಗಳು ಗಂಭೀರತೆಯ ಮೇಲೆ ಬೇರೆ ಬೇರೆ ಪರಿಣಾಮಗಳನ್ನು ಬೀರುತ್ತವೆ.ಚರ್ಮದ ಮೇಲಿನ ಪ್ರತಿಕ್ರಿಯೆಗಳು,ಬ್ರಾಂಕೊಕನ್ ಸ್ಟ್ರಿಕ್ಸನ್ಸ್ (ಆಸ್ತಮಾ ಲಕ್ಷಣ)ಎಡೆಮಾ,ಹೈಪೊಟೆನ್ಸನ್ ,ಕೋಮಾ ಮತ್ತು ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು. ಇಂತಹ ದುಷ್ಪರಿಣಾಮವು ಹಠಾತ್ ಆಗಿ ಕಾಣಿಸಬಹುದುಇ ಇಲ್ಲವೇ ಇದರ ಪರಿಣಾಮ ಕೊಂಚ ವಿಳಂಬವಾಗಬಹುದು. ಈ ಪ್ರಕಾರದ ಗಂಭೀರ ಅಲರ್ಜಿಯು ಚುಚ್ಚುಮದ್ದುಗಳನ್ನು ಹಾಕಿಸಿದಾಗ ಕಡಿಮೆಯಾಗಬಹುದು.ಎಪಿನೆಫ್ರಿನ್ ಇಲ್ಲವೆ ಎಪಿ ಪೆನ್ ಅಥವಾ ಟ್ವಿಂಜೆಕ್ಟ್ ಅಟೊ ಇಂ&ಜೆಕ್ಟರ್ ನ್ನು ಬಳಸಲಾಗುತ್ತದೆ. ಅನಾಫಿಲ್ಯಾಕ್ಸಿಸ್ ನ ಸ್ವಭಾವವೆಂದರೆ ಪ್ರತಿಕ್ರಿಯೆಯು ಕಡಿಮೆಯಾದಂತೆ ಅನಿಸಿದರೂ ಇದು ಸುಧೀರ್ಘ ಕಾಲದ ವರೆಗೆ ಮುಂದುವರೆಯಬಹುದು. ಚರ್ಮದೊಂದಿಗೆ ಸಂಪರ್ಕಕ್ಕೆ ಬರುವ ಲ್ಯಾಟೆಕ್ಸ್ ನಂತಹವುಗಳು ಸಹ ಅಲರ್ಜಿಕ್ ಪ್ರತಿಕ್ರಿಯೆಗೆ ಸಾಮಾನ್ಯ ಕಾರಣಗಳೆನಿಸಿವೆ.ಇವುಗಳನ್ನು ಸೋಂಕು ಚರ್ಮರೋಗಗಳು ಅಥವಾ ಎಸ್ಜಿಮಾ ಎನ್ನುತ್ತಾರೆ. ಚರ್ಮದ ಅಲರ್ಜಿಗಳು ಮೇಲಿಂದ ಮೇಲೆ ದದ್ದುಗಳು ಅಥವಾ ಊತ ಮತ್ತು ಉರಿಯನ್ನು ಉಂಟು ಮಾಡುತ್ತವೆ.ಇದನ್ನು "ಸರ್ಪ ಸುತ್ತು ಮತ್ತು ವಿಪರೀತ"ಇವು ಚರ್ಮದ ಪ್ರತಿರೋಧದ ಕ್ರಿಯೆಗಳನ್ನು ವ್ಯಕ್ತಪಡಿಸುತ್ತದೆ.

ಕಾರಣ

ಅಲರ್ಜಿಯ ಮುಖ್ಯ ಕಾರಣಗಳು ಮತ್ತು ಅಪಾಯಗಳನ್ನು ಎರಡು ವಿಧದಲ್ಲಿ ವಿಭಾಗಿಸಬಹುದು:ಹೊಸ್ಟ್ (ಆಂತರಿಕ) ಮತ್ತು ವಾತಾವರಣದ ಅಂಶಗಳು.. ಆಂತರಿಕ ಕಾರಣಗಳೆಂದರೆ ಅನುವಂಶೀಯತೆ,ಲಿಂಗವೈವಿಧ್ಯ,ಜನಾಂಗ ಮತ್ತು ವಯಸ್ಸು ಅಂದರೆ ಇಲ್ಲಿ ವಂಶಪಾರಂಪರೆ ಒಮ್ಮೊಮ್ಮೆ ದೂರ ಉಳಿಯಬಹುದು ಇತ್ತೀಚಿನ ಅಲರ್ಜಿಕ್ ಏರುಪೇರುಗಳು ಹೆಚ್ಚಾಗುತ್ತಿದ್ದು ಇದರ್ಫಲ್ಲಿ ಕೇವಲ ವಂಶವಾಹಿನಿ ಮೂಲಕ ಉಂಟಾಗಿವೆ ಎಂದು ಹೇಳುವುದು ಸರಿಯಾದ ಕ್ರಮವಲ್ಲ. ಬಾಲ್ಯಾವಸ್ಥೆಯಲ್ಲಿವಾತಾವರಣದ ಮೂಲಕ ಸೋಂಕುರೋಗಗಳಿಗೆ ತುತ್ತಾಗುವ ನಾಲ್ಕು ಅಂಶಗಳೆಂದರೆ ವಾತಾವರಣ ಮಾಲಿನ್ಯ,ಅಲ್ರ್ಜಿನ್ ನ ಮಟ್ಟಗಳು ಮತ್ತು ಆಹಾರ ಪದ್ದತಿಯಲ್ಲಿನ ಬದಲಾವಣೆಗಳು ಪ್ರಮುಖ ಕಾರಣವಾಗುತ್ತವೆ.

ಅನುವಂಶೀಯ ಮೂಲಕಾರಣ

ಅಲರ್ಜಿಕ್ ರೋಗಗಳು ಸಾಮಾನ್ಯವಾಗಿ ಕೌಟುಂಬಿಕ ಕಾರಣಗಳಿಂದ ಕಾಣಿಸುವ ಸಾಧ್ಯತೆ ಇದೆ:ಒಂದೇ ರೂಪದ ಅವಳಿಗಳು ಒಂದೇ ತೆರನಾದ ಅಲರ್ಜಿಯ ಲಕ್ಷಣವನ್ನು ಸುಮಾರು ೭೦%ರಷ್ಟು ತೋರುತ್ತವೆ;ಇಂತಹದೇ ಅಲರ್ಜಿ ಸೋಂಕು ಒಂದೇ ತೆರನಲ್ಲದ ಮಕ್ಕಳಿಗೆ ಸುಮಾರು ೪೦%ರಷ್ಟು ಅಂಟುವ ಸಾಧ್ಯತೆ ಹೆಚ್ಚ್ಕು. ಅಲರ್ಜಿಕ್ ಪೋಷಕರು ಅಥವಾ ತಂದೆ-ತಾಯಿಗಳು ಅಲರ್ಜಿ ಇರುವ ಮಕ್ಕಳಿಗೆ ಜನ್ಮ ಕೊಡುವ ಸಾಧ್ಯತೆ ಇದೆ.ಅಂತವರಲ್ಲಿ ಅಲರ್ಜಿಯಿಲ್ಲದವರಿಗಿಂತ ತೀವ್ರ ಪ್ರಮಾಣದಲ್ಲಿ ಈ ಸೋಂಕು ಬರುವ ಸಂಭವ ಹೆಚ್ಚಾಗಿರುತ್ತದೆ. ಆದರೆ ಕೆಲವು ಅಲರ್ಜಿಗಳು ವಂಶವಾಹಿನಿಗಳಿಂದ ಬಂದರೂ ಅವುಗಳಲ್ಲಿ ಉಳಿಯುವ ಸ್ಥಿರತೆ ಕಡಿಮೆ ಇರುವುದು.ಇಲ್ಲಿ ತಂದೆ-ತಾಯಿಗಳಿಗೆ ಬಟಾಣಿ ಕಾಳುಗಳ ಅಲರ್ಜಿ ಇದ್ದರೆ ಮಕ್ಕಳಿಗೆ ಯಾವದೇ ಒಂದು ಸಸ್ಯದ ಬಗ್ಗೆ ಅಲರ್ಜಿ ಇರುವುದು. ಆದರೆ ಅಲರ್ಜಿಗಳು ಯಾವಾಗಲೂ ಅನುವಂಶೀಯತೆಯಿಂದಲೇ ಬೆಳವಣಿಗೆ ಹೊಂದುವದಿಲ್ಲ.ಇವುಗಳು ಅನಿಯಮಿತ ರೋಗನಿರೋಧಕ ಶಕ್ತಿಯಿಂದಾಗಿ ಅಲರ್ಜಿಗಳು ಕಂಡುಬರುತ್ತದೆ.ಇಲ್ಲಿ ವಿಶೇಷ ಅಲರ್ಜೆನ್ ಕಾಣಿಸುವುದಿಲ್ಲ. ಅಲರ್ಜಿಕ್ ಸಂವೇದನೆಯ ಅಪಾಯವು ಇಲ್ಲಿ ಕಂಡು ಬರುತ್ತದೆ.ಅಲರ್ಜಿಯು ಮಕ್ಕಳು ಮತ್ತು ವಯಸ್ಕರಿಗೆ ಅಧಿಕ ಪ್ರಮಾಣದಲ್ಲಿ ಕಾಣುತ್ತದೆ. ವಿಭಿನ್ನ ಅಧ್ಯಯನಗಳು IgE ಮಟ್ಟವು ಮಕ್ಕಳು ಹಾಗು ಸುಮಾರು ೧೦-೩೦ವರ್ಷದವರೆಗಿನ ವ್ಯಕ್ತಿಗಳು ಅಲರ್ಜಿ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಏರಿಳಿತದ ಜ್ವರ ಅದರ ತಾಪಮಾನವು ಮಕ್ಕಳಲ್ಲಿ ಅತ್ಯುಗ್ರವಾಗಿ ಹೆಚ್ಚಾಗುತ್ತದೆ.ಅಲ್ಲದೇ ೦ವರ್ಷದೊಳಗಿನ ಮಕ್ಕಳಲ್ಲಿ ಆಸ್ತಮಾ ಕಾಯಿಲೆಯು ಬೆಳೆಯುವ ಅಪಾಯವೇ ಹೆಚ್ಚು. ಅಲರ್ಜಿ ಪ್ರಮಾಣವು ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಹೆಚ್ಚು ಕಂಡು ಬರುತ್ತದೆ,ಗಂಡು ಮಕ್ಕಳು ಆಸ್ತಮಾ ರೋಗಕ್ಕೆ ತುತ್ತಾಗುತ್ತಾರೆ.ಇಲ್ಲಿ ಹೆಣ್ಣು ಮಕ್ಕಳು ಆಸ್ತಮಾಕೆ ತುತ್ತಾಗುವುದು ಕಡಿಮೆ. ಲಿಂಗ ಭೇದದ ವ್ಯತ್ಯಾಸವು ವಯಸ್ಕತೆಯ ಪ್ರತಿಶತಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಆದರೆ ಸಾಮುದಾಯಿಕ ಜನಾಂಗದ ಅಂಶಗಳು ಅಲರ್ಜಿಯ ಉಗಮಕ್ಕೆ ಕಾರಣವಾದರೂ ಆಯಾ ಜನಸಮೂಹವು ಬೆಳೆಯುವ ವಾತಾವರಣದ ಮೇಲೆ ಸೋಂಕಿನ ಪ್ರಮಾಣ ನಿಗದಿಯಾಗುತ್ತದೆ.ಒಂದು ಪರಿಸರದಿಂದ ಇನ್ನೊಂದಕ್ಕೆ ವಲಸೆ ಹೋಗುವ ಅಥವಾ ಬರುವ ಕಾರಣಕ್ಕೂ ಅಲರ್ಜಿಗಳ ಅಪಾಯವಿರುತ್ತದೆ. ಇದರಲ್ಲಿ ಕುತೂಹಲಕಾರಿ ಅಂಶವೆಂದರೆ ಅಯಾ ಜನಾಂಗ ಅಥವಾ ಜನಸಮೂಹ ಜೀವಿಸುತ್ತಿರುವ ವಂಶವಾಹಿನಿಯ ಸ್ಥಳೀಯತೆಯನ್ನು ಬಹುವಾಗಿ ಅವಲಂಬಿಸಿರುತ್ತದೆ.ಬಹುಮುಖ್ಯವಾಗಿ ಯುರೊಪಿಯನ್ ,ಹಿಸ್ಪಾನಿಕ್ ,ಏಷ್ಯನ್ ಮತ್ತು ಆಫ್ರಿಕನ್ ಮೂಲದವರಲ್ಲಿ ಇಂಥ ಅಲರ್ಜಿಯ ಕಾಯಿಲೆ ಕಸಾಲೆಗಳು ಕಾಡುತ್ತವೆ.

ಆರೋಗ್ಯದ ಸೂತ್ರದ ಕಲ್ಪನೆಗಳು

ಆರೋಗ್ಯದ ಸೂತ್ರದ ಕಲ್ಪನೆಗಳ ಪ್ರಕಾರ ಡೇವಿಡ್ ಪಿ.ಸ್ಟ್ರಾಚನ್ ಅವರ ಹೇಳಿಕೆಯಂತೆ ಅಲರ್ಜಿಗಳು ಕಾಯಿಲೆಗಳು ಅನಿಯಮಿತ ಮತ್ತು ಅಶಿಸ್ತಿನ ಆರೋಗ್ಯದ ನಿಯಮಗಳನ್ನು ಅನುಸರಿಸುವದರಿಂದ ಇದು ಉಲ್ಬಣಗೊಳ್ಳುವ ಸಾಧ್ಯತೆ ಇದೆ.ನಿರಪಾಯಕಾರಿ ಅಂಟಿಜೆನ್ ಗಳTH2 ನ ಕೃತಕ ರೋಗನಿರೋಧಕಗಳ ಮೂಲಕ ಅದರ ಪ್ರತಿಕ್ರಿಯೆಯನ್ನು ಸೂಸ್ಮವಾಗಿ ಗಮನಿಸಬಹುದು. ಹಲವಾರು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಉನ್ನತ ಮಟ್ಟದ TH1ರೋಗ ನಿರೋಧಕ ಜೊತೆಗೂಡಿ TH೨ ಔಷಧಿಯುಕ್ತ ನಿರೋಧಕದ ಪ್ರಮಾಣವನ್ನು ಬದಲಾಯಿಸಿಕೊಂಡು ದೇಹದ ರೋಗನಿರೋಧಕ ಶಕ್ತಿಗೆ ಪೂರಕವಾಗಿರುತ್ತದೆ. ಆರೋಗ್ಯ ಸೂತ್ರದ ವಿಧಾನವನ್ನು ಬಳಸಿ ಅಲರ್ಜಿಯ ನಿಯಂತ್ರಣವನ್ನು TH೧ ಮೂಲಕ ವ್ಯವಸ್ಥೆಯನ್ನು ಅಭಿವೃದ್ಧಿಯನ್ನು ಪರಿಶೀಲಿಸಲಾಗುತ್ತದೆ.ಇದು ಅಲರ್ಜಿಕ್ ಕಾಯಿಲೆಗೆ ತಿರುಗುವ ಸಾಧ್ಯತೆ ಇರುತ್ತದೆ.ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆ ರೂಪಿಸುತ್ತದೆ. ಇನ್ನಿತರ ಶಬ್ದಗಳಲ್ಲಿ ವರ್ಣಿಸುವುದಾದರೆ ಆರೋಗ್ಯವಂತ ವಾತಾವರಣದಲ್ಲಿ ವಾಸಿಸುವವರಿಗೆ ಸುಮಾರಾಗಿ ರೋಗನಿರೋಧಕ ಶಕ್ತಿಯನ್ನು ಕ್ರಿಯಾತ್ಮಕವಾಗಿರುತ್ತದೆ. ದೇಹವು ಹಲವು ರೋಗಗಳು ವೈರಸ್ ಗಳಿಂದ ದಾಳಿಗೀಡಾಗುತ್ತದೆ.ಕೆಲವೊಮ್ಮೆ ಔಷಧೋಪಚಾರಗಳು ಕೂಡಾ ಎಂದೂ ಅಲರ್ಜಿಕ್ ಕಾಯಿಲೆಗಳಿಗೆ ಮೂಲ ಕಾರಣವಾಗುತ್ತದೆ.ಸಾಮಾನ್ಯವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಈ ಆರೋಗ್ಯ ಸೂತ್ರಗಳು ಬಹುಮುಖ್ಯವಾಗಿ ಏರಿಳಿತ ಜ್ವರ ಮತ್ತು ಎಸ್ಜಿಮಾ ಮೊದಲಾದವುಗಳು ಅಲರ್ಜಿಕ್ ಮೂಲದಿಂದ ಹುಟ್ಟಿಕೊಂಡು ಬಹಳಷ್ಟು ಅಡ್ಡ ಪರಿಣಾಮಗಳಿಗೆ ಬಲಿಯಾಗುತ್ತದೆ.ಇವುಗಳು ಮಕ್ಕಳಲ್ಲಿ ಬಹಳಷ್ಟು ಸಾಮಾನ್ಯವಾಗಿ ಕಡಿಮೆ ಪರಿಣಾಮವನ್ನು ಉಂಟು ಮಾಡಬಹುದು.ದೊಡ್ಡ ಕುಟುಂಬದ ವಂಶವಾಹಿನಿಯ ಕಾರಣದಿಂದಲೂ ಹೆಚ್ಚು ಸೋಂಕು ರೋಗಗಳಿಗೆ ಕಾರಣವಾಗುತ್ತದೆ.ಅವರ ಮಕ್ಕಳು ಮತು ಪೀಳಿಗೆಯು ಅದಕ್ಕಾಗಿ ಅಧಿಕ ಕ್ರಮದ ಅಗತ್ಯವೂ ಇದೆ. ಆರೋಗ್ಯ ಸೂತ್ರದ ಕಲ್ಪನೆಯನ್ನು ಹಲವಾರು ರೋಗನಿರೋಧಕ ಶಾಸ್ತ್ರಜ್ಞರು ಮತ್ತು ಸೋಂಕುರೋಗ ನಿವಾರಣಾ ತಜ್ಞರು ಸಂಶೋಧನೆ ಮಾಡಿ ಅಲರ್ಜಿಯಾಸ್ಥವ್ಯಸ್ತತೆಗಳ ಬಗ್ಗೆ ತೀವ್ರವಾದ ಫಲಿತಾಂಶಗಳಿಗೆ ಕಾರಣರಾಗಿದ್ದಾರೆ,ಇದಕ್ಕಾಗಿ ಸಂಬಂಧಪಟ್ಟಂತೆ ಚೌಕಟ್ಟನ್ನುರಚಿಸಿದ್ದಾರೆ. ಸಾಮಾನ್ಯವಾಗಿ ಕೈಗಾರಿಕರಣದ ನಂತರ ಅಲರ್ಜಿಯ ಪಿಡುಗು ಹೆಚ್ಚಾಗುತ್ತಾ ಬಂತು;ಅಲ್ಲದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇದು ವ್ಯಾಪಕವಾಗಿ ಕಾಣಿಸಿತು. ಆರೋಗ್ಯದ ಸೂತ್ರದ ವ್ಯವಸ್ಥೆಯು ಯಾವಾಗಲೂ ಬ್ಯಾಕ್ಟೀರಿಯಾದ ಸಂಜ್ಞೆಯ ಮೂಲಕ ಮತ್ತು ಪ್ಯಾರಾಸೈಟ್ ಗಳು ದೇಹದ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಇದರೊಂದಿಗೆ ಸೋಂಕಿನ ರೋಗಗಳ ತಡೆಗಟ್ಟಲು ನೂತನ ಆರೋಗ್ಯದ ಸೂತ್ರಗಳು ನೆರವಾಗುತ್ತವೆ. ಸೋಂಕು ರೋಗಗಳ ಬಗ್ಗೆ ದೊರೆತ ಅಂಕಿಅಂಶಗಳ ಬೆಂಬಲದಿಂದ ಆರೋಗ್ಯ ಸೂತ್ರಗಳ ಅಳವಡಿಕೆ ಅಧ್ಯಯನದ ಪ್ರಕಾರ ವಿವಿಧ ರೋಗನಿರೋಧಕ ಶಕ್ತಿ ದುರ್ಬಲಗೊಳಿಸುವ ಮತ್ತು ಸ್ವಯಂ ರೋಗನಿರೋಧಕ ಶಕ್ತಿಯ ಕಡಿಮೆ ಗಳಿಸುವ ಕಾಯಿಲೆಗಳು ಕೈಗಾರಿಕರಣದ ದೇಶಗಳಲ್ಲಿ ಹೋಲಿಸಿದರೆ ಪ್ರಮಾಣ ವಿವಿಧ ರೋಗಗಳು ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳಲ್ಲಿ ಕಡಿಮೆ.ಆದರೆ ಔದ್ಯೋಗಿಕ ಕ್ರಾಂತಿಯ ಸಂದರ್ಭದಲ್ಲಿ ಅಲರ್ಜಿ ರೋಗಗಳಿಗೆ ಹೆಚ್ಚು ಅವಕಾಶವನ್ನು ನೀಡುತ್ತವೆ.ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಲರ್ಜಿಯು ಇಂದು ವ್ಯಾಪಕವಾಗಿ ಹರಡುತ್ತದೆ. ತೃತೀಯ ಜಗತ್ತಿನ ದೇಶಗಳು ಬೆಳೆದಂತೆ ಅಲ್ಲದೇ ಶ್ರೀಮಂತವಾದಂತೆ ರೋಗನಿರೋಧಕ ಶಕ್ತಿಗಳ ಕಡಿಮೆ ಆಗುವ ಸಂಬಂಧದ ರೋಗಗಳು ಹೆಚ್ಚಾಗುತ್ತದೆ. ಬದುಕಿನಲ್ಲಿ ಮೊದಲ ಬಾರಿಗೆ ಆಂಟಿಬಯೊಟಿಕ್ ಗಳನ್ನು ಬಳಸಿದಾಗ ಆತ ಆಸ್ತಮಾ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಆಂಟಿಬ್ಯಾಕ್ಟೀರಿಯಲ್ ಸ್ವಚ್ಚಗೊಳಿಸುವ ಉತ್ಪನ್ನಗಳು ಅತಿ ಹೆಚ್ಚಿನ ಆಸ್ತಮಾ ಪ್ರಕರಣಗಳಿಗೆ ದೊಡ್ಡ ದಾರಿಯಾಗುತ್ತದೆ.ಸೀಜರಿಯನ್ ಮೂಲಕ ಜನ್ಮ ತಾಳುವ ಮಗು ಕೂಡಾ ಆಸ್ತಮಾಕ್ಕೆ ಬಲಿಯಾಗುವ ಸಂದರ್ಭಗಳೇ ಹೆಚ್ಚು.

ಇನ್ನುಳಿದ ಪರಿಸರದ ಅಂಶಗಳು

ಅಲರ್ಜಿಯಿಂದ ಪೀಡಿತವಾಗಿರುವ ಅಂತಾರಾಷ್ಟ್ರೀಯ ವಲಯದ ದೇಶಗಳಲ್ಲಿ ವೈಯಕ್ತಿಕ ಬದುಕಿನ ಅಲರ್ಜಿ ರೋಗಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ.ಆಯಾ ಪ್ರಾದೇಶಿಕ ಸ್ಥಳದಲ್ಲಿ ಜನಾಂಗವು ಅನೋಭವಿಸುವ ಒತ್ತಡಗಳಿಗೆ ಇದು ಅನುಗುಣವಾಗಿರುತ್ತದೆ. ಕೈಗಾರಿಕರಣದ ದೇಶಗಳಲ್ಲಿ ಅಲರ್ಜಿಕ್ ಕಾಯಿಲೆಗಳು ಉಳಿದ ಅಂದರೆ ಸಾಂಪ್ರದಾಯಿಕ ಮತ್ತು ಕೃಷಿ ಆಧಾರಿತ ದೇಶಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಕಾಣಬರುತ್ತವೆ.ಆಧುನಿಕ ಕೈಗಾರಿಕರಣವು ಸುಧಾರಣೆಯೊಂದಿಗೆ ಅಲರ್ಜಿಗೆ ಸಂಬಂಧಿಸಿದ ರೋಗಗಳನ್ನೂ ನಗರವಾಸಿಗಳಿಗೆ ಮತ್ತು ಗ್ರಾಮೀಣರಿಗೆ ಅಂಟಿಸಿತು. ಇದರಿಂದಾಗಿ ಎರಡೂ ಕಡೆ ವಾಸಿಸುವ ಜನಸಂಖ್ಯೆಗೆ ಭಿನ್ನಾಭಿಪ್ರಾಯವನ್ನು ಹೊತ್ತು ತಂತು. ಆರಂಭಿಕ ಬದುಕಿನಲ್ಲಿ ಅಲರ್ಜಿನ್ ಗೆ ಒಡ್ಡಿಕೊಳ್ಳುವುದರಿಂದ ಅಪಾಯಕಾರಿ ಅಂಶಗಳಾಗುವ ಸಾಧ್ಯತೆ ಇದೆ. ಮೈಕ್ರೊಆರ್ಗನ್ನಿಸಮ್ ಗಳಿಗೆ ಒಡ್ಡಿಕೊಳ್ಳುವುದರಿಂದ ಅಟೊಪಿಕ್ ಅಲರ್ಜಿಯು ಸಾಮಾನ್ಯವಾಗಿ ಹರಡುವುದನ್ನು ಹೆಚ್ಚಾಗಿಸುತ್ತದೆ. ಎಂಡೊಟಾಕ್ಸಿನ್ ಗೆ ಒಡ್ಡುವುದು ಉರಿತದ ಸೈಟೊಕೈನ್ ಗಳನ್ನು ಬಿಡುಗಡೆಗಳಿಸುತ್ತದೆ.ಇದು TNF-α, IFNγ,ಗಳಂತಹ ಬಿಡುಗಡೆಯಾಗುತ್ತದೆ.ಇಂಟರ್ ಲ್ಯುಕಿನ್ 10 ಮತ್ತು ಇಂಟರ್ ಲ್ಯುಕಿನ್ 12 ಗಳನ್ನು ಬಿಳಿರಕ್ತಕಣಗಳೊಂದಿಗೆ ಲೆಕ್ಯುಸೈಟಸ್ ರಕ್ತದೊಳಗೆ ಪರಿಚಲನೆಯಾಗುತ್ತದೆ. ಮೈಕ್ರೊಬ್ ಗಳ ಸಂವೇದನೆಯ ಕೆಲವು ಪ್ರೊಟೀನ್ ಗಳು ಉದಾಹರಣೆಗೆ ಟಾಲ್ ಲೈಕ್ ರೆಸಿಪ್ಟರ್ ಗಳು ದೇಹದ ಕೋಶಗಳ ಮೇಲೆ ಮೇಲ್ಪದರಲ್ಲಿ ಕಂಡು ಬರುತ್ತದೆ.ಹಲವಾರು ಬಾರಿ ಪ್ರಕ್ರಿಯೆಯು ನಡೆಯುವುದು ಸಾಮಾನ್ಯವಾಗಿರುತ್ತದೆ. ಕೆಲವು ಅಪಾಯಕಾರಿ ಜೀವಿಗಳು ಮತ್ತು ಪರಾವಲಂಬಿ ಜೀವಿಗಳು ಶುದ್ಧೀಕರಿಸದ ಕುಡಿಯುವ ನೀರಿನಲ್ಲಿ ವಾಸಿಸುತ್ತವೆ.ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ಕ್ಲೊರಿನೇಶನ್ ಮತ್ತು ಶುದ್ಧೀಕರಣದ ಸಮಯದಲ್ಲಿ ನೀರು ಪೂರೈಕೆದಾರರು ಇದರ ಬಗ್ಗೆ ಗಮನ ಹರಿಸುತ್ತಾರೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಕೆಲವು ಸಾಮಾನ್ಯ ಪರಾವಲಂಬಿ ಜೀವಿಗಳು,ಅಂದರೆ ದೊಡ್ಡಕರುಳಿನಲ್ಲಿರುವ ಜಂತು ಹುಳುಗಳು (ಉದಾಹರಣೆಗೆ ಕೊಕ್ಕೆ ಹುಳುಗಳು)ಕೆಲವು ಅಜ್ಞಾತ ರಾಸಾಯನಿಕಗಳನ್ನೊಳಗೊಂಡ ಚರಂಡಿ ನೀರು(ರಕ್ತ ಪರಿಚಲನಾವ್ಯೂಹ)ಇದು ರೋಗ ನಿರೋಧಕ ಶಕ್ತಿಯನ್ನು ಕುಸಿಯುವಂತೆ ಮಾಡುತ್ತದೆ.ಇದರಿಂದ ದೇಹದ ಮೇಲೆ ಪರಾವಲಂಬಿ ಜೀವಿಗಳು ಆಕ್ರಮಣ ನಡೆಸಿದಾಗ ರೋಗ ನಿರೋಧಕ ಶಕ್ತಿಯ ಅಂಗವ್ಯೂಹವು ಸಕಾಲಕ್ಕೆ ಕಾರ್ಯಪ್ರವೃತ್ತವಾಗುತ್ತದೆ. ಇಂತಹ ಸಂಶೋಧನೆಗಳು ಆರೋಗ್ಯ ಸೂತ್ರದ ಅಳವಡಿಕೆಗೆ ಹೊಸ ವಿಚಾರವನ್ನು ಹೊರಹಾಕಿದವು.-ಇದು ಸಹ ಕ್ರಾಂತಿ ಅಥವಾ ಸಹಪ್ರಗತಿಗೆ ದಾರಿಯಾಯಿತು.ಮನುಷ್ಯ ಮತ್ತು ಆತನ ಪರಾವಲಂಬಿ ಜೀವಿಗಳ ಬಗ್ಗೆ ಅವುಗಳು ರೋಗನಿರೋಧಕ ಶಕ್ತಿಯ ಅಂಗ ರಚನೆಯ ಮೇಲೆ ಸರಿಯಾಗಿ ವರ್ತಿಸಲು ಸಾಧ್ಯವಾಗುತ್ತದೆ. ಇವುಗಳಲ್ಲದೇ ರೋಗ ನಿರೋಧಕ ವ್ಯವಸ್ಥೆ ಅಸಮತೋಲನವಾಗುತ್ತದೆ ಮತ್ತು ಅತಿ ಸಂವೇದನಾ ಶೀಲತೆಗಳು ಕಂಡು ಬರುತ್ತದೆ. ಪ್ರತ್ಯೇಕ ಸಂಶೋಧನೆಯೊಂದರ ಪ್ರಕಾರ ಹಸುಗೂಸುಗಳಲ್ಲಿನ ದೊಡ್ಡ ಕರುಳಿನ ಸಂಪೂರ್ಣ ಆಕಾರಗೊಳ್ಳದಿರುವುದು ಅಥವಾ ವಿಳಂಬವಾಗಿ ಬೆಳವಣಿಗೆ ಹೊಂದುವುದು ಅಲರ್ಜಿಗಳಿಗೆ ಮೂಲ ಕಾರಣವಾಗುತ್ತದೆ. ಆದಾಗ್ಯೂ ಈ ಸಂಶೋಧನೆಗೆ ಪೂರಕವಾಗಿ ಚೀನಾ ಮತ್ತು ಎಥಿಯೊಪಿಯಾದಲ್ಲಿ ನಡೆದ ಸಂಶೋಧನೆಗಳಲ್ಲಿ ಬಹುತೇಕ ಜನರಲ್ಲಿ ಅಲರ್ಜಿಗೆ ಕಾರಣವಾದದ್ದು ಅವರ ದೊಡ್ಡ ಕರುಳಿನಲ್ಲಿರುವ ಜಂತು ಹುಳಗಳೇ ಕಾರಣವಾಗಿದೆ. ಈ ಕರಳಿನ ಹುಳುಗಳನ್ನು ಸೂಕ್ತವಾಗಿ ಪತ್ತೆ ಹಚ್ಚಿ ಅದರ ಪರೀಕ್ಷೆಯನ್ನು ಕೆಲವು ಅಲರ್ಜಿಗಾಗಿ ಬಳಸಿಕೊಳ್ಳಲಾಯಿತು. ಇದರಲ್ಲಿ ಪಾರಾಸೈಟ್ ಅಥವಾ ಪರಾವಲಂಬಿ ಜೀವಿಗಳು ಅದರ ಅಧ್ಯಯನದ ಬಗ್ಗೆ ಸೂಕ್ತವಾಗಿ ಯಾವುದೇ ಪರಿಣಾಮಗಳು ಸಿಂಬೊಸಿಸ್ ರೊಪದಲ್ಲಿ ಕಂಡು ಬಂದಿರುವುದಲ್ಲ. ಹೆಚ್ಚಿನ ಮಾಹಿತಿಗಾಗಿ ಈ ವಿವರವನ್ನು ನೋಡಬಹುದು.ಅದೇ ಹೆಲ್ಮಿಂಥಿಕ್ ಥೆರಪಿ ಎನ್ನಲಾಗುತ್ತದೆ.

ರೋಗಶರೀರಶಾಸ್ತ್ರ

ಅಲರ್ಜಿಕ್ ರೋಗ ಶರೀರ ಶಾಸ್ತ್ರವು ಅದರ ಪ್ರತಿಕ್ರಿಯೆಯು ಎರಡು ಭಾಗಗಳು: ಮೊದಲ ಪ್ರತಿಕ್ರಿಯೆ ಎಂದರೆ ತೀಕ್ಷ್ಣ ಪ್ರತಿಕ್ರಿಯೆ ಅಂದರೆ ಅದು ನಿರ್ಧಿಷ್ಟ ಅಲರ್ಜಿನ್ ವಾತಾವರಣಕ್ಕೆ ಒಡ್ಡಿಕೊಳ್ಳುವುದರಿಂದ ಉಂಟಾಗುತ್ತದೆ. ಈ ಹಂತವು ಕಡಿಮೆ ಅಥವಾ ಹೆಚ್ಚಿನ ಪ್ರಗತಿಯನ್ನು "ವಿಳಂಬದ ಹಂತದ ಪ್ರತಿಕ್ರಿಯೆ"ಇದು ಅಲರ್ಜಿಯ ಪರಿಣಾಮವನ್ನು ದೀರ್ಘಕಾಲದ ವರೆಗೆ ತೋರದಿರುವದರಿಂದ ದೇಹದ ಅಂಗಾಂಶಗಳು ಹಾನಿಗೊಳಗಾಗುತ್ತವೆ.

ತೀಕ್ಷ್ಣ ಪ್ರತಿಕ್ರಿಯೆ

ಅಲರ್ಜಿ 
Degranulation process in allergy.1 - antigen; 2 - IgE antibody; 3 - FcεRI receptor; 4 - preformed mediators (histamine, proteases, chemokines, heparine); 5 - granules; 6 - mast cell; 7 - newly formed mediators (prostaglandins, leukotrienes, thromboxanes, PAF)

ಮೊದಲ ಹಂತದ ಅಲರ್ಜಿಯ ಲಕ್ಷಣಗಳಲ್ಲಿ ಪ್ರಕಾರ Iರ ಹೈಪರ್ ಸೆನ್ಸಿಟಿವಿಟಿಯು ಒಂದು ಅಲರ್ಜಿನ್ ನೊಂದಿಗೆ ಮುಖಾಮುಖಿಯಾಗುತ್ತದೆ.ಹೀಗೆ ಅದು ಮೊದಲ ಬಾರಿಗೆ ರೋಗ ನಿರೋಧಕ ಕೋಶದ [[THT2 ಲಿಂಫೊಸೈಟ್ ಪ್ರಕಾರಕ್ಕೆ ಕಾರಣವಾಗುತ್ತದೆ.ಇದು ಸೈಟೊಕಿನ್ ಉತ್ಪಾದಿಸುವ T ಕೋಶ ಗಳಿಗೆ ಮೂಲವಾಗುತ್ತದೆ.ಇದನ್ನೇ ವೈದ್ಯಕೀಯ ಕ್ಷೇತ್ರದಲ್ಲಿಇಂಟರ್ ಲ್ಯುಕಿನ್-4|THT2 ಲಿಂಫೊಸೈಟ್ ಪ್ರಕಾರಕ್ಕೆ ಕಾರಣವಾಗುತ್ತದೆ.ಇದು ಸೈಟೊಕಿನ್ ಉತ್ಪಾದಿಸುವ T ಕೋಶ ಗಳಿಗೆ ಮೂಲವಾಗುತ್ತದೆ.ಇದನ್ನೇ ವೈದ್ಯಕೀಯ ಕ್ಷೇತ್ರದಲ್ಲಿಇಂಟರ್ ಲ್ಯುಕಿನ್-4]] (IL-೪) ಎನ್ನುತ್ತಾರೆ. ಈ TH೨ ಕೋಶಗಳು ಇನ್ನುಳಿದ ಲಿಂಫೊಸೈಟ್ಸ್ ಗಳೊಂದಿಗೆ ಮುಖಾಮುಖಿಯಾಗುತ್ತದೆ;ಇದನ್ನೇB ಕೋಶ ಗಳು ಎನ್ನುತ್ತಾರೆ ಇವುಗಳು ಆಂಟಿಬೊಡೀಸ್ ನ್ನು ಉತ್ಪಾದಿಸಲು ಶಕ್ಯವಾಗುತ್ತದೆ. ಇಲ್ಲಿ ಪ್ರಕಾರ IL-೪,ನೆರವಿನೊಂದಿಗೆ ಕೆಲವು ವಿಶಿಷ್ಟ ಸಂಕೇತಗಳೊಂದಿಗೆ ದೊಡ್ಡ ಪ್ರಮಾಣದ B ಕೋಶಗಳನ್ನು ಉತ್ಪಾದಿಸಿ ಅದು ವಿಶೇಷ ಪ್ರಕಾರದ IgE ಎಂಬ ಆಂಟಿಬಾಡಿಯನ್ನು ಉತ್ಪಾದಿಸುತ್ತದೆ.ಇದೇ IgE ಮುಂದೆ ರಕ್ತದಲ್ಲಿ ಪರಿಚಲನಗೊಂಡು ರಹಸ್ಯವನ್ನು ಬಿಡುತ್ತದೆ.ಅಂದರೆ IgE ಯು ಪ್ರತ್ಯೇಕ ಕೋಶಗಳಿಗೆ ದಾರಿ ನೀಡುತ್ತದೆ.(ಇದು ಒಂದು ರೀತಿಯFc ರೆಸಿಪ್ಟರ್ FcεRI)ಆಗಿ ಪರಿವರ್ತಿತವಾಗುತ್ತದೆ.ಹೀಗೆ ಇವುಗಳನ್ನು ಮಾಸ್ತ್ ಕೋಶಗಳು ಮತ್ತು ಬಾಸೊಫಿಲ್ ಗಳು ಎಂದು ಹೇಳಲಾಗುತ್ತದೆ.ಇವೆರಡೂ ತೀಕ್ಷ್ಣ ಉರಿತದ ಸಂವೇದನೆಗಳಿಗೆ ಪ್ರತಿಕ್ರಿಯೆ ಎನಿಸುತ್ತದೆ. IgE-ಲೇಪಿತ ಕೋಶಗಳು ಈ ಹಂತದಲ್ಲಿ ಅಲರ್ಜಿನ್ ಗೆ ಹೆಚ್ಚು ಸಂವೇದಕಗಳಾಗುತ್ತದೆ. ನಂತರ ಇದೇ ಅಲರ್ಜಿನ್ ಉಂಟಾದಾಗ ಈ ಅಲರ್ಜಿನ್ ನು IgE ಕಣಗಳನ್ನು ಒಂದೊಕ್ಕೊಂದು ಬೆಸೆಯುತ್ತವೆ.ಅಲ್ಲದೇ ಮಾಸ್ತ್ ಕೋಶಗಳು ಅಥವಾ ಬಾಸೊಫಿಲ್ಸ್ ಗಳು ಇಲ್ಲಿ ಕಾರ್ಯ ನಿರ್ವಹಿಸುತ್ತವೆ. ಇದರಲ್ಲಿನ ತದ್ವಿರುದ್ದ IgE ಮತ್ತು Fc ರೆಸಿಪ್ಟರ್ ಗಳು ಒಂದಕ್ಕಿಂತ ಹೆಚ್ಚುIgE ಗಳನ್ನು ಒಂದಕ್ಕೊಂದು ಸಂಬಂಧ ಬೆಸೆಯುತ್ತವೆ.ಇದರಲ್ಲಿ ಅಲರ್ಜಿನ್ ಕಣಗಳು ತಮ್ಮನ್ನು ಸಕ್ರಿಯಗೊಳಿಸುತ್ತವೆ. ಸಕ್ರಿಯಗೊಂಡ ಮಾಸ್ತ ಕೋಶಗಳು ಮತ್ತು ಬಾಸೊಫಿಲ್ ಕೋಶಗಳು ಡಿಗ್ರ್ಯಾನ್ಯುಲೇಶನ್ ಎಂಬ ಸಂಸ್ಕರಣಕ್ಕೆ ಒಳಗಾಗುತ್ತದೆ.ಈ ಸಂದರ್ಭದಲ್ಲಿ ಅಲ್ಲಿ ಹಿಸ್ಟಾಮೈನ್ಸ್ ಮತ್ತು ಇನ್ನಿತರ ಉರಿತದ ರಾಸಾಯನಿಕ ಬದಲಾವಣೆಗಳು ಉಂಟಾಗುತ್ತವೆ.ಅವೆಂದರೆ ಸೈಟೊಕೈನ್ ಗಳು ಇಂಟರ್ ಲುಕಿನ್ ಗಳು ಲ್ಯುಕೊಟ್ರಿನ್ಸ್ ಮತ್ತು ಪ್ರೊಸ್ಟೊಗ್ಲಾಂಡಿ,(ದೊಡ್ಡ ಗ್ರಂಥಿಕೋಶ)ಅದು ಗ್ರ್ಯಾನ್ಯುಲೇರ್ ಗಳಿಂದ ಸುತ್ತಮುತ್ತಲಿನ ಅಂಗಾಂಶಗಳಲ್ಲಿ ಇದು ವಿಧಾಯಕ ಪರಿಣಾಮಗಳನ್ನು ತರುತ್ತದೆ.ಉದಾಹರಣೆಗೆ ವ್ಯಾಸೊಡಿಲೇಶನ್ ,ಮುಕೊಸ್ ನ ಪ್ರತ್ಯೇಕತೆಯು ನರಗಳ ಪಲ್ಲಟಕ್ಕೆ ಮತ್ತು ಮೆದು ಸ್ನಾಯುಗಳ ಸಂಕುಚಿತವನ್ನುಂಟು ಮಾಡುತ್ತದೆ. ಇದರ ಪರಿಣಾಮವಾಗಿ ಮೂಗು ಸೋರುವಿಕೆ,ನವೆಯಾಗುವಿಕೆ,ತೀವ್ರ ಊತ ಮತ್ತು ಸೂಕ್ಷ್ಮ ಸಂವೇದನೆಗಳು ಉಂಟಾಗುತ್ತವೆ. ಆಯಾ ವ್ಯಕ್ತಿಗಳನ್ನು ಅನುಸರಿಸಿ ಅಲರ್ಜಿಯ ಪರಿಣಾಮಗಳು ಅದರ ಪ್ರಾರಂಭ,ಲಕ್ಷಣಗಳು (ಅಂದರೆ ವರ್ಗೀಕೃತ ಸೂಕ್ಷ್ಮ ಸಂವೇದನೆಗಳು),ಅಥವಾ ಅಲ್ಲಿನ ದೇಹದ ರಚನೆ ಹಾಗು ಅದರ ಶ್ವಾಶೋಚ್ಛಾಸದ ತೊಂದರೆಗಳು ಆಸ್ತಮಾಕ್ಕೆ ದಾರಿ ಮಾಡಬಹುದು ಇದು ಅಲ್ಲಿನೇ ಡರ್ಮಿಸ್ (ಚರ್ಮದ ಸೋಂಕು) ಇತ್ಯಾದಿ.

ನಂತರದ ಹಂತದ ಪ್ರತಿಕ್ರಿಯೆ

ರಾಸಾಯನಿಕ ಮಧ್ಯವರ್ತಿಗಳ ಉಂಟಾಗುವ ತೀವ್ರವಾದ ಪ್ರತಿಕ್ರಿಯೆಯು ಕಡಿಮೆಯಾಗಿ ನಂತರದ ಪ್ರತಿಕ್ರಿಯೆಯಲ್ಲಿ ಮತ್ತೊಮ್ಮೆ ಉಂಟಾಗುವ ಸಾಧ್ಯತೆ ಇದೆ. ಇದು ಇನ್ನಿತರ ಅಂಶಗಳ ವಲಸೆಯಿಂದ ಹೀಗಾಗುತ್ತದೆ.ಲೆಕೊಸೈಟ್ ಗಳು ಉದಾಹರಣೆಗಳು ನ್ಯುಟ್ರೊಫಿಲ್ ಗಳು,ಲಿಂಫಿಸೈಟ್ ಗಳು ,ಎಸಿನೊಫಿಲ್ ಗಳು ಮತ್ತು ಮ್ಯಾಕ್ರೊಫೇಜ್ ಗಳು ಮೊದಲ ಹಂತದಲ್ಲಿ ಗೋಚರಿಸುತ್ತವೆ. ಈ ಪ್ರತಿಕ್ರಿಯೆಯು ಸಾಮಾನ್ಯವಾಗಿ ಮೂಲದ ಪ್ರತಿಕ್ರಿಯೆ ನಂತರದ೨-೨೪ ಘಂಟೆಗಳಲ್ಲಿ ಕಾಣುತ್ತದೆ. ಮಾಸ್ತ್ ಕೋಶಗಳಿಂದಾದ ಸೈಟೊಕಿನ್ಸ್ ಕೂಡಾ ಸುದೀರ್ಘವಾದ ಪರಿಣಾಮಗಳಿಗೆ ಪೂರಕವಾಗಿ ಕೆಲಸ ಮಾದಬಹುದು. ವಿಳಂಬವಾಗಿ ಕಾಣಿಸಿಕೊಳ್ಳುವ ಲಕ್ಷಣಗಳು ಆಸ್ತಮಾಗಿಂತ ಕೊಂಚ ಭಿನ್ನವಾಗಿರುತ್ತವೆ.ಇಲ್ಲಿ ಅಲರ್ಜಿಕ್ ಪ್ರತಿಕ್ರಿಯೆಗಳಿಗೆ ತಮ್ಮ ಸಕ್ರಿಯತೆಯನ್ನು ತೋರಿ ಎಸಿನೊಫಿಲ್ಸ್ ಗಳ ಬಿಡುಗಡೆಯಲ್ಲದೇ ಅವುಗಳ TH೨ ಕೋಶಗಳ ಚಟುವಟಿಕೆಗೆ ಕಾರಣವಾಗುತ್ತವೆ..

ರೋಗನಿರ್ಣಯ

ಅಲರ್ಜಿ 
ಲ್ಯಾಕ್ ಲ್ಯಾಂಡ್ ಏರ್ ಫೊರ್ಸ್ ಪ್ರಧಾನ ಕಚೇರಿಯಲ್ಲಿ ಅಲರ್ಜಿ ತಪಾಸಣಾ ಯಂತ್ರದಿಂದ ರೋಗ ನಿರೋಧಕ ಶಕ್ತಿಯ ಪರೀಕ್ಷೆ

ಅಲರ್ಜಿಕ್ ಕಾಯಿಲೆಗಳ ಪತ್ತೆ ಮಾಡುವ ಮೊದಲೇ ಕಾಯಿಲೆಯನ್ನು ನಿಶ್ಚಿತಗೊಳಿಸಬಹುದಾಗಿದೆ.ಇನ್ನುಳಿದ ಸಂಬಂಧಪಟ್ಟ ಕಾರಣ ಮತ್ತು ಲಕ್ಷಣಗಳನ್ನು ಕಾಳಜಿಪೂರಕವಾಗಿ ನೋಡಲಾಗುತ್ತದೆ. ಸತತವಾಗಿ ಮೂಗು ಸೋರಿಕೆಯಂತಹ ಅಲರ್ಜಿಯ ಪರಿಣಾಮಗಳು ಅದರಲ್ಲಿ ಒಂದೆಂದರೆ ಮಾಲಾಡೀಸ್ ಅದು ವಿವಿಧ ಲಕ್ಷಣಗಳನ್ನು ತೋರುತ್ತದೆ.ವಿವಿಧ ರೋಗಗಳ ತಜ್ಞರ ಮೂಲಕ ವಾಸಿ ಮಾಡಬಹುದಾಗಿದೆ. ಒಮ್ಮೆ ಆಸ್ತಮಾ,ಮೂಗು ಸೋರಿಕೆ,ತೀವ್ರ ಸಂವೇದನೆ ಅಥವಾ ಇನ್ನಿತರ ಅಲರ್ಜಿಕ್ ಕಾಯಿಲೆಗಳನ್ನು ಪತ್ತೆ ಹಚ್ಚಿದಾಗ ಅದನ್ನು ಹೇಗೆ ನಿಯಂತ್ರಿಸಬಹುದೆಂಬುದನ್ನು ಅದರ ಕಾರಣವಾದ ಪ್ರತಿನಿಧಿ ಅಂಶವನ್ನೂ ಕಂಡು ಹಿಡಿಯಬಹುದಾಗಿದೆ.

ಚರ್ಮದ ಪರೀಕ್ಷೆ

ಅಲರ್ಜಿ 
ತೋಳಿನ ಭಾಗದ ಚರ್ಮ ತಪಾಸಣೆ
ಅಲರ್ಜಿ 
ಬೆನ್ನಿನ ಚರ್ಮ ತಪಾಸಣೆ

ಇದರಲ್ಲಿನ IgE ನಂತಹ ಪ್ರತ್ಯೇಕ ಆಂಟಿಬಾಡಿಗಳು ತಮ್ಮ ಲಕ್ಷಣಗಳನ್ನು ತೋರಿಸುತ್ತವೆ.ಈ ಸಂದರ್ಭದಲ್ಲಿ ಚರ್ಮದ ಪರೀಕ್ಷೆಯು ಅನಿವಾರ್ಯವಾಗುತ್ತದೆ.ಆಗ ಪ್ರತಿ ವಿಭಾಗದ ಸಂವೇದನೆಗಳನ್ನು ಪತ್ತೆಹಚ್ಚಲಾಗುತ್ತದೆ.ಇದರಲ್ಲಿ ಬಳಸುವ ಔಷೋಧಪಚಾರವು ಸರಳ ಮತ್ತು ಸುಲಲಿತವಾಗುತ್ತದೆ.ಅಲ್ಲದೇ ಕಡಿಮೆ ಖರ್ಚು ತಗಲುತ್ತದೆ. ಚರ್ಮ ತಪಾಸಣೆಯನ್ನು "ರಂಧ್ರ ಮಾಡುವುದು" ಮತ್ತು " ಸೂಜಿ ಚುಚ್ಚುವುದು" ಎಂದು ಕರೆಯಲಾಗುತ್ತದೆ.ಚರ್ಮದೊಳಗೆ ಸಣ್ಣ ರಂಧ್ರ ಮಡಿ ಇಲ್ಲವೆ ಸಣ್ಣ ಸೂಜಿಯೊಂದನ್ನು ತೂರಿಸಿ ರೋಗಿಯ ದೇಹ್ದದಲ್ಲಿನ ಕಾಯಿಲೆಯ ಬಗ್ಗೆ ತಿಳಿಯಲಾಗುತ್ತದೆ.ಸಣ್ಣ ಪ್ರಮಾಣದ ಅಲರ್ಜಿನ್ ಗಳನ್ನು ಅಥವಾ ಅದರ ಅಂಶಗಳನ್ನು ಪ್ರತ್ಯೇಕಿಸಿ ನೋಡಲಾಗುತ್ತದೆ.(ಹೂಧೂಳಿನ ಕಣ,ಹುಲ್ಲು,ಕೀಟ,ಪ್ರೊಟೀನ್ ಗಳು,ಬಟಾಣಿ ತಿರುಳು,ಇತ್ಯಾದಿ)ಇವುಗಳನ್ನು ಚರ್ಮದ ಮೇಲೆ ಗುರುತು ಮಾಡಿರುವ ಜಾಗದಲ್ಲಿ ತೂರಿಸಲಾಗುತ್ತದೆ.(ಇಲ್ಲಿ ಮಸಿ/ಡೈಯನ್ನು ಅತ್ಯಂತ ಕಾಳಜಿಯಿಂದ ಬಳಸಿ ಅದರಿಂದಲೇ ಅಲರ್ಜಿ ಉಂಟಾಗದಂತೆ ಜಾಗೃತಿ ವಹಿಸಬೇಕು) ಒಂದು ಸಣ್ಣದಾದ ಪ್ಲಾಸ್ಟಿಕ್ ಅಥವಾ ಲೋಹದ ಉಪಕರಣವನ್ನು ಚರ್ಮದ ಮೇಲೆ ರಂಧ್ರ ಮಾಡಲು ಬಳಸಲಾಗುತ್ತದೆ.ಪಂಕ್ಚರ್ ಇಲ್ಲವೆ ರಂಧ್ರ ಮಾಡಲು "ಚರ್ಮದೊಳ ತೂರಿಸುವಿಕೆ"ಯು ರೋಗಿಯ ಚರ್ಮದಲ್ಲಿ ಸೂಜಿ ಅಥವಾ ಸಿರೆಂಜ್ ನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಚರ್ಮ ತಪಾಸಣೆಯಲ್ಲಿ ಮುಂತೋಳು ಅಥವಾ ಬೆನ್ನಿನ ಹಿಂಭಾಗವನ್ನು ಆಯ್ಕೆ ಮಾಡಲಾಗುತ್ತದೆ. .ಒಂದು ವೇಳೆಯು ರೋಗಿಯು ಆ ವಸ್ತುವಿಗೆ ಅಲರ್ಜಿಕ್ ಎನಿಸಿದರೆ ಕೂಡಲೇ ಗೋಚರಿಸುವ ವಿಪರೀತದ ಪ್ರತಿಕ್ರಿಯೆಯು ತಕ್ಷಣವೇ ೩೦ನಿಮಿಷಗಳಲ್ಲೇ ಕಾಣಿಸುತ್ತದೆ. ಈ ಪ್ರತಿಕ್ರಿಯೆಯು ಸಣ್ಣ ಪ್ರಮಾಣದ ಚರ್ಮ ಕೆಂಪಾಗುವಿಕೆಯಿಂದ ಹಿಡಿದು ಸಂಪೂರ್ಣವಾಗಿ ಊತದ ಗುಳ್ಳೆ ಕಾಣಿಸುವ ಸಾಧ್ಯತೆ ಇದೆ.(ಇದನ್ನು ಚಕ್ರ ಮತ್ತು ಬಾವು)ಎನ್ನುತ್ತಾರೆ. ಈ ತಪಾಸಣೆಯನ್ನು ಅಲರ್ಜಿಸ್ಟ್ಸ್ ಅಥವಾ ಅಲರ್ಜಿ ತಜ್ಞರು ಮಾಡುತ್ತಾರಲ್ಲದೇ ಅದರ ತೀವ್ರತೆಯನ್ನು ಗಮನಿಸಿ ಕ್ರಮ ಕೈಗೊಳ್ಳುತ್ತಾರೆ.ಅಂದರೆ +/- ಸಂಜ್ಞೆಗಳನ್ನು ಅನುಸರಿಸಿ ಚೌಕಟ್ಟು ನಿರ್ಮಿಸುತ್ತಾರೆ.ಅದೂ ಅಲ್ಲದೇ ೪+ ನ ದೊಡ್ಡ ಪ್ರಮಾಣದ ಪ್ರತಿಕ್ರಿಯೆಯನ್ನು ಕಾಣುತ್ತಾರೆ. ಹೀಗೆ ಅಲರ್ಜಿಸ್ಟ್ ಗಳು ಅದರ ಊತದ ಪ್ರಮಾಣ ಅದರ ಸುತ್ತುವರಿಕೆ ಅಥವಾ ಗುಳ್ಳೆಯ ಪ್ರತಿಕ್ರಿಯೆ ಪರಿಣಾಮಗಳನ್ನು ದಾಖಲಿಸುತ್ತಾರೆ. ಉತ್ತಮ ತರಬೇತಿ ಪಡೆದ ಅಲರ್ಜಿಸ್ಟ್ ಗಳು ಸೂಕ್ತವಾದ ದಾಖಲೆಗಳ ಅಧ್ಯಯನದ ವಿವರಗಳನ್ನು ಕೂಲಂಕಷವಾಗಿ ಪರಿಷ್ಕರಿಸುವರು. ಕೆಲವು ರೋಗಿಗಳು ತಮ್ಮ ಸ್ವಂತ ಅನುಭವವನ್ನೇ ತಮ್ಮ ಗೋಚರ ಅಲರ್ಜಿಯ ಮೇಲೆ ಪ್ರಯೋಗಿಸುವದಕಿಂತ ,ತಜ್ಞ ಅಲರ್ಜಿಸ್ಟ್ ಗಳ ಚರ್ಮದ ಪರೀಕ್ಷೆಗೆ ಒಳಗಾಗುವುದು ಉತ್ತಮವಾದುದುದು.

ಒಮ್ಮೊಮ್ಮೆ ತೀವ್ರತರವಾದ ಊತದ ಅಲರ್ಜಿ ರೋಗಿಗಳನ್ನು ವೈದ್ಯರೆಡೆಗೆ ತಂದಾಗ ಅದನ್ನು ತಕ್ಕ ಮಟ್ಟಿಗೆ ಪರೊಶೀಲಿಸಿ ಅದು ಉಲ್ಬಣಗೊಳ್ಳದಂತೆ ನೋಡಿಕೊಳ್ಳುವುದು ವೈದ್ಯರ ಪ್ರಥಮ ಚಿಕಿತ್ಸೆ ಎನಿಸಿದೆ.ಆಗ ಆರಂಭಿಕ ರಕ್ತ ತಪಾಸಣೆ ಮೂಲಕ ಅಲರ್ಜಿಯ ಮಟ್ಟವನ್ನು ಕಂಡುಕೊಳ್ಳಬಹುದು.ಚರ್ಮದಲ್ಲಿ ರಂಧ್ರ ಅಥವಾ ಸೂಜಿ ಚುಚ್ಚುವುದು ಕೂಡಾ ಒಮ್ಮೊಮ್ಮೆ ಬೇಕಾಗದಿರಬಹುದು,ಯಾಕೆಂದರೆ ಇದು ಅಲರ್ಜಿಯ ಗಂಭೀರತೆ ಮತ್ತು ಅಂಟಿಹಿಸ್ಟೊಮೈನ್ ಗಳನ್ನು ಸೇವಿಸುವವರಲ್ಲಿನ ವಿಪರೀತ ಪರಿಣಾಮಗಳನ್ನು ಊಹಿಸಬಹುದಾಗಿದೆ.

ರಕ್ತ ತಪಾಸಣೆ

ಹಲವಾರು ರಕ್ತ ತಪಾಸಣೆ ಮೂಲಕ ಅಲರ್ಜಿಗಳ ಪರೀಕ್ಷೆ ಮಾಡುವ ವಿಧಾನಗಳಿವೆ.ಈ ಸೌಲಭ್ಯದಿಂದ ವಿಭಿನ್ನ ಅಲರ್ಜಿಗಳನ್ನು ಪತ್ತೆ ಹಚ್ಚಬಹುದು. ಈ ಪ್ರಕಾರದ ತಪಾಸಣೆಯು "ಒಟ್ಟಾರೆ IgE ಮಟ್ಟ"ವನ್ನು ಸೂಚಿಸುತ್ತದೆ.ಇಲ್ಲಿಯ IgE ಮಟ್ಟವು ರೋಗಿಯ ರಕ್ತ ಸಾರದ ತಿರುಳನ್ನು ಒಳಗೊಂಡಿರುತ್ತದೆ. ಇದನ್ನು ರೇಡಿಯೊಮೆಟ್ರಿಕ್ ಮತ್ತು ಕಲರ್ ಮೆಟ್ರಿಕ್ ಗಳನ್ನು ಉಪಯೋಗಿಸಿ ಇಮ್ಮ್ಯುನೊಅಸಿಯನ್ನು ಪತ್ತೆ ಹಚ್ಚಬಹುದು. ರೇಡಿಯೊಮೆಟ್ರಿಕ್ ಅಸ್ಸೆಸ್ ರೇಡಿತೊಅಲರ್ಜೊಸೊರ್ಬಂಟ್ ಪರೀಕ್ಷೆ(RAST)ಯನ್ನು ಒಳಗೊಂಡಿರುತ್ತದೆ.ಇದು IgE ಜೋಡಣೆಯ (ಆಂಟಿ-IgE)ನ್ನು ಉಪಯೋಗಿಸುತ್ತದೆ.ಇಲ್ಲಿನ ಆಂಟಿಬಾಡೀಸ್ ಗಳನ್ನು ರೇಡಿಯೊ ಆಕ್ಟಿವ್ ಐಸೊಟೊಪೆಗಳು ಎನ್ನುತ್ತಾರಲ್ಲದೇ ಇವು ರಕ್ತದೊಳಗಿನ ರೋಗನಿರೋಧಕ ಶಕ್ತಿಯನ್ನು ಪ್ರಮಾಣೀಕರಿಸುತ್ತದೆ. ಇನ್ನು ಕೆಲವು ಹೊಸಪದ್ದತಿಗಳಲ್ಲಿ ಕಲರಿಮೆಟ್ರಿಕ್ ಅಥವಾ ಫ್ಲುರೊಮೆಟ್ರಿಕ್ ತಂತ್ರಜ್ಞಾನವು ರೇಡಿಯೊಆಕ್ಟಿವ್ ಐಸೊಟೊಪೆಗಳ ಬದಲಾಗಿ ಬಳಸಲಾಗುತ್ತದೆ. ಕೆಲವು "ಸ್ಕ್ರೀನಿಂಗ್ " ಪರೀಕ್ಷೆ ಪದ್ದತಿಯು ಉತ್ತಮ ಗುಣಮಟ್ಟದ ಫಲಿತಾಂಶಗಳನ್ನು ಪಡೆಯಲು ಮಾಡಲಾಗುತ್ತದೆ.ಅಲರ್ಜಿಕ್ ಸಂವೇದನೆಗಳನ್ನು ಹೊಂದಿರುವ ರೋಗಿಗಳಿಗೆ "ಇಲ್ಲ"ಅಥವಾ "ಹೌದು" ಎಂಬ ಸ್ಪಷ್ಟ ಉತ್ತರವನ್ನು ನೀಡಬೇಕಾಗುತ್ತದೆ. ಇಂತಹ ಒಂದು ಪದ್ದತಿಯಲ್ಲಿ ಸಂಬಂಧಪಟ್ಟ ಸಂವೇದನೆಯನ್ನು ಸುಮಾರು೭೦.೮೦ರಷ್ಟು ಪ್ರಮಾಣದಲ್ಲಿ ಕಂಡು ಹಿಡಿಯಲು ಸಾಧ್ಯವಿದೆ.ಈ ಬಗ್ಗೆ ವಿಶಾಲ ಮಟ್ಟದ ಅಧ್ಯಯನವೊಂದು೭೨.೬%ರಷ್ಟು ಋಣಾತ್ಮಕ ಪ್ರತಿಕ್ರಿಯೆಯನ್ನು ನೀಡಿದೆ. ಕಡಿಮೆ ಮಟ್ಟದ IgE ಮಟ್ಟವನ್ನು ಹೊಂದಿದ್ದರೆ ಸಾಮಾನ್ಯವಾಗಿ ಉಸಿರಾಟದ ಅಲರ್ಜಿನ್ ಗಳ ಬಗ್ಗೆ ಸಂಶಯಪಡಬಹುದಾಗಿದೆ. ಸಂಖ್ಯಾಶಾಸ್ತ್ರೀಯ ಪದ್ದತಿಗಳಲ್ಲಿ ROC ತಿರುವುಗಳು,ಊಹಾ ಲೆಕ್ಕಾಚಾರದಲ್ಲಿ,ಬಹುಶ:ಬದುಕಿನ ಆಗು ಹೋಗುಗಳ ಬಗ್ಗೆ ಪರಿಶೀಲಿಸಿ ಒಂದೊಕ್ಕೊಂದು ಹೇಗೆ ಸಂಬಂಧಿಸಿವೆ ಎಂಬುದನ್ನು ತಿಳಿಯಲು ಈ ಪದ್ದತಿಯು ನೆರವಾಗುತ್ತದೆ. ಈ ಪದ್ದತಿಗಳಿಂದ ಅತಿ ಹೆಚ್ಚು IgE ಮಟ್ಟ ಇರುವ ರೋಗಿಗಳಲ್ಲಿ ಸಂಭವನ್ನೆಯ ಅಧಿಕ ಅಲರ್ಜಿ ಪ್ರಮಾಣ ಕಾಣಬೋವುದು ಸ್ವಾಭಾವಿಕ.ಇದಕ್ಕಾಗಿ ಕೈಗೊಂಡ ಮುಂದಿನ ತನಿಖೆಗಳು ಸಾಮಾನ್ಯವಾಗಿ ಅಲರ್ಜಿಯ ವಿಶಿಷ್ಟ ಲಕ್ಷಣಗಳನ್ನು ತೋರುವುದು.ಇವುಗಳಲ್ಲಿ ಕಾಯಿಲೆಯು ಪದೇ ಪದೇ ಬರುವ ವಿಶಿಷ್ಟ ಕಾರಣಗಳನ್ನು ಹುಡುಕಬೇಕಾಗುತ್ತದೆ.

c

ಸದ್ಯಕ್ಕೆ ಅಲರ್ಜಿ ಪರಿಸ್ಥಿತಿಗಳನ್ನು ಕಂಡು ಹಿಡಿಯಲು ವಿವಿಧ ರೀತಿಯ ಸುಧಾರಿತ ಚಿಕಿತ್ಸಾ ವಿಧಾನಗಳು ಪ್ರಚಲಿತದಲ್ಲಿವೆ. ಹೀಗೆ ಅತಿ ಸಂವೇದನೆ ಮತ್ತು ಸೂಕ್ಷ್ಮ ಪ್ರತಿಕ್ರಿಯೆಗಳನ್ನು ಆಹಾರದ ಅಲರ್ಜಿಗಳನ್ನು ಪತ್ತೆಹಚ್ಚುವಾಗ ಗಮನಿಸಲಾಗುತ್ತದೆ.ಔಷಧಿ ಅಥವಾ ಮಾದಕ ದೃವ್ಯಗಳು,ಕೀಟಗಳು ಮತ್ತು ಚರ್ಮದ ಅಲರ್ಜಿಗಳನ್ನು ಪತ್ತೆಹಚ್ಚಲು ಆಹಾರದಲ್ಲಿನ ಪ್ರೊಟೀನ್ ಗಳ ಬಗ್ಗೆ ತಪಾಸಣೆ ಮಾಡಲಾಗುತ್ತದೆ.ಇಲ್ಲಿ IgE ಜೋಡಣೆ ಅಥವಾ ಬಂಧವನ್ನು ಪರಿಗಣಿಸಲಾಗುತ್ತದೆ.ಇಲ್ಲಿ ಚರ್ಮ ಪರೀಕ್ಷೆಗಳ ಅಟೊಪಿಗಳ ಪ್ಯಾಚ್ ಪರೀಕ್ಷೆ ಮಾಡಲಾಗುತ್ತದೆ. ಚೇಳಿನಂತಹ ವಿಷಕ್ರಿಮಿಗಳು ಕಚ್ಚಿದಾಗ ಅದರ ಫಲಿತಾಂಶಗಳು ಮತ್ತು ಅದರ ಅಲರ್ಜಿಯ ಮಟ್ಟವನ್ನು ಊಹೆ ಮಾಡಲಾಗುತ್ತದೆ.ಇಲ್ಲಿ ಎಪಿನೆಫ್ರೈನ್ ಮಾತ್ರೆ ಮತ್ತುಪ್ರತ್ರಿರೋಧಕ-IL-೫ನ್ನು ಕ್ರಿಮಿಕೀಟಗಳ ಮೂಲಕ ಉಂಟಾದ ಅಲರ್ಜಿಗೆ ಸಂಬಂಧಿಸಿದಂತೆ ಔಷಧೋಪಚಾರ ನಡೆಸಲಾಗುವುದು.ಈ ಔಷಧಿಯು ಐಸಿನೊಫಿಲಿಕ್ ಕಾಯಿಲೆಗೆ ರಾಮಬಾಣವಾಗಿದೆ. ಸಾಂಪ್ರದಾಯಿಕ ಚಿಕಿತ್ಸೆ ಮತ್ತು ಅಲರ್ಜಿಗಳ ನಿರ್ವಹಣೆಯು ಸಾಮಾನ್ಯವಾಗಿ ಪ್ರಶ್ನಾತೀತವಾಗಿರುತ್ತದೆ.ಇಲ್ಲವೇ ಇದನ್ನು ಒಡ್ಡಿಕೊಳ್ಳುವ ವಾತಾವರಣಕ್ಕೆ ಸಂಬಂಧಿಸುತ್ತದೆ. ಬೆಕ್ಕುಗಳ ಮೂಲಕ ಅಲರ್ಜಿಗೆ ಒಳಗಾಗುವ ಜನರು ಅವುಗಳಿಂದ ದೂರ ಇರುವಂತೆ ಸಲಹೆ ಮಾಡಲಾಗುತ್ತದೆ. ಹೀಗೆ ಅಂತಹ ಸನ್ನಿವೇಶಗಳಿಂದ ದೂರ ಇರುವುದರಿಂದ ಸೂಕ್ಷ್ಮ ಸಂವೇದನೆಯ ಅಲರ್ಜಿ ಲಕ್ಷಣಗಳನ್ನುಜೀವಕ್ಕೆ ಅಪಾಯ ಒಡ್ಡದಂತೆ ತಡೆಯಬೇಕಾಗುತ್ತದೆ.ಆದರೆ ಹೂಧೂಳು ಮತ್ತು ಗಾಳಿ ಮೂಲಕ ಹರಡುವ ಅಲರ್ಜಿಗಳನ್ನು ತಡೆಯುವುದು ಕಠಿಣ ಕಾರ್ಯವಾಗಿದೆ. ಇಂತಹ ದೂರವಿರುವುದಕ್ಕೆ ಇನ್ನೂ ಉತ್ತಮ ಸಲಹೆಯು ಆಹಾರ ಅಲರ್ಜಿಗಳನ್ನು ನಿವಾರಿಸಲು ಬಳಸಲಾಗುತ್ತದೆ.

ಔಷಧೊಪಚಾರದ ಚಿಕಿತ್ಸೆ

ಹಲವಾರು ಪ್ರತಿರೋಧಕ ಔಷಧಿಗಳು ಅಲರ್ಜಿಯ ಕೆಲವು ಲಕ್ಷಣಗಳನ್ನು ತಡೆಯುವ ಸಾಧ್ಯತೆ ಇದೆ.ಅದಲ್ಲದೇ ಕೋಶಗಳ ಪುನರುಜ್ಜೀವನದ ಮತ್ತು ಪ್ರತಿರೋಧಕ ಶಕ್ತಿಯನ್ನು ಬಳಸುತ್ತದೆ. ಇವುಗಳೆಂದರೆ ಆಂಟಿಹಿಸ್ಟಾಮೈನ್ ಗಳು,ಕೊರ್ಟಿಸೊನ್ ,ಡೀಕ್ಸಾಮೆಥಾಸೊನ್ ,ಹೈಡ್ರೊಕೊರ್ಟಿಸೊನೆ,ಎಪೈನ್ ಫೈನ್ (ಅಡ್ರಿನೆಲೈನ್ ),ಥಿಯಿಫಿಲೈನ್ ಮತ್ತು ಕ್ರೊಮೊಲಿನ್ ಸೊಡಿಯಮ್ ಎಂದು ಹೇಳಲಾಗುತ್ತದೆ. ಪ್ರತಿರೋಧಕ ಲುಕೊಟ್ರಿಯಿನ್ ಗಳನ್ನು ಬಳಸಲಾಗುತ್ತದೆ.ಅವುಗಳೆಂದರೆ ಮೊಂಟೆಲುಕಾಸ್ಟ್ (ಸಿಂಗುಲರ್ )ಅಥವಾ ಝಫಿರ್ ಲುಕಾಸ್ಟ್ (ಅಕೊಲಎಟ್ )ಇವುಗಳೆಲ್ಲವು FDAದ ಮಾನ್ಯತೆ ಪಡೆದ ಅಲರ್ಜಿ ಚಿಕಿತ್ಸೆಗೆ ಬಳಸುವ[ಸೂಕ್ತ ಉಲ್ಲೇಖನ ಬೇಕು]ಔಷಧೋಪಚಾರಗಳೆನಿಸಿವೆ. ಪ್ರತಿರೋಧಕ-ಕೊಲೈನೆರ್ಜಿಕ್ ಗಳು ಡೆಕಂಜೆಂಸ್ಟೆಂಟ್ ಗಳು,ಮಾಸ್ತ್ ಕೋಶಗಳ ಸ್ಥಿರತೆ ಮಾಡುವ ಔಷಧಿಗಳು ಹಾಗು ಕೆಮೊಟ್ಯಾಕ್ಸಿಸ್ ಗಳು ಐಸೊನೊಫಿಲ್ ನ ಜೊತೆಗೆ ಸೇರಲು ಬರುವ ಸಾಧ್ಯತೆ ಇದೆ.ಇಲ್ಲಿ ಸಾಮಾನ್ಯವಾಗಿ ಅಲರ್ಜಿ ಕಡಿಮೆ ಮಾಡುವ ಉಪಚಾರಗಳಿಗೆ ಒತ್ತು ಕೊಡಲಾಗುತ್ತದೆ. ಈ ಸಂದರ್ಭದಲ್ಲಿ ಇಂತಹ ಔಷಧಿಗಳು ಅಲರ್ಜಿಯ ಲಕ್ಷಣಗಳಿಗೆ ಕಡಿವಾಣ ಹಾಕಬಲ್ಲವು.ಅಲ್ಲದೇ ಅತಿ ಸಂವೇದಿತ ಸೂಕ್ಷ್ಮ ಲಕ್ಷಣಗಳನ್ನು ತೀವ್ರವಾಗಿ ಕಂಡು ಹಿಡಿಯಲು ನೆರವಾಗುವವು.ಆದರೆ ಹಳೆಯ ಅಲರ್ಜಿ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಇವುಗಳ ಪಾತ್ರ ಕಡಿಮೆಯೇ ಎಂದು ಹೇಳಬಹುದು.

ಪ್ರತಿರೋಧಕ ಶಕ್ತಿ ವರ್ಧನೆಗೆ ಚಿಕಿತ್ಸೆ

೦}ಸಂವೇದನೆಯ ವಿಪರೀತತೆಯನ್ನು ಕಡಿಮೆಗೊಳಿಸುವುದು ಅಥವಾ ಅತಿಯಾದ ಸೂಕ್ಷ್ಮತೆಗೆ ಕಡಿವಾಣ ಹಾಕುವುದು ಇದನ್ನು ರೋಗಿಗಳಿಗೆ ಲಸಿಕೆ ಹಾಕುವುದರ ಮೂಲಕ ಮಾಡಲಾಗುತ್ತದೆ.ಇಲ್ಲಿ ಪ್ರಗತಿಯಲ್ಲಿರುವ ದೊಡ್ಡ ಪ್ರಮಾಣದ ಅಲರ್ಜಿಗಳನ್ನು ನಾವು ಹತೋಟಿಗೆ ತರಲು ಸಾಧ್ಯವಿದೆ. ಇದು ತೀವ್ರತ್ರೆಯನ್ನು ಕಡಿಮೆ ಮಾಡುವುದಲ್ಲದೇ ಅತಿಯಾದ ಸೂಕ್ಷ್ಮಸಂವಿದೇನೆಯನ್ನು ಒಟ್ಟಿಗೆ ಉಪಶಮನಗೊಳಿಸಬಹುದಾಗಿದೆ. ಇದು IgGಮಟ್ಟದ ಪ್ರಗತಿಯನ್ನು ಆಂಟಿಬಾಡಿಯನ್ನು ಬಳಸಿ ಹೆಚ್ಚಿನ ಬ್ಲಾಕೇಜ್ ನ್ನು ತಡೆಯಲಾಗುತ್ತದೆ.IgG ಉತ್ಪಾದನೆಯು ಅಟೊಪ್ಸಿಗಳನ್ನು ಹೊಂದಿರುತ್ತದೆ. ಅಲರ್ಜಿನ್ ಪ್ರಶ್ನಾತೀತವಾಗಿದ್ದಾಗ ಅದು ವ್ಯಕ್ತಿಯಲ್ಲಿ ರೋಗ ನಿರೋಧಕತೆಯನ್ನು ಬೆಳೆಸುತ್ತದೆ.ಇದರಿಂದಾಗಿ ಅಲರ್ಜಿನ್ ಗಳು ಹೆಚ್ಚಿನ ಪ್ರಮಾಣವನ್ನು ತಿಳಿಸುತ್ತದೆ. ಸುದೀರ್ಘ ದಕ್ಷತೆಯ ಮತ್ತು ಇಮ್ಮ್ಯುನೊ ಥೆರಪಿಯನ್ನು ಬಳಸಿ ಹೊಸ ರೀತಿಯಲ್ಲಿ ಅಲರ್ಜಿಯನ್ನು ಕಡಿಮೆಗೊಳಿಸಬಹುದು. ಅಲರ್ಜಿಯಂತಹ ಲಕ್ಷಣಗಳು ಮಕ್ಕಳಲ್ಲಿ ಮೂಗು ಸೋರುವವಿಕೆ ಮತ್ತು ಅಸ್ತಮಾ ಕಾಯಿಲೆಯಲ್ಲಿ ಇದು[ಸೂಕ್ತ ಉಲ್ಲೇಖನ ಬೇಕು]ಕಾಣಬರುತ್ತದೆ. ಹೊಸ ಪರಿಶೀಲನೆಯು ರೊಚೆಸ್ಟರ್ ನ ಮೇಯೊ ಕ್ಲಿನಿಕ್ ನಲ್ಲಿ ಅಲರ್ಜಿಯನ್ನು ಮೂಗು ಸೋರುವಿಕೆ ಮತ್ತು ಅಲರ್ಜಿ ಕಂಜಂಕ್ಟಿವಿಸ್ ಗಳು ಅಲರ್ಜಿಕ್ ಆಸ್ತಮಾ ರೂಪಗಳು,ವಿಷಕೀಟಗಳು ಕಚ್ಚುವಿಕೆ,ಮತ್ತು ಇತರ ಅಧ್ಯಯನವು ವೈಜ್ಞಾನಿಕವಾಗಿ ಅಲರ್ಜಿಯ ಪರಿಣಾಮಕಾರಿ ಪತ್ತೆ ಮತ್ತು ಉಪಶಮನಕ್ಕೆ ಸೂತ್ರಗಳನ್ನು ರೂಪಿಸಿದೆ. ಇನ್ನೂ ಹೆಚ್ಚೆಂದರೆರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಸೂಚಿಗಳ ಪ್ರಕಾರ ಚಿಕಿತ್ಸಾ ಕ್ರಮದಲ್ಲಿ ಬಹುತೇಕ ಮೂಗು ಸೇರುವಿಕೆ ಮತ್ತು ಆಸ್ತಮಾಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುತ್ತದೆ.ಇದೇ ವಿಷಯದಲ್ಲಿ ರಕ್ಷಣೆ ಮತ್ತು ಶಿಫಾರಸುಗಳನ್ನು ಪರಿಗಣಿಸಲಾಗುತ್ತದೆ. ಎರಡನೆಯ ಇಮ್ಮುನೊ ಥೆರಪಿಯ ಪ್ರಕಾರದಲ್ಲಿ ಆಳವಾದ ನರಗಳ ಮೂಲಕ ಮೊನೊಕ್ಲೊನಲ್ ಚುಚ್ಚುಮದ್ದು ಪ್ರತಿರೋಧಕ IgE ವನ್ನು ಬಳಸಲಾಗುತ್ತದೆ. ಇವುಗಳು ಮುಕ್ತವಾಗಿ ಅಲರ್ಜಿ ಲಕ್ಷಣಗಳನ್ನು ಹೊರಸೂಸುತ್ತವೆ;ಅಲ್ಲದೇIgE ಜೊತೆಗೆ ಸಂಬಂಧ ಹೊಂದಿರುತ್ತವೆ.ಇಲ್ಲಿ ಅವುಗಳು ತಮ್ಮ ಕೊನೆ ಅಂಚನ್ನು ತಲುಪುವ ಸಂಕೇತವನ್ನು ನೀಡುತ್ತವೆ. ಈಗಾಗಲೇ IgE ನ ಜೊತೆಗಿನ ಸಂಬಂಧವು ಬಾಸೊಫಿಲ್ ಗಳ ಮೇಲೆ Fc ರೆಸೆಪ್ಟರ್ ಮಾಸ್ತ್ ಕೋಶಗಳ ಅವಲಂಬನೆಯನ್ನು ಇಲ್ಲಿ ವ್ಯಾಖ್ಯಾನಿಸುತ್ತದೆ.ಇದು ಅಲರ್ಜಿಕ್ ಉರಿತದ ಪ್ರತಿಕ್ರಿಯೆಯನ್ನು ಸ್ಥಿರಗೊಳಿಸುತ್ತದೆ. ಈ ವರ್ಗದ ಮೊದಲ ಪ್ರತಿನಿಧಿ ಎಂದರೆ ಒಮಾಲಿಜುಮ್ಯಾಬ್ (ಉಪಶಮನದ ಮೂಲ)ಎಂದು ಹೇಳಬಹುದು. ಈ ತೆರನಾದ ಇಮ್ಮುನೊ ಥೆರಪಿಯಿ ಅಲರ್ಜಿಯ ಅಟೊಪಿಯನ್ನು ವಾಸಿ ಮಾಡಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.ಆದರೆ ಇದನ್ನು ಬಹಳಷ್ಟು ಜನರಿಗೆ ಆಹಾರ ಅಲರ್ಜಿ ಹೊಂದಿದರಲ್ಲ್ಲಿ ಬಳಸಿ ಗುಣಪಡಿಸುವುದು ಇಲ್ಲ ಎಂದೇ[ಸೂಕ್ತ ಉಲ್ಲೇಖನ ಬೇಕು]ಹೇಳಬೇಕು. ಮೂರನೆಯ ವರ್ಗದ ಸಬ್ ಲಿಂಗ್ಯುಲ್ ಇಮ್ಮುನೊಥೆರಪಿಯು ನೇರವಾಗಿ ರೋಗ ನಿರೋಧಕವನ್ನು ಅಳವಡಿಸಿ ಔಷಧಿರಹಿತ ಚಿಕಿತ್ಸಾ ಮಾದರಿಗಳಲ್ಲಿ ವಿನಿಯೋಗಿಸಲಾಗುತ್ತದೆ.ಉದಾಹರಣೆಗೆ ಆಹಾರ ಮತ್ತು ಉಪಯುಕ್ತ ಬ್ಯಾಕ್ಟೀರಿಯಾಗಳ ಅನ್ವಯಿಸುವಿಕೆಯು ಸಾಮಾನ್ಯವಾದುದು. ಇಂತಹ ತೆರನಾದ ಚಿಕಿತ್ಸಾ ಪದ್ದತಿಯಿ ಯುರೊಪಿನಾದ್ಯಂತ ಸುಮಾರು ೪೦ಪ್ರತಿಶತ ಅಲರ್ಜಿ ರೋಗಿಗಳ ಮೇಲೆ[ಸೂಕ್ತ ಉಲ್ಲೇಖನ ಬೇಕು]ಪ್ರಯೋಗಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಇಮ್ಮುನೊಥೆರಪಿಯು ಸಂಪ್ರದಾಯಿಕ ಅಲರ್ಜಿ ವಾಸಿಮಾಡುವ ಪರಿಣತರಲ್ಲಿ ಜನಪ್ರಿಯತೆ[ಸೂಕ್ತ ಉಲ್ಲೇಖನ ಬೇಕು]ಪಡೆಯುತ್ತಿದೆ. ಅಲರ್ಜಿಯ ತಕ್ಷಣದ ಚಿಕಿತ್ಸೆಯು ಅಲರ್ಜಿಯ ಲಕ್ಷಣಗಳನ್ನು 'ಗುಣಪಡಿಸುವ' ಸುಲಭ ಮಾರ್ಗವೆನಿಸಿದೆ. ಈ ಚಿಕಿತ್ಸೆಯು ಸುದೀರ್ಘ ಕಾಲದ ಬದ್ದತೆಯನ್ನು ನಿರೀಕ್ಷಿಸುತ್ತದೆ.

ಸಾಕ್ಷ್ಯಾಧಾರವಿಲ್ಲದ ಮತ್ತು ಪರಿಣಾಮಕಾರಿಯಲ್ಲದ ಚಿಕಿತ್ಸೆಗಳು

ಒಂದು ಪ್ರಾಯೋಗಿಕ ಚಿಕಿತ್ಸೆಯಾಗಿರುವ ಎಂಜೈಮ್ ಶಕ್ತಿ (EPD),ಮೂಲಕ ಸಂವೇದನೆ ಕಡಿಮೆಗೊಳಿಸುವುದು.ಇದನ್ನು ದಶಕಗಳಿಂದಲೂ ಬಳಸುತ್ತಿದ್ದರೂ ಅಂತಹ ಯಾವುದೇ ಉತ್ತಮ ಫಲಿತಾಂಶಗಳು ದೊರಕಿಲ್ಲ. ಇಲ್ಲಿ EPDಯು ಅಲರ್ಜಿನ್ ಗಳ ದೃವಿಕರಣ ಮತ್ತು ಒಂದು ಎಂಜೈಮ್ ಬಳಕೆಗೆ ಪೂರಕವಾಗಿದೆ.ಅಂದರೆ ಬ್ ಬೇಟಾ-ಗ್ಲುಕುರೊನೈಡ್ಸ್ ಇವು T-ನಿಯಮಿತ ಲಿಂಫೊಸೈಟ್ಸ್ ಗಳಾನು ಉಪಯೋಗಿಸಿ ಅಲರ್ಜಿಯ ಸೂಕ್ಷ್ಮ ಸಂವೇದನೆಯನ್ನು ಕಡಿಮೆಗೊಳಿಸುತ್ತದೆ,ಇಲ್ಲವೇ ಅತಿ ಅಥವಾ ವಿಪರೀತ ಸಂವೇದನೆಗೆ ಕಾರಣ ಕಡಿಮೆ ಮಾಡುತ್ತದೆ. ಈ EPDಯು ಅಟೊಇಮ್ಮುನ್ ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ.ಆದರೆ ಇದು U.S.ನ ಆಹಾರ ಮತ್ತು ಔಷಧ ಆಡಳಿತದಿಂದ ಇದು ಸಮ್ಮತಿಸಲಾಗಿಲ್ಲ ಅಥವಾ ಇದಕ್ಕೆ ಯಾವುದೇ ಪರಿಣಾಮಕಾರಿ ಸಾಕ್ಷಿಗಳಿಲ್ಲ. ಪರ್ಯಾಯವಾದ ಔಷಧಿಯು ಸಾಕಷ್ಟು ಪ್ರಮಾಣದ ಅಲರ್ಜಿ ರೋಗಗಳನ್ನು ಚಿಕಿತ್ಸೆ ಮಾಡಲು ಪರಿಣತರು ಶರಮಿಸುತ್ತಿದ್ದಾರೆ.ಬಹಳ ಮುಖ್ಯವಾಗಿ ಪ್ರಕೃತಿ ಚಿಕಿತ್ಸೆ,ಗಿಡಮೂಲಿಕೆಗಳು ಔಷಧಿ,ಹೊಮಿಯೊಪತಿ,ಸಾಂಪ್ರಾದಾಯಿಕ ಚೀನದವರ ಔಷಧಿ ಮತ್ತು ಅಳವಡಿಸಿದ ಕೈನೆಸಿಯೊಲಾಜಿ(ಗಿಡಮೂಲಿಕೆ) ಇತ್ಯಾದಿಗಳು ಸಮಪ್ರಮಾಣದಲ್ಲಿ ಅಲರ್ಜಿಯನ್ನು ಕಡಿಮೆ ಮಾಡುವ ವಿಧಾನಗಳು. ಸುಮಾರು ೨೦೦೬ರಲ್ಲಿ ಮೇಯೊಕ್ಲಿನಿಕ್ ನಿಂದ ಶಿಸ್ತುಬದ್ದಿನ ಅಧ್ಯಯನ ನಡೆಸಿ ಅಲರ್ಜಿಯ ಔಶಧಿಮೂಲಗಳ ಬಗ್ಗೆ ನೂರಾರು ಲೇಖನಗಳನ್ನು ಬರೆದು ಸಂಗ್ರಹಿಸಲಾಗಿದೆ.ಅಲರ್ಜಿಯ ವಿವಿಧ ಪರಿಣಾಮಗಳು ಅಂದಫ್ರೆ ಉಸಿರಾಟದ ತೊಂದರೆ ಮತ್ತು ಅಸ್ತಮಾ ವಿಷಯಗಳ ಬಗ್ಗೆಯೂ ಅದರ ಸೋಂಕುಗಳ ಬಗ್ಗೆ ಹೊಮಿಯೊಪತಿಕ್ ಔಷಧಿಗಳ ಸಾಧ್ಯತೆಯನ್ನು ವಿವರಿಸಲಾಗಿದೆ. ಬಹಳಷ್ಟು ಲೇಖಕರು ಚಿಕಿತ್ಸಾಲಯಗಳ ನಿರಂತರ ಪ್ರಯೋಗಗಳನ್ನು ಅಭ್ಯಸಿಸಿ ಎಲ್ಲಾ ರೀತಿಯ ಹೊಮಿಯೊಪತಿಕ್ ಪರಿಹಾರಗಳನ್ನು ಮಕ್ಕಳು ಮತ್ತು ವಯಸ್ಕರಲ್ಲಿನ ಈ ಕಾಯಿಲೆಯು ಅಷ್ಟಾಗಿ ಗುಣಮುಖ ಕಂಡಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.

ಸೋಂಕು/ಸಾಂಕ್ರಾಮಿಕಶಾಸ್ತ್ರ

ಹಲವಾರು ಕಾಯಿಲೆಗಳು ಉರಿತದ ಅಡ್ಡಪರಿಣಾಮಗಳಿಗೆ ಒಳಗಾಗುತ್ತವೆ.ಉದಾಹರಣೆಗಾಗಿ ಪ್ರಕಾರ 1ಸಕ್ಕರೆ ಕಾಯಿಲೆಗಳು,ರುಮ್ಯಾಟೊಇಡ್ ಅರ್ತಿಟಿಸ್ ಮತ್ತುಅಲರ್ಜಿಕ್ ಕಾಯಿಲೆಗಳು-ತೀವ್ರ ಭಾದೆ ಮತ್ತು ಆಸ್ತಮಾಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಸುಮಾರು ೨-೩ದಶಕಗಳಿಂದ ಹೆಚ್ಚಾಗುತ್ತಿದೆ. ಕೈಗಾರಿಕರಣದ ದೇಶಗಳಲ್ಲಿ ಆಸ್ತಮಾ ಮತ್ತು ಅಟೊಪಿಕ್ ಅಸ್ತವ್ಯಸ್ತತೆಗಳು ಸುಮಾರಾಗಿ ೧೯೬೦-೧೯೭೦ ರಲ್ಲಿ ಆರಂಭಗೊಂಡವು.ಇದರ ಅಲರ್ಜಿ ಪ್ರಮಾಣ ಮಾತ್ರ ೧೯೮೦- ೧೯೯೦ರಲ್ಲಿ ಇನ್ನೂ ಹೆಚ್ಚಿನ ಗಾತ್ರ ಪಡೆಯಿತು.ಆದರೆ ಇದು ವಿಪರೀತ ಸಂವೇದನಾ ಸೂಕ್ಷ್ಮತೆಯ ಅತಿರ್ತೇಕಗಳು ೧೯೨೦ರಿಂದಲೂ ತನ್ನ ಹೆಚ್ಚಳ ತೋರುತ್ತಾ ಬಂದಿದೆ. }ಆದರೆ ಅಭಿವೃದ್ಧಿಪರ ದೇಶಗಳಲ್ಲಿ ಅಟೊಪಿ ಪ್ರಕರಣಗಳು ಸಾಮಾನ್ಯವಾಗಿ ಕೆಳಮುಖವಾಗಿವೆ.

ಅಲರ್ಜಿಕ್ ಪರಿಶ್ತಿತಿಗಳು: ಅಂಕಿಸಂಖ್ಯೆ ಮತ್ತು ಸೋಂಕು ಶಾಸ್ತ್ರ
ಯುನೈಟೆಡ್ ಸ್ಟೇಟ್ಸ್ ಯುನೈಟೆಡ್ ಕಿಂಗ್ ಡಮ್
ಅಲರ್ಜಿಕ್ ಮೂಗುಸೋರುವಿಕೆ ೩೫.೯ ದಶಲಕ್ಷ (ಸುಮಾರು ೧೧% ರಷ್ಟು ಜನಸಂಖ್ಯೆ ) ೩.೩ ದಶಲಕ್ಷ (ಸುಮಾರು ೫.೫% ಜನಸಂಖ್ಯೆ n)
ಅಸ್ತಮಾ ೧೦ ದಶಲಕ್ಷ ಜನರು ಅಲರ್ಜಿಕ ಆಸ್ತಮಾದಿಂದ ಬಳಲುತ್ತಾರೆ. (ಸುಮಾರು ೩% ರಷ್ಟು ಜನಸಂಖ್ಯೆ ). ಸುಮಾರು ೧೯೮೦-೧೯೯೪ರ ವರೆಗೆ ೭೫%ರಷ್ಟು ಆಸ್ತಮಾ ಪ್ರಕರಣಗಳು ಹೆಚ್ಚಾಗಿವೆ. Asthma prevalence is ೩೯% higher in ಆಫ್ರಿಕನ್ ಅಮೆರಿಕನ್ ರು ಯುರೊಪಿಯನ್ ರಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಮಾಕ್ಕೆ ಗುರಿಯಾಗುತ್ತಾರೆ.ಸುಮಾರು೩೯%ರಷ್ಟು ಅಧಿಕವಿದೆ. ೫.೭ ದಶಲಕ್ಷ (ಸುಮಾರು ೯.೪%). ಸುಮಾರು ಆರರಿಂದ ಏಳು ವರ್ಷದವರಲ್ಲಿ ಅಂದಾಜು೧೮.೪%ದಿಂದ ೨೦.೯%ರಷ್ಟು ಕಳೆದ ಐದು ವರ್ಷಗಳಲ್ಲಿ ಹೆಚ್ಚಳ.ಇದೇ ಅವಧಿಯಲ್ಲಿ ಸುಮಾರು೩೧%ರಿಂದ ೨೪.೭ರಷ್ಟು ಅಸ್ತಮಾ ಪ್ರಕರಣಗಳು ೧೩ ಮತ್ತು೧೪ನೆಯ ವರ್ಷದವರಲ್ಲಿ ಕಡಿಮೆಯಾಗಿದೆ.
ಅಟೊಪಿಕ್ ಎಸ್ಜಿಮಾ ಸುಮಾರು ೯% ರಷ್ಟು ಜನಸಂಖ್ಯೆ. }ಸುಮಾರು ೧೯೬೦ರಿಂದ ೧೯೯೦ರವರೆಗೆ ಮಕ್ಕಳಲ್ಲಿ ೩%ರಿಂದ ೧೦%ರಷ್ಟು ಅಧಿಕ. ೫.೮ ದಶಲಕ್ಷ (ಸುಮಾರು ೧%ರಷ್ಟು ತೀವ್ರತರ ).
ಅನಾಫಿಲ್ಕ್ಸಸ್ (ಸೂಕ್ಷ್ಮ ಸಂವೇದನೆಶೀಲತೆ) ಸುಮಾರು ೪೦ರಷ್ಟು ಸಾವುಗಳು ಪ್ರತಿವರ್ಷ ವಿಷಪೂರಿತ ಕೀಟಗಳಿಂದ ಸಂಭವಿಸುತ್ತವೆ. ಸುಮಾರು ೪೦೦ ಸಾವುಗಳು ಪೆನ್ಸಿಲಿನ್ ಸಂವೇದನೆಗಳಿಗೆ ಬಲಿ ಸುಮಾರು ೨೨೦ರಷ್ಟು ಅನಾಫೆಲಿಸಿಯಸ್ (ಸೂಕ್ಷ್ಮ ಸಂವೇದನೆಯ ವಿಪರೀತ)ಪ್ರಕರಣಗಳು ಮತ್ತು ೩ಸಾವುಗಳು,ಪ್ರತಿವರ್ಷ ವಿಪರೀತ ಅಲರ್ಜಿ..ಒಂದು ಅಂದಾಜಿನಂತೆ ಸುಮಾರು೧೫೦ಜನರು ಪ್ರತ್ರಿವರ್ಷ ಆನಾಫೆಲಿಕ್ಸ್ ಆಹಾರ ಅಲರ್ಜಿಯಿಂದ ಸಾವಿಗೀಡಾಗುತ್ತಾರೆ. ಸುಮಾರು ೧೯೯೯ ಮತ್ತು ೨೦೦೬ರ ಅವಧಿಯಲ್ಲಿ ಐದು ತಿಂಗಳ ಮಗುವಿನಿಂದ ಹಿಡಿದು ೮೫ವರ್ಷ ವಯಸ್ಸಿನವರ ವರೆಗೂ ಸಾವುಗಳು ವರದಿಯಾಗಿವೆ.
ಜೇನು ಹುಳು ಕೀಟ ಸುಮಾರು ೧೫%ರಷ್ಟು ವಯಸ್ಕರಲ್ಲಿ ಸ್ಥಳೀಯ ಆಲರ್ಜಿಕ್ ಪ್ರತಿಕ್ರಿಯೆಗಳು ಕಾಣಿಸುತ್ತವೆ. ಸುಮಾರು೩%ರಷ್ಟುಪ್ರತಿಕ್ರಿಯೆಗಳು ವಯಸ್ಕರಲ್ಲಿ ಅಲ್ಲದೇ೧%ಕಿಂತ ಕಡಿಮೆ ಮಕ್ಕಳಲ್ಲಿ ಇದು ಕಾಣಸಿಗುತ್ತದೆ. ತಿಳಿದಿಲ್ಲ
ಔಷಧಿ ಅಲರ್ಜಿಗಳು ಪೆನ್ಸಿಲಿನ್ ನಿಂದ ಉಂಟಾಗುವ ತೀವ್ರ ಗತಿಯ ಸಂವೇದನಾ ಪ್ರತಿಕ್ರಿಯೆಗಳಿಂದ ಪ್ರತಿ ವರ್ಷ ೪೦೦ಸಾವು ಸಂಭವಿಸುತ್ತವೆ. ತಿಳಿದಿಲ್ಲ
ಆಹಾರದ ಅಲರ್ಜೀಸ್ US ನ ಸುಮಾರು ೬%ರಷ್ಟು ೩ ಮತ್ತು೩.೫ರ ವಯೋಮಾನದ ಮಕ್ಕಳು ಇದರಲ್ಲಿ[ಸೂಕ್ತ ಉಲ್ಲೇಖನ ಬೇಕು]ಸೇರುತ್ತಾರೆ. ಬಟಾಣಿ ಮತ್ತು/ಅಥವಾ ಅದೇ ತೆರನಾದ ಕಾಳು (ಉದಾಹರಣೆಗೆ ವಾಲ್ ನಟ್ , ಬದಾಮಿ ಕಾಯಿ ಮತ್ತು ಗೋಡಂಬಿ ) ಹೀಗೆ ಸುಮಾರು ಮೂರು ದಶಲಕ್ಷ ಇಲ್ಲವೆ ಒಟ್ಟು ಜನಸಂಖ್ಯೆಯ ೧.೧%ರಷ್ಟು ಅಮೆರಿಕನ್ ರಿಗೆ ಅಲರ್ಜಿಗೆ ತುತ್ತಾಗುತ್ತಾರೆ. ೫-೭% ರಷ್ಟು ಹಸುಗೂಸುಗಳು ಮತ್ತು ೧-೨% ರಷ್ಟು ವಯಸ್ಕರು. ಸುಮಾರು ೧೧೭.೩%ರಷ್ಟು ಬಟಾಣಿ ಕಾಳಿನಿಂದಾಗಿ ಅಲರ್ಜಿಯಲ್ಲಿ ಹೆಚ್ಚಳ ಕಂಡಿದ್ದು ೨೦೦೧ರಿಂದ ೨೦೦೫ರ ವರೆಗೆ,ಇಂಗ್ಲೆಂಡಿನಲ್ಲಿ ಒಟ್ಟು ೨೫,೭೦೦ ಜನರು ಇದರಿಂದಾಗಿ ಅಪಾಯಕ್ಕೊಳಗಾಗಿದ್ದಾರೆ.
ಬಹುವಿಧದ ಅಲರ್ಜಿಗಳು
(ಅಸ್ತಮಾ, ಎಸ್ಜಿಮಾ ಮತ್ತು ಅಲರ್ಜಿಕ್ ಮೂಗು ಸೋರುವಿಕೆ ಒಟ್ಟಿಗೆ)
ತಿಳಿದಿಲ್ಲ ೨.೩ ದಶಲಕ್ಷ (ಸುಮಾರು ೩.೭%),ಅಂದರೆ ೨೦೦೧ ಮತ್ತು ೨೦೦೫ರ ನಡುವೆ ಒಟ್ಟು ೪೮.೯ರಷ್ಟು ಅಧಿಕಗೊಂಡಿದೆ.

ಏನೇ ಆದರೂ ವಂಶವಾಹಿನಿಗಳು ಅಟೊಪಿಕ್ (ನಿರಂತರ ಅಲರ್ಜಿ) ಕಾಯಿಲೆಗೆ ಪ್ರಮುಖ ಸಂಶಯದ ಕಾರಣ ಎಂದು ಹೇಳಬಹುದು.ಆಯಾ ಜನಾಂಗದಲ್ಲಿನ ಸಮುದಾಯದ ಅನುವಂಶೀಯ ಲಕ್ಷಣಗಳು ಈ ಸಂದರ್ಭದಲ್ಲಿ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತವೆ.ಇವು ಬಹಳ ಮುಖ್ಯವಾಗಿ ಆ ಜನರು ವಾಸಿಸುವ ಮತ್ತು ಜೀವನ ಶೈಲಿಯ ಪ್ರಕಾರಗಳನ್ನು ಆಧರಿಸಿದೆ. ಕೆಲವು ಆರೋಗ್ಯದ ಸೂತ್ರಗಳು ಇಂತಹ ಬದಲಾವಣೆ ಮತ್ತು ವಾತಾವರಣದ ಪರಿಣಾಮಗಳನ್ನು ವಿವರಿಸಲು ಯತ್ನಿಸಿವೆ.ಕೆಲವು ಸಾಂಪ್ರಾದಯಿಕ ನಿರಂತರ ಸಾಮಾನ್ಯವಾದ ಅಲರ್ಜಿನ್ ಗಳು ಮನೆ ಅಥವಾ ವಾಸಸ್ಥಾನ ಬದಲಾವಣೆ ಮಾಡುವುದರಿಂದ,ಸಮೂಹದ ರೋಗ ನಿರೋಧಕ ಶಕ್ತಿಗಳನ್ನು ವೃದ್ಧಿಸುವ ವಿಧಾನಗಳಿಂದ,ಅಲ್ಲದೇ ಇದು ಆಹಾರ ಪದ್ದತಿಗಳಲ್ಲಿನ ತೀಕ್ಷ್ಣ ಬದಲಾವಣೆ ಅಥವಾ ದೈಹಿಕ ವ್ಯಾಯಾಮದ ಕೊರತೆಗಳು ಅಲರ್ಜಿಯ ಹುಟ್ಟು ಮತ್ತು ನಿಯಂತ್ರಣವನ್ನು ಅವಲಂಬಿಸಿವೆ. ಆದ್ದರಿಂದ ಆರೋಗ್ಯದ ಸೂತ್ರಗಳು ಯಾವಾಗಲೂ ಉತ್ತಮ ಜೀವನಮಟ್ಟವನ್ನು ಸಂಕೇತಿಸುತ್ತವೆ,ಇಂತಹ ಕಡೆಗಳಲ್ಲಿ ಮಕ್ಕಳು ಅಲರ್ಜಿಗೆ ಬಲಿಪಶುವಾಗುವುದು ಕಡಿಮೆ. ಆರಂಭದಲ್ಲಿ ಬ್ಯಾಕ್ಟೀರಿಯಲ್ ಮತ್ತು ವೈರಲ್ ಸೋಂಕುಗಳಿಂದ ದೂರ ಇರುವುದರಿಂದ ದೇಹವು TH೧ ಗಳ ಪ್ರತಿಕ್ರಿಯೆಯಿಂದ ದೂರ ಇದ್ದು ತನ್ನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಸಾಧ್ಯತೆ ಇರುತ್ತದೆ.ಇಂತಹ ಲಕ್ಷಣಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಲರ್ಜಿಯನ್ನು ಅಧಿಕಗೊಳಿಸಿಕೊಳ್ಳುವ ಸಾಧಯ್ತೆ ಹೆಚ್ಚು. ಆದರೆ ಸೋಂಕುಗಳಲ್ಲಿ ದರದಲ್ಲಾಗುವ ಏರಿಳಿತಗಳು ಅಲರ್ಜಿಯ ಮಾನದಂಡಗಳಾಗುವುದು ಕಷ್ಟ.ಇದರಿಂದಾಗಿ ಅಲರ್ಜಿಗೆ ಸಂಬಂಧಿಸಿದ ಕಾಯಿಲೆಗಳೆಂದು ವಿವರಿಸುವುದು ಕಷ್ಟಸಾಧ್ಯ.ಗ್ಯಾಸ್ಟ್ರೊಇಂಟೈನ್ಸಿಯಲ್ ಮೈಕ್ರೊಬಿಯಲ್ ವಾತಾವರಣ ಕೂಡಾ ಅಲರ್ಜಿಗಳ ನಿಯಂತ್ರಣಕ್ಕೆ ಮಹತ್ವ ಕೊಡುತ್ತದೆ.ಇತ್ತೀಚಿನ ಸಾಕ್ಷಿಗಳ ಪ್ರಕಾರದ ಕರುಳು ಮತ್ತು ಜೀರ್ಣಾಂಗದ ಬಗೆಗಿನ ಅಲರ್ಜಿಗಳು ಜನರಲ್ಲಿ ಅಧಿಕಗೊಳ್ಳುತ್ತಿರುವುದು ಆರೋಗ್ಯ ಸೂತ್ರಗಳನ್ನು ಜಾರಿ ಮಾಡುವವರ ಕಳಕಳಿಯಾಗಿದೆ. ಇತ್ತೀಚಿನ ಸಾಕ್ಷಿಗಳ ಪ್ರಕಾರ ಬಲಹೀನತೆ-ನೈಜತೆಗೆ ಕಾರಣವಾಗುವ ಹೆಪಾಟೈಟಿಸ್ A,ಟೊಕ್ಸೊಪ್ಲಾಸ್ಮಾ ಗೊಂಡಿ ,ಮತ್ತು ಹೆಲಿಕೊಬ್ಯಾಕ್ಟರ್ ಪಿಲೊರಿ (ಇದು ಕೂಡಾ ಇಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಸ್ಳಲ್ಲಿ ಕಾಣಸಿಗುತ್ತಿದೆ.)ಇಲ್ಲಿ ಸುಮಾರು ೬೦%ರಷ್ಟು ಅಟೊಪಿಯ ಅಪಾಯವನ್ನು ಕಡಿಮೆ ಮಾಡಬಹುದು.ಪರಾವಲಂಬಿಗಳಿಂದ ಉಂಟಾಗುವ್ ಸೋಂಕುಗಳ ಪ್ರಮಾಣ ಹೆಚ್ಚಾದಂತೆ ಅಸ್ತಮಾ ಪ್ರಕರಣಗಳಲ್ಲಿ ಇಳಿಕೆ ಕಾಣುವ ಸಾಧಯ್ತೆ ಇರುತ್ತದೆ. ಇಂತಹ ಸೋಂಕುಗಳು ಹಲವಾರು ಬದಲಾವಣೆಗಳೊಂದಿಗೆ ತಮ್ಮ ಕಾರ್ಯಚಟುವಟಿಕೆಯನ್ನು ನಡೆಸುತ್ತವೆ.ಅಂದರೆTH೧/TH೨ ಇದರ ನಿಯಂತ್ರಣವನ್ನೂ ಅದು ಮಾಡುವಲ್ಲಿ ಸಫಲವಾಗುತ್ತದೆ. ಆರೋಗ್ಯ ಸೂತ್ರಗಳನ್ನು ಪಾಲಿಸುವಾಗ ಕೆಲವು ವಸ್ತುಗಳಿಗೆ ಒಡ್ಡಿಕೊಳ್ಳುವುದನ್ನೂ ಸಹ ನಿಯಂತ್ರಿಸಬೇಕಾಗುತ್ತದೆ.ಅಂದರೆ ಎಂಡೊಟಾಕ್ಸಿನ್ ಗಳು ,ಸಾಕು ಪ್ರಾಣಿಗಳು ಮತ್ತು ಹೊಲ ತೋಟದ ಭಾಗದಲ್ಲಿನ ವಾತಾವರಣಗಳಿಗೆ ಹೊಂದದ ಸ್ಥಿತಿಗಳು ಇಂತಹಗಳೆಡೆ ಒಡ್ಡಿಕೊಳ್ಳುವ ವಾತಾವರಣ ನಿರ್ಮಾಣ ಮಾಡುತ್ತವೆ.

ವೈದ್ಯಕೀಯ ವಿಶೇಷತೆ

ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಅಮೆರಿಕನ್ ಬೋರ್ಡ್ ಆಫ್ ಅಲರ್ಜಿ ಅಂಡ್ ಇಮ್ಮುನೊಲ್ಲಾಜಿ(ABAI)ಯ ಪ್ರಮಾಣ ಪತ್ರಗಳನ್ನು ಪಡೆದಿರುವ ವೈದ್ಯರು ಈ ವಿಷಯ ಕುರಿತಂತೆ ಸಂಪೂರಣ ಶೈಕ್ಷಣಿಕ ಜ್ಞಾನ ಮತ್ತು ಅಧಿಕೃತ ಯೋಜನೆಗಳ ಚೌಕಟ್ಟನ್ನು ನಿರ್ಮಿಸಿಕೊಂಡಿದ್ದಾರೆ.ಇದರಲ್ಲಿ ಅವರ ಕುಶಲತೆ,ಜಾಣ್ಮೆ,ವಿಷಯದ ಜಾಗೃತಿ ಅಭಿಯಾನ,ರೋಗಿಗಳ ಕಾಳಜಿ ಅವರಲ್ಲಿನ ಪ್ರಮುಖ ಅಲರ್ಜಿ ಮತ್ತುರೋಗ ನಿರೋಧಕ ಶಕ್ತಿಯನ್ನು ಸರಿದೂಗಿಸುವುದು ಅಲ್ಲಿನ ವೈದ್ಯರ ವಿಶೇಷತೆಯೆನಿಸಿದೆ. .ಓರ್ವ ಅಲರ್ಜಿಸ್ಟ್ -ಇಮ್ಮುನೊಲೊಜಿಸ್ಟ್ ಎಂದರೆ ವಿಶೇಷವಾಗಿ ಅಲರ್ಜಿಗೆ ಸಂಬಂಧಪಟ್ಟ ಕಾಯಿಲೆಗಳ ಸಂಪೂರ್ಣ ಅಧ್ಯಯನ ಮತ್ತು ಅಸ್ತಮಾ ಹಾಗು ಇತರೆ ಅಲರ್ಜಿ ರೋಗಗಳ ಬಗ್ಗೆ ತೀವ್ರ ನಿಗಾ ವಹಿಸಬೇಕಾಗುತ್ತದೆ. ಅಲರ್ಜಿಸ್ಟ್ -ಇಮ್ಮುನೊಲೊಜಿಸ್ಟ್ ಎನಿಸ್ಕೊಳ್ಳಲು ಕನಿಷ್ಟ ಒಂಬತ್ತು ವರ್ಷಗಳ ವರೆಗೆ ಆತ ತರಬೇತಿ ಹೊಂದಿರಬೇಕಾಗುತ್ತದೆ. ವೈದ್ಯಕೀಯ ಕಲಿಕೆ ಮತ್ತು ವೈದ್ಯಕೀಯ ಪದವಿ ಪಡೆದುಕೊಂಡ ನಂತರ ಆತ ಸುಮಾರು ಮೂರು ವರ್ಷಗಳ ಕಾಲ ತರಬೇತಿ ಪಡೆಯಬೇಕಾಗುತ್ತದೆ.(ಆಗ ಮಾತ್ರ ಆತ ಇಂಟರ್ನಿಷ್ಟ್ ಪಿಡಿಯಾಟ್ರಿಕ್ಸ್ )ಆಗಿ ಕರೆಯಲಪಡುತ್ತಾನೆ. ಒಮ್ಮೆ ಈ ತರಬೇತಿಯನ್ನು ಪೂರೈಸಿದ ವೈದ್ಯರು ಅಮೆರಿಕನ್ ಬೋರ್ಡ್ ಆಫ್ ಪಿಡಿಯಾಟ್ರಿಕ್ಸ್(ABP) ಅಥವಾ ದಿ ಅಮೆರಿಕನ್ ಬೋರ್ಡ್ ಆಫ್ ಇಂಟರ್ನಲ್ ಮೆಡಿಸಿನ್ (ABIM)ಗಳಿಂದ ಪ್ರಮಾಣಪತ್ರವನ್ನು ಪಡೆದು ವಿಶೇಷ ವೈದ್ಯನೆನಿಸಿಕೊಳ್ಳಬೇಕಾಗುತ್ತದೆ. ಅಲರ್ಜಿ-ಇಮ್ಮುನೊಲೊಜಿ ಉಪವಿಭಾಗದಲ್ಲಿ ಇಂಟರ್ನಿಷ್ಟ್ಸ್ ಅಥವಾ ಪಿಡಿಯಾಟ್ರಿಸಿಯನ್ಸ್ ಗಳು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕಾದರೆ ಮತ್ತೆ ಎರಡು ವರ್ಷಗಳ ಕಾಲ ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕಾಗುತ್ತದೆ.ಇದನ್ನು ಫೆಲೊಶಿಪ್ ಅಥವಾ ಅಲರ್ಜಿ-ಇಮ್ಮುನೊಲೊಜಿ ಪ್ರೊಗ್ರಾಮ್ ಎಂದು ಹೇಳಲಾಗುತ್ತದೆ. ABAIನಲ್ಲಿ ಪ್ರಮಾಣಪತ್ರ ಪಡೆದಿರುವ ಅಲರ್ಜಿಸ್ಟ್ -ಇಮ್ಮುನೊಲೊಜಿಸ್ಟ್ ಗಳು ಯಶಸ್ವಿಯಾಗಬೇಕೆಂದರೆ ಪ್ರಮಾಣಿಕೃತ ಅಮೆರಿಕನ್ ಬೋರ್ಡ್ ಆಫ್ ಅಲರ್ಜಿ ಅಂಡ್ ಇಮ್ಮುನೊಲೊಜಿ(ABAI)ಯ ಫೆಲೊಶಿಪ್ ನೊಂದಿಗೆ ತಮ್ಮ ಪ್ರಾಕ್ಟೀಸ್ ನ್ನು ಆರಂಭಿಸಬೇಕಾಗುತ್ತದೆ. ಯುನೈಟೆಡ್ ಕಿಂಗ್ಡಮ್ ನಲ್ಲಿ ಅಲರ್ಜಿಯು ಒಂದು ಜನರಲ್ ಮೆಡಿಸಿನ್ ಅಥವಾ ಪಿಡಿಯಾಟ್ರಿಕ್ಸ್ ನ ವಿಶೇಷ ಉಪವಿಭಾಗವೆನಿಸಿದೆ. (MRCP ಅಥವಾ MRCPCHಗಳಲ್ಲಿಕ್ರಮವಾಗಿ ಸ್ನಾತಕೋತ್ತರ ಪದವಿ ಪಡೆದ ನಂತರ ಈ ವೈದ್ಯರು ಹಲವಾರು ವರ್ಷಗಳ ಕಾಲ ಕೆಲಸ ಮಾಡುತ್ತಾರೆ,ಸ್ಪೆಸಿಯಾಲಿಸ್ಟ್ ರಜಿಸ್ಟ್ರಾರರ್ ಎಂದು ಕರೆಸಿಕೊಳ್ಳಲು ಜನರಲ್ ಮೆಡಿಕಲ್ ಕೌನ್ಸಿಕಲ್ ಸ್ಪೆಸಿಯಾಲಿಸ್ಟ್ ರಜಿಸ್ಟ್ರಾರ್ ಎಂದು ನಮೂದಿಸಿಕೊಳ್ಳಬೇಕಾಗುತ್ತದೆ. ಇಮ್ಮುನೊಲೊಜಿಸ್ಟ್ ಗಳು ಹಲವಾರು ಅಲರ್ಜಿಗಳನ್ನೂ ಕೂಡಾ ಚಿಕಿತ್ಸೆ ನೀದುವ ಮೂಲಕ ರೋಗಿಗಳಿಗೆ ನೆರವಾಗುತ್ತಾರೆ. ರಾಯಲ್ ಕಾಲೇಜ್ ಆಫ್ ಫಿಜಿಸಿಯನ್ಸ್ ೨೦೦೩ರಲ್ಲಿ ನೀಡಿದ ಒಂದು ವರದಿಯ ಪ್ರಕಾರ UKನಲ್ಲಿನ ವೈದ್ಯರು ಅಲರ್ಜಿಯನ್ನು ಗುಣಪಡಿಸುವಲ್ಲಿ ಅಷ್ಟಾಗಿ ಆಸಕ್ತಿ ವಹಿಸುತ್ತಿಲ್ಲ ಎಂಬ ಟೀಕೆಗಳೂ ಇವೆ. ಸುಮಾರು ೨೦೦೬ರಲ್ಲಿ ಹೌಸ್ ಆಫ್ ಲಾರ್ಡ್ಸ್ ಉಪಸಮಿತಿಯು ಸಭೆಯೊಂದನ್ನು ಕರೆಯಿತು.ಇದು ೨೦೦೭ರಲ್ಲಿ ವರದಿ ನೀಡಿತು. ಒಟ್ಟಾರೆಯಾಗಿ ಅಲರ್ಜಿ ಉಪಶಮನದ ಚಿಕಿತ್ಸೆಗಳು ಅಷ್ಟಾಗಿ ತೃಪ್ತಿಕರವಾಗಿ ಸೇವೆಯನ್ನು ನೀಡುತ್ತಿಲ್ಲ."ಅಲರ್ಜಿ ಸೋಂಕುರೋಗ"ಎಂಬ ಪದವನ್ನು ಸಾಮಾಜಿಕ ಪಿಡುಗನ್ನಾಗಿ ಪರಿಗಣಿಸುವಂತೆ ಹಲವಾರು ಶಿಫಾರಸುಗಳು ಜಾರಿಯಲ್ಲಿವೆ.

ಇವನ್ನೂ ನೋಡಿ

  • ಅಲರ್ಜಿಕ್ ಇನ್ ಫ್ಲೇಮೇಶನ್
  • ಬಾಸ್ಫಿಲ್ ಆಕ್ಟಿವೇಶನ್
  • ಅಲರ್ಜಿನ್
  • ಅಫಿಲ್ಯಾಕಿಸಸ್
  • ಹೈಪರ್ ಸೆನ್ ಸಿಟಿವಿಟಿ
  • ಹೈಪೊಅಲರ್ಜನಿಕ್
  • ಇಮ್ಮ್ಯುನೊಗ್ಲೊಬುಲಿನ್ E
  • ಆಂಟಿಬಾಡಿ
  • ಮಲ್ಟಿಪಲ್ ಕೆಮಿಕಲ್ ಸೆನ್ ಸಿಟಿವಿಟಿ
  • ಒರಲ್ ಅಲರ್ಜಿ ಸಿಂಡ್ರೊಮ್
  • ಉರ್ಟಿಕೇರಿಯಾ
  • ಮೆಡಿಕಲ್ ಟಾಟೂ

ಹೆಚ್ಚಿನ ಮಾಹಿತಿ

ಆಕರಗಳು

ಬಾಹ್ಯ ಕೊಂಡಿಗಳು

Tags:

ಅಲರ್ಜಿ ವರ್ಗೀಕರಣ ಮತ್ತು ಇತಿಹಾಸಅಲರ್ಜಿ ಲಕ್ಷಣಗಳು ಮತ್ತು ಗುಣಲಕ್ಷಣಗಳುಅಲರ್ಜಿ ಕಾರಣಅಲರ್ಜಿ ರೋಗಶರೀರಶಾಸ್ತ್ರಅಲರ್ಜಿ ರೋಗನಿರ್ಣಯಅಲರ್ಜಿ ಸೋಂಕುಸಾಂಕ್ರಾಮಿಕಶಾಸ್ತ್ರಅಲರ್ಜಿ ವೈದ್ಯಕೀಯ ವಿಶೇಷತೆಅಲರ್ಜಿ ಇವನ್ನೂ ನೋಡಿಅಲರ್ಜಿ ಆಕರಗಳುಅಲರ್ಜಿ ಬಾಹ್ಯ ಕೊಂಡಿಗಳುಅಲರ್ಜಿಕಣಜಜನಸಂಖ್ಯೆಹುಳು

🔥 Trending searches on Wiki ಕನ್ನಡ:

ಸ್ವರಆಟಹನುಮಾನ್ ಚಾಲೀಸಮಲೇರಿಯಾಉಡಡಾ ಬ್ರೋರಾಷ್ಟ್ರಕವಿನಗರೀಕರಣಜೀನುಜಶ್ತ್ವ ಸಂಧಿಪ್ರಬಂಧ ರಚನೆಭಾರತೀಯ ಕಾವ್ಯ ಮೀಮಾಂಸೆಅಕ್ಕಮಹಾದೇವಿಹಣಕನ್ನಡ ಕಾಗುಣಿತಮೊದಲನೆಯ ಕೆಂಪೇಗೌಡಭಾರತದ ಇತಿಹಾಸಪುಟ್ಟರಾಜ ಗವಾಯಿಓಂ (ಚಲನಚಿತ್ರ)ಜಾನಪದಛತ್ರಪತಿ ಶಿವಾಜಿಡಿ.ವಿ.ಗುಂಡಪ್ಪವಿಜಯನಗರಮಂಕುತಿಮ್ಮನ ಕಗ್ಗನದಿವಿಧಾನ ಸಭೆಸವದತ್ತಿಜಾಗತಿಕ ತಾಪಮಾನ ಏರಿಕೆಎ.ಎನ್.ಮೂರ್ತಿರಾವ್ಭಾರತದ ಆರ್ಥಿಕ ವ್ಯವಸ್ಥೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮೈಸೂರು ದಸರಾದಿಕ್ಸೂಚಿನಗರಲಸಿಕೆಗಾದೆಬಿಳಿಗಿರಿರಂಗನ ಬೆಟ್ಟಚಿತ್ರದುರ್ಗಕಮಲಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಕ್ತಿ ಚಳುವಳಿಯೇಸು ಕ್ರಿಸ್ತಹಾಗಲಕಾಯಿಶ್ರೀಧರ ಸ್ವಾಮಿಗಳುಪಟ್ಟದಕಲ್ಲುಕನ್ನಡ ಸಾಹಿತ್ಯಯೂಟ್ಯೂಬ್‌ಕನ್ನಡ ಚಿತ್ರರಂಗಕವಿರಾಜಮಾರ್ಗಮಾನವ ಸಂಪನ್ಮೂಲ ನಿರ್ವಹಣೆಹಿಂದೂ ಮಾಸಗಳುಚಿತ್ರದುರ್ಗ ಜಿಲ್ಲೆಬೆಳಗಾವಿಸಮುದ್ರಗುಪ್ತಇ-ಕಾಮರ್ಸ್ವೀರಪ್ಪನ್ಮೈಗ್ರೇನ್‌ (ಅರೆತಲೆ ನೋವು)ಭಾರತ ಸಂವಿಧಾನದ ಪೀಠಿಕೆಆಗಮ ಸಂಧಿಹೊಂಗೆ ಮರಮದುವೆಗೋಲ ಗುಮ್ಮಟಕರ್ಣಭೋವಿಯುಗಾದಿಝಾನ್ಸಿ ರಾಣಿ ಲಕ್ಷ್ಮೀಬಾಯಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿತತ್ಪುರುಷ ಸಮಾಸಅಕ್ಷಾಂಶ ಮತ್ತು ರೇಖಾಂಶಮಹಾಕವಿ ರನ್ನನ ಗದಾಯುದ್ಧತತ್ಸಮ-ತದ್ಭವಭಾರತದಲ್ಲಿನ ಜಾತಿ ಪದ್ದತಿಮಾಹಿತಿ ತಂತ್ರಜ್ಞಾನಮಳೆನೀರು ಕೊಯ್ಲು🡆 More