ವನುವಾಟು

ವನುವಾಟು ಗಣರಾಜ್ಯವು ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ.

ಈ ದ್ವೀಪಗುಚ್ಛವು ಆಸ್ಟ್ರೇಲಿಯಾದ ಈಶಾನ್ಯಕ್ಕೆ ೧೭೫೦ ಕಿ.ಮೀ. ದೂರದಲ್ಲಿದೆ. ೧೨೧೮೯ ಚ.ಕಿ.ಮೀ. ವಿಸ್ತೀರ್ಣವುಳ್ಳ ವನುವಾಟುವಿನ ಜನಸಂಖ್ಯೆ ಸುಮಾರು ೨೨೧೦೦೦. ರಾಷ್ಟ್ರದ ರಾಜಧಾನಿ ಪೋರ್ಟ್ ವಿಲಾ. ೧೮ನೆಯ ಶತಮಾನದ ಕೊನೆಯಲ್ಲಿ ವನುವಾಟುವಿನಲ್ಲಿ ಬ್ರಿಟಿಷರು ನೆಲೆಸತೊಡಗಿದರು. ೧೮೮೭ರಲ್ಲಿ ವನುವಾಟು ಆಂಗ್ಲರ ಹಾಗೂ ಫ್ರೆಂಚರ ಜಂಟಿ ನೌಕಾಪಡೆಗಳ ಆಡಳಿತಕ್ಕೆ ಒಳಪಟ್ಟಿತು. ೧೯೮೦ರಲ್ಲಿ ಪೂರ್ಣ ಸ್ವಾತಂತ್ರ್ಯ ಪಡೆದ ವನುವಾಟು ಗಣರಾಜ್ಯವಾಯಿತು. ವನುವಾಟು ೮೩ ದ್ವೀಪಗಳ ಸಮೂಹ. ಇವುಗಳ ಪೈಕಿ ೨ರ ಮೇಲೆ ಫ್ರಾನ್ಸ್ ಸ್ವಾಮಿತ್ವದ ದಾವೆ ಹೂಡಿದೆ. ಹೆಚ್ಚಿನ ಎಲ್ಲಾ ದ್ವೀಪಗಳೂ ಪರ್ವತಪ್ರಾಂತ್ಯ. ಉಷ್ಣವಲಯದ ಅಥವಾ ಸಮಶೀತೋಷ್ಣವಲಯದ ಹವಾಮಾನವನ್ನು ವನುವಾಟು ಹೊಂದಿದೆ. ದೇಶದಲ್ಲಿ ಲೊಪೇವಿ ಸೇರಿದಂತೆ ಹಲವಾರು ಸಕ್ರಿಯ ಜ್ವಾಲಾಮುಖಿಗಳಿವೆ. ಜ್ವಾಲಾಮುಖಿಗಳ ಸ್ಫೋಟಗಳು ವನುವಾಟುವಿಗೆ ನಿರಂತರ ಆತಂಕದ ವಿಷಯ. ಇತ್ತೀಚಿನ ಸ್ಫೋಟ ೧೯೪೫ರಲ್ಲಿ ಸಂಭವಿಸಿತು. ವನುವಾಟು ಹೆಚ್ಚು ಮಳೆ ಬೀಳುವ ವಲಯದಲ್ಲಿದೆ. ಕೃಷಿ ರಾಷ್ಟ್ರದ ಪ್ರಮುಖ ಉದ್ಯೋಗ. ನಾಡಿನ ೬೫% ಜನತೆ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಉಳಿದಂತೆ ಮೀನುಗಾರಿಕೆಯೂ ವ್ಯಾಪಕ. ರಫ್ತಾಗುವ ಸರಕುಗಳು ಬಹಳ ಕಡಿಮೆ. ರಾಷ್ಟ್ರವು ಜ್ವಾಲಾಮುಖಿಸ್ಫೋಟ, ಭೂಕಂಪ ಮತ್ತು ಸುನಾಮಿಗಳಂತಹ ನೈಸರ್ಗಿಕ ಪ್ರಕೋಪಗಳಿಗೆ ತುತ್ತಾಗುತ್ತಲೇ ಇದೆ. ದ್ವೀಪಗಳ ನಡುವೆ ಅಗಾಧ ಅಂತರವಿರುವುದು. ಈ ಕಾರಣಗಳಿಂದಾಗಿ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಮೆಲಾನೇಷ್ಯನ್ ಜನಾಂಗದವರು ಹೆಚ್ಚಿರುವ ವನುವಾಟುವಿನ ಮುಖ್ಯ ಭಾಷೆಗಳು ಇಂಗ್ಲಿಷ್, ಫ್ರೆಂಚ್ ಮತ್ತು ಬಿಸ್ಲಾಮಾ. ಇವಲ್ಲದೆ ನೂರಕ್ಕೂ ಹೆಚ್ಚು ಬುಡಕಟ್ಟು ಭಾಷೆಗಳೂ ನುಡಿಯಲ್ಪಡುತ್ತಿವೆ. ಬಹುಸಂಖ್ಯಾಕರು ಕ್ರಿಶ್ಚಿಯನ್ ಮತಾವಲಂಬಿಗಳು.

ವನುವಾಟು ಗಣರಾಜ್ಯ
ರಿಪಬ್ಲಿಕ್ ಬ್ಲಾಂಗ್ ವನುವಾಟು
ರಿಪಬ್ಲಿಕ್ ದಿ ವನುವಾಟು
Flag of ವನುವಾಟು
Flag
Coat of arms of ವನುವಾಟು
Coat of arms
Motto: "ಲಾಂಗ್ ಗಾಡ್ ಯುಮಿ ಸ್ಟನಪ್" (ನಾವು ದೇವರಲ್ಲಿ)
Anthem: ಯುಮಿ, ಯುಮಿ, ಯುಮಿ
Location of ವನುವಾಟು
Capital
and largest city
ಪೋರ್ಟ್ ವಿಲಾ
Official languagesಬಿಸ್ಲಾಮಾ, ಇಂಗ್ಲಿಷ್, ಫ್ರೆಂಚ್
Demonym(s)ವನುವಾಟುವನ್
Governmentಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಕಲ್ಕೋಟ್ ಮಟಸ್ಕೆಲೆಕೇಲೆ
• ಪ್ರಧಾನಿ
ಹಾಮ್ ಲಿನಿ
ಸ್ವಾತಂತ್ರ್ಯ 
ಫ್ರಾನ್ಸ್ ಮತ್ತು ಯು.ಕೆ.ಯಿಂದ
• ದಿನಾಂಕ
ಜುಲೈ ೩೦ 1980
• Water (%)
ಅಗಣನೀಯ
Population
• July 2006 estimate
209,000 (183ನೆಯದು)
GDP (PPP)2005 estimate
• Total
$726 ಮಿಲಿಯನ್ (175ನೆಯದು)
• Per capita
$3,346 (121ನೆಯದು)
HDI (2004)ವನುವಾಟು0.670
Error: Invalid HDI value · 119ನೆಯದು
Currencyವನುವಾಟು ವಾಟು (VUV)
Time zoneUTC+11
Calling code678
Internet TLD.vu

Tags:

ಆಸ್ಟ್ರೇಲಿಯಾಇಂಗ್ಲಿಷ್ಕೃಷಿಗಣರಾಜ್ಯಜ್ವಾಲಾಮುಖಿಫ್ರೆಂಚ್ಭೂಕಂಪಮೀನುಗಾರಿಕೆರಾಜಧಾನಿಶಾಂತಸಾಗರಸುನಾಮಿಸ್ವಾತಂತ್ರ್ಯ

🔥 Trending searches on Wiki ಕನ್ನಡ:

ಗಂಗ (ರಾಜಮನೆತನ)ಶ್ಯೆಕ್ಷಣಿಕ ತಂತ್ರಜ್ಞಾನಸಮಾಸಗೋಪಾಲಕೃಷ್ಣ ಅಡಿಗಅಂತರಜಾಲಮಧ್ವಾಚಾರ್ಯಪಪ್ಪಾಯಿತುಮಕೂರುಸ್ತ್ರೀಯೋನಿಅಂತಿಮ ಸಂಸ್ಕಾರಭಾರತದ ರಾಷ್ಟ್ರೀಯ ಚಿನ್ಹೆಗಳುಶಕ್ತಿಮಹಾಭಾರತಅಳಿಲುಶಿವಪ್ಪ ನಾಯಕಪುರಂದರದಾಸಭಾರತದಲ್ಲಿ ಬ್ರಿಟಿಷ್ ಆಳ್ವಿಕೆಸಿದ್ಧರಾಮಭಾರತದ ಚಲನಚಿತ್ರೋದ್ಯಮಕಾಮಧೇನುರಚಿತಾ ರಾಮ್ಜಗದೀಶ್ ಶೆಟ್ಟರ್ಮರಾಠಾ ಸಾಮ್ರಾಜ್ಯವೈದಿಕ ಯುಗಎಲೆಕ್ಟ್ರಾನಿಕ್ ಮತದಾನನೀತಿ ಆಯೋಗಕವಿರಾಜಮಾರ್ಗಭಾರತದ ಮುಖ್ಯಮಂತ್ರಿಗಳುಬಿ. ಆರ್. ಅಂಬೇಡ್ಕರ್ಭಾರತದ ಜನಸಂಖ್ಯೆಯ ಬೆಳವಣಿಗೆಗರ್ಭಕಂಠದ ಕ್ಯಾನ್ಸರ್‌ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ರಾಷ್ಟ್ರೀಯತೆಮಂತ್ರಾಲಯಸೂರ್ಯಅನ್ವಿತಾ ಸಾಗರ್ (ನಟಿ)ಅಟಲ್ ಬಿಹಾರಿ ವಾಜಪೇಯಿಕನ್ನಡ ಚಿತ್ರರಂಗಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಾಸ್ತುಶಾಸ್ತ್ರಬಿ. ಎಂ. ಶ್ರೀಕಂಠಯ್ಯಪಂಜೆ ಮಂಗೇಶರಾಯ್ಭಾರತದ ಸ್ವಾತಂತ್ರ್ಯ ದಿನಾಚರಣೆಕರ್ನಾಟಕದ ಜಿಲ್ಲೆಗಳುಕೇಂದ್ರ ಸಾಹಿತ್ಯ ಅಕಾಡೆಮಿಕೃಷ್ಣ ಮಠಮಲೈ ಮಹದೇಶ್ವರ ಬೆಟ್ಟದೆಹಲಿಹೃದಯಉಪನಿಷತ್ಚಂದ್ರ (ದೇವತೆ)ಭಕ್ತಿ ಚಳುವಳಿಕ್ರಿಯಾಪದಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕೆ. ಎಸ್. ನಿಸಾರ್ ಅಹಮದ್ಕೃತಕ ಬುದ್ಧಿಮತ್ತೆಕರ್ನಾಟಕ ಸಂಗೀತಗಿರೀಶ್ ಕಾರ್ನಾಡ್ಅಕ್ಕಮಹಾದೇವಿಹದಿಹರೆಯಅರ್ಥ ವ್ಯತ್ಯಾಸಕಬ್ಬುಅಣ್ಣಯ್ಯ (ಚಲನಚಿತ್ರ)ಜೋಗಮಹಾವೀರರುಮಾಲುತೆಲುಗುಹುಚ್ಚೆಳ್ಳು ಎಣ್ಣೆಸುದೀಪ್ಸ್ಮೃತಿ ಇರಾನಿಅರ್ಜುನಮುದ್ದಣಹೊಯ್ಸಳ ವಾಸ್ತುಶಿಲ್ಪಕೆ.ಎಲ್.ರಾಹುಲ್ಜೋಗಿ (ಚಲನಚಿತ್ರ)🡆 More