ಮಲ

ಮಲ ಸಣ್ಣ ಕರುಳಿನಲ್ಲಿ ಜೀರ್ಣಿಸಲಾಗದ, ಆದರೆ ದೊಡ್ಡ ಕರುಳಿನಲ್ಲಿ ಬ್ಯಾಕ್ಟೀರಿಯಾದಿಂದ ಕೊಳೆಸಲಾದ ಆಹಾರದ ಘನ ಅಥವಾ ಅರೆಘನ ಶೇಷ.

ಇದು ತುಲಾನಾತ್ಮಕವಾಗಿ ಸಣ್ಣ ಪ್ರಮಾಣದ ಬ್ಯಾಕ್ಟೀರಿಯಾದಿಂದ ಮಾರ್ಪಾಡಾದ ಬಿಲಿರೂಬಿನ್‍ನಂತಹ ಚಯಾಪಚಯ ತ್ಯಾಜ್ಯ ಉತ್ಪನ್ನಗಳು, ಮತ್ತು ಅಂತ್ರದ ಒಳಪದರದ ಸತ್ತ ಎಪಿತೀಲಿಕ ಜೀವಕೋಶಗಳನ್ನೂ ಹೊಂದಿರುತ್ತದೆ. ಇದು ಮಲವಿಸರ್ಜನೆ ಪ್ರಕ್ರಿಯೆಯ ಅವಧಿಯಲ್ಲಿ ಗುದ ಅಥವಾ ಮಲಕುಳಿಯ ಮೂಲಕ ವಿಸರ್ಜಿಸಲ್ಪಡುತ್ತದೆ.

ಮಲ
ಆನೆಯ ಮಲ

ಸಂಗ್ರಹಿಸಲಾದ ಮಲವು ವಿವಿಧ ಬಳಕೆಗಳನ್ನು ಹೊಂದಿದೆ, ಅವುಗಳೆಂದರೆ ಕೃಷಿಯಲ್ಲಿ ಗೊಬ್ಬರ ಅಥವಾ ಮಣ್ಣಿನ ಸ್ಥಿತಿಕಾರಕವಾಗಿ, ಇಂಧನದ ಮೂಲವಾಗಿ, ನಿರ್ಮಾಣ ಸಾಮಗ್ರಿಯಾಗಿ, ಅಥವಾ ಔಷಧೀಯ ಉದ್ದೇಶಗಳಿಗಾಗಿ (ಮಲ ಕಸಿ ಅಥವಾ ಮಾನವ ಮಲದ ವಿಷಯದಲ್ಲಿ ಮಲ ಬ್ಯಾಕ್ಟೀರಿಯಾ ಚಿಕಿತ್ಸೆ).

ತಿಂದ ವಸ್ತುವನ್ನು ಒಂದು ಪ್ರಾಣಿಯು ಜೀರ್ಣಿಸಿದ ನಂತರ, ಆ ವಸ್ತುವಿನ ಶೇಷ ಅದರ ದೇಹದಿಂದ ತ್ಯಾಜ್ಯವಾಗಿ ವಿಸರ್ಜಿಸಲ್ಪಡುತ್ತದೆ. ಈ ತ್ಯಾಜ್ಯ ತಿಂದ ಆಹಾರಕ್ಕಿಂತ ಕಡಿಮೆ ಶಕ್ತಿ ಹೊಂದಿದ್ದರೂ, ಇದು ದೊಡ್ಡ ಪ್ರಮಾಣದ ಶಕ್ತಿಯನ್ನು ಉಳಿಸಿಕೊಂಡಿರಬಹುದು, ಹಲವುವೇಳೆ ಮೂಲ ಆಹಾರದ ಶೇಕಡ ೫೦ರಷ್ಟು. ಇದರರ್ಥ ತಿಂದ ಎಲ್ಲ ಆಹಾರದ ಪೈಕಿ, ಗಣನೀಯ ಪ್ರಮಾಣದ ಶಕ್ತಿ ಪರಿಸರ ವ್ಯವಸ್ಥೆಗಳ ವಿಭಜಕಗಳಿಗೆ ಉಳಿದುಕೊಳ್ಳುತ್ತದೆ. ಬ್ಯಾಕ್ಟೀರಿಯಾ, ಶಿಲೀಂಧ್ರ, ಸಗಣಿ ದುಂಬಿಗಳಂತಹ ಕೀಟಗಳು ಮತ್ತು ಇನ್ನೂ ಅನೇಕ ಜೀವಿಗಳು ಮಲವನ್ನು ಸೇವಿಸುತ್ತವೆ ಮತ್ತು ಬಹಳ ದೂರದಿಂದ ವಾಸನೆಗಳನ್ನು ಗ್ರಹಿಸಬಲ್ಲವು. ಕೆಲವು ವಿಶಿಷ್ಟವಾಗಿ ಮಲವನ್ನೇ ಅವಲಂಬಿಸಿರುತ್ತವೆ, ಇತರ ಪ್ರಾಣಿಗಳು ಜೊತೆಗೆ ಬೇರೆ ಆಹಾರಗಳನ್ನು ತಿನ್ನಬಹುದು. ಮಲ ಮೂಲ ಆಹಾರವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಕೆಲವು ಪ್ರಾಣಿಗಳ ಸಾಮಾನ್ಯ ಆಹಾರದ ಪೂರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದನ್ನು ಮಲಭಕ್ಷಣೆ ಎಂದು ಕರೆಯಲಾಗುತ್ತದೆ, ಮತ್ತು ಅಗತ್ಯ ಕರುಳು ಸಸ್ಯಗಳನ್ನು ಪಡೆಯಲು ಆನೆ ಮರಿಗಳು ತಮ್ಮ ತಾಯಂದಿರ ಮಲವನ್ನು ತಿನ್ನುವುದು, ನಾಯಿಗಳು, ಮೊಲಗಳು, ಮತ್ತು ಕೋತಿಗಳಂತಹ ಇತರ ಪ್ರಾಣಿಗಳಂತಹ ವಿವಿಧ ಪ್ರಾಣಿ ಪ್ರಜಾತಿಗಳಲ್ಲಿ ಕಂಡುಬರುತ್ತದೆ.

ಅತಿನೇರಳೆ ಬೆಳಕನ್ನು ಪ್ರತಿಫಲಿಸುವ ಮಲಮೂತ್ರಗಳು ಕಿರು ಡೇಗೆಗಳಂತಹ ಹಿಂಸ್ರಪಕ್ಷಿಗಳಿಗೆ ಮುಖ್ಯವಾಗಿವೆ. ಇವು ಹತ್ತಿರದ ಅತಿನೇರಳೆಯನ್ನು ನೋಡಬಲ್ಲವು ಮತ್ತು ಹಾಗಾಗಿ ತಮ್ಮ ಬೇಟೆಯನ್ನು ಅವುಗಳ ಮಲ ಮತ್ತು ಪ್ರಾಂತ್ಯ ಗುರುತುಚಿಹ್ನೆಗಳಿಂದ ಹುಡುಕಬಲ್ಲವು.

ಉಲ್ಲೇಖಗಳು

Tags:

ಗುದದೊಡ್ಡ ಕರುಳು

🔥 Trending searches on Wiki ಕನ್ನಡ:

ಜೋಗಚಂದ್ರ (ದೇವತೆ)ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾರತದ ಇತಿಹಾಸಶಂಕರ್ ನಾಗ್ಚೋಮನ ದುಡಿಸಂಸ್ಕೃತ ಸಂಧಿಆಯುಷ್ಮಾನ್ ಭಾರತ್ ಯೋಜನೆಭಾರತದ ಮುಖ್ಯಮಂತ್ರಿಗಳುಭಾರತೀಯ ಜನತಾ ಪಕ್ಷಭಾರತದ ರಾಷ್ಟ್ರಪತಿಗಳ ಪಟ್ಟಿಅರ್ಥಶಾಸ್ತ್ರಕನ್ನಡ ಅಕ್ಷರಮಾಲೆಶಿವಗಂಗೆ ಬೆಟ್ಟಕರ್ನಲ್‌ ಕಾಲಿನ್‌ ಮೆಕೆಂಜಿಕನ್ನಡದಲ್ಲಿ ವಚನ ಸಾಹಿತ್ಯಗೋಪಾಲಕೃಷ್ಣ ಅಡಿಗಮೈಗ್ರೇನ್‌ (ಅರೆತಲೆ ನೋವು)ದೆಹಲಿಯ ಇತಿಹಾಸನಾಮಪದಲೋಪಸಂಧಿಕೆ.ಎಲ್.ರಾಹುಲ್ಭಾರತ ರತ್ನ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಕಂದಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತೀಯ ಶಾಸ್ತ್ರೀಯ ನೃತ್ಯಮಧ್ವಾಚಾರ್ಯಲಕ್ಷ್ಮೀಶನಗರೀಕರಣಮೊರಾರ್ಜಿ ದೇಸಾಯಿನಳಂದಜಿ.ಎಸ್.ಶಿವರುದ್ರಪ್ಪದ್ರೌಪದಿ ಮುರ್ಮುಗೌತಮಿಪುತ್ರ ಶಾತಕರ್ಣಿಸಾಯಿ ಪಲ್ಲವಿನಾಲಿಗೆಸವದತ್ತಿವಾಟ್ಸ್ ಆಪ್ ಮೆಸ್ಸೆಂಜರ್ಶಿರ್ಡಿ ಸಾಯಿ ಬಾಬಾಮಹಾಭಾರತಕೃಷಿ ಉಪಕರಣಗಳುಭಾರತದ ತ್ರಿವರ್ಣ ಧ್ವಜಭಾರತದ ರಾಷ್ಟ್ರೀಯ ಚಿಹ್ನೆದೊಡ್ಡಬಳ್ಳಾಪುರಅಲಂಕಾರಮಲೈ ಮಹದೇಶ್ವರ ಬೆಟ್ಟದ್ವಾರಕೀಶ್ರಾಮಭಾರತದಲ್ಲಿ ಬ್ರಿಟಿಷ್ ಆಳ್ವಿಕೆಕೃಷ್ಣಾ ನದಿಕನ್ನಡ ವ್ಯಾಕರಣಬೇಲೂರುಕ್ಷಯಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದುರ್ಯೋಧನಕೂಡಲ ಸಂಗಮತುಮಕೂರುಐಹೊಳೆಯುಗಾದಿಕ್ರಿಸ್ತ ಶಕಸಾರ್ವಜನಿಕ ಹಣಕಾಸುನಾಲ್ವಡಿ ಕೃಷ್ಣರಾಜ ಒಡೆಯರುವಾಲ್ಮೀಕಿದೇವನೂರು ಮಹಾದೇವತಿರುಪತಿಹೊಯ್ಸಳ ವಾಸ್ತುಶಿಲ್ಪವರದಕ್ಷಿಣೆಭಾರತೀಯ ಸಂಸ್ಕೃತಿಮೆಕ್ಕೆ ಜೋಳಊಳಿಗಮಾನ ಪದ್ಧತಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಭಾರತದಲ್ಲಿನ ಚುನಾವಣೆಗಳುಹದಿಹರೆಯಶ್ರುತಿ (ನಟಿ)ತತ್ತ್ವಶಾಸ್ತ್ರ🡆 More