ರ್‍ಯಾಕೂನ್

ರ್‍ಯಾಕೂನ್ ಉತ್ತರ ಅಮೆರಿಕದಲ್ಲಿ ಕಾಣದೊರೆಯುವ ಮಾಂಸಾಹಾರಿ ಸ್ತನಿ.

ರ್‍ಯಾಕೂನ್
Temporal range: Blancan–present
PreꞒ
O
S
D
C
P
T
J
K
Pg
N
ರ್‍ಯಾಕೂನ್
ಪೂರ್ವದ ರ್‍ಯಾಕೂನ್ (ಪಿ. ಐ. ಲೋಟೊರ್), ನ್ಯೂ ಯಾರ್ಕ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿ
Conservation status
ರ್‍ಯಾಕೂನ್
Least Concern  (IUCN 3.1)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಕಾರ್ನಿವೋರಾ
ಕುಟುಂಬ: ಪ್ರೋಸೈಯಾನಿಡೇ
ಕುಲ: ಪ್ರೋಸೈಯಾನ್
ಪ್ರಜಾತಿ:
P. lotor
Binomial name
Procyon lotor
(Linnaeus, 1758)
ರ್‍ಯಾಕೂನ್
Native range in red, introduced range in blue
Synonyms
  • Ursus lotor Linnaeus, 1758

ಕಾರ್ನಿವೊರ ಗಣದ ಪ್ರೋಸೈಯಾನಿಡೀ ಕುಟುಂಬಕ್ಕೆ ಸೇರಿದೆ. ಪ್ರೋಸೈಯಾನ್ ಜಾತಿಯ ಸುಮಾರು 7 ಪ್ರಭೇದಗಳಿಗೆ ಸಾಮಾನ್ಯವಾಗಿ ಈ ಹೆಸರು ಅನ್ವಯವಾಗುವುದಾದರೂ ಪ್ರಮುಖವಾಗಿ ಈ ಹೆಸರಿನಿಂದ ಪ್ರಸಿದ್ಧವಾಗಿರುವುದು ಪ್ರೋಸೈಯಾನ್ ಲೋಟೊರ್ ಎಂಬುದು ಮಾತ್ರ.

ದೇಹರಚನೆ

ದೇಹದ ಉದ್ದ ಸುಮಾರು 40-60 ಸೆಂಮೀ. ಭುಜದ ಬಳಿಯ ಎತ್ತರ 20-30 ಸೆಂಮೀ. ತೂಕ 1.5-2.5 ಕೆಜಿ. ಮೈಬಣ್ಣ ಬೂದು. 20-40 ಸೆಂಮೀ ಉದ್ದದ ಬಾಲವುಂಟು. ಮೈಮೇಲೂ ಬಾಲದಲ್ಲೂ ಹುಲುಸಾದ, ಮೃದುವಾದ ತುಪ್ಪಳಿನಂಥ ಕೂದಲುಗಳಿವೆ. ಬಾಲದಲ್ಲಿ ಕಪ್ಪುಬಣ್ಣದ 5-10 ಪಟ್ಟೆಗಳಿವೆ. ಮುಸುಡಿ ನಾಯಿ ಮುಸುಡಿಯಂತೆ ಮುಂಚಾಚಿದೆ. ಮುಖದ ಮೇಲೆ ಕಪ್ಪುಬಣ್ಣದ ಅಡ್ಡ ಪಟ್ಟೆಯುಂಟು. ಕಾಲುಗಳಲ್ಲಿ ಉದ್ದ ಬೆರಳುಗಳೂ ಚೂಪು ನಖಗಳೂ ಇವೆ. ಕೈಗಳನ್ನು ಕೋತಿಗಳು ಬಳಸುವಂತೆಯೇ ಬಲು ಸಮರ್ಥವಾಗಿ ಬಳಸಬಲ್ಲುದು.

ನಡವಳಿಕೆ

ರ‍್ಯಾಕೂನ್ ನಿಶಾಚರಿ. ಸಾಮಾನ್ಯವಾಗಿ ಹಗಲಿನಲ್ಲಿ ಮರದ ಪೊಟರೆಗಳಲ್ಲೊ ಕಲ್ಲುಬಂಡೆಗಳ ಸಂದುಗಳಲ್ಲೊ ಮಲಗಿದ್ದು ರಾತ್ರಿವೇಳೆ ಬೇಟೆ ಅರಸಿ ಹೊರಡುತ್ತದೆ. ಮರ ಹತ್ತುವುದರಲ್ಲಿ ಅಂತೆಯೇ ನೀರಿನ ಮೇಲೆ ಈಸುವುದರಲ್ಲಿ ನಿಷ್ಣಾತ.

ಆಹಾರ

ಇದು ಎಲ್ಲ ಬಗೆಯ ಆಹಾರವನ್ನು ತಿನ್ನುತ್ತದಾದರೂ ಜಲಜೀವಿಗಳಾದ ಕಪ್ಪೆ, ಮೀನು, ಸಣ್ಣಪುಟ್ಟ ನೆಲಪ್ರಾಣಿಗಳನ್ನೂ ಇಷ್ಟಪಡುತ್ತದೆ. ಹಲವಾರು ಬಗೆಯ ಕಾಯಿ, ಬೀಜ, ಕಾಳುಗಳನ್ನೂ ತಿನ್ನುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ದಕ್ಷಿಣ ಪ್ರಾಂತ್ಯಗಳಲ್ಲಿ ಕಾಣಸಿಗುವ ರ‍್ಯಾಕೂನ್ ವರ್ಷವಿಡೀ ಚಟುವಟಿಕೆಯಿಂದ ಇರುತ್ತದೆ ಆದರೆ ಉತ್ತರ ಭಾಗದಲ್ಲಿ ಜೀವಿಸುವ ರ‍್ಯಾಕೂನ್ ಜಾತಿ ಚಳಿಗಾಲದಲ್ಲಿ ಶಿಶಿರ ನಿದ್ರಾವಶವಾಗುತ್ತದೆ.

ಸಂತಾನೋತ್ಪತ್ತಿ

ಇದರ ಸಂತಾನವೃದ್ಧಿಯ ಕಾಲ ಜನವರಿಯಿಂದ ಜೂನ್. ಗರ್ಭಾವಸ್ಥೆಯ ಅವಧಿ ಸುಮಾರು 65 ದಿವಸಗಳು. ಒಂದು ಸೂಲಿಗೆ 1-7 ಮರಿ ಹುಟ್ಟುತ್ತವೆ. ಮರಿಗಳು ಸುಮಾರು 10 ವಾರಗಳ ಕಾಲ ತಾಯಿಯೊಡನೆಯೇ ಇದ್ದು ನಿಧಾನವಾಗಿ, ಅಂದರೆ ಒಂದು ವರ್ಷ ವಯಸ್ಸಿನವಾಗುವ ವೇಳೆಗೆ ಸ್ವತಂತ್ರವಾಗಿ ಜೀವಿಸತೊಡಗುತ್ತವೆ. ರ‍್ಯಾಕೂನಿನ ಆಯಸ್ಸು ಸುಮಾರು 10-15 ವರ್ಷಗಳು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ರ್‍ಯಾಕೂನ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ರ್‍ಯಾಕೂನ್ ದೇಹರಚನೆರ್‍ಯಾಕೂನ್ ನಡವಳಿಕೆರ್‍ಯಾಕೂನ್ ಉಲ್ಲೇಖಗಳುರ್‍ಯಾಕೂನ್ ಹೊರಗಿನ ಕೊಂಡಿಗಳುರ್‍ಯಾಕೂನ್ಉತ್ತರ ಅಮೇರಿಕಸಸ್ತನಿ

🔥 Trending searches on Wiki ಕನ್ನಡ:

ದಾಳಕೊಲ್ಲೂರು ಮೂಕಾಂಬಿಕಾ ದೇವಸ್ಥಾನಭಾರತೀಯ ಸ್ಟೇಟ್ ಬ್ಯಾಂಕ್ಶಿವರಾಜ್‍ಕುಮಾರ್ (ನಟ)ಕನ್ನಡ ಸಾಹಿತ್ಯ ಸಮ್ಮೇಳನಬುಡಕಟ್ಟುಒಂದನೆಯ ಮಹಾಯುದ್ಧಜಿ.ಎಸ್.ಶಿವರುದ್ರಪ್ಪಹಳೆಗನ್ನಡಕೃಷಿಸಜ್ಜೆಕಲ್ಯಾಣಿಅಯೋಧ್ಯೆಗೊರೂರು ರಾಮಸ್ವಾಮಿ ಅಯ್ಯಂಗಾರ್ಬೇವುಕನ್ನಡ ರಾಜ್ಯೋತ್ಸವರಾಷ್ಟ್ರೀಯತೆಕನ್ನಡ ಛಂದಸ್ಸುಮೈಸೂರುಜಾತ್ಯತೀತತೆವೈದಿಕ ಯುಗವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತ ಸಂವಿಧಾನದ ಪೀಠಿಕೆಆರ್ಯಭಟ (ಗಣಿತಜ್ಞ)ಹಳೇಬೀಡುಯಣ್ ಸಂಧಿದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಪರಿಸರ ರಕ್ಷಣೆಕನ್ನಡ ಕಾಗುಣಿತಆರೋಗ್ಯಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದಲ್ಲಿ ತುರ್ತು ಪರಿಸ್ಥಿತಿವಿಧಾನಸೌಧಕವಿರಾಜಮಾರ್ಗರಶ್ಮಿಕಾ ಮಂದಣ್ಣಸಮುದ್ರಗುಪ್ತಹಾಸನ ಜಿಲ್ಲೆಕನ್ನಡ ಬರಹಗಾರ್ತಿಯರುಅದ್ವೈತಪ್ರಾರ್ಥನಾ ಸಮಾಜಗೋತ್ರ ಮತ್ತು ಪ್ರವರಮ್ಯಾಕ್ಸ್ ವೆಬರ್ಗುಣ ಸಂಧಿನರೇಂದ್ರ ಮೋದಿಯೋಗ ಮತ್ತು ಅಧ್ಯಾತ್ಮಉಡುಪಿ ಜಿಲ್ಲೆಹೈದರಾಲಿದರ್ಶನ್ ತೂಗುದೀಪ್ಮಾರ್ಕ್ಸ್‌ವಾದನಂಜನಗೂಡುಕಮ್ಯೂನಿಸಮ್ಬ್ರಹ್ಮಭಾಷಾಂತರಮಳೆನೀರು ಕೊಯ್ಲುಚನ್ನಬಸವೇಶ್ವರಗೂಬೆದ್ರೌಪದಿ ಮುರ್ಮುಎಲೆಕ್ಟ್ರಾನಿಕ್ ಮತದಾನನಿರ್ಮಲಾ ಸೀತಾರಾಮನ್ಕುಷಾಣ ರಾಜವಂಶಸುಮಲತಾರೈತದೇವರ/ಜೇಡರ ದಾಸಿಮಯ್ಯಜಶ್ತ್ವ ಸಂಧಿಪಂಚತಂತ್ರಪ್ರದೀಪ್ ಈಶ್ವರ್ಕರ್ನಾಟಕ ಲೋಕಾಯುಕ್ತಕೊಡಗುರಾಜಕೀಯ ವಿಜ್ಞಾನಚಂದ್ರಗುಪ್ತ ಮೌರ್ಯದೇವತಾರ್ಚನ ವಿಧಿಷಟ್ಪದಿಸಂಕಲ್ಪಜಾನಪದರಾಷ್ಟ್ರಕೂಟದಾವಣಗೆರೆಬೆಂಗಳೂರುಮೊದಲನೆಯ ಕೆಂಪೇಗೌಡಭಾರತದ ಪ್ರಧಾನ ಮಂತ್ರಿ🡆 More