ವೀರ್ಯ

ವೀರ್ಯದ್ರವ ಎಂದೂ ಕರೆಯಲ್ಪಡುವ ವೀರ್ಯವು ರೇತ್ರಗಳನ್ನು ಹೊಂದಿರುವ ಸಾವಯವ ದೈಹಿಕ ದ್ರವವಾಗಿದೆ.

ಗಂಡು ಜನನ ಗ್ರಂಥಿಗಳು (ಲೈಂಗಿಕ ಗ್ರಂಥಿಗಳು) ಮತ್ತು ಗಂಡು ಅಥವಾ ಉಭಯಲಿಂಗ ಪ್ರಾಣಿಗಳ ಇತರ ಲೈಂಗಿಕ ಅಂಗಗಳು ರೇತ್ರಗಳನ್ನು ಸ್ರವಿಸುತ್ತವೆ ಮತ್ತು ಇದು ಹೆಣ್ಣು ಅಂಡಾಣುವನ್ನು ಫಲೀಕರಿಸಬಲ್ಲದು. ವೀರ್ಯವು ವಸ್ತಿಕುಹರದಲ್ಲಿ ನೆಲೆಗೊಂಡಿರುವ ರೇತಸ್ಸುಕೋಶದಿಂದ ಉತ್ಪತ್ತಿಯಾಗುತ್ತದೆ. ಮೂತ್ರವಿಸರ್ಜನ ನಾಳದ ರಂಧ್ರದಿಂದ ವೀರ್ಯದ ವಿಸರ್ಜನೆಗೆ ಕಾರಣವಾಗುವ ಪ್ರಕ್ರಿಯೆಯನ್ನು ಸ್ಖಲನ ಎಂದು ಕರೆಯಲಾಗುತ್ತದೆ. ಮಾನವರಲ್ಲಿ, ವೀರ್ಯದ್ರವವು ವೀರ್ಯದ ಹೊರತಾಗಿ ಹಲವಾರು ಘಟಕಗಳನ್ನು ಹೊಂದಿರುತ್ತದೆ: ಪ್ರೋಟೀನ್ ಲಯಕ ಮತ್ತು ಇತರ ಕಿಣ್ವಗಳು ಜೊತೆಗೆ ಫ್ರಕ್ಟೋಸ್ ವೀರ್ಯದ್ರವದ ಘಟಕಗಳಾಗಿವೆ. ಇವು ರೇತ್ರಗಳ ಉಳಿವನ್ನು ಉತ್ತೇಜಿಸುತ್ತವೆ ಮತ್ತು ರೇತ್ರಗಳಿಗೆ ಚಲಿಸುವ ಅಥವಾ "ಈಜುವ" ಮಾಧ್ಯಮವನ್ನು ಒದಗಿಸುತ್ತವೆ. ದ್ರವವನ್ನು ಯೋನಿಯೊಳಗೆ ಆಳವಾಗಿ ಹೊರಹಾಕಲು ಅಳವಡಿಸಲಾಗಿದೆ. ಇದರಿಂದ ವೀರ್ಯವು ಗರ್ಭಾಶಯದೊಳಗೆ ಸಾಗಿ ಒಂದು ಅಂಡದೊಂದಿಗೆ ಯುಗ್ಮಜವನ್ನು ರೂಪಿಸುತ್ತದೆ.

ವೀರ್ಯ
ಮಾನವರಲ್ಲಿ, ರೇತ್ರಗಳು ಸಾಮಾನ್ಯ ವೀರ್ಯದಲ್ಲಿನ ಪ್ರಾಥಮಿಕ ಘಟಕವಾಗಿವೆ ಮತ್ತು ಹೆಣ್ಣು ಅಂಡಾಣುಗಳ ಫಲೀಕರಣದ ಪದಾರ್ಥಗಳಾಗಿವೆ.

ಮಾನವರ ವೀರ್ಯ

ಸ್ಖಲನ ಪ್ರಕ್ರಿಯೆಯಲ್ಲಿ, ವೀರ್ಯಾಣುವು ಸ್ಖಲನ ನಾಳಗಳ ಮೂಲಕ ಸಾಗಿ, ವೀರ್ಯ ಕೋಶಕಗಳು, ಪ್ರಾಸ್ಟೇಟ್ ಮತ್ತು ಬಲ್ಬೊಯುರೆಥ್ರಲ್ ಗ್ರಂಥಿಗಳ ದ್ರವಗಳೊಂದಿಗೆ ಮಿಶ್ರಣವಾಗಿ ವೀರ್ಯವನ್ನು ರೂಪಿಸುತ್ತದೆ. ವೀರ್ಯ ಕೋಶಕಗಳು ಫ್ರಕ್ಟೋಸ್ ಮತ್ತು ಇತರ ಪದಾರ್ಥಗಳಲ್ಲಿ ಸಮೃದ್ಧವಾಗಿರುವ ಹಳದಿ ಮಿಶ್ರಿತ ಸ್ನಿಗ್ಧ ತರಲವನ್ನು ಉತ್ಪಾದಿಸುತ್ತವೆ. ಇದು ಮಾನವನ ವೀರ್ಯದ ಸುಮಾರು 70% ರಷ್ಟಿರುತ್ತದೆ. ಡೈಹೈಡ್ರೊಟೆಸ್ಟೋಸ್ಟೆರಾನ್‌ನಿಂದ ಪ್ರಭಾವಿತವಾಗಿರುವ ಪ್ರಾಸ್ಟೇಟ್‍ನ ಸ್ರಾವವು ಪ್ರೋಟಿನ್ ಲಯಕ ಕಿಣ್ವಗಳು, ಸಿಟ್ರಿಕ್ ಆಮ್ಲ, ಆಮ್ಲ ಫಾಸ್ಫಟೇಸ್ ಮತ್ತು ಲಿಪಿಡ್‌ಗಳನ್ನು ಒಳಗೊಂಡಿರುವ ಬಿಳಿಯ (ಕೆಲವೊಮ್ಮೆ ನಿರಭ್ರ), ತೆಳುವಾದ ದ್ರವವಾಗಿದೆ. ಬಲ್ಬೊಯುರೆಥ್ರಲ್ ಗ್ರಂಥಿಗಳು ಮೂತ್ರವಿಸರ್ಜನ ನಾಳವನ್ನು ಜಾರುವಂತಾಗಿಸಲು ಅದರ ಕುಹರದೊಳಗೆ ನಿರಭ್ರವಾದ ಸ್ರಾವವನ್ನು ಸ್ರವಿಸುತ್ತದೆ.

ಉಲ್ಲೇಖಗಳು

Tags:

ಅಂಗ (ಜೀವಶಾಸ್ತ್ರ)ಅಂಡಅಂಡಾಣುದ್ರವಪ್ರಾಣಿಪ್ರೋಟೀನ್ಮಾನವಯೋನಿ

🔥 Trending searches on Wiki ಕನ್ನಡ:

ಮಣ್ಣಿನ ಸಂರಕ್ಷಣೆಕಂಠೀರವ ನರಸಿಂಹರಾಜ ಒಡೆಯರ್ನೀರುಅಕ್ಷಾಂಶಸುಧಾ ಮೂರ್ತಿಸ್ವಚ್ಛ ಭಾರತ ಅಭಿಯಾನಗಣೇಶ ಚತುರ್ಥಿವಿಕಿರಾಮಾಯಣಕರ್ನಾಟಕ ಐತಿಹಾಸಿಕ ಸ್ಥಳಗಳುಸಿದ್ದಲಿಂಗಯ್ಯ (ಕವಿ)ಏಷ್ಯಾ ಖಂಡಚೌರಿ ಚೌರಾ ಘಟನೆಗಾದೆಕಾವ್ಯಮೀಮಾಂಸೆಕನ್ನಡ ಸಾಹಿತ್ಯ ಪರಿಷತ್ತುಬಿ. ಜಿ. ಎಲ್. ಸ್ವಾಮಿಪಂಚತಂತ್ರವಲ್ಲಭ್‌ಭಾಯಿ ಪಟೇಲ್ಮಂಡಲ ಹಾವುಬೌದ್ಧ ಧರ್ಮಕನ್ನಡ ಗುಣಿತಾಕ್ಷರಗಳುಪಕ್ಷಿಭಾರತೀಯ ಸಶಸ್ತ್ರ ಪಡೆಪರಶುರಾಮತೆಂಗಿನಕಾಯಿ ಮರಸಿದ್ದರಾಮಯ್ಯಧರ್ಮಸ್ಥಳಮುಮ್ಮಡಿ ಕೃಷ್ಣರಾಜ ಒಡೆಯರುಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಬಾಹುಬಲಿಅಂಕಿತನಾಮಬಸವರಾಜ ಕಟ್ಟೀಮನಿಕನ್ನಡ ರಾಜ್ಯೋತ್ಸವಭಾರತದ ಸಂಯುಕ್ತ ಪದ್ಧತಿಎಸ್. ಶ್ರೀಕಂಠಶಾಸ್ತ್ರೀತತ್ಸಮಮಾರ್ಕ್ಸ್‌ವಾದಭೀಮಸೇನಅಂಗವಿಕಲತೆಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುಕೊಪ್ಪಳದಾಸವಾಳಜಯಮಾಲಾಬಾದಾಮಿ ಶಾಸನಮಾದರ ಚೆನ್ನಯ್ಯರೈಲು ನಿಲ್ದಾಣಸಿಂಧೂತಟದ ನಾಗರೀಕತೆಹೂವುವಾಲ್ಮೀಕಿವಸುಧೇಂದ್ರಜಾಗತಿಕ ತಾಪಮಾನ ಏರಿಕೆತ್ರಿಪದಿಐಹೊಳೆಶಾತವಾಹನರುಕರ್ನಾಟಕದ ಇತಿಹಾಸಕರ್ನಾಟಕದ ತಾಲೂಕುಗಳುಮಾನವನ ಕಣ್ಣುಪೂರ್ಣಚಂದ್ರ ತೇಜಸ್ವಿದಾಸ ಸಾಹಿತ್ಯಟೈಗರ್ ಪ್ರಭಾಕರ್ಭಾರತದ ಮುಖ್ಯ ನ್ಯಾಯಾಧೀಶರುಭಾರತದಲ್ಲಿ ಮೀಸಲಾತಿಅಂಚೆ ವ್ಯವಸ್ಥೆಜಾಹೀರಾತುಕೈಗಾರಿಕೆಗಳುಅಂಬಿಗರ ಚೌಡಯ್ಯಕಂಪ್ಯೂಟರ್ಜೋಳಸ್ವರಕನ್ನಡ ವ್ಯಾಕರಣಕನ್ನಡ ಛಂದಸ್ಸುಸಂಚಿ ಹೊನ್ನಮ್ಮಸಾರಾ ಅಬೂಬಕ್ಕರ್ಸಂಗೀತ🡆 More